Tag: ಅಕ್ರಮ ಆಸ್ತಿ ಗಳಿಕೆ

  • ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

    ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

    ಬೆಂಗಳೂರು: ಸಚಿವ ಜಮೀರ್ ಅಹ್ಮದ್ (Zameer Ahmed) ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ (Dinesh Gundurao) ಲೋಕಾಯುಕ್ತ ಪೊಲೀಸರು (Lokayuktha Police) ನೋಟಿಸ್ ನೀಡಿದ್ದಾರೆ.

    ಲೋಕಾಯುಕ್ತ ಪೊಲೀಸರು, ಸಚಿವ ಜಮೀರ್ ಜೊತೆಗೆ ಕಳೆದ 3-4 ವರ್ಷಗಳಿಂದ ಆರ್ಥಿಕ ವ್ಯವಹಾರ ಹೊಂದಿದ್ದ ದಿನೇಶ್ ಗುಂಡೂರಾವ್‌ಗೆ ನೋಟಿಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನೋಟಿಸ್ ಬೆನ್ನಲ್ಲೇ ದಿನೇಶ್ ಗುಂಡೂರಾವ್ ದಾಖಲೆ ಕ್ರೋಢೀಕರಿಸಲು ಕಾಲಾವಕಾಶ ಕೋರಿದ್ದಾರೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್

    ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್‌ಗೆ 2.5 ಕೋಟಿ ರೂ. ನೀಡಿದ್ದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹಾಗೂ ಗುಜರಿ ಬಾಬು ವಿಚಾರಣೆ ನಡೆಸಲಾಗಿದೆ.

    ಏನಿದು ಪ್ರಕರಣ?
    2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಈ ವಂಚಕ ಕಂಪನಿ ಜೊತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್ ಅಹಮದ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು.

    ಇಡಿ ವರದಿಯ ಅನ್ವಯ ಆಗ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ ಈ ಪ್ರಕರಣ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ ವರ್ಗವಾಗಿತ್ತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವರ ವಿಚಾರಣೆ ನಡೆಸುತ್ತಿದ್ದಾರೆ.

    ನಾನು ಯಾರ ಬಳಿ ಸಾಲ ಪಡೆದಿದ್ದೇನೆ ಎನ್ನುವುದರ ಬಗ್ಗೆ ಜಮೀರ್ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಪಟ್ಟಿ ನೀಡಿದ್ದರು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬಳಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದರು.

    ವಿಚಾರಣೆ ಸಂದರ್ಭದಲ್ಲಿ, ನಾನು 2012ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್ ಅವರಿಗೆ 2.5 ಕೋಟಿ ರೂಗಳನ್ನು ಸಾಲವಾಗಿ ನೀಡಿದ್ದೆ ಎಂದು ರಾಧಿಕಾ ತಿಳಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ನೋಟಿಸ್‌

  • ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

    ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

    – ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ದಾಳಿ

    ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Lokayukta) ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ 4 ಜಿಲ್ಲೆಗಳಲ್ಲಿ 6 ಕಡೆ ದಾಳಿ ನಡೆಸಿದೆ.

    ಬೆಂಗಳೂರು (Bengaluru), ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಸಿನಿಯರ್ ಅರ್ಟಿಕಲ್ಚರ್ ಡೈರೆಕ್ಟರ್, ಓಂ ಪ್ರಕಾಶ್‌, ರಾಷ್ಟ್ರೀಯ ಹೆದ್ದಾರಿ (NHAI) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜ್ಯೂನಿಯರ್ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಚಿತ್ರದುರ್ಗ:
    ಚಿತ್ರದುರ್ಗದ ಟಿಎಚ್‌ಓ (THO) ಡಾ.ವೆಂಕಟೇಶ್‌ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯ ಮನೆ, ಆದಿವಾಲ ಗ್ರಾಮದ ಮನೆ & ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಪಹಲ್ಗಾಮ್‍ ದಾಳಿ ಉಗ್ರರು ಪಾಕ್‌ನಿಂದ ಬಂದವರಲ್ಲ: ಚಿದಂಬರಂ ಕ್ಲೀನ್‍ಚಿಟ್

