Tag: ಅಕುಲ್ ಬಾಲಾಜಿ

  • ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಕಿರುತೆರೆಯಲ್ಲೂ ಸ್ಟಾರ್‌ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸದಾ ತಾನು ತರುವ ಸದಭಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಈ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ಧವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮವಾಗಿದೆ. ಹತ್ತು ಎಲಿಜಬಲ್ ಬ್ಯಾಚುಲರ್‌ಗಳ ಕನಸುಗಳನ್ನ ನಿಜರೂಪಕ್ಕೆ ತರುತ್ತಾ ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನ ಕರುನಾಡಿಗೆ ತೋರಿಸುತ್ತಾ ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನ ಕರುನಾಡಿಗೆ ಸಾರುವ ಈ ರಿಯಾಲಿಟಿ ಶೋನ ನಿರೂಪಣೆಯ ಜವಾಬ್ದಾರಿಯನ್ನ ಹೊತ್ತಿರೋದು ನಿರೂಪಕ ಅಕುಲ್ ಬಾಲಾಜಿ (Akul Balaji) ವಿಭಿನ್ನ ಮ್ಯಾನರೀಸಂ ಜೊತೆ ಸಖತ್ ಮಾತುಗಳ ಮೂಲಕ ಮನೋರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ ಬಹಳ ದಿನಗಳ ನಂತರ ಮತ್ತೆ ವಾಹಿನಿಗೆ ವಾಪಸ್ಸಾಗುತ್ತಿರೋದು ಮತ್ತೊಂದು ಹೈಲೈಟ್.

    ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿದ, ಪ್ರೇಮಲೋಕ ಸೃಷ್ಟಿಸಿದ ಕರುನಾಡಿನ ರಣಧೀರ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಿದ್ರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರು ಖುರ್ಚಿಯ ಗತ್ತನ್ನ ಹೆಚ್ಚುಮಾಡಿದ್ದಾರೆ. ಹತ್ತು ಬ್ಯಾಚುಲರ್‌ಗಳ ಇಷ್ಟ ಕಷ್ಟಗಳ ನಡುವೆ ಹೆಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಕರುನಾಡಿನ ರಾಕ್ ಸ್ಟಾರ್ ಚಂದನ್ ಶೆಟ್ಟಿ. ಟೀನೇಜ್ ಹುಡುಗರ ಪಲ್ಸ್ ರೇಟ್‌ ಯಾವಾಗಲು ಜಾಸ್ತಿ ಮಾಡೋ ಹಾಡುಗಳನ್ನ ಕೊಟ್ಟು ಕನ್ನಡಿಗರು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಚಂದನ್ ಶೆಟ್ಟಿಯವರ ರಾಗ ಸಂಯೋಜನೆಗೆ ರಾಕೇಶ್ ಸಿ.ಎ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್‌ಗಳ ಆಸೆ, ಕನಸುಇಷ್ಟ, ಕಷ್ಟ, ತುಮುಲ ಮತ್ತು ತೊಳಲಾಟ ಎಲ್ಲವು ಎದ್ದು ಕಾಣುತ್ತದೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ನಮ್ಮ ಬ್ಯಾಚುಲರ್‌ಗಳ ಬಯೋಡೇಟಾ ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ನಿಮ್ಮ ಮನೆಗೆ ಬರಲಿದೆ.

    ಸತತ 4 ವರ್ಷಗಳಿಂದ ನಮ್ಮನ್ನ ನಂ.1 ಸ್ಥಾನದಲ್ಲಿ ಇಟ್ಟಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಂದು ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್‌ನ ನಿಮ್ಮ ಮುಂದೆ ತರುವ ತಯಾರಿ ಮಾಡಿದ್ದೇವೆ. ಸಮಾಜದಲ್ಲಿ ಬ್ಯಾಚುಲರ್‌ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್‌ಗಳ ಸಮಸ್ಯೆಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುರಲ್ಸ್.

  • ಕೆಜಿಎಫ್- 2 ಸಿನಿಮಾ ಯಾಕೆ ನೋಡ್ಬೇಕು?: ಯಶ್ ಕೊಟ್ಟ ಉತ್ತರ ಹೀಗಿದೆ

    ಕೆಜಿಎಫ್- 2 ಸಿನಿಮಾ ಯಾಕೆ ನೋಡ್ಬೇಕು?: ಯಶ್ ಕೊಟ್ಟ ಉತ್ತರ ಹೀಗಿದೆ

    ವಿಶ್ವವೇ ಕೆಜಿಎಫ್ 2 ಸಿನಿಮಾ ಬಗ್ಗೆ ಕೊಂಡಾಡುತ್ತಿದೆ. ಕೇವಲ ಟೀಸರ್ ನಲ್ಲಿಯೇ ಸಿನಿಮಾದ ಹಲವು ಆಯಾಮಗಳನ್ನು ಚಿತ್ರತಂಡ ತೋರಿಸಿದೆ . ಆದರೂ, ಈ ಸಿನಿಮಾವನ್ನು ಯಾಕೆ ನೋಡಬೇಕು ಎನ್ನುವ ಕೆಟ್ಟ ಕುತೂಹಲ ಎಲ್ಲರದ್ದು. ಕೆಜಿಎಫ್ ಚಾಪ್ಟರ್ ಒಂದಕ್ಕಿಂತಲೂ ಚಾಪ್ಟರ್ 2 ನಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಇವೆಲ್ಲದಕ್ಕೂ ಪಬ್ಲಿಕ್ ಟಿವಿಯ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಈ ಸಿನಿಮಾವನ್ನು ಜನರು ಯಾಕೆ ನೋಡಬೇಕು ಎನ್ನುವುದಕ್ಕೆ ತಮ್ಮದೇ ಆದ ಕಾರಣಗಳನ್ನೂ ಅವರು ನೀಡಿದ್ದಾರೆ.

