Tag: ಅಂಬಟಿ ರಾಯುಡು

  • ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

    ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

    ನವದೆಹಲಿ: ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವುದು ತನಗೆ ತೀವ್ರ ನೋವುಂಟು ಮಾಡಿದ್ದು, ನಾನು ಇಂತಹದ್ದೇ ನೋವನ್ನು ಅನುಭವಿಸಿದ್ದೇನೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

    ಕಳೆದ ವರ್ಷ ರಾಯುಡು ಉತ್ತಮವಾಗಿ ಆಡಿದ್ದು, ನಾಯಕ ವಿರಾಟ್ ಕೊಹ್ಲಿ ಕೂಡ ರಾಯುಡು ಆಯ್ಕೆಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೆ ಅಚ್ಚರಿ ರೀತಿ ಎಂಬಂತೆ ರಾಯುಡರನ್ನ ಈ ಬಾರಿ ಕೈ ಬಿಡಲಾಗಿತ್ತು.

    ಟೀಂ ಇಂಡಿಯಾಗೆ ಆಯ್ಕೆ ಆಗದ ದೆಹಲಿ ಆಟಗಾರ ಪಂತ್ ಅವರಿಗಿಂತಲೂ ರಾಯುಡು ಆಯ್ಕೆ ಆಗದಿರುವುದು ನೋವು ನೀಡಿದೆ. 33 ವರ್ಷದ ರಾಯುಡು 47ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ ಆಟಗಾರರನ್ನು ಕೈ ಬಿಡಲಾಗಿದೆ. ಆಯ್ಕೆ ಸಮಿತಿ ಮಾಡಿದ ಎಲ್ಲಾ ತೀರ್ಮಾನಗಳಿಗಿಂತ ಇದು ಹೆಚ್ಚು ನೋವು ನೀಡಿದೆ ಎಂದಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

    2007 ರಲ್ಲಿ ನನಗೂ ಇದೇ ರೀತಿ ನಡೆದಿತ್ತು. ವಿಶ್ವಕಪ್ ಆಡುವುದು ಪ್ರತಿ ಆಟಗಾರನ ಕನಸಾಗಿರುತ್ತದೆ. ಇಂತಹ ಕನಸು ನನಸು ಆಗದಿದ್ದರೆ ಎಷ್ಟು ನೋವಾಗುತ್ತದೆ ಎಂದು ನನಗೆ ತಿಳಿದಿದೆ. ಸದ್ಯ ಟೆಸ್ಟ್ ನಲ್ಲಿ ರಾಯುಡು ಆಡುತ್ತಿಲ್ಲ. ಆದರೆ ಆಯ್ಕೆ ಸಮಿತಿಯಲ್ಲಿ ರಿಷಬ್ ಪಂತ್ ಆಯ್ಕೆ ಮಾಡದಿರುವುದು ದೊಡ್ಡ ವಿಚಾರವಲ್ಲ. ಪಂತ್ ಯುವ ಆಟಗಾರರ ಆಗಿರುವುದರಿಂದ ಮತ್ತಷ್ಟು ಅವಕಾಶ ಪಡೆಯಬಹುದು. ಕಾರ್ತಿಕ್ ಆಯ್ಕೆ ಉತ್ತಮವಾದರೂ ಸಂಜು ಸ್ಯಾಮ್ಸನ್ ಆಯ್ಕೆ ಆಗಿದ್ದರೆ ಅತ್ಯುತ್ತಮ ಆಗುತಿತ್ತು ಎಂದು ತಿಳಿಸಿದ್ದಾರೆ.

