Tag: ಅಂಧ ಸಹೋದರಿಯರು

  • ಅಪ್ಪು ಸಾವಿನಿಂದ ಲೋಕ ಕಾಣುವ ಕನಸು ಮರೆತ ಅಂಧ ಸಹೋದರಿಯರು

    ಅಪ್ಪು ಸಾವಿನಿಂದ ಲೋಕ ಕಾಣುವ ಕನಸು ಮರೆತ ಅಂಧ ಸಹೋದರಿಯರು

    ಕೊಪ್ಪಳ: ಬಡ ಕುಟುಂಬದ ಅಭಿಮಾನಕ್ಕೆ ಸೋತಿದ್ದ ಅಪ್ಪು, ಅವರನ್ನು ಭೇಟಿ ಮಾಡಿ ಕುಟುಂಬದ ಮೂವರಿಗೆ ಕಣ್ಣಿಲ್ಲ ಎಂದು ಗೊತ್ತಾಗಿ ಮರುಗಿದ್ದರು. ಅದಕ್ಕೆ ಅವರಿಗೆ ದೃಷ್ಟಿ ಕೊಡಿಸುವುದಾಗಿ ಭರವಸೆ ನೀಡಿದ್ರು. ಈ ಹಿನ್ನೆಲೆ ಒಂದು ವರ್ಷದಿಂದ ಪುನೀತ್ ಆಗಮನಕ್ಕೆ ಕಾದಿದ್ದ ಆ ಅಂಧ ಸಹೋದರಿಯರು ಈಗ ಕಂಗಾಲಾಗಿದ್ದಾರೆ.

    ಪುನೀತ್ ಸಾವು ಅರಗಿಸಿಕೊಳ್ಳದೇ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳು ಅಳುತ್ತಿದ್ದಾರೆ. ಆದರೆ ಈ ಸಹೋದರಿಯರ ನೋವಿನ ಹಿಂದಿನ ಕಥೆಯೇ ಬೇರೆ ಇದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮಲ್ಲಪೂರ ಗ್ರಾಮದ ಹನುಮಂತಪ್ಪ ಹೊಸಳ್ಳಿ ಅವರ ಇಡೀ ಕುಟುಂಬ ಡಾ.ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿಗಳಾಗಿದ್ದಾರೆ. ಹನುಮಂತಪ್ಪನ ಐವರು ಮಕ್ಕಳ ಪೈಕಿ ಮೂವರು ಹುಟ್ಟು ಕುರುಡರು. ಕುರುಡರ ಅಂದಾಭಿಮಾನಕ್ಕೆ ಮೆಚ್ಚಿದ್ದ ಪುನೀತ್ ರಾಜ್‍ಕುಮಾರ್, ಇವರ ಸ್ವಗ್ರಾಮದ ಬಳಿ ಚಿತ್ರೀಕರಣಕ್ಕೆ ಬಂದಾಗ ಕಣ್ಣಿಲ್ಲದ ಪ್ರಮೀಳಾ, ರೇಣುಕಾ ಮತ್ತು ಶಾರದಮ್ಮರನ್ನು ಚಿತ್ರೀಕರಣದ ಸ್ಥಳಕ್ಕೆ ಕರೆಸಿಕೊಂಡು ಮಾತನಾಡಿಸಿದ್ದರು.  ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಆಗ ಈ ಕುಟುಂಬದ ಮೂವರಿಗೆ ಕಣ್ಣಿಲ್ಲ ಎಂಬುದು ಗೊತ್ತಾಗಿ ಮರಗಿದ ಅಪ್ಪು ಇವರಿಗೆ ಕಣ್ಣು ಕೊಡಿಸುವ ಭರವಸೆ ನೀಡುವುದಾಗಿ ಹೇಳಿದ್ದರಂತೆ. ಅಂದಿನಿಂದ ತಮಗೆ ಅಪ್ಪು ಕಣ್ಣು ಕೊಡಿಸ್ತಾರೆ ಎಂಬ ನಿರೀಕ್ಷೆಯಲ್ಲೇ ಇದ್ದ ಈ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕಳೆದ ವರ್ಷ 2020ರ ಅಕ್ಟೋಬರ್ ನಲ್ಲಿ ಅಂಜನಾದ್ರಿ ಸುತ್ತಮುತ್ತ ಅಪ್ಪು ಅವರ ‘ಜೇಮ್ಸ್’ ಚಿತ್ರದ ಶೂಟಿಂಗ್ ನಡೆದಿತ್ತು. ಈ ವೇಳೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದ ಅಪ್ಪು, ಒಂದೇ ಕುಟುಂಬದ ಈ ಮೂವರು ಅಂಧ ಸಹೋದರಿಯರ ಜೊತೆ ಊಟ ಮಾಡಿ ಇವರ ಆಸೆ ಈಡೇರಿಸಿದ್ದರು.

