Tag: ಅಂಡರ್-19 ವಿಶ್ವಕಪ್
-

ಮತ್ತೆ ಹೀನಾಯ ಸೋಲು, ಭಾರತದ ವಿಶ್ವಕಪ್ ಕನಸು ಭಗ್ನ – 14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್ ಕಿರೀಟ!
– 4ನೇ ಬಾರಿಗೆ U19 ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
ಕ್ಯಾನ್ಬೆರಾ: 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 79 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜೊತೆಗೆ 4ನೇ ಬಾರಿಗೆ ಅಂಡರ್ 19 ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿದೆ.
1988ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ, 2002 & 2010ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ನಂತರ 2012 ಮತ್ತು 2018ರಲ್ಲಿ ಫೈನಲ್ ತಲುಪಿದ್ದರೂ ಭಾರತದ ವಿರುದ್ಧವೇ ಸೋತು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಸತತ 5ನೇ ಬಾರಿ ಫೈನಲ್, 2 ಬಾರಿ ಚಾಂಪಿಯನ್:
ಭಾರತ ಕಿರಿಯರ ತಂಡ 2016 ರಿಂದ 2024ರ ವರೆಗೆ ನಡೆದಿರುವ ಎಲ್ಲಾ ಐಸಿಸಿ ಅಂಡರ್ 19 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದೆ. 2016ರಲ್ಲಿ ವಿಂಡೀಸ್ ವಿರುದ್ಧ, 2020ರಲ್ಲಿ ಬಾಂಗ್ಲಾದೇಶದ ವಿರುದ್ಧ ಫೈನಲ್ನಲ್ಲಿ ಸೋಲುಕಂಡರೆ, 2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2022ರಲ್ಲಿ ಯಶ್ ಧುಲ್ ನೇತೃತ್ವದ ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಹಿಂದೆ 2000ನೇ ಇಸವಿಯಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, 2012ರಲ್ಲಿ ಉನ್ಮುಕ್ ಚಂದ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2006ರಲ್ಲಿ ಪಾಕಿಸ್ತಾನದ ಎದುರು ಫೈನಲ್‌ನಲ್ಲಿ ಸೋಲು ಕಂಡಿತ್ತು.ಭಾನುವಾರ ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿತ್ತು. ಆದ್ರೆ ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 43.5 ಓವರ್‌ಗಳಲ್ಲಿ ಕೇಲವ 174 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಆಸೀಸ್ ತಂಡ 4ನೇ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಇದರೊಂದಿಗೆ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಭಾರತದ ಪರ ಆದರ್ಶ್ ಸಿಂಗ್ 47 ರನ್, ಮುಶೀರ್ ಖಾನ್ 22 ರನ್, ಮುರುಗನ್ ಅಭಿಷೇಕ್ 42 ರನ್ ಗಳಿಸಿದ್ದು ಬಿಟ್ಟರೇ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಭಾರತ ಹೀನಾಯ ಸೋಲನುಭವಿಸಿತು.
ಇದಕ್ಕೂ ಮುನ್ನ ಆಸೀಸ್ ಪರ ಬ್ಯಾಟಿಂಗ್ ಮಾಡಿದ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್, ಹರ್ಜಾಸ್ ಸಿಂಗ್ 55 ರನ್ (3 ಬೌಂಡರಿ, 3 ಸಿಕ್ಸರ್), ರಿಯಾನ್ ಹಿಕ್ಸ್ 20 ರನ್, ರಾಫ್ ಮ್ಯಾಕ್‌ಮಿಲನ್ 2 ರನ್, ಚಾರ್ಲಿ ಆಂಡರ್ಸನ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್, ಟಾಮ್ ಸ್ಟ್ರೇಕರ್ 8 ರನ್ ಗಳಿಸಿ ಅಜೇಯರಾಗುಳಿದರು.

ಇನ್ನೂ ಆಸೀಸ್ ಪರ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟು 3 ರನ್ ಪಡೆದರು. ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
-

ಭಾರತಕ್ಕೆ 254 ರನ್ ಟಾರ್ಗೆಟ್ – U19 ವಿಶ್ವಕಪ್ ಗೆಲುವಿಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ!
ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್ ಫೈನಲ್ (World Cup Final) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.

ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ (World Cup) ಗೆಲ್ಲಬೇಕೆಂಬ ಟೀಂ ಇಂಡಿಯಾದ (Team India) ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia) ಹೊರಹೊಮ್ಮಿತ್ತು.

