Tag: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

  • ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ – ಈ ದಿನದ ಮಹತ್ವ ನೀವೂ ತಿಳಿಯಿರಿ…

    ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ – ಈ ದಿನದ ಮಹತ್ವ ನೀವೂ ತಿಳಿಯಿರಿ…

    ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ.

    ವಿಶ್ವ ಎಂದರೇನು? ಆರೋಗ್ಯ ಎಂದರೇನು? ಎಂಬುನ್ನು ವಿಶ್ಲೇಷಿಸಿದಾಗ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳು ಹೆಚ್ಚಾಗದೆಯೇ ಯೋಗ್ಯ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಆದ್ರೆ ಇದೆಲ್ಲವನ್ನೂ ಮೀರಿ ನಾವು ಸಾಧಿಸಬೇಕು ಎಂದರೆ ತಾಳ್ಮೆ ಅತ್ಯಗತ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ.

    ಯೋಗವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದನ್ನು ಯೋಗಗುರುಗಳು ಹೇಳಿದ್ದಾರೆ ಮತ್ತು ನಂಬಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಪಡೆದ ಈ ಯೋಗವನ್ನು ಇಂದು 190ಕ್ಕೂ ಹೆಚ್ಚು ರಾಷ್ಟ್ರಗಳು ಅಳವಡಿಸಿಕೊಂಡು ಆಚರಣೆ ಮಾಡುತ್ತಿವೆ. ವಿಶ್ವದಾದ್ಯಂತ ಜನರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಯೋಗಾಭ್ಯಾಸ ಮಾಡುವುದು ಸಾಮಾನ್ಯವಾಗಿದೆ. ಯೋಗದಿಂದ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ವೃದ್ಧಿಯಾಗುತ್ತದೆ. ಮಾನವನ ಯೋಗಕ್ಷೇಮ ಕಾಪಾಡುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ (International Yoga day) ಆಚರಿಸಲಾಗುತ್ತದೆ.

    ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ವಸ್ತು ವಿಷಯ) ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ (Yoga for One Earth, One Health) ಎಂಬುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಈ ಯೋಗದ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಿದ್ದರು. ಈ ಬಾರಿ ಬಂದರು ನಗರಿ ವಿಶಾಖಪಟ್ಟಣದಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿನ ಆರ್‌.ಕೆ ಬೀಚ್‌ನಿಂದ ಭೋಗಪುರಂವರೆಗೆ 26 ಕಿಮೀ ಉದ್ದದ ಕಾರಿಡಾರ್‌ನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, 3 ಲಕ್ಷಕ್ಕೂ ಅಧಿಕ ಮಂದಿಯೊಂದಿಗೆ ಪ್ರಧಾನಿ ಮೋದಿ ಯೋಗ ಪ್ರದರ್ಶನ ಮಾಡಲಿದ್ದಾರೆ.

    ಯೋಗ ಅಸ್ವಿತ್ತಕ್ಕೆ ಬಂದಿದ್ದು ಯಾವಾಗ?
    ಯೋಗಕ್ಕೆ ಸರಿಸುಮಾರು 2,500 ವರ್ಷಗಳ ಪುರಾತನ ಇತಿಹಾಸವಿದೆ. ನಾಗರಿಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಯಾವುದೇ ಧರ್ಮ, ನಂಬಿಕೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಯೋಗ ಅಸ್ತಿತ್ವಕ್ಕೆ ಬಂದಿತು ಎಂಬುದು ನಂಬಿಕೆ. ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ ಅಥವಾ ಆದಿಯೋಗಿ ಎಂದು ಪರಿಗಣಿಸಲಾಗಿದೆ. ಪರಮೇಶ್ವರನನ್ನು ಯೋಗದ ಮೊದಲ ಗುರು ಎಂದು ಕೂಡ ಕರೆಯಲಾಗುತ್ತದೆ.

