Tag: ಅಂಧ

  • ಅಂಧರ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಮಿಂಚಲಿರುವ ಹಳ್ಳಿ ಹುಡುಗ

    ಅಂಧರ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಮಿಂಚಲಿರುವ ಹಳ್ಳಿ ಹುಡುಗ

    – ಕನಸು ನನಸು ಮಾಡಿಕೊಂಡು ಲೋಕೇಶ್
    – ಡಿ.06 ರಂದು ನಡೆಯಲಿರುವ ವಿಶ್ವಕಪ್

    ಕೊಪ್ಪಳ: ಅಂಧರ (Blind) ವಿಭಾಗದ ಕ್ರಿಕೆಟ್‍ನ ಟಿ20 ವಿಶ್ವಕಪ್ ಪಂದ್ಯಾವಳಿಗಳು (T20 World Cup cricket) ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ನಡೆಯಲಿದ್ದು, ಭಾರತ ಪರವಾದ ತಂಡದಲ್ಲಿ ಕೊಪ್ಪಳದ ಗಂಗಾವತಿ (Gangavathi) ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯಡಳ್ಳಿ ಯುವಕ ಆಯ್ಕೆಯಾಗುವ ಮೂಲಕ ಕೊಪ್ಪಳ (Koppala) ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾನೆ.

    ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡ್ಡಗಾಡು ಪ್ರದೇಶ ಯಡಳ್ಳಿ ಗ್ರಾಮದ ಲೋಕೇಶ್ ಎಂಬ ಯುವಕ ಅಂಧರ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡು ಸತತ ಪ್ರಯತ್ನದ ಫಲವಾಗಿ ಟಿ20 ವಿಶ್ವಕಪ್ ಭಾಗವಹಿಸಲು ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೆಮ್ಮ ದಂಪತಿಗಳ ನಾಲ್ಕನೇ ಮಗನಾಗಿರುವ ಲೋಕೇಶ್, ಕಣ್ಣು ಕಾಣದೇ ಹುಟ್ಟು ಅಂಧತ್ವವನ್ನು ಅನುಭವಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ಕಿಕ್ರೆಟ್ ಆಡುವುದನ್ನು ರೂಡಿಸಿಕೊಂಡಿದ್ದ ಲೋಕೇಶ್‍ಗೆ, ಮನೆಯವರಿಂದ ಸರಿಯಾಗಿ ಪ್ರೋತ್ಸಾಹ ದೊರೆಯದೇ ಇರುವುದರಿಂದ 15 ವರ್ಷಗಳ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದಾನೆ.

    ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಇರುವುದರಿಂದ ಕೂಲಿ ಕೆಲಸ ಜೊತೆಗೆ ಬೆಂಗಳೂರಿನ ಸಮರ್ಥಂ ಟ್ರಸ್ಟ್ ಸಂಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸವನ್ನು ಮಾಡುವ ಮೂಲಕ ರಣಜಿ ಪಂದ್ಯಾಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ನಂತರದಲ್ಲಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ, ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ 2006ರಲ್ಲಿ ಅಂಧರ ಏಷ್ಯ ಕಪ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಉತ್ತಮ ಆಲ್ ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಇಂಡಿಯಾ ಹಾಗೂ ಇಂಗ್ಲೆಂಡ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. 2019ರಲ್ಲಿ ನೇಪಾಳದಲ್ಲಿ ಇಂಡಿಯಾ, ನೇಪಾಳ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಕಲ್ಲು ತೂರಾಟದಿಂದ ಬಾಲಕನಿಗೆ ಗಾಯ – ಎಎಪಿ ಗುಜರಾತ್ ಮುಖ್ಯಸ್ಥನಿಂದ ಆರೋಪ

    ವಿಶ್ವಕಪ್ ಕನಸು ನನಸು: ಅಂಧರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸು ಕಟ್ಟಿಕೊಂಡು, ಸತತ ಅಭ್ಯಾಸವನ್ನು ನಡೆಸುತ್ತಿದ್ದ ಲೋಕೇಶ್ ಕೊನೆಗೂ ಕನಸು ನನಸು ಮಾಡಿಕೊಂಡಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯು ದೇಶದ 56 ಆಟಗಾರರನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಶಿಬಿರವನ್ನು ನಡೆಸಿ, ತರಬೇತಿ ನೀಡಲಾಗಿತ್ತು. ನಂತರ ಆಯ್ಕೆ ಸಮಿತಿಯಿಂದ ಮೌಲ್ಯಮಾಪನ ಮಾಡಲಾಗಿದ್ದು, 56 ಜನ ಆಟಗಾರರಲ್ಲಿ ಕೇವಲ 29 ಜನ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಯಿತು.

    ಬಳಿಕ ಬೋಪಾಲ್‍ನಲ್ಲಿ 12 ದಿನಗಳ ಕಾಲ ಕಠಿಣ ಕ್ರಿಕೆಟ್ ತರಬೇತಿ ಹಾಗೂ ದೈಹಿಕ ಸದೃಢತೆಯ ಮೌಲ್ಯಮಾಪನವನ್ನು ನಡೆಸಲಾಗಿದ್ದು, ಕೊನೆಯಾಗಿ ಟಿ20 ವಿಶ್ವಕಪ್‍ಗೆ ಅವಶ್ಯಕ ಇರುವ 17 ಜನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ 17 ಜನ ಆಟಗಾರರಲ್ಲಿ ಲೋಕೇಶ್ ಅವರು ಸ್ಥಾನವನ್ನು ಪಡೆದುಕೊಂಡು 4ನೇ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಲಿದ್ದಾರೆ. 2022ರ ಡಿಸೆಂಬರ್ 6ರಂದು ಭಾರತದಲ್ಲಿ ನಡೆಯಲಿರುವ 3ನೇ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ಪರವಾಗಿ ಲೋಕೇಶ್ ಪ್ರದರ್ಶನ ನೀಡಲಿದ್ದಾರೆ. ಡಿಸೆಂಬರ್ 6 ರಿಂದ ಡಿಸೆಂಬರ್ 17ರವರೆಗೆ ಟಿ20 ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದ್ದು, ಪಂದ್ಯದಲ್ಲಿ ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಸೇರಿ ಒಟ್ಟು 7 ದೇಶಗಳು ಭಾಗವಹಿಸಲಿದ್ದು, ಒಟ್ಟು 24 ಪಂದ್ಯಗಳು ನಡೆಯಲಿವೆ. ಭಾರತದ ನಾನಾ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

    ಚಿಕ್ಕ ವಯಸ್ಸಿನಿಂದ ಕ್ರಿಕೆಟ್‍ನಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೆ. ಅದಕ್ಕಾಗಿಯೇ ಗ್ರಾಮ ಬಿಟ್ಟು ಬೆಂಗಳೂರು ಹೋಗಿ, ಸಮರ್ಥಂ ಟ್ರಸ್ಟ್‌ನಲ್ಲಿ ತರಬೇತಿಯನ್ನು ಪಡೆದುಕೊಂಡು ಅಂತರಾಷ್ಟೀಯ ಅಂಧರ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವಕಪ್ ಆಡಬೇಕು ಎನ್ನುವ ಕನಸು ಕಟ್ಟಿಕೊಂಡು ಪ್ರತಿಯೊಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕೊನೆಯ ಭಾರತ ತಂಡದಲ್ಲಿ ವಿಶ್ವಕಪ್ ಆಡಲು ಅವಕಾಶ ಸಿಕ್ಕಿದ್ದು, ಸಂತಸವಾಗಿದೆ. ವಿಶ್ವಕಪ್‍ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನು ನೀಡಿ, ದೇಶದ ಕೀರ್ತಿ ಹಾರಿಸುವೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    Live Tv
    [brid partner=56869869 player=32851 video=960834 autoplay=true]

  • ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಕಾರವಾರ: ಶಿರಸಿ ತಾಲೂಕಿನ ಕಾನಗೋಡು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಂಧ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

    ಕಾನಗೋಡು ಗ್ರಾಮಪಂಚಾಯ್ತಿಯ ಬಿಸಲಕೊಪ್ಪದ ರಾಘವೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರ ಈ ಉತ್ಸಾಹಕ್ಕೆ ಸ್ಥಳೀಯವಾಗಿ ಬಿಜೆಪಿ ಪಕ್ಷ ಸಹ ಬೆಂಬಲ ನೀಡಿದೆ.

    ಇವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಸ್ಪರ್ಧಿಸಿದ್ದ ಇವರು ಕೇವಲ ಒಂದು ಮತದಲ್ಲಿ ಸೋಲು ಕಂಡಿದ್ದರು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿರುವ ಇವರು ಮನೆ ಮನೆಗೆ ತೆರಳಿ ಮತಪ್ರಚಾರದಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇವರು ನಾನು ಅಂಧನಾಗಿದ್ದರೂ ಸ್ವಂತ ಕಾಲಮೇಲೆ ನಿಂತು ಬೀದಿ ನಾಟಕಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜೀವನ ಕಟ್ಟಿಕೊಂಡಿದ್ದೇನೆ. ಅಂಧನೆಂಬ ನೋವು ನನಗಿಲ್ಲ. ಸಮಾಜಸೇವೆ ಮಾಡುವ ಹಂಬಲ ನನಗಿದೆ. ಅಂಧರೂ ಸಭಲರು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ನಮ್ಮಿಂದನೂ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸುವುದೇ ನನ್ನ ಉದ್ದೇಶ. ಸಮಾಜದಲ್ಲಿ ಅಂಗ ನೂನ್ಯತೆಯಿಂದ ತಿರಸ್ಕಾರಕ್ಕೊಳಗಾದವರಿಗೆ ಸಹಾಯ ಮಾಡುವ ಹಂಬಲ ನನಗಿದೆ ಎಂದರು.

