Tag: ಅಂಬಾನಿ

  • ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು

    ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು

    ನವದೆಹಲಿ: ಅಂಬಾನಿ, ಅದಾನಿ ಹೆಸರು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರು ಟಾಂಗ್‌ ನೀಡಿದ್ದಕ್ಕೆ ಇದೀಗ ಕೈ ನಾಯಕ ರಾಹುಲ್‌ ಗಾಂಧಿ (Rahul Gandhi) ತಿರುಗೇಟು ಕೊಟ್ಟಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿದ ರಾಗಾ, ನಮಸ್ಕಾರ ಮೋದಿ ಅವರೇ, ಏನು ಭಯಗೊಂಡಿದ್ದೀರಾ..?. ಸಾಮಾನ್ಯವಾಗಿ ನೀವು ಮುಚ್ಚಿದ ಕೋಣೆಯಲ್ಲಿ ಅಂಬಾನಿ (Mukesh Ambani), ಅದಾನಿ (Adani) ಬಗ್ಗೆ ನೀವು ಮಾತನಾಡುತ್ತೀರಿ. ಆದರೆ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದೀರಿ. ಅವರು ಟೆಂಪೋದಲ್ಲಿ ಹಣ ಕೊಡ್ತಾರೆ ಅಂತಾ ನಿಮಗೆ ಗೊತ್ತು. ಇದು ನಿಮ್ಮ ವೈಯಕ್ತಿಕ ಅನುಭವನಾ ಎಂದು ಪ್ರಶ್ನಿಸಿದ್ದಾರೆ.

    ಸಿಬಿಐ, ಇಡಿ ಕಳುಹಿಸಿ ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸಿ ಹೆದರಿಕೊಳ್ಳಬೇಡಿ. ನಾನು ಮತ್ತೆ ಹೇಳುತ್ತೇನೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಂಬಾನಿ, ಅದಾನಿಗೆ ನೀಡಿದ್ದಾರೆ. ಅಷ್ಟೇ ಹಣವನ್ನು ನಾನು ಭಾರತದ ಬಡವರಿಗೆ ನೀಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ

    ಮಹಾಲಕ್ಷ್ಮಿ, ಮೊದಲ ಉದ್ಯೋಗ ಯೋಜನೆ ಮೂಲಕ ಕೋಟ್ಯಂತರ ಜನರನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತೇವೆ. ಮೋದಿ ಅವರು 22 ಜನರನ್ನು ಕೊಟ್ಯಾಧಿಪತಿ ಮಾಡಿದ್ದಾರೆ. ಆದರೆ ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿ ಮಾಡಲಿದ್ದೇವೆ ಎಂದು ರಾಹುಲ್‌ ಗಾಂಧಿ ಭರವಸೆ ಕೊಟ್ಟರು.

    ಮೋದಿ ಹೇಳಿದ್ದೇನು..?; ತೆಲಂಗಾಣದ ಕರೀಂಪುರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದ (ರಾಹುಲ್‌ ಗಾಂಧಿ) ಒಂದು ಮಾತನ್ನು ಜಪಿಸುತ್ತಲೇ ಇದ್ದರು. ಅವರ ರಫೇಲ್ ವಿವಾದದ ನಂತರ ಅವರು ಹೊಸ ಜಪವನ್ನು ಪ್ರಾರಂಭಿಸಿದರು. ಹೋದಲ್ಲಿ ಬಂದಲ್ಲಿ ಐದು ಕೈಗಾರಿಕೋದ್ಯಮಿಗಳು, ಐದು ಕೈಗಾರಿಕೋದ್ಯಮಿಗಳು ಎಂದು ಹೇಳುತ್ತಿದ್ದರು. ನಂತರ ಅವರು ಅಂಬಾನಿ-ಅದಾನಿ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ ಮತ್ತು ಅದಾನಿಯನ್ನು ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದರು.

  • ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ

    ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ

    – ರಫೇಲ್‌ ವಿವಾದದ ನಂತರ ಅದಾನಿ ವಿರುದ್ಧ ರಾಹುಲ್‌ ವಾಗ್ದಾಳಿ
    – RR ತೆರಿಗೆ RRR ಸಿನಿಮಾ ಕಲೆಕ್ಷನ್‌ ಹಿಂದಿಕ್ಕಿದೆ

    ಹೈದರಾಬಾದ್‌: ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು (Adani-Ambani) ರಾಹುಲ್‌ ಗಾಂಧಿ (Rahul Gandhi) ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರಶ್ನಿಸಿದ್ದಾರೆ.

    ತೆಲಂಗಾಣದ ಕರೀಂಪುರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದ (ರಾಹುಲ್‌ ಗಾಂಧಿ) ಒಂದು ಮಾತನ್ನು ಜಪಿಸುತ್ತಲೇ ಇದ್ದರು. ಅವರ ರಫೇಲ್ ವಿವಾದದ ನಂತರ ಅವರು ಹೊಸ ಜಪವನ್ನು ಪ್ರಾರಂಭಿಸಿದರು. ಹೋದಲ್ಲಿ ಬಂದಲ್ಲಿ ಐದು ಕೈಗಾರಿಕೋದ್ಯಮಿಗಳು, ಐದು ಕೈಗಾರಿಕೋದ್ಯಮಿಗಳು ಎಂದು ಹೇಳುತ್ತಿದ್ದರು. ನಂತರ ಅವರು ಅಂಬಾನಿ-ಅದಾನಿ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ ಮತ್ತು ಅದಾನಿಯನ್ನು ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ: ಸ್ಯಾಮ್‌ ಪಿತ್ರೋಡಾ

    ಅವರು ಅಂಬಾನಿಯಿಂದ ಎಷ್ಟು ಹಣವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಅವರು ಘೋಷಿಸಬೇಕು, ನೀವು ಅಂಬಾನಿ ಮತ್ತು ಅದಾನಿಯನ್ನು ರಾತ್ರೋರಾತ್ರಿ ದುರುಪಯೋಗಪಡಿಸಿಕೊಂಡಿದ್ದೀರಾ? ಐದು ವರ್ಷಗಳ ಕಾಲ ಅವರನ್ನು ನಿಂದಿಸಿದ ನೀವು ರಾತ್ರೋರಾತ್ರಿ ನಿಂದನೆಯನ್ನು ನಿಲ್ಲಿಸಿದ್ದು ಯಾಕೆ? ಏನಾದ್ರೂ ರಹಸ್ಯ ಒಪ್ಪಂದ ನಡೆದಿದ್ಯಾ ಎಂದು ರಾಹುಲ್‌ ಗಾಂಧಿಗೆ ಪ್ರಶ್ನೆ ಕೇಳಿದರು.

    ತೆಲಂಗಾಣದಿಂದ ದೆಹಲಿಯವರೆಗೆ, ‘ಡಬಲ್ ಆರ್’ (RR) ತೆರಿಗೆಯ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತಿದೆ. RRR ಹೆಸರಿನ ತೆಲುಗು ಚಿತ್ರ ಬಿಡುಗಡೆಯಾಗಿ ಭರ್ಜರಿ ಹಿಟ್‌ ಆಯ್ತು. ಆದರೆ ಕಲೆಕ್ಷನ್‌ ವಿಚಾರದಲ್ಲಿ RRR ಸಿನಿಮಾವನ್ನು RR ತೆರಿಗೆ ಬಹಳ ಹಿಂದೆಯೇ ಹಿಂದಿಕ್ಕಿದೆ ಎಂದು ಯಾರೋ ನನಗೆ ಹೇಳಿದ್ದಾರೆ ಎನ್ನುವ ಮೂಲಕ ರೇವಂತ್‌ ರೆಡ್ಡಿ ಸರ್ಕಾರವನ್ನು ಟೀಕಿಸಿದರು.

