Tag: ಅಕ್ರಮ ಆಸ್ತಿಗಳಿಕೆ

  • ಸಿಬಿಐಗೆ ಸಲ್ಲಿಸಿದ ದಾಖಲೆ ನಮಗೂ ನೀಡಿ – ಡಿಕೆಶಿಗೆ ಲೋಕಾಯುಕ್ತದಿಂದ ನೋಟಿಸ್‌

    ಸಿಬಿಐಗೆ ಸಲ್ಲಿಸಿದ ದಾಖಲೆ ನಮಗೂ ನೀಡಿ – ಡಿಕೆಶಿಗೆ ಲೋಕಾಯುಕ್ತದಿಂದ ನೋಟಿಸ್‌

    ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣಕ್ಕೆ (Disproportionate Assets Case) ಸಂಬಂಧಿಸಿದಂತೆ ಸಿಬಿಐಗೆ (CBI) ನೀಡಿರುವ ದಾಖಲೆಗಳನ್ನ ನಮಗೂ ನೀಡಿ ಎಂದು ಲೋಕಾಯುಕ್ತ ಪೊಲೀಸರು (Lokayukta Police) ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ನೋಟಿಸ್‌ ನೀಡಿದ್ದಾರೆ.

    ಅಕ್ರಮ ಆಸ್ತಿ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈಗ ತನಿಖೆಯ ಭಾಗವಾಗಿ ಪೊಲೀಸರು ಸಿಬಿಐಗೆ ಸಲ್ಲಿಸಿದ ಮಾಹಿತಿ ಮತ್ತು  ದಾಖಲೆಗಳನ್ನು ನಮ್ಮ ಕಚೇರಿಗೆ ಸಲ್ಲಿಸಿ ಎಂದು ನೋಟಿಸ್‌ ನೀಡಿದೆ.  ಇದನ್ನೂ ಓದಿ: ಮಂಗಳೂರಿನಲ್ಲಿ ರೋಡ್‌ ಶೋ, ಮೈಸೂರಿನಲ್ಲಿ ಸಮಾವೇಶ – ಮೋದಿ ಕಾರ್ಯಕ್ರಮದಲ್ಲಿ ಬದಲಾವಣೆ

     

    ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಯ ಪೂರ್ವಾನುಮತಿಯನ್ನು ಹಿಂಪಡೆದ ಬಳಿಕ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಲೋಕಾಯುಕ್ತಕ್ಕೆ ನೀಡಿತ್ತು. ಲೋಕಾಯುಕ್ತ ಪೊಲೀಸರು ಫೆ.8 ರಂದು ಡಿಕೆಶಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನೂ ಓದಿ: ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್‌ ಮಂಜುನಾಥ್‌

    ಏನಿದು ಸಿಬಿಐ ಪ್ರಕರಣ?
    2017 ರಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯವಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ (Income Tax Department) ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಇಡಿ ಪಿಸಿ ಆ್ಯಕ್ಟ್ ನಡಿ ತನಿಖೆ ನಡೆಸಲು ಸಿಬಿಐಗೆ ನೀಡಲು ಶಿಫಾರಸು ಮಾಡಿತ್ತು. ಶಿಫಾರಸು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು.

  • ಅಕ್ರಮ ಆಸ್ತಿಗಳಿಕೆ ಕೇಸ್‌ – ಈಗ ಡಿಕೆಶಿ ವಿರುದ್ಧ ಲೋಕಾಯುಕ್ತದಿಂದಲೂ ತನಿಖೆ

    ಅಕ್ರಮ ಆಸ್ತಿಗಳಿಕೆ ಕೇಸ್‌ – ಈಗ ಡಿಕೆಶಿ ವಿರುದ್ಧ ಲೋಕಾಯುಕ್ತದಿಂದಲೂ ತನಿಖೆ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು (Disproportionate Assets Case) ಈಗ ಎರಡು ಸಂಸ್ಥೆಗಳು ತನಿಖೆ ನಡೆಸಲಿದೆ.

    ಹೌದು. ಅಕ್ರಮ ಆಸ್ತಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತದಿಂದ (Lokayukta) ನಡೆಸಲು ಸರ್ಕಾರ ಮುಂದಾಗಿದೆ. ಡಿಕೆ ಶಿವಕುಮಾರ್‌ ಅವರೇ ಈ ವಿಚಾರವನ್ನು ತಿಳಿಸಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಆಗಿದೆ ಎಂದು ಹೇಳಿದ್ದಾರೆ.

