Tag: ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ

  • ಕಾರ್ಪೊರೇಟರ್ ಪತ್ನಿ ಹೆಸರಲ್ಲಿ ಅಬಕಾರಿ ನಿಯಮ ಉಲ್ಲಂಘನೆ – ಕಾಲೇಜು, ಆಸ್ಪತ್ರೆ ಪಕ್ಕ ಬಾರ್

    ಕಾರ್ಪೊರೇಟರ್ ಪತ್ನಿ ಹೆಸರಲ್ಲಿ ಅಬಕಾರಿ ನಿಯಮ ಉಲ್ಲಂಘನೆ – ಕಾಲೇಜು, ಆಸ್ಪತ್ರೆ ಪಕ್ಕ ಬಾರ್

    ಬೆಂಗಳೂರು: ಅಬಕಾರಿ ನಿಯಮ ರೂಲ್ 5ರ ಪ್ರಕಾರ 100 ಮೀಟರ್ಸ್ ಒಳಗಡೆ ಆಸ್ಪತ್ರೆ, ಶಾಲೆ, ದೇವಸ್ಥಾನಗಳಿದ್ರೆ ಬಾರ್ ಓಪನ್ ಮಾಡುವಂತಿಲ್ಲ. ಆದರೆ ಬೆಂಗಳೂರಿನ ಕಾವಲ್‍ಭೈರಸಂದ್ರದ ಟ್ಯಾನಿ ರಸ್ತೆ ಬಳಿ ನಿಯಮ ಉಲ್ಲಂಘಿಸಿ ಬಾರ್ ಓಪನ್ ಮಾಡಲು ಸಜ್ಜಾಗಿದ್ದಾರೆ.

    ಸ್ಥಳೀಯ ಕಾರ್ಪೋರೇಟರ್ ನೇತ್ರಾ ನಾರಾಯಣ್ ಪತಿ ಲಕ್ಷ್ಮೀ ನಾರಾಯಣ್ ಬಾರ್ ಓಪನ್ ಮಾಡಲು ಮುಂದಾಗಿದ್ದು, ಅಕ್ಕಪಕ್ಕದಲ್ಲಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದೆ. ಶಾಲಾ ಮಕ್ಕಳು, ಮಹಿಳೆಯರು, ಸಾರ್ವಜನಿಕರು ಓಡಾಡುವ ಜನದಟ್ಟಣೆ ಪ್ರದೇಶ ಇದ್ದಾಗಿದ್ದರೂ ಬಾರ್ ಓಪನ್ ಮಾಡಲು ಮುಂದಾಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಬಾರ್ ತೆರೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಅಬಕಾರಿ ಇಲಾಖೆಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.