Tag: ಅಂಬ್ಯುಲೆನ್ಸ್

  • ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.

    ಏಳೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ವೆಂಟಿಲೇಟರ್ ಸಹಿತ ಅಂಬ್ಯುಲೆನ್ಸ್‌ನ್ನು ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ್ ಪೂಜಾರ್ ಸಮ್ಮುಖದಲ್ಲಿ ಅಂಬ್ಯುಲೆನ್ಸ್‍ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸುವದಕ್ಕೆ ನೀಡಿದ್ದಾರೆ.

    ರಾಣೇಬೆನ್ನೂರು ತಾಲೂಕು ಪಂಚಾಯತಿಯ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಶಾಸಕ ಅರುಣ್‍ಕುಮಾರ್ ಪೂಜಾರ್‌ಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್‍ರು ಒದಗಿಸಿರುವ ಅಂಬ್ಯುಲೆನ್ಸ್‌ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸಕ್ಕೆ ಶಾಸಕ ಪೂಜಾರ್ ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಸೋಂಕಿತರಾಗೋ ಜನರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡುತ್ತದೆ.

  • ಮೃತದೇಹಗಳನ್ನ ಸಾಗಿಸ್ತಿದ್ದ ವೇಳೆ ಕೆಟ್ಟುನಿಂತ ವಾಹನ -ಗ್ರಾಮಸ್ಥರಲ್ಲಿ ಆತಂಕ

    ಮೃತದೇಹಗಳನ್ನ ಸಾಗಿಸ್ತಿದ್ದ ವೇಳೆ ಕೆಟ್ಟುನಿಂತ ವಾಹನ -ಗ್ರಾಮಸ್ಥರಲ್ಲಿ ಆತಂಕ

    ಹಾವೇರಿ: ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಅದರೆ ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನ ಸಾಗಿಸ್ತಿದ್ದ ವಾಹನ ಕೆಟ್ಟು ನಿಂತು ಗ್ರಾಮಸ್ಥರ ಆತಂಕಕ್ಕೆ ಕಾರಣವಾದ ಘಟನೆ ಹಾವೇರಿ ತಾಲೂಕಿನ ಕನಕಾಪುರ ಗ್ರಾಮದಲ್ಲಿ ನಡೆದಿದೆ.

    ಕೊರೊನಾದಿಂದ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಮತ್ತು ಅರಳೀಕಟ್ಟಿ ಗ್ರಾಮದ ಒಬ್ಬರು ಸಾವನ್ನಪ್ಪಿದರು. ಹಾವೇರಿ ಜಿಲ್ಲಾಸ್ಪತ್ರೆಯಿಂದ ಸೋಂಕಿತರ ಮೃತದೇಹವನ್ನ ಗ್ರಾಮಕ್ಕೆ ರವಾನೆ ಮಾಡುತ್ತಿದ್ದಾಗ, ಕನಕಾಪುರ ಗ್ರಾಮದಲ್ಲಿ ಅಂಬ್ಯುಲೆನ್ಸ್ ವಾಹನ ಕೆಟ್ಟು ನಿಂತಿತ್ತು. ಎರಡು ಗಂಟೆಗಳ ಕಾಲ ಮೃತದೇಹಗಳೊಂದಿಗೆ ಗ್ರಾಮದಲ್ಲೇ ವಾಹನ ನಿಂತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಶುರವಾಗಿತ್ತು. ಎರಡು ಗಂಟೆ ನಂತರ ಅಂಬ್ಯುಲೆನ್ಸ್ ನಿಂದ ಎರಡು ವಾಹನಗಳಿಗೆ ಮೃತದೇಹ ಶಿಫ್ಟ್ ಮಾಡಲಾಯಿತು.

