Tag: ಅಂತಿಮ ಯಾತ್ರೆ

  • ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ

    ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ

    ಅತೀ ಹೆಚ್ಚು ಜನ ಭಾಗಿಯಾದ ವಿಶ್ವದ 4ನೇ ಅಂತಿಮ ಯಾತ್ರೆ

    ದಿಸ್ಪುರ್: ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಅವರ ಅಂತಿಮ ಯಾತ್ರೆ ಸೆ.21ರಂದು ಗುವಾಹಟಿಯಲ್ಲಿ ನಡೆಯಿತು. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಜನರು ಸೇರಿದ 4ನೇ ಅಂತಿಮ ಯಾತ್ರೆ ಎಂದು ದಾಖಲೆ ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ( Limca Book of Records) ಸೇರ್ಪಡೆಯಾಗಿದೆ.

    ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಗಾರ್ಗ್ ಅವರ ಅಂತಿಮ ಯಾತ್ರೆ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಮತ್ತು ರಾಣಿ ಎಲಿಜಬೆತ್ ಅವರಿಗೆ ನೀಡಿದಂತೆ ಇದು ಕೂಡ ಸ್ಮರಣೀಯ ವಿದಾಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

    ಅಂತಿಮ ಯಾತ್ರೆ ವೇಳೆ ಜನಸಾಗರವೇ ಹರಿದುಬಂದಿತ್ತು. ಅಭಿಮಾನಿಗಳು ಕಿಕ್ಕಿರಿದು ಅವರ ಮುಖವನ್ನು ಕೊನೆ ಬಾರಿ ನೋಡಲು ಕಾಯುತ್ತಿದ್ದರು. ಮೆರವೆಣಿಗೆಯಲ್ಲಿ ಸಂಪೂರ್ಣವಾಗಿ ಅವರ ಹಾಡುಗಳ ಸುರಿಮಳೆಯೇ ಸುರಿಯುವಂತೆ ಭಾಸವಾಗುತ್ತಿತ್ತು. ಕಿಂಗ್ ಆಫ್ ಹಮ್ಮಿಂಗ್ ಎಂದಲೇ ಹೆಸರು ಪಡೆದಿದ್ದ ಇವರ ಅಂತಿಮ ಯಾತ್ರೆ ಅಸ್ಸಾಮಿ ಸಂಗೀತ ಯುಗದ ಅಂತ್ಯವೆಂಬಂತೆ ಕಾಣುತ್ತಿತ್ತು.

    1972ರಲ್ಲಿ ಜನಿಸಿದ ಗಾರ್ಗ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತದಲ್ಲಿ ತಮ್ಮ ಹೆಸರನ್ನು ಅಚ್ಚಳಿಯಂತೆ ಮಾಡಿದ್ದಾರೆ. ಅಸ್ಸಾಂ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದಾಗ ಜುಬೀನ್ ಗಾರ್ಗ್ ಅವರು ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದರು. ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

    ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.ಇದನ್ನೂ ಓದಿ: ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

  • ವೀರಯೋಧ ಕ್ಯಾ.ಪ್ರಾಂಜಲ್‌ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್‌

    ವೀರಯೋಧ ಕ್ಯಾ.ಪ್ರಾಂಜಲ್‌ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್‌

    – ಮೆರವಣಿಗೆ ಹಾದಿಯುದ್ದಕ್ಕೂ ಕ್ಯಾಪ್ಟನ್‌ಗೆ ಪುಷ್ಪನಮನ ಸಲ್ಲಿಕೆ

    ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಅಂತಿಮ ಯಾತ್ರೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು, ವೀರಯೋಧನಿಗೆ ಭಾವುಕ ವಿದಾಯ ಹೇಳಿದ್ದಾರೆ.

