Tag: ಅಂತರಪಟ

  • ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಗುನ್ನಾ, ಶಿಷ್ಯ, ಖುಷಿ (Kushi) ಸಿನಿಮಾಗಳಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ನಟಿ ಚೈತ್ರಾ ಹಳ್ಳಿಕೇರಿ ಅವರು ‘ಬಿಗ್ ಬಾಸ್’ (Bigg Boss Kannada) ಶೋ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್‌ನ ಚಾಂದಿನಿ ಪಾತ್ರದ ಮೂಲಕ ಮನಗೆಲ್ಲಲು ಸಜ್ಜಾಗಿದ್ದಾರೆ.

    ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ ನಟಿ ಚೈತ್ರಾ ಅವರು ಪೀಕ್‌ನಲ್ಲಿರುವಾಗಲೇ ಮದುವೆಯಾದರು. ಕ್ಯಾಮೆರಾ ಕಣ್ಣಿಂದ ದೂರ ಸರಿದರು. ಬಳಿಕ ಕಳೆದ ವರ್ಷದ ಬಿಗ್ ಬಾಸ್ ಒಟಿಟಿ ಶೋನಲ್ಲಿ ಗಟ್ಟಿ ಸ್ಪರ್ಧಿಯಾಗಿ ಚೈತ್ರಾ ಗುರುತಿಸಿಕೊಂಡರು. ಈಗ ಮತ್ತೆ ಚೈತ್ರಾ ಅವರ ಕಿರುತೆರೆಯ ಪರ್ವ ಶುರುವಾಗಿದೆ. ಇದನ್ನೂ ಓದಿ:ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನದ ಮೇಘನಾ ರಾಜ್

    ಸ್ವಪ್ನ ಕೃಷ್ಣ (Swapna Krishna) ನಿರ್ದೇಶನದ ‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಚೈತ್ರಾ (Chaitra Hallikeri) ಅವರು ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್ ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜೊತೆಗೆ ‘ಅಂತರಪಟ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

    ಚಾಂದಿನಿ ಪಾತ್ರ ಕೂಡ ಚೈತ್ರಾ ಅವರ ರಿಯಲ್ ಲೈಫ್‌ಗೆ ಒಪ್ಪುವಂತಿದೆ. ಅವರು ರಿಯಲ್ ಲೈಫ್‌ನಲ್ಲಿ ಗಟ್ಟಿ ವ್ಯಕ್ತಿಯಾಗಿದ್ದಾರೆ. ಎಲ್ಲದನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಒಟ್ನಲ್ಲಿ ‘ಅಂತರಪಟ’ ಸೀರಿಯಲ್ ಮೂಲಕ ಚೈತ್ರಾ ಮೋಡಿ ಮಾಡ್ತಿದ್ದಾರೆ.

  • ಕಡಲ ಕಿನಾರೆಯಲ್ಲಿ ‘ಬಿಗ್ ಬಾಸ್’ ದೀಪಿಕಾ ದಾಸ್

    ಕಡಲ ಕಿನಾರೆಯಲ್ಲಿ ‘ಬಿಗ್ ಬಾಸ್’ ದೀಪಿಕಾ ದಾಸ್

    ಸ್ಯಾಂಡಲ್‌ವುಡ್ ನಟಿ ದೀಪಿಕಾ ದಾಸ್ (Deepika Das) ಅವರು ಬಿಗ್ ಬಾಸ್ (Bigg Boss Kannada) ಬಳಿಕ ಸಿನಿಮಾಗಳ ಕಡೆ ಗಮನ ವಹಿಸುತ್ತಿದ್ದಾರೆ. ಈ ನಡುವೆ ಸಮುದ್ರದ ಅಂಚಿನಲ್ಲಿ ನಿಂತು ಸಖತ್ ಫೋಟೋಶೂಟ್ ಮಾಡಿಸಿರೋದನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಕೃಷ್ಣ ರುಕ್ಮಿಣಿ, ನಾಗಿಣಿ, ಬಿಗ್ ಬಾಸ್ (Bigg Boss) ಶೋ ಸೇರಿದಂತೆ ಕಿರುತೆರೆಯಲ್ಲಿ ರಂಜಿಸಿದ್ದ ನಟಿ ದೀಪಿಕಾ ದಾಸ್ ಅವರು ಸಿನಿಮಾ, ಶೂಟಿಂಗ್ ಅಂತಾ ಅದೆಷ್ಟೇ ಬ್ಯುಸಿ ಇದ್ದರೂ ಕೂಡ ವೆಕೇಷನ್‌ಗೆ ಆಗಾಗ ಹೋಗಿ ಬರುತ್ತಾರೆ. ಇದನ್ನೂ ಓದಿ:‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

