ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಂತಿದ್ದರೂ ಕಳೆದ 3 ದಿನಗಳಿಂದ ಸುರಿದಿದ್ದ ಅಕಾಲಿಕ ಮಳೆಗೆ ಹಳೆಯ ಮಣ್ಣಿನ ಮನೆಗಳು ಶಿಥಿಲಗೊಂಡಿವೆ. ಕುರುವಕಲಾ ಗ್ರಾಮದಲ್ಲಿ ಮನೆ ಹಳೆಯದಾಗಿದ್ದರಿಂದ ಮಳೆಗೆ ಕುಸಿದು ಬಿದ್ದಿದ್ದೆ. ಮನೆಯಲ್ಲಿದ್ದ ಮೃತ ಬಾಲಕಿಯ ತಾಯಿ ಹಾಗೂ ತಂಗಿಗೆ ಗಂಭೀರ ಗಾಯಗಳಾಗಿವೆ.
ಚೆನ್ನೈ: ನೆರೆಯ ತಮಿಳುನಾಡಿನಲ್ಲಿ (Tamil Nadu) ಅಕಾಲಿಕ ಮಳೆ (Unseasonal Rain) ಸುರಿಯುತ್ತಿರುವುದರಿಂದ ರಾಜ್ಯ ತತ್ತರಿಸಿ ಹೋಗಿದೆ. ಬುಧವಾರ ರಾತ್ರಿ ನಾಗಪಟ್ಟಿಣಂನಲ್ಲಿ (Nagapattinam) ಸುರಿದ ಭಾರೀ ಮಳೆಯಿಂದಾಗಿ (Rain) ಗುರುವಾಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ (Holiday) ಘೋಷಿಸಲಾಗಿದೆ. ತಿರುವರೂರು ಜಿಲ್ಲೆಯಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಟ್ವೀಟ್‌ನಲ್ಲಿ ಈ ಬಗ್ಗೆ ತಿಳಿಸಿದ್ದು, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ, ಶ್ರೀಲಂಕಾ ಕರಾವಳಿಯಿಂದ 80 ಕಿಮೀ ದೂರದಲ್ಲಿ ಮತ್ತು ತಮಿಳುನಾಡಿನ ಕಾರೈಕಲ್‌ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಹೇಳಿದೆ.
Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023
ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ಬೆಳಗ್ಗೆ, ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ 1-2 ಕಡೆಗಳಲ್ಲಿ ಫೆಬ್ರವರಿ 2 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ
ಬೆಳಗಾವಿ: ಕಳೆದ ಮೂರುನಾಲ್ಕು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಮಗಳ ಮದುವೆಯ ಸಂಭ್ರಮ ಕಸಿದುಕೊಂಡಿದೆ.
ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸುರಿದ ಬಾರಿ ಮಳೆ, ಗಾಳಿಗೆ ಚಂದ್ರಶೇಖರ್ ಹುಡೇದ್ ಅವರ ಮನೆ ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿವೆ. ಈ ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನು ನಿಶ್ಚಯ ಮಾಡಿಕೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ ತಂದೆಯ ಮತ್ತು ಮನೆಯ ಪರಿಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾಳೆ. ಮಳೆಯಿಂದಾಗಿ ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಚಂದ್ರಶೇಖರ್ ಅವರ ಮನೆಯಲ್ಲಿ ಎಲ್ಲರೂ ಕುಳಿತು ಊಟ ಮಾಡುತ್ತಿದ್ದ ವೇಳೆಯಲ್ಲಿಯೇ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಘಟನೆಯಿಂದಾಗಿ ಅವರ ಬೆನ್ನು ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ
ಸಂಭ್ರಮ ಹೋಯ್ತು:
ಬೆಳಗಾವಿ ತಾಲೂಕಿನ ಅಲರವಾಡ ಗ್ರಾಮದಲ್ಲಿ ಚಂದ್ರಶೇಖರ ಹುಡೇದ್ ಎಂಬುವವರ ತಮ್ಮ ಒಬ್ಬಳೇ ಮಗಳಾದ ದೀಪಾ ಅವರನ್ನು ಬೆಳಗಾವಿ ತಾಲೂಕಿನ ಶಿಂದೋಳಿ ಗ್ರಾಮದ ನಾಗರಾಜ ತಿಗಡಿ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಏಪ್ರಿಲ್ 15ರಂದು ಶಿಂದೋಳಿ ಗ್ರಾಮದಲ್ಲಿ ಮದುವೆ ನಿಶ್ಚಯವಾಗಿತ್ತು. ಇತ್ತ ಬಡತನ ಹಿನ್ನೆಲೆಯಲ್ಲಿ ಕುಟುಂಬದವರು ಮಗಳ ಮದುವೆಗಾಗಿ ಚಂದ್ರಶೇಖರ ಟ್ರಜರಿ, ಪಾತ್ರೆಗಳು, ಟ್ರೇಲರಿಂಗ್ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಇದರ ಜೊತೆಗೆ ಮದುವೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ತಂದಿಟ್ಟುಕೊಂಡಿದ್ದರು. ಆದರೆ ಅಕಾಲಿಕ ಮೆಳೆ ಮದುವೆ ಮನೆಯ ಸಂಭ್ರಮ ಕಸಿದುಕೊಂಡಿದ್ದು ಒಂದೆಡೆಯಾದರೆ ಸಾಲ ಮಾಡಿ ಕಟ್ಟಿಕೊಂಡಿದ್ದ ಮನೆಯೂ ಸಂಪೂರ್ಣವಾಗಿ ಹಾಳಾಗಿದೆ. ಪರಿಣಾಮ ಮನೆಯಲ್ಲಿ ಅಡುಗೆ ಬೇಕಾದ ಸಾಮಗ್ರಿಗಳನ್ನು ಹಾಳಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್‍ವೈ