    ಜೊತೆಗೆ ಇವರು ಹುಟ್ಟು ಕುರುಡರು ಎಂದು ಗೊತ್ತಾಗಿ ಭಾವುಕರಾದ ಅಪ್ಪು, ಅವರ ಜೊತೆ ಊಟ ಮಾಡಿದ್ದರು. ಅಷ್ಟೇ ಅಲ್ಲದೇ ಈ ಮೂವರಿಗೂ ಕಣ್ಣು ಕೊಡಿಸುವ ಜೊತೆಗೆ, ಆರ್ಥಿಕ ಸಹಾಯ ಮಾಡಿ ಬದುಕು ಕಟ್ಟಿ ಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಕಳೆದ 1 ವರ್ಷದಿಂದ ಅಪ್ಪು ಬರುವಿಕೆಗಾಗಿ ಕಾಲ ಕಳೆಯುತ್ತಿರುವ ಈ ಕುಟುಂಬಕ್ಕೆ ಅವರ ಸಾವು ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

    ಪುನೀತ್ ಭೇಟಿ ಮಾಡಿದ ಸಹೋದರಿಯರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಾತ್ರ ತಮಗೆ ಮತ್ತಾರು ಕಣ್ಣು ಕೊಡಬಲ್ಲರು ಎಂಬ ನೋವಿನಲ್ಲೇ ಕಾಲ ಕಳೆಯುತ್ತಿದ್ದು, ಇದು ವಿಪರ್ಯಾಸವಾಗಿದೆ.

  • 35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಅಂಧ ಗಾನ ಕೋಗಿಲೆಗಳ ಚೆಂದದ ಮನೆ

    35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಅಂಧ ಗಾನ ಕೋಗಿಲೆಗಳ ಚೆಂದದ ಮನೆ

    ತುಮಕೂರು: ಸುಮಧುರ ಕಂಠದಿಂದಲೇ ಖ್ಯಾತಿಗಳಿಸಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಅಂಧ ಗಾನ ಕೋಗಿಲೆಗಳಿಗೆ ಚೆಂದದ ಮನೆಯ ಭಾಗ್ಯ ಒದಗಿಬಂದಿದೆ. ಕೇವಲ 35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ಅಂಧ ಸಹೋದರಿಯರಿಗಾಗಿ ಮನೆಯನ್ನು ನಿರ್ಮಿಸಿಕೊಡಲಾಗಿದೆ.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ಬಳಿಕ ಅಂಧ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ನವರಸನಾಯಕ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳ ತಂಡ, ಫ್ರೆಂಡ್ಸ್ ಗ್ರೂಪ್ ಸಂಘದಿಂದ ಮನೆ ನಿರ್ಮಾಣವಾಗಿದೆ. ಇಂದು ಆ ಪುಟ್ಟ ಮನೆಯ ಗೃಹ ಪ್ರವೇಶ ನೇರವೇರಿದ್ದು, ಜಗ್ಗೇಶ್ ದಂಪತಿ ಈ ಶುಭಕಾರ್ಯದಲ್ಲಿ ಭಾಗಿಯಾಗಿ ಮನೆಯ ಉದ್ಘಾಟನೆ ಮಾಡಿದರು.

    ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿ ಗ್ರಾಮದ ಗಾನ ಕೋಗಿಲೆಗಳಾದ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರಿಗೆ ಜಗ್ಗೇಶ್ ಅವರು ನಿರ್ಮಿಸಿಕೊಟ್ಟಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಇರಲು ಮನೆಯಿಲ್ಲದೆ ಈ ಅಂಧ ಸಹೋದರಿಯರ ಕುಟುಂಬಕ್ಕೆ ಜಗ್ಗೇಶ್‍ರವರ ಸೂಚನೆಯಂತೆ ಕೊರಟಗೆರೆಯ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಡಿ.ವಿ ಹಳ್ಳಿ ಗ್ರಾಮದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ.