    ‘ಕೆಜಿಎಫ್ 2 ಸಿನಿಮಾ ನೋಡುವುದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಗಂಟೆಗಟ್ಟಲೆ ಈ ಕುರಿತು ಮಾತನಾಡಬಹುದು. ಅಷ್ಟೊಂದು ಕಾರಣಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಎನ್ನುವ ಪ್ರತಿಭಾವಂತ ನಿರ್ದೇಶಕನ ಕೆತ್ತನೆಯ ಕೆಲಸವಿದೆ. ರವಿ ಬಸ್ರೂರ್ ಅವರ ಸಂಗೀತದ ಮೋಡಿ ಇದೆ. ಭುವನ್ ಎಂಬ ಛಾಯಾಗ್ರಹಕನ ಅಷ್ಟೂ ಜೀವನದ ಬದುಕಿನ ಬಣ್ಣವಿದೆ. ನಿರ್ದೇಶಕರಿಂದ ಹಿಡಿದು ಊಟ ತಂದುಕೊಡುತ್ತಿದ್ದ ವ್ಯಕ್ತಿಗಳವರೆಗಿನ ಶ್ರಮವಿದೆ’ ಈ ಕಾರಣಕ್ಕಾಗಿ ಕೆಜಿಎಫ್ 2 ಸಿನಿಮಾ ನೋಡಿ ಎಂದು ಹೇಳುತ್ತೇನೆ ಎನ್ನುತ್ತಾರೆ ಯಶ್. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಈ ಸಿನಿಮಾದಲ್ಲಿ ಒಂದು ತಾಯಿ ಮತ್ತು ಮಗುವಿನ ಕಥೆ ಹೇಳುತ್ತಿದ್ದರೂ, ಅಲ್ಲಿ ಹಲವು ಆಯಾಮಗಳು ತೆರೆದುಕೊಳ್ಳುತ್ತದೆ. ಮೂಲಕ ಕಥೆ ತಾಯಿ ಮತ್ತು ಮಗನ ಬಾಂಧವ್ಯದ ಕುರಿತಾಗಿದ್ದರೂ, ಅದನ್ನು ಯಾವುದರ ಮೂಲಕ ಹೇಳುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ಗೋಲ್ಡ್ ಮೈನಿಂಗ್ ಹಿನ್ನೆಲೆಯಾಗಿಟ್ಟುಕೊಂಡು ಈ ತಾಯಿ ಮತ್ತು ಮಗನ ಕಥೆಯನ್ನು ಹೇಳಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಕೆಜಿಎಫ್ 2 ಸಿನಿಮಾದ ಕುರಿತಾಗಿ ಇದೇ ಮೊದಲ ಬಾರಿಗೆ ನಟ ಯಶ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಸಿನಿಮಾದ ಮೇಕಿಂಗ್, ಅದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಂಗತಿ ಮತ್ತು ಚಿತ್ರತಂಡದೊಂದಿಗಿನ ಹಲವು ವಿಚಾರಗಳನ್ನು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತಮ್ಮ ಬದುಕಿನ ವೈಯಕ್ತಿಕ ವಿಚಾರಗಳನ್ನೂ ಹೇಳಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.

  • ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಶೈಲಿಯಲ್ಲಿ ಕೆಜಿಎಫ್ 2  ‘ವೈಲೆನ್ಸ್.. ವೆಲೈನ್ಸ್..’ ಡೈಲಾಗ್ ಹೇಳಿದ ಯಶ್

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಶೈಲಿಯಲ್ಲಿ ಕೆಜಿಎಫ್ 2 ‘ವೈಲೆನ್ಸ್.. ವೆಲೈನ್ಸ್..’ ಡೈಲಾಗ್ ಹೇಳಿದ ಯಶ್

    ಕೆಜಿಎಫ್ 2 ಕುರಿತಾದ ಪಬ್ಲಿಕ್ ಟಿವಿಯ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಹಲವು ರಸವತ್ತಾದ ಘಟನೆಗಳು ಜರುಗಿದವು. ಈಗಾಗಲೇ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಲ್ಲಿ ಯಶ್ ಹೊಡೆದ ಡೈಲಾಗ್ ಸಖತ್ ವೈರಲ್ ಆಗಿತ್ತು. ಬೆಂಕಿ ಉಗುಳುವ ಕಣ್ಣಿನೊಂದಿಗೆ ಎಂಟ್ರಿ ಕೊಡುವ ಯಶ್, ‘ವೈಲೆನ್ಸ್.. ವೈಲೆನ್ಸ್.. ಐ ಡೋಂಟ್ ಲೈಕ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ’ ಎಂದು ಜಭರ್ದಸ್ತಾದ ಡೈಲಾಗ್ ಬಿಡ್ತಾರೆ. ಈ ಸಂಭಾಷಣೆಯನ್ನು ನಿರೂಪಕ ಅಕುಲ್ ಬಾಲಾಜಿ, ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಅವರ ಶೈಲಿಯಲ್ಲಿ ಹೇಳಿದರೆ ಹೇಗಿರುತ್ತದೆ ಎಂದು ಯಶ್ ಕೇಳುತ್ತಾರೆ. ಕ್ಷಣ ಹೊತ್ತು ಯೋಚಿಸದೇ ಯಶ್ ಅವರು ರಂಗನಾಥ್ ಅವರ ಶೈಲಿಯಲ್ಲೇ ಡೈಲಾಗ್ ಹೊಡೆಯುತ್ತಾರೆ.  ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಈ ಸಂಭಾಷಣೆ ಅಷ್ಟೆಕ್ಕೆ ಮುಗಿಯುವುದಿಲ್ಲ. ಯಶ್ ಹೇಳಿದ ಡೈಲಾಗ್ ಅನ್ನು ರಂಗನಾಥ್ ಅವರಿಂದಲೂ ಹೇಳಿಸುವ ಪ್ರಯತ್ನ ಮಾಡುತ್ತಾರೆ ಅಕುಲ್ ಬಾಲಾಜಿ. ಸಖತ್ತಾಗಿ ‘ವೈಲೆನ್ಸ್.. ವೈಲೆನ್ಸ್.. ಡೈಲಾಗ್ ಹೇಳಿ ನೋಡುಗರನ್ನು ರಂಜಿಸುತ್ತಾರೆ ರಂಗನಾಥ್. ಈ ಮಾತುಕತೆಯಲ್ಲಿ ರಂಗನಾಥ್ ಮತ್ತು ಯಶ್ ನಡೆದು ಬಂದ ಹಾದಿಯ ಕುರಿತು ಚರ್ಚೆ ಆಗುತ್ತದೆ. ಇಬ್ಬರಲ್ಲೂ ಸಾಮಿಪ್ಯ ಇರುವಂತಹ ಹಲವು ಘಟನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಯಶಸ್ಸಿಗೆ ಶ್ರಮವೇ ಮುಖ್ಯ ಎಂದು ಉದಾಹರಣೆ ಕೊಡುವ ಮೂಲಕ ಮತ್ತೆ ಕೆಜಿಎಫ್ 2 ಸಿನಿಮಾದತ್ತ ಸಂದರ್ಶನ ಮುಂದುವರೆಯುತ್ತದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಕೆಜಿಎಫ್ 2 ಸಿನಿಮಾದ ಕುರಿತಾಗಿ ಇದೇ ಮೊದಲ ಬಾರಿಗೆ ನಟ ಯಶ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಸಿನಿಮಾದ ಮೇಕಿಂಗ್, ಅದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಂಗತಿ ಮತ್ತು ಚಿತ್ರತಂಡದೊಂದಿಗಿನ ಹಲವು ವಿಚಾರಗಳನ್ನು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತಮ್ಮ ಬದುಕಿನ ವೈಯಕ್ತಿಕ ವಿಚಾರಗಳನ್ನೂ ಹೇಳಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.

