Tag: ಅಕುಲ್

  • ‘ಕಾಮಿಡಿ ಕಿಲಾಡಿ’ ಮಡೆನೂರು ಮನು ವಿಚಾರಣೆ ಚಿತ್ರಕ್ಕೆ ಹೀರೋ

    ‘ಕಾಮಿಡಿ ಕಿಲಾಡಿ’ ಮಡೆನೂರು ಮನು ವಿಚಾರಣೆ ಚಿತ್ರಕ್ಕೆ ಹೀರೋ

    ನ್ನಡದಲ್ಲಿ ಈಗ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಿದೆ. ಹೊಸ ಬಗೆಯ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಆ ಸಾಲಿಗೆ ‘ವಿಚಾರಣೆ’ ಎಂಬ ಚಿತ್ರವೂ ಸೇರಿದೆ. ಹೌದು, ಡಿಸೆಂಬರ್ 2 ರಂದು ಬನ್ನೇರಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು. ಯಶ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ  ಅವರು, ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ ಎಫ್ ಐ ಆರ್’  ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

    ಇನ್ನು ಈ ಚಿತ್ರವನ್ನು ಎನ್. ಅಕುಲ್  ನಿರ್ದೇಶನ ಮಾಡುತ್ತಿದ್ದಾರೆ. ಇವರು ಮೂಲತಃ ನೃತ್ಯ ನಿರ್ದೇಶಕರು. ಈ ಚಿತ್ರದ ಮೂಲಕ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ.  ನಿರ್ದೇಶಕ ಅಕುಲ್ ಅವರು ಇದಕ್ಕೂ ಮೊದಲು160 ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ ‘ವಿಚಾರಣೆ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ವಿಚಾರಣೆ ಸಿನಿಮಾ ಕುರಿತು ಹೇಳುವ ನಿರ್ದೇಶಕ ಅಕುಲ್, ‘ ಒಂದು ಘಟನೆಯಲ್ಲಿ  ಅಮಾಯಕನೊಬ್ಬ   ಪೊಲೀಸರ ಕೈ ಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ  ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ. ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್.  ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ. ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ.

    ಚಿತ್ರದಲ್ಲಿ ಪ್ರೀತಿ, ದೌರ್ಜನ್ಯ, ಎಮೋಷನಲ್ ಅಂಶಗಳೂ ಇವೆ. ಇನ್ನು ಇದರೊಂದಿಗೆ ಚಿತ್ರದಲ್ಲಿ ಕಾಮಿಡಿ ಹಾಗು ಸೆಂಟಿಮೆಂಟ್ ಕೂಡ ಇದೆ.  ನಾಲ್ಕು ಭರ್ಜರಿ ಫೈಟ್ಸ್ ಮತ್ತು ಮೂರು ಹಾಡುಗಳಿವೆ. ಕನ್ನಡದಲ್ಲಿ ಈಗ ತೆರೆಗೆ ಬರುತ್ತಿರುವ ವಿಭಿನ್ನ ಕಥಾವಸ್ತು ಇರುವ ಸಿನಿಮಾಗಳ ಸಾಲಿಗೆ ಈ ಸಿನಿಮಾದ ಕಥೆಯು ಇದೆ ಎಂಬುದು ನಿರ್ದೇಶಕರ ಮಾತು.  ಚಿತ್ರಕ್ಕೆ ಮಡೆನೂರು ಮನು ಹೀರೋ. ಜಾನು ನಾಯಕಿ. ಇವರಿಗೆ ಇದು ಮೊದಲ ಅನುಭವ. ಉಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಇತರರು ಇದ್ದಾರೆ. ಚಿತ್ರಕ್ಕೆ ಜಿ.ವಿ.ರಮೇಶ್ ಅವರ ಛಾಯಾಗ್ರಹಣವಿದೆ. ಸತೀಶ್ ಬಾಬು ಅವರು ಸಂಗೀತ ನೀಡುತ್ತಿದ್ದಾರೆ.


    Live Tv

    [brid partner=56869869 player=32851 video=960834 autoplay=true]

  • ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ಬಿಗ್‍ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, ದೊಡ್ಮನೆಯಲ್ಲಿ 16 ಮಂದಿ ಸ್ಪರ್ಧಿಗಳು ತುಂಬಿ ತುಳುಕುತ್ತಿದ್ದಾರೆ. ಈ ಮಧ್ಯೆ ಅಕುಲ್ ಬಾಲಾಜಿ ವೈಷ್ಣವಿಗೆ ದೆವ್ವದ ವಿಚಾರವೊಂದನ್ನು ಹೇಳಿ ಹೆದರಿಸಿದ್ದಾರೆ.

