Tag: ಅಕ್ಕಿನೇನಿ ನಾಗಾರ್ಜುನ

  • ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್- ಅದ್ಧೂರಿ ಕನ್ವೆನ್ಷನ್ ಸೆಂಟರ್ ಧ್ವಂಸ

    ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್- ಅದ್ಧೂರಿ ಕನ್ವೆನ್ಷನ್ ಸೆಂಟರ್ ಧ್ವಂಸ

    ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಅವರ ಎನ್ ಕನ್ವೆನ್ಷನ್ ಹಾಲ್ (N Convention Hall) ಅನ್ನು ನೆಲಸಮಗೊಳಿಸಲಾಗಿದೆ.

    ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (HYDRA)(ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ಸಂಸ್ಥೆ ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಹೈದ್ರಾಬಾದ್‌ನ ಮಾದಾಪುರದಲ್ಲಿರುವ (Madhapur) ಎನ್ ಕನ್ವೆನ್ಷನ್ ಆಸ್ತಿಯನ್ನು ನೆಲಸಮಗೊಳಿಸಿದೆ.ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

     10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು (Tummidikunta Lake) ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ಅವಘಡ- ರವಿತೇಜಗೆ ಕೈಗೆ ಗಾಯ

    ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.

  • ಶೀಘ್ರದಲ್ಲೇ ‘ಬಿಗ್ ಬಾಸ್’ ಶೋ ಶುರು- ಸ್ಪರ್ಧಿಗಳ ಲಿಸ್ಟ್‌ ಔಟ್‌

    ಶೀಘ್ರದಲ್ಲೇ ‘ಬಿಗ್ ಬಾಸ್’ ಶೋ ಶುರು- ಸ್ಪರ್ಧಿಗಳ ಲಿಸ್ಟ್‌ ಔಟ್‌

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಶುರುವಾಗ್ತಿದೆ. ಶೀಘ್ರದಲ್ಲೇ ತೆಲುಗಿನ ಬಿಗ್ ಬಾಸ್ ಸೀಸನ್ 8 (Bigg Boss Telugu 8) ಶುರುವಾಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಅದಷ್ಟೇ ಅಲ್ಲ, ದೊಡ್ಮನೆ ಆಟಕ್ಕೆ ಬರಲಿರುವ ಸ್ಪರ್ಧಿಗಳು ಕೂಡ ಫೈನಲ್ ಆಗಿದ್ದಾರೆ.

    ಕನ್ನಡದ ಬಿಗ್ ಬಾಸ್ ಮತ್ತು ತೆಲುಗಿನ ಬಿಗ್ ಬಾಸ್‌ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಾರೆ. ಬಿಗ್‌ ಬಾಸ್‌ಗೆ ದೊಡ್ಡಮಟ್ಟದ ಫ್ಯಾನ್ ಬೇಸ್ ಕೂಡ ಇದೆ. ಅಂದಹಾಗೆ, ಇದೇ ಆಗಸ್ಟ್ 4ರಂದು ತೆಲುಗಿನ ಬಿಗ್ ಬಾಸ್ ಪ್ರಸಾರವಾಗಿದೆ. ಇದನ್ನೂ ಓದಿ:ದುಬೈನಲ್ಲಿ ಚಂದನ್ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಪ್ರೀಮಿಯರ್ ಶೋ

    ಇನ್ನೂ ಸ್ಪರ್ಧಿಗಳ ವಿಚಾರಕ್ಕೆ ಬಂದರೆ, ಕುಮಾರಿ ಆಂಟಿ ಎಂಬುವರು ರಸ್ತೆ ಬದಿ ಫುಡ್ ಟ್ರಕ್ ಇಟ್ಟುಕೊಂಡಿದ್ದಾರೆ. ಇವರು ಬಿಗ್ ಬಾಸ್‌ಗೆ ಬರಲಿದ್ದಾರೆ ಎನ್ನಲಾಗಿದೆ. ರೇವ್ ಪಾರ್ಟಿ ಪ್ರಕರಣದ ಆರೋಪಿ ಹೇಮಾ (Hema), ಅಮೃತಾ ಪ್ರಣಯ್, ಯೂಟ್ಯೂಬರ್ ನೇತ್ರಾ ಮತ್ತು ವಂಶಿ ಸೇರಿದಂತೆ ಅನೇಕರ ಹೆಸರುಗಳು ವೈರಲ್ ಆಗಿದೆ. ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.