  • EXCLUSIVE INTERVIEW: ಪ್ರಶಾಂತ್ ನೀಲ್ ನಮ್ಮ ಕರ್ನಾಟಕದ ಆಸ್ತಿ ಮತ್ತು ಹೆಮ್ಮೆ: ಯಶ್

    EXCLUSIVE INTERVIEW: ಪ್ರಶಾಂತ್ ನೀಲ್ ನಮ್ಮ ಕರ್ನಾಟಕದ ಆಸ್ತಿ ಮತ್ತು ಹೆಮ್ಮೆ: ಯಶ್

    ‘ಇವತ್ತು ನಾನು ಕೆಜಿಎಫ್ 2 ಸಿನಿಮಾದ ಮುಖವಾಣಿ ಆಗಿರಬಹುದು. ಆದರೆ, ಅದರ ಹಿಂದೆ ಅದ್ಭುತವಾದ ತಂಡದ ಶ್ರಮವಿದೆ. ಅದರಲ್ಲೂ ನಮ್ಮ ನಿರ್ದೇಶಕ ಪ್ರಶಾಂತ್ ನೀಲ್ ನಮ್ಮ ಕರ್ನಾಟಕದ ಹೆಮ್ಮೆ ಮತ್ತು ಆಸ್ತಿ’ ಎಂದಿದ್ದಾರೆ ನಟ ಯಶ್. ಪಬ್ಲಿಕ್ ಟಿವಿ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ತಂಡದ ಪರಿಶ್ರಮದ ಕುರಿತು ವಿವರವನ್ನು ಹಂಚಿಕೊಂಡರು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ‘ಕರ್ನಾಟಕದಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆಯಿಲ್ಲ. ಒಂದು ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ನಿಲ್ಲಿಸುವುದು ಕಷ್ಟವಲ್ಲ ಎನ್ನುವುದನ್ನು ನಮ್ಮ ಆ ಟೀಮ್ ತೋರಿಸಿದೆ. ಪ್ರಶಾಂತ್ ನೀಲ್ ಊಟ ತಿಂಡಿ ಬಿಟ್ಟು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಸಿನಿಮಾಟೋಗ್ರಾಫರ್ ಭುವನ್ ಮೈ ಜುಮ್ ಎನ್ನುವಂತ ವಿಷ್ಯುವಲ್ ಕಟ್ಟಿಕೊಟ್ಟಿದ್ದಾರೆ. ಮೂಲ ಬೇರಿಗೆ ಹೋಗಿ ಸ್ಟುಡಿಯೋ ಮಾಡಿರುವ ರವಿ ಬಸ್ರೂರು ಶ್ರಮ ದೊಡ್ಡದಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರು ಅಷ್ಟು ದೊಡ್ಡ ಮಟ್ಟಕ್ಕೆ ಸಿನಿಮಾ ತಗೆದುಕೊಂಡು ಹೋಗಿದ್ದಾರೆ. ಈ ಶ್ರಮವೇ ಕೆಜಿಎಫ್ 2 ಆಗಿದೆ’ ಎಂದಿದ್ದಾರೆ ಯಶ್. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಪ್ರಶಾಂತ್ ನೀಲ್ ಮತ್ತು ತಂಡವು ಕೆಜಿಎಫ್ ಚಿತ್ರಕ್ಕಾಗಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದೆ. ಇವತ್ತು ಕನ್ನಡ ಸಿನಿಮಾ ರಂಗವನ್ನು ಭಾರತೀಯ ಸಿನಿಮಾ ರಂಗವನ್ನಾಗಿ ಬದಲಾಯಿಸಿದೆ. ವಿಶ್ವದಾದ್ಯಂತ ಕನ್ನಡ ಸಿನಿಮಾದ ಹವಾ ಕ್ರಿಯೇಟ್ ಆಗಿದೆ. ಇದಕ್ಕೆಲ್ಲ ಕಾರಣ ಕಜಿಎಫ್ ಚಿತ್ರತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾವೊಂದು ಹತ್ತಾರು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಕೂಡ ಹೆಮ್ಮೆಯ ಸಂಗತಿ ಆಗಿದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.