    ಆದಿಯೋಗಿ ಅಂದರೆ ಶಿವನು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ತನ್ನ ವ್ಯಾಪಕವಾದ ಬುದ್ಧಿವಂತಿಕೆ ಧಾರೆ ಎರೆಯುತ್ತಾರೆ. ಆ ಋಷಿಗಳು ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತವಾದ ಯೋಗ ವಿಜ್ಞಾನ ಅಂಶವನ್ನು ಹರಡುತ್ತಾರೆ. ಆಯುಷ್ ಸಚಿವಾಲಯದ ಪ್ರಕಾರ, ಸಮಕಾಲೀನ ಸಂಶೋಧಕರು ಪ್ರಪಂಚದಾದ್ಯಂತದ ಪ್ರಾಚೀನ ಸಂಸ್ಕೃತಿಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಗಮನಿಸಿದ್ದಾರೆ.

    ಭಾರತದಲ್ಲಿ ಯೋಗ ಪ್ರಸಿದ್ಧಿ ಪಡೆದಿದ್ದು ಹೇಗೆ?
    ವಿವಿಧ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಯೋಗದ ಬಗ್ಗೆ ಅರಿವಿದ್ದರೂ ಅದರಲ್ಲಿನ ʻಆಸನʼಗಳ ಪರಿಕಲ್ಪನೆ ಇರಲಿಲ್ಲ. ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ಇಂತಿಂಥ ಆಸನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸದಲ್ಲಿ ಇರುವ ಕೆಲವು ಆಸನಗಳನ್ನು ಮಾಡಿಯೇ ಅದೆಷ್ಟೊ ತೊಂದರೆಗಳನ್ನು ಕಡಿಮೆ ಮಾಡಿಕೊಂಡವರ ಉದಾಹರಣೆಗಳೂ ಇವೆ.

    2015ರಲ್ಲಿ ಭಾರತ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸುವ ಜೊತೆಗೆ ಯೋಗದ ವಿವಿಧ ಆಸನಗಳ ಮಹತ್ವವನ್ನೂ ಸಾರಿದೆ. ಆಸನಗಳಿಂದ ಅನಾರೋಗ್ಯ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನೂ ಲೋಕಕ್ಕೆ ತಿಳಿಸಿತು. ಅಷ್ಟೇ ಅಲ್ಲ, ಧ್ಯಾನ, ಪ್ರಾಣಾಯಾಮಗಳು ದೇಹಕ್ಕೆ ಕೊಡುವ ಚೈತನ್ಯವನ್ನು ತೋರಿಸಿಕೊಟ್ಟಿತು. ಪಾಶ್ಚಾತ್ಯ ರಾಷ್ಟ್ರಗಳು ಯೋಗದ ಬಗ್ಗೆ ಆಕರ್ಷಿತರಾಗಲು ಇದೇ ಕಾರಣವೂ ಆಯಿತು. ಚರ್ಮಕ್ಕೆ ಸಂಬಂಧಪಟ್ಟ, ಆಹಾರ ಸಂಬಂಧಿ, ಮತ್ತಿತರ ಕಾಯಿಲೆಗಳಿಂದ ಪಾರಾಗಲು, ಒತ್ತಡದ ಬದುಕಿಂದ ಮುಕ್ತಿ ಪಡೆಯಲು ವಿದೇಶಿಯರು ಯೋಗದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು.

    ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿದೆ. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಆಗಿನಿಂದ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

  • Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!

    Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!

    10ನೇ ಅಂತಾರಾಷ್ಟ್ರೀಯ ಯೋಗ ದಿನದ (International Yoga Day 2024) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು. ಬಳಿಕ ಅಲ್ಲಿನ ಅಲ್ಲಿನ ಜನರೊಂದಿಗೆ ಸರಳ ಸಂವಾದ ನಡೆಸಿ, ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ಮೋದಿ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ದಾಲ್‌ ಸರೋವರ ತೀರದಲ್ಲಿ ಕಂಡ ಅದ್ಭುತ ಕ್ಷಣಗಳು ಹೇಗಿತ್ತು ಎಂಬುದನ್ನು ಫೋಟೋ ನೋಡಿ ಕಣ್ತುಂಬಿಕೊಳ್ಳಿ….

  • `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ – ದಾಲ್‌ ಸರೋವರ ತೀರದಲ್ಲಿ ನಮೋ ಯೋಗ!