    ಚಿಕ್ಕಬಳ್ಳಾಪುರ:
    ಗೌರಿಬಿದನೂರು ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಜೆಇ ಆಂಜನೇಯಮೂರ್ತಿ ಮನೆ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಲಹಂಕ ನ್ಯೂ ಟೌನ್‌ನಲ್ಲಿರುವ ಮನೆ ಹಾಗೂ ಸ್ವಗ್ರಾಮ ತುಮಕೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ತಪಾಸಣೆ ಹಿನ್ನೆಲೆ ಗೌರಿಬಿದನೂರು ಕಚೇರಿ ಮೇಲೂ ಲೋಕಾ ಪೊಲೀಸರ ದಾಳಿ ನಡೆದಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

    ಹಾಸನ:
    ಇನ್ನೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಹಾಸನ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ. ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ನಲ್ಲಿರುವ ಜಯಣ್ಣ ನಿವಾಸ, ಪತ್ನಿ ನಿವಾಸ, ಹಾರ್ಡ್ವೇರ್ ಅಂಗಡಿ, ಇತರೆ ಎರಡು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

  • ಸಚಿವ ವಿ.ಸೋಮಣ್ಣಗೆ ಬಿಗ್ ರಿಲೀಫ್ – ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣ ವಜಾ

    ಸಚಿವ ವಿ.ಸೋಮಣ್ಣಗೆ ಬಿಗ್ ರಿಲೀಫ್ – ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣ ವಜಾ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ (V Somanna) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ವಿ. ಸೋಮಣ್ಣ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು (Illegal Property Gain Case) 91ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ. ಇದನ್ನೂ ಓದಿ: ಅಮಿತ್‌ ಶಾ ವಿದೇಶಿ ಪ್ರವಾಸದ ಮಾಹಿತಿ ಕೊಟ್ಟವರಿಗೆ 10 ಲಕ್ಷ ಬಹುಮಾನ: ಉಗ್ರ ಪನ್ನುನ್‌ ಘೋಷಣೆ

    2013ರಲ್ಲಿ ರಾಮಕೃಷ್ಣ ಎಂಬುವವರು ಖಾಸಗಿಯಾಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್‌ ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಏಕಸದಸ್ಯ ಪೀಠ, ರಾಮಕೃಷ್ಣ ಅವರ ಆರೋಪಕ್ಕೆ ಪೂರಕ ಸಾಕ್ಷಿ ಇಲ್ಲವೆಂದು ಪಿಸಿಆರ್ ಅನ್ನು ವಜಾಗೊಳಿಸಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ

  • ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ನವದೆಹಲಿ: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ (CBI) ತನಿಖೆಗೆ ನೀಡಿದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ಡಿಕೆಶಿ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.

    ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ನೀಡಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಮತ್ತು ಸರ್ಕಾರ ಮಾಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರು ಮನವಿ ಮಾಡಿದರು. ಲೋಕಾಯುಕ್ತ ತನಿಖೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಒಂದು ವೇಳೆ ತನಿಖೆ ನ್ಯಾಯಬದ್ಧವಾಗಿಲ್ಲ ಎಂದಾದರೆ ಮತ್ತೆ ಸುಪ್ರೀಂಕೋರ್ಟ್ ಸಂಪರ್ಕ ಮಾಡಬಹುದು ಎಂದು ಸೂಚಿಸಿತು.  ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ

    ಪ್ರತಿವಾದಿಗಳಾದ ಡಿ.ಕೆ ಶಿವಕುಮಾರ್ ಮತ್ತು ಸಿಬಿಐಗೆ ನೋಟಿಸ್ ನೀಡಲಾಗವುದು. ಸಿಬಿಐ ಈವರೆಗೂ ಯಾವುದೇ ಅರ್ಜಿ ಸಲ್ಲಿಸಿಲ್ಲ, ಅದರ ಮುಂದಿನ ನಡೆ ಏನು ಎಂಬುದನ್ನು ತಿಳಿಸಬೇಕು. ಡಿ.ಕೆ ಶಿವಕುಮಾರ್ ಮೂರು ವಾರಗಳಲ್ಲಿ ಅಕ್ಷಪಣೆ ಸಲ್ಲಿಸಲಿ. ಬಳಿಕ ಇನ್ನೊಂದು ವಾರದಲ್ಲಿ ಯತ್ನಾಳ್ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಬೇಕು ಎಂದ ಕೋರ್ಟ್‌ ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು.