     

  • EXCLUSIVE INTERVIEW:  ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ರ್ನಾಟಕಕ್ಕೆ ಸಮೃದ್ಧ ಇತಿಹಾಸವಿದೆ. ಎಲ್ಲ ವಿಷಯಗಳಲ್ಲೂ ಕನ್ನಡ ಮುಂದಿದೆ. ನಾನು ಕೆಲಸ ಮಾಡುತ್ತಿರುವ ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗಲೇ ಸಾಕಷ್ಟು ಮಹಿನಿಯರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಹಾಗಾಗಿ ನಾವು ಕೀಳರಮೆ ಬಿಟ್ಟರೆ ಎಂತಹ ಗೆಲುವನ್ನು ಬೇಕಾದರೂ ಸಾಧಿಸಬಹುದು ಎಂದಿದ್ದಾರೆ ನಟ ಯಶ್. ಪಬ್ಲಿಕ್ ಟಿವಿಯೊಂದಿಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ ಅವರು ಈ ಹಿಂದೆ ತಾವು ಸಾಗಿ ಬಂದ ಹಾದಿಯನ್ನೂ ಅವರು ನೆನಪಿಸಿಕೊಂಡರು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

     ‘ನಾನು ಯಾವಾಗಲೂ ದೊಡ್ಡ ಕನಸನ್ನೇ ಕಾಣುತ್ತೇನೆ. ಸೋಲಿನ ಬಗ್ಗೆ ಯಾವತ್ತೂ ತಲೆ ಕಡೆಸಿಕೊಳ್ಳುವುದಿಲ್ಲ. ಗೆಲ್ಲಲು ಹೋರಟವನಿಗೆ ಸೋಲು ದೊಡ್ಡದಾಗಬಾರದು. ಹಾಗಾಗಿ ನಾನು ಯಾವತ್ತೂ ಕೀಳರಿಮೆ ಇಟ್ಟುಕೊಳ್ಳದೇ, ನನಗೆ ಬೆಸ್ಟ್ ಅನಿಸಿದನ್ನೇ ಮಾಡುತ್ತಾ ಬಂದಿದ್ದೇನೆ. ಬಹುಶಃ ಅದೇ ನನ್ನನ್ನು ಕೈ ಹಿಡಿದಿದೆ’ ಎನ್ನುವುದು ಯಶ್ ಮಾತು. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಕನ್ನಡ ಸಿನಿಮಾ ರಂಗ ಸಣ್ಣದು, ಮಾರುಕಟ್ಟೆ ಇಲ್ಲ ಎಂದು ಯಾರಾದರೂ ಹೇಳಿದಾಗ ಯಶ್ ಅವರಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತಂತೆ. ಆ ಕುರಿತು ಅವರು ಮಾತನಾಡಿದ್ದಾರೆ. ‘ಯಾವ ಇಂಡಸ್ಟ್ರಿ ಕೂಡ ಚಿಕ್ಕದಲ್ಲ. ಯಾರಾದರೂ, ಹಾಗೆ ಹೇಳಿದರೆ ನನಗೆ ಕೋಪ ಬರುತ್ತಿತ್ತು. ಯಾರನ್ನೋ ಕೇಳಿಕೊಳ್ಳೋದು, ಬೇಡಿಕೊಳ್ಳೋದು ನನಗೆ ಇಷ್ಟವಾಗಲ್ಲ. ಇದು ತೋರಿಕೆಯ ಪ್ರಪಂಚ. ನಾವು ಏನು ಅಂತ ತೋರಿಸಲೇಬೇಕು. ಎಲ್ಲದಕ್ಕಿಂತ ಆತ್ಮವಿಶ್ವಾಸ ಮುಖ್ಯ. ಅದೆಲ್ಲವನ್ನೂ ಇಟ್ಟುಕೊಂಡು ನಾನು ಹೆಜ್ಜೆ ಇಟ್ಟಿ. ಕೆಜಿಎಫ್ ಸಿನಿಮಾ ನನ್ನಿಂದ ಆಗಿದೆ ಎಂದು ಯಾವತ್ತೂ ಹೇಳಲ್ಲ. ಅದು ತಂಡದ ಪರಿಶ್ರಮ. ಆ ಶ್ರಮವೇ ಇವತ್ತು ದೊಡ್ಡ ಮಟ್ಟದ ಸಕ್ಸಸ್ ಗೆ ಕಾರಣವಾಗಿದೆ’ ಎಂದರು ಯಶ್.

     

  • ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ

    ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ

    ಬೆಂಗಳೂರು: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ ಎಂದು ನಿರೂಪಕ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಮೂಲಕ ರಾಜ್ಯದ ಜನತೆ ಬಳಿ ಕ್ಷಮೆ ಕೇಳಿದರು.

    ಅಪ್ಪುಗೆ ‘ಏಕ್ ಲವ್ ಯಾ’ ಚಿತ್ರತಂಡ ಅಪಮಾನ ಮಾಡಿದೆ ಎಂಬ ಆರೋಪ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಕುಲ್ ಬಾಲಾಜಿ, ಇದನ್ನು ನಾವು ಬೇಕು ಎಂದು ಮಾಡಿಲ್ಲ. ತಾಂತ್ರಿಕ ಕಾರಣದಿಂದ ಸಣ್ಣ ಎಡವಟ್ಟು ಆಗಿದೆ. ಇದಕ್ಕೆ ರಾಜ್ಯದ ಜನತೆಗೆ ತಂಡದ ಪರವಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.

    ಯಾರು ಸಹ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಅದು ಅಲ್ಲದೇ ಅಪ್ಪುವನ್ನು ಕಳೆದುಕೊಂಡು 15 ದಿನಗಳಾಗಿರುವ ಈ ಸಮಯದಲ್ಲಿ ಯಾರು ಈ ರೀತಿ ಮಾಡುವುದಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಸಂಭವಿಸಿದೆ. ಅಪ್ಪುವಿಗೆ ಶ್ರದ್ಧಾಂಜಲಿ ಅರ್ಪಿಸಿ ನಂತರ ನಾವು ಕಾರ್ಯಕ್ರಮವನ್ನು ಮಾಡಿದ್ದೇನೆ. ಎಲ್ಲರಿಗೂ ಈ ವಿಚಾರ ನೋವಾಗಿದೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾವು ಮುಂದೆ ಹೋಗುತ್ತೇವೆ ಎಂದು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    ರಕ್ಷಿತಾ ಅವರು ಶ್ಯಾಂಪೇನ್ ಓಪನ್ ಮಾಡುವಾಗ ಸಾಂಗ್ ಬರಬೇಕಿತ್ತು. ಆದರೆ ಸಾಂಗ್ ಗೂ ಮೊದಲು ಪ್ರೇಮ್ ಅವರು ಅಪ್ಪು ಬಗ್ಗೆ ಅದ್ಭುತವಾಗಿ ಹೇಳಿದಂತಹ ಮಾತುಗಳು ಬರುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಅದಕ್ಕೆ ಶ್ಯಾಂಪೇನ್ ಓಪನ್ ಮಾಡಿದ್ದು ಹೊಂದಾಣಿಕೆಯಾಗಿಲ್ಲ ಎಂದು ತಿಳಿಸಿದರು.