    ಗ್ರಾಮದಲ್ಲೇ ಮೃತದೇಹ ತೆಗೆದುಕೊಂಡು ಹೋಗ್ತಿದ್ದ ವಾಹನ ಕೆಟ್ಟು ನಿಂತಿದ್ದಕ್ಕೆ ಜನರು ಕೆಲ ಕಾಲ ಭಯಗೊಂಡಿದ್ದರು. ಜಿಲ್ಲಾಡಳಿತ ಸರಿಯಾದ ವಾಹನಗಳ ಮೂಲಕ ಸೋಂಕಿತರ ಮೃತದೇಹವನ್ನ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಬೆಂಗಳೂರು: ಅಂಬ್ಯುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಆಕ್ಸಿಜನ್ ಹಾಕಿ ಮಹಿಳೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

     

    ಸದ್ಯ ಬೆಂಗಳೂರಿನ ರಾಮಚಂದ್ರಪುರದ ಮಹಿಳೆಯೊಬ್ಬರಿಗೆ ಐಸಿಯುನಲ್ಲಿ ಸರಿಯಾಗಿ ಬೆಡ್ ಸಿಗಲಿಲ್ಲ ಹಾಗೂ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಕೂಡ ಸಿಗಲಿಲ್ಲ. ಹೀಗಾಗಿ ಕುಟುಂಬಸ್ಥರು ಸಿಕ್ಕ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಮಲಗಿಸಿಕೊಂಡು ಏರ್ ಪೋರ್ಟ್ ರಸ್ತೆಯಲ್ಲಿರುವ ದೇವನಹಳ್ಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸದ್ಯ ಮಹಿಳೆಗೆ ಅಂಬುಲೆನ್ಸ್ ಸಿಗದೇ ಗೂಡ್ಸ್ ಗಾಡಿಯಲ್ಲಿ ಕುಟುಂಬಸ್ಥರು ಕರೆದೊಯ್ಯುತ್ತಿರುವ ಮನಕಲಕುವ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದ್ದು, ನೋಡಿದವರ ಕರುಳು ಹಿಂಡುವಂತಿದೆ.

  • ಕೊರೊನಾದಿಂದ ಮೃತಪಟ್ಟ ಮಹಿಳೆ- ಗ್ರಾಮಸ್ಥರು, ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಹಿಂದೇಟು

    ಕೊರೊನಾದಿಂದ ಮೃತಪಟ್ಟ ಮಹಿಳೆ- ಗ್ರಾಮಸ್ಥರು, ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಹಿಂದೇಟು

    ಹಾವೇರಿ: ಕೊರೊನಾ ಪಾಸಿಟಿವ್ ನಿಂದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಮಾಡಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಭಯದಿಂದ ಒಪ್ಪದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.

    ಅಂಬ್ಯುಲೆನ್ಸ್‌ನಲ್ಲೇ ಮಹಿಳೆಯ ಮೃತ ದೇಹವನ್ನ ಇಟ್ಟು ಸಿಬ್ಬಂದಿಗಳು ಕಾಯುತ್ತಿದ್ದಾರೆ. ಕಳೆದ 2ಗಂಟೆಗಳಿಂದ ಅಂಬ್ಯುಲೆನ್ಸ್‍ನಲ್ಲೇ ಮಹಿಳೆಯ ಮೃತದೇಹ ಇಟ್ಟು ಡ್ರೈವರ್ ವಾಹನದಲ್ಲಿದ್ದಾರೆ. ಕೊರೊನಾ ಭಯ ಇರೋದ್ರಿಂದ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾರು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡಬೇಕು. ಆದರೆ ಯಾರು ಬಾರದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಮಹಿಳೆ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಆಗಿ ಮೃತಪಟ್ಟಿದ್ದರಿಂದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಬೆಂಗಳೂರು: ಅಂಬುಲೆನ್ಸ್ ಬರುತ್ತಿದೆ ಅಂದರೆ ಸಾಮಾನ್ಯವಾಗಿ ಅದಕ್ಕೆ ದಾರಿ ಮಾಡಿಕೊಡುತ್ತೇವೆ. ಆದರೆ ಅದನ್ನು ಪಾಲಿಸಿ ಮಾದರಿಯಾಗಬೇಕಿದ್ದ ನಮ್ಮ ಡಿಸಿಎಂ ಅಶ್ವಥ್ ನಾರಾಯಣ ಮುಂದೆ ಬರುತ್ತಿದ್ದ ಅಂಬುಲೆನ್ಸ್ ಹಿಂದಿಕ್ಕಿ ಅಡ್ಡ ಬಂದಿದ್ದಾರೆ.