    ಏನಿದು ಪ್ರಕರಣ?
    ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಲೋಕಾಯುಕ್ತದಲ್ಲಿ ತನಿಖೆ ಮುಂದುವರೆಸಬಹುದು ಎಂದು ಆದೇಶದಲ್ಲಿ ತಿಳಿಸಿತ್ತು. ರಾಜ್ಯ ಸರ್ಕಾರ- ಸಿಬಿಐ ನಡುವೆ ಘರ್ಷಣೆಗೆ ಕಾರಣವಾದ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ಯತ್ನಾಳ್‌ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯತ್ನಾಳ್‌ ಮೇಲ್ಮನವಿ ಸಲ್ಲಿಸಿದ್ದರು.

     

  • ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಕೇಸ್- ಲೋಕಾಯುಕ್ತ ತನಿಖೆ ಪ್ರಶ್ನಿಸಿ ಸಿಬಿಐ ಅರ್ಜಿ

    ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಕೇಸ್- ಲೋಕಾಯುಕ್ತ ತನಿಖೆ ಪ್ರಶ್ನಿಸಿ ಸಿಬಿಐ ಅರ್ಜಿ

    ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ಸನಿಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ (DK Shivakumar) ಸಾಲು ಸಾಲು ಸಂಕಷ್ಟ ಎದುರಾಗುವಂತೆ ಕಾಣುತ್ತಿದೆ.

    ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆಯ ಪೂರ್ವಾನುಮತಿ ಹಿಂಪಡೆದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ (CBI) ಇದೀಗ ಹೈಕೋರ್ಟ್ (HighCourt) ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೀಡಿದ್ದ ಆದೇಶವನ್ನು ಪ್ರಶ್ನಿಸಿದೆ. ಒಂದೇ ಪ್ರಕರಣಕ್ಕೆ ಮತ್ತೊಂದು ಎಫ್‍ಐಆರ್ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಲೋಕಾಯುಕ್ತಕ್ಕೆ (Lokayukta) ಕೊಟ್ಟಿರೋ ಆದೇಶ ಸರಿಯಲ್ಲ ಎಂದು ಸಿಬಿಐ ವಾದ ಮಂಡಿಸಿದೆ.

    ಸಿಬಿಐ ವಾದವನ್ನು ಆಕ್ಷೇಪಿಸಿದ ಎಜಿ, ಸರ್ಕಾರದ ನಿಲುವನ್ನು ಸಮರ್ಥಿಸಿದ್ರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಈ ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾವಣೆ ಮಾಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿಬಿಐಗೆ ಮೇಲ್ಮನವಿ ಹೋಗಲು ಹಕ್ಕಿದೆ. ಅವರು ಹೋಗಲಿ, ನಾವು ನಮ್ಮ ವಾದ ಮಂಡಿಸ್ತೇವೆ ಅಂದ್ರು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

    ಇತ್ತ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು, ಪಂಚರಾಜ್ಯ ಚುನಾವಣೆಯ ವೇಳೆ ಸಿಕ್ಕಿಬಿದ್ದ ಹಣವೆಲ್ಲಾ ಬೆಂಗಳೂರಿಂದ ಹೋಗಿರೋದು ಎಂಬ ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ಡಿಸಿಎಂ ಎಲ್ಲೆಲ್ಲಿಗೆ ಹೋದ್ರೋ ಅಲ್ಲಿಗೆಲ್ಲಾ ಹಣ ಸಾಗಿಸಿದ್ದಾರೆ. ದೇಶಕ್ಕೆಲ್ಲಾ ಉಪದೇಶ ಮಾಡೋ ಸಿಎಂ ಇದನ್ನು ಏಕೆ ತಡೆಯಲಿಲ್ಲ ಎಂದು ಜೆಡಿಎಸ್ ವರಿಷ್ಠರು ಪ್ರಶ್ನಿಸಿದ್ದಾರೆ.

  • ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ- ಜಮೀರ್ ಮೇಲ್ಮನವಿ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.

    ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ದಾಖಲೆಗಳ ಆಧಾರದ ಮೇಲೆ 2022 ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ (ACB) ದಾಳಿ ಮಾಡಿತ್ತು. ಬಳಿಕ ಜಮೀರ್ ಅಹ್ಮದ್ ಖಾನ್ ಆದಾಯದಲ್ಲಿ 2000% ಪಟ್ಟು ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದಾಯ ಏರಿಕೆ ಬಗ್ಗೆ ಸದ್ಯ ಲೋಕಾಯುಕ್ತ ತನಿಖೆ ನಡೆಸುತ್ತಿದೆ.