    ಈಗಾಗಲೇ ಇಡೀ ಗ್ರಾಮದಲ್ಲಿ ಇವರಿಗೆ ಜನರು ಬೆಂಬಲ ನೀಡುತ್ತಿದ್ದು ಗೆಲ್ಲಿಸುವ ಭರವಸೆ ಮೂಡಿದೆ. ಜೊತೆಗೆ ಹಲವಾರು ಆಕಾಂಕ್ಷಿಗಳಿರುವ ಈ ಕ್ಷೇತ್ರದಲ್ಲಿ ಇವರು ನಿಂತಿರುವುದಕ್ಕೆ ಬೆಂಬಲ ನೀಡಿ ಹಲವರು ನಾಮಪತ್ರ ಸಲ್ಲಿಸದೆ ಬೆಂಬಲ ನೀಡಿದ್ದು ಇವರಿಗೆ ಆನೆ ಬಲ ಬಂದಂತಾಗಿದೆ.

  • ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಕೋಲಾರ: ಕುಡಿದ ಅಮಲಿನಲ್ಲಿದ್ದ ಅಂಧ ಪತಿಯೊಬ್ಬ ಪತ್ನಿಗೆ ದೈಹಿಕವಾಗಿ ಹಿಂಸೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೋರಹೊಸ ಹಳ್ಳಿಯಲ್ಲಿ ನಡೆದಿದೆ.

    ರತ್ನಮ್ಮ (28) ಕೊಲೆಯಾದ ದುರ್ದೈವಿ. ಪತಿ ಮಂಜುನಾಥ್ ಕುಡಿದ ಅಮಲಿನಲ್ಲಿ ಪತ್ನಿಯ ಎದೆ, ಮೈ-ಕೈ, ಕುತ್ತಿಗೆ, ಗುಪ್ತಾಂಗವನ್ನ ಬಾಯಿಂದ ಕಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಮಂಜುನಾಥ್ ರೈಲು ನಿಲ್ದಾಣ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಡತನದ ಮಧ್ಯೆ ಜೀವನ ನಡೆಸುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗಾಯಗೊಂಡು ಬಿದ್ದಿದ್ದ ಹೆಂಡತಿಯನ್ನ ಮನೆಯೊಳಗೆ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದಾನೆ.

    ರತ್ನಮ್ಮ ಸಂಬಂಧಿಕರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಂಜುನಾಥ್‍ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಂದೆಯ ಅವಾಂತರದಿಂದ ಇಬ್ಬರು ಮಕ್ಕಳು ಕೂಡ ಈಗ ಅನಾಥವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್ ಆಗಿ ರೈಲುಗಳಿಲ್ಲದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಿಕ್ಷೆ ಬೇಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೇ ನೆರೆಹೊರೆಯವರ ಮೇಲೂ ರೌಡಿಯಿಸಂ ತೋರಿಸುತ್ತಿದ್ದನು. ನಾಲ್ಕು ದಿನಗಳಿಂದ ಪತ್ನಿಯ ಎದೆಯನ್ನ, ಮೈ-ಕೈ ಹಾಗೂ ಗುಪ್ತಾಂಗವನ್ನ ಕಚ್ಚಿ ಗಾಯಗೊಳಿಸುತ್ತಿದ್ದನು. ಅಲ್ಲದೇ ತಲೆಗೆ ಹೊಡೆದು ಗಾಯಗೊಳಿಸಿದರ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ.

    ಆರೋಪಿ ಅಂಗವಿಕಲನೂ ಎನ್ನದೆ ಆತನಿಗೆ ಶಿಕ್ಷೆಯಾಗಬೇಕು. ಮಗನಿಗೆ ಸಾಥ್ ನೀಡುತ್ತಿದ್ದ ತಾಯಿಯನ್ನು ಬಂಧಿಸಿ ಎಂದು ಗ್ರಾಮದ ಮಹಿಳೆಯರು ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು ಸದ್ಯಕ್ಕೆ ಆರೋಪಿ ಪತಿ ಮಂಜುನಾಥ್‍ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಅಂಧನಿಗೆ ದಾರಿ ಮಾಡಿಕೊಟ್ಟ ನಾಯಿ -ವಿಡಿಯೋ ವೈರಲ್

