Tag: ಅಕ್ರಮ ಗಣಿ

  • ಕಲ್ಲಿದ್ದಲು ಗಣಿ ಕುಸಿತ – 13 ಮಂದಿ ಬಲಿ

    ರಾಂಚಿ: ಅಕ್ರಮ ಕಲ್ಲಿದ್ದಲು ಗಣಿ ಕುಸಿದಿರುವ ಪರಿಣಾಮ 13 ಮಂದಿ ಸಾವನ್ನಪ್ಪಿ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಜಾರ್ಖಂಡ್ ರಾಜ್ಯದ ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿರುವ ಅಕ್ರಮ ಗಣಿಯಲ್ಲಿ ಈ ಘಟನೆ ನಡೆದಿದೆ. ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣ 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕೊರೆದಿದ್ದ ಗಣಿ ಕುಸಿದಿದೆ. ಇದರಿಂದ ಅವಶೇಷಗಳಡಿ ಸಿಲುಕಿದ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 10 ಕ್ಕೂ ಹೆಚ್ಚು ಮಂದಿ ಸಿಲುಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

    ಘಟನೆ ನಡೆದ ತಕ್ಷಣ ಕೆಲವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅವಶೇಷಗಳಡಿ ಸಿಕ್ಕಿಬಿದ್ದಿರುವವರನ್ನು ರಕ್ಷಣಾ ಪಡೆಗಳು ಹೊರತೆಗೆಯಲು ಪ್ರಯತ್ನ ಪಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

     

    ಅಕ್ರಮ ಗಣಿಯಲ್ಲಿ ಕೆಲಸ ಮಾಡಲು ಪ್ರತೀ ದಿನ ಹಲವು ಮಹಿಳೆಯರು, ಪರುಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದರು ಎಂದು ತಿಳಿದುಬಂದಿದೆ. ಧನ್‌ಬಾದ್‌ನ ನಿರ್ಸಾ ಪೊಲೀಸರು ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಹೂತು ಹೋದವರನ್ನು ರಕ್ಷಿಸಲು ಜೆಸಿಬಿ ನಿಯೋಜಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

    ಘಟನೆಯ ಬಗ್ಗೆ ಸ್ಥಳೀಯರು ದೂರು ನೀಡಲು ಮುಂದಾಗಿಲ್ಲವಾದರೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಮಂಡ್ಯ ಗಣಿ ಅಖಾಡಕ್ಕೆ ಧುಮುಕುತ್ತಾ ಕಾಂಗ್ರೆಸ್? – ಸಿದ್ದರಾಮಯ್ಯಗೆ ಸಿಕ್ತು ಪ್ರಬಲ ರಾಜಕೀಯ ಅಸ್ತ್ರ

    ಮಂಡ್ಯ ಗಣಿ ಅಖಾಡಕ್ಕೆ ಧುಮುಕುತ್ತಾ ಕಾಂಗ್ರೆಸ್? – ಸಿದ್ದರಾಮಯ್ಯಗೆ ಸಿಕ್ತು ಪ್ರಬಲ ರಾಜಕೀಯ ಅಸ್ತ್ರ

    ಬೆಂಗಳೂರು: ಮಂಡ್ಯ ಗಣಿ ಜಂಜಾಟದಲ್ಲಿ ರಾಜ್ಯ ಕಾಂಗ್ರೆಸ್ ಎಂಟ್ರಿ ಮೂಲಕ ಹೊಸ ರಾಜಕೀಯ ತಿರುವು ಪಡೆಯುತ್ತಾ..?, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾದ್ರ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಅಕ್ರಮ ಗಣಿಗಾರಿಕೆ ಸಿದ್ದರಾಮಯ್ಯ ಪಾಲಿಗೆ ಪ್ರಬಲ ರಾಜಕೀಯ ಅಸ್ತ್ರವಾಗಿದ್ದು, ಮುಂದಿನವಾರ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಮಂಡ್ಯದ ಗಣಿಗಾರಿಕಾ ಪ್ರದೇಶದಲ್ಲಿ ಸಿದ್ದರಾಮಯ್ಯ ಪರಿಶೀಲನೆ ಸಾಧ್ಯತೆ ಇದ್ದು, ಈ ಮೂಲಕ ಎಚ್‍ಡಿಕೆ-ಡಿಕೆಶಿಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ರೆಡಿಯಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ

    ಒಂದು ವೇಳೆ ಗಣಿ ಅಕ್ರಮ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಒತ್ತಾಯ ಮಾಡು ಸಾಧ್ಯೆತೆಗಳಿವೆ. ಈ ಮೂಲಕ ರಾಜಕೀಯ ದಾಳ ಉರುಳಿಸಲು ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗಣಿಗಾರಿಕೆ ವೀಕ್ಷಣೆಗೆ ಜೆಡಿಎಸ್ ಶಾಸಕರು ಬರುವುದಾದರೆ ಸ್ವಾಗತ: ಸುಮಲತಾ

    ಹೆಚ್‍ಡಿಕೆ ಗಣಿ ಅಕ್ರಮದ ಪರ ಇದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಆರೋಪ ಮಾಡುತ್ತಿದ್ದಾರೆ. ಮಂಡ್ಯ ಗಣಿ ಅಕ್ರಮ ವಿಚಾರದಲ್ಲೂ ಡಿಕೆಶಿ ಕೂಡ ಸಾಫ್ಟ್ ಕಾರ್ನರ್ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್‍ಡಿಕೆ, ಡಿಕೆಶಿ ವಿರುದ್ಧ ರಾಜಕೀಯ ಅಸ್ತ್ರ ಬಳಸಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದು, ಕುಮಾರಸ್ವಾಮಿ, ಡಿಕೆಶಿ ಇಬ್ಬರಿಗೂ ಟಕ್ಕರ್ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.

  • ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ಮಂಡ್ಯ: ಸಂಸದೆ ಸುಮಲತಾ ದಾಳಿ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ ಮಾಡಿ ಗಣಿಗಳನ್ನು ಬಂದ್ ಮಾಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಚೆನ್ನನಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಕ್ವಾರೆ ಹಾಗೂ ಶ್ರೀರಂಗಪಟ್ಟಣ ಕ್ವಾರೆಗಳ ಮೇಲೆ ತಹಶೀಲ್ದಾರ್ ರೂಪಾ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಬೇಕು – ಮಂಡ್ಯ ಸಂಸದೆ ಸುಮಲತಾ ಆಗ್ರಹ

    ಚೆನ್ನನಕೆರೆ ಸಮೀಪದಲ್ಲಿ ಅಕ್ರಮವಾಗಿ ಕಲ್ಲು ಕ್ವಾರೆ ನಡೆಯುತ್ತಿದ್ದು, ಅಕ್ರಮ ಕ್ವಾರೆ ಪ್ರದೇಶಗಳಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ ಪೊಲೀಸರ ಜೊತೆ ದಾಳಿ ನಡೆಸಿ ಅಕ್ರಮ ಕ್ವಾರೆಗಳಿಗೆ ಬೀಗ ಜಡಿದಿದ್ದಾರೆ. ಇತ್ತೀಚೆಗಷ್ಟೇ ಈ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದ ಸಂಸದೆ ಸುಮಲತಾ ಅವರು ಅಕ್ರಮ ಕಲ್ಲು ಕ್ವಾರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಅಕ್ರಮ ಕಲ್ಲು ಕ್ವಾರೆಗಳ ಮೇಲೆ ದಾಳಿ ಮಾಡಿದ್ದಾರೆ. ಕಠಿಣ ಕ್ರಮಕ್ಕೆ ಮುಂದಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ

    ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆಗೆ ಹೋಗದಂತೆ ಅಡ್ಡಿಪಡಿಸಿದ್ದನ್ನು ನೋಡಿ ಸುಮಲತಾ, ಇದೇನ್ ಭಾರತ-ಪಾಕಿಸ್ತಾನ ಗಡಿನಾ ಎಂದು ಆಘಾತ ವ್ಯಕ್ತಪಡಿಸಿದ್ದರು. ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಊರವರ ಮನೆಗಳನ್ನು ನೋಡಿ ಶಾಕ್ ಆಗಿದ್ದರು. ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುವ ವೇಳೆ ವಿಷಯವನ್ನು ಬೇರೆಡೆಗೆ ತಿರುಗಿಸುವ ಯತ್ನ ಮಾಡಲಾಗ್ತಿದೆ. ಶಾಸಕರಿಗೆ ನಿಮ್ಮ ಕೊಡುಗೆ ಏನು..? ನಿಮ್ಮ ಕಣ್ಣ ಮುಂದೆಯೇ ಇಷ್ಟು ಭ್ರಷ್ಟಾಚಾರ, ಅನ್ಯಾಯ ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು ನೀಡಿದ್ದರು.

    ಮಾಜಿ ಶಾಸಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಭೇಟಿ ನೀಡುವಂತೆ ಘೋಷಣೆ ಕೂಗಿದರು. ಆ ಬಳಿಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಸುಮಲತಾ ಭೇಟಿ ನೀಡಿ ಪರಿಶೀಲಿಸಿದ್ದರು.