    ಬಿಗ್‍ಬಾಸ್ ಮಿನಿ ಸೀಸನ್ ಮೊದಲನೇ ದಿನ ವೈಷ್ಣವಿ ಹಾಗೂ ಅಕುಲ್ ಬಾಲಾಜಿ ಬೆಡ್ ರೂಂನಲ್ಲಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಅಕುಲ್ ಬಾಲಾಜಿ ಒಮ್ಮೆ ವಾಶ್ ರೂಂ ಬಳಿ ರಾತ್ರಿ 12 ಗಂಟೆಗೆ ಹೋಗಿ ನೋಡು ನಿನಗೆ ಏನಿದೆ ಅಂತ ಗೊತ್ತಾಗುತ್ತದೆ ಎಂದಿದ್ದಾರೆ. ಆಗ ವೈಷ್ಣವಿ ಕುತೂಹಲದಿಂದ ನೀವೇ ಹೇಳಿ ನಾನು ಹೆದರಿಕೊಳ್ಳುವುದಿಲ್ಲ ಅಂತ ಕೇಳುತ್ತಾರೆ. ಇದಕ್ಕೆ ಅಕುಲ್ ನಿಮ್ಮ ಪೋಷಕರು ಬೇರೆ ಇಲ್ಲಿ ಇಲ್ಲ, ನಿನಗೆ ಮೊದಲೇ ದೆವ್ವ ಅಂದರೆ ಭಯ, ಆಮೇಲೆ ನಿನಗೆ ಅದರತ್ತ ಗಮನ ಸೆಳೆಯುತ್ತದೆ. ಹಾಗಾಗಿ ನಾನು ಹೇಳುವುದಿಲ್ಲ ಎನ್ನುತ್ತಾರೆ.

    ನಿನಗೆ ಯಾವತ್ತಾದರೂ ನೀನು ಮಲಗಿಕೊಂಡಾಗ ಬೆಡ್ ಶೀಟ್ ಎಳೆದ ಅನುಭವ ಆಗಿದ್ಯಾ? ಅಂದಾಗ ವೈಷ್ಣವಿ ಇಲ್ಲ ಅಂದಿದ್ದಾರೆ. ಅಲ್ಲದೇ ನಾನು ನಿನ್ನೆ ಹೋಟೆಲ್‍ನಲ್ಲಿ ಇದ್ದಾಗ ಬಾಗಿಲು ಅಲ್ಲಡುತ್ತಿದ್ದ ಶಬ್ಧ ಆಗುತ್ತಿತ್ತು. ಆಗ ನಾನು ಯಾಕೆ ಹೀಗೆ ಸದ್ದು ಮಾಡುತ್ತಿದ್ಯಾ, ಇಲ್ಲೆ ಇದ್ಯಾ, ಸರಿ ನಾನು ಮಲಗುವುದಕ್ಕೆ ಬಿಡು ಅಂತ ಆತ್ಮ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ.

    ನಂತರ ಇದನ್ನು ಕೇಳಿ ನಿಮ್ಮ ಮೈ ಮೇಲೆ ಒಂದು ರೀತಿ ರೋಮಾಂಚನ ಆಗಿದೆ ಎಂದರೆ ಆತ್ಮ ಬಂದು ನಿಮ್ಮನ್ನು ಟಚ್ ಮಾಡಿ ಹೋಗಿದೆ ಎಂದರ್ಥ. ಆತ್ಮಗಳಿಗೆ ನನ್ನ ಜೊತೆ ಯಾರಾದರೂ ಮಾತನಾಡಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಅವು ನಮ್ಮ ಬಳಿ ಮಾತನಾಡಲು ಬರುತ್ತದೆ ಎಂದು ಹೇಳುತ್ತಾರೆ. ಈ ಮಧ್ಯೆ ಜಗನ್ ಹಾಸ್ಯಮಯವಾಗಿ ನನ್ನ ಫೋನ್ ನಂಬರ್ ಕೊಡಿ ನಾನು ಮಾತನಾಡುತ್ತೇನೆ ಅಂತ ಹಾಸ್ಯ ಮಾಡುತ್ತಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್