Tag: ಅಕ್ಟೋಬರ್

  • ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ವಿವಾದದ ನಡುವೆಯೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ದಾಸ ದರ್ಶನ್. ಅಕ್ಟೋಬರ್ (October)ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ ಡೆವಿಲ್ ಸಮೇತ ಮತ್ತೆ ಬರುವೆ ಎಂದು ಹೇಳಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗುವ ಕುರಿತು ಮಾತನಾಡಿದ್ದಾರೆ. ಕಾಟೇರ 50ನೇ ದಿನದ ಸಮಾರಂಭದಲ್ಲಿ ಈ ವಿಷಯ ತಿಳೀಸಿದ್ದಾರೆ.

    ರ್ಶನ್ (Darshan) ಅಭಿನಯಿಸುತ್ತಿರೋ ಮುಂದಿನ ಚಿತ್ರ ‘ಡೆವಿಲ್’ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ.

     

    ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

  • ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅಕ್ಟೋಬರ್ (October) 19ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

    ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

    ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

     

    ಯಶ್ 19 (Yash 19) ಸಿನಿಮಾಗಾಗಿ ರಾಕಿಭಾಯ್ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗುವವರೆಗೂ ತಮ್ಮ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಲೀಕ್ ಆಗದಂತೆ ನಟ ನೋಡಿಕೊಳ್ತಿದ್ದಾರೆ. ಕೆಲವೇ ದಿನಗಳಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

    ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೆಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಸಾವಿನ ನಂತರ ತೀವ್ರ ನೋವು ಅನುಭವಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮಗ ರಾಯಾನ್ ರಾಜ್ ಸರ್ಜಾ ಹುಟ್ಟಿದ ನಂತರದಲ್ಲಿ ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಶಿಯಲ್ ಮೀಡಿಯಾ ಮೂಲಕವಾಗಿ ನಿರಂತರ ಸಂಪರ್ಕದಲ್ಲಿ ಇರುವ ನಟಿ ಈಗ ಅಕ್ಟೋಬರ್ ವಿಶೇಷ ತಿಂಗಳು ಎಂದು ಪೋಸ್ಟ್ ಮಾಡಿದ್ದಾರೆ.

    ಮೇಘನಾಗೆ ಅಕ್ಟೋಬರ್ ತಿಂಗಳು ವಿಶೇಷ ಏಕೆ ಅದಕ್ಕೆ ಕಾರಣ ಇದೆ. ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹಾಗೂ ಮಗ ರಾಯನ್ ರಾಜ್ ಸರ್ಜಾ ಇಬ್ಬರೂ ಹುಟ್ಟಿದ್ದು ಅಕ್ಟೋಬರ್ ತಿಂಗಳಲ್ಲೇ. ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರ ಜನ್ಮದಿನ ಬರಲಿದೆ. ಅಕ್ಟೋಬರ್ 17 ಚಿರಂಜೀವಿ ಜನ್ಮದಿನ. ರಾಯನ್ ಹುಟ್ಟಿದ್ದು ಅಕ್ಟೋಬರ್ 22ರಂದು. ಇದು ಮೇಘನಾಗೆ ಖುಷಿಯ ವಿಚಾರ. ಈ ಬಗ್ಗೆ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಇದನ್ನೂ ಓದಿ:  ಮದುವೆ ಊಟಕ್ಕೆ ಕರೆದಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

     

    ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದು ಅವರು ಇಲ್ಲದೆ ಆಚರಿಸುತ್ತಿರುವ ಎರಡನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಕುಟುಂಬದವರು ಚಿರು ಸಮಾಧಿಗೆ ತೆರಳಿ ವಿಶೇಷ ಪೂಜೆ ಅರ್ಪಿಸುವ ಸಾಧ್ಯತೆ ಇದೆ. ಇನ್ನು ರಾಯನ್‍ಗೆ ಇದು ಮೊದಲ ವರ್ಷದ ಹುಟ್ಟುಹಬ್ಬ. ಹೀಗಾಗಿ ಕುಟುಂಬದವರು ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮೇಘನಾ ರಾಜ್ ಅವರ ಅಭಿಮಾನಿಗಳ ಪಾಲಿಗೆ ಈ ತಿಂಗಳು ತುಂಬಾನೇ ವಿಶೇಷವಾಗಿರಲಿದೆ.

    ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣದ ವೇಳೆ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಈ ಎಲ್ಲಾ ನೋವುಗಳನ್ನು ದಾಟಿ ಮೇಘನಾ ರಾಜ್ ಮುಂದೆ ಬಂದಿದ್ದಾರೆ. ಚಿರುವನ್ನು ಕಳೆದುಕೊಂಡು ಒಂದು ವರ್ಷದ ಮೇಲಾಗಿದ್ದು, ಅವರು ಈಗ ಮೊದಲಿನ ಮನಸ್ಥಿತಿಗೆ ಮರಳುತ್ತಿದ್ದಾರೆ.