    ಸಂಜೆ 4:30ಕ್ಕೆ ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಯಾವ ಮಟ್ಟಿಗೆ ಜಾಮ್ ಅನ್ನೋದು ಆ ರಸ್ತೆಯಲ್ಲಿ ಓಡಾಡೋರಿಗೆ ಗೊತ್ತೆ ಇರುತ್ತೆ. ಆ ರೀತಿಯ ಜಾಮ್ ರಸ್ತೆಯಲ್ಲೂ ಸಾಮಾನ್ಯ ಜನ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದರೂ ಡಿಸಿಎಂ ಸಾಹೇಬ್ರು ದಾರಿಬಿಡದೇ ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಅಂಬುಲೆನ್ಸ್ ಓವರ್ ಟೆಕ್ ಮಾಡಿದ್ದರೆ ದಂಡ ಇದೆ. ಆ ದಂಡವನ್ನ ಡಿಸಿಎಂ ಸಾಹೇಬ್ರಿಗೆ ಹಾಕಬೇಕಬೇಕು. ಸಾಮಾನ್ಯ ಜನ ಈ ತಪ್ಪನ್ನು ಮಾಡಿದರೆ ಹೇಗೆ ಬೆಲೆ ತೆರುತ್ತಾರೋ ಅದೇ ರೀತಿ ಡಿಸಿಎಂ ಬೆಲೆ ತೆತ್ತು ದಂಡ ಕಟ್ಟುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

  • ಅಂಬುಲೆನ್ಸ್ ನಲ್ಲಿ ವಾಹನದ ಸಿಬ್ಬಂದಿಯಿಂದ ಸುಸೂತ್ರ ಹೆರಿಗೆ

    ಅಂಬುಲೆನ್ಸ್ ನಲ್ಲಿ ವಾಹನದ ಸಿಬ್ಬಂದಿಯಿಂದ ಸುಸೂತ್ರ ಹೆರಿಗೆ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳಗಾನೂರ ಕ್ರಾಸ್ ಬಳಿ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಗೆ ಹೆರಿಗೆಯಾಗಿದೆ.

    ಮುದ್ದೇಬಿಹಾಳ ತಾಲೂಕಿನ ಬಿಳೇಭಾವಿ ಗ್ರಾಮದ ಬಸಮ್ಮಾ ನಿಂಗಪ್ಪ ಕೆಸರಟ್ಟಿಗೆ 108 ನಲ್ಲಿ ಹೆರಿಗೆ ಆಗಿದೆ. 108 ವಾಹನದ ಸಿಬ್ಬಂದಿ ಸಮಯೋಚಿತ ಚಿಕಿತ್ಸೆಯಿಂದಾಗಿ ಸುಸೂತ್ರ ಹೆರಿಗೆ ಆಗಿದೆ. ತಾಯಿ ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮೊದಲು ಗರ್ಭಿಣಿಯನ್ನು ತಾಳಿಕೋಟೆ ಸರ್ಕಾರಿ ಸಮುದಾಯ ಆರೊಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಆದರೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಕಾರಣದಿಂದ ಗರ್ಭಿಣಿಯನ್ನು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆ ಅಥವಾ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದರು. ಆಗ ಮಾರ್ಗ ಮಧ್ಯದಲ್ಲಿಯೇ ಬಳಗಾನೂರ ಕ್ರಾಸ್ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ಆಗಿದೆ.

