Tag: ಅಂಬುಲೆನ್ಸ್

  • ಅಂಬುಲೆನ್ಸ್‌ಗೆ ದಾರಿ ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    ಅಂಬುಲೆನ್ಸ್‌ಗೆ ದಾರಿ ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    ಧಾರವಾಡ: ಅಂಬುಲೆನ್ಸ್‌ಗೆ (Ambulence) ಎಷ್ಟೋ ಜನ ಜಾಗಬಿಟ್ಟುಕೊಡುವುದೇ ಇಲ್ಲ. ಇನ್ನು, ಸಿಎಂ ಕಾನ್ವೆ ಕಾರು ಬರುವಾಗ ಅಂಬುಲೆನ್ಸ್‌ಗೆ ಜಾಗಬಿಟ್ಟುಕೊಡುವುದಿಲ್ಲ, ಟ್ರಾಫಿಕ್‌ನಲ್ಲೇ ಅಂಬುಲೆನ್ಸ್ ಸಿಲುಕುತ್ತೆ ಅಂತಾ ದೂರಿದ್ದವರೇ ಹೆಚ್ಚು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah), ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಅಪವಾದಿಂದ ಮುಕ್ತರಾಗಿದ್ದಾರೆ.

    ಹೌದು, ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ದಾರಿ ಬಿಟ್ಟು ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಧಾರವಾಡ (Dharwad) ಕೃಷಿ ವಿವಿಯ ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದ ವೇಳೆ ಧಾರವಾಡ ನಗರದ ಎನ್‌ಟಿಟಿಎಫ್ ಬಳಿ ಸಿಎಂ ಕಾರು ಇದ್ದಾಗಲೇ ಹಿಂದಿನಿಂದ ಅಂಬುಲೆನ್ಸ್ ಬಂದಿದೆ. ಇದನ್ನೂ ಓದಿ: ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

    ಇದು ಸಿಎಂ ಮತ್ತು ಕಾನ್ವೆ ಗಮನಕ್ಕೆ ಬರುತಿದ್ದಂತೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಗಿದೆ. ಧಾರವಾಡ ನಗರದ ಬಾಗಲಕೋಟ ಪೆಟ್ರೋಲ್ ಪಂಪ್ ಬಳಿಯೇ ನಿಂತು ಅಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನೆ

  • ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

    ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

    ತಿರುವನಂತಪುರ: ವಾಹನಗಳ ಉದ್ದನೆಯ ಸಾಲು, ಭಾರೀ ಟ್ರಾಫಿಕ್ ಜಾಮ್… ಈ ಟ್ರಾಫಿಕ್ (Traffic) ಜಾಮ್ ಮಧ್ಯೆ ನಿರಂತರವಾಗಿ ಕೇಳುತ್ತಿದ್ದ ಅಂಬುಲೆನ್ಸ್ (Ambulence) ಸೈರನ್ ಸದ್ದು… ಇದರ ಮಧ್ಯೆ ಓಡೋಡಿ ಬರುತ್ತಿರುವ ಪೊಲೀಸ್ ಅಧಿಕಾರಿ. ಟ್ರಾಫಿಕ್ ಜಾಮ್‌ನಿಂದ ಅಂಬುಲೆನ್ಸ್‌ನಲ್ಲಿ ಒದ್ದಾಡುತ್ತಿದ್ದ ಜೀವ ಉಳಿಸಲು ಕೇರಳದ ತ್ರಿಶೂರ್ (Thrissur) ನಗರದಲ್ಲಿ ಎಎಸ್‌ಐ ಅಪರ್ಣಾ (ASI Aparna) ಲವ್ ಕುಮಾರ್ ರಸ್ತೆಯಲ್ಲಿ ಕಿ.ಮೀಗಟ್ಟಲೇ ಓಡಿ ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

    ಈ ದೃಶ್ಯ ಈಗ ವೈರಲ್ ಆಗಿದ್ದು, ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಅನ್ನುತ್ತಿದ್ದಾರೆ. ವೈದ್ಯಕೀಯ ಕಾಲೇಜಿನಿಂದ ತ್ರಿಶೂರ್‌ನ ಜುಬಿಲಿ ಆಸ್ಪತ್ರೆಗೆ ರೋಗಿ ಶಿಫ್ಟ್ ಆಗಬೇಕಾಗಿತ್ತು. ಕೊನೆಗೆ ಇವರ ಸಮಯ ಪ್ರಜ್ಞೆಯಿಂದ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದೆ. ಇದನ್ನೂ ಓದಿ: ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

