Tag: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

  • ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್

    ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್

    ರಾಂಚಿ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜಾರ್ಖಂಡ್‍ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಕುದುರೆ ಏರಿ ವಿಧಾನಸಭೆಗೆ ಆಗಮಿಸಿ ಗಮನ ಸೆಳೆದಿದ್ದಾರೆ.

    ಅಂಬಾ ಪ್ರಸಾದ್, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಇಂದು ವಿಧಾನಸಭೆಗೆ ಕುದುರೆ ಏರಿ ಬರುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ಅವರತ್ತ ಕಣ್ಣಾಡಿಸಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಾ ಪ್ರಸಾದ್, ಈ ಕುದುರೆಯನ್ನು ನನಗೆ ಸೇನೆಯ ನಿವೃತ್ತ ಅಧಿಕಾರಿ ರವಿ ರಾಥೋಡ್ ಅವರು ಅಂತರಾಷ್ಟ್ರೀಯ ಮಹಿಳಾ ದಿನಚರಣೆಯ ಪ್ರಯುಕ್ತ ಕೊಡುಗೆಯಾಗಿ ನೀಡಿದ್ದಾರೆ ಎಂದರು.

    ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗಾ, ಝಾನ್ಸಿ ಕಿ ರಾಣಿ ಇದ್ದಾಳೆ, ಪ್ರತಿ ಸವಾಲನ್ನು ಮಹಿಳೆ ಶಕ್ತಿಯಿಂದ ಎದುರಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರತಿ ಕ್ಷೇತ್ರದಲ್ಲೂ ಮಹಿಳೆಯನ್ನು ಮುಂದೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ:  ಕೊಚ್ಚಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

     

  • ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

    ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

    ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಮಹಿಳೆಯರು ತಮ್ಮ ಬುದ್ಧಿವಂತಿಕೆಯಿಂದ ಸಮಾಜವನ್ನು ಪರಿವರ್ತಿಸುವಲ್ಲಿ ಸಮರ್ಥರಾಗಿದ್ದಾರೆ ಎಂದಿದ್ದಾರೆ.

    ಈ ವಿಶೇಷ ದಿನದಂದು ರಾಹುಲ್ ಗಾಂಧಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಮಹಿಳೆಯರು ತಮ್ಮ ಬುದ್ಧಿವಂತಿಕೆ, ಸಮರ್ಪಣೆ ಮತ್ತು ಶಕ್ತಿಯಿಂದ ಸಮಾಜವನ್ನು ಪರಿವರ್ತಿಸುವ ಸಾಮಥ್ರ್ಯ ಹೊಂದಿದ್ದಾರೆ. ಮಹಿಳೆಯರು ತಮಗೆ ಸಿಗಬೇಕಾಗಿರುವ ಬಾಕಿಯನ್ನು ಪಡೆಯಬೇಕು. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸರಣಿ ಟ್ವೀಟ್ ಮಾಡುವ ಮೂಲಕ ಮಹಿಳೆಯರಿಗೆ ಶುಭಾ ಕೋರಲಾಗಿದೆ. ಮಹಿಳಾ ಶಕ್ತಿ ಮತ್ತು ಯಶಸ್ಸಿನ ಫೋಟೋಗಳನ್ನು ಹಂಚಿಕೊಂಡಿದೆ. ರಾಷ್ಟ್ರದ್ಯಂತ ಮತ್ತು ವಿಶ್ವದ್ಯಂತ ಸಹೋದರಿಯರೇ, ನಿಮ್ಮ ಆಲೋಚನೆಗಳು, ನಿಮ್ಮ ಶಕ್ತಿ, ನಿಮ್ಮ ಧೈರ್ಯ, ನಿಮ್ಮ ಶಾಂತಿಯತ್ವ ಮತ್ತು ನಿಮ್ಮ ದಯೆಗೆ ನಾವು ನಮ್ರತೆಯಿಂದ ತಲೆಬಾಗುತ್ತೇವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಭರವಸೆ ಮತ್ತು ಸಂತೋಷದ ಧ್ವಜಧಾರಿಗಳಾಗಿರುತ್ತಾರೆ. ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

  • ಮಹಿಳಾ ದಿನಾಚರಣೆಗೆ ಸರ್ಕಾರದ ಗಿಫ್ಟ್- ಇಂದಿರಾ ಕ್ಯಾಂಟೀನಲ್ಲಿಂದು ಮಹಿಳೆಯರಿಗೆ ಊಟ-ತಿಂಡಿ ಫ್ರೀ

    ಮಹಿಳಾ ದಿನಾಚರಣೆಗೆ ಸರ್ಕಾರದ ಗಿಫ್ಟ್- ಇಂದಿರಾ ಕ್ಯಾಂಟೀನಲ್ಲಿಂದು ಮಹಿಳೆಯರಿಗೆ ಊಟ-ತಿಂಡಿ ಫ್ರೀ

    – ಬಿಎಂಟಿಸಿ ಬಸ್‍ಗಳಲ್ಲಿ ಎಲ್ಲಿ ಬೇಕೋ ಅಲ್ಲೇ ಸಿಗುತ್ತೆ ಸ್ಟಾಪ್

    ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಮಹಿಳೆಯರಿಗೆಂದು ಗಿಫ್ಟ್ ನೀಡಿದೆ.

    ಬೆಂಗಳೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಇಂದು ಮಹಿಳೆಯರಿಗೆ ಊಟ ಉಚಿತ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಊಟ ಉಚಿತವಾಗಿ ಸಿಗಲಿದೆ.

    ಇದೇ ಹೊತ್ತಲ್ಲಿ ಇವತ್ತಿಂದ ಬಿಎಂಟಿಸಿ ಬಸ್‍ಗಳಲ್ಲಿ ಓಡಾಡೋ ಮಹಿಳೆಯರು ರಾತ್ರಿ 9 ಗಂಟೆಯ ಬಳಿಕ ತಮಗೆ ಎಲ್ಲಿ ಬೇಕೋ ಅಲ್ಲಿ ಸ್ಟಾಪ್ ತೆಗೋಬಹುದು. ಸೇಫ್ ಡ್ರಾಪ್ ಯೋಜನೆಯಡಿ ಒಂದು ತಿಂಗಳ ಕಾಲ ಬೆಂಗಳೂರಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.