    ಅಂಧನಿಗೆ ದಾರಿ ಮಾಡಿಕೊಟ್ಟ ನಾಯಿ -ವಿಡಿಯೋ ವೈರಲ್

    ಮುಂಬೈ: ಹಲವು ಬಾರಿ ವಿಕಲಚೇತನರಿಗೆ ಯಾರೂ ಸಹಾಯ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಅಂಧ ವ್ಯಕ್ತಿಗೆ ನಾಯಿ ಸಹಾಯ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ನಾಯಿ ಅಂಧನಿಗೆ ಸಹಾಯ ಮಾಡುವ ವಿಡಿಯೋವನ್ನು ಪುಣೆಯ ಪೊಲೀಸ್ ಆಯಕ್ತರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಂಧ ವ್ಯಕ್ತಿಯೊಬ್ಬರು ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ದೊಡ್ಡ ಕೋಲು ಬಿದ್ದಿರುತ್ತದೆ. ಇದನ್ನು ನಾಯಿಯ ಮುಂದೆ ತೆರಳಿದ ಮಾಲೀಕ ನೋಡುವುದಿಲ್ಲ. ಆದರೆ ನಾಯಿ ಅಂಧ ಬರುತ್ತಿರುವುದನ್ನು ನೋಡುತ್ತದೆ.

    ಮನುಷ್ಯರಿಗಿಂತ ಪ್ರಾಣಿಗಳಿಗೆ ಸಹಾಯ ಮನೋಭಾವ ಹೆಚ್ಚು ಎಂಬುದನ್ನು ನಾಯಿ ತೋರಿಸಿದೆ. ಅಲ್ಲದೆ ನಾಯಿಗಳು ತುಂಬಾ ಸೂಕ್ಷ್ಮ, ಪ್ರಮಾಣಿಕ ಹಾಗೂ ಪರೋಪಕಾರಿ ಎಂಬುದನ್ನು ಮತ್ತೊಮೆ ತೋರಿಸಿದೆ. ಅಂಧ ವ್ಯಕ್ತಿ ಆ ಕೋಲಿನ ಬಳಿ ಬರುವುದಕ್ಕೂ ಮೊದಲು ತಕ್ಷಣವೇ ನಾಯಿ ಮರಳಿ ಬಂದು ದಾರಿಗೆ ಅಡ್ಡಲಾಗಿ ಬಿದ್ದಿದ್ದ ಕೋಲನ್ನು ಬಾಯಿಯಿಂದ ತೆಗೆಯುತ್ತದೆ. ಈ ಮೂಲಕ ಅಂಧನಿಗೆ ದಾರಿ ಮಾಡಿಕೊಡುತ್ತದೆ.

    ನಾಯಿ ತನ್ನ ಮಾಲೀಕನೊಂದಿಗೆ ಹೋಗುತ್ತಿರುತ್ತದೆ. ಎದುರುಗಡೆಯಿಂದ ನಾಯಿ ಅಂಧ ವ್ಯಕ್ತಿ ನಡೆದು ಬರುತ್ತಿರುತ್ತಾರೆ. ನಡು ದಾರಿಯಲ್ಲಿ ದೊಡ್ಡ ಕೋಲು ಬಿದ್ದಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ತನ್ನಷ್ಟಕ್ಕೆ ತಾನು ಕೋಲು ಹಿಡಿದು ಬರುತ್ತಿರುತ್ತಾನೆ. ಮುಂದೆ ಅಂಧ ವ್ಯಕ್ತಿ ಬರುತ್ತಿದ್ದಾನೆ ಕೋಲು ತಗೆಯಬೇಕು ಎಂಬ ಅರಿವು ನಾಯಿಯ ಮಾಲೀಕನಿಗೆ ಇರುವುದಿಲ್ಲ. ಆದರೆ ನಾಯಿ ಇದ್ದಕ್ಕಿದ್ದಂತೆ ಓಡಿ ಬಂದು ದಾರಿ ಮಧ್ಯೆ ಬಿದ್ದಿದ್ದ ಕೋಲನ್ನು ಬಾಯಿಯಿಂದ ಎತ್ತಿ ರಸ್ತೆ ಬದಿಗೆ ಹಾಕುತ್ತದೆ. ಆಗ ಅಂಧ ಸರಾಗವಾಗಿ ಮುಂದೆ ನಡೆಯುತ್ತಾನೆ.

    ನಾಯಿಯ ಈ ಸಹಾಯ ಮನೋಭಾವವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡಿ ನಾಯಿಯ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಮತ್ತೊಬ್ಬರ ತೊಂದರೆಯನ್ನು ಜಗತ್ತು ಹೇಗೆ ನಿವಾರಿಸುತ್ತದೆ ಎಂಬುದನ್ನು ಇದರ ಮೂಲಕ ತಿಳಿಯಬಹುದಾಗಿದೆ ಎಂದಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಮಾನುಷ್ಯನಿಗೆ ಯಾರು ಒಳ್ಳೆಯ ಸ್ನೇಹಿತ ಎಂಬುದನ್ನು ನಾಯಿಯನ್ನು ನೋಡಿ ಮಾನವರು ಕಲಿಯಬೇಕು ಎಂದು ತಿಳಿಸಿದ್ದಾರೆ.

  • ಕಣ್ಣು ಕಾಣದಿದ್ದರೂ ಕೈ ಹಿಡಿದಿದೆ ಟೈಲರಿಂಗ್-ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಬದುಕು

    ಕಣ್ಣು ಕಾಣದಿದ್ದರೂ ಕೈ ಹಿಡಿದಿದೆ ಟೈಲರಿಂಗ್-ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಬದುಕು

    ಮಡಿಕೇರಿ: ಕೈ ಕಾಲು ಎಲ್ಲವೂ ಸರಿ ಇದ್ದರೂ ದುಡಿದುಕೊಂಡು ತಿನ್ನೋಕೆ ಕೆಲವರು ಸೋಮಾರಿಗಳಾಗಿ ಇರ್ತಾರೆ. ಆದರೆ ದೃಷ್ಟಿ ಇಲ್ಲದಿದ್ರೂ ನಮ್ಮ ಇವತ್ತಿನ ಪಬ್ಲಿಕ್ ಹೀರೋ ರುದ್ರಾಚಾರಿ ಅವರು ಬದುಕು ಸಾಗಿಸುತ್ತಿದ್ದಾರೆ. ವಿಶೇಷ ಅಚ್ಚರಿ ಅಂದ್ರೆ ಇವರು ಟೈಲರಿಂಗ್ ಮಾಡುತ್ತಿದ್ದಾರೆ.

    ಕೊಡಗಿನ ಸೋಮವಾರಪೇಟೆಯ ಹಾನಗಲ್ಲು ಶೆಟ್ಟಳ್ಳಿಯ ರುದ್ರಾಚಾರಿ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. 60 ವರ್ಷದ ಇವರಿಗೆ ಕಣ್ಣು ಕಾಣಲ್ಲ. 21ನೇ ವಯಸ್ಸಿನಲ್ಲೇ ಕಣ್ಣು ಮಂಜಾಗಲು ಆರಂಭಿಸಿ, 33ನೇ ವಯಸ್ಸಿಗೆ ಸಂಪೂರ್ಣ ದೃಷ್ಟಿಯೇ ಹೋಗಿದೆ. ಆದರೂ ಯಾರಿಗೂ ಕಡಿಮೆ ಇಲ್ಲದಂತೆ ಶಾಲಾ ಮಕ್ಕಳ ಯುನಿಫಾರಂ, ಮಹಿಳೆಯರ ಉಡುಪುಗಳನ್ನು ಹೊಲೆಯುತ್ತಾ ತುತ್ತಿನ ಚೀಲ ತುಂಬಿಕೊಳ್ಳುತ್ತಿದಾರೆ. ಕಣ್ಣು ಕಾಣಲ್ಲ ಅಂತಾರೆ, ಮತ್ತೆ ಟೈಲರಿಂಗ್ ಮಾಡ್ತಾರಾ ಎಂದು ಅಚ್ಚರಿಯಾಗುತ್ತದೆ. ಮಂಗಳೂರಿನ ಅತ್ತಾವರದ ವಿಶೇಷ ತರಬೇತಿ ರುದ್ರಾಚಾರಿ ಅವರಿಗೆ ವರವಾಗಿದೆ.

    ಕಳೆದ ವರ್ಷ ಸುರಿದ ಮಳೆಯಿಂದಾಗಿ ಇವರ ಮನೆಯೂ ಕೊಚ್ಚಿ ಹೋಗಿದೆ. ಬ್ಯಾಂಕ್‍ಗಳನ್ನು ಕೇಳಿದ್ರೆ, ಕಣ್ಣು ಕಾಣದಿರುವ ನೀವು ಟೈಲರಿಂಗ್ ಕೆಲಸ ಹೇಗೆ ಮಾಡ್ತೀರಾ. ನಿಮಗೆ ಸಾಲ ತೀರಿಸೋಕೆ ಆಗುತ್ತಾ ಅಂತ ಪ್ರಶ್ನಿಸ್ತಿವೆಯೇ ಹೊರತು ಸಾಲ ಕೊಡುತ್ತಿಲ್ಲ. ರುದ್ರಾಚಾರಿ ಅವರ ಪತ್ನಿ ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ.

