Tag: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  • ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ ಕೇಸ್ – ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಆರೋಪದಡಿ ಗ್ರಾಹಕನ ವಿರುದ್ಧ ದೂರು

    ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ ಕೇಸ್ – ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಆರೋಪದಡಿ ಗ್ರಾಹಕನ ವಿರುದ್ಧ ದೂರು

    ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ (Rameshwaram Cafe) ತಿಂಡಿಯಲ್ಲಿ ಜಿರಳೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕನ ವಿರುದ್ಧ ಹಣಕ್ಕಾಗಿ ಬ್ಲ್ಯಾಕ್‌ಮೇಲ್ (Blackmail) ಆರೋಪದಡಿ ದೂರು ದಾಖಲಾಗಿದೆ.

    ಗುರುವಾರ ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ (Bengaluru Airport) ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕನೋರ್ವ ಪೊಂಗಲ್ ಖರೀದಿಸಿ, ಸೇವಿಸುತ್ತಿರುವಾಗ ಅದರಲ್ಲಿ ಜಿರಳೆ ಪತ್ತೆಯಾಗಿದೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ ಬ್ರ್ಯಾಂಡ್‌ಮೇಲ್‌ಗೆ ಹಾನಿ ಮಾಡಲು ಹೊರಟಿದ್ದಾರೆ. ಜೊತೆಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಗ್ರಾಹಕನ ವಿರುದ್ಧ ದಾಖಲಾಗಿದೆ.ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ

    ಸ್ಪಷ್ಟನೆ ಏನು?
    ಭಾರತದ ಅತ್ಯಂತ ಜನಪ್ರಿಯ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆ, ತನ್ನ ಬೆಂಗಳೂರು ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ ಆಹಾರ ಮಾಲಿನ್ಯದ ಸುಳ್ಳು ಘಟನೆಯನ್ನು ಪ್ರದರ್ಶಿಸಿ, ಬ್ರ‍್ಯಾಂಡ್‌ಗೆ ಹಾನಿಯಾಗಿದೆ. ಜೊತೆಗೆ ಹಣ ಸುಲಿಗೆ ಮಾಡಲು ಯತ್ನಿಸಿದ ವ್ಯಕ್ತಿಗಳ ಗುಂಪಿನ ವಿರುದ್ಧ ಅಧಿಕೃತ ಪೊಲೀಸ್ ದೂರು ದಾಖಲಿಸಿದೆ.

    ಬ್ರ‍್ಯಾಂಡ್‌ನ ಮುಖ್ಯಸ್ಥರು ನೀಡಿದ ಔಪಚಾರಿಕ ದೂರಿನ ಪ್ರಕಾರ, ಜು.24ರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ, 5-7 ವ್ಯಕ್ತಿಗಳ ಗುಂಪು ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸಿದ್ದಾರೆ. ನೀಡಿದ ಆಹಾರದಲ್ಲಿ ಜಿರಳೆಯಿದೆ ಎಂದು ತಪ್ಪಾಗಿ ಆರೋಪಿಸಿದ್ದಾರೆ. ಬಳಿಕ ವ್ಯಕ್ತಿಗಳು ನಮಗೆ ಪರಿಹಾರ ನೀಡದಿದ್ದಲ್ಲಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದೆ.

    ಸ್ವಲ್ಪ ಸಮಯದ ನಂತರ ಕೆಫೆಗೆ 25 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಕರೆ ಬಂದಿತ್ತು. ಬಳಿಕ ಕೆಫೆಯು ಕರೆ ದಾಖಲೆಗಳು, ಸಂದೇಶಗಳ ಸ್ಕ್ರೀನ್‌ಶಾಟ್ ಮತ್ತು ಇತರ ದಾಖಲಾತಿಗಳನ್ನು ಪೊಲೀಸರಿಗೆ ಸಲ್ಲಿಸಿದೆ.

    ಈ ಆರೋಪವನ್ನು ತಳ್ಳಿಹಾಕಿರುವ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್, ನಮ್ಮ ಆಹಾರದಲ್ಲಿ ಹುಳು ಅಥವಾ ಕೀಟ ಕಂಡುಬಂದಿದೆ ಎಂಬ ಆಧಾರರಹಿತ ಆರೋಪವನ್ನು ನಾವು ಒಪ್ಪುವುದಿಲ್ಲ. ನಾವು ಕಟ್ಟುನಿಟ್ಟಾದ, ಗುಣಮಟ್ಟದ ಪ್ರೋಟೋಕಾಲ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಇದು ಸ್ಪಷ್ಟವಾಗಿ ಹಣ ಸುಲಿಗೆ ಮಾಡುವ ಮತ್ತು ನಮ್ಮ ಬ್ರ‍್ಯಾಂಡ್‌ಗೆ ಹಾನಿ ಮಾಡುವ ದುರುದ್ದೇಶದ ಕೃತ್ಯವಾಗಿದೆ ಎಂದಿದ್ದಾರೆ.

    ಈ ಹಿಂದೆಯೂ ಇದೇ ರೀತಿಯ ಪ್ರಯತ್ನಗಳು ನಡೆದಿವೆ, ಗ್ರಾಹಕರು ಆಹಾರದಲ್ಲಿ ಕಲ್ಲು, ಕೀಟಗಳನ್ನು ಹಾಕಿದಾಗ ರೆಡ್‌ಹ್ಯಾಂಡ್‌ಗೆ ಸಿಕ್ಕಿಬಿದ್ದಿದ್ದಾರೆ. ನಾವು ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ. ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಮತ್ತು ಅಂತಹ ಕೃತ್ಯಗಳನ್ನು ಬಹಿರಂಗಪಡಿಸಲು ಮತ್ತು ತಡೆಯಲು ಕಠಿಣ ಕಾನೂನು ಕ್ರಮವನ್ನು ಅನುಸರಿಸುತ್ತೇವೆ. ಗ್ರಾಹಕರನ್ನು ದಾರಿತಪ್ಪಿಸುವ ಕೆಲಸ ಮಾಡುವ ವ್ಯವಹಾರಗಳ ವಿಷಯವನ್ನು ಹಂಚಿಕೊಳ್ಳುವುದನ್ನು ತಡೆಯಲು ರಾಮೇಶ್ವರಂ ಕೆಫೆ ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಒತ್ತಾಯಿಸುತ್ತದೆ ಎಂದಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ವಂಚನೆ | ರಾಹುಲ್‌ ಆರೋಪಕ್ಕೆ ಹೈಕೋರ್ಟ್ ತೀರ್ಪಿಗಾಗಿ ಕಾಯಿರಿ ಎಂದ ಚುನಾವಣಾ ಆಯೋಗ

  • ದೆಹಲಿ-ಗೋವಾ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ತುರ್ತು ಲ್ಯಾಂಡಿಂಗ್

    ದೆಹಲಿ-ಗೋವಾ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ತುರ್ತು ಲ್ಯಾಂಡಿಂಗ್

    ಮುಂಬೈ: ದೆಹಲಿಯಿಂದ (Delhi) ಗೋವಾಗೆ (Goa) ತೆರಳುತ್ತಿದ್ದ ಇಂಡಿಗೋ ವಿಮಾನವೊಂದರಲ್ಲಿ (Indigo Flight) ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ (Emergency Landing) ಮಾಡಲಾಯಿತು.

    ವಿಮಾನದ ಎಂಜಿನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಪೈಲಟ್ ತುರ್ತು ಸ್ಥಿತಿಯನ್ನು ಸೂಚಿಸಲು `ಪ್ಯಾನ್-ಪ್ಯಾನ್-ಪ್ಯಾನ್’ ಪ್ರಕಟಿಸಿದ್ದಾರೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

    ಮೂಲಗಳ ಪ್ರಕಾರ, ಇಂಡಿಗೋ ವಿಮಾನ 6E6271 ದೆಹಲಿಯಿಂದ ಗೋವಾಗೆ ತೆರಳುತ್ತಿರುವಾಗ ಎಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಪರಿಣಾಮ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು (Chhatrapati Shivaji Maharaj International Airport) ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಂಡಿಗೋ ಏರ್‌ಲೈನ್ಸ್ ದೃಢಪಡಿಸಿದೆ.