    ಈ ಮನೆ ನಿರ್ಮಾಣದ ಜವಾಬ್ದಾರಿಯನ್ನ ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವಹಿಸಿಕೊಂಡಿತ್ತು. ಅಂದ ಗಾಯಕಿಯರ ಹಳೆಯ ಮನೆಯನ್ನು ಕೆಡವಿ 9 ಚದರ ವಿಸ್ತೀರ್ಣದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಲಾಗಿದೆ. ಮನೆಯಲ್ಲಿ ಅಡುಗೆ ಮನೆ, ಒಂದು ಕೊಠಡಿ, ಸುಸಜ್ಜಿತವಾದ ಶೌಚಾಲಯ ಒಳಗೊಂಡಿದೆ. ಕೇವಲ 35 ದಿನದಲ್ಲಿ ಮನೆ ನಿರ್ಮಾಣವಾಗಿದೆ.

    ತಮ್ಮ ಕಷ್ಟಕ್ಕೆ ಸ್ಪಂಧಿಸಿ ಮನೆ ನಿರ್ಮಿಸಿ ನೆರವಿಗೆ ಬಂದ ಜಗ್ಗೇಶ್ ದಂಪತಿಗೆ ವಂದಿಸಿದ ಮಂಜಮ್ಮ ಹಾಗೂ ರತ್ನಮ್ಮ, ಪರಿಮಳಾ ಅವರಿಗೆ ಉಡಿತುಂಬಿಸಿ ತಮ್ಮ ಧನ್ಯತಾ ಭಾವ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಅಂಧ ಗಾಯಕಿಯರಿಗೆ ಲೈಫ್ ಟೈಂ ಉಚಿತ ರೈಲು ಪ್ರಯಾಣದ ಪಾಸ್ ವಿತರಿಸಲಾಯಿತು. ಇಂಥಹ ಕಾರ್ಯಕ್ರಮದಲ್ಲಿ ತಮ್ಮ ಹೆತ್ತ ತಾಯಿಯನ್ನು ನೆನೆದು ಪರಿಮಳ ಅವರಿಗೆ ಮಡಿಲು ತುಂಬಿ ಸಹೋದರಿಯರು ಗೌರವ ಸಲ್ಲಿಸಿದರು.

  • ಅಂಧ ಗಾಯಕಿಯರಿಗೆ ಮನೆ- ಗೃಹ ಪ್ರವೇಶ ನೆರವೇರಿಸಿದ ಜಗ್ಗೇಶ್ ದಂಪತಿ

    ಅಂಧ ಗಾಯಕಿಯರಿಗೆ ಮನೆ- ಗೃಹ ಪ್ರವೇಶ ನೆರವೇರಿಸಿದ ಜಗ್ಗೇಶ್ ದಂಪತಿ

    – ಗಾಯಕಿಯ ಕೈ ಹಿಡಿದು ಮನೆಗೆ ಬಲಗಾಲಿಡಿಸಿದ ಜಗ್ಗೇಶ್

    ತುಮಕೂರು: ನವರಸನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರು ಇಂದು ಅಂಧ ಸಹೋದರಿಯರ ಚಂದದ ಮನೆಯನ್ನು ಉದ್ಘಾಟಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ರತ್ನಮ್ಮ ಮತ್ತು ಮಂಜಮ್ಮ ಇಬ್ಬರೂ ಅಂಧ ಸಹೋದರಿಯರು ಬಂದಿದ್ದರು. ಇವರು ತಮ್ಮ ಸುಮಧುರ ಕಂಠಸಿರಿಯ ಮೂಲಕ ನಾಡಿನ ಜನತೆಯ ಮನಗೆದ್ದರು. ಇದೇ ವೇಳೆ ಅಂಧ ಸಹೋದರಿಯರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅವರ ಕಷ್ಟವನ್ನು ಆಲಿಸಿದ ಜಗ್ಗೇಶ್ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಅವರು ಕೊಟ್ಟು ಭರವಸೆಯನ್ನು ಒಂದು ತಿಂಗಳಲ್ಲಿಯೇ ಜಗ್ಗೇಶ್ ಅಭಿಮಾನಿಗಳು ನೆರೆವೇರಿಸಿದ್ದಾರೆ. ಅಂದರೆ ಸೋದರಿಯರಿಗಾಗಿ ಒಂದು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿದ್ದರು.