    ಬದುಕಿಗೆ ಬೆಳಕಾಗಿದ್ದ ತಾಯಿಯನ್ನು 4 ವರ್ಷದ ಹಿಂದೆ ಕಳೆದುಕೊಂಡಿದ್ದು ಈಗಲೂ ಅಮ್ಮನ ನೆನೆದು ಕಣ್ಣೀರಾಗ್ತಾರೆ. ಇಬ್ಬರು ಮಕ್ಕಳಿದ್ದರೂ ಜೊತೆಗಿಲ್ಲ. ಒಟ್ಟಿನಲ್ಲಿ ಕಣ್ಣು ಕಾಣದಿದ್ದರೂ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವ ಇವರಿಗೆ ನಮ್ಮದೊಂದು ಸಲಾಂ.

  • ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದ ಆ ಅಂಧರ ಕುಟುಂಬಕ್ಕೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಂಟಕವಾಗಿ ಮಾರ್ಪಟ್ಟಿದೆ. ಈ ಅಂಧರ ಜೀವನೋಪಾಯಕ್ಕಿದ್ದ ಏಕೈಕ ಟೀ ಅಂಗಡಿಯನ್ನ ಅಧಿಕಾರಿಗಳು ಕುಂಟು ನೆಪವೊಡ್ಡಿ ಎತ್ತಂಗಡಿ ಮಾಡಿಸಿದ್ದಾರೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ದಾಬಸ್‍ಪೇಟೆಯಲ್ಲಿ ನಡೆದಿದೆ. ಇಲ್ಲಿನ ಲೋಕೇಶ್ ಎಂಬವರ ಕುಟುಂಬ ಸಾಕಷ್ಟು ವರ್ಷಗಳಿಂದ ಟೀ ಮಾರುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಣ್ಣು ಕಾಣದೆ ಕೇವಲ ಶೇ.20ರಷ್ಟು ಮಾತ್ರ ಕಾಣುತ್ತದೆ. ಹೀಗಿದ್ದರೂ ಸ್ವಾಭಿಮಾನದ ಬದುಕನ್ನ ಬಿಟ್ಟುಕೊಡದ ಇವರೆಲ್ಲಾ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ, ಜೀವನೋಪಾಯಕ್ಕಾಗಿ ಟೀ ಅಂಗಡಿಯೊಂದನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಆದ್ರೆ ಇದೀಗ ಕೆ.ಐ.ಎ.ಡಿ.ಬಿ ಸಂಸ್ಥೆ ಅಂಧರು ಇಟ್ಟುಕೊಂಡಿದ್ದ ಟೀ ಅಂಗಡಿಯನ್ನ ಎತ್ತಂಗಡಿ ಮಾಡಿದ್ದು, ಇವರ ಜೀವನ ಇದೀಗ ಬೀದಿಪಾಲಾಗಿದೆ. ಹೀಗಾಗಿ ನಮಗೆ ಇಲ್ಲಿನ ಅಧಿಕಾರಿಗಳು ಮತ್ತೆ ಟೀ ಅಂಗಡಿಯನ್ನ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಅಂಧ ಲೋಕೇಶ್ ಕುಟುಂಬ ಪರಿಪರಿಯಾಗಿ ಮಾಧ್ಯಮದಗಳ ಮುಂದೆ ಬೇಡಿಕೊಳ್ಳುತ್ತಿದ್ದಾರೆ.

    ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಜನಪ್ರತಿಧಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಅಂತ ಕುಟುಂಬದ ಹನುಮಕ್ಕ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

    ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

    ಬಾಗಲಕೋಟೆ: ಅಂಧನಾದ್ರೂ ಸ್ವಾಭಿಮಾನ ಜೀವನ ನಡೆಸುತ್ತಿರುವ ಜಿಲ್ಲೆಯ ಬೀಳಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರಾಜ್ ನೇತ್ರ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಬಸವರಾಜ್ ಹುಟ್ಟು ಅಂಧರೇನಲ್ಲ, 15 ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ತುತ್ತಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಕಣ್ಣುಗಳು ಹೋದರೂ ಧೃತಿಗೆಡದ ಬಸವರಾಜ್ ಗ್ರಾಮದಿಂದ ಗ್ರಾಮಗಳಿಗೆ ತಿರುಗಿ ಪುಸ್ತಕ, ಪೆನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