    ಸದ್ಯಕ್ಕೆ ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ. ಹೆರಿಗೆ ಬಳಿಕ ತಾಳಿಕೋಟೆ ಸಮುದಾಯ ಕೇಂದ್ರದಲ್ಲಿ ಬಾಣಂತಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಲಕ, ನರ್ಸ್ ಸಿಬ್ಬಂದಿಯಿಂದ ಹೆರಿಗೆ – ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

    ಚಾಲಕ, ನರ್ಸ್ ಸಿಬ್ಬಂದಿಯಿಂದ ಹೆರಿಗೆ – ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

    ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದಲ್ಲಿ 108 ವಾಹನದಲ್ಲೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಪಟ್ಟಣದ ಧರ್ಮಾಪುರ ಗ್ರಾಮದ ಅಂಜಿನಮ್ಮ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬದವರು ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಬಳಿಕ 108 ಅಂಬುಲೆನ್ಸ್ ನಲ್ಲಿ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗುತ್ತಿದ್ದರು.

    ಈ ವೇಳೆ ಅಂಜಿನಮ್ಮ ಅವರಿಗೆ ಮಾರ್ಗ ಮಧ್ಯೆಯೇ ಹೆರಿಗೆ ನೋವು ಜಾಸ್ತಿಯಾಗಿ ಕಾಣಿಸಿಕೊಂಡಿದೆ. ಕೊನೆಗೆ ಅಂಬುಲೆನ್ಸ್ ನಲ್ಲೇ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಿಳೆ ಅಂಜಿನಮ್ಮ ಅವರಿಗೆ ಹೆರಿಗೆ ನೋವು ಜಾಸ್ತಿಯಾಗುತ್ತಿದ್ದಂತೆಯೇ 108 ಚಾಲಕ ರುದ್ರಪ್ಪ ಹಾಗೂ ಸಿಬ್ಬಂದಿ ಸುರೇಶ್ ಮಹಿಳೆಗೆ ಹೆರಿಗೆ ಮಾಡಿಸಿದ್ದು ವಿಶೇಷವಾಗಿತ್ತು.

    ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದು, ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಜಾಗಮಾಡಿಕೊಡುವ ವಿಚಾರದಲ್ಲಿ ಮಾನವೀಯತೆ ಮರೆತು ಬಡಿದಾಡಿಕೊಂಡ್ರು!

    ಜಾಗಮಾಡಿಕೊಡುವ ವಿಚಾರದಲ್ಲಿ ಮಾನವೀಯತೆ ಮರೆತು ಬಡಿದಾಡಿಕೊಂಡ್ರು!

    ಬೆಂಗಳೂರು: ಅಂಬ್ಯುಲೆನ್ಸ್ ಗೆ ಜಾಗ ಮಾಡಿಕೊಡುವ ವಿಚಾರದಲ್ಲಿ ವಾಹನ ಸವಾರರು ಮಾನವೀಯತೆ ಮರೆತು, ಬಡಿದಾಡಿಕೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ನವಯುಗ ಟೋಲ್ ಬಳಿ ಈ ಘಟನೆ ನಡೆದಿದ್ದು, ಮತ್ತೊಮ್ಮೆ ಟೋಲ್ ಕಿರಿ ಕಿರಿ ಸುದ್ದಿಗೆ ಗ್ರಾಸವಾಗಿದೆ.

    ವೀಕೆಂಡ್ ಸಂದರ್ಭದಲ್ಲಿ ಟೋಲ್ ನಲ್ಲಿ ಸಾಮಾನ್ಯವಾಗಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಈ ವೇಳೆಯಲ್ಲೇ ಅಂಬ್ಯುಲೆನ್ಸ್ ಗೆ ದಾರಿ ಬಿಡುವ ವಿಚಾರದಲ್ಲಿ, ವಾಹನ ಸವಾರರ ಎರಡು ಗುಂಪು ಬಡಿದಾಡಿಕೊಂಡಿದೆ. ತುಮಕೂರಿನಿಂದ ಬೆಂಗಳೂರಿಗೆ ಈ ಒಂದು ಅಂಬ್ಯುಲೆನ್ಸ್ ತೆರಳುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ.

    ಕಳೆದ ಎರಡು ದಿನಗಳಿಂದ ಟೋಲ್ ನಲ್ಲಿ ಒಂದಲ್ಲಾ ಒಂದು ಅವಾಂತರ ನಡೆಯುತ್ತಿದ್ದು, ಮತ್ತೊಮ್ಮೆ ಈ ಘಟನೆಯಿಂದ ಟೋಲ್ ಸಿಬ್ಬಂದಿಗಳ ಅಸಡ್ಡೆತನ ಸಾಬೀತಾಗಿದೆ. ಈ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

  • ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    ಕಲಬುರಗಿ: ಅಪಘಾತವಾದಾಗ ಸಹಾಯಕ್ಕೆ ಧಾವಿಸಿ ಮಾನವೀಯತೆಯನ್ನು ತೋರಿಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಪಘಾತವಾದ ಸಂದರ್ಭದಲ್ಲಿ ಮಾನವೀಯತೆ ಸತ್ತುಹೋಗುತ್ತದೆ ಎನ್ನುವುದಕ್ಕೆ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಈಗ ಸಿಕ್ಕಿದೆ.

    ಬೈಕ್ ಅಪಘಾತ ನಡೆದು 108 ಅಂಬುಲೆನ್ಸ್ ಬರದ ಹಿನ್ನಲೆ ತಾಯಿಯನ್ನು ಹೊತ್ತು ಮಗ ಆಸ್ಪತ್ರಗೆ ಸಾಗಿರುವ, ಹೃದಯ ವಿದ್ರಾವಕ ಘಟನೆ ಕಲಬುರಗಿಯ ಉದನೂರ ಕ್ರಾಸ್ ಬಳಿ ಗುರುವಾರ ನಡೆದಿದೆ.

    ಏನಿದು ಘಟನೆ?
    ಮಗನನ್ನು ಭೇಟಿಯಾಗಲು ಸಿದ್ದಮ್ಮ ಎಂಬವರು ಬರುತ್ತಿದ್ದಾಗ ಪಲ್ಸರ್ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ತೀವ್ರ ರಕ್ತ ಸ್ರಾವದಲ್ಲಿ ಬಳಲುತ್ತಿದ್ದ ಸಿದ್ದಮ್ಮ ಅವರನ್ನು ಆಸ್ಪತ್ರಗೆ ದಾಖಲಿಸಲು ಮಗ ಮಹಾಂತೇಶ 108 ಅಂಬ್ಯುಲೆನ್ಸ್ ಗೆ ಕರೆ ಮಾಡುತ್ತಾರೆ.

    ವಿಚಾರ ತಿಳಿದರೂ ಒಂದು ಗಂಟೆಯಾದರೂ ಅಂಬುಲೆನ್ಸ್ ಸ್ಥಳಕ್ಕೆ ಬರಲೇ ಇಲ್ಲ. ಜನ ಸಾಮಾನ್ಯರು ಈ ದೃಶ್ಯವನ್ನು ನೋಡುತ್ತಿದ್ದರೆ ವಿನಾಃ ಯಾರೂ ಸಹಾಯ ಮಾಡಲು ಮುಂದಾಗಲೇ ಇಲ್ಲ.

    ಕೊನೆಗೆ ಯಾರ ಸಹಾಯ ಸಿಗದೇ ಇದ್ದಾಗ ತಾಯಿಯನ್ನ ಎತ್ತಿಕೊಂಡು ಆಸ್ಪತ್ರೆಗೆ ನಡೆದಿದ್ದಾರೆ. ಅಷ್ಟರಲ್ಲಿ  ಪೊಲೀಸ್ ಜೀಪೊಂದು ಬಂದು ಸಿದ್ದಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಿದೆ.

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲ ಅಂತಾ ಪಬ್ಲಿಕ್ ಟಿವಿ ವರದಿ ನಂತರ, ಆಸ್ಪತ್ರೆಯ ಮುಖ್ಯಸ್ಥ ವಿಕ್ರಂ ರೆಡ್ಡಿ ಅವರು ಮಾನವೀಯತೆ ತೋರಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಸಿದ್ದಮ್ಮ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    https://youtu.be/_FXNSRP_ceg