ಇದೀಗ ಆಸೀಸ್ (Australia Under19s) ತವರಿನಲ್ಲೇ ಸೇಡು ತೀರಿಸಿಕೊಳ್ಳುವ ಸದವಕಾಶ ಭಾರತಕ್ಕೆ ಬಂದೊದಗಿದೆ. ಆಸೀಸ್ ತಂಡವನ್ನು ಮಣಿಸಿ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಶತಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಕ್ರೀಡಾಂಗಣದಲ್ಲೂ ನೆರೆದಿರುವ ಟೀಂ ಇಂಡಿಯಾ ಅಭಿಮಾನಿಗಳು ಆಸೀಸ್‌ಗೆ ತಿರುಗೇಟು ಕೊಡುವಂತೆ ಪೋಸ್ಟರ್ ಹಿಡಿದು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

19 ವರ್ಷದೊಳಗಿನವರ ವಿಶ್ವಕಪ್ ಫೈನಲ್ (ICC Under-19 World Cup Final) ಪಂದ್ಯವು ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್ ಕಮ್ಮಿನ್ಸ್ ನಾಯಕತ್ವಕ್ಕೆ ಮೆಚ್ಚುಗೆ!

ಆಸೀಸ್ ಪರ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್, ಹರ್ಜಾಸ್ ಸಿಂಗ್ 55 ರನ್ (3 ಬೌಂಡರಿ, 3 ಸಿಕ್ಸರ್), ರಿಯಾನ್ ಹಿಕ್ಸ್ 20 ರನ್, ರಾಫ್ ಮ್ಯಾಕ್‌ಮಿಲನ್ 2 ರನ್, ಚಾರ್ಲಿ ಆಂಡರ್ಸನ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್, ಟಾಮ್ ಸ್ಟ್ರೇಕರ್ 8 ರನ್ ಗಳಿಸಿ ಅಜೇಯರಾಗುಳಿದರು.
ಇನ್ನೂ ಆಸೀಸ್ ಪರ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟು 3 ರನ್ ಪಡೆದರು. ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಸೂರ್ಯನಿಗೆ ಸೆಡ್ಡು ಹೊಡೆದು ಹಿಟ್‌ಮ್ಯಾನ್ ಶತಕ ದಾಖಲೆ ಸರಿಗಟ್ಟಿದ ಮ್ಯಾಕ್ಸಿ!
-

U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್ ಎದುರಾಳಿ – ಫೆ.11ರಂದು ಫೈನಲ್
– ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 1 ವಿಕೆಟ್ ಜಯ, ಪಾಕ್‌ಗೆ ವಿರೋಚಿತ ಸೋಲು
ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್ ಫೈನಲ್(World Cup 2023) ರೋಚಕ ಹಣಾ-ಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಅಂಡರ್-19 ವಿಶ್ವಕಪ್ (Under-19 World Cup )ಟೂರ್ನಿಯಲ್ಲೂ ಮತ್ತೆ ಭಾರತಕ್ಕೆ ಆಸೀಸ್ ಎದುರಾಳಿಯಾಗಿದ್ದು, ವಿಶ್ವಕಪ್ ಕ್ಷಣಗಳನ್ನು ನೆನಪಿಸುವಂತೆ ಮಾಡಿದೆ.

ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Under 19s) ತಂಡ ಒಂದು ವಿಕೆಟ್‌ಗಳಿಂದ ಪಾಕ್ ತಂಡವನ್ನು ಸೋಲಿಸಿ, ಫೈನಲ್ ಪ್ರವೇಶಿಸಿದೆ. ಭಾನುವಾರ (ಫೆ.11) ಮಧ್ಯಾಹ್ನ 1:30ರ ವೇಳೆಗೆ ಆಸ್ಟ್ರೇಲಿಯಾ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಭಾರತ – ಆಸೀಸ್ ಯುವಕರ ತಂಡ ಸೆಣಸಲಿವೆ. ಇದನ್ನೂ ಓದಿ: India vs England 2nd Test: 255 ಕ್ಕೆ ಭಾರತ ಆಲೌಟ್, ಇಂಗ್ಲೆಂಡ್‌ಗೆ 399 ರನ್ ಗುರಿ

ಆಸೀಸ್ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿತು. 180 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 181 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಪರ ಅಜಾನ್ ಅವೈಸ್ 91 ಎಸೆತಗಳಲ್ಲಿ 52 ರನ್, ಅರಾಫತ್ ಮಿನ್ಹಾಸ್ 61 ಎಸೆತಗಳಲ್ಲಿ 51 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲರಾದ ಕಾರಣ ಪಾಕ್ ಅಲ್ಪಮೊತ್ತಕ್ಕೆ ಔಟಾಗಿ ಸೋಲನುಭವಿಸಿತು. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