    ಇನ್ನು ಈ ಪೊಲೀಸ್ ಅಧಿಕಾರಿ ಈ ಹಿಂದೆ ದುಡ್ಡಿನ ಕೊರತೆಯಿಂದ ಮಹಿಳೆಯ ಮೃತದೇಹ ನೀಡದ್ದಕ್ಕೆ ತನ್ನ ಬಂಗಾರದ ಬಳೆಯನ್ನು ನೀಡಿ ಗಿರವಿ ಇಡಲು ಹೇಳಿ ದುಡ್ಡಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲನ್ನು ಕೂಡ ದಾನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

  • ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆ ವೇಳೆ ಮೂರ್ಛೆ ಹೋದ ಮಹಿಳೆ – ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬುಲೆನ್ಸ್‌ನಲ್ಲೇ ಗ್ಯಾಂಗ್‌ ರೇಪ್‌

    ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆ ವೇಳೆ ಮೂರ್ಛೆ ಹೋದ ಮಹಿಳೆ – ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬುಲೆನ್ಸ್‌ನಲ್ಲೇ ಗ್ಯಾಂಗ್‌ ರೇಪ್‌

    ಪಾಟ್ನಾ: ಗೃಹರಕ್ಷಕ ದಳ (Home Guard) ನೇಮಕಾತಿ ವೇಳೆ ಮೂರ್ಛೆ ಹೋದ 26 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ (Bihar) ಬೋಧ್ ಗಯಾದಲ್ಲಿ ನಡೆದಿದೆ.

    ಆಂಬ್ಯುಲೆನ್ಸ್ (Ambulance) ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಬಂಧಿತರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯುವತಿ ಮಾತು ನಂಬಿ ಬಂದ ಯುವಕನ ಕಿಡ್ನ್ಯಾಪ್‌; 2.50 ಕೋಟಿಗೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಅರೆಸ್ಟ್

    ಏನಾಗಿತ್ತು?
    ಇದೇ ಜುಲೈ 24ರಂದು ಬೋಧ್‌ ಗಯಾದ ಬಿಹಾರ ಮಿಲಿಟರಿ ಪೊಲೀಸ್‌ ಮೈದಾನದಲ್ಲಿ ಗೃಹರಕ್ಷಕ ದಳದ ನೇಮಕಾತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಮಹಿಳೆ ಮೂರ್ಛೆ ಹೋಗಿದ್ದಳು. ಇದರಿಂದ ತರಬೇತಿ ಕ್ಯಾಂಪಸ್‌ನಲ್ಲೇ ಇದ್ದ ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು. ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪ್ರಜ್ಞಾಹೀನಳಾಗಿದ್ದ ನನ್ನ ಮೇಲೆ ಕೆಲ ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಸಂತ್ರಸ್ತೆ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆಗಾಗಿ ವಿಶೇಷ ತಂಡ ಮತ್ತು ವಿಧಿವಿಜ್ಞಾನ ತಂಡವನ್ನ ನಿಯೋಜನೆ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಅಂಬುಲೆನ್ಸ್‌ ಚಾಲಕ ವಿನಯ್ ಕುಮಾರ್ ಮತ್ತು ತಂತ್ರಜ್ಞ ಅಜಿತ್ ಕುಮಾರ್ ಇಬ್ಬರನ್ನು ತನಿಖಾ ತಂಡ ಬಂಧಿಸಿತು. ಸದ್ಯ ಇಬ್ಬರು ಪೊಲೀಸ್‌ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

  • ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು

    ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು

    – ಅಂಬುಲೆನ್ಸ್ ಚಾಲಕ ಗಂಭೀರ

    ವಿಜಯಪುರ: ಲಾರಿ, ಬೈಕ್ ಹಾಗೂ ಅಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಬಿಎಸ್‌ಎಫ್ ಯೋಧ (BSF soldier) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ (Nidagundi) ಪಟ್ಟಣದ ಎನ್‌ಎಚ್ 50ರಲ್ಲಿ ನಡೆದಿದೆ.

    ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಮೌನೇಶ ರಾಠೋಡ್(35) ಮೃತ ಯೋಧ. ಲಾರಿ ಬೈಕ್‌ಗೆ ಡಿಕ್ಕಿಯಾದ ಬಳಿಕ ಬೈಕ್ ಸಮೇತ ಎಳೆದುಕೊಂಡು ಎದುರಿಗೆ ಬರುತ್ತಿದ್ದ ಅಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ಚಾಲಕ ಕೇರಳ ಮೂಲದ ರಿತೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ಕ್ರೇನ್ ಮೂಲಕ ಲಾರಿ ಹಾಗೂ ಅಂಬುಲೆನ್ಸ್ ಅನ್ನು ಬೇರ್ಪಡಿಸಿ ಚಾಲಕ ರಿತೇಶ್‌ನನ್ನ ಪೊಲೀಸರು ಹೊರ ತೆಗೆದಿದ್ದಾರೆ. ಗಾಯಾಳು ರಿತೇಶ್‌ನನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು

    ಅಪಘಾತದ ಕಾರಣ ಎನ್‌ಎಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತಕ್ಕೀಡಾದ ಲಾರಿ, ಅಂಬುಲೆನ್ಸ್ ಹಾಗೂ ಬೈಕ್ ತೆರವು ಮಾಡಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂಬುಲೆನ್ಸ್‌ನಲ್ಲಿದ್ದ ಸಹಾಯಕನಿಗೆ ಹಾಗೂ ಲಾರಿ ಚಾಲಕ, ಕ್ಲೀನರ್‌ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ

    ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ

    ಲಕ್ನೋ: ಉತ್ತರ ಪ್ರದೇಶದ (Utttar Pradesh) ಹಾಪುರ್ ಜಿಲ್ಲೆಯಲ್ಲಿ (Hapur District) 50 ವರ್ಷದ ಮಹಿಳೆಯೊಬ್ಬರು ಅಂಬುಲೆನ್ಸ್‌ನಲ್ಲಿ (Ambulance) 14ನೇ ಮಗುವಿಗೆ ಜನ್ಮ ನೀಡಿದ್ದಾರೆ.

    ಅಂಬ್ಯುಲೆನ್ಸ್‌ನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿದ್ದು ತಾಯಿ (Mother) ಮತ್ತು ಮಗು (Baby) ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಪಿಲ್ಖುವಾದ ಮೊಹಲ್ಲಾ ಬಜರಂಗಪುರಿಯ ನಿವಾಸಿ ಇಮಾಮುದ್ದೀನ್ ಅವರ ಪತ್ನಿ 50 ವರ್ಷದ ಗುಡಿಯಾ ಬೇಗಂ ಅವರಿಗೆ ಹೆರಿಗೆ ನೋವು ಇತ್ತು. ಅವರನ್ನು ಪಿಲ್ಖುವಾ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಮೀರತ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್ ಮಹಿಳೆಯನ್ನು ಕರೆದೊಯ್ಯಲಾಯಿತು. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ದಾರಿಯಲ್ಲಿ ಗುಡಿಯಾಗೆ ಹೆರಿಗೆ ನೋವು ಹೆಚ್ಚಾಯಿತು. ಪರಿಸ್ಥಿತಿ ಹದಗೆಟ್ಟಾಗ ಅಂಬುಲೆನ್ಸ್‌ ನಿಲ್ಲಿಸಿ ಸಿಬ್ಬಂದಿ ಲಭ್ಯವಿರುವ ಹೆರಿಗೆ ಕಿಟ್ ಸಹಾಯದಿಂದ ಮಹಿಳೆಗೆ ಹೆರಿಗೆ ಮಾಡುವಲ್ಲಿ ಯಶಸ್ವಿಯಾದರು. ಹೆರಿಗೆಯ ನಂತರ, ತಾಯಿ ಮತ್ತು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಮಯದಲ್ಲಿ ಮಹಿಳೆಯ 22 ವರ್ಷದ ಮಗ ಕೂಡ ಆಸ್ಪತ್ರೆಗೆ ಬಂದಿದ್ದ.