    ಇಂದು ಅಂಧ ಗಾಯಕಿಯರ ಮನೆಯ ಗೃಹ ಪ್ರವೇಶ ನೆರೆವೇರಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ಗೃಹಪ್ರವೇಶ ನಡೆದಿದ್ದು, ನಟ ಜಗ್ಗೇಶ್ ದಂಪತಿಯಿಂದ ಉದ್ಘಾಟನೆ ಮಾಡಲಾಗಿದೆ. ಮೊದಲಿಗೆ ಮಧುಗಿರಿಗೆ ಹೋಗುವ ದಾರಿ ಮಧ್ಯೆ ಗೊರವನಹಳ್ಳಿ ದೇವಸ್ಥಾನಕ್ಕೆ ಜಗ್ಗೇಶ್ ದಂಪತಿ ಭೇಟಿ ಕೊಟ್ಟು ಪೂಜೆ ಮಾಡಿಸಿದ್ದರು. ನಂತರ ರಿಬ್ಬನ್ ಕಟ್ ಮಾಡುವ ಮೂಲಕ ಅಂಧ ಗಾಯಕಿಯರ ಚಂದದ ಮನೆಯನ್ನು ನಟ ಜಗ್ಗೇಶ್ ಉದ್ಘಾಟಿಸಿದರು.

     

    ರಿಬ್ಬನ್ ಕಟ್ ಮಾಡಿದ ನಂತರ ಜಗ್ಗೇಶ್ ಗಾಯಕಿ ರತ್ನಮ್ಮರ ಕೈ ಹಿಡಿದುಕೊಂಡು ಬಲಗಾಲಿಡುವಂತೆ ಸೂಚಿಸಿದ್ದಾರೆ. ಜಗ್ಗೇಶ್ ಸೂಚಿಸಿದಂತೆ ರತ್ನಮ್ಮ ಬಲಗಾಲಿಟ್ಟು ಮನೆ ಪ್ರವೇಶ ಮಾಡಿದ್ದಾರೆ. ಜಗ್ಗೇಶ್ ಮತ್ತು ಅವರ ಅಭಿಮಾನಿಗಳು ಅಂಧ ಗಾಯಕಿ ಸಹೋದರಿಯರಿಗಾಗಿ ಡಿ.ವಿ.ಹಳ್ಳಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

  • ಅಂಧ ಸಹೋದರಿಯರ ಕಷ್ಟಕ್ಕೆ ಮಿಡಿದ ‘ಕಾಮಿಡಿ ಕಿಲಾಡಿಗಳು 3’ರ ದಾನಪ್ಪ

    ಅಂಧ ಸಹೋದರಿಯರ ಕಷ್ಟಕ್ಕೆ ಮಿಡಿದ ‘ಕಾಮಿಡಿ ಕಿಲಾಡಿಗಳು 3’ರ ದಾನಪ್ಪ

    ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ರಿಯಾಲಿಟಿ ಶೋಗೆ ಶನಿವಾರ ಅದ್ಧೂರಿ ತೆರೆಬಿದ್ದಿದೆ. ಈ ಶೋನ ಎರಡನೇ ರನ್ನರ್ ಅಪ್ ಆದ ದಾನಪ್ಪ ಅವರು ಸರಿಗಮಪ ಸ್ಪರ್ಧಿಗಳಾದ ಅಂಧ ಸಹೋದರಿಯರು ರತ್ನಮ್ಮ ಮತ್ತು ಮಂಜಮ್ಮ ಅವರ ನೆರವಿಗೆ ನಿಂತಿದ್ದಾರೆ.

    ಹೌದು. ದಾನಪ್ಪ ಅವರು ತಮಗೆ ಸಿಕ್ಕ ನಗದು ಬಹುಮಾನದಲ್ಲಿ 10 ಸಾವಿರ ರೂಪಾಯಿಯನ್ನು ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ನೀಡುವುದಾಗಿ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಘೋಷಿಸಿದ್ದಾರೆ. ದಾನಪ್ಪ ಅವರು ಅಂಧ ಸಹೋದರಿಯರ ಸಹಾಯಕ್ಕೆ ಮುಂದಾಗಿರೋದು ಎಲ್ಲರ ಮನಗೆದ್ದಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ

    ಉಡುಪಿಯ ರಾಕೇಶ್ ‘ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ಪಟ್ಟ ತಮ್ಮದಾಗಿಸಿಕೊಂಡಿದ್ದು, ಹಾಸನದ ಸಂತೋಷ್ ರನ್ನರ್ ಅಪ್ ಆಗಿದ್ದಾರೆ. ಇತ್ತ ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿನ್ನರ್‍ಗೆ 8 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್‍ಗೆ 4 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ಇತ್ತ ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡ ಮನೋಹರ್ ಹಾಗೂ ದಾನಪ್ಪ ಇಬ್ಬರಿಗೂ ಸೇರಿ 2 ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಪಿ ನೀಡಿ ಅಭಿನಂದಿಸಲಾಗಿದೆ. ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ

    ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು.

    ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು. ಕೊಟ್ಟ ಮಾತಿನಂತೆ ಮನೆ ಕಟ್ಟಿಕೊಟ್ಟ ಜಗ್ಗೇಶ್ ಅವರು, ತಮ್ಮ ಪತ್ನಿ ಪರಿಮಳ ಅವರ ಜೊತೆ ಮಾರ್ಚ್ 12ರಂದು ಗೃಹಪ್ರವೇಶ ಮಾಡಿ ಮನೆಯ ಕೀಲಿಯನ್ನು ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ನೀಡಲಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದ್ದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದ್ದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.

    https://www.instagram.com/p/B88YTrMpH2C/

  • 1 ತಿಂಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಕಾರಣ ಯಾರೆಂದು ತಿಳಿಸಿದ ಜಗ್ಗೇಶ್

    1 ತಿಂಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಕಾರಣ ಯಾರೆಂದು ತಿಳಿಸಿದ ಜಗ್ಗೇಶ್

    – ಬಂಗಾರದಂತಹ ಹುಡುಗರಿಗೆ ಕೈ ಮುಗಿದು ನಮಸ್ಕಾರ

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿನಂತೆ ಒಂದು ತಿಂಗಳಲ್ಲಿ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಒಂದು ತಿಂಗಳಲ್ಲೇ ಕೊಟ್ಟ ಭರವಸೆ ಉಳಿಸಿಕೊಳ್ಳವಂತೆ ಮಾಡಿದ ಹಿಂದಿನ ಶಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದು, ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ

    ಅದರಂತೆಯೇ ಒಂದು ತಿಂಗಳಲ್ಲಿ ಅವರಿಗೆ ಮನೆ ಕಟ್ಟಿಸಿದ್ದಾರೆ. ಇದೇ ತಿಂಗಳ 12ರಂದು ಮನೆಯ ಗೃಹ ಪ್ರವೇಶ ನಡೆಯಲಿದೆ. ಇದೀಗ ಒಂದು ತಿಂಗಳಲ್ಲಿ ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಅದರ ಹಿಂದಿರುವ ಶಕ್ತಿ ಯಾರೆಂದು ಕಾರ್ಯಕ್ರಮವೊಂದರಲ್ಲಿ ಜಗ್ಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಸೋದರಿಯರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ನಾನು ಕೊರಟಗೆರೆ ಅಭಿಮಾನಿ ಸಂಘದ ರವಿಗೆ ಫೋನ್ ಮಾಡಿದ್ದೆ. ಅಯ್ಯೋ ಅಣ್ಣ ಬಿಡಿ ನಾವು ಇದ್ದೀವಿ ಮಾಡುತ್ತೀವಿ ಎಂದನು. ಮರುದಿನ 50-60 ಹುಡುಗರು ತಮ್ಮ ಕೆಲಸಕ್ಕೆ ರಜೆ ಹಾಕಿ ಕೆಲಸ ಮಾಡಿದ್ದಾರೆ. ನಾವು ಒಂದು ತಿಂಗಳಲ್ಲಿ ಅವರಿಗೆ ಮನೆ ಕೀ ಕೊಡಲು ಸಾಧ್ಯವಾಗಿದ್ದೆ ಅವರಿಂದ, ಯಾವುದೇ ಬೇಡಿಕೆಯೂ ಇಲ್ಲದೇ ಒಂದು ತಿಂಗಳಲ್ಲಿ ಮನೆ ಕಟ್ಟಿದ್ದಾರೆ ಎಂದರು.

    ಯಾರೋ ಹಣ ಕೊಟ್ಟಿದ್ದಾರೆ ಮಾಡುತ್ತಿದ್ದಾರೆ ಎಂದು ಯಾರೋ ಮಧ್ಯೆ ಹೇಳಿದ್ದರು. ಆದರೆ ಆತ್ಮಸಾಕ್ಷಿಯಾಗಿ ಹೇಳುತ್ತೀನಿ ಆ ಮನೆಯನ್ನು ಸಂಪೂರ್ಣವಾಗಿ ನನ್ನ ಅಭಿಮಾನಿ ಸಂಘದವರೇ ನಿರ್ಮಾಣ ಮಾಡಿದ್ದಾರೆ. ಮಾಡಿದರೆ 100% ಮಾಡಬೇಕು ಎಂದು ಅಷ್ಟೂ ಚೆನ್ನಾಗಿ ಕೆಲಸ ಮಾಡಿರುವ ಆ ಬಂಗಾರದಂತಹ ನನ್ನ ಹುಡುಗರಿಗೆ ನನ್ನ ನಮಸ್ಕಾರಗಳು ಎಂದು ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/B88YTrMpH2C/

    ಅಂಧ ಸಹೋದರಿಯರು:
    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು. ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು.

  • ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ

    ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಾವು ಕಷ್ಟದಲ್ಲಿರುವವರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ. ಇದೀಗ ಅಂಧ ಸಹೋದರಿಯರಿಗೆ ಕೊಟ್ಟ ಮಾತಿನಂತೆ ಜಗ್ಗೇಶ್ ಅವರಿಗೆ ಮನೆಗೆ ಕಟ್ಟಿಸಿಕೊಟ್ಟಿದ್ದಾರೆ.

    ಜಗ್ಗೇಶ್ ಮನೆ ಕೆಲಸ ಸಂಪೂರ್ಣವಾಗಿರುವ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಗೃಹ ಪ್ರವೇಶಕ್ಕೆ ತಮ್ಮ ಪತ್ನಿ ಪರಿಮಳ ಜೊತೆ ಹೋಗುತ್ತಿದ್ದಾರೆ. ಅಭಿಮಾನಿಗಳು ಗೃಹ ಪ್ರವೇಶಕ್ಕೆ ಬರಲಿರುವ ಜಗ್ಗೇಶ್ ಮತ್ತು ಪರಿಮಳ ಅವರ ಹೆಸರಿನಲ್ಲಿ ಬ್ಯಾನರ್ ಮಾಡಿಸಿ ಹಾಕಿದ್ದಾರೆ. ಆ ವಿಡಿಯೋವನ್ನು ಜಗ್ಗೇಶ್ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಜೊತೆಗೆ “ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹದ ಕೀಲಿ ಕೈಗೊಪ್ಪಿಸಲು ಮಾರ್ಚ್ 12ರಂದು ನಾನು ಮಡದಿ ಪರಿಮಳ ಹೋಗುತ್ತೇವೆ. ತಿಂಗಳಲ್ಲಿ ನನ್ನ ಭಾವನೆ ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ ಕೊರಟಗೆರೆ ಅಬಿಮಾನಿ ಸಂಘದ ರವಿ, ಮಲ್ಲಣ್ಣ ಮತ್ತು ಮಿತ್ರರಿಗೆ ಧನ್ಯವಾದಗಳು. ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ..Love you all” ಎಂದು ಬರೆದುಕೊಂಡಿದ್ದಾರೆ.

    ಅಂಧ ಸಹೋದರಿಯರು:
    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು.

    ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು.

    https://www.instagram.com/p/B88YTrMpH2C/

    ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದ್ದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದ್ದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.

     

  • ಅಂಧ ಗಾಯಕಿಯರಿಗೆ ನಿರ್ಮಾಣವಾಗುತ್ತಿದೆ ಚಂದದ ಮನೆ

    ಅಂಧ ಗಾಯಕಿಯರಿಗೆ ನಿರ್ಮಾಣವಾಗುತ್ತಿದೆ ಚಂದದ ಮನೆ

    ತುಮಕೂರು: ತಮ್ಮ ಸುಮಧುರ ಕಂಠ ಸಿರಿಯ ಮೂಲಕ ನಾಡಿನ ಜನರ ಮನಸ್ಸು ಗೆದ್ದ ಮಧುಗಿರಿ ತಾಲೂಕಿನ ಅಂಧ ಸಹೋದರಿಯರಿಗೆ ಈಗ ಚೆಂದದ ಮನೆಯ ಭಾಗ್ಯ ಒದಗಿ ಬಂದಿದೆ.

    ನವರಸನಾಯಕ ಜಗ್ಗೇಶ್ ಅಂಧ ಸಹೋದರಿಯರಿಗೆ ಮನೆ ಕಟ್ಟಿಕೊಡುವ ವಾಗ್ದಾನ ಮಾಡಿದ್ದರು. ಅದರಂತೆ ಈಗ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯಲ್ಲಿ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮನೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಗಾಯಕಿಯರ 28 ವರ್ಷದ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಇದ್ದ ಹಳೆ ಮನೆ ಇಟ್ಟಿಗೆ ಗೋಡೆ, ಕಬ್ಬಿಣದ ಬೀಮ್ ಮೇಲೆ ಚಪ್ಪಡಿ ಕಲ್ಲು ಇಟ್ಟು ನಿರ್ಮಾಣ ಮಾಡಲಾಗಿತ್ತು. ಮನೆ ಮುಂದೆ ತೆಂಗಿನ ಗರಿಯಿಂದ ಚಾವಣಿ ಮಾಡಲಾಗಿತ್ತು. ಇವೆಲ್ಲವನ್ನೂ ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ. ಇದನ್ನೂ ಓದಿ: ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಹೊರಗಿನ ಹಜಾರ ಸೇರಿದಂತೆ ಒಟ್ಟು 7 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ. ಅಡುಗೆ ಮನೆ, ಹಾಲ್, ಒಂದು ಕೋಣೆ ಮತ್ತು ಹೊರಗಿರುವ ಹಜಾರ ನಿರ್ಮಿಸಲು ಚಿಂತಿಸಲಾಗಿದೆ. ಮನೆ ನಿರ್ಮಾಣಕ್ಕೆ ಸುಮಾರು 5 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜಗ್ಗೇಶ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಮಲ್ಲೇಶ್, ತಾಲೂಕ್ ಅಧ್ಯಕ್ಷ ಶಿವಶಂಕರ್ ಹಾಗೂ ಕೆ.ಎನ್ ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಕೆಲಸ ಬಿರುಸಿನಿಂದ ಸಾಗಿದೆ. ಅಭಿಮಾನಿ ಬಳಗದ ಕಾರ್ಯಕರ್ತರೇ ಶ್ರಮದಾನದ ಮೂಲಕ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಎರಡು ತಿಂಗಳಲ್ಲಿ ಹೊಸ ಮನೆ ನಿರ್ಮಾಣವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

    ಅಂಧ ಗಾಯಕಿಯರ ಹಿನ್ನೆಲೆ:
    ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯ ಮೂವರು ಸಹೋದರಿಯರಾದ ಗೌರಮ್ಮ, ಮಂಜಮ್ಮ ಹಾಗೂ ರತ್ನಮ್ಮ ಈ ಜಗತ್ತನ್ನು ಕಣ್ಣು ಬಿಟ್ಟು ನೋಡಿಲ್ಲ. ಅಕ್ಷರ ಜ್ಞಾನ ಕೂಡ ಇವರಿಗೆ ಇಲ್ಲ. ದೇವರು ಕೊಟ್ಟ ವರ ಎಂಬಂತೆ ಸುಮಧುರ ಕಂಠವೊಂದೇ ಇವರಿಗೆ ಆಧಾರ. ಆ ಕಂಠಸಿರಿಯಿಂದ ಅಂಧ ಸಹೋದರಿಯರು ಇಂದು ನಾಡಿನ ಗಮನ ಸೆಳೆದಿದ್ದಾರೆ. ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಎದುರು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸುಸ್ರಾವ್ಯವಾದ ಹಾಡು ಹೇಳುವುದೇ ಇವರ ಕಾಯಕ. ಸುಮಾರು 20 ವರ್ಷಗಳಿಂದ ಹಾಡನ್ನು ಹಾಡಿ ಒಂದಿಷ್ಟು ಸಂಪಾದನೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

    ಊರಿನಲ್ಲಿ ಮದುವೆ ಸಮಾರಂಭಗಳಲ್ಲಿ ಧ್ವನಿವರ್ಧಕಗಳಿಂದ ಬರುವ ಹಾಡು, ಅಕ್ಕಪಕ್ಕದ ಮನೆಯ ರೇಡಿಯೋದಿಂದ ಕೇಳಿ ಬರುವ ಚಿತ್ರಗೀತೆಗಳು, ಟೆಪ್ ರೆಕಾರ್ಡ್‌ಗಳಿಂದ ಮೂಡಿಬರುವ ಹಾಡನ್ನು ಕೇಳಿ ಕೇಳಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಹಾಡನ್ನು ಕೇಳಿದರೆ ಎಂಥವರೂ ತಲೆದೂಗಬೇಕು. ಯಾವುದೇ ವೃತ್ತಿಪರ ಹಾಡುಗಾರಗಿಂತಲೂ ಕಡಿಮೆ ಇಲ್ಲ ಇವರ ಕಂಠಸಿರಿ. ಕಳೆದ 18-20 ವರ್ಷಗಳಿಂದ ನಿರಂತರವಾಗಿ ದಂಡಿನಮಾರಮ್ಮ ದೇವಸ್ಥಾನದಲ್ಲಿ ವಾರಕ್ಕೆರಡು ಬಾರಿ ಹಾಡುತ್ತಾ ಬಂದಿದ್ದಾರೆ. ಇವರ ಹಾಡಿಗೆ ಮರುಳಾದ ಭಕ್ತಾದಿಗಳು ಒಂದಿಷ್ಟು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆ ರೂಪದ ಸಂಪಾದನೆಯೆ ಇವರ ಜೀವನದ ನಿರ್ವಹಣೆಗೆ ಸಹಾಯಕಾರಿ.

