Tag: ಅಂಧ ಸೋದರಿಯರು

  • ಅಂಧ ಸೋದರಿಯರ ‘ಜಗ್ಗೇಶ್ ಪರಿಮಳ ನಿಲಯ’ ನೋಡಿ

    ಅಂಧ ಸೋದರಿಯರ ‘ಜಗ್ಗೇಶ್ ಪರಿಮಳ ನಿಲಯ’ ನೋಡಿ

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿನಂತೆ ಒಂದು ತಿಂಗಳಲ್ಲಿ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಆ ಅಂಧ ಸೋದರಿಯರ ಮನೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು..ಜಗ್ಗೇಶ್ ಅಭಿಮಾನಿಗಳು ಅಂಧ ಸಹೋದರಿಗೆ ಕಟ್ಟಿಸಿರುವ ಮನೆಯ ಫೋಟೋವನ್ನು ಟ್ವಿಟ್ಟರ್ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮನೆ ಕಟ್ಟಿಸಿದ್ದಕ್ಕೆ ಜಗ್ಗೇಶ್ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ವಿಶೇಷವೆಂದರೆ ಅಂಧ ಸಹೋದರಿಯರಿಗೆ ಕಟ್ಟಿಸಿರುವ ಮನೆಯ ಮೇಲೆ ‘ಜಗ್ಗೇಶ್ ಪರಿಮಳ ನಿಲಯ’ ಎಂದು ಬರೆಯಲಾಗಿದೆ. ಇದನ್ನೂ ಓದಿ: 1 ತಿಂಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಕಾರಣ ಯಾರೆಂದು ತಿಳಿಸಿದ ಜಗ್ಗೇಶ್

    ಮನೆಗೆ ಚಿಕ್ಕದಾಗಿದ್ದರೂ ತುಂಬಾ ಚೆನ್ನಾಗಿದೆ. ಮನೆಯ ಗೋಡೆಯ ಮೇಲೆ ಸಂಗೀತಾಕ್ಷರದ ಸಂಕೇತಗಳನ್ನು ಬಿಡಿಸಲಾಗಿದೆ. ಜೊತೆಗೆ ಕರ್ನಾಟಕ ಬಾವುಟದ ಹಳದಿ ಮತ್ತು ಕೆಂಪು ಬಣ್ಣವನ್ನು ಮನೆಯ ಮೇಲ್ಭಾದಲ್ಲಿ ಪೇಂಟ್ ಮಾಡಲಾಗಿದೆ. ಇದೇ ತಿಂಗಳ 12 ರಂದು ಈ ಮನೆಯ ಗೃಹ ಪ್ರವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಗ್ಗೇಶ್ ಮತ್ತು ಪತ್ನಿ ಪರಿಮಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದು, ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ ಒಂದು ತಿಂಗಳಲ್ಲೇ ಮನೆ ಕಟ್ಟುವ ಮೂಲಕ ಅವರಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಂಡಿದ್ದಾರೆ.

    ಅಂಧ ಸೋದರಿಯರು:
    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯರ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು. ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ದಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು.