Tag: ಅಂತ್ಯೋದಯ

  • ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

    ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

    ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಮಾರ್ಗಸೂಚಿ ಪ್ರಕಟವಾಗಿದ್ದು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ (BPL, APL, Antyodaya) ಹೊಂದಿದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.

    ಕಾರ್ಡ್​ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ 2 ಸಾವಿರ ರೂ. ಸಿಗಲಿದ್ದು ಒಂದು ಕುಟುಂಬದ ಓರ್ವ ಮಹಿಳೆಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ.

     

    ಜೂನ್ 15 ರಿಂದ ಜುಲೈ 15ರ ವರೆಗೆ ಸೇವಾಸಿಂಧು (Seva Sindhu) ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದನ್ನೂ ಓದಿ: ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

     

    ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಯಜಮಾನಿ ಅಥವಾ ಪತಿ ಜಿಎಸ್​​ಟಿ ರಿಟರ್ನ್ ಸಲ್ಲಿಸುವವರರಾಗಿದ್ದಲ್ಲಿ ಈ ಯೋಜನೆಯ ಲಾಭ ಸಿಗುವುದಿಲ್ಲ.

    ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿ ಎಚ್ಚರಿಕೆಯನ್ನು ನೀಡಲಾಗಿದೆ.

  • ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ಬೆಂಗಳೂರು: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ನೀಡಿದೆ.

    ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಆರಂಭಿಸಿತ್ತು. ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಪ್ರಕ್ರಿಯೆ ನಡೆಸಿತ್ತು. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್

    ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಮತ್ತು ನಾಲ್ಕು ಚಕ್ರದ ವೈಯಕ್ತಿಕ ವಾಹನ ಇರುವವರು ಅಂತ್ಯೋದಯ ಅಥವಾ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಇಲಾಖೆ ಪಟ್ಟಿ ಮಾಡಿತ್ತು.

    ಈ ಸಂಬಂಧ ಕ್ರಮ ಕೈಗೊಳ್ಳಲು ಎಲ್ಲ ಡಿಸಿಗಳು ಮತ್ತು ಇಲಾಖೆ ಜಂಟಿ/ಉಪನಿರ್ದೇಶಕರಿಗೂ ಈ ಹಿಂದೆ ಆಹಾರ ಇಲಾಖೆ ಸೂಚನೆ ನೀಡಿತ್ತು. ಆದರೆ ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರನ್ನು ಅನರ್ಹ ಪಟ್ಟಿಗೆ ಸೇರಿಸಿರುವುದಕ್ಕೆ ಸರ್ಕಾರ ಹಾಗೂ ಪಕ್ಷದವರಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದೇಶ ವಾಪಸ್‌ ತೆಗೆದುಕೊಳ್ಳಲು ಸಿಎಂ ಮೇಲೆ ಒತ್ತಡ ಕೂಡ ಹೇರಲಾಗಿತ್ತು. ಇದನ್ನೂ ಓದಿ: ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ

    ಇದೀಗ ತನ್ನ ಸುತ್ತೋಲೆಯನ್ನು ಮುಂದಿನ ಆದೇಶದವರೆಗೆ ಆಹಾರ ಇಲಾಖೆ ತಡೆ ಹಿಡಿದಿದೆ. ಆ ಸಂಬಂಧ ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ನವದೆಹಲಿ: ದೇಶದ ಟಾಪ್ 10 ಗ್ರಾಮಗಳ ಪಟ್ಟಿಯಲ್ಲಿ ರಾಜ್ಯದ ಐದು ಗ್ರಾಮಗಳು, ಟಾಪ್ 11-20ರ ಪಟ್ಟಿಯಲ್ಲಿ 41 ಗ್ರಾಮಗಳು ಸ್ಥಾನ ಪಡೆದಿವೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, 100ರಲ್ಲಿ 87 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ದೇಶದಲ್ಲೇ ಐದನೇ ಸ್ಥಾನ ಪಡೆದಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಒಟ್ಟು 41,617 ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 92 ಅಂಕ ಪಡೆದ ತೆಲಂಗಾಣದ ತೆಲ್ಲಾಪುರ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಆಂಧ್ರದ ಚಿತ್ತೂರು ಜಿಲ್ಲೆಯ ಕಲಿಕಿರಿ ಜಿಲ್ಲೆಯ ಪರಪಟ್ಲಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

    100 ಅಂಕ ಹೇಗೆ?
    ಪ್ರಾಥಮಿಕ ಅಂಶ 4, ಮೂಲ ಸೌಕರ್ಯ 64, ಆರ್ಥಿಕ ಅಭಿವೃದ್ಧಿ 4, ಆರೋಗ್ಯ 18, ಮಹಿಳಾ ಸಬಲೀಕರಣ 7, ಆರ್ಥಿಕ ಒಳಗೊಳ್ಳುವಿಕೆ 3 ಅಂಕ ನಿಗದಿ ಪಡಿಸಲಾಗಿತ್ತು.

    ಪಟ್ಟಿಯಲ್ಲಿರುವ ರಾಜ್ಯದ ಗ್ರಾಮಗಳು:
    ಟಾಪ್ -10 ಪಟ್ಟಿ
    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ 87 ಅಂಕಗಳೊಂದಿಗೆ 5ನೇ ಸ್ಥಾನ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ 85 ಅಂಕಗಳೊಂದಿಗೆ 7ನೇ ಸ್ಥಾನ, ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು 84 ಅಂಕಗಳೊಂದಿಗೆ 8ನೇ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ಮತ್ತು ಮಂಡ್ಯದ ಕೆರಗೋಡು 83 ಅಂಕಗಳೊಂದಿಗೆ 9ನೇ ಸ್ಥಾನ ಪಡೆದುಕೊಂಡಿವೆ.

     

     

    ಕರ್ನಾಟಕದ ಟಾಪ್ 20 ಗ್ರಾಮಗಳು
    ಅಗ್ರ 20ರೊಳಗೆ ರಾಜ್ಯದ 41 ಗ್ರಾಮಗಳಿದ್ದು ದಕ್ಷಿಣ ಕನ್ನಡದ 14, ಉಡುಪಿಯ 10 ಮತ್ತು ಮಂಡ್ಯದ 6 ಗ್ರಾಮಗಳು ಸ್ಥಾನ ಪಡೆದುಕೊಂಡಿವೆ. ಬಾಗಲಕೋಟೆಯ ಕಲದಗಿ 80 ಅಂಕಗಳೊಂದಿಗೆ 12ನೇ ಸ್ಥಾನ ಸಿಕ್ಕಿದರೆ, ಉಡುಪಿಯ ಕೆಮ್ಮಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು 79 ಅಂಕಗಳೊಂದಿಗೆ 13ನೇ ಸ್ಥಾನ ಪಡೆದಿದೆ.

    ಮಂಡ್ಯದ ಮಳವಳ್ಳಿಯ ಹಲಗೂರು 78 ಅಂಕಗಳೊಂದಿಗೆ 14ನೇ ಶ್ರೇಯಾಂಕ, ಉಡುಪಿಯ ಚೆರ್ಕಾಡಿ, ಮೈಸೂರಿನ ನಂಜನಗೂಡು ತಾಲೂಕಿನ ಹದಿನಾರು, ಗದಗದ ಹುಲ್ಕೋಟಿ, ದಕ್ಷಿಣ ಕನ್ನಡದ ಬಂಟ್ವಾಳದ ಕೋಳ್ನಾಡು, ಮಂಗಳೂರು ತಾಲೂಕಿನ ಪಾವೂರು 15ನೇ ಸ್ಥಾನ ಪಡೆದಿವೆ.