    `ಪ್ಯಾನ್-ಪ್ಯಾನ್-ಪ್ಯಾನ್’ ಎಂಬುದು ವಿಮಾನಯಾನ ಕ್ಷೇತ್ರದಲ್ಲಿ ತುರ್ತು ಸ್ಥಿತಿಯನ್ನು ಸೂಚಿಸುವ ಪ್ರಕಟಣೆಯಾಗಿದ್ದು, ಇದು ಗಂಭೀರವಾದ ತಾಂತ್ರಿಕ ಸಮಸ್ಯೆಯನ್ನು ತಿಳಿಸುತ್ತದೆ. ಆದರೆ ತಕ್ಷಣದ ಅಪಾಯಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆ. ಪೈಲಟ್‌ನ ತ್ವರಿತ ನಿರ್ಧಾರ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

    ಇಂಡಿಗೋ ಏರ್‌ಲೈನ್ಸ್ ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

     

  • ಶಿರಾಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರ ಭೇಟಿ ಮಾಡಿ, ಮನವಿ ಮಾಡ್ತೀವಿ – ಟಿ.ಬಿ.ಜಯಚಂದ್ರ

    ಶಿರಾಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರ ಭೇಟಿ ಮಾಡಿ, ಮನವಿ ಮಾಡ್ತೀವಿ – ಟಿ.ಬಿ.ಜಯಚಂದ್ರ

    ಬೆಂಗಳೂರು: ಶಿರಾಗೆ (Sira) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ ಎಂದು ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ (TB Jayachandra) ಹೇಳಿದರು.ಇದನ್ನೂ ಓದಿ: ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು 30 ಕ್ಕೂ ಹೆಚ್ಚು ಶಾಸಕರಿಂದ ಮನವಿ

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) 4,000 ಎಕರೆಯಲ್ಲಿ ನಿರ್ಮಾಣ ಆಗಿದೆ. ದೇಶದ ನಂಬರ್ ಒನ್ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣ. 5 ಕೋಟಿ ಜನ ಇಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಇರುವ ಮಾನ್ಯತೆ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ. 150 ಕಿ.ಮೀ ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಮಾಡಬೇಕು ಅಂತಿದೆ ಎಂದು ತಿಳಿಸಿದರು.

    ಶಿರಾದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಇವೆ. ಬೆಂಗಳೂರು, ಶಿರಾ ನಡುವೆ 1 ಗಂಟೆಯ ಪ್ರಯಾಣ. ಈ ಎಲ್ಲಾ ಕಾರಣಗಳನ್ನು ಸಿಎಂಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡುತ್ತೇವೆ. ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಏರ್‌ಪೋರ್ಟ್ ಅಥಾರಿಟಿ ಅವರು ಇಷ್ಟು ಬೇಗ ಬರುತ್ತಾರೆ ಎಂದು ನಮಗೂ ಗೊತ್ತಿರಲಿಲ್ಲ. ಆದರೂ ಈಗಲೂ ಅವಕಾಶ ಇದೆ, ಶಿರಾದಲ್ಲಿ ಆಗುತ್ತಾ ಎಂಬುದನ್ನ ಪರಿಶೀಲಿಸಬಹುದು. ಏರ್‌ಪೋರ್ಟ್ 2032ಕ್ಕೆ ಆಗುತ್ತದೆ. ಇನ್ನೂ 8 ವರ್ಷ ಬೇಕು. ಶಿರಾದಲ್ಲಿ ಏರ್‌ಪೋರ್ಟ್ ಆದರೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೆ ಸಹಾಯವಾಗಲಿದೆ ಎಂದಿದ್ದಾರೆ.ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್