    `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ – ದಾಲ್‌ ಸರೋವರ ತೀರದಲ್ಲಿ ನಮೋ ಯೋಗ!

    ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

    ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ವಸ್ತು ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: International Yoga Day: ‘ಯೋಗ’ವೆಂಬ ಗಿನ್ನಿಸ್‌ ರೆಕಾರ್ಡ್‌ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಮ್ಮು‌ ಮತ್ತು‌ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ ಅವರು, ಶ್ರೀನಗರದ ದಾಲ್‌ ಸರೋವರದ (Darl Lake) ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ಸರಿಸುಮಾರು 7 ಸಾವಿರ ಮಂದಿ ಪಾಲ್ಗೊಂಡು ವಿಶ್ವಕ್ಕೆ ಆರೋಗ್ಯ ಜಾಗೃತಿಯ ಸಂದೇಶ ಸಾರಿದರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್‌, ಕ್ರಿಕೆಟಿಗ ಮನಿಷ್‌ ಪಾಂಡೆ ಸಾಥ್‌

    ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಡ್ರೋನ್ (Drone) ಮತ್ತು ಕ್ವಾಡ್‌ಕ್ಯಾಪ್ಚರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.

    ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳಲ್ಲೂ ವರ್ಚುವಲ್ ವೇದಿಕೆಯನ್ನು ಕಲ್ಪಿಸಲಾಗಿತ್ತು. ವರ್ಚುವಲ್‌ನಲ್ಲೂ‌ ಪ್ರತಿ ಜಿಲ್ಲೆಯಿಂದು ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದನ್ನೂ ಓದಿ: 

  • ನಮೋ ಜಮ್ಮು-ಕಾಶ್ಮೀರ ಪ್ರವಾಸ ಇಂದಿನಿಂದ ಆರಂಭ – ಬಿಗಿ ಭದ್ರತೆ ನಿಯೋಜನೆ

    ನಮೋ ಜಮ್ಮು-ಕಾಶ್ಮೀರ ಪ್ರವಾಸ ಇಂದಿನಿಂದ ಆರಂಭ – ಬಿಗಿ ಭದ್ರತೆ ನಿಯೋಜನೆ

    – ಶುಕ್ರವಾರ ದಾಲ್‌ ಸರೋವರ ತೀರದಲ್ಲಿ ಮೋದಿ ಯೋಗ ಪ್ರದರ್ಶನ

    ಶ್ರೀನಗರ: ಪ್ರಧಾನಿ ಮೋದಿ (Narendra Modi) ಅವರ 2 ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಇಂದು (ಗುರುವಾರ) ಆರಂಭವಾಗಲಿದೆ. 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮೋದಿ ಅವರ ಮೊದಲ ಭೇಟಿಯೂ ಇದಾಗಿದೆ.

    ಶ್ರೀನಗರದಲ್ಲಿ (Srinagar) ಜೂನ್‌ 21ರಂದು (ಶುಕ್ರವಾರ) ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಹಂತಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಪ್ರಧಾನಿ ಅವರ ಈ ಭೇಟಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ, ಹಲವು ಹಂತಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೂಗೊಳ್ಳಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಬರ್ಡಿ ತಿಳಿಸಿದ್ದಾರೆ.

    ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಡ್ರೋನ್ (Drone) ಮತ್ತು ಕ್ವಾಡ್‌ಕಾಪ್ಟರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ದಾಲ್‌ ಸರೋವರದ ತೀರದಲ್ಲಿ ಯೋಗ:
    10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರು ಯೋಗ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಿದ್ದಾರೆ. ಶ್ರೀನಗರದ ದಾಲ್‌ ಸರೋವರದ (Darl Lake) ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

    ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳನ್ನು ವರ್ಚುವಲ್ ಆಗಿ ಸಂಪರ್ಕಿಸುವ ಯೋಜನೆ ಇದೆ ಪ್ರತಿ ಜಿಲ್ಲೆಯಿಂದ 2,000 ಜನರು ಸಂಪರ್ಕ ಸಾಧಿಸಿದರೂ, ಕಾರ್ಯಕ್ರಮದಲ್ಲಿ ಸುಮಾರು 50,000 ಭಾಗವಹಿಸಿದಂತಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಇದನ್ನೂ ಓದಿ: ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

    ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ:
    ಈ ಬಾರಿಯ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ವಸ್ತು ವಿಷಯ) ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ಎಂದಾಗಿದೆ. ಜೂನ್‌ 21 ರಂದು ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಲಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.

  • ಯೋಗದ ಧೀಶಕ್ತಿಯ ಬಗ್ಗೆ ಯೋಗಾಚಾರ್ಯ ಬಾಳೆಕುಡಿಗೆ ಪರಮೇಶ್ವರ್ ಬಿಚ್ಚಿಟ್ಟ ಅಚ್ಚರಿ!

    ಯೋಗದ ಧೀಶಕ್ತಿಯ ಬಗ್ಗೆ ಯೋಗಾಚಾರ್ಯ ಬಾಳೆಕುಡಿಗೆ ಪರಮೇಶ್ವರ್ ಬಿಚ್ಚಿಟ್ಟ ಅಚ್ಚರಿ!

    ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈಗ್ಗೆ ವರ್ಷಗಳಿಂದೀಚೆಗೆ ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿ ಅದು ಎಲ್ಲೆಡೆ ಹಬ್ಬಿಕೊಂಡಿದೆ. ಯೋಗದ ಪರಿಚಯವೇ ಇಲ್ಲದಿದ್ದ ದೇಶಗಳ ಜನರೂ ಕೂಡಾ ಅದರ ಮನೋ ದೈಹಿಕ ಪರಿಣಾಮಗಳನ್ನು ಅನುಭವಿಸಿ ಮುದಗೊಳ್ಳುತ್ತಿದ್ದಾರೆ. ಕೇವಲ ದೈಹಿಕ ಧೃಡತ್ವ ಮಾತ್ರವಲ್ಲ; ಮಾನಸಿಕ, ಭಾವನಾತ್ಮಕವಾಗಿಯೂ ಪವಾಡದಂಥಾ ಪರಿಣಾಮ ಬೀರಬಲ್ಲ ಯೋಗ ಅಧ್ಯಾತ್ಮಿಕ ಸಾಧನೆಯೊಂದಿಗೂ ನೇರ ಕೊಂಡಿಯನ್ನೊಳಗೊಂಡಿದೆ. ಆದರೆ, ನಮ್ಮ ನೆಲದಲ್ಲಿ ಆವಿರ್ಭವಿಸಿರುವ ಯೋಗ ಇಂದು ವಿಶ್ವವ್ಯಾಪಿಯಾಗಿದ್ದರೂ ನಮಗೇ ಅದರ ಮಹತ್ವ ಗೊತ್ತಿಲ್ಲದ ದುಃಸ್ಥಿತಿಯಿದೆ. ಈ ಸಂದರ್ಭದಲ್ಲಿ ಯೋಗದಲ್ಲಿ ಸಾಧನೆ ಮಾಡಿ ಯೋಗಾಚಾರ್ಯರೆಂದೇ ಹೆಸರಾಗಿರುವ, ಸತ್ವ ಯೋಗಪೀಠದ ಸಂಸ್ಥಾಪಕರಾಗಿರುವ ಬಾಳೆಕುಡಿಗೆ ಪರಮೇಶ್ವರ ಯೋಗಾಭ್ಯಾಸದಲ್ಲಿ ಅಗಾಧ ಸಾಧ್ಯತೆಗಳ ಬಗ್ಗೆ ಒಂದಷ್ಟು ಅಚ್ಚರಿದಾಯಕ ಅಂಶಗಳನ್ನು ತೆರೆದಿಟ್ಟಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅದರ ಬಗ್ಗೆ ಒಂದಷ್ಟು ಮಂದಿ ಮಾತಾಡುತ್ತಾರೆ. ಆದರೆ ಅದನ್ನು ವ್ಯವಸ್ಥಿತವಾಗಿ ಹೇಗೆ ಜನರ ಜೀವನದ ಭಾಗವಾಗಿಸಬೇಕು, ಆ ಮೂಲಕ ಎಲ್ಲರನ್ನೂ ಆರೋಗ್ಯದಿಂದಿರುವಂತೆ ಪ್ರೇರೇಪಿಸಬೇಕೆಂಬ ರೂಪುರೇಷೆಯಾಗಲಿ, ಇಚ್ಛಾಶಕ್ತಿಯಾಗಲಿ ಹೆಚ್ಚಿನವರಿಗೆ ಇದ್ದಂತಿಲ್ಲ. ಈಗಂತೂ ಜನ ಅನಾರೋಗ್ಯದ ಕಟಾಂಜನದಂತಾಗಿ ಕಂಗಾಲಾಗಿದ್ದಾರೆ. ಅದಕ್ಕೆ ಆ ಕ್ಷಣದ ಪರಿಹಾರ ಸೂಚಿಸೋದಷ್ಟಕ್ಕೇ ವ್ಯದ್ಯಕೀಯ ಕ್ಷೇತ್ರ ಹೈರಾಣಾಗುತ್ತಿದೆ. ಒತ್ತಡದ ಬದುಕು, ಅದು ಕರುಣಿಸೋ ಎಲ್ಲ ಬಗೆಯ ಆಘಾತ, ಅನಾರೋಗ್ಯಗಳಿಗೂ ಯೋಗ ಹೇಗೆ ಪರಿಹಾರವಾಗಬಲ್ಲುದೆಂಬುದನ್ನು ಪರಮೇಶ್ವರರಂಥಾ ಯೋಗಾಚಾರ್ಯರೇ ಸ್ಪಷ್ಟವಾಗಿ ಪ್ರಚುರಪಡಿಸುತ್ತಾರೆ.

