Tag: ಅಕ್ಕಿ ಚೀಲ

  • ಕಾರ್ಮಿಕನಂತೆ ಲಾರಿಯಿಂದ ಅಕ್ಕಿ ಚೀಲ ಇಳಿಸಿದ ಮಾಜಿ ಸಚಿವ ಸಂತೋಷ್ ಲಾಡ್

    ಕಾರ್ಮಿಕನಂತೆ ಲಾರಿಯಿಂದ ಅಕ್ಕಿ ಚೀಲ ಇಳಿಸಿದ ಮಾಜಿ ಸಚಿವ ಸಂತೋಷ್ ಲಾಡ್

    ಹುಬ್ಬಳ್ಳಿ: ಮಾಜಿ ಸಚಿವ ಸಂತೋಷ್ ಲಾಡ್ ಅವರು ಮಡ್ಕಿಹೊನ್ನಳ್ಳಿ ಅಲ್ಲಿರುವ ಅಮೃತ ನಿವಾಸದಲ್ಲಿ ಅಕ್ಕಚೀಲಗಳನ್ನು ತಾವೇ ಲಾರಿಯಿಂದ ಅನ್ಲೋಡ್ ಮಾಡಿ ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

    ಕಲಘಟಗಿ ಕ್ಷೇತ್ರದ ಪ್ರತಿ ಮನೆಗೆ ಅಕ್ಕಿ ವಿತರಣೆಗಾಗಿ ಅಕ್ಕಿಯನ್ನು ಲಾಡ್ ಅವರು ತರಿಸಿದ್ದು, ಲಾರಿಯಲ್ಲಿನ ಅಕ್ಕಿ ಚೀಲಗಳನ್ನು ತಾವೇ ಹೊತ್ತು ಇಳಿಸಿದ್ದಾರೆ. ಅಭಿಮಾನಿಗಳು ತಮ್ಮ ನಾಯಕ ಲಾಡ್ ಅವರ ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈಗ ಆ ವೀಡಿಯೋ ವೈರಲ್ ಆಗಿದೆ.

    ಕೋವಿಡ್ ಸಂಕಷ್ಟದಿಂದ ಬಳಲಿದ ಕ್ಷೇತ್ರದ ಜನರಿಗೆ ಮಾಜಿ ಸಚಿವ ಸಂತೋಷ್ ಲಾಡ್ ಬಡವರು. ಕೂಲಿ ಕಾರ್ಮಿಕರು. ರೈತರ ಮನೆಗಳಿಗೆ ಅಕ್ಕಿ ವಿತರಣೆ ಮಾಡುತ್ತಿದ್ದು, ಅಕ್ಕಿ ಲೋಡ್ ಆಗಮಿಸಿದ ವೇಳೆ ತಾವೇ ಲಾರಿಯಿಂದ ಅಕ್ಕಿ ಚೀಲಗಳನ್ನ ಅನ್ ಲೋಡ್ ಮಾಡಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ.

  • ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

    ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

    ಬೆಳಗಾವಿ: ಅಕ್ಕಿ ಚೀಲ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

    ಸುಮಾರು 695 ಅಕ್ಕಿ ಚೀಲಗಳನ್ನು ತುಂಬಿದ್ದ ಲಾರಿ ಸೇತುವೆ ಬಳಿಯಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದೆ. ಘಟನೆಯ ನಂತರ ಲಾರಿ ಚಾಲಕ ಪಾರಾಗಿದ್ದಾನೆ.

    ಘಟನೆ ಬಗ್ಗೆ ಮಾಹಿತಿ ತಿಳಿದು ಸುತ್ತಮುತ್ತಲನ ಗ್ರಾಮಸ್ಥರು ರಾತ್ರಿ ಬೆಳಗಾಗುವಷ್ಟರಲ್ಲಿ ಒಂದು ಅಕ್ಕಿ ಚೀಲವನ್ನೂ ಬಿಡದೆ ಹೊತ್ತೊಯ್ದಿದ್ದಾರೆ.

    ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.