Tag: ಅಕ್ಕಿಆಲೂರ್

  • ಎಕ್ಸ್‌ರೇ ಟೆಕ್ನಿಷಿಯನ್‌ನಿಂದ ಗುತ್ತಿಗೆ ಸಿಬ್ಬಂದಿಗೆ  ಲೈಂಗಿಕ ಕಿರುಕುಳ

    ಎಕ್ಸ್‌ರೇ ಟೆಕ್ನಿಷಿಯನ್‌ನಿಂದ ಗುತ್ತಿಗೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ

    ಹಾವೇರಿ: ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಮಹಿಳಾ ಸಿಬ್ಬಂದಿಗೆ ಎಕ್ಸ್‌ರೇ ಟೆಕ್ನಿಷಿಯನ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

    ಕಳೆದ 2 ವರ್ಷಗಳಿಂದ ಗುತ್ತಿಗೆ ಸಿಬ್ಬಂದಿ ಮಾಡುತ್ತಿರುವ 33 ವರ್ಷದ ಮಹಿಳೆ ಎಕ್ಸ್‌ರೇ ಟೆಕ್ನಿಷಿಯನ್ ಆಗಿರುವ ಕುಬೇರ ಸಾವಂತ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಎಕ್ಸ್‌ರೇ ಟೆಕ್ನಿಷಿಯನ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಸ್ಪತ್ರೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮೈ ಕೈ ಮುಟ್ಟುವುದು, ಮಂಚಕ್ಕೆ ಬಾ ಅಂತಾ ಕರೆದು ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸುತ್ತಿದ್ದಾರೆ.

    ಕಿರುಕುಳ ನೀಡುತ್ತಿರುವ ಬಗ್ಗೆ ಮೊಬೈಲ್‍ನಲ್ಲಿ ಧ್ವನಿ ರೆಕಾರ್ಡ್ ಮಾಡಿಕೊಂಡು ಗುತ್ತಿಗೆ ನೌಕರ ಮಹಿಳೆ ವೈದ್ಯರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಬೇರೆ ಯಾವ ಮಹಿಳೆಯರಿಗೂ ಈ ರೀತಿಯ ದೌರ್ಜನ್ಯ ನಡೆಯಬಾರದು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆತನನ್ನು ಕೆಲಸದಿಂದ ವಜಾ ಮಾಡಬೇಕು. ಕಿರುಕುಳ ನೀಡಿದ ವ್ಯಕ್ತಿ ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಬಂದಿಲ್ಲ. ಕೂಡಲೇ ಪತ್ತೆ ಮಾಡಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ನೊಂದ ಮಹಿಳೆ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.