Tag: ಅಕ್ಕಿ ರೊಟ್ಟಿ

  • ಹಾಸ್ಟೆಲ್ ನಲ್ಲಿ ಅಕ್ಕಿ ಹಿಟ್ಟು ಮುಖಕ್ಕೆ ಬಳಸುತ್ತಿದ್ದೆ, ಫಸ್ಟ್ ಟೈಮ್ ರೊಟ್ಟಿ ಮಾಡಿದ್ದೀನಿ : ನಿವೇದಿತಾ ಗೌಡ

    ಹಾಸ್ಟೆಲ್ ನಲ್ಲಿ ಅಕ್ಕಿ ಹಿಟ್ಟು ಮುಖಕ್ಕೆ ಬಳಸುತ್ತಿದ್ದೆ, ಫಸ್ಟ್ ಟೈಮ್ ರೊಟ್ಟಿ ಮಾಡಿದ್ದೀನಿ : ನಿವೇದಿತಾ ಗೌಡ

    ವಾರಕ್ಕೊಂದು ಹೊಸ ಹೊಸ ಅಡುಗೆ ಮಾಡುವ ಮೂಲಕ ನಿವೇದಿತಾ ಗೌಡ (Nivedita Gowda) ಪಾಕ ಪ್ರಪಂಚಕ್ಕೂ ಕಾಲಿಡುತ್ತಿದ್ದಾರೆ. ತಮಗೆ ಗೊತ್ತಿರುವ, ಕೇಳಿರುವ ಅಡುಗೆಯನ್ನೂ ಮಾಡುವ ಅವರು ಈ ಬಾರಿ ಅಕ್ಕಿ ರೊಟ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ. ತಾವು ಅಕ್ಕಿ ರೊಟ್ಟಿಯನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ಶೂಟ್ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಕೂಡ ಆಗಿದೆ.

    ಅಕ್ಕಿ ರೊಟ್ಟಿ (Akki Rotti) ಹೇಗೆ ಮಾಡುವುದೋ ಗೊತ್ತಿಲ್ಲ, ಆದರೂ ಮಾಡುತ್ತಿರುವೆ ಎಂದು ಮಾತು ಶುರು ಮಾಡುವ ನಿವೇದಿತಾ, ತಮ್ಮ ಉದ್ದನೆಯ ಉಗುರುಗಳ ಬಗ್ಗೆ ಹೇಳುತ್ತಾರೆ. ಬೆರಳಿನಲ್ಲಿ ಉಗುರುಗಳು ಉದ್ದ ಇರುವ ಕಾರಣಕ್ಕಾಗಿ ಅಕ್ಕಿ ಹಿಟ್ಟು ಹೇಗೆ ಕಲಸುತ್ತೇನೋ ಗೊತ್ತಿಲ್ಲ. ಉಗುರುಗಳು ಸಪೋರ್ಟ್ ಮಾಡುತ್ತಿಲ್ಲವೆಂದು ಕಾಮಿಡಿ ಮಾಡುತ್ತಾರೆ. ಅಲ್ಲದೇ, ಹಾಸ್ಟೆಲ್ ನಲ್ಲಿ ಇದ್ದಾಗ ಅಕ್ಕಿ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳಲು ಬಳಸುತ್ತಿದ್ದೆ. ಇದೇ ಮೊದಲ ಬಾರಿಗೆ ರೊಟ್ಟಿ ಮಾಡಲು ಬಳಸುತ್ತಿರುವುದಾಗಿಯೂ ಅವರು ಹೇಳುತ್ತಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಈರುಳ್ಳಿ ಹೆಚ್ಚುವಾಗ ಮೆಡಿಕಲ್ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳುವ ನಿವೇದಿತಾ ‘ಮೆಡಿಕಲ್ ಸ್ಟೂಡೆಂಟ್ ಪ್ರಾಣಿಗಳನ್ನು ಕಟ್ ಮಾಡುತ್ತಾರಲ್ಲ, ನನಗೆ ಆ ಫೀಲ್ ಆಗುತ್ತಿದೆ ಎನ್ನುತ್ತಾರೆ. ಅಲ್ಲದೇ, ತಮಗೆ ಸಬ್ಬಸಗಿ ಅಂದರೆ ತುಂಬಾ ಇಷ್ಟ. ಅದರ ಘಮಲು ಇನ್ನೂ ಇಷ್ಟ ಎಂದು ಆ ಸೊಪ್ಪನ್ನು ಪರಿಚಯಿಸುತ್ತಾರೆ. ಕರಿಬೇವು ಹಿಡಿದುಕೊಂಡು, ಅಯ್ಯೋ ಇದು ನನಗೆ ಸಖತ್ ಕನ್ಫ್ಯೂಸ್ ಮಾಡುತ್ತಿದೆ ಎಂದು ಹೇಳುತ್ತಾರೆ. ಒಂದು ರೀತಿಯಲ್ಲಿ ತಮಾಷೆಯಾಗಿಯೇ ನರೇಟ್ ಮಾಡುತ್ತಾ ಹೋಗಿದ್ದಾರೆ ನಿವಿ.

    ಇವತ್ತು ಅಕ್ಕಿರೊಟ್ಟಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಂತೆಯೇ ಪತಿ ಚಂದನ್ ಶೆಟ್ಟಿ (Chandan Shetty) ಬೆಳಗ್ಗೆಯೇ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರಂತೆ. ಹಾಗಾಗಿ ಅಕ್ಕಿ ರೊಟ್ಟಿ ತಿನ್ನಲು ಯಾರೂ ಇಲ್ಲ, ನಾನು ಅಡುಗೆ (Cooking) ಮಾಡುತ್ತಿದ್ದೇನೆ ಎಂದು ಕೇಳುತ್ತಿದ್ದಂತೆಯೇ ಚಂದನ್ ಹೊರಟೇ ಬಿಟ್ಟರು. ಇದೀಗ ನಾನು ಮಾಡಿದ ಅಕ್ಕಿರೊಟ್ಟಿಯನ್ನು ನಾನೇ ತಿನ್ನಬೇಕು ಎಂದು ಚಂದನ್ ಕಾಲು ಎಳೆಯುತ್ತಾರೆ. ಈವರೆಗೂ ಗಂಡನ ಮೇಲೆಯೇ ಎಲ್ಲ ಪ್ರಯೋಗ ಮಾಡಿದ ನಿವೇದಿತಾ, ಆ ವೇಳೆಯಲ್ಲಿ ಚಂದನ್ ಇಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಲಭವಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ

    ಸುಲಭವಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ

    ಪ್ರತಿದಿನ ದೋಸೆ, ಇಡ್ಲಿ ಸೇರಿದಂತೆ ಅನೇಕ ತಿಂಡಿಗಳನ್ನು ಮಾಡಿ ಬೇಸರವಾಗಿರುತ್ತದೆ. ಮನೆಯಲ್ಲಿ ಏನಾದರು ಸ್ಟೆಷಲ್ ಆಗಿ ಹೊಸ ತಿಂಡಿ ಮಾಡು ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ನಿಮಗಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ ಹಿಟ್ಟು – 1 ಕಪ್
    2. ಕೊತ್ತಂಬರಿ ಸೊಪ್ಪು -ಸ್ವಲ್ಪ
    3. ಈರಳ್ಳಿ – 1
    4. ಎಣ್ಣೆ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಹಸಿರು ಮೆಣಸಿನ ಕಾಯಿ – 3-4

    ಮಾಡುವ ವಿಧಾನ
    * ಮೊದಲು ಒಂದು ಬೌಲ್ ಗೆ ಅಕ್ಕಿ ಹಿಟ್ಟು, ಸಣ್ಣಗೆ ಕತ್ತರಿಸಿದ ಈರುಳ್ಳಿ, ಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಕಲಿಸಿ.
    * ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಿರಿ.
    * ಬಳಿಕ ಅದಕ್ಕೆ ಸಣ್ಣಗೆ ಕಟ್ ಮಾಡಿರುವ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ, ಉಂಡೆ ಮಾಡಿಕೊಳ್ಳಿ.
    * ನಂತರ ತವದ ಮೇಲೆ ಒಂದು ಚಮಚ ಎಣ್ಣೆ ಹಾಕಿ ಉಂಡೆಯನ್ನು ತವದ ತುಂಬಾ ಹರಡುವಂತೆ ತೆಳ್ಳಗೆ ಕೈಯಿಂದ ತಟ್ಟಿ.
    * ಬಳಿಕ ಸ್ಟವ್ ಆನ್ ಮಾಡಿ, ಮತ್ತೆ ರೊಟ್ಟಿಯ ಮೇಲೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿ.
    * ಎರಡು ಬದಿ ಚೆನ್ನಾಗಿ ಬೇಯಿಸಿದರೆ, ಬಿಸಿ ಬಿಸಿ ಅಕ್ಕಿ ರೊಟ್ಟಿ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv