Tag: ಅಕ್ಕಿ ತಂಬಿಟ್ಟು

  • ನಾಗರಪಂಚಮಿಯ ವಿಶೇಷ: ಬಾಯಲ್ಲಿಟ್ಟರೆ ಕರಗುವ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನ

    ನಾಗರಪಂಚಮಿಯ ವಿಶೇಷ: ಬಾಯಲ್ಲಿಟ್ಟರೆ ಕರಗುವ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನ

    ನಾಗಪಂಚಮಿ’ ವಿಶೇಷ ‘ಅಕ್ಕಿ ತಂಬಿಟ್ಟು’ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನ ತುಂಬಾ ಸಿಂಪಲ್‍ವಾಗಿದ್ದು, ನಾವು ಹೇಳಿದ ರೀತಿ ಮಾಡಿದ್ರೆ ನಿಮ್ಮ ಬಾಯಲ್ಲಿಟ್ಟರೆ ಕರಗುತ್ತೆ ಈ ಸಿಹಿ ತಿಂಡಿ. ರೆಸಿಪಿ ಮಾಡುವ ವಿಧಾನ ಹೇಗೆ? ಎಂಬುದನ್ನು ನಾವು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ದೋಸೆ ಅಕ್ಕಿ – 1/2 ಕಪ್
    * ಹುರಿದ ಹುರಿಗಡಲೆ – 1/4 ಕಪ್
    * ಕಡಲೆಕಾಯಿ – 1/8 ಕಪ್


    * ತುರಿದ ತೆಂಗಿನಕಾಯಿ – 1/4 ಕಪ್
    * ಬೆಲ್ಲ – 1/4 ಕಪ್
    * ನೀರು – 1/4 ಕಪ್
    * ಏಲಕ್ಕಿ – 1 ಟೀಸ್ಪೂನ್

    ಮಾಡುವ ವಿಧಾನ:
    * ಅಕ್ಕಿಯನ್ನು ತೊಳೆದು ನೀರಿನಲ್ಲಿ 5 ಗಂಟೆವರೆಗೂ ನೆನೆಸಿಟ್ಟು ನಂತರ ನೀರನ್ನು ಸಂಪೂರ್ಣವಾಗಿ ಸೂಸಿ.
    * ಮಧ್ಯಮ ಉರಿಯಲ್ಲಿ ಬಾಣಲೆಗೆ ಅಕ್ಕಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ತಣ್ಣಗಾದ ಮೇಲೆ ನೀರು ಹಾಕದೆ ರುಬ್ಬಿಕೊಳ್ಳಿ. ಈಗ ರುಬ್ಬಿದ ಹಿಟ್ಟನ್ನು ಶೋಧಿಸಿ.
    * ನಂತರ ಕಡಲೆಕಾಳು ಹುರಿಯಿರಿ. ತಣ್ಣಗಾದ ಮೇಲೆ ತೆಂಗಿನಕಾಯಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ರುಬ್ಬಿ ಪಕ್ಕಕ್ಕಿಡಿ.
    * ಒಂದು ಬಾಣಲೆಗೆ ನೀರು ಹಾಕಿ ಅದಕ್ಕೆ ಬೆಲ್ಲ ಸೇರಿಸಿ ಕುದಿಸಿ.

    * ತಕ್ಷಣವೇ ಈ ಬೆಲ್ಲಕ್ಕೆ ಹಿಟ್ಟು, ತೆಂಗಿನಕಾಯಿ ಮತ್ತು ಕಡಲೆಕಾಯಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಕೊನೆಗೆ ಕೈಗಳಿಗೆ ತುಪ್ಪವನ್ನು ಹಚ್ಚಿಕೊಂಡು ಮಿಶ್ರಣವನ್ನು ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿ. ತಂಬಿಟ್ಟು ಬಿಸಿಯಾಗಿರುವಾಗ ಸ್ವಲ್ಪ ಮೃದುವಾಗಿರುತ್ತದೆ. ಒಂದು ಗಂಟೆಯೊಳಗೆ ಅವರು ಗಟ್ಟಿಯಾಗುತ್ತಾರೆ.

    Live Tv
    [brid partner=56869869 player=32851 video=960834 autoplay=true]