    ಬಡ ಕುಟುಂಬದಲ್ಲಿ ಹುಟ್ಟಿರುವ ಬಸವರಾಜ್ ತಂದೆ-ತಾಯಿಯ ನಾಲ್ಕನೇ ಮಗ. ದಿನ ನಿತ್ಯದ ಚಟುವಟಿಕೆಗಾಗಿ ಪೋಷಕರನ್ನು ಅವಲಂಬಿಸಿರುವ ಬಸವರಾಜ್ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬಸವರಾಜ್ ಕುಟುಂಬಸ್ಥರು ಆರ್ಥಿಕವಾಗಿ ಸಬಲರಿಲ್ಲದ ಕಾರಣ ದೃಷ್ಟಿ ಕಳೆದುಕೊಂಡ ಮಗನಿಗೆ ಚಿಕಿತ್ಸೆ ಕೊಡಿಸಿಲ್ಲ. ಬಸವರಾಜ್ ಸಹೋದರರೆಲ್ಲರಿಗೂ ಮದುವೆ ಆಗಿದ್ದು, ಮುಂದೆ ತನ್ನನ್ನು ಬಿಟ್ಟು ಹೋದ್ರೆ ಜೀವನ ನಡೆಸುವುದರ ಬಗ್ಗೆ ಚಿಂತಿತರಾಗಿದ್ದಾರೆ.

    ಬಸವರಾಜ್ ಕಣ್ಣುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ದೃಷ್ಟಿ ಬರಬಹುದೆಂಬ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಣ್ಣಿನ ದೃಷ್ಟಿ ಬರದೇ ಇದ್ದರೂ ಸಣ್ಣದಾದ ಪುಸ್ತಕದ ಅಂಗಡಿ ಹಾಕಿಕೊಟ್ಟರೆ ಸ್ವಾಭಿಮಾನದ ಜೀವನ ನಡೆಸಬಹುದು ಅಂತಾ ಬಸವರಾಜ್ ಹೇಳುತ್ತಾರೆ.

     

    https://youtu.be/yc54skxS9tQ

  • ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ಅಂಧನಾದ್ರೂ ಅಂದವಾದ ಬದುಕು – ದಿನಕ್ಕೆ 2 ಸಾವಿರ ತೆಂಗಿನಕಾಯಿ ಸುಲೀತಾರೆ ತುರುವೇಕೆರೆಯ ಕುಮಾರಯ್ಯ

    ತುಮಕೂರು: ಬದುಕುವ ಹಂಬಲ ಎಂಥವರನ್ನೂ ಎಂಥ ಕೆಲಸಕ್ಕೂ ಕರೆದೊಯ್ಯುತ್ತೆ ಅನ್ನೋದಕ್ಕೆ ಈ ವ್ಯಕ್ತಿ ಪತ್ರಕ್ಷ ಸಾಕ್ಷಿ. ಕಣ್ಣು ಕಾಣಿಸದಿದ್ದರೂ ತೆಂಗಿನ ಕಾಯಿ ಸುಲಿಯುವುದರಲ್ಲಿ ನಮ್ಮ ಇಂದಿನ ಪಬ್ಲಿಕ್ ಹೀರೋ ಎಕ್ಸ್‍ಪರ್ಟ್ ಆಗಿದ್ದಾರೆ ಅಂತಲೇ ಹೇಳಬಹುದು.

    ತುಮಕೂರಿನ ತುರುವೇಕೆರೆ ತಾಲೂಕಿನ ಹಿರೇಡೊಂಕಿಹಳ್ಳಿ ನಿವಾಸಿಯಾಗಿರೋ ಕುಮಾರಯ್ಯ ಅವರಿಗೆ ಎರಡು ಕಣ್ಣು ಕಾಣಿಸದಿದ್ದರೂ ದಿನವೊಂದಕ್ಕೆ ಬರೋಬ್ಬರಿ 2 ಸಾವಿರ ತೆಂಗಿನ ಕಾಯಿ ಸುಲೀತಾರೆ. ಒಂದು ಕಾಯಿಗೆ 40 ಪೈಸೆಯಂತೆ 800 ರೂಪಾಯಿ ಸಂಪಾದಿಸ್ತಿದ್ದಾರೆ. ಕಣ್ಣು ಕಾಣುವವರಿಗೂ ನಾಚಿಸುವಂತೆ ಸರಾಗವಾಗಿ ಒಮ್ಮೆಯೂ ದಸಿ ಚುಚ್ಚಿಸಿಕೊಳ್ಳದೆ ಕಾಯಿ ಸುಲಿಯುತ್ತಾರೆ.

