Tag: ಅಂತಿಮ್: ದಿ ಫೈನಲ್ ಟ್ರುಥ್

  • ಚಿತ್ರಮಂದಿರದೊಳಗೆ ಪಟಾಕಿ ಹೊಡಿಬೇಡಿ – ಅಭಿಮಾನಿಗಳಲ್ಲಿ ಸಲ್ಮಾನ್ ಖಾನ್ ಮನವಿ

    ಚಿತ್ರಮಂದಿರದೊಳಗೆ ಪಟಾಕಿ ಹೊಡಿಬೇಡಿ – ಅಭಿಮಾನಿಗಳಲ್ಲಿ ಸಲ್ಮಾನ್ ಖಾನ್ ಮನವಿ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಚಿತ್ರಮಂದಿರ ಒಳಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ.

    ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್: ದಿ ಫೈನಲ್ ಟ್ರುಥ್ ಶುಕ್ರವಾರ ತೆರೆಕಂಡಿತ್ತು. ಈ ವೇಳೆ ಚಿತ್ರ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಎಂಟ್ರಿ ಆಗುತ್ತಿದ್ದಂತೆಯೇ ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ

    ಇದೀಗ ಈ ವೀಡಿಯೋವನ್ನು ಸಲ್ಮಾನ್ ಖಾನ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಈ ರೀತಿ ವರ್ತಿಸದಂತೆ ವಿನಂತಿಸಿದ್ದಾರೆ. ಇದನ್ನೂ ಓದಿ: ಕಿಚ್ಚು ಎಂದರೇನು – ಅಭಿಮಾನಿಗಳಿಗೆ ‘ಬೆಂಕಿ’ ಪ್ರಶ್ನೆ ಕೇಳಿದ ರಶ್ಮಿಕಾ

     

    View this post on Instagram

     

    A post shared by Salman Khan (@beingsalmankhan)

    ಪಟಾಕಿಗಳನ್ನು ಥಿಯೇಟರ್ ಒಳಗೆ ತೆಗೆದುಕೊಂಡು ಹೋಗದಂತೆ ಅಭಿಮಾನಿಗಳಲ್ಲಿ ನಾನು ವಿನಂತಿಸುತ್ತೇನೆ. ಏಕೆಂದರೆ ಇದರಿಂದ ಭಾರೀ ಬೆಂಕಿ ಅವಘಡ ಸಂಭವಿಸಬಹುದು. ಇದರಿಂದಾಗಿ ನಿಮಗೂ ಮತ್ತು ಇತರರಿಗೂ ಅಪಾಯವಾಗುತ್ತದೆ. ಚಿತ್ರಮಂದಿರದ ಒಳಗೆ ಪಟಾಕಿ ತೆಗೆದುಕೊಂಡು ಹೋಗದಂತೆ ಸೆಕ್ಯೂರಿಟಿಗಳು ಪ್ರವೇಶ ದ್ವಾರದಲ್ಲಿಯೇ ಪರಿಶೀಲನೆ ನಡೆಸಿ ನಂತರ ಪ್ರೇಕ್ಷಕರನ್ನು ಒಳಗೆ ಬಿಡಬೇಕೆಂದು ನಾನು ಥಿಯೇಟರ್ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ಸಿನಿಮಾವನ್ನು ನೋಡಿ ಆನಂದಿಸಿ. ಆದರೆ ದಯವಿಟ್ಟು ಈ ರೀತಿ ಎಲ್ಲಾ ಮಾಡಬೇಡಿ ಅಂತ ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.