ಮಗಳ ಮದುವೆ ಮಾಡಬೇಕೋ ಅಥವಾ ಮನೆಯ ಸ್ವಚ್ಚ ಮಾಡಬೇಕೋ ಎಂಬ ದುಗುಡದಲ್ಲಿದ್ದಾರೆ. ಸಾಲ ಮಾಡಿ ಮಗಳ ಮದುವೆಗೆ ಖರ್ಚು ಮಾಡಿದ ಹಣವೂ ನೀರಿನಲ್ಲಿ ಹೋಮ್ ಮಾಡಿದ್ದಂತಾಗಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಸಂತ್ರಸ್ತರ ಕುಟುಂಬಕ್ಕೆ ಆಶ್ರಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬೆಂಗಳೂರು: ಅಕಾಲಿಕ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ. ಈ ಮಳೆಯಿಂದ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಈ ಕುರಿತು ಚರ್ಚೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆಯನ್ನು ಕರೆದಿದ್ದಾರೆ.
ಈ ಅಕಾಲಿಕ ಮಳೆಯಿಂದ ರಾಜಕಾಲುವೆ ಒತ್ತುವರಿ ಹೊಡೆತಕ್ಕೆ ಅಪಾರ್ಟ್‍ಮೆಂಟ್‍ಗಳು, ಮನೆ, ರಸ್ತೆಗಳಿಗೆ ನೀರು ನುಗ್ಗಿತ್ತು. ರಾಜಧಾನಿಯಲ್ಲಿ ಆಗಿರುವ ಮಳೆ ಅವಾಂತರ ಸಂಬಂಧ ಇವತ್ತು ಮಧ್ಯಾಹ್ನ 12 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.
ಮಂಗಳವಾರ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ಗೆ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಈ ವೇಳೆ ರಾಜಕಾಲುವೆ ಒತ್ತುವರಿ ಮಾಡ್ಕೊಂಡು ಅಪಾರ್ಟ್‍ಮೆಂಟ್ ಕಟ್ಟಿರುವ ಬಗ್ಗೆ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಲಾಯಿತು. ಇದನ್ನೂ ಓದಿ:ಆರ್ ಆ್ಯಂಡ್ ಡಿ ಕಾರ್ಯಪಡೆಗೆ ಅಶೋಕ್ ಶೆಟ್ಟರ್ ನೇಮಕ
ಅದು ಅಲ್ಲದೇ ಇಂದು ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಮಳೆಯಿಂದ ರಾಜಧಾನಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್, ಉಸ್ತುವಾರಿ ಸಚಿವ ಗೋಪಾಲಯ್ಯ ಇಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಶಿವಮೊಗ್ಗ: ಅಭ್ಯರ್ಥಿಗಳು ಇಲ್ಲ ಎಂದು ಕಾಂಗ್ರೆಸ್‍ನವರು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರು ಇನ್ನು ಅಭ್ಯರ್ಥಿಗಳ ಹುಡುಕಾಟದಲ್ಲಿ ಇದ್ದಾರೆ. ತಮಗೆ ಅಭ್ಯರ್ಥಿಗಳು ಇಲ್ಲ ಎಂದು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಲ್ಲಿಸಿಕೊಂಡಿದ್ದಾರೆ. ಬಿಜೆಪಿ ಈಗಾಗಲೇ ನಾಲ್ಕು ತಂಡ ಮಾಡಿಕೊಂಡು ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದೆ. ಯಾವ ರೀತಿ ಲೋಕಸಭೆ, ವಿಧಾನಸಭೆ, ಕಾರ್ಪೋರೇಷನ್ ಗೆದ್ದಿದ್ದೇವೋ, ಅದೇ ರೀತಿ 25 ಕ್ಷೇತ್ರದಲ್ಲಿ ಕನಿಷ್ಠ 15-16 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲದಿರುವಾಗ ಅವರು ಬರ್ಬಾದ್ ಆಗದೇ ಇನ್ನೇನು ಆಗುತ್ತದೆ. ಬರ್ಬಾದ್ ಆಗುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ಏನೋ ಸಮಾಧಾನ ಅದಕ್ಕೆ ಟೀಕೆ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಅಕಾಲಿಕ ಮಳೆ ಕುರಿತು ಮಾತನಾಡಿದ ಅವರು, ಎಲ್ಲ ಜಿಲ್ಲೆಗಳಿಗೂ ಆಯಾಯ ಸಚಿವರು ಭೇಟಿ ನೀಡಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳು ಒಟ್ಚಿಗೆ ಹೋಗಬಾರದು ಎಂದು ಚುನಾವಣಾ ಆಯೋಗ ಹೇಳಿದೆ. ಅಧಿಕಾರಿಗಳೇ ಹೋಗಿ ಪರಿಶೀಲನೆ ನಡೆಸಿ, ಸಂಪೂರ್ಣ ವರದಿ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ – ಕುಟುಂಬದ 5 ಮಂದಿ ಸಾವು
ಬೆಂಗಳೂರು: ಸದ್ಯ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ.
ಕೆಜಿಗೆ 20 ರಿಂದ 25 ರೂಪಾಯಿ ಇದ್ದ ಈರುಳ್ಳಿ ಈಗ 80, 90, 100 ರೂಪಾಯಿಗೆ ಏರಿಕೆಯಾಗಿದೆ. ಯಶವಂತಪುರ ಮಂಡಿಯಲ್ಲಿಯೇ ಫೈನ್ ಈರುಳ್ಳಿ ಕೆಜಿಗೆ 80 ರೂಪಾಯಿಯಾಗಿದೆ. ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿದೆ. ಜೊತೆಗೆ ಬೆಳೆದ ಈರುಳ್ಳಿ ಭೂಮಿಯಲ್ಲೇ ಕೊಳೆತು ಹೋಗಿದೆ. ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆಮದು ಆಗುತ್ತಿದ್ದ ಈರುಳ್ಳಿ ಸಹ ಬರುತ್ತಿಲ್ಲ. ಈ ಪರಿಣಾಮ ಈರುಳ್ಳಿ ಪೂರೈಕೆ ಕಡಿಮೆಯಾದೆ. ಪ್ರತಿದಿನ ಒಂದು ಸಾವಿರ ಲಾರಿ ಲೋಡ್ ಬರುತ್ತಿದ್ದ ಜಾಗದಲ್ಲಿ ದಿನಕ್ಕೆ 150 ಲಾರಿ ಮಾತ್ರ ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ರಾಯಚೂರು: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಜಿಲ್ಲೆಯ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದ್ದಾರೆ. ಜಿಲ್ಲೆಯ ಸಿರವಾರಕ್ಕೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನ ವೀಕ್ಷಣೆ ಮಾಡಿದರು.
ಇದೇ ವೇಳೆ ಬೆಳೆ ಹಾನಿಗೆ ಸರ್ಕಾರದಿಂದ ಬರುವ ಪರಿಹಾರವನ್ನ ಶೀಘ್ರದಲ್ಲೇ ರೈತರಿಗೆ ತಲುಪುವಂತೆ ಮಾಡುತ್ತೇವೆ ಅಂತ ಹೇಳಿದರು. ಬೆಳೆಹಾನಿಯಾದ ರೈತರೊಂದಿಗೆ ಚರ್ಚೆ ಮಾಡಿ ಧೈರ್ಯಗೆಡದಂತೆ ಸಮಾಧಾನ ಹೇಳಿದರು. ಏಪ್ರಿಲ್ 20ರಂದು ಅಕಾಲಿಕ ಮಳೆಯಿಂದಾಗಿ ಭತ್ತ ಸೇರಿದಂತೆ ಜಿಲ್ಲೆಯ ವಿವಿಧ ಬೆಳೆಗಳು ಹಾನಿಯಾಗಿವೆ ಎಂದು ಹೇಳಿದರು.
ಲಿಂಗಸುಗೂರು, ಮಾನ್ವಿ, ಸಿರವಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಕಟಾವಿಗೆ ಬಂದಿದ್ದ ಸುಮಾರು 8 ಸಾವಿರ ಹೆಕ್ಟರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕೋಟ್ಯಂತರ ರೂಪಾಯಿ ಭತ್ತ ಹಾನಿಯಾಗಿದೆ. ಪಪ್ಪಾಯ, ಅಂಜೂರ ಸೇರಿದಂತೆ ಸುಮಾರು 50 ಹೆಕ್ಟರ್ ನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳು ಸಹ ಹಾಳಾಗಿವೆ. ಈ ಹಿನ್ನೆಲೆ ಬೆಳೆಹಾನಿ ಪ್ರದೇಶ ವೀಕ್ಷಣೆ ನಡೆಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ.
ಬೆಳೆಹಾನಿ ಪ್ರದೇಶ ವೀಕ್ಷಣೆ ಬಳಿಕ ರಾಯಚೂರಿನ ಜಿಪಂ ಸಭಾಂಗಣದಲ್ಲಿ ಕೊರೊನಾ ಹಿನ್ನೆಲೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಲಕ್ಷ್ಮಣ ಸವದಿ ಎರಡನೇ ಬಾರಿಗೆ ಕೊರೊನಾ ಹಿನ್ನೆಲೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಕೋವಿಡ್-19 ಪರೀಕ್ಷಿಸುವ ಮೊಬೈಲ್ ಫೀವರ್ ಕ್ಲಿನಿಕ್ ವಾಹನಕ್ಕೆ ಉಪ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.