     

    ಕ್ರಿಸ್ತಪೂರ್ವ ಮೂರನೇ ಶತಮಾನದ ಸುಮಾರಿಗೆ ಪತಂಜಲಿ ಋಷಿಯಿಂದ ಜೀವ ಪಡೆದ ಯೋಗ ಅನೂಚಾನವಾಗಿ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ದುರಂತವೆಂದರೆ, ಶತಮಾನಗಳೇ ಕಳೆದರೂ ಯೋಗವೆಂಬುದು ಶಾಸ್ತ್ರವಲ್ಲ; ಅದೊಂದು ದರ್ಶನ ಎಂಬ ಪರಿಕಲ್ಪನೆ ಸಾರ್ವತ್ರಿಕವಾಗಿ ಪಡಿಮೂಡಿಕೊಂಡಿಲ್ಲ. ಈ ಬಗ್ಗೆ ಒಂದು ಕೊರಗಿಟ್ಟುಕೊಂಡೇ ಯೋಗಾಭ್ಯಾಸವನ್ನು ಹಬ್ಬಿಸಲು ಶ್ರಮಿಸುತ್ತಿರುವವರು ಬಾಳೆಕುಡಿಗೆ ಪರಮೇಶ್ವರ್. ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠದ ಮೂಲಕ ಅವರು ಸಂಸದ ತೇಜಸ್ವಿ ಸೂರ್ಯರಿಗೆ ಯೋಗ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸ್ಟರ್ ಹಿರಣ್ಣಯ್ಯರಂಥ ಸಾಧಕರಿಗೆ ಯೋಗಾಭ್ಯಾಸದ ರುಚಿ ಹತ್ತಿಸಿದ ಕೀರ್ತಿಯೂ ಪರಮೇಶ್ವರ್ ಅವರದ್ದಾಗಿದೆ. ಇನ್ನುಳಿದಂತೆ ಕನ್ನಡ ಚಿತ್ರರಂಗದ ಯುವ ನಟಿ ಸಂಯುಕ್ತಾ ಹೊರನಾಡು ಕೂಡಾ ಸತ್ವ ಯೋಗಪೀಠದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ಯುವ ಸಮುದಾಯವೂ ಯೋಗದತ್ತ ವಾಲಿಕೊಳ್ಳುವ ಆಶಾವಾದ ಚಿಗುರಿಕೊಂಡಿದೆ.

    ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಪತಂಜಲಿ ಯೋಗಮಹಾವಿದ್ಯಾಲಯದಲ್ಲಿ ಯೋಗ ಡಿಪ್ಲೊಮೋ ಪಡೆದುಕೊಂಡಿರುವವರು ಬಾಳೆಕುಡಿಗೆ ಪರಮೇಶ್ವರ್. ಮಲ್ಲಾಡಿಹಳ್ಳಿ ಸ್ವಾಮಿಗಳ ಪ್ರೀತಿಪಾತ್ರರಾಗಿದ್ದುಕೊಂಡು ಅವರ ಆಣತಿಯಂತೆ ಕೊಡಗು ಸೇರಿದಂತೆ ನಾಡಿನ ಉದ್ದಗಲಕ್ಕೂ ಯೋಗಾಭ್ಯಾಸ ಶಿಬಿರಗಳನ್ನು ನಡೆಸಿದ ಕೀರ್ತಿ ಅವರಲ್ಲಿದೆ. ಇದರೊಂದಿಗೆ ಸ್ವತಃ ಕಾಲೇಜು ದಿನಗಳಿಂದಲೇ ಯೋಗಪಟುವಾಗಿದ್ದುಕೊಂಡು ಅದರಲ್ಲಿ ಸಾಧನೆ ಮಾಡಿರುವ ಪರಮೇಶ್ವರ್ ಯೋಗದ ಕರಾಮತ್ತುಗಳ ಬಗ್ಗೆ ಹೇಳುತ್ತಿದ್ದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ.

    ಯುವ ಸಮುದಾಯವನ್ನು ಯೋಗದತ್ತ ವಾಲುವಂತೆ ಮಾಡಿದರೆ ಒಂದೊಳ್ಳೆ ಸಮಾಜ ಸೃಷ್ಟಿಸಿದಂತಾಗುತ್ತದೆ. ಯುವ ಸಮೂಹವನ್ನು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಗೊಳಿಸುವಂಥಾ ಎಲ್ಲ ಅಂಶಗಳನ್ನೂ ಯೋಗ ಒಳಗೊಂಡಿದೆ. ಈವತ್ತಿಗೆ ಫಿಟ್ನೆಸ್ ಅಂದರೆ ಜಿಮ್, ವರ್ಕೌಟ್ ಎಂಬಂತಾಗಿದೆ. ಆದರೆ ಯೋಗವೆಂಬುದು ಮಾನಸಿಕ, ದೈಹಿಕ ಮತ್ತು ಅಧ್ಯಾತ್ಮಿಕ ಅಣಂಶಗಳ ಸಂಪೂರ್ಣ ಪ್ಯಾಕೇಜ್ ಇದ್ದಂತೆ. ನಿರಂತರವಾದ ಅಭ್ಯಾಸದಿಂದ ನಿರಾಳವಾಗಿ ಬದುಕು ನಡೆಸುವ, ಸದಾ ಚೈತನ್ಯದಿಂದಿರುವ ಮತ್ತು ಹಣ್ಣಣ್ಣು ಮುದುಕರಾದರೂ ಕಾಯಿಲೆ ಕಸಾಲೆಗಳ ಹಂಗಿಲ್ಲದೆ ಲವಲವಿಕೆಯಿಂದಿರೋ ವಿಫುಲ ಅವಕಾಶಗಳ ಯೋಗದಲ್ಲಿವೆ.