     

    2013ರಿಂದ 2018ರವರೆಗೆ 74 ಕೋಟಿ ರೂ. ಅಕ್ರಮ ಆಸ್ತಿಯನ್ನು ಡಿಕೆಶಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಈಗ ಸಿಬಿಐ (CBI) ತನಿಖೆ ನಡೆಸಿದ್ದು ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಲು ಮಾತ್ರ ಬಾಕಿಯಿದೆ.  ಇದನ್ನೂ ಓದಿ: ಫ್ಯಾನ್‍ಗೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ಏನಿದು ಪ್ರಕರಣ?
    2017 ರಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯವಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ (Income Tax Department) ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಇಡಿ ಪಿಸಿ ಆ್ಯಕ್ಟ್ ನಡಿ ತನಿಖೆ ನಡೆಸಲು ಸಿಬಿಐಗೆ ನೀಡಲು ಶಿಫಾರಸು ಮಾಡಿತ್ತು. ಶಿಫಾರಸು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು.

     

  • ಕಳ್ಳನ ಹೆಂಡ್ತಿ ಯಾವತ್ತಿದ್ರೂ ಡ್ಯಾಶ್ ಡ್ಯಾಶ್ – ಸಿ.ಟಿ ರವಿ ಹೀಗ್ಯಾಕಂದ್ರು?

    ಕಳ್ಳನ ಹೆಂಡ್ತಿ ಯಾವತ್ತಿದ್ರೂ ಡ್ಯಾಶ್ ಡ್ಯಾಶ್ – ಸಿ.ಟಿ ರವಿ ಹೀಗ್ಯಾಕಂದ್ರು?

    ಚಿಕ್ಕಮಗಳೂರು: `ಹಾಲಿಂದು ಹಾಲಿಗೆ, ನೀರಿಂದು ನೀರಿಗೆ’, `ಉಪ್ಪು ತಿಂದವನು ನೀರು ಕುಡಿಯಬೇಕು’, `ಊರಿಗೆ ಬಂದೋಳು ನೀರಿಗೆ ಬರಲ್ವಾʼ, ʻಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್ ಡ್ಯಾಶ್ʼ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಹೆಸರೇಳದೆ ಗಾದೆ ಮೂಲಕ ತಿವಿದಿದ್ದಾರೆ.

    ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ (Highcourt), ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ ರವಿ ಅವರು, ಡಿಕೆಶಿ ಹೆಸರು ಹೇಳದೆಯೇ ಗಾದೆಯ ಮೂಲಕ ಕುಟುಕಿದ್ದಾರೆ. ಇದನ್ನೂ  ಓದಿ: ಅನುಕಂಪವನ್ನು ನಮ್ಮ ದೇಶದಲ್ಲಿ ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ತಾರೆ: ಡಿಕೆಶಿಗೆ ಕುಮಾರಸ್ವಾಮಿ ಠಕ್ಕರ್

    ಗಾದೆಗಳು ಸುಮ್ನೆ ಹುಟ್ಟುತ್ತವಾ? ಗಾದೆಗೆ ತಲತಲಾಂತರದ ಸತ್ಯ ಇರುತ್ತೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಆದ್ರೆ, ಪ್ರಮಾಣಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದಿದ್ದಾರೆ. ಯಾರೇ ಅಕ್ರಮ ಮಾಡಿದರೂ ಅದು ಇಂದಲ್ಲ ನಾಳೆ ಬಯಲಿಗೆ ಬರಲೇಬೇಕು. ಸತ್ಯವನ್ನ ಮಣ್ಣುಮಾಡೋಕಾಗಲ್ಲ, ಕೆಲ ಕಾಲ ಮುಚ್ಚಿಡಬಹುದು ಅಷ್ಟೆ. ಆದರೆ ಹೊರಬರೋದು ಸತ್ಯ. ತಪ್ಪು ಮಾಡಿರೋರು ಯಾರೇ ಆಗಿರಬಹುದು. ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ  ಓದಿ: ಡಿಕೆಶಿ ಅರ್ಜಿ ವಜಾಗೊಂಡಿದ್ದು ಯಾಕೆ? ಹೈಕೋರ್ಟ್‌ ನೀಡಿದ ಕಾರಣ ಏನು?

    ಇಲ್ಲಿ ಕಾನೂನಿಗಿಂತ ಅತೀಥರಾದವರು ಯಾರಾದರೂ ಇದ್ದಾರಾ? ನನ್ನನ್ನು ಸೇರಿದಂತೆ ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತೀಥರಲ್ಲ. ಯಾರಾದ್ರೂ ನಾವು ಕಾನೂನಿಗಿಂತ ದೊಡ್ಡವರು ಅಂದುಕೊಂಡಿದ್ದರೆ ಅದಕ್ಕೆ ಸಂವಿಧಾನ ಅವಕಾಶ ನೀಡಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ. ಏನೂ ಮಾಡಿದ್ರೂ ನಡೆಯುತ್ತೆ ಅನ್ನೋ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು. ಇವರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ ಎಂದು ಡಿಕೆಶಿ ಹೆಸರೇಳದೆ ಪರೋಕ್ಷವಾಗಿ ಗಾದೆಗಳ ಮೂಲಕ ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]