Tag: ಅಕ್ರಮ ಗಣಿಗಾರಿಕೆ

  • ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    -ಎಲೆಕ್ಷನ್ ಹೊತ್ತಲ್ಲಿ ರೆಡ್ಡಿ ಬ್ರದರ್ಸ್ ಬಚಾವ್..?

    ಬೆಂಗಳೂರು: ಕರ್ನಾಟಕದ ರಾಜಕಾರಣವನ್ನೇ ತಲ್ಲಣಿಸಿದ್ದ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಸದ್ದಿಲ್ಲದೆ ಕೊನೆಮಾಡುತ್ತಿದೆ.

    ಮೊದಲ ಬಾರಿಗೆ ಅಧಿಕಾರದಲ್ಲಿದ್ದ ಬಿಜೆಪಿಗೆ ಕಂಟಕವಾಗಿದ್ದ ಈ ಹಗರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆಂಧ್ರ ಪ್ರದೇಶ, ಮಂಗಳೂರು, ಗೋವಾ, ಮತ್ತು ಕೃಷ್ಣಪಟ್ಟಣ ಬಂದರುಗಳಿಂದ ಅಕ್ರಮ ಅದಿರಿನ ರಫ್ತು ನಡೆಯುತ್ತಿದ್ದು, ಅಲ್ಲಿಂದನೇ ಪ್ರಾಥಮಿಕ ಶೋಧ ಕಾರ್ಯಚರಣೆ ಆರಂಭವಾಗಿದೆ. ಆದರೆ ಮೊದಲ ಹಂತದಲ್ಲಿಯೇ ಸಿಬಿಐಗೆ ಪ್ರಕರಣಗಳಿಗೆ ಸಂಬಂಧಿಸಿಂತೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.

    ಸುಪ್ರೀಂ ಕೋರ್ಟ್ ಈ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ನೀಡಿದಾಗ ಸಿಬಿಐ, ಜನಾರ್ದನ ರೆಡ್ಡಿ ಮತ್ತು ಅಕ್ರಮ ಗಣಿಗಾರಿಕೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾದ ಕಂಪನಿಗಳ ವಿರುದ್ಧ ಚಾರ್ಜ್ ಸೀಟ್‍ಗಳನ್ನು ಹಾಕಲಾಗಿತ್ತು.

    ಅಕ್ರಮ ಗಣಿಗಾರಿಕೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, 2012 ರಲ್ಲಿ ಸಚಿವಾಲಯ ಸುಮಾರು 25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಿ ಸಿಬಿಐ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

    ಸಿಬಿಐ ಸಲ್ಲಿದ ವದರಿಯ ಪ್ರಕಾರ, ಆಂಧ್ರ ಪ್ರದೇಶ, ಗೋವಾ ಮತ್ತು ಕರ್ನಾಟಕ ಸಿಬಿಐನ ಅಧಿಕಾರಿಗಳು ಪ್ರಕರಣವನ್ನು ಮುಚ್ಚುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಅಕ್ರಮ ಗಣಿಗಾರಿಕೆ ಸಾಬೀತಿಗೆ ಸಾಕ್ಷ್ಯಗಳೇ ಇಲ್ಲವೆಂದು ಸಿಬಿಐ ತನಿಖಾಧಿಕಾರಿಗಳಿಂದ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಾಯುಕ್ತ ವರದಿಯಲ್ಲಿ ಏನಿತ್ತು?

    * 2006 ರಿಂದ 2010ರವರೆಗೆ 12.57 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ
    * ಇದರಲ್ಲಿ 2.98 ಕೋಟಿ ಮೆಟ್ರಿಕ್ ಟನ್‍ನಷ್ಟು ಪ್ರಮಾಣದ ಕಬ್ಬಿಣದ ಅದಿರು ಅಕ್ರಮ ಸಾಗಾಟ
    * ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐನಿಂದ ತನಿಖೆ, ಆರೋಪಪಟ್ಟಿ ಸಲ್ಲಿಕೆ
    * ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಪ್ರಮುಖರ ವಿರುದ್ಧ ಎಫ್‍ಐಆರ್, ಬಂಧನ
    * ಬೇಲೆಕೇರಿ, ನವ ಮಂಗಳೂರು ಬಂದರಿಂದ 50 ಸಾವಿರ ಮೆಟ್ರಿಕ್ ಟನ್‍ನ್ನಷ್ಟು ಅಕ್ರಮವಾಗಿ ಅದಿರು ಸಾಗಾಟ
    * ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರದಿಂದ ಎಸ್‍ಐಟಿ ಸ್ಥಾಪನೆ


  • ರಾಜ್ಯ ಬಿಜೆಪಿಗೆ ಹೈಕಮಾಂಡ್ ಆರ್ಡರ್- ಜನಾರ್ದನ ರೆಡ್ಡಿ ಎಲೆಕ್ಷನ್‍ಗೆ ನಿಲ್ಲೋದು ಡೌಟ್

    ರಾಜ್ಯ ಬಿಜೆಪಿಗೆ ಹೈಕಮಾಂಡ್ ಆರ್ಡರ್- ಜನಾರ್ದನ ರೆಡ್ಡಿ ಎಲೆಕ್ಷನ್‍ಗೆ ನಿಲ್ಲೋದು ಡೌಟ್

    ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಮಸುಕಾಗಿದೆ. ಕಾರಣ ಅಕ್ರಮ ಗಣಿಗಾರಿಕೆ ಕೇಸಲ್ಲಿ ಆರೋಪ ಮುಕ್ತರಾಗದ ಹೊರತು ಪಕ್ಷ ಸೇರ್ಪಡೆ ಬೇಡ ಅಂತಾ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಘಟಕಕ್ಕೆ ಮೌಖಿಕ ಆದೇಶ ನೀಡಿದೆ.

    ಅಲ್ಲದೇ ರೆಡ್ಡಿ ಸಹೋದರ ಕರುಣಾಕರ್ ರೆಡ್ಡಿ ಕೂಡ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಗೆ ರೆಡ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಜನಾರ್ದನ ರೆಡ್ಡಿಯ ಬಿಜೆಪಿ ಸೇರ್ಪಡೆ ಆಸೆಗೆ ತಣ್ಣೀರು ಬಿದ್ದಂತಾಗಿದೆ.

    ಶ್ರೀರಾಮುಲು ಮೂಲಕ ಪಕ್ಷ ಸೇರಲು ಜನಾರ್ದನ ರೆಡ್ಡಿ ಸರ್ಕಸ್ ನಡೆಸುತ್ತಿದ್ದಾರೆ. ಆದ್ರೆ ರೆಡ್ಡಿ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಲ್ಲ. ಜರ್ನಾದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾರೆ, ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ನೋಟ್ ಬ್ಯಾನ್ ವೇಳೆ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಟೀಕೆಗೂ ಒಳಗಾಗಿದ್ದರು.

    ಹೀಗಾಗಿ ರೆಡ್ಡಿ ಪಕ್ಷ ಸೇರ್ಪಡೆಯಿಂದ ಪಕ್ಷ ಮುಜುಗರ ಅನುಭವಿಸಬೇಕಾಗುತ್ತೆ. ಮೊದಲು ಆರೋಪ ಮುಕ್ತರಾಗಲಿ, ನಂತರ ನೋಡೋಣ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.