ಟಾಮ್ ಸ್ಟ್ರಾಕರ್‌ಗೆ 6 ವಿಕೆಟ್:
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆಸೀಸ್ ಆರಂಭದಿಂದಲೇ ಪಾಕ್ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆಸೀಸ್ ಪರ 9.5 ಓವರ್‌ಗಳಲ್ಲಿ ಕೇವಲ 24 ರನ್ ಬಿಟ್ಟುಕೊಟ್ಟ ಟಾಮ್ ಸ್ಟ್ರಾಕರ್ 6 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಮಾಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್, ರಾಫ್ ಮ್ಯಾಕ್‌ಮಿಲನ್, ಟಾಮ್ ಕ್ಯಾಂಪ್‌ಬೆಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.ಇನ್ನೂ ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಅಲಿ ರಾಝಾ 10 ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟು ನಾಲ್ಕು ವಿಕೆಟ್ ಪಡೆದು ಆಸೀಸ್ ಪಡೆಯನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಮೊಹಮ್ಮದ್ ಜೀಶಾನ್ ಅವರ ದುಬಾರಿ ಓವರ್‌ನಿಂದಾಗಿ ಪಾಕ್ ವಿರೋಚಿತ ಸೋಲಿಗೆ ತುತ್ತಾಯಿತು. ಪಾಕ್ ಪರ ಅರಾಫತ್ ಮಿನ್ಹಾಸ್ 2 ವಿಕೆಟ್ ಕಿತ್ತರೆ, ಉಬೈದ್ ಶಾ, ನವೀದ್ ಅಹ್ಮದ್ ಖಾನ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

ಡಿಕ್ಸನ್ ಜವಾಬ್ದಾರಿಯುತ ಅರ್ಧಶತಕ :
180 ರನ್‌ಗಳ ಗುರಿ ಬೆನ್ನತಿದ್ದ ಆಸೀಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಶುರು ಮಾಡಿತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಹ್ಯಾರಿ ಡಿಕ್ಸನ್ 75 ಎಸೆತಗಳಲ್ಲಿ ಜವಾಬ್ದಾರಿಯುತ ಅರ್ಧಶತಕ ಗಳಿಸಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಲಿವರ್ ಪೀಕ್ 49 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: -

ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು
ಅಹಮದಾಬಾದ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ವೀಕ್ಷಣೆಗಾಗಿ ನರೇಂದ್ರ ಮೋದಿ ಸ್ಟೇಡಿಯಂಗೆ ವಿಶೇಷ ಅತಿಥಿಗಳು ಆಗಮಿಸಿದ್ದರು.

ಕೊರೊನಾದಿಂದಾಗಿ ಏಕದಿನ ಸರಣಿ ವೀಕ್ಷಣೆಗೆ ಸ್ಟೇಡಿಯಂಗೆ ಆಗಮಿಸಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಆದರೆ ಇಂದಿನ ಎರಡನೇ ಏಕದಿನ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಒಂದಷ್ಟು ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಂಡದ ಹೆಸರು ಸೂಚಿಸಿದ ಅಹಮದಾಬಾದ್ ಫ್ರಾಂಚೈಸ್ – ಗುಜರಾತ್ ಟೈಟಾನ್ಸ್ ನ್ಯೂ ನೇಮ್

ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸಿದ್ದು, ಟೀಂ ಇಂಡಿಯಾದ ಯಂಗ್ ಸ್ಟಾರ್ಸ್. ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯರು ಇಂದು ಹಿರಿಯ ಆಟಗಾರರ ಪಂದ್ಯ ವೀಕ್ಷಣೆಗಾಗಿ ಸ್ಟೇಡಿಯಂಗೆ ಆಗಮಿಸಿದ್ದರು. ಭಾನುವಾರ ನಡೆದ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಯಶ್ ಧುಲ್ ಸಾರಥ್ಯದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 4 ವಿಕೆಟ್‍ಗಳ ಜಯ ದಾಖಲಿಸಿ ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?
Our #U19CWC-winning team in attendance here in Ahmedabad 🏟️#BoysInBlue pic.twitter.com/L0KheIUD4M
— BCCI (@BCCI) February 9, 2022
-

U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?
ಮುಂಬೈ: ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ, 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದ ತರ್ಲೋಚನ್ ಸಿಂಗ್ ಬಾವಾರ ಮೊಮ್ಮಗ ಎಂಬ ವಿಷಯ ಇದೀಗ ರಿವೀಲ್ ಆಗಿದೆ.