     

  • ನಡುರಸ್ತೆಯಲ್ಲೇ ಹೊತ್ತಿ ಉರಿದ ಅಂಬುಲೆನ್ಸ್‌ – ನಾಲ್ವರು ಗ್ರೇಟ್‌ ಎಸ್ಕೇಪ್‌

    ನಡುರಸ್ತೆಯಲ್ಲೇ ಹೊತ್ತಿ ಉರಿದ ಅಂಬುಲೆನ್ಸ್‌ – ನಾಲ್ವರು ಗ್ರೇಟ್‌ ಎಸ್ಕೇಪ್‌

    ರಾಯಚೂರು: ನಗರದ ಹೊರವಲಯದ ಆಶಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಅಂಬುಲೆನ್ಸ್ ಹೊತ್ತಿ ಉರಿದಿದೆ.

    ಮೃತದೇಹವನ್ನ ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‌ನ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಅಂಬುಲೆನ್ಸ್‌ನಲ್ಲಿದ್ದ ಮೂವರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಯಚೂರಿನಿಂದ ಉಡಮಗಲ್ ಗ್ರಾಮಕ್ಕೆ ಹೊರಟಿದ್ದ ಅಂಬುಲೆನ್ಸ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆಯೊಂದಿಗೆ ಹೊತ್ತಿ ಉರಿದಿದೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಳಿಕ ಕುಟುಂಬಸ್ಥರು ಮೃತದೇಹವನ್ನು ಬೇರೆ ವಾಹನದಲ್ಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತ – ಗ್ರಾಮಸ್ಥರ ತರಾಟೆ ಬಳಿಕ ಅಧಿಕಾರಿಗಳು ಅಲರ್ಟ್‌

    ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತ – ಗ್ರಾಮಸ್ಥರ ತರಾಟೆ ಬಳಿಕ ಅಧಿಕಾರಿಗಳು ಅಲರ್ಟ್‌

    ಮಂಡ್ಯ: ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದ್ದ ಘಟನೆ ಮಂಡ್ಯದ (Mandya) ಕೆರೆಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ (Ambulance Service) ಸ್ಥಗಿತಗೊಂಡಿರುವುದು ಸರ್ಕಾರಿ ಆಸ್ಪತ್ರೆಯ (Government Hospital) ಮತ್ತೊಂದು ಅಧೋಗತಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್‌ ಶಾಸಕ ಜಿಟಿಡಿ, ಪುತ್ರ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಅಂಬುಲೆನ್ಸ್‌ ಮುಂಬದಿ ಗ್ಲಾಸ್ ಮೇಲೆ `ಡಿಸೇಲ್ ಇಲ್ಲದ ಕಾರಣ ಆಂಬುಲೆನ್ಸ್ ಸೇವೆ ಸ್ಥಗಿತ’ ಎಂದು ಆಸ್ಪತ್ರೆ ಸಿಬ್ಬಂದಿ ಪೋಸ್ಟ್ ಅಂಟಿಸಿದ್ದಾರೆ. ಈ ಪೋಸ್ಟರ್ ನೋಡಿದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಇದನ್ನೂ ಓದಿ: ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ

    ಸರ್ಕಾರದಲ್ಲಿ ಆಂಬುಲೆನ್ಸ್ಗೆ ಡಿಸೇಲ್ ಹಾಕಲೂ ದುಡ್ಡಿಲ್ವ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    ತರಾಟೆ ಬೆನ್ನೆಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊನೆಗೂ ಅಂಬುಲೆನ್ಸ್‌ಗೆ ಡಿಸೇಲ್ ಹಾಕಿ ಸೇವೆಗೆ ಅನುವು ಮಾಡಿಕೊಟ್ಟಿದ್ದಾರೆ.

  • ಅಂಬುಲೆನ್ಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಅರೆಸ್ಟ್

    ಅಂಬುಲೆನ್ಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಅರೆಸ್ಟ್

    ಭೂಪಾಲ್: ಅಂಬುಲೆನ್ಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಮಧ್ಯಪ್ರದೇಶದ (Madhya Pradesh) ಮೌಗಂಜ್‌ನಲ್ಲಿ (Mauganj) ನಡೆದಿದ್ದು, ತಡವಾಗಿ (ನ.22ರಂದು) ಬೆಳಕಿಗೆ ಬಂದಿದೆ.

