Tag: ಅಂಬರೀಶ್ ಸ್ಮಾರಕ

  • ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

    ಅಂಬಿ ಸ್ಮಾರಕ ಲೋಕಾರ್ಪಣೆ, ಸುಮಲತಾ ಅಂಬರೀಶ್ ಕಣ್ಣೀರು

    ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಸ್ಮಾರಕ ಇಂದು (ಮಾ.27) ಕಂಠೀರವ ಸ್ಟುಡಿಯೋದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ಆಗಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ನಾಮಕರಣ ಮಾಡಿದ ಬಳಿಕ ಅಂಬಿ ಸ್ಮಾರಕ (Memorial) ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ.

    12 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ಅಂಬಿ ಸ್ಮಾರಸ ನಿರ್ಮಾಣವಾಗಿದೆ. ಸ್ಮಾರಕ ಬಳಿ 32 ಅಡಿಯ ಅಂಬಿ ಪ್ರತಿಮೆ ಕೂಡ ಉದ್ಘಾಟನೆ ಆಗಿದೆ. ಒಂದು ಎಕರೆ 37 ಗುಂಟೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಆಗಿದೆ. ಈ ವೇಳೆ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದಾರೆ.

    ಅಂಬರೀಶ್ ಅವರನ್ನು 10 ವರ್ಷಗಳಿಂದ ಪ್ರೀತಿಯಿಂದ ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಇದು ಅಂಬರೀಶ್ 50 ವರ್ಷ ಪೂರೈಸಿದ ವರ್ಷವಾಗಿದೆ. ಅಭಿಮಾನಿಗಳು ಈ ದಿನ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣ ಆಗಿದೆ. ನಾನು ಅಭಿಮಾನಿಗಳಿಗೆ ಹೇಳ್ತಾನೇ ಇದ್ದೆ. ಆ ದಿನ ಇಂದು ಬಂದಿದೆ ಎಂದು ಸುಮಲತಾ ಮಾತನಾಡಿದರು.

    ಈ ಸಂದರ್ಭದಲ್ಲಿ ನಾನು ಓರ್ವರನ್ನು ಸ್ಮರಿಸೋಕೆ ಇಷ್ಟಪಡ್ತೀನಿ ಅವರೇ ಮಾಜಿ ಸಿಎಂ ಯಡಿಯೂರಪ್ಪನವರು. ನಮ್ಮ ಬೇಡಿಗೆ ಅವರ ಮುಂದೆ ಇಟ್ಟಾಗ ಕೊಂಚವೂ ನಿಧಾನಿಸದೇ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟರು. 12 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿದೆ. ಅಂಬರೀಶ್ ಅವರು ಯಾವತ್ತೂ ತಮಗಾಗಿ ಏನು ಬೇಕು ಅಂತ ಬಯಸಿದವರಲ್ಲ. ಯಾರ ಬಳಿಯೂ ಕೈಚಾಚಿದವರಲ್ಲ. ಅವರದ್ದು ಕೊಟ್ಟ ಕೈ, ತಗೊಳ್ಳೊ ಕೈ ಅಲ್ಲ. ಅವರು ಮಂತ್ರಿ ಆಗಿದ್ದಾಗ ಸೈರನ್ ರೆಡ್ ಲೈಟ್ ಇರುವ ವೆಹಿಕಲ್ ಕಳಿಸಿದ್ದರು. ಇದನ್ನ ಮೊದಲು ಕಿತ್ತು ಬಿಸಾಕು ಅಂದಿದ್ದರು. ಇವತ್ತು ಇರುತ್ತೆ ನಾಳೆ ಇರಲ್ಲ, ಇದಕ್ಕೆಲ್ಲಾ ನಾನು ಅಡಿಕ್ಟ್ ಆಗಲ್ಲ ಅಂದಿದ್ದರು. ಎಲ್ಲರಿಗೂ ಅವರು ಇದ್ದಾಗ ಪ್ರೀತಿಸಿದ್ದೀರಿ. ನಿಮ್ಮ ಪ್ರೀತಿ ಒಂದೇ ಸಾಕು ಇನ್ನೇನು ಬೇಕಿಲ್ಲ ಎಂದು ಹೇಳ್ತಿದ್ದವರು. ಅಂಬರೀಶ್ ಎಲ್ಲೇ ಇದ್ರೂ ಅವರಿಗೆ ಈಗ ಖುಷಿಯಾಗುತ್ತೆ. ಅವರು ಎಲ್ಲರ ಪ್ರೀತಿ ಪಡೆದಿದ್ದರು. ಅವರು ನಿಜಕ್ಕೂ ದೇವರ ಮಗ ಎಂದು ಸುಮಲತಾ ಕಣ್ಣೀರಿಟ್ಟರು.

  • ಹೆಚ್‍ಡಿಕೆ V/s ಸುಮಲತಾ – ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

    ಹೆಚ್‍ಡಿಕೆ V/s ಸುಮಲತಾ – ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

    ಕಲಬುರಗಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ನಡುವಿನ ಕದನದ ಕುರಿತು ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದರು. ದಿ.ಅಂಬರೀಶ್ ಅವರ ಸ್ಮಾರಕ ಆಗುವ ವೇಳೆ ನನ್ನ ಕರ್ತವ್ಯ ಮಾಡಿದ್ದೇನೆ. ಆ ಕೆಲಸ ನನಗೆ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕುಮಾರಸ್ವಾಮಿ ಮತ್ತು ಸುಮಲತಾ ಅವರು ಈಗ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಅಣ್ಣ ತಮ್ಮರಂತೆ ಬದುಕೋದನ್ನ ಕಲಿಯಬೇಕಿದೆ. ಮಂಡ್ಯ ಸಹ ರಾಜ್ಯದ ಒಂದು ಭಾಗ. ಹಾಗಾಗಿ ಅಲ್ಲಿಯ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಇಬ್ಬರಿಗೂ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಇಂದು ಬೆಳಗ್ಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿಕೆ ಖಂಡಿಸಿ, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಕ್‍ಲೈನ್ ನಿವಾಸದ ಮುಂದೆ ಸೇರಿದ್ದ ಜೆಡಿಎಸ್ ಕಾರ್ಯಕರ್ತರು, ರಾಕ್‍ಲೈನ್ ವೆಂಕಟೇಶ್ ಬಹಿರಂಗವಾಗಿ ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ:  ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

    ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ರಾಕ್‍ಲೈನ್ ವೆಂಕಟೇಶ್, ನಾನು ಯಾರಿಗೂ ನೋವುಂಟು ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ನೋವು ಉಂಟಾಗುವ ಮಾತುಗಳನ್ನು ಆಡಿಲ್ಲ. ಹಾಗಾಗಿ ನಾನ್ಯಾಕೆ ಕ್ಷಮೆ ಕೇಳಬೇಕೆಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ

  • ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ

    ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ

    – ಸರ್ಕಾರದಿಂದ 1 ಎಕರೆ 34 ಗುಂಟೆ ಜಾಗ
    – 5 ಕೋಟಿ ರೂ. ಬಜೆಟ್‍ನಲ್ಲಿ ನಿಗದಿ

    ಬೆಂಗಳೂರು: ಕಂಠೀರವ ಸ್ಟುಡಿಯೋ ಆವರಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಕುರಿತು ಸಭೆ ಮಾಡಲಾಗಿದೆ. ಸಭೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲು ಸಿಎಂ ಅನುಮತಿ ನೀಡಿದ್ದಾರೆ. ಸ್ಮಾರಕಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗ ಗುರುತಿಸಲಾಗಿದ್ದು, ರಾಜ್ಯ ಸರ್ಕಾರವು 5 ಕೋಟಿ ರೂ. ಒದಗಿಸಲಿದೆ. ಶೀಘ್ರವೇ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಸೂಚನೆ ನೀಡಿದರು.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ, ಅಂಬರೀಶ್ ಅವರ ಸ್ಮಾರಕಕ್ಕೆ 1 ಎಕರೆ 34 ಗುಂಟೆ ಜಮೀನು ಮಂಜೂರು ಆಗಿದೆ. ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಇರುವ ಜಾಗದಲ್ಲೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸರ್ಕಾರದಿಂದ 5 ಕೋಟಿ ರೂ. ಬಜೆಟ್ ನಲ್ಲಿ ನಿಗದಿ ಮಾಡುವ ಭರವಸೆವನ್ನು ಕೊಟ್ಟಿದ್ದು, ಆದಷ್ಟು ಬೇಗ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಸಿಎಂ ಹೇಳಿದ್ದಾರೆ ಎಂದರು.

    ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಕುರಿತು ಸಭೆಯಲ್ಲಿ ಸಭೆಯಲ್ಲಿ ಸಂಸದೆ ಸುಮಲತಾ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಭಿಷೇಕ್, ಹಿರಿಯ ಹಾಸ್ಯ ನಟ ದೊಡ್ಡಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.