2022ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ ಬಾವಾ ಫೈನಲ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ಟೀಂ ಇಂಡಿಯಾದ ಅಂಡರ್-19 ತಂಡದಲ್ಲಿ ಆಲ್‍ರೌಂಡರ್ ಆಗಿ ತಂಡದೊಂದಿಗಿದ್ದ ರಾಜ್‍ಬಾವಾ ಪ್ರತಿ ಪಂದ್ಯದಲ್ಲೂ ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

ರಾಜ್ ಬಾವಾರದ್ದು, ಹಿಂದಿನಿಂದಲೂ ಕ್ರೀಡಾ ಆಸಕ್ತರ ಕುಟುಂಬ ರಾಜ್ ಬಾವಾರ ಅಜ್ಜ ತರ್ಲೋಚನ್ ಸಿಂಗ್ ಬಾವಾ ಭಾರತದ ಹಾಕಿ ತಂಡದಲ್ಲಿ ಮಿಂಚಿದ ಪ್ರತಿಭೆ. 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಹಾಕಿಯಲ್ಲಿ ಚಿನ್ನಗೆದ್ದಾಗ ಭಾರತದ ಜಯದಲ್ಲಿ ತರ್ಲೋಚನ್ ಸಿಂಗ್ ಬಾವಾ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರ ಮೊಮ್ಮಗ 74 ವರ್ಷದ ಬಳಿಕ ಭಾರತದ ಮುಡಿಗೆ ಪ್ರಶಸ್ತಿ ಗೆದ್ದುಕೊಡಲು ಪ್ರಮುಖ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ

ರಾಜ್ ಬಾವಾ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ 2ನೇ ಮತ್ತು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ರಾಜ್ ಬಾವ ಒಟ್ಟು 252 ರನ್ ಮತ್ತು 9 ವಿಕೆಟ್ ಪಡೆದು ಯುವ ಆಲ್‍ರೌಂಡರ್ ಆಟಗಾರನಾಗಿ ಭರವಸೆ ಮೂಡಿಸಿದ್ದಾರೆ.
-

ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್
ಮುಂಬೈ: ಅಂಡರ್-19 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ ದಿನೇಶ್ ಬಣ ಸಿಡಿಸಿದ ಫಿನಿಶಿಂಗ್ ಶಾಟ್, 2011ರ ವಿಶ್ವಕಪ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಸಿಕ್ಸರ್ ನೆನಪಿಸಿದೆ.

2011ರ ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ನುವಾನ್ ಕುಲಶೇಖರ ಎಸೆದ 48ನೇ ಓವರ್‌ನ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟಿ ಭಾರತಕ್ಕೆ 2ನೇ ಬಾರಿ ಏಕದಿನ ವಿಶ್ವಕಪ್ ಜಯಸಿಕೊಟ್ಟಿದ್ದರು. ಆ ಸುಂದರ ಕ್ಷಣವನ್ನು ನಿನ್ನೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ಮತ್ತೊಮ್ಮೆ ನೆನಪಿಸಿದೆ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

ಟೀಂ ಇಂಡಿಯಾ ವಿಶ್ವಕಪ್ ಗೆದ್ದು 11 ವರ್ಷಗಳ ಬಳಿಕ ನಿನ್ನೆ ಬಾಣ ಸಿಡಿಸಿದ ಫಿನಿಶಿಂಗ್ ಶಾಟ್ ಧೋನಿಯ ಐಕಾನಿಕ್ ಶಾಟ್‍ನಂತೆ ಕಂಡು ಬರಲು ಕಾರಣವಿದೆ. ಇಂಗ್ಲೆಂಡ್ ನೀಡಿದ 190 ರನ್‍ಗಳ ಗುರಿ ಬೆನ್ನಟ್ಟಲು ಹೊರಟ ಟೀಂ ಇಂಡಿಯಾ 176 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ದಿನೇಶ್ ಬಾಣ ಕೇವಲ 5 ಎಸೆತದಲ್ಲಿ 2 ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಟೀಂ ಇಂಡಿಯಾವನ್ನು 4 ವಿಕೆಟ್ ಮತ್ತು 14 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ 5ನೇ ಅಂಡರ್-19 ವಿಶ್ವಕಪ್ ಮುತ್ತಿಕ್ಕುವ ಅವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲದೆ ಧೋನಿ ಮತ್ತು ದಿನೇಶ್ ಬಣ ಇಬ್ಬರೂ ಕೂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗಳು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇದನ್ನೂ ಓದಿ: ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ
View this post on Instagramಬಣ ಸಿಡಿಸಿದ ಅಂತಿಮ ಸಿಕ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ 2011 ವಿಶ್ವಕಪ್ ಹೀರೋ ಆದರೆ, 2022ರ ಅಂಡರ್-19 ಹೀರೋ ಆಗಿ ದಿನೇಶ್ ಬಣ ಕಾಣಿಸಿಕೊಂಡಿದ್ದಾರೆ. ಈ ಎರಡು ಐಕಾನಿಕ್ ಶಾಟ್‍ಗಳು ಅಜಾರಮರ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
-