    ಒಟ್ಟು ನಾಲ್ವರು ಆರೋಪಿಗಳಿದ್ದು, ಆ ಪೈಕಿ ಇಬ್ಬರು ಆರೋಗಳಾದ ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್‌ನ ನಿವಾಸಿಗಳಾದ ಅಂಬ್ಯುಲೆನ್ಸ್ (Ambulance) ಚಾಲಕ ವಿರೇಂದ್ರ ಚತುರ್ವೇದಿ ಹಾಗೂ ಆತನ ಸ್ನೇಹಿತ ರಾಜೇಶ ಕೇವತ್‌ನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಫಡ್ನವಿಸ್‌ ಸಿಎಂ, ಪವಾರ್‌ ಡಿಸಿಎಂ – ಇಂದೇ ಅಧಿಕೃತ ಪ್ರಕಟ ಸಾಧ್ಯತೆ

    ಮೌಗಂಜ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳು ಹಾಗೂ ಬಿಪಿಎಲ್ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜನನಿ ಎಕ್ಸ್ಪ್ರೆಸ್ ಅಂಬುಲೆನ್ಸ್ ಸೌಲಭ್ಯ ಒದಗಿಸಿತ್ತು. ಈ 108 ಅಂಬುಲೆನ್ಸ್‌ನಲ್ಲೇ ಕೃತ್ಯ ನಡೆದಿದೆ.

    ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್ ಸಾಕೇತ್ ಪಾಂಡೆ ಮಾಹಿತಿ ಪ್ರಕಾರ, ಅಪ್ರಾಪ್ತೆಯು ತನ್ನ ಸಹೋದರಿ ಹಾಗೂ ಮಾವನೊಂದಿಗೆ ಅಂಬುಲೆನ್ಸ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕ ಹಾಗೂ ಆತನ ಮೂವರು ಸಹಚರರು ಸಹ ಅಂಬುಲೆನ್ಸ್‌ನಲ್ಲಿದ್ದರು. ಮಾರ್ಗಮಧ್ಯೆ ನೀರು ತರಲೆಂದು ಬಾಲಕಿಯ ಸಹೋದರಿ ಹಾಗೂ ಆಕೆಯ ಮಾವ ಕೆಳಗಿಳಿದಿದ್ದಾರೆ. ಅವರಿಗಾಗಿ ಕಾಯದೇ ಅಂಬುಲೆನ್ಸ್‌ನ್ನೂ ಚಲಾಯಿಸಿಕೊಂಡು ಬಂದಿದ್ದು, ಚಾಲಕನ ಸ್ನೇಹಿತ ರಾಕೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆ ದಿನ ರಾತ್ರಿ ಆಕೆಯನ್ನು ವಾಹನದಲ್ಲಿಯೇ ಇರಿಸಿಕೊಂಡು ಮಾರನೇ ದಿನ ರಸ್ತೆಯ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಬಳಿಕ ಅಪ್ರಾಪ್ತೆ ಮನೆ ತಲುಪಿದ್ದು, ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಇದ್ದರಿಂದ ಗಾಬರಿಯಾದ ತಾಯಿ ಮನೆಯ ಮರ್ಯಾದೆ ಪ್ರಶ್ನೆ ಎಂದು ದೂರು ದಾಖಲಿಸಿರಲಿಲ್ಲ.

    ಬಳಿಕ ನ.25 ರಂದು ಸಂತ್ರಸ್ತೆ ಹಾಗೂ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ನ.27 ರಂದು ನಾಲ್ವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಈ ಕೃತ್ಯದಲ್ಲಿ ಸಂತ್ರಸ್ತೆಯ ಸಹೋದರಿ ಹಾಗೂ ಮಾವ ಭಾಗಿಯಾಗಿರುವುದಾಗಿ ತಿಳಿಸಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.

    ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ಎಸಗಿರುವುದಾಗಿ ದೃಢಪಟ್ಟಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಿರತೆ ಹಾವಳಿ – ಒಬ್ಬೊಬ್ಬೊರೆ ಓಡಾಡದಂತೆ ಎಚ್ಚರಿಕೆ

  • ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌ ಪಲ್ಟಿ

    ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌ ಪಲ್ಟಿ

    ಉಡುಪಿ: ಎನ್‌ಕೌಂಟರ್‌ನಲ್ಲಿ (Encounter) ಮೃತಪಟ್ಟಿದ್ದ ನಕ್ಸಲ್‌ ನಾಯಕ ವಿಕ್ರಂ ಗೌಡನ (Vikram Gowda) ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್‌ (Ambulance) ಪಲ್ಟಿಯಾದ ಘಟನೆ ಹೆಬ್ರಿಯ ಕೂಡ್ಲು ಸಮೀಪ ನಡೆದಿದೆ.

    ಇಂದು ಬೆಳಗ್ಗೆ ಮಣಿಪಾಲದ ಕೆಎಂಸಿಯಲ್ಲಿ (KMC) ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರಕ್ಕಾಗಿ ಮಣಿಪಾಲದಿಂದ ಕೂಡ್ಲುವಿಗೆ ಮೃತದೇಹವನ್ನು ಅಂಬುಲೆನ್ಸ್‌ ಮೂಲಕ ಸಾಗಿಸಲಾಗುತ್ತಿತ್ತು.

     

    ವೇಗವಾಗಿ ಸಾಗುತ್ತಿದ್ದಾಗ ದಿಢೀರ್‌ ದನ ರಸ್ತೆಗೆ ಅಡ್ಡ ಬಂದಿದೆ. ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬದಿಗೆ ಅಂಬುಲೆನ್ಸ್‌ ಚಲಾಯಿಸಿದಾಗ ಪಲ್ಟಿಯಾಗಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ಅಂಬುಲೆನ್ಸ್‌ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೊಂಡೊಯ್ಯಲಾಗಿದೆ. ಇದನ್ನೂ ಓದಿ: ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    ಮಧ್ಯಾಹ್ನ ವಿಕ್ರಂ ಗೌಡನ ಸ್ವಗ್ರಾಮ ಕೂಡ್ಲುಗೆ ಮೃತದೇಹ ತಲುಪಿದೆ. ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಿದ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ನಡೆಯಲಿದೆ.

     

  • ಹೊತ್ತಿ ಉರಿದ ಅಂಬುಲೆನ್ಸ್‌, ಆಕ್ಸಿಜನ್ ಸಿಲಿಂಡರ್ ಸ್ಫೋಟ – ಕೂದಲೆಳೆ ಅಂತರದಲ್ಲಿ ಗರ್ಭಿಣಿ ಪಾರು!

    ಹೊತ್ತಿ ಉರಿದ ಅಂಬುಲೆನ್ಸ್‌, ಆಕ್ಸಿಜನ್ ಸಿಲಿಂಡರ್ ಸ್ಫೋಟ – ಕೂದಲೆಳೆ ಅಂತರದಲ್ಲಿ ಗರ್ಭಿಣಿ ಪಾರು!

    ಮುಂಬೈ: ಅಂಬುಲೆನ್ಸ್‌ನ (Ambulance) ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಮಹಾರಾಷ್ಟ್ರದ (Maharashtra) ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದಿದೆ.

    ಅಂಬುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿರುವ ದೃಶ್ಯ ಜನರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಭಾರೀ ಎತ್ತರಕ್ಕೆ ಚಿಮ್ಮಿದೆ. ಅಲ್ಲದೇ ಕೆಲವು ಮನೆಗಳ ಗಾಜುಗಳು ಪುಡಿಪುಡಿಯಾಗಿವೆ. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

    ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ, ಅಂಬುಲೆನ್ಸ್‌ನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಅವರ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಬಳಿಕ ಅಂಬುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ಕೆಲವೇ ನಿಮಿಷಗಳಲ್ಲಿ ವಾಹನದಲ್ಲಿದ್ದ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

    ಎರಾಂಡೋಲ್ ಸರ್ಕಾರಿ ಆಸ್ಪತ್ರೆಯಿಂದ ಜಲಗಾಂವ್ ಜಿಲ್ಲಾ ಆಸ್ಪತ್ರೆಗೆ ಅಂಬುಲೆನ್ಸ್‌ ಗರ್ಭಿಣಿ ಮಹಿಳೆ ಮತ್ತು ಅವರ ಕುಟುಂಬವನ್ನು ಕರೆದೊಯ್ಯುತ್ತಿದ್ದಾಗ ದಾದಾ ವಾಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.