    ಸಣ್ಣ ಪುಟ್ಟ ದೋಷಗಳು ಇರುತ್ತೆ!

    ನಾನು ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಹೋಗಿದ್ದೆ. ಇದು ಪೂರ್ತಿ ತಂಡ ನಿರ್ಧರಿಸಿದೆ. ಇದು ಲೈವ್ ಆಗಿದ್ದರಿಂದ ನಮ್ಮ ಕೈಯಲ್ಲಿ ಏನೂ ಇರಲಿಲ್ಲ. ನಾವು ರೆಕಾರ್ಡ್ ಶೋ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಎಲ್ಲ ಕಾರ್ಯಕ್ರಮದಲ್ಲಿಯೂ ಸಣ್ಣ ಪುಟ್ಟ ದೋಷಗಳು ಇರುತ್ತೆ. ರೆಕಾರ್ಡ್ ಆಗಿದ್ದರೆ ಎಡಿಟಿಂಗ್ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ. ಆದರೆ ಇದು ಲೈವ್ ಆಗಿದ್ದರಿಂದ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಇದು ತಾಂತ್ರಿಕ ಕಾರಣದಿಂದ ಆಗಿರುವ ತಪ್ಪಾಗಿದೆ ಎಂದು ತಿಳಿಸಿದರು.

    ಒಳ್ಳೆಯ ಗೆಳೆಯ

    ಯಾರಿಗೂ ಅಪ್ಪು ಅವರನ್ನು ಮರೆಯುವುದಕ್ಕೆ ಆಗುವುದಿಲ್ಲ. ಅವರು ನನ್ನ ಒಳ್ಳೆಯ ಗೆಳೆಯ ಸಹ ಆಗಿದ್ದರು. ಏನೇ ಆದರೂ ಕೆಲಸ ಮಾಡಬೇಕು, ಮುಂದೆ ಹೋಗಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಆ ಒಂದು ಮಾತನ್ನು ತೆಗೆದುಕೊಂಡು ನಾವು ಮುಂದೆ ಹೋದೆವು ಎಂದು ನೆನೆದರು.

    ಚಿಯರ್ಸ್ ಮಾಡಿದ ತಕ್ಷಣ ಸಾಂಗ್ ಬರುತ್ತೆ ಎಂದುಕೊಂಡಿದ್ದೆವು. ಆದರೆ ಬೇರೆ ಬಂದಿದ್ದರಿಂದ ಅದು ಮ್ಯಾಚ್ ಆಗಿಲ್ಲ. ನಾವು ಯಾರು ಬೇಕು ಎಂದು ಈ ರೀತಿ ಮಾಡಿಲ್ಲ. ನಾವು ಅಪ್ಪುಗೆ ತುಂಬಾ ಹತ್ತಿರದವರು. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇವೆ. ಈ ರೀತಿ ಆಗಬಾರದು ಎಂದು ನಾವು ತಿಳಿದುಕೊಳ್ಳುತ್ತೇವೆ ಆದರೆ ಆಗಿದೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್

    ‘ಏಕ್ ಲವ್ ಯಾ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ಯಾಂಪೇನ್ ಬಾಟಲ್ ಓಪನ್ ಮಾಡಬೇಕಾದಾಗ ಪುನೀತ್ ಅವರ ಫೋಟೋ ಬ್ಯಾಗ್ರೌಂಡ್ ನಲ್ಲಿ ಬಂದಿದ್ದು, ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದು ಶ್ರದ್ಧಾಂಜಲಿ ಕಾರ್ಯಕ್ರಮನಾ ಅಥವಾ ಪಾರ್ಟಿನಾ ಎಂದು ವಿರೋಧವನ್ನು ವ್ಯಕ್ತಪಡಿಸಿ ಸಿನಿಮಾ ತಂಡದವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆ ತಂಡ ಕ್ಷಮೆಯನ್ನು ಕೇಳುತ್ತಿದ್ದು, ಇದು ಬೇಕೆಂದು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

  • ನಟಿ ರಾಗಿಣಿ ವಿರುದ್ಧ ಅಕುಲ್ ಬಾಲಾಜಿ ಸಾಕ್ಷ್ಯ!

    ನಟಿ ರಾಗಿಣಿ ವಿರುದ್ಧ ಅಕುಲ್ ಬಾಲಾಜಿ ಸಾಕ್ಷ್ಯ!

    ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬುದಾಗಿ ದೃಢಪಡುತ್ತಿದ್ದಂತೆಯೇ ಇತ್ತ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಕೂಡ ತುಪ್ಪದ ಹುಡುಗಿ ವಿರುದ್ಧ ಸಾಕ್ಷ್ಯ ಹೇಳಿದ್ದಾರೆ.

    ನಟಿ ರಾಗಿಣಿ ಮಾದಕ ದ್ರವ್ಯ ಸೇವನೆ ಮಾಡ್ತಿದ್ದರು. ತಾವು ಮಾದಕ ದ್ರವ್ಯ ಸೇವನೆ ಮಾಡಿ ಬೇರೆಯವರಿಗೂ ಪ್ರಚೋದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರ ಎದುರು ಅಕುಲ್ ಬಾಲಾಜಿ ಸಾಕ್ಷ್ಯ ನುಡಿದಿದ್ದಾರೆ. ರಾಗಿಣಿ ವಿರುದ್ಧ ಆಕೆಯ ಡ್ರೈವರ್ ಇಮ್ರಾನ್ ಸೇರಿ ಸುಮಾರು 19 ಮಂದಿಯಿಂದ ಈಗಾಗಲೇ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ.