    16ನೇ ಸ್ಥಾನ:
    ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ, ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಉಜಿರೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ, ಬೆಂಗಳೂರಿನ ಎಚ್. ಗೊಲ್ಲಹಳ್ಳಿ, ಬೆಳಗಾವಿಯ ಅಥಣಿ ತಾಲೂಕಿನ ಶಿರಗುಪ್ಪಿ 16 ಅಂಕಗಳೊಂದಿಗೆ 16ನೇ ಶ್ರೇಯಾಂಕ ಸಿಕ್ಕಿದೆ.

    17ನೇ ಸ್ಥಾನ:
    ಉಡುಪಿಯ ಬೆಳಪು, ಹಾಸನದ ಬೇಲೂರು ತಾಲೂಕಿನ ಘಟ್ಟದಹಳ್ಳಿ, ಚಾಮರಾಜನಗರದ ಯಳಂದೂರು ವಿಭಾಗದ ಹೊನ್ನೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ, ಮಂಡ್ಯದ ಕೀಲಾರ, ದಕ್ಷಿಣ ಕನ್ನಡದ ಬಂಟ್ವಾಳದ ಕುರ್ನಾಡು, ಉಡುಪಿಯ ಮುದರಂಗಡಿ 75 ಅಂಕಗಳೊಂದಿಗೆ 17ನೇ ಸ್ಥಾನವನ್ನು ಪಡೆದುಕೊಂಡಿದೆ.

    18ನೇ ಸ್ಥಾನ:
    ಉಡುಪಿಯ ಕುಂದಾಪುರ ತಾಲೂಕಿನ ಅಂಪಾರು, ಬೆಂಗಳೂರಿನ ಆನೇಕಲ್‍ನ ದೊಮ್ಮಸಂದ್ರ, ಬೀದರ್‍ನ ಬಸವಕಲ್ಯಾಣದ ಗೊರ್ತ ಬಿ, ಧಾರವಾಡದ ಹೆಬ್ಬಳ್ಳಿ, ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೊಳೆಸಾಲು, ಉಡುಪಿಯ ಪಡುಬಿದ್ರಿ ಮತ್ತು ಪೆರ್ಡೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು 74 ಅಂಕಗಳೊಂದಿಗೆ 18ನೇ ಶ್ರೇಯಾಂಕ ಪಡೆದಿದೆ.

    19ನೇ ಸ್ಥಾನ:
    ದಕ್ಷಿಣ ಕನ್ನಡದ ಮಂಗಳೂರಿನ ಅಂಬ್ಲಾ ಮೊಗ್ರು, ಸುಳ್ಯ ತಾಲೂಕಿನ ಸಂಪಾಜೆ, ಗದಗದ ಮುಂಡರ್ಗಿಯ ದಂಬಾಲ್, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಷಾಲ್, ಉಡುಪಿಯ ಉದ್ಯಾವರ 73 ಅಂಕಗಳನ್ನು ಪಡೆದು 19ನೇ ಶ್ರೇಯಾಂಕ ಪಡೆದಿದೆ.

    20ನೇ ಸ್ಥಾನ
    ಮಂಡ್ಯದ ಮದ್ದೂರಿನ ಬೆಸಗರಹಳ್ಳಿ, ಉಡುಪಿಯ ಉದ್ಯಾವರ ಮತ್ತು ಕುರ್ಕಾಲು, ಕುಂದಾಪುರದ ವಂಡ್ಸೆ , ದ.ಕ ದ ಬಂಟ್ವಾಳದ ಪುದು ಮತ್ತು ರಾಯಿ, ಮಂಗಳೂರಿನ ಪೆರ್ಮುದೆ ಗ್ರಾಮಗಳು 72 ಅಂಕ ಪಡೆದು ಪಟ್ಟಿಯಲ್ಲಿ 20ನೇ ಸ್ಥಾನ ಸಿಕ್ಕಿದೆ.