     

    View this post on Instagram

     

    A post shared by Deepika Das (@deepika__das)

    ಸದ್ಯ ಕಡಲ ಕಿನಾರೆಯಲ್ಲಿ ನಿಂತು ಹಾಟ್ ಪೋಸ್ ಕೊಟ್ಟರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಶಾರ್ಟ್ ಡ್ರೆಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಇತ್ತೀಚಿಗೆ ನಟಿ ದೀಪಿಕಾ ಅವರು ‘ಅಂತರಪಟ’ ಸೀರಿಯಲ್‌ನಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದರು. ಅವರ ಮುಂಬರುವ ಸಿನಿಮಾಗಾಗಿ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್

    ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್

    ಬಿಗ್ ಬಾಸ್ (Bigg Boss Kannada) ಬೆಡಗಿ ದೀಪಿಕಾ ದಾಸ್ (Deepika Das) ಅವರು ಮೈಸೂರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ತಾಯಿ ದರ್ಶನ ಪಡೆದು ಭಕ್ತಿ ಬೇಡಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

    ನಾಗಿಣಿ, ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಚೆಲುವೆ ದೀಪಿಕಾ ದಾಸ್ ಅವರು ಫೀಮೇಲ್ ಓರಿಯೆಂಟೆಡ್ ಸಿನಿಮಾ ಮೂಲಕ ಬರುತ್ತಿದ್ದಾರೆ. ಪಾಯಲ್ ಪಾತ್ರಧಾರಿಯಾಗಿ ಭಿನ್ನ ಕಥೆ ಹೇಳಲು ರೆಡಿಯಾಗಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್ ಅತಿಥಿಯಾಗಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಶೂಟಿಂಗ್‌ಗೆ ಕೊಂಚ ಬ್ರೇಕ್ ಹಾಕಿ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ದೀಪಿಕಾ ದಾಸ್ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ. ಬಿಳಿ ಬಣ್ಣದ ಪ್ಯಾಂಟ್- ಹಳದಿ ಬಣ್ಣದ ಶಾರ್ಟ್ ಟಾಪ್‌ನ ನಟಿ ಧರಿಸಿದ್ದಾರೆ. ಕಣ್ಣಿಗೆ ಚಸ್ಮಾ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಸೀರಿಯಲ್- ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ದೀಪಿಕಾ ದಾಸ್, ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಕೃಷ್ಣ ರುಕ್ಮಿಣಿ, ನಾಗಿಣಿ, ಬಿಗ್ ಬಾಸ್ ಶೋಗಳ ಮೂಲಕ ಟಿವಿ ಪರದೆಯಲ್ಲಿ ಮಿಂಚಿದವರು ದೀಪಿಕಾ ದಾಸ್. ಇದೀಗ ತಮ್ಮ ಅಭಿಮಾನಿಗಳು ಸಂಭ್ರಮಿಸುವಂತಹ ಸುದ್ದಿ ನೀಡಿದ್ದಾರೆ. ದೀಪಿಕಾ ದಾಸ್ (Deepika Das) ಮತ್ತೆ ಕಿರುತೆರೆಗೆ (Tv) ಕಮ್‌ಬ್ಯಾಕ್ ಆಗಿದ್ದಾರೆ.

    ‘ನಾಗಿಣಿ’ (Nagini)  ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ದೀಪಿಕಾ ದಾಸ್, ಬಳಿಕ ದೊಡ್ಮನೆ ಅಂಗಳಕ್ಕೆ ಕಾಲಿಟ್ಟರು ಫೈನಲಿಸ್ಟ್ ಆಗಿ ಗಟ್ಟಿ ಫೈಟ್ ನೀಡಿದ್ದರು. ಶೈನ್ ಶೆಟ್ಟಿ -ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada) ಟ್ರೋಫಿ ಗೆದ್ದ 2 ಸೀಸನ್‌ನಲ್ಲಿ ದೀಪಿಕಾ ದಾಸ್ ಕೊನೆಯ ಹಂತದವರೆಗೂ ಇದ್ದು ಬಿಗ್ ಫೈಟ್ ನೀಡಿದ್ದರು. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

     

    View this post on Instagram

     

    A post shared by Deepika Das (@deepika__das)