  • ಏರ್ ಶೋ ಹೊತ್ತಲ್ಲೇ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

    ಏರ್ ಶೋ ಹೊತ್ತಲ್ಲೇ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

    ಚಿಕ್ಕಬಳ್ಳಾಪುರ: ಏರ್ ಶೋ ಹೊತ್ತಲ್ಲೇ (Air Show) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಏರ್ ಶೋಗಾಗಿ ತಯಾರಿ ನಡೆಯುತ್ತಿರುವಾಗ ಫೆಬ್ರವರಿ 8 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.ಇದನ್ನೂ ಓದಿ: ಕೃತಕ ಬುದ್ದಿಮತ್ತೆ ವಿಚಾರದಲ್ಲಿ ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಮುಂದಡಿ ಇಡಬೇಕು: ಮೋದಿ

    mahantesh6699@proton.mi ಇಮೇಲ್ ಐಡಿ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ದುಷ್ಕರ್ಮಿಗಳು ಏರ್‌ಪೋರ್ಟ್‌ಗೆ ಆಗಮಿಸುವ ವಿಮಾನಗಳಿಗೆ ಡ್ರೋನ್ ಮುಖಾಂತರ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಬೆಂಗಳೂರು, ಚೆನ್ನೈ ಹಾಗೂ ಕೇರಳದಿಂದ ಬರುವ ವಿಮಾನಗಳಿಗೆ ಡ್ರೋನ್ ಬಾಂಬ್ ದಾಳಿ ಬೆದರಿಕೆಯೊಡ್ಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಪತ್ರ ಬರೆದಿದ್ದೇನೆ. ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೋರಿದ್ದೇನೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬರದಿದ್ದರೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಏರ್ ಶೋ ನಡೆಯುತ್ತಿರುವ ಸಂದರ್ಭದಲ್ಲಿ ಬೆದರಿಕೆ ಬಂದ ಹಿನ್ನೆಲೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ದುಷ್ಕರ್ಮಿಗಳ ವಿರುದ್ಧ ಬಿಎನ್‌ಎಸ್ 125, 351, 353 ಆಡಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಏರ್‌ಪೋರ್ಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ಕೈಯಲ್ಲಿ ಭಾರತದ ಭವ್ಯ ಭವಿಷ್ಯ – ರಾಜನಾಥ್ ಸಿಂಗ್

     

  • ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    -ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು; ಸಿಎಂ, ಡಿಸಿಎಂಗೆ ಮನವಿ

    ತುಮಕೂರು: ಜಿಲ್ಲೆಯು ಬಹಳ ವೇಗವಾಗಿ ಬೆಳೆಯಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೆಟ್ರೋ ರೈಲು (Metro Train) ಸೇವೆ ಕಲ್ಪಿಸಲು ಸಮಗ್ರ ಯೋಜನಾ ವರದಿಯ (DPR) ಪರಿಶೀಲನೆ ನಡೆಯುತ್ತಿದೆ ಎಂದು ಜಿ. ಪರಮೇಶ್ವರ್‌ (G Parameshwara) ತಿಳಿಸಿದರು.

    ತುಮಕೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾವಿರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪರಮೇಶ್ವರ್‌ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಇವತ್ತಿನ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡಿದೆ. ಇವತ್ತು 1,250 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 1.5 ಲಕ್ಷ ಫಲಾನುಭವಿಗಳಿಗೆ ಸವಲತ್ತು ಹಂಚಿಕೆಯಾಗಿದೆ. ಕಂದಾಯ ಇಲಾಖೆಯಿಂದ 2 ಸಾವಿರ ಹಕ್ಕು ಪತ್ರ ಕೊಟ್ಟಿದ್ದೇವೆ. 891 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ತುಮಕೂರು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಶ್ಲಾಘಿಸಿದರು.

    ಈಗಾಗಲೇ ಏಷ್ಯಾ ಖಂಡದಲ್ಲೇ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಮೂಲಕ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ತುಮಕೂರು ಜಿಲ್ಲೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. 2023 ರಲ್ಲಿ ಈ ರಾಜ್ಯದ ಜನತೆಗೆ 5 ಗ್ಯಾರಂಟಿ ಭರವಸೆ ಕೊಟ್ಟಿದ್ದೆವು. ಆ ಐದು ಗ್ಯಾರಂಟಿ ಪರಿಪೂರ್ಣವಾಗಿ ಜಾರಿ ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಆದರೆ 10 ಕೆಜಿ ಅಕ್ಕಿ ಕೊಡಲು ಆಗಿಲ್ಲ, ಬದಲಾಗಿ ದುಡ್ಡು ಕೊಟ್ಟಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು

    ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು. ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು. ಇದನ್ನೂ ಓದಿ:  ಪವನ್‌ ಕಲ್ಯಾಣ್‌ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ

    ಮುಂದುವರಿದು… ಪಾವಗಡದಲ್ಲಿ ಭದ್ರಾದಿಂದ ಕುಡಿಯುವ ನೀರು ಬಂದಿದೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೆಲವೇ ಕೆಲವು ವಾರ್ಡ್‌ ಅಭಿವೃದ್ಧಿ ಆಗಿದೆ. ಇನ್ನುಳಿದ ವಾರ್ಡ್‌ ಅಭಿವೃದ್ಧಿಗೆ 500 ಕೋಟಿ ರೂ. ನೀಡಬೇಕು ಎಂದು ಕೋರಿದರು. ಇದನ್ನೂ ಓದಿ: ಸಚಿವ ಸ್ಥಾನ ಉಳಿಸಿಕೊಳ್ಳಲು 1 ತಿಂಗಳ ಮೊದಲೇ ರಿಪೋರ್ಟ್‌ ಕಾರ್ಡ್‌ ಸಲ್ಲಿಸಿದ ಬೋಸರಾಜು

  • ಬೆಂಗ್ಳೂರಿನ 50-60 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಎಂ.ಬಿ ಪಾಟೀಲ್ ಘೋಷಣೆ

    ಬೆಂಗ್ಳೂರಿನ 50-60 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಎಂ.ಬಿ ಪಾಟೀಲ್ ಘೋಷಣೆ

    ಬೆಂಗಳೂರು: ನಗರ ಅಥವಾ ಬೆಂಗಳೂರು ಸುತ್ತಮುತ್ತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣ ಮಾಡಲಾಗುತ್ತದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದರು. ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ (MB Patil) ಉತ್ತರ ನೀಡಿದರು.

    ತುಮಕೂರು ಹಾಗೂ ಚಿತ್ರದುರ್ಗದ ಮಧ್ಯೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಬೆಂಗಳೂರಿನಲ್ಲಿ (Bengaluru) 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಪ್ರಸ್ತಾಪ ಇದೆ. ಈಗಾಗಲೇ ಏರ್‌ಪೋರ್ಟ್‌ ನಿರ್ಮಾಣಕ್ಕೆ 7-8 ಸ್ಥಳಗಳನ್ನ ಗುರುತಿಸಲಾಗಿದೆ. ಈಗ ಇರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಕೂಲ ಅಗುವಂತೆ ಹಾಗೂ ರಾಜ್ಯದ ಜನರಿಗೆ ಅನುಕೂಲ ಆಗುವಂತೆ ಹೊಸ ಏರ್‌ಪೋರ್ಟ್‌ (Airport) ನಿರ್ಮಾಣ ಮಾಡ್ತೀವಿ. ಬೆಂಗಳೂರಿನ 50-60 ಕಿಲೋಮೀಟರ್ ಸುತ್ತಮುತ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದೆ ಅಂತ ತಿಳಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್‌ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ 