     

    ತೆಲಂಗಾಣದಲ್ಲಿ ಗೌತಮ್‌ ಅದಾನಿ ಹೂಡಿಕೆ ಮಾಡಿದ್ದಾರೆ. ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗೌತಮ್‌ ಅದಾನಿ ಜೊತೆ ಒಪ್ಪಂದ ಮಾಡಿದ್ದನ್ನು ಪರೋಕ್ಷವಾಗಿ ಮೋದಿ ಪ್ರಸ್ತಾಪಿಸಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಿದರೆ ಅಂಬಾನಿ, ಅದಾನಿಯಂಥ ಶ್ರೀಮಂತರು ದುಬೈಗೆ ಹೋಗ್ತಾರೆ: ಆರ್ಥಶಾಸ್ತ್ರಜ್ಞ

    ವಿಶ್ವ ಆರ್ಥಿಕ ವೇದಿಕೆ-2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಗ್ರೂಪ್‌ ಬಹುಕೋಟಿ ರೂಪಾಯಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಹೂಡಿಕೆಯು 50 ಶತಕೋಟಿ ರೂಪಾಯಿಗಳಿಗೆ ಸ್ಥಾಪಿಸಲು 100 ಮೆಗಾವ್ಯಾಟ್ ಡೇಟಾ ಕೇಂದ್ರವನ್ನೂ ಒಳಗೊಂಡಿದೆ. ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಟೆಕ್ನಾಲಜೀಸ್ ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೆ ತರುವ ಒಪ್ಪಂದಗಳಿಗೆ ಸಹಿ ಹಾಕಿವೆ.

    ಇಂಧನ ಕ್ಷೇತ್ರದಲ್ಲಿ ಅದಾನಿ ಎನರ್ಜಿ ತೆಲಂಗಾಣದಲ್ಲಿ 5 ಸಾವಿರ ಕೋಟಿ ರೂ., ಅಂಬುಜಾ ಸಿಮೆಂಟ್‌ ತಯಾರಿಕೆಗೆ 1,400 ಕೋಟಿ ರೂ. ಹೂಡಿಕೆ ಮಾಡಲಿದೆ. ಅಷ್ಟೇ ಅಲ್ಲದೇ, 1,000 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ ಮತ್ತು ಕ್ಷಿಪಣಿ ವ್ಯವಸ್ಥೆ ಸಂಶೋಧನೆ, ಅಭಿವೃದ್ಧಿ ಮತ್ತು ವಿನ್ಯಾಸ ಘಟಕ ಸ್ಥಾಪಿಸುವ ಪ್ರಸ್ತಾವನೆಯೂ ಇದೆ.

     

  • ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಬಿಡುವುದಕ್ಕೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ (Karan Johar) ಕಾರಣ ಎಂದು ಮೊನ್ನೆಯಷ್ಟೇ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಇದಕ್ಕೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಧ್ವನಿಗೂಡಿಸಿದ್ದರು. ಈ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಕಂಗನಾ ಹಚ್ಚಿರುವ ಬೆಂಕಿ ಇನ್ನೂ ಉರಿಯುತ್ತಿರುವಾಗಲೇ ಬಾಲಿವುಡ್ ಗೆ ಬಂದಿಳಿದಿದ್ದಾರೆ ಪ್ರಿಯಾಂಕಾ ಚೋಪ್ರಾ.

    ಅಂಬಾನಿ (Ambani) ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೊದಲ ಬಾರಿಗೆ ಮಗಳ ಜೊತೆ ಆಗಮಿಸಿರುವ ಪ್ರಿಯಾಂಕಾ ಚೋಪ್ರಾಗೆ ಅಚ್ಚರಿಯ ಕ್ಷಣವೊಂದು ಎದುರಾಯಿತು. ಕಂಗನಾ ಯಾರು ಮೇಲೆ ಆರೋಪ ಮಾಡಿದ್ದರೋ, ಅವರೇ ಪ್ರಿಯಾಂಕಾಗೆ ಎದುರಾಗಿ ತಬ್ಬಿಕೊಂಡ ಘಟನೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರಣ್ ಜೋಹಾರ್ ಮತ್ತು ಪ್ರಿಯಾಂಕಾ ಪರಸ್ಪರ ತಬ್ಬಿಕೊಂಡು ಮತ್ತೊಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಈ ದೃಶ್ಯವನ್ನು ಕ್ಯಾಮೆರಾಗಳು ಕೂಡ ಅಚ್ಚರಿಯಿಂದಲೇ ಸೆರೆ ಹಿಡಿದಿವೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಅಲ್ಲದೇ, ಈ ದೃಶ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೆಲವರು ಕಂಗನಾ ರಣಾವತ್ ಅವರಿಗೆ ಕಾಲೆಳೆದಿದ್ದಾರೆ. ಈ ವಿಡಿಯೋ ಕುರಿತಾಗಿ ಈವರೆಗೂ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏನು ಹೇಳುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ.