  • ಪ್ರಥಮ ದರ್ಜೆ ಕ್ರಿಕೆಟ್‍ಗೆ ರಾಯುಡು ವಿದಾಯ

    ಪ್ರಥಮ ದರ್ಜೆ ಕ್ರಿಕೆಟ್‍ಗೆ ರಾಯುಡು ವಿದಾಯ

    ಮುಂಬೈ: ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು ಶನಿವಾರ ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

    ಆಂಧ್ರಪ್ರದೇಶದ ಗುಂಟೂರು ಮೂಲದವರಾದ ರಾಯುಡು ತಮ್ಮ 33ನೇ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಹೇಳುವ ಮೂಲಕ ಸೀಮಿತ ಓವರ್‍ಗಳ ಪಂದ್ಯಗಳತ್ತ ಗಮನ ಹರಿಸಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆ, ರಾಯುಡು ರಣಜಿ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸದೆ, ಏಕದಿನ ಮತ್ತು ಟಿ20 ಟೂರ್ನಿಗಳಲ್ಲಿ ಮಾತ್ರ ಆಡಲಿದ್ದಾರೆ ಎಂದು ತಿಳಿಸಿದೆ.

    ಸೀಮಿತ ಓವರಗಳ ಕ್ರಿಕೆಟ್ ಮೇಲೆ ಹೆಚ್ಚು ಗಮನ ನೀಡಲು ಈ ನಿರ್ಣಯ ಕೈಗೊಂಡಿದ್ದು, ನನಗೆ ಬೆಂಬಲ ನೀಡುತ್ತಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐಗೆ ಆಭಾರಿಯಾಗಿದ್ದೇನೆ ಎಂದು ರಾಯುಡು ತಿಳಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಾಯುಡು ಆಟವನ್ನು ಮೆಚ್ಚಿಕೊಂಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 2019 ರ ವಿಶ್ವಕಪ್ ಗೆ ತಂಡದ ಮಧ್ಯಮ ಕ್ರಮಾಂಕದ ಸ್ಥಾನವನ್ನು ರಾಯುಡು ಉತ್ತಮವಾಗಿ ನಿರ್ವಹಣೆ ಮಾಡಬಲ್ಲರು ಎಂದು ಹೇಳುವ ಮೂಲಕ ರಾಯುಡು ಪರ ಬ್ಯಾಟ್ ಬೀಸಿದ್ದರು.

    2018 ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರಾಯುಡು ಉತ್ತಮ ಪ್ರದರ್ಶನವನ್ನು ನೀಡಿದ್ದು, 43.00 ಸರಾಸರಿಯಲ್ಲಿ 602 ರನ್ ಗಳಿಸಿದ್ದರು. ಆದರೆ ಯೋಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದ ರಾಯುಡು ಬಳಿಕ ಇಂಗ್ಲೆಂಡ್ ಟೂರ್ನಿಯಿಂದ ಹೊರ ಉಳಿದಿದ್ದರು. ಆದರೆ ಏಷ್ಯಾಕಪ್‍ಗೆ ಕಮ್‍ಬ್ಯಾಕ್ ಮಾಡುವ ಮೂಲಕ ಟೂರ್ನಿಯಲ್ಲಿ 6 ಇನ್ನಿಂಗ್ಸ್ ಗಳಲ್ಲಿ 43.75 ಸರಾಸರಿಯಲ್ಲಿ 175 ರನ್ ಗಳಿಸಿ ಮಿಂಚಿದ್ದರು. ಅಲ್ಲದೇ ವಿಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಒಂದು ಶತಕ, ಅರ್ಧ ಶತಕ ಬಾರಿಸಿದ್ದರು.

    ರಾಯುಡು ಇದುವರೆಗೂ 97 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡಿದ್ದು, 16 ಶತಕ, 34 ಅರ್ಧಶತಕಗಳೊಂದಿಗೆ 6,151 ರನ್ ಸಿಡಿಸಿದ್ದಾರೆ. ಲೀಸ್ಟ್ `ಎ’ನಲ್ಲಿ 150 ಪಂದ್ಯಗಳನ್ನು ಆಡಿದ್ದು, 05 ಶತಕ, 36 ಅರ್ಧಶತಕಗಳೊಂದಿಗೆ 4,856 ರನ್ ಗಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬಟಿ ರಾಯುಡು ಪರ ಬ್ಯಾಟ್ ಬೀಸಿದ ಕ್ಯಾಪ್ಟನ್ ಕೊಹ್ಲಿ