    7-8 ಲೊಕೇಶನ್ ಗಳಲ್ಲಿ ಮೆರಿಟ್ ಆಧಾರದಲ್ಲಿ ಜಾಗ ಫೈನಲ್ ಮಾಡಿ ಏರ್‌ಪೋರ್ಟ್‌ ಮಾಡ್ತೀವಿ‌. ತುಮಕೂರು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಏರ್‌ಪೋರ್ಟ್‌ ಮಾಡೊಕೆ ಒತ್ತಡ ಬರ್ತಿದೆ. ಬೆಂಗಳೂರು ಮತ್ತು ರಾಜ್ಯಕ್ಕೆ ಅನುಕೂಲ ಆಗೋ ರೀತಿ ಜಾಗದ ಬಗ್ಗೆ ನಿರ್ಧಾರ ನಾವು ತೆಗೆದುಕೊಳ್ಳಬೇಕು. ಈಗ ಇರುವ ಏರ್‌ಪೋರ್ಟ್‌ 2035ರ ವೇಳೆಗೆ ತನ್ನ ಸಾಮರ್ಥ್ಯದ ಪೀಕ್‌ಗೆ ಹೋಗುತ್ತದೆ‌ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    ಅಷ್ಟರಲ್ಲಿ ಹೊಸ ವಿಮಾನ ನಿಲ್ದಾಣ ಮಾಡುವ ಪ್ಲ್ಯಾನ್ ನಾವು ಮಾಡಿಕೊಳ್ಳಬೇಕು. ಹೊಸ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣ ಪ್ರಾರಂಭ ಮಾಡುವ ಬಗ್ಗೆ ಪ್ರಕ್ರಿಯೆ ಶುರು ಮಾಡಲಾಗಿದೆ. ಏರ್‌ಪೋರ್ಟ್‌ ನಿರ್ಮಾಣ ಮಾಡುವ ಏಜೆನ್ಸಿ (ಹೈಡಕ್) ಜೊತೆಗೂ ಚರ್ಚೆ ಆಗಿದೆ. ಎಲ್ಲಿ ಮಾಡಬೇಕು ಅಂತ ಮೆರಿಟ್ ಆಧಾರದಲ್ಲಿ ಚರ್ಚೆ ನಡೆಸಿ, ಕೇಂದ್ರದ ಜೊತೆಗೂ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Scam | ಕೋಟ್ಯಂತರ ರೂ. ಬೆಲೆ ಬಾಳುವ ಐಷಾರಾಮಿ ಕಾರು ವಶಕ್ಕೆ

  • ಚಿನ್ನ ಕಳ್ಳಸಾಗಣೆ – ಇಂಡಿಗೋ ಏರ್‌ಲೈನ್ಸ್‌ನ ಇಬ್ಬರು ಉದ್ಯೋಗಿಗಳು ಅರೆಸ್ಟ್

    ಚಿನ್ನ ಕಳ್ಳಸಾಗಣೆ – ಇಂಡಿಗೋ ಏರ್‌ಲೈನ್ಸ್‌ನ ಇಬ್ಬರು ಉದ್ಯೋಗಿಗಳು ಅರೆಸ್ಟ್

    ನವದೆಹಲಿ: ಚಿನ್ನ ಕಳ್ಳಸಾಗಣೆ (Gold Smuggling) ಮಾಡಲು ಸಹಕರಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ (IndiGo Airlines) ಇಬ್ಬರು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು (Customs Officials) ಬಂಧಿಸಿದ್ದಾರೆ.

    ಇಂಡಿಗೋ ಏರ್‌ಲೈನ್ಸ್‌ನ ಸಾಜಿದ್ ರೆಹಮಾನ್ ಮತ್ತು ಮೊಹಮ್ಮದ್ ಸಾಮಿಲ್‌ನನ್ನು ಅಂತಾರಾಷ್ಟ್ರೀಯ ವಿಮಾನ (International Airport) ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೆ ಮುಖ್ಯಮಂತ್ರಿಯಾಗಿ – ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ 70ಕ್ಕೂ ಹೆಚ್ಚು ಅರ್ಚಕರು