    ನಿನ್ನೆ ನಡೆದ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಹಾಜರಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಸೇರಿದಂತೆ ಇಡೀ ಚಿತ್ರೋದ್ಯಮವೇ ಈ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಈ ಕಾರ್ಯಕ್ರಮದ ಸಲುವಾಗಿಯೇ ಪತಿ ಮತ್ತು ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ದರು.

  • ಅದಾನಿ, ಅಂಬಾನಿ, ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು: ಬಾಬಾ ರಾಮದೇವ್

    ಅದಾನಿ, ಅಂಬಾನಿ, ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು: ಬಾಬಾ ರಾಮದೇವ್

    ಪಣಜಿ: ಅದಾನಿ, ಅಂಬಾನಿ (Ambani), ಬಿರ್ಲಾಗಿಂತ ನನ್ನ ಸಮಯದ ಮೌಲ್ಯ ಹೆಚ್ಚು ಎಂದು ಬಾಬಾ ರಾಮ್‌ದೇವ್ (Ramdev) ಹೇಳಿದರು.

    ಗೋವಾದ ಪಣಜಿಯಲ್ಲಿ (Panaji) ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಸಮ್ಮುಖದಲ್ಲಿ ರಾಮ್‌ದೇವ್ ತಮ್ಮ ಸಹಾಯಕ ಆಚಾರ್ಯ ಬಾಲಕೃಷ್ಣ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

    ಕಾರ್ಪೊರೇಟ್‌ಗಳು ತಮ್ಮ ಶೇ. 99ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ, ಆದರೆ ನೋಡುವವರಿಗೆ ಸಮಯವು ಎಲ್ಲರ ಒಳಿತಿಗಾಗಿ ಎಂದು ಅನಿಸುತ್ತದೆ. ಆದರೆ ನನಗೆ ಇಲ್ಲಿದ್ದ ಮೂರು ದಿನಗಳು ಅಂಬಾನಿ ಮತ್ತು ಅದಾನಿಗಳಂತಹ ಬಿಲಿಯನೇರ್ ಕೈಗಾರಿಕೋದ್ಯಮಿಗಳ ಸಮಯಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದರು. ಇದನ್ನೂ ಓದಿ: ಅಮಿತ್‌ ಶಾ ಕೊಟ್ಟ ಟಾಸ್ಕ್‌ನಲ್ಲಿ ಕರ್ನಾಟಕ ಬಿಜೆಪಿ ಫೇಲ್‌

    ನಾನು ಹರಿದ್ವಾರದಿಂದ 3 ದಿನಗಳ ಕಾಲ ಇಲ್ಲಿಗೆ ಬಂದಿದ್ದೇನೆ. ನನ್ನ ಸಮಯದ ಮೌಲ್ಯವು ಅದಾನಿ, ಅಂಬಾನಿ, ಟಾಟಾ ಮತ್ತು ಬಿರ್ಲಾ ಅವರ ಸಮಯಕ್ಕಿಂತ ಹೆಚ್ಚು. ಕಾರ್ಪೊರೇಟ್‌ಗಳು ತಮ್ಮ ಸಮಯದ 99 ಪ್ರತಿಶತವನ್ನು ಸ್ವಹಿತಾಸಕ್ತಿಯಲ್ಲಿ ಕಳೆಯುತ್ತಾರೆ, ಆದರೆ ನೋಡುವವರ ಸಮಯ ಸಾಮಾನ್ಯವಾಗಿದೆ ಎಂದು ಹೇಳಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೆಜಾನ್‍ಗೆ 202 ಕೋಟಿ ರೂ. ದಂಡ ಹಾಕಿದ ಸ್ಪರ್ಧಾತ್ಮಕ ಆಯೋಗ