    ಅಂದಹಾಗೆ, ಈ ಸೀಸನ್ ಕೂಡ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರೇ ನಿರೂಪಣೆ ಮಾಡಲಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಬಿಗ್ ಬಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ರಜನಿಕಾಂತ್ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ

    ರಜನಿಕಾಂತ್ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ

    ಲೈವಾ ನಟಿಸಿರುವ ‘ಕೂಲಿ’ (Coolie) ಸಿನಿಮಾ ಟೀಸರ್ ರಿಲೀಸ್ ಆಗಿ ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದಿದೆ. ರಜನಿಕಾಂತ್ (Rajanikanth) ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಿರುವಾಗ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ ಸಿನಿಮಾಗಳನ್ನು ನಾಗಾರ್ಜುನ ಒಪ್ಪಿಕೊಳ್ತಿದ್ದಾರೆ. ರಣ್‌ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ (Akkineni Nagarjuna) ನಟಿಸಿ ಬಂದಿದ್ದರು. ಧನುಷ್ ಮತ್ತು ರಶ್ಮಿಕಾ ನಟನೆಯ ‘ಕುಬೇರ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಬೆನ್ನಲ್ಲೇ ತಲೈವಾ ಸಿನಿಮಾದಲ್ಲಿ ನಟಿಸಲು ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ದೇಶದ ಮೊದಲ ಎಐ ಆ್ಯನಿಮೇಟೆಡ್ `ಬ್ಯಾಡ್ ಬಾಯ್ಸ್’ ವಿಡಿಯೋ ಸಾಂಗ್ ರಿಲೀಸ್

    ‘ಕೂಲಿ’ ಸಿನಿಮಾದಲ್ಲಿ ನಾಗಾರ್ಜುನ ಪಾತ್ರ ಉತ್ತಮವಾಗಿಯಂತೆ. ಆ ಪಾತ್ರಕ್ಕೆ ಸೂಕ್ತ ಎಂದೆನಿಸಿ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರನ್ನು ಸಂಪರ್ಕಿಸಿದ್ದಾರೆ. ನಟನಾಗಲಿ ಅಥವಾ ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ರಜನಿಕಾಂತ್ ‘ಕೂಲಿ’ ಚಿತ್ರದ ಟೀಸರ್‌ನಲ್ಲಿ ಕೂಲಿಂಗ್ ಗ್ಲ್ಯಾಸ್ ಧರಿಸಿ ತಲೈವಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.

    ಟೀಸರ್ ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಮೂಡಿ ಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಹೈಲೆಟ್ ಮಾಡಿ ತೋರಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನಿಮಾ ಎಂಬುದರ ಸುಳಿವನ್ನು ಚಿತ್ರತಂಡ ನೀಡಿದೆ.

    ಗೋಲ್ಡ್ ಬಿಸ್ಕೆಟ್, ಗೋಲ್ಡ್ ವಾಚ್ ಜೊತೆಗೆ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಅಲ್ಲಿರುವ ಖದೀಮರಿಗೆ ಗೋಲ್ಡ್ ವಾಚ್‌ಗಳಿಂದ ಮಾಡಿದ ಚೈನ್‌ನಿಂದಲೇ ಬೆಂಡೆತ್ತಿದ್ದಾರೆ. ಈ ರೀತಿಯ ಆ್ಯಕ್ಷನ್ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಟೀಸರ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಭಿಮಾನಿಗಳ ಕೌತುಕ ಕೆರಳಿಸುವಲ್ಲಿ ಗೆದ್ದಿದ್ದಾರೆ.