    ರಾಗಿಣಿ ವಿರುದ್ಧ ಸಾಕ್ಷ್ಯಗಳು..!
    ಡ್ರಗ್ಸ್ ಖರೀದಿಗೆ ಬಗ್ಗೆ ರಾಗಿಣಿ ವಾಟ್ಸಾಪ್ ಚ್ಯಾಟ್ ಮಾಡಿದ್ದರು. ಇಂಥ ದಿನ, ಇಂಥ ಸ್ಥಳಕ್ಕೆ ಇಷ್ಟು ಡ್ರಗ್ಸ್ ಬೇಕು ಎಂದು ಡ್ರಗ್ಸ್ ದಂಧೆಕೋರರ ಜೊತೆಗೆ ಚಾಟ್ ಮಾಡಿದ್ದರು. ಅಲ್ಲದೆ ಡ್ರಗ್ಸ್ ಸರಬರಾಜು, ಡಗ್ಸ್ ಸಂಬಂಧಿ ಕಾನೂನುಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ಕೂಡ ನಡೆಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ಕೋರ್ಟಿಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ಮಾದಕ ದ್ರವ್ಯ ಖರೀದಿಗಾಗಿ 49 ಬಾರಿ ರಾಗಿಣಿ ಕರೆ ಮಾಡಿದ್ದರು. ಅದರಲ್ಲಿ ಗೆಳೆಯ ರವಿಶಂಕರ್‍ಗೆ 16 ಬಾರಿ ಕರೆ ಮಾಡಿದ್ದರು. ಆದಿತ್ಯ ಆಳ್ವ, ಲೂಮ್ ಪೆಪ್ಪರ್ ಸಾಂಬಾ, ಇಮ್ರಾನ್‍ಗೆ ನಟಿ ಕಾಲ್ ಮಾಡಿದ್ದರು. ಈ ಮೂಲಕ ಕೊಕೇನ್, ಎಂಡಿಎಂಎ, ಎಕ್ಸ್‍ಟೆಸಿ ಮಾತ್ರೆ ತರಿಸಿಕೊಂಡಿದ್ದರು. ಇದನ್ನೂ ಓದಿ: ಮೂಗಿನಲ್ಲಿ ಕೊಕೇನ್ ಸೇವಿಸುತ್ತಿದ್ದ ನಟಿ ರಾಗಿಣಿ!

    ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್‍ನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವೆನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು ಎಂಬುದಾಗಿ ಕೋರ್ಟಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ.

    ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ. ಸದ್ಯ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.

  • ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    – ವಿಚಾರಣೆಗೆ ಹಾಜರಾದ ಅಕುಲ್, ಸಂತೋಷ್

    ಬೆಂಗಳೂರು: ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೇ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ ಎಂದು ನಟ ಸಂತೋಷ ಹೇಳಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್‍ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್‍ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್‍ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.

    ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.

    ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.

    ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    – ಪಾರ್ಟಿಗೆ ಹೋಗೋ ಅಭ್ಯಾಸವೇ ಇಲ್ಲ
    – ಪುಣ್ಯ ಮಾಡಿದ್ರಿಂದ ಭೂಮಿ ಸಂಪಾದಿಸಿದ್ದೇನೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ, ಖ್ಯಾತ ನಿರೂಪ್ ಅಕುಲ್ ಬಾಲಾಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಈ ಸಂಬಂಧ ಅಕುಲ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ನನಗೆ ವಾಟ್ಸಪ್ ಮೂಲಕ ಸಿಸಿಬಿ ಅಧಿಕಾರಿಳು ಮೆಸೇಜ್ ಕಳುಹಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹಾಗೆಯೇ ವಿಚಾರಣೆಗೆ ನಾಳೆ ಹಾಜರಾಗುವುದಾಗಿ ತಿಳಿಸಿದರು.

    ನಾನು ಪಾರ್ಟಿಗಳಿಗೆ ಹೋಗಲ್ಲ. ಹೀಗಾಗಿ ಈ ನೋಟಿಸ್‍ನಿಂದ ನನಗೂ ಶಾಕ್ ಆಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ವೀರೇನ್ ಖನ್ನಾ ನನಗೆ ಗೊತ್ತಿಲ್ಲ. ಅವರ ಪಾರ್ಟಿಗಳಿಗೆ ನಾನು ಹೋಗಿಲ್ಲ. ನ್ಯೂಸ್ ಚಾನೆಲ್ ಗಳ ಮೂಲಕವೇ ಅವರು ಏನೆಲ್ಲ ಪಾರ್ಟಿ ಆಯೋಜಿಸುತ್ತಿದ್ದರು ಎಂಬುದನ್ನು ತಿಳಿದಿರೋದು ಎಂದರು.