    ಈವತ್ತಿಗೂ ಪರಮೇಶ್ವರ್ ಅವರನ್ನು ಅದೆಷ್ಟೋ ಮಂದಿ ನಾನಾ ಬಾಧೆಗಳನ್ನಿಟ್ಟುಕೊಂಡು ಸಂಧಿಸುತ್ತಾರೆ. ಆದರೆ ಅಂಥವರಿಗೆ ಯೋಗವೆಂಬುದು ಕಾಯಿಲೆಯನ್ನು ಆ ಕ್ಷಣಕ್ಕೆ ಹೋಗಲಾಡಿಸೋ ಗುಳಿಗೆಯಲ್ಲ; ಅದು ಖಾಯಿಲೆಗಳೇ ಬಾರದಂತೆ ತಡೆಗಟ್ಟುವ ಮಂತ್ರದಂಡವೆಂಬ ಕಿಂಚಿತ್ ಜ್ಞಾನವಿರೋದಿಲ್ಲ. ಪರಮೇಶ್ವರ್ ಅವರ ಪ್ರಕಾರ ಯೋಗ ನಿರಂತರವಾದ, ನಿಯಮಿತವಾದ ಅಭ್ಯಾಸಗಳಿಗೆ ಒಲಿಯುವಂಥಾದ್ದು. ಇದರಿಂದ ಬಿಪಿ, ಶುಗರ್ನಂಥಾ ರೋಗಗಳೇ ತಹಬಂದಿಗೆ ಬಂದಿರೋದು ಕಣ್ಣ ಮುಂದಿನ ದರ್ಶನ. ಇದಕ್ಕೆ ಪರಮೇಶ್ವರ್ ಅವರ ಬಳಿ ದಂಡಿ ದಂಡಿ ಉದಾಹರಣೆಗಳಿದ್ದಾವೆ.

    ಯೋಗದಿಂದ ಅಪರಿಮಿತವಾದ ಧೀಶಕ್ತಿ ಪ್ರತಿಯೊಬ್ಬರಿಗೂ ದಕ್ಕುತ್ತದೆ. ಆದರೆ ಅದನ್ನು ನುರಿತವರ ಮಾರ್ಗದರ್ಶನದಲ್ಲಿಯೇ ಮಾಡಿದರಷ್ಟೇ ಪರಿಣಾಮಕಾರಿಯಾಗಿರುತ್ತದೆ. ಒಂದಷ್ಟು ಆಸನ, ವಿದ್ಯೆಗಳನ್ನು ಕಲಿತು ಅದನ್ನೇ ಯೋಗ ಎಂಬಂತೆ ಅಂಗಡಿ ತೆರೆದು ಕೂತವರು ಸಾಕಷ್ಟಿದ್ದಾರೆ. ಬೆಂಗಳೂರಿನಂಥಾ ನಗರಗಳಲ್ಲಿ ಅದೊಂದು ವ್ಯವಹಾರವಾಗಿದೆ. ಆದರೆ ಇಂಥವುಗಳಿಂದ ಯೋಗದ ನೈಜ ಘನತೆ ಮುಕ್ಕಗುತ್ತಿದೆ. ಆದರದು ಯೋಗಾಚಾರ್ಯ ಪರಮೇಶ್ವರ್ ಅವರಂಥ ಯೋಗ ಸಾಧಕರ ಸಮ್ಮುಖದಲ್ಲಿಯಷ್ಟೇ ಸಾರ್ಥಕ್ಯ ಪಡೆದುಕೊಳ್ಳಲು ಸಾಧ್ಯ.

    ಈವತ್ತಿಗೆ ಕರ್ನಾಟಕದಲ್ಲಿ ಯೋಗದ ಬಗ್ಗೆ ನಿಖರವಾದ, ಮಹತ್ತರವಾದ ಜ್ಞಾನ ಹೊಂದಿರುವ ಕೆಲವೇ ಕೆಲ ಜನರಲ್ಲಿ ಪರಮೇಶ್ವರ್ ಮೊದಲಿಗರಾಗಿ ನಿಲ್ಲುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಪುಟ್ಟ ಊರು ಕೊಗ್ರೆ. ಅದರ ಭಾಗವಾಗಿರೋ ಬಾಳೆಕುಡಿಗೆ ಮೂಲದವರಾದ ಪರಮೇಶ್ವರ್ ಎಂಭತ್ತರ ದಶಕದಲ್ಲಿಯೇ ಯೋಗ ವಿದ್ಯೆಯ ಪ್ರವರ್ತಕರಾಗಿ ಬೆಳೆಯಲಾರಂಭಿಸಿದವರು. ಆರಂಭದಲ್ಲಿ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುಕೊಂಡು ಮಲೆನಾಡು ಭಾಗದಲ್ಲಿ ಯೋಗವನ್ನು ಪ್ರಚುರಪಡಿಸುತ್ತಾ ಬಂದಿದ್ದವರು ಬಾಳೆಕುಡಿಗೆ ಪರಮೇಶ್ವರ್.

