Tag: ಅಂತರಾಷ್ಟ್ರೀಯ ಹವಾಮಾನ ಕ್ರಿಯಾ ದಿನ

  • ಬೆಟ್ಟದ ರಸ್ತೆಯಲ್ಲಿ ಸೀರೆಯಲ್ಲೇ 10 ಕಿ.ಮೀ ಓಡಿದ ದೀದಿ: ವಿಡಿಯೋ

    ಬೆಟ್ಟದ ರಸ್ತೆಯಲ್ಲಿ ಸೀರೆಯಲ್ಲೇ 10 ಕಿ.ಮೀ ಓಡಿದ ದೀದಿ: ವಿಡಿಯೋ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಡಾರ್ಜಿಲಿಂಗ್ ಬೆಟ್ಟದ ರಸ್ತೆಯಲ್ಲಿ ಜಾಗಿಂಗ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಂತಾರಾಷ್ಟ್ರೀಯ ಹವಾಮಾನ ಕ್ರಿಯಾ ದಿನವಾದ ಅಕ್ಟೋಬರ್ 24ರಂದು ಡಾರ್ಜಿಲಿಂಗ್ ಬೆಟ್ಟದಲ್ಲಿ ಅಭಿಯಾನ ಕೈಗೊಳ್ಳಲಾಗಿತ್ತು. ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಅಭಿಯಾನದಲ್ಲಿ ಭಾಗಿಯಾಗಿ, ಜಾಗಿಂಗ್ ಮಾಡಿದ್ದಾರೆ.

    64 ವರ್ಷದ ಮಮತಾ ಬ್ಯಾನರ್ಜಿ ಅವರು ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಸುಮಾರು 10 ಕಿ.ಮೀ ಜಾಗಿಂಗ್ ಮಾಡಿದ್ದಾರೆ. ಕುರ್ಸೆಯೊಂಗ್ ಮತ್ತು ಮಹಾನದಿ ನಡುವಿನ 5 ಕಿ.ಮೀ ಅಂತರದ ಬೆಟ್ಟದ ರಸ್ತೆಯಲ್ಲಿ ಕ್ರಮಿಸಿ, ಮತ್ತೆ ಅಲ್ಲಿಂದ ಮರಳಿದರು. ಮಾರ್ಗ ಮಧ್ಯ ಸ್ಥಳೀಯರು ಹಾಗೂ ಮಕ್ಕಳ ಜೊತೆಗೆ ಮಾತುಕತೆ ನಡೆಸಿ, ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸಿದ್ದಾರೆ.

    ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಹವಾಮಾನ ಕ್ರಿಯಾ ದಿನದ ಕುರಿತು ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ ಅವರು, ಪರಿಸರ ಸಂರಕ್ಷಣೆಯ ಮೂಲಕ ಭೂಮಿಯನ್ನು ರಕ್ಷಿಸೋಣ. ನಾವೆಲ್ಲರೂ ಒಂದಾಗಿ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡೋಣ. ಗಿಡ, ಮರ ಬೆಳೆಸಿ, ಪರಿಸರವನ್ನು ಸ್ವಚ್ಛವಾಗಿಡೋಣ ಎಂದು ಈ ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿದ್ದರು.