Tag: ಅಂಧ ಮಹಿಳೆ

  • ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ವಾಷಿಂಗ್ಟನ್: ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಬೆಡ್ ಮೇಲೆಯೇ ಪತಿ ಶವವಾಗಿ ಪತ್ತೆಯಾಗಿರುವ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.

    76 ವರ್ಷದ ವ್ಯಕ್ತಿಯೋರ್ವ ಗುಂಡಿನ ದಾಳಿಗೆ ಒಳಗಾಗಿ ಬೆಡ್ ಮೇಲೆ ಸಾವನ್ನಪ್ಪಿದ್ದಾನೆ. ಆದರೆ ಈ ವಿಚಾರ ಅಂಧ ಪತ್ನಿಗೆ ಗೊತ್ತಾಗಿಲ್ಲ. ತನ್ನ ಪತಿ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗಲೇ ತನ್ನ ಪತಿ ಕೊಲೆಯಾಗಿದ್ದಾನೆ ಎಂದು ಅಂಧ ಪತ್ನಿಗೆ ತಿಳಿದುಬಂದಿದೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ದೂರು ಆಧರಿಸಿ ಪೊಲೀಸರು ಕಳೆದ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಅಮೆರಿಕಾದ ಲೂಸಿಯಾನದ ಲೀವಿ ರಸ್ತೆಯಲ್ಲಿರುವ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಅಲ್ಲೇ ಇರುವುದನ್ನು ಗಮನಿಸಿದ ಪೊಲೀಸರು ನಂತರ ಮನೆಯನ್ನು ಪರಿಶೀಲಿಸಿದಾಗ ಕಿಟಕಿ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಆರೋಪಿಗಳು ಅನೇಕ ಬಾರಿ ಗುಂಡು ಹಾರಿಸಿರುವುದರಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

    ಈ ಪ್ರಕರಣ ಸಂಬಂಧ ಇದೀಗ ತನಿಖೆ ಆರಂಭಿಸಲಾಗಿದೆ ಎಂದು ನಾಚಿಟೋಚೆಸ್ ಪ್ಯಾರೀಷ್ ಶೆರಿಫ್ ಕಚೇರಿ ತಿಳಿಸಿದೆ. ಆದರೆ ಇದುವರೆಗೂ ಯಾರನ್ನು ಸಹ ಬಂಧಿಸಲಾಗಿಲ್ಲ.

  • ‘ಭಾರತದ ಶ್ರೀಮಂತ ಮಹಿಳೆ’ಯಿಂದ ಸೋನು ಫೌಂಡೇಶನ್‍ಗೆ 15,000ರೂ. ದೇಣಿಗೆ

    ‘ಭಾರತದ ಶ್ರೀಮಂತ ಮಹಿಳೆ’ಯಿಂದ ಸೋನು ಫೌಂಡೇಶನ್‍ಗೆ 15,000ರೂ. ದೇಣಿಗೆ

    ಮುಂಬೈ: ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್ ಫೌಂಡೇಶನ್‍ಗೆ ಅಂಧ ಮಹಿಳೆ ದೇಣಿಗೆ ನೀಡಿದ್ದಾರೆ.

    ಬುಡ ನಾಗಲಕ್ಷ್ಮೀ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15 ಸಾವಿರ ರೂ. ಹಣವನ್ನು ಸೋನು ಫೌಂಡೇಶನ್‍ಗೆ ನೀಡಿದ್ದಾರೆ. ಜೊತೆಗೆ ಭಾರತದ ಶ್ರೀಮಂತ ಮಹಿಳೆ ಎಂದು ಸೋನು ಸೂದ್ ಕರೆದಿದ್ದಾರೆ.

    ಆಂಧ್ರದಲ್ಲಿ ಸೋನು ಸೂದ್ ಫೌಂಡೇಶನ್ ವತಿಯಿಂದ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದ್ದು, ಜುಲೈ 23ರಂದು ಇದನ್ನು ಉದ್ಘಾಟಿಸಲು ಬುಡ ನಾಗಲಕ್ಷ್ಮಿಯವರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸೋನು ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬುಡ ನಾಗಲಕ್ಷ್ಮಿ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15,000ರೂ ದೇಣಿಗೆ ನೀಡಿದ್ದು, ಜುಲೈ 23ರಂದು ಆಂಧ್ರ ಪ್ರದೇಶದಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದಲ್ಲಿ ಐಟಿ ಗೌತಮ್ ರೆಡ್ಡಿ, ಚಂದ್ರಾಧರ್ ಬಾಬು, ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್