    ಅಮೆಜಾನ್‍ಗೆ 202 ಕೋಟಿ ರೂ. ದಂಡ ಹಾಕಿದ ಸ್ಪರ್ಧಾತ್ಮಕ ಆಯೋಗ

    ನವದೆಹಲಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಹೆಸರುವಾಸಿಯಾದ ಅಮೆಜಾನ್ ಮತ್ತು ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ರದ್ದುಗೊಳಿಸಿ, ಅಮೆಜಾನ್‍ಗೆ 202 ಕೋಟಿ ರೂ. ದಂಡ ವಿಧಿಸಿದೆ.

    ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 ಕೋಟಿ ರೂಪಾಯಿಯ ತನ್ನ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಯತ್ನಿಸಿತು. ಆಗ ಅಮೆಜಾನ್ ಇದ್ದಕ್ಕೆ ತಕರಾರು ಎತ್ತಿತ್ತು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!

    ಮಾರಾಟಕ್ಕೆ ಅಪಸ್ವರ ಎತ್ತಿದ್ದಕ್ಕೆ ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ದಾಖಲಿಸಿತ್ತು. ಇದೀಗ ದೂರನ್ನು ಪಲೀಶಿಸಿ ಸಿಸಿಐ 57 ಪುಟಗಳ ಆದೇಶವನ್ನು ಹೊರಡಿಸಿದೆ. ಜೊತೆಗೆ ಈ ಹಿಂದೆ 2019ರಲ್ಲಿ ಮಾಡಿದ ಡೀಲ್‍ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಹಾಗಾಗಿ ಅಲ್ಲಿಯ ವರೆಗೆ 2019ರಲ್ಲಿ ನೀಡಲಾಗಿರುವ ಅನುಮೋದನೆ ಸ್ಥಗಿತವಾಗಿರುತ್ತದೆ ಎಂದು ಆದೇಶಿಸಿದೆ. ಇದರಿಂದ ಅಮೆಜಾನ್‍ಗೆ ಹಿನ್ನಡೆ ಉಂಟಾಗಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಿಂದ 465 ದಿನಗಳವರೆಗೆ ವ್ಯಾಲಿಡಿಟಿ ಆಫರ್ ರಿಲೀಸ್

    ಅಮೆಜಾನ್ ವಾದ ಏನು?
    2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್ ಗ್ರೂಪ್‍ನಲ್ಲಿ ನಾವು 1,460 ಕೋಟಿ ಹೂಡಿಕೆ ಮಾಡಿದ್ದೇವೆ. ಒಪ್ಪಂದ ಪ್ರಕಾರ, ಫ್ಯೂಚರ್ ಸಮೂಹವು ತನ್ನ ಆಸ್ತಿಯನ್ನು ನಿಬರ್ಂಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್ ಸಹ ಸೇರಿಕೊಂಡಿದೆ. ಈ ಒಪ್ಪಂದ ನಡೆದಿದ್ದರೂ 2020ರ ಆಗಸ್ಟ್‍ನಲ್ಲಿ ಫ್ಯೂಚರ್ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು 2019ರಲ್ಲಿ ಫ್ಯೂಚರ್ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‍ನ ವಾದವಾಗಿದೆ.

    ಫ್ಯೂಚರ್ ಗ್ರೂಪ್ ಮತ್ತು ಅಮೆಜಾನ್ ನಡುವಿನ ಕಾನೂನು ಹೋರಾಟದಲ್ಲಿ ಫ್ಯೂಚರ್ ಗ್ರೂಪ್‍ಗೆ ಮುನ್ನಡೆ ಸಿಕ್ಕಿದ್ದು, ಅಮೆಜಾನ್‍ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಕಿರುವ ದಂಡದ ಬಗ್ಗೆ ಪ್ರಶ್ನೆ ಮಾಡುವ ಸಾಧ್ಯತೆ ಇದೆ.