    ಇದೀಗ ‘ಬಿಗ್ ಬಾಸ್’ ಸೀಸನ್ 9 ಶೋ ಮುಗಿದ ಮೇಲೆ ಫೀಮೇಲ್ ಓರಿಯೆಂಟೆಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಟಿವಿ ಪ್ರೇಕ್ಷಕರಿಗೆ ದೀಪಿಕಾ ಗುಡ್ ನ್ಯೂಸ್ ನೀಡಿದ್ದಾರೆ. ‘ಅಂತರಪಟ’ ಸೀರಿಯಲ್‌ನಲ್ಲಿ ದೀಪಿಕಾ ದಾಸ್ ಅವರು ಸಮೀರಾ ಎಂಬ ಪಾತ್ರದ ಮೂಲಕ ಕಾಣಿಸಿಕೊಳ್ತಿದ್ದಾರೆ. ಸಂಸ್ಥೆಯೊಂದರ ಸಿಇಓ ಆಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ದೀಪಿಕಾ ದಾಸ್ ‘ಅಂತರಪಟ’ ಸೀರಿಯಲ್‌ಗೆ ಸಾಥ್ ನೀಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.

    ಇನ್ನೂ ನಟಿ ದೀಪಿಕಾ ದಾಸ್‌ಗೆ ಶೂಟಿಂಗ್‌ಗೆ ಬ್ರೇಕ್ ಇದ್ದಾಗ, ಟ್ರಾವೆಲಿಂಗ್ ಮಾಡೋದು ಅಂದರೆ ತುಂಬಾ ಇಷ್ಟ. ಸೋಲೋ ಟ್ರಾವೆಲ್ ಕೂಡ ಅಷ್ಟೇ ಇಷ್ಟಪಡುತ್ತಾರೆ.

  • ಮತ್ತೆ ಕಿರುತೆರೆಯತ್ತ ನಟ ವಿಠ್ಠಲ್ ಕಾಮತ್

    ಮತ್ತೆ ಕಿರುತೆರೆಯತ್ತ ನಟ ವಿಠ್ಠಲ್ ಕಾಮತ್

    ‘ದೇವಿ’ ಸೀರಿಯಲ್ (Devi Serial) ಮೂಲಕ ಬಣ್ಣದ ಲೋಕಕ್ಕೆ ಲಗ್ಗೆಯಿಟ್ಟ ವಿಠ್ಠಲ್ ಕಾಮತ್ (Vittal Kamath) ಇದೀಗ ಮತ್ತೆ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ‘ಅಂತರಪಟ’ (Antarapata) ಧಾರಾವಾಹಿ ಮೂಲಕ ಮತ್ತೆ ಟಿವಿ ಪ್ರೇಕ್ಷಕರಿಗೆ ಮೋಡಿ ಮಾಡಲು ರೆಡಿಯಾಗಿದ್ದಾರೆ.

    ಮೈಸೂರಿನ (Mysore) ಪ್ರತಿಭೆ ವಿಠ್ಠಲ್ ಕಾಮತ್ ಅಲಿಯಾಸ್ ಸೂರ್ಯ ಅವರು ದೇವಿ, ಅಕ್ಕ ಸೀರಿಯಲ್ ನಾಯಕನಾಗಿ ನಟಿಸಿದ್ದರು. ಈ ಧಾರಾವಾಹಿಯಲ್ಲಿನ ವಿಠ್ಠಲ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಹಿರಿತೆರೆಯಲ್ಲಿ ‘ಪ್ರೀತಿಯಲ್ಲಿ ಸಹಜ’, ‘ಕಟ್ಟುಕಥೆ’ (Kattukathe) ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಸ್ವಪ್ನ ಕೃಷ್ಣ ನಿರ್ದೇಶನದ ‘ಅಂತರಪಟ’ ಸೀರಿಯಲ್‌ನಲ್ಲಿ ವಿಠ್ಠಲ್ ಕಾಮತ್ ಅವರು ನೆಗೆಟಿವ್ ಶೇಡ್‌ನಲ್ಲಿ (Negative Role) ಕಾಣಿಸಿಕೊಂಡಿದ್ದಾರೆ. ಇದುವರೆಗೂ ಹೀರೋ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ನಟ, ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದ್ದಾರೆ.

    ನಟನಾಗಬೇಕು ಎಂದು ಕನಸು ಕಂಡಿದ್ದ ವಿಠ್ಠಲ್ ಕಾಮತ್ ಅವರು ಇದೀಗ ಹೊಸ ಬಗೆಯ ಪಾತ್ರಗಳ ಮೂಲಕ ಬರುತ್ತಿದ್ದಾರೆ. ಮತ್ತೊಂದಿಷ್ಟು ಪ್ರಾಜೆಕ್ಟ್‌ಗಳು ಮಾತುಕತೆ ಹಂತದಲ್ಲಿದೆ. ಸದ್ಯದಲ್ಲೇ ಈ ಬಗ್ಗೆ ನಟ ವಿಠ್ಠಲ್‌ ಅಧಿಕೃತ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.