    ನನ್ನದೊಂದು ಫಾರ್ಮ್ ಹೌಸ್ ಇದೆ. ಆದರೆ ಅದನ್ನು ನಾನು ಬಾಡಿಗೆಗೆ ಕೊಟ್ಟಿದ್ದೇನೆ. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅದು ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿಯೂ ನಾನು ಸ್ಪಷ್ಟನೆ ಕೊಟ್ಟಿದ್ದೆ. ನನಗೂ, ಇದಕ್ಕೂ ಸಂಬಂಧವಿಲ್ಲ. ಆ ಜಾಗ ನನ್ನದು ಹೌದು ಎಂದು ತಿಳಿಸಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಕರ್ನಾಟಕದಲ್ಲಿ ಒಂದು ಹೆಜ್ಜೆ ಭೂಮಿ ಸಂಪಾದನೆ ಮಾಡಬೇಕು ಅಂದರೆ ಆತ ಪುಣ್ಯ ಮಾಡಿರಬೇಕು. ಆ ಪುಣ್ಯ ಹಾಗೂ ಸೌಭಾಗ್ಯವನ್ನು ಕನ್ನಡದ ಜನತೆ ನನಗೆ ಕೊಟ್ಟಿದ್ದಾರೆ. ಅದಕ್ಕೆ ಸಂತಸ ವ್ಯಕ್ತಪಡಿಸುತ್ತೇನೆ. ಆದರೆ ಅದು ಈ ರೀತಿ ಕೆಟ್ಟ ವಿಚಾರಕ್ಕೆ ಉಪಯೋಗ ಪಡೆದುಕೊಂಡಿದೆಯಾ ಎಂಬುದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿಯೇ ನನಗೆ ತುಂಬಾ ಬೇಜಾರಾಗಿತ್ತು. ಲಾಕ್‍ಡೌನ್ ಸಮಯ ಆಗಿದ್ದರಿಂದ ಅಲ್ಲಿಗೆ ಭೇಟಿ ನೀಡಲು ಆಗಿಲ್ಲ. ಹೀಗಾಗಿ ನನಗೂ, ಇದಕ್ಕೂ ಸಂಬಂಧ ಇಲ್ಲ ಎಂದು ಫೋನ್ ಮಾಡಿ ಬೇಕಿದ್ದರೆ ಅಗ್ರಿಮೆಂಟ್ ನೋಡಿ ಅಂತ ಹೇಳಿದ್ದೆ. ನನ್ನ ಜಾಗದಲ್ಲಿ ಪಾರ್ಟಿ ನಡೆದಿರುವುದಕ್ಕೆ ಸಿಸಿಬಿ ನೋಟಿಸ್ ಕಳುಹಿಸಿರಬಹುದು ಬಿಟ್ಟರೆ ನನಗೆ ಬೇರೆ ಯಾವ ಲಿಂಕ್ ಕೂಡ ಇಲ್ಲ. ನನಗೆ ಪಾರ್ಟಿಗೆ ಹೋಗುವ ಅಭ್ಯಾಸವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಡ್ರಗ್ಸ್ ತಗೋತಿರಾ ಅಂತ ಇದೂವರೆಗೂ ನನ್ನ ಯಾರೂ ಕೇಳಿಲ್ಲ, ಕೇಳೋದು ಇಲ್ಲ. ಯಾಕೆಂದರೆ ಈ ಮುಸುಡಿಗೆ ಸಿನಿಮಾನೇ ಇಲ್ಲ ಅಂತ ಹೇಳಿ ಹೋಗುತ್ತಾರೆ. ನಾನು ಕರ್ನಾಟಕ್ಕೆ ಬರೀ ಹೊಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದವನು. ಇಂದು ಈ ಮಟ್ಟಕ್ಕೆ ಹೆಸರು ಮಾಡಿದ್ದೀನಿ ಅಂದರೆ ಅದಕ್ಕೆ ಕರ್ನಾಟಕ ಜನತೆಯ ಪ್ರೀತಿಯೇ ಕಾರಣ. ಕಷ್ಟಪಟ್ಟು ಬಂದವನು ಇಂತಹ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ಐಷಾರಾಮಿ ಜೀವನ ಟಕ್ ಅಂತ ಬಂದ್ಬಿಡ್ತು ಅಂತ ಇಟ್ಟುಕೊಳ್ಳಿ. ಅವನು ಬದಲಾಗಬಹುದೇನೋ. ಆದರೆ ದುಡ್ಡಿನ ಬೆಲೆ ಗೊತ್ತಿದ್ದವನು ಯಾವತ್ತೂ ಇಂತಹ ಕೆಲಸಕ್ಕೆ ಕೈ ಹಾಕಲ್ಲ. ನಮಗೆ ಕುಟುಂಬ ಇದೆ. ಬಿಗ್ ಬಾಸ್ ನಲ್ಲಿ 99 ದಿನ ಇದ್ದೆ. ಒಂದಿನಾನು ನಾನು ಸ್ಮೋಕಿಂಗ್ ರೂಮಿಗೆ ಹೋಗಿಲ್ಲ. ನಾವು ಆಯ್ತು ನಮ್ಮ ಕೆಲಸ ಹಾಗೂ ಜನರ ನಗಿಸೋದೇ ಆಯ್ತು ಅಂತ ಇದ್ದೇನೆ. ಮನೆಗೆ ಬಂದ ಬಳಿಕವೂ ಕುಟುಂಬದ ಜೊತೆ ಸಮಯ ಕಳೆದಿದ್ದೂ ಆಯ್ತು ಅಷ್ಟೇ ನನ್ನ ಜೀವನ ಎಂದರು.

    ಅತ್ತೆ-ಮಾವ ಪ್ರತ್ಯೇಕವಾಗಿದ್ದರಿಂದ ಅವರ ಸಹಾಯಕ್ಕಾಗಿ ಕಳೆದ 3-4 ತಿಂಗಳ ಹಿಂದೆ ಹೈದರಾಬಾದ್ ಗೆ ಬಂದಿದ್ದೇನೆ. ನಾನು, ನನ್ನ ಕುಟುಂಬ ಅಂತ ನಾನು ಇರೋನು. ವೇದಿಕೆಯ ಮೇಲೆ ಹೋಗಿ ಸಾವಿರಾರು ಜನರ ಮುಂದೆ ಶೋ ಮಾಡಿ ಅವರಿಂದ ಸೈ ಅನಿಸಿಕೊಳ್ಳುತ್ತೇವೆ ಅಲ್ವ ಅದಕ್ಕಿಂತ ಬೆಸ್ಟ್ ಡ್ರಗ್ ಯಾವುದೂ ಇಲ್ಲ ಎಂದು ಹೇಳಿದರು.

    ನಮ್ಮನ್ನು ನೋಡಿ ನಮ್ಮ ಮಕ್ಕಳು ಕಲಿಯುತ್ತಾರೆ. ನನಗೂ 10 ವರ್ಷದ ಒಬ್ಬ ಮಗನಿದ್ದಾನೆ. ನಾನೇದರೂ ಈ ರೀತಿ ಕೆಟ್ಟ ಕೆಲಸದಲ್ಲಿ ಕೈ ಜೋಡಿಸಿದರೆ ನಾಳೆ ಅವನು ಕೂಡ ಫಾಲೋ ಮಾಡುತ್ತಾನೆ. ಅಷ್ಟೊಂದು ಬೇಜವಾಬ್ದಾರಿ ತಂದೆ ನಾನಲ್ಲ. ನಾಳೆ ನಾನು ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಜೊತೆ ಇರುವ ದಾಖಲೆಗಳನ್ನು ಕೊಡುತ್ತೇನೆ. ನಾನು ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ನುಡಿದರು.

    ಇದು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಚಿತ್ರರಂಗದಲ್ಲಿ ಎಲ್ಲರೂ ಬರ್ತಾರೆ ಅವರ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಅದರಲ್ಲಿ ಒಬ್ಬರೋ, ಇಬ್ಬರೋ ಕಾಂಟ್ಯಾಕ್ಟ್ ನಲ್ಲಿ ತಗ್ಲಾಕ್ಕೊಳ್ತಾರೆ. ಆದರೆ ಇದರ ಹಿಂದೆ ದೊಡ್ಡ ಮಟ್ಟದ ಮಾಫಿಯಾವೇ ಇದೆ ಎಂದು ಅಕುಲ್ ಪ್ರತಿಕ್ರಿಯಿಸಿದರು.

  • ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    – ಮಾಜಿ ಶಾಸಕರ ಮಗನಿಗೂ ನೋಟಿಸ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಮೂವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಹೌದು. ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಯುವರಾಜ್ ಆರ್.ವಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕುಮಾರ್‍ಗೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ. ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿಸಿಬಿ ನೊಟೀಸ್ ತಲುಪಿದೆ ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ.

    ದೊಡ್ಡ ಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ಎಂಬ ರೆಸಾರ್ಟ್ ಇದೆ. ಲಾಕ್ ಡೌನ್ ಅವಧಿಯಲ್ಲಿ ಈ ರೆಸಾರ್ಟ್ ನಲ್ಲಿ ಕಾನೂನು ಉಲ್ಲಂಘನೆ ನಡೆಸಿ ಕಾರ್ಯಕ್ರಮ ನಡೆಸಿದ್ದಕ್ಕೆ ಎಫ್‍ಐಆರ್ ಕೂಡ ದಾಖಲಾಗಿತ್ತು. ಬೆಂಗಳೂರಿನ ಥಣಿಸಂದ್ರ ನಿವಾಸಿಗಳ ಮದುವೆ ಕಾರ್ಯಕ್ರಮಕ್ಕೆ ಈ ರೆಸಾರ್ಟ್ ಬಾಡಿಗೆ ಕೊಡಲಾಗಿದೆಯಂತೆ. ಮಧ್ಯರಾತ್ರಿ 20ಕ್ಕೂ ಅಧಿಕ ಮಂದಿ ಈ ರೆಸಾರ್ಟ್‍ಗೆ ಬಂದಿಳಿದಿದ್ರು. ಈ ಅಪರಿಚಿತ ಜನರನ್ನು ಕಂಡು ಗ್ರಾಮದ ಜನರು ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ಕೂಡ ಕೊಟ್ಟಿದ್ದರು. ಅಲ್ಲದೆ ವಿರೇನ್ ಖನ್ನಾಗೆ ಅಕುಲ್ 3 ಬಾರಿ ಈ ರೆಸಾರ್ಟ್ ಬಾಡಿಗೆಗೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಮಾಜಿ ಶಾಸಕ ಆರ್.ವಿ ದೇವರಾಜ್ ಮಗನಾಗಿರುವ ಯುವರಾಜ್ ಆರ್. ವಿ ಸುದಾಮನಗರದ ಮಾಜಿ ಕಾರ್ಪೋರೇಟರ್. ಈ ಹಿಂದೆ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿಯೂ ಯುವರಾಜ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅಂದು ಸಿಸಿಬಿ ಪೊಲೀಸರು ಯುವರಾಜ್ ಬಳಿ ಹೇಳಿಕೆ ಪಡೆದು ವಾಪಸ್ ಕಳುಹಿಸಿದ್ದರು.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸಂಜನಾ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗುತ್ತಿದ್ದು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ನಾಳೆ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯೂ ಇದೆ.

    ಇತ್ತ ನಟಿ ದಿಗಂತ್ ಹಾಗೂ ನಟಿ ಐಂದ್ರಿತಾ ಅವರನ್ನು ಕೂಡ ಸಿಸಿಬಿ ವಿಚಾರಣೆ ನಡೆಸಿ ವಾಪಸ್ ಕಳುಹಿಸಿತ್ತು. ಅಲ್ಲದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಟೆನ್ಶನ್ ನಡುವೆಯೂ ಶೂಟಿಂಗ್ ಗೆ ಹೋಗುವುದಾಗಿ ಗಂಡ-ಹೆಂಡತಿ ನಿನ್ನೆ ಹೇಳಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬ್ರೇಕ್ ಪಡೆದು ಪೋಸ್ಟ್ ಪೋನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮಾರಿಗೋಲ್ಡ್ ಸಿನಿಮಾದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಇಂದು ನಡೆಯಬೇಕಿತ್ತು. ಈ ಮಧ್ಯೆ ಇನ್ನು ಕೂಡ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಾದ ಹಿನ್ನೆಲೆ ದಿಗಂತ್ ವಿಶ್ರಾಂತಿಯಲ್ಲಿದ್ದಾರೆ. ಮೊನ್ನೆಯಿಂದಲೂ ಆರ್ ಆರ್ ನಗರದ ನಿವಾಸದಲ್ಲಿ ಐಂದ್ರಿತಾ-ದಿಗಂತ್ ಇದ್ದು, ಕೇವಲ ಆಪ್ತರು ವಕೀಲರ ಜೊತೆ ಮಾತ್ರ ಮಾತುಕತೆ ನಡೆಸುತ್ತಿದ್ದಾರೆ.