    ‘ಜೈಲರ್’ ಸಿನಿಮಾದ ಸಕ್ಸಸ್‌ನಿಂದ ರಜನಿಕಾಂತ್ ಗೆದ್ದು ಬೀಗಿದ್ದರು. ಆದರೆ ಲಾಲ್ ಸಲಾಮ್‌ನಿಂದ ತಲೈವಾಗೆ ಸೋಲಿನ ಕಹಿ ಸಿಕ್ಕಿತ್ತು. ಈಗ ‘ಕೂಲಿ’ ಸಿನಿಮಾದ ಟೀಸರ್‌ನಿಂದ ಫ್ಯಾನ್ಸ್‌ಗೆ ಚಿತ್ರದ ಮೇಲೆ ಭರವಸೆ ಮೂಡಿದೆ.

  • ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ಶಿಕಾ ರಂಗನಾಥ್ (Ashika Ranganath) ಟಾಲಿವುಡ್‌ಗೆ (Tollywood) ಕಾಲಿಟ್ಟಿದ್ದಾರೆ. ನಟ ನಾಗಾರ್ಜುನ ಜೊತೆ ಮೊದಲ ಹೆಜ್ಜೆ ಹಾಕುತ್ತಿದ್ದಾರೆ. ಈ ಹೊತ್ತಲ್ಲೆ ನಾಗಾರ್ಜುನ ಮನೆಯಿಂದ ಬರುತ್ತಿದ್ದ ಊಟ ನೆನೆದು ಆಶಿಕಾ ಭಾವುಕರಾಗಿದ್ದಾರೆ. ಟಾಲಿವುಡ್‌ನಲ್ಲಿ ನನಗೆ ಇನ್ನೊಂದು ಮನೆ ಸಿಕ್ಕಿತು ಎಂದಿದ್ದಾರೆ. ಈಗಾಗಲೇ ಒಮ್ಮೆ ಡಿವೋರ್ಸ್ ಮಾಡಿಕೊಂಡು, ಆ ನಂತರ ನಟಿ ಅಮಲಾ ಕೈ ಹಿಡಿದ ನಾಗರ್ಜುನ ಅದ್ಯಾಕೆ ಆಶಿಕಾಗೆ ಊಟ ಕಳಿಸಿ ತೃಪ್ತರಾದರು? ಏನಿದರ ಹಿಂದಿನ ಅಸಲಿ ಗುಟ್ಟು? ಇಲ್ಲಿದೆ ಮಾಹಿತಿ.

    ಆಶಿಕಾ ರಂಗನಾಥ್ ಕನ್ನಡ ನಟಿ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ಹಿಟ್ ಇನ್ನು ಕೆಲವು ಫ್ಲಾಪ್. ಕನ್ನಡದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಇರುವ ಕಾರಣ. ಟಾಲಿವುಡ್‌ನಲ್ಲಿ ಆಶಿಕಾ ಈಗ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿಗೆ ಐಸಿಯುನಲ್ಲಿ ಚಿಕಿತ್ಸೆ: ಆಸ್ಪತ್ರೆಯಲ್ಲಿ ರವೀಂದರ್