    ಲೋಕಾಯುಕ್ತ (Lokayukta) ನಡೆಸುತ್ತಿರುವ ತನಿಖೆಗೆ ಕೋರಿ ಮೊದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅದನ್ನು ವಜಾ ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್‍ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಇದನ್ನೂ ಓದಿ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ

    ಮಧ್ಯಂತರ ತಡೆಯನ್ನೇ ಆಧಾರವಾಗಿಟ್ಟುಕೊಂಡು ಜಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧ ಪ್ರಕರಣ ರದ್ದು ಮಾಡಬೇಕು ಎಂದು ಹೈಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ವಜಾ ಮಾಡಿತ್ತು. ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

    ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಅದಾಗ್ಯೂ ಈ ಹಿಂದೆ ತನಿಖೆಗೆ ನೀಡಿದ್ದ ಮಧ್ಯಂತರ ತಡೆ ಆದೇಶ ಮುಂದುವರಿಯಲಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ಈ ಆದೇಶದಿಂದ ಜಮೀರ್ ಅಹ್ಮದ್ ಖಾನ್ ಗೆ ತಾತ್ಕಲಿಕ ಹಿನ್ನಡೆಯಾದಂತಾಗಿದೆ.

  • ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ- ರಾಜ್ಯ ಸರ್ಕಾರಕ್ಕೀಗ ದಂಡ ವಸೂಲಿ ಹೇಗೆ ಅನ್ನೋ ಚಿಂತೆ

    ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ- ರಾಜ್ಯ ಸರ್ಕಾರಕ್ಕೀಗ ದಂಡ ವಸೂಲಿ ಹೇಗೆ ಅನ್ನೋ ಚಿಂತೆ

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ.

    ಕೆಳ ಹಂತದ ನ್ಯಾಯಾಲಯ 100 ಕೋಟಿ ರೂಪಾಯಿಗಳನ್ನ ಜಯಲಲಿತಾ ಅವರಿಂದ ವಸೂಲಿ ಮಾಡುವಂತೆ ಆದೇಶ ಮಾಡಿತ್ತು. ಈ ಹಿನ್ನಲೆಯಲ್ಲಿ ಈಗಾಗಲೇ ಮೃತರಾಗಿರೋ ಜಯಲಲಿತಾ ಬಳಿ ಹೇಗೆ ದಂಡ ವಸೂಲಿ ಮಾಡಬೇಕು ಅನ್ನೋ ಚಿಂತೆ ಶುರುವಾಗಿದೆ.

    ಈಗಾಗಲೇ ಸರ್ಕಾರ ದಂಡದ ಹಣವನ್ನು ವಸೂಲಿ ಮಾಡಲು ಕಮಿಟಿ ರಚನೆ ಮಾಡಲು ಯೋಚಿಸಿದ್ದು, ಕಮಿಟಿ ರಚಿಸೋದಕ್ಕೂ ಮುಂಚೆ ಸುಪ್ರೀಂಕೋರ್ಟ್ ಬಳಿ ಮತ್ತೊಂದು ಅರ್ಜಿ ಹಾಕಿ ದಂಡ ವಸೂಲಿಯ ಬಗ್ಗೆ ಇರೋ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಮುಂದಾಗಲಿದೆ ಎಂದು ಹೇಳಲಾಗಿದೆ. ಕಾನೂನಿನ ಕೆಲ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೆ ಮೃತರಾದ್ರೆ ಅವರ ಮೇಲಿನ ದಂಡವನ್ನು ಕಡಿಮೆ ಮಾಡಬಹುದು. ಆದ್ರೆ ಇಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿ ತೀರ್ಪು ಕಾಯ್ದಿರಿಸಿದಾಗ ಜಯಲಲಿತಾ ಮೃತಪಟ್ಟಿರೋದ್ರಿಂದ ಹಾಗೂ ಸುಪ್ರೀಂ ಕೋರ್ಟ್ ಸಹ ಸ್ಪಷ್ಟವಾಗಿ ದಂಡವನ್ನು ಯಾವ ರೀತಿ ವಸೂಲಿ ಮಾಡಿ ಅಂತ ಆದೇಶ ನೀಡದ ಕಾರಣ, ರಾಜ್ಯ ಸರ್ಕಾರ ಮತ್ತೊಮ್ಮೆ ಅರ್ಜಿ ಹಾಕಿ ಕೋರ್ಟ್‍ನಿಂದ ಸ್ಪಷ್ಟೀಕರಣ ಕೇಳಲು ತೀರ್ಮಾನಿಸಿದೆ.

  • ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಬೆಂಗಳೂರು: ಹಾಗೂ ಹೀಗೂ ತನ್ನ ಬಂಟನನ್ನ ಅಧಿಕಾರಕ್ಕೆ ತಂದ ಶಶಿಕಲಾ ಅಲಿಯಾಸ್ ಚಿನ್ನಮ್ಮ ತನ್ನಾಸೆಯಂತೆಯೇ ತನ್ನ ಮುಂದೆಯೇ ಅನಧಿಕೃತವಾಗಿಯಾದ್ರೂ ಸಚಿವ ಸಂಪುಟ ಸಭೆ ನಡೆಸೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಸಿಎಂ ಆಗೋ ಕನಸು ಅರಳುವ ಮುನ್ನವೇ ಕಮರಿ ಹೋಗಿರೊದ್ರಿಂದ ಚಿನ್ನಮ್ಮ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಅದು ಬೇರೇನೂ ಅಲ್ಲ ಪೆರೋಲ್ ಪ್ಲಾನ್.

    ಮೊನ್ನೆಯಷ್ಟೇ ಜೈಲು ಸೇರಿರೋ ಶಶಿಕಲಾ ರಾಜಕೀಯ ದಾಳವನ್ನ ಜೈಲಿನಲ್ಲಿಯೇ ಕುಳಿತು ಉರುಳಿಸ್ತಾ ಇದ್ದಾರೆ. ಇನ್ನು ಪಗಡೆಯಾಗಿರೋ ಪಳನಿಸ್ವಾಮಿ ಅಂಡ್ ಗ್ಯಾಂಗ್ ಚಿನ್ನಮ್ಮನ ಮಾತನ್ನ ಕೇಳಿಯೇ ಸರ್ಕಾರ ನಡೆಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಶಶಿಕಲಾ ಜೈಲಿನಲ್ಲಿಯೇ ಕುಳಿತು ಆಟ ಆಡೋದಕ್ಕೆ ಇಷ್ಟ ಪಟ್ಟಂತಿಲ್ಲ. ಕಣ್ಣ ಮುಂದೆಯೇ ಸರ್ಕಾರ ನಡೆಸಬೇಕು ಅಂದುಕೊಂಡಿರೋದ್ರಿಂದ ಶಶಿಕಲಾ ಹತ್ತು ದಿನ ಕಳೆದ ಬಳಿಕ ಅನಾರೋಗ್ಯದ ನೆಪ ಹೇಳಿ ಜೈಲಾಧಿಕಾರಿಯ ಮುಂದೆ ಪೆರೋಲ್ ಕೇಳುವ ಎಲ್ಲಾ ಲಕ್ಷಣಗಳೂ ಇದೆ.

    ಸಂಜಯ್ ದತ್ತ್ ಪ್ಲಾನ್ ಫಾಲೋ?!: ಸುಪ್ರೀಂ ಕೋರ್ಟ್ ಅನಿರೀಕ್ಷಿತವಾಗಿ ಆದೇಶವನ್ನು ನೀಡ್ತು. ಮೊದ್ಲೇ ನಾನು ಅನಾರೋಗ್ಯದಲ್ಲಿ ಇದ್ದೆ. ತಯಾರಿ ಮಾಡಿಕೊಳ್ಳುವ ಸಲುವಾಗಿ ನಾಲ್ಕು ವಾರ ಗಡವು ಕೇಳಿದ್ರೂ ಕೋರ್ಟ್ ನಿರಾಕರಣೆ ಮಾಡಿದ್ರಿಂದ ಪೆರೋಲ್ ನೀಡುವಂತೆ ಜೈಲಾಧಿಕಾರಿಗೆ ಚಿನ್ನಮ್ಮ ಮನವಿ ಮಾಡಿಕೊಳ್ಳಲಿದ್ದಾರೆ. ಜೈಲಾಧಿಕಾರಿಗಳು ಚೆನ್ನೈನ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಶಿಕಲಾಗೆ ಪೆರೋಲ್ ನೀಡೋದ್ರಿಂದ ತೊಂದರೆಯಾಗೋಲ್ವಾ ಅಂತ ವರದಿಯನ್ನು ತರಿಸಿಕೊಂಡು ಬಳಿಕ ಶಶಿಕಲಾಗೆ ಪೆರೋಲ್ ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಜೈಲು ಪಾಲಾಗಿದ್ದ ಸಂಜಯ್ ದತ್ ಕೂಡ ಇದೇ ಪ್ಲಾನ್ ಮಾಡಿ ಜೈಲಿನಿಂದ ಹೊರಬಂದಿದ್ರು.