    ಈ ಇಬ್ಬರು ಅಧಿಕಾರಿಗಳು ಸುಮಾರು 4.9 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕರಿಗೆ ಸಹಕರಿಸಲು ಪ್ರಯತ್ನಿಸುತ್ತಿದ್ದರು. ತಪಾಸಣೆ ವೇಳೆ ವಿಮಾನ ನಿಲ್ದಾಣದಲ್ಲಿ ಲಗೇಜ್ ಬಿಟ್ಟು ಪರಾರಿಯಾದ ಪ್ರಯಾಣಿಕನ ಲಗೇಜ್‌ನಲ್ಲಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 2.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಇತ್ತೀಚೆಗೆ ದೇಶದ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿದ್ದು, ನಿರಂತರವಾಗಿ ಅವುಗಳನ್ನು ಭೇದಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ನಿರಾಣಿ

    ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ನಿರಾಣಿ

    ಬೆಳಗಾವಿ: ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ರೂಪರೇಷಗಳನ್ನು ಹಾಕಿಕೊಳ್ಳಲಾಗಿದ್ದು, ಈ ಯೋಜನೆಯಿಂದ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿ ಡೋಮ್ಯಾಸ್ಟಿಕ್ ಏರ್ ಪೋರ್ಟ್ ಮಾಡಿಕೊಂಡು ಕಿತ್ತೂರಿನಲ್ಲಿಯೂ ಒಂದು ಏರ್ ಪೋರ್ಟ್ ಅನ್ನು ನಿರ್ಮಿಸುವುದಾಗಿ ಮುಂಬರುವ ದಿನಗಳಲ್ಲಿ ಕಾರ್ಯ ನಡೆಯಲಿದೆ. ಈಗಾಗಲೇ ಖಾಸಗಿ ಬಂಡವಾಳ ಹೂಡಿಕೆದಾರರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣವಾಗಲಿದೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದಲು ಮೂಲಭೂತ ಸೌಕರ್ಯ ಬೇಕು. ಕಾರವಾರ ವಿಮಾನ ನಿಲ್ದಾಣ ಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತದೆ. ಅದರಂತೆ, ಕಿತ್ತೂರಿನಲ್ಲಿಯೂ ಒಂದು ವಿಮಾನ ನಿಲ್ದಾಣ ಮಾಡುವ ಖಾಸಗಿ ಕಂಪನಿಯವರು ಅವರು ಸಹ ಸಹಮತ ನೀಡಿದ್ದಾರೆ. ಶೀಘ್ರದಲ್ಲಿಯೇ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

  • ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ವೇಳೆ ಸಂಭವಿಸಬಹುದಾಗಿದ್ದ ಭಾರೀ ಅನುಹುತ ಸ್ವಲ್ಪದರಲ್ಲಿಯೇ ತಪ್ಪಿದೆ.

    ಗುರುವಾರ ಮಧ್ಯಾಹ್ನ ಮಂಗಳೂರಿನಿಂದ ಮುಂಬೈಗೆ ಜೆಟ್ ಏರ್‍ವೇಸ್ ವಿಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆಸುತಿತ್ತು. ಈ ವೇಳೆ ಏರ್ ಟ್ರಾಫಿಕ್ ಕಂಟ್ರೋಲ್ ಕೊಠಡಿಗೆ ರನ್ ವೇ ತುದಿಯಲ್ಲಿ ಟ್ರಾಕ್ಟರ್ ನಿಂತಿರುವುದು ಕಾಣಿಸಿದೆ. ಇದನ್ನು ಗಮನಿಸಿದ ಕೂಡಲೇ ಪೈಲಟ್ ಗೆ ಸೂಚನೆ ನೀಡಿ ಟೇಕ್ ಆಫ್ ರದ್ದು ಮಾಡಲಾಯಿತು.

    ಹುಲ್ಲು ಕತ್ತರಿಸಲು ಬಂದಿದ್ದ ಟ್ರಾಕ್ಟರ್ ರನ್ ವೇ ಬಳಿ ನಿಂತಿತ್ತು. ನಂತರ ಟ್ರಾಕ್ಟರ್ ತೆರವುಗೊಳಿಸಿದ ಬಳಿಕ ವಿಮಾನ ಟೇಕ್ ಆಫ್ ಆಯ್ತು.

    ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಕಾರಣ ಲ್ಯಾಂಡಿಂಗ್ ಮತ್ತು ಟೇಕಫ್ ವೇಳೆ ಸ್ವಲ್ಪ ಅಪಾಯ ಜಾಸ್ತಿ. 2010ರಲ್ಲಿ ಏರ್ ಇಂಡಿಯ ಎಕ್ಸ್ ಪ್ರೆಸ್  ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಮುಂದುಗಡೆ ಲ್ಯಾಂಡ್ ಆಗಿ ಮುಂದಕ್ಕೆ ಚಲಿಸಿ ಪ್ರಪಾತಕ್ಕೆ ಬಿದ್ದ ಪರಿಣಾಮ 158 ಪ್ರಯಾಣಿಕರು ಮೃತಪಟ್ಟಿದ್ದರು.

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲು ಆಳ ಕಣಿವೆ ಇದ್ದು ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳಿಗೆ ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿ ನಲ್ಲಿ ಟೇಬಲ್ ಟಾಪ್ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.

  • ಫೆ.19ರಿಂದ ಬೆಂಗಳೂರು ಏರ್‍ಪೋರ್ಟ್ ಬಂದ್- ಟ್ಯಾಕ್ಸಿ, ಹೋಟೆಲ್ ಉದ್ಯಮದಾರರಿಗೆ ಬೀಳಲಿದೆ ಭಾರೀ ಹೊಡೆತ

    ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೆ. 19ರಿಂದ 2 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಆಗಲಿದೆ.

    ಬೆಳಗ್ಗೆ 10.30 ರಿಂದ ಸಂಜೆ 5ರವರೆಗೂ ಬಂದ್ ಆಗಲಿದ್ದು, ಇದರಿಂದ ವಿಮಾನ ನಿಲ್ದಾಣವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ 4000 ಟ್ಯಾಕ್ಸಿಗಳಿಗೆ ಕೆಲಸ ಇಲ್ಲದಂತಾಗಲಿದೆ.

    ಹೋಟೆಲ್ ಉದ್ಯಮ, ವಾಣಿಜ್ಯ ಚಟುವಟಿಕೆಗಳಿಗೂ 2ತಿಂಗಳ ಕಾಲ ಏರ್‍ಪೋರ್ಟ್ ಬಂದ್ ಬಿಸಿ ತಟ್ಟಲಿದೆ. ನಷ್ಟದ ಭಯದಲ್ಲಿ ಬೆಂಗಳೂರು ಪ್ರವಾಸಿ ವಾಹನ ಮಾಲೀಕರು ಹೆಚ್‍ಎಎಲ್ ಏರ್‍ಪೋರ್ಟ್ ಬಳಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ನಂಬರ್ 1 ಸ್ಥಾನದಲ್ಲಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಮದು ನಮಗೆ ಆಲ್ಟರ್‍ನೇಟಿವ್ ವ್ಯವಸ್ಥೆನೇ ಇಲ್ಲ. ಇದರಂದಾಗಿ ಪ್ರವಾಸಿಗರನ್ನು ನಂಬಿಕೊಂಡು ಟ್ಯಾಕ್ಸಿ ಓಡಿಸುವವರಿಗೆ ಹಾಗೂ ಹೋಟೇಲ್ ಉದ್ಯಮ ನಡೆಸುವವರಿಗೆ ತುಂಬಾನೇ ತೊಂದರೆಯಗುತ್ತಿದೆ. 70 ದಿನಗಳ ಕಾಲ ಹೆಚು ಅಂದ್ರೆ 6 ಗಂಟೆ ವಿಮಾನ ಹಾರಾಟ ವ್ಯವಸ್ಥೆ ಇಲ್ಲ ಅಂದ್ರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗುವುದರಲ್ಲಿ ಸಂಶಯವಿಲ್ಲ ಅಂತಾ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ, ಮತ್ತು ರನ್ ವೇ ಕಾಮಗಾರಿ ನಡೆಯುವುದರಿಂದ ಫೆಬ್ರವರಿ 19ರಿಂದ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಹಗಲು ಸಮಯದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.