    ಸಕ್ಸಸ್‌ಗಾಗಿಯೇ ನಟ ಅಕ್ಕಿನೇನಿ ನಾಗಾರ್ಜುನ ಪಕ್ಕ ನಿಂತಿದ್ದಾರೆ. ‘ನಾ ಸಾಮಿ ರಂಗ’ (Na Saami Ranga) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶೂಟಿಂಗ್‌ಗಾಗಿ ಹೈದರಾಬಾದ್‌ನ ಹೋಟೆಲ್‌ನಲ್ಲಿ ತಂಗಿದ್ದ ಆಶಿಕಾಗೆ ಅಲ್ಲಿನ ಊಟ ಅಡ್ಜಸ್ಟ್ ಆಗಿರಲಿಲ್ಲ. ಆಗ ನಾಗಾರ್ಜುನ ಮನೆಯಿಂದ ನನಗೆ ನಿತ್ಯ ಊಟ ಬರುತ್ತಿತ್ತು. ಡಯಟ್ ಫಾಲೋ ಮಾಡಲು ಅದು ಅನುಕೂಲ ಆಗುತ್ತಿತ್ತು. ಇದರಿಂದ ನನಗೆ ಟಾಲಿವುಡ್‌ನಲ್ಲಿ ಇನ್ನೊಂದು ಮನೆ ಸಿಕ್ಕಂತಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ನಟಿ ಭಾವುಕರಾಗಿದ್ದಾರೆ. ಈ ಮೂಲಕ ನಾಗಾರ್ಜುನ ಅವರು ತಮ್ಮನ್ನು ಯಾವ ರೀತಿ ಟ್ರೀಟ್ ಮಾಡಿದ್ದರು ಎಂಬುದನ್ನು ವಿವರಿಸಿದ್ದಾರೆ. ಟಾಲಿವುಡ್‌ನಲ್ಲಿ ಕನ್ನಡದ ನಟಿಯರಿಗೆ ಸಾಕಷ್ಟು ಗೌರವ ಮತ್ತು ಪ್ರೀತಿ ಸಿಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.

    ಇನ್ನೂ ಕನ್ನಡ ಚಿತ್ರರಂಗದಲ್ಲಿ ಸಿಗದ ಸಕ್ಸಸ್ ಟಾಲಿವುಡ್‌ನಲ್ಲಿ ಸಿಗುತ್ತಾ? ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾರಂತೆಯೇ (Sreeleela) ಆಶಿಕಾ ಕೂಡ ಹವಾ ಕ್ರಿಯೇಟ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.

  • ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್

    ನ್ನಡದ ‘ಕಿರಿಕ್ ಪಾರ್ಟಿ’ (Kirik Party) ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಟಾಲಿವುಡ್‌ನಲ್ಲಿ (Tollywood) ಡಿಮ್ಯಾಂಡ್ ಕಮ್ಮಿಯಾಗುತ್ತಿದೆ. ಬಾಲಿವುಡ್‌ನತ್ತ ಮುಖ ಮಾಡಿರೋ ಶ್ರೀವಲ್ಲಿಗೆ ಈಗ ಬಂಪರ್ ಆಫರ್‌ವೊಂದು ಸಿಕ್ಕಿದೆ. ಒಬ್ಬರಲ್ಲ ಸೌತ್‌ನ ಇಬ್ಬರು ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನ ನಟಿ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಸ್ಟಾರ್ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

    ನಿತಿನ್ ಸಿನಿಮಾದಿಂದ ಹೊರಬಂದ ಮೇಲೆ ಬಾಲಿವುಡ್ ಸಿನಿಮಾಗಳ ಮೇಲೆ ರಶ್ಮಿಕಾ ಮಂದಣ್ಣ (Rashmika Mandanna) ಗಮನ ಹರಿಸುತ್ತಿದ್ದಾರೆ. ರಶ್ಮಿಕಾ ಕೈಬಿಟ್ಟ ಸಿನಿಮಾ ಎಲ್ಲಾ ಶ್ರೀಲೀಲಾ ಪಾಲಾಗುತ್ತಿದೆ. ಹೀಗಿರುವಾಗ ನ್ಯಾಷನಲ್ ಕ್ರಶ್‌ಗೆ ಸೂಪರ್ ಡೂಪರ್ ಆಫರ್‌ವೊಂದು ಸಿಕ್ಕಿದೆ. ಎಂದೂ ನಟಿಸಿರದ ರೋಲ್‌ನಲ್ಲಿ ಪುಷ್ಪ ನಟಿ ಮಿಂಚಲಿದ್ದಾರೆ.

    ಫಿದಾ, ಲವ್ ಸ್ಟೋರಿ ಸೇರಿದಂತೆ ಹಲವು ಚಿತ್ರಗಳನ್ನ ಸೂಪರ್-ಡೂಪರ್ ಹಿಟ್ ಕೊಟ್ಟಿರುವ ನಿರ್ದೇಶಕ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ತಮಿಳು-ತೆಲುಗು ಬೈಲಿಂಗ್ವಲ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಕ್ಕೆ ತಮಿಳಿನಿಂದ ಒಬ್ಬರು ಹಾಗೂ ತೆಲುಗು ಇಂದ ಒಬ್ಬರು ಸೂಪರ್ ಸ್ಟಾರ್‌ಗಳನ್ನು ಸೆಲೆಕ್ಟ್ ಮಾಡಿದ್ದಾರೆ.‌ ಇದನ್ನೂ ಓದಿ:ಪಾರ್ವತಮ್ಮ ರಾಜ್ ಕುಮಾರ್ ಹಾದಿಯಲ್ಲೇ ಸೊಸೆ ಅಶ್ವಿನಿ: ಕಾದಂಬರಿ ಆಧರಿಸಿ ಸಿನಿಮಾ

    ಶೇಖರ್ ಕಮ್ಮುಲ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಧನುಷ್ (Dhanush) ನಾಯಕನಾಗಿ ನಟಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಸಹ ನಟಿಸುತ್ತಿದ್ದು, ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಫಿಕ್ಸ್ ಆಗಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ 2(Pushpa 2) , ಅನಿಮಲ್, ರೈನ್‌ಬೋ, ಟೈಗರ್ ಶ್ರಾಫ್ ಜೊತೆಗಿನ ಸಿನಿಮಾ, ಶಾಹಿದ್ ಕಪೂರ್ ಜೊತೆಗೊಂದು ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟನೆಗೆ ಗುಡ್ ಬೈ, ರಾಜಕೀಯ ಅಖಾಡಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

    ನಟನೆಗೆ ಗುಡ್ ಬೈ, ರಾಜಕೀಯ ಅಖಾಡಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

    ಟಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಅಕ್ಕಿನೇನಿ ನಾಗಾರ್ಜುನ (Akkineni nagarjuna) ಇದೀಗ ರಾಜಕೀಯದತ್ತ ಮುಖ ಮಾಡಲಿದ್ದಾರೆ. ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡಕ್ಕೆ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ.

    ಸಿನಿಮಾ ಸ್ಟಾರ್‌ಗಳು ರಾಜಕೀಯ (Politics) ರಂಗಕ್ಕೆ ಎಂಟ್ರಿ ಕೊಡುವುದು ಹೊಸ ವಿಚಾರವಲ್ಲ. ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಮಿಂಚಿದ ಹಾಗೆ ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿರುವವರಿದ್ದಾರೆ. ಇದೀಗ ಸಿನಿಮಾರಂಗದಿಂದ ರಾಜಕೀಯಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ ಹಾಗಂತ ಟಿಟೌನ್ ಈ ವಿಚಾರ ಸಖತ್ ಸದ್ದು ಮಾಡಿದೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಟಾಲಿವುಡ್‌ನ ಸ್ಟಾರ್ ಆಗಿ ಮಿಂಚ್ತಿರುವ ನಾಗಾರ್ಜುನ (Nagarjuna) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ನಾಗಾರ್ಜುನ ಅವರು ಪೊಲಿಟಿಕ್ಸ್ ಕಡೆಗೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಆಸಕ್ತಿಯಿದೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ. ಇನ್ನೂ ಈ ವಿಚಾರದ ಬಗ್ಗೆ ನಾಗಾರ್ಜುನ ಅವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

    ನಾಗಾರ್ಜುನ ಅವರು ಮುಂಬರುವ ಆಂಧ್ರ ಪ್ರದೇಶ ಚುನಾವಣೆಯಲ್ಲಿ ವಿಜಯವಾಡ ಕ್ಷೇತ್ರದಿಂದ ನಿಲ್ಲುವ ಸಾಧ್ಯತೆಯಿದೆ. ವೈಸಿಪಿ ಪಕ್ಷದಿಂದ ನಿಲ್ಲುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರರಂಗದಲ್ಲಿ ಇದೀಗ ಬೇಡಿಕೆ ಇರುವಾಗಲೇ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

    ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

    ಟಾಲಿವುಡ್‌ನಲ್ಲಿ ಈಗ ಸಮಂತಾದೇ ಬಿಸಿ ಬಿಸಿ ಸುದ್ದಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ಈಗ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋಗೆ  ಸಮಂತಾ ನಿರೂಪಣೆ ಮಾಡಲಿದ್ದಾರೆ.

    ಅಭಿಮಾನಿಗಳ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ನಾಗಾಚೈತನ್ಯ ಮತ್ತು ಸಮಂತಾ ದೂರ ಆಗಿದ್ದೇ ಎಲ್ಲರಿಗೂ ಶಾಕಿಂಗ್ ವಿಚಾರ. ಅಂದಿನಿಂದ ಇಂದಿನವರೆಗೂ ಈ ಜೋಡಿಯ ಕುರಿತ ವಿಚಾರ ಏನೇ ಬಂದರೂ ಅಭಿಮಾನಿಗಳಿಗೆ ಕಿವಿ ನೆಟ್ಟಗಾಗುತ್ತದೆ. ಈಗ ಹೊಸ ಬ್ರೇಕಿಂಗ್ ವಿಚಾರ ಏನಪ್ಪಾ ಅಂದ್ರೆ ಪ್ರೇಕ್ಷಕರ ಅಚ್ಚು ಮೆಚ್ಚಿನ ಶೋ ಬಿಗ್ ಬಾಸ್ ಸೀಸನ್ 6ರ ನಿರೂಪಣೆ ಸಮಂತಾ ಮಾಡಲಿದ್ದಾರೆ. ಈ ಮೂಲಕ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಡೈವೋರ್ಸ್ ನಂತರ ಸಮಂತಾ ಡಿಮ್ಯಾಂಡ್ ಗಗನಕ್ಕೇರಿದೆ. ತೆಲುಗು, ತಮಿಳು, ಬಾಲಿವುಡ್, ಹಾಲಿವುಡ್ ಎಲ್ಲಾ ರಂಗದಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಇಷ್ಟೊಂದು ಬ್ಯುಸಿಯಿರುವಾಗ ಸಮಂತಾಗೆ ಬಿಗ್ ಬಾಸ್ ಶೋ ನಡೆಸಲು ಬುಲಾವ್ ಬಂದಿದೆ. ಈ ಹಿಂದೆ ಬಿಗ್ ಬಾಸ್ ಶೋನಲ್ಲಿ ಅತಿಥಿಯಾಗಿ ಜತೆಗೆ ಮಾಜಿ ಮಾವನ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡರು. ಈಗ ವಾಹಿನಿ ಕೂಡ ನಿರೂಪಣೆಗೆ ಸಮಂತಾನೇ ಬೇಕು ಅಂತಾ ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಕ್ಯಾಪ್ ತೊಟ್ಟು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

    ಇಷ್ಟಕ್ಕೂ ಸ್ಟಾರ್ ನಟ ನಾಗಾರ್ಜುನ ಜಾಗಕ್ಕೆ ಸಮಂತಾ ಬರುತ್ತಿರೋದು ನಿಜನಾ ಅನ್ನೋದನ್ನ ಅಧಿಕೃತ ಮಾಹಿತಿಗಾಗಿ ಕಾಯಲೇಬೇಕಿದೆ. ಒಟ್ನಲ್ಲಿ ಸಮಂತಾ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್.

  • ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!

    ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
    ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.

    ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
    ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.