    ಜೈಲಿಗೆ ಬರೋವಾಗ ರೋಡ್ ಶೋ ಮಾಡಿ ಬಂದ ಶಶಿಕಲಾ ಪೆರೋಲ್ ಸಿಕ್ರೆ ಈ ಎಲ್ಲಾ ಅವಕಾಶಗಳಿಗೂ ಬ್ರೇಕ್ ಹಾಕಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳಸೋ ಸಾಧ್ಯತೆಗಳಿವೆ. ಇನ್ನೊಂದು ಹತ್ತು ದಿನದ ಒಳಗೆ ಶಶಿಕಲಾ ತನ್ನ ಕಣ್ಣು ಮುಂದೆಯೇ ಅಧಿಕಾರ ನಡೆಸೋ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದಾರೆ.

  • ಕಡೆಗೂ ಜೈಲು ಸೇರಿದ ಶಶಿಕಲಾ ನಟರಾಜನ್ – ಚಿನ್ನಮ್ಮ ಈಗ ಕೈದಿ ನಂಬರ್ 9234

    ಕಡೆಗೂ ಜೈಲು ಸೇರಿದ ಶಶಿಕಲಾ ನಟರಾಜನ್ – ಚಿನ್ನಮ್ಮ ಈಗ ಕೈದಿ ನಂಬರ್ 9234

    – ಮನೆ ಊಟದ ಮನವಿ ತಿರಸ್ಕರಿಸಿದ ವಿಶೇಷ ಕೋರ್ಟ್

    ಬೆಂಗಳೂರು: ಅಂತೂ ಇಂತೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

    ಶಶಿಕಲಾ ಜೊತೆ ಆಕೆಯ ಸಂಬಂಧಿ ಇಳವರಸಿ ಕೂಡಾ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಸೇರಿದ ಚಿನ್ನಮ್ಮ ಈಗ ಕೈದಿ ನಂ.9234 ಹಾಗೂ ಇಳವರಸಿ ಕೈದಿ ನಂ. 9235. ಶಶಿಕಲಾ  ನೀಡಲಾಗಿದೆ. ಶಶಿಕಲಾ ಸಾಮಾನ್ಯ ಕೈದಿ ವಾರ್ಡ್‍ನಲ್ಲಿ ನಾಲ್ಕು ವರ್ಷಗಳ ಸೆರೆವಾಸ ಅನುಭವಿಸಬೇಕಿದೆ. ಈಗಾಗಲೇ ಇಬ್ಬರು ಮಹಿಳಾ ಕೈದಿಗಳು ಈ ಸೆಲ್‍ನಲ್ಲಿ ಇದ್ದಾರೆ. ಹಾಗೆ ಶಶಿಕಲಾಗೆ 3 ಬಿಳಿ ಸೀರೆ, 2 ತಟ್ಟೆ, ಒಂದು ಚೊಂಬನ್ನು ನೀಡಲಾಗಿದೆ. ಅಲ್ದೆ ಸಾಮಾನ್ಯ ಕೈದಿಗಳು ನೋಡುವ ಟಿವಿಯನ್ನೇ ಶಶಿಕಲಾ ನೋಡಬೇಕು. ಶುಗರ್ ಇದೆ ಎಂದು ಮನೆ ಊಟ ಬೇಕೆಂದು ಕೇಳಿದ್ದ ಶಶಿಕಲಾ ಮನವಿಯನ್ನು ವಿಶೇಷ ಕೋರ್ಟ್ ತಿರಸ್ಕರಿಸಿದೆ. ಇದರ ಜೊತೆ ಶಶಿಕಲಾಗೆ ಕ್ಯಾಂಡಲ್ ತಯಾರಿ ಮಾಡುವ ಕೆಲಸ ನೀಡಲಾಗಿದ್ದು, 50 ರೂಪಾಯಿ ದಿನಗೂಲಿ ಕೂಡ ನೀಡಲಾಗುತ್ತದೆ. ಮತ್ತೋರ್ವ ಅಪರಾಧಿ ಸುಧಾಕರನ್ ಕೂಡ ಪರಪ್ಪನ ಅಗ್ರಹಾರಕ್ಕೆ ಬಂದು ಶರಣಾಗಿದ್ದಾರೆ.