    ಅಂಬಟಿ ರಾಯುಡು ಪರ ಬ್ಯಾಟ್ ಬೀಸಿದ ಕ್ಯಾಪ್ಟನ್ ಕೊಹ್ಲಿ

    ಮುಂಬೈ: 2019ರ ವಿಶ್ವಕಪ್‍ಗೆ ಉತ್ತಮ ತಂಡದ ಸಿದ್ಧತೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಅಂಬಟಿ ರಾಯುಡು ಅವರ ಸ್ಥಿರ ಪ್ರದರ್ಶನ ಪರಿಹಾರ ನೀಡಬಲ್ಲರು ಎಂದು ಹೇಳಿದ್ದಾರೆ. ಈ ಮೂಲಕ ರಾಯುಡು ಪರ ಬ್ಯಾಟ್ ಬೀಸಿದ್ದಾರೆ.

    ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದ್ದು, ಆದರೆ 4ನೇ ಸ್ಥಾನಕ್ಕೆ ಆಟಗಾರನ ಆಯ್ಕೆ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನದಲ್ಲಿ ಆಡಲು ರಾಯುಡು ಆಡಲು ಉತ್ತಮ ಆಟಗಾರನಾಗಿದ್ದು, ಆಯ್ಕೆ ಸಮಿತಿಯೂ ಕೂಡ ಇದೇ ಅಭಿಪ್ರಾಯ ಹೊಂದಿದೆ ಎಂದು ತಿಳಿಸಿದ್ದಾರೆ.

    ವಿಶ್ವಕಪ್ ಗುರಿಯಾಗಿಸಿ ತಂಡದ ಸಿದ್ದತೆಯಲ್ಲಿರುವ ನಮಗೆ 4ನೇ ಕ್ರಮಾಂಕದ ಬ್ಯಾಟಿಂಗ್ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನ ತುಂಬಲು ನಾವು ಹಲವು ಆಟಗಾರರಿಗೆ ಅವಕಾಶ ನೀಡಿದ್ದೇವೆ. ಆದರೆ ಆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಆದರೆ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ರಾಯುಡು ಪ್ರದರ್ಶನ ಉತ್ತಮವಾಗಿದ್ದು, ವಿಶ್ವಕಪ್ ವೇಳೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ವಿಶ್ವಕಪ್ ವೇಳೆಗೆ ಉಳಿದಿರುವ 18 ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.

    ರಾಯುಡು ಅನುಭವಿ ಆಟಗಾರರಾಗಿದ್ದು, ಐಪಿಎಲ್ ಸೇರಿದಂತೆ ಸಾಕಷ್ಟು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಪರ ಏಕದಿನ ಮಾದರಿಯಲ್ಲಿ ಉತ್ತಮ ದಾಖಲೆಯನ್ನ ಹೊಂದಿದ್ದಾರೆ. ಶೀಘ್ರವೇ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ಧಗೊಳಿಸುವುದಾಗಿ ತಿಳಿಸಿದರು.

    2018 ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರಾಯುಡು ಉತ್ತಮ ಪ್ರದರ್ಶನವನ್ನು ನೀಡಿದ್ದು, 43.00 ಸರಾಸರಿಯಲ್ಲಿ 602 ರನ್ ಗಳಿಸಿದ್ದರು. ಆದರೆ ಯೋಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದ ರಾಯುಡು ಬಳಿಕ ಇಂಗ್ಲೆಂಡ್ ಟೂರ್ನಿಯಿಂದ ಹೊರ ಉಳಿದಿದ್ದರು. ಆದರೆ ಏಷ್ಯಾಕಪ್‍ಗೆ ಕಮ್‍ಬ್ಯಾಕ್ ಮಾಡುವ ಮೂಲಕ ಟೂರ್ನಿಯಲ್ಲಿ 6 ಇನ್ನಿಂಗ್ಸ್ ಗಳಲ್ಲಿ 43.75 ಸರಾಸರಿಯಲ್ಲಿ 175 ರನ್ ಗಳಿಸಿ ಮಿಂಚಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಟೂರ್ನಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಸಿದ್ಧತೆ ನಡೆಸಿದ್ದಾರೆ. ಇತ್ತ ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ತಂಡ ಪ್ರಕಟವಾಗಿದ್ದು ಯುವ ಆಟಗಾರ ರಿಷಬ್ ಪಂತ್ 12ರ ಬಳಗದಲ್ಲಿ ಸ್ಥಾನ ಪಡೆದಿದ್ದು, ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಗ್ಲೆಂಡ್ ಏಕದಿನ ಸರಣಿಗೆ ಸ್ಥಾನ ಪಡೆದ ಸುರೇಶ್ ರೈನಾ

    ಇಂಗ್ಲೆಂಡ್ ಏಕದಿನ ಸರಣಿಗೆ ಸ್ಥಾನ ಪಡೆದ ಸುರೇಶ್ ರೈನಾ

    ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದ ಟೂರ್ನಿಗೆ ಅಂಬಟಿ ರಾಯುಡು ಸ್ಥಾನದಲ್ಲಿ ಸುರೇಶ್ ರೈನಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

    ಬೆಂಗಳೂರಿನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅಂಬಟಿ ರಾಯುಡು ಫೇಲ್ ಆಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಸದ್ಯ ರಾಯುಡು ಸ್ಥಾನಕ್ಕೆ ರೈನಾ ಕಮ್ ಬ್ಯಾಕ್ ಮಾಡಿದ್ದಾರೆ.

    32 ವರ್ಷದ ಅಂಬಟಿ ರಾಯುಡು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೇ ಬಿಸಿಸಿಐ ಆಯ್ಕೆ ಸಮಿತಿ ರಾಯುಡುರನ್ನು ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆ ಮಾಡಿತ್ತು. ಆದರೆ ಶುಕ್ರವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 43ರ ಸರಾಸರಿಯಲ್ಲಿ 602 ರನ್ ಗಳಿಸಿದ್ದ ರಾಯುಡು ಉತ್ತಮ ಫಾರ್ಮ್ ಹೊಂದಿದ್ದರು.

    ಕಳೆದ ಬಾರಿ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ರೈನಾ ಈ ಬಾರಿ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿ ಮತ್ತೆ ಟೀಂ ಇಂಡಿಯಾ ಕಮ್ ಮಾಡಲು ಯಶಸ್ವಿ ಆಗಿದ್ದಾರೆ. 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದ ರೈನಾ ಬಳಿಕ ತಂಡದಲ್ಲಿ ಸ್ಥಾನಗಳಿಸಲು ವಿಫಲರಾಗಿದ್ದರು. ಆದರೆ ಟಿ20 ಮಾದರಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿ ಜುಲೈ 12 ರಂದು ಆರಂಭವಾಗಲಿದ್ದು, ಒಟ್ಟು ಮೂರು ಪಂದ್ಯಗಳ ಸರಣಿ ಜುಲೈ 17 ರಂದು ಮುಕ್ತಾಯಗೊಳ್ಳಲಿದೆ.

    ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸುರೇಶ್ ರೈನಾ, ಎಂಎಸ್ ಧೋನಿ (ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಲ್, ಕುಲ್ ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಸಿದ್ದಾರ್ಥ್ ಕೌಲ್, ಉಮೇಶ್ ಯಾದವ್.

  • ಸ್ಫೋಟಕ ಬ್ಯಾಟಿಂಗ್ ಹಿಂದಿರುವ ರಹಸ್ಯವನ್ನು ರಿವೀಲ್ ಮಾಡಿದ್ರು ರಾಯುಡು!

    ಸ್ಫೋಟಕ ಬ್ಯಾಟಿಂಗ್ ಹಿಂದಿರುವ ರಹಸ್ಯವನ್ನು ರಿವೀಲ್ ಮಾಡಿದ್ರು ರಾಯುಡು!

    ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಚಾಂಪಿಯನ್ ಆಗಲು ಮುಖ್ಯ ಕಾರಣ ಆ ತಂಡಕ್ಕಿದ್ದ ಬ್ಯಾಟಿಂಗ್ ಬಲ. ಸ್ಟಾರ್ ವಿದೇಶಿ ಆಟಗಾರರ ಜೊತೆ ಸ್ಥಳೀಯ ಆಟಗಾರರು ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸಿದ್ದರು. ಪವರ್ ಪ್ಲೇನಲ್ಲಿ ತಂಡ ಹೆಚ್ಚಿನ ಮೊತ್ತ ದಾಖಲಿಸಲು ನೆರವಾಗಿದ್ದು ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್.

    16 ಪಂದ್ಯಗಳಿಂದ 43ರ ಸರಾಸರಿಯಲ್ಲಿ 602 ರನ್‍ಗಳಿಸಿದ್ದ ರಾಯುಡು, ಟೂರ್ನಿಯಲ್ಲಿ ಅತೀಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದರು. ಆದರೆ ತನ್ನ ಸ್ಫೋಟಕ ಬ್ಯಾಟಿಂಗ್‍ನ ಹಿಂದಿನ ರಹಸ್ಯವನ್ನು ಸ್ವತಃ ಅಂಬಟಿ ರಾಯುಡು ಇದೀಗ ಬಹಿರಂಗಗೊಳಿಸಿದ್ದಾರೆ. ತಾನು ಐಪಿಎಲ್‍ನಲ್ಲಿ ಶ್ರೇಷ್ಟ ಮಟ್ಟದ ಪ್ರದರ್ಶನ ನೀಡುವಲ್ಲಿ ನೆರವಾಗಿದ್ದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ಎಂದು ರಾಯುಡು ಹೇಳಿದ್ದಾರೆ.

    ಹರ್ಭಜನ್ ನಡೆಸಿಕೊಡುವ ‘ಕ್ವಿಕ್‍ಹೀಲ್ ಭಜ್ಜಿ ಬ್ಲಾಸ್ಟ್ ಶೋ’ ಕಾರ್ಯಕ್ರಮದಲ್ಲಿ ಮನಸ್ಸು ಬಿಚ್ಚಿ ಮಾತನಾಡಿರುವ ರಾಯುಡು, ಪ್ರತೀ ವರ್ಷವೂ ನಾನು ಕೊಹ್ಲಿಯಿಂದ ಬ್ಯಾಟ್ ಕೇಳಿ ಪಡೆಯುತ್ತಿದ್ದೇನೆ. ಈ ಬ್ಯಾಟ್‍ನಲ್ಲಿ ಆತ್ಮವಿಶ್ವಾಸದಿಂದ ದೊಡ್ಡ ಹೊಡೆತಗಳನ್ನು ಬಾರಿಸುತ್ತೇನೆ ಎಂದು ರಾಯುಡು ಹೇಳಿದ್ದಾರೆ.

    ಕಳೆದ 8 ಆವೃತಿಗಳಲ್ಲಿ ಮುಂಬೈ ಪರ ಬ್ಯಾಟ್ ಬೀಸಿದ್ದ 32 ವರ್ಷದ ರಾಯುಡುರನ್ನು ಈ ಬಾರಿ ಚೆನ್ನೈ, 2.2 ಕೋಟಿ ರೂ. ಕೊಟ್ಟು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶ ಪಡೆದಿದ್ದ ರಾಯುಡು, ತಂಡದ ಪರ ಟಾಪ್ ಸ್ಕೋರರ್ ಆಗಿ ಮಿಂಚಿದ್ದರು. ಒಟ್ಟು 53 ಬೌಂಡರಿ ಹಾಗೂ 34 ಸಿಕ್ಸರ್ ಸಿಡಿಸಿದ್ದ ರಾಯುಡು, ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. 2010ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಯುಡು ಒಟ್ಟು 2416 ರನ್‍ಗಳಿಸಿದ್ದರು.