Tag: ಅಂತಾರಾಷ್ಟ್ರೀಯ ಪ್ರಯಾಣಿಕರು

  • ದೇಶದಲ್ಲಿ ಮಂಕಿಪಾಕ್ಸ್‌ ಭೀತಿ – ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸೂಚನೆ

    ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್‌ ಸೋಂಕಿನ ಎರಡನೇ ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಇದರಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೊರ ದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಸೂಚನೆ ನೀಡಿದೆ.

    ದೇಶದಲ್ಲಿ ಮಂಕಿಪಾಕ್ಸ್‌ ಹರಡುವಿಕೆ ತಡೆಗಟ್ಟಲು ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆಯನ್ನು ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಮಂಕಿಪಾಕ್ಸ್ 2ನೇ ಕೇಸ್ ದೃಢ – ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕಿ!

    ಮಂಕಿಪಾಕ್ಸ್‌ ಸೋಂಕಿನ ಕುರಿತು ಸಭೆ ನಡೆಸಲಾಯಿತು. ವಿಮಾನ ನಿಲ್ದಾಣ ಮತ್ತು ಬಂದರು ಆರೋಗ್ಯ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಗಳ ನಿರ್ದೇಶಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

    ದೇಶಕ್ಕೆ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಬೇಕು. ಇದು ದೇಶಕ್ಕೆ ಮಂಗನ ಕಾಯಿಲೆಯ ಆಮದು ಮಾಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ನಾನು ಅಪರಾಧಿಯಲ್ಲ: ಸಿಂಗಾಪುರ ಭೇಟಿಗೆ ಅನುಮತಿ ಸಿಗದೇ ಕೇಜ್ರಿವಾಲ್ ಅಸಮಾಧಾನ

    ಆರೋಗ್ಯ ತಪಾಸಣೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಅಂತಾರಾಷ್ಟ್ರೀಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ಇತರೆ ಮಧ್ಯಸ್ಥಗಾರರ ಏಜೆನ್ಸಿಗಳೊಂದಿಗೆ ಸಮನ್ವಯಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಕೇಂದ್ರ ಸಲಹೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶಗಳಿಂದ ವಾಪಸ್ಸಾಗುವ ಪ್ರಯಾಣಿಕರಿಗೆ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ

    ವಿದೇಶಗಳಿಂದ ವಾಪಸ್ಸಾಗುವ ಪ್ರಯಾಣಿಕರಿಗೆ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ

    ನವದೆಹಲಿ: ದೇಶದಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ವಿದೇಶಗಳಿಂದ ಭಾರತಕ್ಕೆ ಪ್ರಯಾಣ ಬೆಳೆಸುವವರಿಗೆ ಒಂದು ವಾರ ಹೋಂ ಕ್ವಾರಂಟೈನ್‌ ಕಡ್ಡಾಯ. ಅಲ್ಲದೇ ಕ್ವಾರಂಟೈನ್‌ ಆದ 6ನೇ ದಿನಕ್ಕೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

    ಅತ್ಯಂತ ಅಪಾಯದ ದೇಶಗಳ ಪಟ್ಟಿ 19ಕ್ಕೆ ಏರಿದೆ. ಡಿಸೆಂಬರ್‌ ತಿಂಗಳಲ್ಲೇ ಈ ಪಟ್ಟಿಗೆ 9 ದೇಶಗಳು ಸೇರಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಿಗಿ ನಿಯಮಗಳನ್ನು ರೂಪಿಸಲಾಗಿದೆ. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್

    ಹೊರದೇಶಗಳಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್‌ ಆಗಬೇಕು. ಕೊನೆ ದಿನದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಪಾಸಿಟಿವ್‌ ಬಂದರೆ ಅಂತಹವರನ್ನು ಐಸೊಲೇಷನ್‌ ಮಾಡಲಾಗುವುದು. ಅವರ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು ಎಂದು ತಿಳಿಸಿದೆ.

    ಸೋಂಕಿತ ಪ್ರಯಾಣಿಕನ ಅಕ್ಕಪಕ್ಕ ಕುಳಿತವರು ಹಾಗೂ ಸಿಬ್ಬಂದಿಯನ್ನು ಸಂಪರ್ಕಿತರು ಎಂದೇ ಪರಿಗಣಿಸಲಾಗುವುದು. ಒಂದು ವೇಳೆ ಪ್ರಯಾಣಿಕರ ವರದಿ ನೆಗೆಟಿವ್‌ ಬಂದರೆ ಮುಂದಿನ ಒಂದು ವಾರ ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸಬೇಕು ಎಂದು ನಿಯಮದಲ್ಲಿ ಹೇಳಿದೆ. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

    ತಪಾಸಣೆ ವೇಳೆ ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುವುದು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ಸಂಪರ್ಕಿತರನ್ನು ಗುರುತಿಸಲಾಗುವುದು ಎಂದು ಹೇಳಿದೆ.

    ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,17,100 ಹೊಸ ಪ್ರಕರಣಗಳು ಹೊಸ ಪ್ರಕರಣಗಳು ದೃಢಪಟ್ಟಿವೆ. ಶೇಕವಾರು ಪ್ರಮಾಣ ಶೇ.28ಕ್ಕೇರಿದೆ.