    ಇನ್ನು ಶಶಿಕಲಾ ಪರಪ್ಪನ ಅಗ್ರಹಾರ ಕೋರ್ಟ್‍ನತ್ತ ಬರುತ್ತಿದ್ದಂತೆ ಜಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. 30 ವರ್ಷ ಅಮ್ಮನ ಜೊತೆ ಇದ್ದುಕೊಂಡೇ ಮೋಸ ಮಾಡಿದ್ದೀರಿ ಅಂತ ಜಯಾ ಅಭಿಮಾನಿಗಳು ಇನೋವಾ ಕಾರಿನ ಗ್ಲಾಸ್ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಈ ವೇಳೆ 4 ಸ್ಕಾರ್ಪಿಯೋ ಹಾಗೂ 1 ಇನೋವಾ ಕಾರು ಜಖಂ ಆಗಿದೆ.

    ಮಧ್ಯಾಹ್ನ 1.30ಕ್ಕೆ ವಿಶೇಷ ಕಾರಿನಲ್ಲಿ ಹೊರಟ ಶಶಿಕಲಾ ಸಂಜೆ 5 ಗಂಟೆ 15 ನಿಮಿಷಕ್ಕೆ ಪರಪ್ಪನ ಅಗ್ರಹಾರ ಜೈಲು ತಲುಪಿದ್ರು. ಜಯಲಲಿತಾ ಬಳಸುತ್ತಿದ್ದ ಟಯೋಟಾ ಪ್ರಾಡೋ ಕಾರಿನಲ್ಲೇ ಶಶಿಕಲಾ ಜೈಲಿಗೆ ಬಂದ್ರು. ತಮಿಳುನಾಡು ಪೊಲೀಸರು ಶಶಿಕಲಾ ನಟರಾಜನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆತಂದು ಪರಪ್ಪನ ಅಗ್ರಹಾರದ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ವಾಪಸ್ ಹೋದ್ರು. ಚೆನ್ನೈ, ವೆಲ್ಲೂರು, ಕೃಷ್ಣಗಿರಿ, ಹೊಸೂರು ಮಾರ್ಗವಾಗಿ ಶಶಿಕಲಾರನ್ನು ಬೆಂಗಳೂರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಯ್ತು. ಮಾರ್ಗದುದ್ದಕ್ಕೂ ಜಯಲಲಿತಾ ಹಾಗೂ ಶಶಿಕಲಾ ಅಭಿಮಾನಿಗಳು ಕಾರಿನತ್ತ ಕೈ ಬೀಸಿದ್ರು. ಶಶಿಕಲಾ ಜೈಲಿಗೆ ಹೋಗೋದನ್ನು ಕಂಡು ಕೆಲವರು ಮರುಗಿದ್ರು. ಕಣ್ಣೀರು ಹಾಕಿ ಚಿನ್ನಮ್ಮನನು ಜೈಲಿಗೆ ಕಳಿಸಬೇಡಿ ಅಂದ್ರು. ಪನ್ನೀರ್ ಸೆಲ್ವಂ ಅಭಿಮಾನಿಗಳು ಖುಷಿ ಪಟ್ರು.

    ಇತ್ತ ಶಶಿಕಲಾ ಬರುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಪತಿ ನಟರಾಜನ್ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಬಂದು ನಿಂತಿದ್ರು. ಸಾಕಷ್ಟು ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ರು. ಶಶಿಕಲಾರನ್ನು ಜೈಲಿಗೆ ಹಾಕಬೇಡಿ ಅಂತಾ ಕೆಲವರು ಗಲಾಟೆ ಮಾಡಿದ್ರು.