Tag: ಅಕ್ಕೈ ಪದ್ಮಶಾಲಿ

  • ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್

    ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್

    ಬೆಂಗಳೂರು: ನಾಳೆ ರಾಖಿ ಹಬ್ಬ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ನಟ ಧನಂಜಯ್ ಅವರು ಇಂದು ಸಾಮಾಜಿಕ ಕಾರ್ಯಕರ್ತೆಯೊಬ್ಬರ ಆಸೆ ನೆರವೇರಿಸಿದ್ದಾರೆ.

    ಹೌದು. ಅಕ್ಕೈ ಪದ್ಮಶಾಲಿಯವರು ಡಾಲಿ ಕೈಗೆ ರಾಖಿ ಕಟ್ಟಿದ್ದಾರೆ. ತಮಗೆ ರಾಖಿ ಕಟ್ಟಿದವರಿಗೆ ನಟ ಕೂಡ ಗೌರವ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ ಸ್ಟೈಲಿಶ್ ಟೋಪಿಗಳು 

    ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಧನಂಜಯ್ ಜೊತೆ ಅಕ್ಕೈ ನಟಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಅಕ್ಕನ ಪಾತ್ರದಲ್ಲಿ ನಟಿಸಿರುವ ಅಕ್ಕೈ ನಟಿಸಿದ್ದಾರೆ. ಹೀಗಾಗಿ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ.

    ಶೂಟಿಂಗ್ ಮುಗಿ ಬಳಿಕ ರಾಖಿ ಕಟ್ಟುವ ಆಸೆಯನ್ನು ಅಕ್ಕೈ ಅವರು ಡಾಲಿ ಮುಂದಿಟ್ಟಿದ್ದರು. ಅಕ್ಕೈ ಮಾತಿಗೆ ಡಾಲಿ ಕೂಡ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಇಂದು ಅಕ್ಕೈ ಅವರನ್ನು ಡಾಲಿ ತಮ್ಮ ಮನೆಗೆ ಕರೆದಿದ್ದಾರೆ.

    ಅಕ್ಕೈ ಪದ್ಮಶಾಲಿ ಮತ್ತು ತಂಡ ಧನಂಜಯ್ ಮನೆಗೆ ಆಗಮಿಸಿದ್ದಾರೆ. ಬಳಿಕ ಧನಂಜಯ್‍ಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿದರು. ನಂತರ ಡಾಲಿ ಎಲ್ಲರಿಗೂ ಸೀರೆ ಕೊಟ್ಟು ಸತ್ಕರಿಸಿದ್ದಾರೆ. ಇದನ್ನೂ ಓದಿ: ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