    ಶನಿವಾರ ಬೆಳಗ್ಗೆ ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನರು, ಗಣ್ಯರು, ಬಂಧು-ಬಾಂಧವರು ಆಗಮಿಸಿ ವೀರಯೋಧನ ಅಂತಿಮ ದರ್ಶನ ಪಡೆದರು. ಈಗ ಪ್ರಾಂಜಲ್‌ ಅಂತಿಮ ಯಾತ್ರೆ ನಡೆಯುತ್ತಿದೆ. ಇದನ್ನೂ ಓದಿ: ತಂದೆ ಪ್ರತಿಷ್ಠಿತ ಕಂಪನಿ ಎಂಡಿ.. ದೊಡ್ಡ ಕುಟುಂಬದವರಾದ್ರೂ ಸೇನೆ ಸೇರಿದ್ರು ಪ್ರಾಂಜಲ್: ತರಬೇತುದಾರರ ಮನದಾಳ

    ಜಿಗಣಿ ಓಟಿಸಿ ಸರ್ಕಲ್‌, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್‌ ರೋಡ್‌, ಕೋನಪ್ಪನ ಅಗ್ರಹಾರ ಸರ್ಕಲ್‌, ಕೂಡ್ಲುಗೇಟ್‌ ಮೂಲಕ ಹುತಾತ್ಮ ಯೋಧನ ಅಂತಿಮ ಯಾತ್ರೆ ಸಾಗಿದೆ. ಮಾರ್ಗದುದ್ದಕ್ಕೂ ನಿಂತಿದ್ದ ಜನರು ತ್ರಿವರ್ಣ ಧ್ವಜ ಹಿಡಿದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಈ ದೃಶ್ಯವು ನೋಡುಗರ ಮನಕಲಕುವಂತಿದೆ.

    ಸೋಮಸುಂದರ ಪಾಳ್ಯ ಚಿತಾಗಾರದಲ್ಲಿ ಪ್ರಾಂಜಲ್‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್‌ ಅಂತಿಮ ಸಂಸ್ಕಾರ ಮಾಡಲಾಗುವುದು. ಇದನ್ನೂ ಓದಿ: ವೀರ ಮರಣ ಹೊಂದಿದ ಪ್ರಾಂಜಲ್‌ಗೆ ಕಣ್ಣೀರ ನಮನ – ಪುಣ್ಯಪುರುಷ ಎಂದು ಆರ್.ಅಶೋಕ್ ಭಾವುಕ

  • ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಯಾತ್ರೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 9 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಬರಲಿದೆ. ಬಳಿಕ ಕಂಠೀರವ ಸ್ಟುಡಿಯೋದವರೆಗೆ ಮೆರವಣಿಗೆ ಮೂಲಕ ಅಂತಿಮ ಯಾತ್ರೆ ನಡೆಯಲಿದೆ.

    ಅಂಬಿ ಅಂತಿಮ ಯಾನ:
    * ಬೆಳಗ್ಗೆ 9 ಗಂಟೆ – ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ
    * ಬೆಳಗ್ಗೆ 10 ಗಂಟೆ – ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಅಂಬಿ ಹೊತ್ತ ಹೆಲಿಕಾಪ್ಟರ್
    * ಬೆಳಗ್ಗೆ 10.15 ಗಂಟೆ – ಹೆಚ್‍ಎಎಲ್‍ನಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಶಿಫ್ಟ್ (ಸಾರ್ವಜನಿಕ ದರ್ಶನ ಇರಲ್ಲ)
    * ಬೆಳಗ್ಗೆ 11 ಗಂಟೆ – ಕಂಠೀರವ ಸ್ಟೇಡಿಯಂನಿಂದ ತೆರೆದ ವಾಹನದಲ್ಲಿ ಅಂಬಿ ಅಂತಿಮ ಯಾನ ಆರಂಭ
    * ಮಧ್ಯಾಹ್ನ 1 ಗಂಟೆ – ಕಂಠೀರವ ಸ್ಟುಡಿಯೋಗೆ ಅಂಬರೀಶ್ ಪಾರ್ಥಿವ ಶರೀರ ರವಾನೆ
    * ಮಧ್ಯಾಹ್ನ 2 ಗಂಟೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಣ್ಣಾವ್ರ ಸ್ಮಾರಕದ ಪಕ್ಕದಲ್ಲಿ ಅಂಬಿ ಅಂತ್ಯಕ್ರಿಯೆ


    ಅಂತಿಮ ಯಾನದ ಮಾರ್ಗ
    ಕಂಠೀರವ ಕ್ರೀಡಾಂಗಣದಿಂದ ಹೊರಡುವ ಮೆರವಣಿಗೆ ಕೆಜಿ ರೋಡ್ ಮೂಲಕ ಸಾಗಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪಿಎಸ್, ಪೊಲೀಸ್ ಕಾರ್ನರ್, ಮೈಸೂರ್ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಪ್ಯಾಲೇಸ್ ರೋಡ್ ಮೂಲಕ ಸಾಗಲಿದೆ. ಬಳಿಕ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಹೈಗ್ರೌಂಡ್ಸ್ ಪಿಎಸ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್, ಬಿಎಚ್‍ಇಐ ಮೂಲಕ ಯಶವಂತಪುರ ಫ್ಲೈಓವರ್ ಮೇಲೇರಿ ಮೆಟ್ರೋ ಬಳಿ ಬಲ ತಿರುವು ಪಡೆದು ಆರ್‍ಎಂಸಿ ಯಾರ್ಡ್ ಪಿಎಸ್ ಮಾರ್ಗವಾಗಿ ಗೊರುಗುಂಟೆಪಾಳ್ಯ ಸಿಗ್ನಲ್ ಬಳಿ ಎಡ ತಿರುವು ಪಡೆದು ಸಿಎಂಟಿಐ ಮಾರ್ಗ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.

    ಮಾರ್ಗ ಬದಲಾವಣೆ:
    ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಅಂತಿಮ ಯಾತ್ರೆಯನ್ನು ಮೊದಲು ರಾಜಭವನ, ಕಸ್ತೂರ್ ಬಾ ರಸ್ತೆ ಮೂಲಕ ಕರೆತರಲು ಯೋಜನೆ ರೂಪಿಸಿಲಾಗಿತ್ತು. ಆದರೆ ಟ್ರಾಫಿಕ್ ಜಾಮ್ ಹಾಗೂ ಗಣ್ಯ ವ್ಯಕ್ತಿಗಳ ಸಂಚಾರ ಪ್ರಯುಕ್ತ ಈ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

    ಔಟರ್ ರಿಂಗ್ ರಸ್ತೆಯ ಸುಮನಹಳ್ಳಿ ಜಂಕ್ಷನ್ ನಿಂದ ಗೊರಗುರಂಟೆಪಾಳ್ಯ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಸುಮನಹಳ್ಳಿಯಿಂದ ಮಾಗಡಿ ರಸ್ತೆ, ಕಾಮಾಕ್ಷಿ ಪಾಳ್ಯ, ಕಾರ್ಡ್ ರಸ್ತೆ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಗೊರಗುಂಟೆಪಾಳ್ಯದಿಂದ ಎಂಇಎ ಜಂಕ್ಷನ್, ಆರೆಂಸಿ ಯಾರ್ಡ್ ನಿಂದ ಸೋಪ್ ಫ್ಯಾಕ್ಟರಿ ಮೂಲಕ ಸುಮನಹಳ್ಳಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಿಎಎಲ್ ರಸ್ತೆ, ಗಂಗಮ್ಮ ಸರ್ಕಲ್ ನಿಂದ ತುಮಕೂರು ರಸ್ತೆಗೆ ಹೋಗಲು ಅವಕಾಶ ನೀಡಲಾಗಿದೆ.

    ಇಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಆರಂಭವಾಗುವ ಮೆರವಣಿಗೆಯಿಂದ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುವ ಲಕ್ಷಣಗಳು ಇದ್ದು, ಏರ್ ಪೋರ್ಟ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟನೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸೋದು ಉತ್ತಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv