Tag: ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧಿವೇಶನ

  • 2028 ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ

    2028 ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ

    ನವದೆಹಲಿ: 2028ರ ಒಲಿಂಪಿಕ್ಸ್‌ (Olympic Games) ಕ್ರೀಡೆಗಳ ಪಟ್ಟಿಗೆ ಈಗ ಕ್ರಿಕೆಟ್‌ ಕೂಡ ಸೇರ್ಪಡೆಯಾಗಿದೆ. 2028 ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ (Los Angles) ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೂ (Cricket) ಅವಕಾಶ ಕಲ್ಪಿಸಲಾಗಿದೆ. 123 ವರ್ಷಗಳ ಬಳಿಕ ಕ್ರಿಕೆಟ್‌ಗೆ ಈ ಸ್ಥಾನ ಲಭಿಸಿದೆ.

    ಟಿ20 ಮಾದರಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕ್ರೀಡಾಕೂಟ ನಡೆಯಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ 141ನೇ ಅಧಿವೇಶನದಲ್ಲಿ ಸ್ಕ್ವಾಷ್, ಬೇಸ್‌ಬಾಲ್/ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಕ್ರೀಡೆಗಳಿಗೂ ಅನುಮೋದನೆ ನೀಡಲಾಗಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಗಳೂ ಸಹ ಇರಲಿವೆ. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ

    ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು, ಒಲಿಂಪಿಕ್ಸ್‌ನಲ್ಲಿ ಇತರೆ ಕ್ರೀಡೆಗಳೊಂದಿಗೆ ಕ್ರಿಕೆಟ್ ಸೇರ್ಪಡೆ ಕುರಿತು ಘೋಷಣೆ ಮಾಡಿದರು.

    ಲಾಸ್‌ ಏಂಜಲೀಸ್‌ 2028 ರ ಸಂಘಟನಾ ಸಮಿತಿಯು ಶಿಫಾರಸು ಮಾಡಿದ ಐದು ಕ್ರೀಡೆಗಳನ್ನು ಸೇರಿಸುವ ಪ್ರಸ್ತಾಪಕ್ಕೆ 99 IOC ಸದಸ್ಯ ರಾಷ್ಟ್ರಗಳ ಪೈಕಿ ಎರಡು ರಾಷ್ಟ್ರಗಳು ಮಾತ್ರ ಅಸಮ್ಮತಿ ಸೂಚಿಸಿವೆ.

    ವಿಶ್ವದಾದ್ಯಂತ ಅಂದಾಜು 2.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಥಾಮಸ್‌ ಬಾಚ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್‌ ಘೋಷಣೆ: ಉದಯನಿಧಿ ಆಕ್ಷೇಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

    40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

    ನವದೆಹಲಿ: 2023ರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ)ಯ ಅಧಿವೇಶನವನ್ನು ಮುಂಬೈನಲ್ಲಿ ಆಯೋಜಿಸುವ ಅವಕಾಶವನ್ನು ಭಾರತ ತನ್ನದಾಗಿಸಿಕೊಂಡಿದೆ.

    ದೇಶದ ಮೊದಲ ವೈಯಕ್ತಿಕ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಭಿನವ್‌ ಬಿಂದ್ರಾ, ಐಒಸಿ ಸದಸ್ಯೆ ನೀತಾ ಅಂಬಾನಿ, ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರೀಂದರ್‌ ಬಾತ್ರಾ ಮತ್ತು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರನ್ನು ಒಳಗೊಂಡ ನಿಯೋಗವು ಚೀನಾದಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಪಾಲ್ಗೊಂಡಿತ್ತು. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

    ಭಾರತದಲ್ಲಿ ಎರಡನೇ ಬಾರಿಗೆ ಐಒಸಿ ಅಧಿವೇಶನ ಆಯೋಜಿಸುವ ಅವಕಾಶ ಲಭಿಸಿದೆ. 1983ರಲ್ಲಿ ನವದೆಹಲಿಯಲ್ಲಿ ಮೊದಲ ಬಾರಿಗೆ ಐಒಸಿ ಅಧಿವೇಶನ ಆಯೋಜಿಸಲಾಗಿತ್ತು.

    40 ವರ್ಷಗಳ ಬಳಿಕ ಒಲಿಂಪಿಕ್‌ ಆಂದೋಲನ ಭಾರತಕ್ಕೆ ಮರಳಿದೆ. 2023ರಲ್ಲಿ ಮುಂಬೈನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸುವ ಗೌರವವನ್ನು ಭಾರತಕ್ಕೆ ವಹಿಸಿದ್ದಕ್ಕಾಗಿ ನಾನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

    ಇದು ಭಾರತದ ಒಲಿಂಪಿಕ್‌ ಮಹತ್ವಾಕಾಂಕ್ಷೆಗೆ ಮಹತ್ವದ ಬೆಳವಣಿಗೆಯಾಗಲಿದ್ದು, ಭಾರತೀಯ ಕ್ರೀಡೆಗೆ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಕ್ರೀಡೆಯು ಯಾವಾಗಲೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹರಾಜು ಪ್ರಕ್ರಿಯೆಯ ಯಶಸ್ವಿ ನಂತರ ಮಾತನಾಡಿದ ನರೀಂದರ್‌ ಬಾತ್ರಾ, ನೀತಾ ಅಂಬಾನಿ ಅವರ ದೂರದೃಷ್ಟಿ ಮತ್ತು ನಾಯಕತ್ವಕ್ಕೆ ನನ್ನ ಸಲಾಮ್.‌ ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನ ಭಾರತದ ಕ್ರೀಡೆಗೆ ಹೊಸ ಯುಗದ ಆರಂಭವಾಗಲಿದೆ. ಭಾರತದಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ಆಯೋಜಿಸುವ ದೀರ್ಘಾವಧಿಯ ಗುರಿಯ ಸಾರ್ಥಕತೆ ಲಭಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಐಒಸಿ ಅಧಿವೇಶನವು ಐಒಸಿ ಸದಸ್ಯರ ಸಾಮಾನ್ಯ ಸಭೆಯಾಗಿದೆ. ಇದು ಐಒಸಿಯ ಸರ್ವೋಚ್ಚ ಅಂಗವಾಗಿದೆ. ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತವೆ. ವರ್ಷಕ್ಕೊಮ್ಮೆ ಸಾಮಾನ್ಯ ಅಧಿವೇಶನ ನಡೆಸಲಾಗುತ್ತದೆ. ಆದರೆ ಬೃಹತ್‌ ಅಧಿವೇಶನವನ್ನು ಅಧ್ಯಕ್ಷರು ಅಥವಾ ಕನಿಷ್ಠ ಮೂರನೇ ಒಂದು ಭಾಗದಷ್ಟು ಸದಸ್ಯರು ಲಿಖಿತ ಕೋರಿಕೆಯ ಮೇರೆಗೆ ಕರೆಯಬಹುದು. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಐಒಸಿಯಲ್ಲಿ ಒಟ್ಟು 101 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಹೆಚ್ಚುವರಿಯಾಗಿ 45 ಗೌರವ ಸದಸ್ಯರು ಮತ್ತು ಒಬ್ಬರು ಗೌರವಾನ್ವಿತ ಸದಸ್ಯರು ಇದ್ದು, ಇವರಿಗೆ ಮತದಾನದ ಹಕ್ಕು ಇರುವುದಿಲ್ಲ. ಸದಸ್ಯರ ಜೊತೆಗೆ 50ಕ್ಕೂ ಹೆಚ್ಚು ಕ್ರೀಡಾ ಒಕ್ಕೂಟಗಳು (ಬೇಸಿಗೆ, ಚಳಿಗಾಲದ ಕ್ರೀಡಾ ವಿಭಾಗಗಳು), ಹಿರಿಯ ಪ್ರತಿನಿಧಿಗಳು (ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು) ಸಹ ಐಒಸಿ ಅಧಿವೇಶನದಲ್ಲಿ ಭಾಗವಹಿಸುತ್ತಾರೆ.