    ವೈಯಕ್ತಿಕ ಸಂಕಷ್ಟ, ಏಳುಬೀಳುಗಳೆಲ್ಲವನ್ನೂ ಯೋಗವೆಂಬೋ ಧೀಶಕ್ತಿಯ ಮೂಲಕವೇ ಗೆಲ್ಲುತ್ತಾ ಬಂದಿರೋ ಪರಮೇಶ್ವರರ ಯಾನವೇ ಯೋಗದ ಸಾಧ್ಯತೆಗಳಿಗೂ ಉದಾಹರಣೆಯಂತಿದೆ. ಶಾಲಾ ಮಟ್ಟದಲ್ಲಿಯೇ ಯೋಗಾಭ್ಯಾಸ ಮಾಡುವಂಥಾ ವ್ಯವಸ್ಥೆಯಾಗಬೇಕೆಂಬ ಕನಸು ಹೊಂದಿರೋ ಅವರು ಈ ಕ್ಷಣಕ್ಕೂ ದಿನಕ್ಕೆ ಹದಿಮೂರು ಘಂಟೆಗಳ ಕಾಲ ಯೋಗದ ಸಾನಿಧ್ಯದಲ್ಲಿಯೇ ಕಳೆಯುತ್ತಾರೆ. ಐವತ್ತನಾಲಕ್ಕು ವರ್ಷದಲ್ಲಿಯೂ ಲವಲವಿಕೆಯಿಂದಿರೋ ಅವರಿಗೆ ನಾಡಿನಾದ್ಯಂತ ಶಿಷ್ಯವರ್ಗವಿದೆ.

    ಯೋಗದಿಂದ ಇಡೀ ನಾಡು ಸ್ವಸ್ಥವಾಗೋ ಕಾಲ ಬರಲೆಂದು ಆಶಿಸುವ ಪರಮೇಶ್ವರ್ ಸತ್ವ ಯೋಗಪೀಠವನ್ನು ಅಂಥಾದ್ದೊಂದು ಪರಿವರ್ತನೆಯ ಶಕ್ತಿಪೀಠವಾಗಿಸಿಕೊಂಡಿದ್ದಾರೆ. ಯೋಗವನ್ನು ವ್ಯವಹಾರವಾಗಿಸದೆ ಅದನ್ನು ಅಧ್ಯಾತ್ಮಿಕ ಪಾವಿತ್ರ್ಯದಿಂದಲೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸತ್ವ ಯೋಗ ಕೇಂದ್ರದಲ್ಲಿ ಸಂಸದ ತೇಜಸ್ವಿ ಸೂರ್ಯ, ಆನಂದ ಗುರೂಜಿ, ನಟಿ ಸಂಯುಕ್ತಾ ಹೊರನಾಡು ಮುಂತಾದವರೆಲ್ಲ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಮಲೆನಾಡು ಭಾಗದ ಹೆಮ್ಮೆಯ ಸಾಧಕರಾಗಿದ್ದುಕೊಂಡು ಈಗ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಯೋಗಾಚಾರ್ಯ ಬಾಳೆಕುಡಿಗೆ ಪರಮೇಶ್ವರ್ ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠ ಯೋಗಾಭ್ಯಾಸದ ಶಕ್ತಿಪೀಠವಾಗಿ ಕಾರ್ಯನಿರ್ವಹಿಸುತ್ತಿದೆ.

  • ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರೋ ಮೈಸೂರಿನ ಯೋಗಪಟುಗಳು ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಿದರು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಯಿತು.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

    ವೀರಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರಸರಿತಪಡೋತ್ತಸನಗಳ ಪ್ರದರ್ಶನ ಮಾಡಲಾಯಿತು. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಗೆ ಪೂರ್ವಾಭ್ಯಾಸ ನಡೆಸಲಾಯಿತು. ಇದರಿಂದ ಇವತ್ತು ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ತುಂಬಿತ್ತು.

     

    https://youtu.be/Savr_5ExB4w