    ಕುಟುಂಬದ ಹಿನ್ನೆಲೆ:
    ಅಂಧ ಸಹೋದರಿಯರ ತಾಯಿ ಸಿದ್ದಮ್ಮ ಟಿಬಿ ಕಾಯಿಲೆಯಿಂದ ತೀರಿ ಹೋಗಿ 20 ವರ್ಷವಾಯಿತು. ಮೂವರು ಅಂಧ ಮಕ್ಕಳು ಹುಟ್ಟುತ್ತಿದ್ದಂತೆ ತಾಯಿ ತೀರಿ ಹೋಗಿದ್ದಾರೆ. ತಂದೆ ಅಶ್ವತ್ಥಪ್ಪ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದ. ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂವರು ಅಂಧರು. ಇನ್ನೊಬ್ಬರು ಸಹಜವಾಗಿದ್ದಾರೆ. ಇದ್ದ ಒಬ್ಬ ಗಂಡು ಮಗ ಕೂಡ ಕಾಯಿಲೆಯಿಂದ ತೀರಿ ಹೋಗಿದ್ದಾನೆ. ಮೂವರು ಅಂಧ ಸಹೋದರಿಯರಲ್ಲಿ ಹಿರಿಯ ಸಹೋದರಿ ಗೌರಮ್ಮ ಕ್ರೈಸ್ತ ಸಂಪ್ರದಾಯದ ಹಾಡನ್ನು ಹಾಡುತ್ತಾರೆ. ಹಾಗಾಗಿ ಅವರು ಸರಿಗಮಪಕ್ಕೆ ಹೋಗಿಲ್ಲ. ಕುಟುಂಬದಲ್ಲಿ ತಾಯಿ ಮತ್ತು ತಮ್ಮ ತೀರಿಹೋದಾಗ ಮಕ್ಕಳು ಅನಾಥರಾಗುತ್ತಾರೆ. ಅಜ್ಜಿ ತಿಮ್ಮಕ್ಕನ ಆರೈಕೆಯಲ್ಲಿ ಮಕ್ಕಳು ಬೆಳೆಯುತ್ತಾರೆ. ಈಗ ತಂದೆ ಅಸ್ವತ್ಥಪ್ಪ ಹಾಗೂ ಅಜ್ಜಿ ತಿಮ್ಮಕ್ಕಗೂ ದುಡಿಯಲು ಶಕ್ತಿಯಿಲ್ಲ. ಮೂವರು ಹೆಣ್ಣುಮಕ್ಕಳ ಹಾಡಿನ ಸಂಪಾದನೆಯಿಂದ ಬಂದ ಹಣವೇ ಸಂಸಾರಕ್ಕೆ ಆಧಾರ.

    ದೇವಸ್ಥಾನದಲ್ಲಿ ಈ ಮೂವರು ಸಹೋದರಿಯರು ಹಾಡೋದನ್ನು ನೋಡಿ ಮಧುಗಿರಿ ತಾಲೂಕ್ ಡಳಿತ ದೇವಸ್ಥಾನದ ಎದುರಿಗೆ ಒಂದು ಪೆಟ್ಟಿಗೆ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ಆ ಪೆಟ್ಟಿಗೆಯಲ್ಲೇ ಇವರುಗಳು ಕುಳಿತು ಹಾಡುತ್ತಿದ್ದಾರೆ. ಕಳೆದ 28 ವರ್ಷದ ಹಿಂದೆ ಸರ್ಕಾರದಿಂದ ಮಂಜೂರಾದ ಪುಟ್ಟ ಗುಡಿಸಲು ಇದ್ದು ಅದು ಶೀಥೀಲಗೊಂಡಿತ್ತು. ಇದನ್ನು ಅರಿತ ನಟ ಜಗ್ಗೇಶ್ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.