    38 ವರ್ಷದ ಕುಮಾರಯ್ಯ ಹುಟ್ಟು ಕುರುಡರಲ್ಲ. 15 ವರ್ಷದ ಹಿಂದೆ ನರಸಂಬಂಧಿ ಕಾಯಿಲೆಯಿಂದ ದೃಷ್ಠಿ ಕಳೆದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ. ಕುಮಾರಯ್ಯಗೆ ಪತ್ನಿ ಮಂಜಮ್ಮ, ಇಬ್ಬರು ಮಕ್ಕಳು ಇದ್ದಾರೆ. ಯಾರಿಗೂ ಯಾವೂದಕ್ಕೂ ಕಡಿಮೆ ಇಲ್ಲದೆ ಸುಂದರವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

    https://www.youtube.com/watch?v=Gs4QWuSAauQ

  • ವಿಜಯಪುರದ ಅಂಧನ ಬಾಳಿಗೆ ಬೆಳಕಾದ ಪ್ರಧಾನಿ ಮೋದಿ!

    ವಿಜಯಪುರದ ಅಂಧನ ಬಾಳಿಗೆ ಬೆಳಕಾದ ಪ್ರಧಾನಿ ಮೋದಿ!

    ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಸೂರಿಲ್ಲದೇ ಗೋಳಾಡುತ್ತಿದ್ದ ಜಿಲ್ಲೆಯ ಅಂಧರೊಬ್ಬರಿಗೆ ಸೂರು ಕಲ್ಪಿಸಿಕೊಡೋ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.

    ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಅಂಧ ಕಾಶಿನಾಥ್ ಸೂರಿಲ್ಲದೆ 20 ವರ್ಷಗಳಿಂದ ಗೋಳಾಡುತ್ತಿದ್ದರು. ಸೂರಿಗಾಗಿ ಅನೇಕ ಬಾರಿ ಕಾಶಿನಾಥ್ ಇಂಚಗೇರಿ ಗ್ರಾಮದ ಪಂಚಾಯ್ತಿ ಮೊರೆ ಹೋಗಿದ್ದರು. ಆದರೆ ಅದಕ್ಕೆ ಕ್ಯಾರೆ ಅನ್ನದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಳು ಅಸಡ್ಡೆ ತೋರಿದ್ದಾರೆ.

    ಇದರಿಂದ ನೊಂದಿದ್ದ ಕಾಶಿನಾಥ್ ಗೆ ಇಂಚಗೇರಿಯ ಯುವಕರು ಸಮಾಧಾನ ಹೇಳಿ ಬಳಿಕ ಅವರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರಧಾನಿಯವರು ಕೂಡಲೇ ಕಾಶಿನಾಥ್ ಗೆ ಸೂರು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

    ಈ ಹಿಂದೆ ಸೂರು ಕಲ್ಪಿಸಲು ಸತಾಯಿಸಿದ್ದಾರೋ ಅವರೇ ಬಂದು ಪರಿಶೀಲಿಸಿ ಕಾಶಿನಾಥ್ ಗೆ 1 ಲಕ್ಷದ 50 ಸಾವಿರು ರೂ. ನಲ್ಲಿ ಸೂರು ಕಟ್ಟಿಕೊಟ್ಟಿದ್ದಾರೆ. ಈ ರೀತಿ ಅಂಧ ಕಾಶಿನಾಥ್ ನ ಬಾಳಿಗೆ ಮೋದಿ ಅವರು ಬೆಳಕಾಗಿದ್ದಾರೆ. ತನಗೆ ಸಹಾಯ ಮಾಡಿದ ಇಂಚಗೇರಿ ಯುವಕರಿಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಕಾಶಿನಾಥ್ ಪಬ್ಲಿಕ್ ಟಿವಿ ಮುಖಾಂತರ ಅಭಿನಂದನೆ ಸಲ್ಲಿಸಿದ್ದಾರೆ.

     

  • ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

    ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

    ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ.

    ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ ಈ ಅಣ್ಣನ ಆರ್ಶೀವಾದ ಪಡಿಯುತ್ತಾರೆ. ಹಾಸ್ಯ ಕವಿ ಎಂದೇ ಗುರುತಿಸಿಕೊಂಡಿರುವ ಜಗನ್ನಾಥ್ ಅದೆಷ್ಟೋ ಸಹೋದರಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ.

    ರಕ್ಷಾ ಬಂಧನದ ದಿನ ಇವರ ಕೈಗಳು ರಾಖಿಗಳಿಂದ ಕಂಗೊಳಿಸುತ್ತಿರುತ್ತವೆ. ರಾಖಿ ಕಟ್ಟಿದ ಸಹೋದರಿಯರಿಗೆ ನೆನಪಿನ ಕಾಣಿಕೆಯಾಗಿ ಉಡುಗೊರೆಯನ್ನೂ ಕೊಡುವ ವಾಡಿಕೆ ಇದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಸಿಕೊಂಡು ಬರುತ್ತಿರುವ ಜಗನ್ನಾಥ್ ಈ ಮೂಲಕ ತನಗಿಲ್ಲದ ಹೆತ್ತವರ ಪ್ರೀತಿಯನ್ನ ಕಂಡಿದ್ದಾರೆ.