5ನೇ ಬಾರಿ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ
ಆಂಟಿಗುವಾ: 2022ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು 4 ವಿಕೆಟ್‍ಗಳಿಂದ ಬಗ್ಗು ಬಡಿದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟೀಂ ಇಂಡಿಯಾದ ಯುವ ಆಟಗಾರರಾದ ರಾಜ್ ಬಾವಾ ಮತ್ತು ರವಿ ಕುಮಾರ್ ದಾಳಿಗೆ ಪತರುಗಟ್ಟಿ 44.5 ಓವರ್‌ಗಳಲ್ಲಿ 189 ರನ್‍ಗಳಿಗೆ ಆಲೌಟ್ ಆಯಿತು.

ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ರವಿ ಕುಮಾರ್ 34 ರನ್‍ಗಳನ್ನು ನೀಡಿ 4 ವಿಕೆಟ್ ಹಾಗೂ ರಾಜ್ ಬಾವ 31 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇಬ್ಬರೂ ಬೌಲರ್‍ಗಳು ತಲಾ 1 ಮೆಡಿನ್ ಓವರ್ ಮಾಡಿದರು.
ಇಂಗ್ಲೆಂಡ್‍ನ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆಂಗ್ಕ್ರಿಶ್ ರಘುವಂಶಿ ಎರಡು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ವಿಕೆಟ್ ನೀಡಿದ್ದು ಆರಂಭಿಕ ಆಘಾತವಾಯಿತು. ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಸಹ 46 ಎಸೆತಗಳನ್ನು ಎದುರಿಸಿ 21 ರನ್‍ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ್ದು, 2ನೇ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೆಚ್ಚಿಸಿತ್ತು. ನಂತರ 84 ಎಸೆತಗಳನ್ನು ಎದುರಿಸಿ 50 ರನ್ ಗಳಿಸುವ ಮೂಲಕ ಶೇಖ್ ರಶೀದ್ ತಂಡಕ್ಕೆ ಚೇತರಿಕೆ ನೀಡಿದರಾದರೂ ಯಶ್ ಧುಲ್ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ.

ನಿಶಾಂತ್ ಸಿಂಧು 54 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿದರು. ರಾಜ್ ಬಾವ 54 ಎಸೆತಗಳಲ್ಲಿ 34 ರನ್ ಗಳಿಸಿದರೆ, ನಿಶಾಂತ್ ಸಿಂಧು ಹಾಗೂ ದಿನೇಶ್ ಬನಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ರಾಜ್ ಭಾವ, ರವಿ ದಾಳಿಗೆ ಬೆವರಿದ ಇಂಗ್ಲೆಂಡ್ – ಭಾರತಕ್ಕೆ 190 ರನ್ ಗುರಿ
Congratulations to the under 19 team and the support staff and the selectors for winning the world cup in such a magnificent way ..The cash prize announced by us of 40 lakhs is a small token of appreciation but their efforts are beyond value .. magnificent stuff..@bcci
— Sourav Ganguly (@SGanguly99) February 5, 2022
ಭಾರತ ಇಂಗ್ಲೆಂಡ್ ತಂಡದ ವಿರುದ್ಧ 4 ವಿಕೆಟ್‍ಗಳ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‍ನ್ನು ಮುಡಿಗೇರಿಸಿಕೊಂಡಿತು. ಈ ವಿಶ್ವಕಪ್ ಗೆಲುವಿನ ಮೂಲಕ ಭಾರತ 5ನೇ ಅಂಡರ್-19 ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಮಟ್ಟಿಲೇರಿಸಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ

ಅಂಡರ್-19 ಇತಿಹಾಸದಲ್ಲಿ ಟೀಂ ಇಂಡಿಯಾ 7 ಬಾರಿ ಫೈನಲ್ ತಲುಪಿದೆ. ಭಾರತ 2000ದಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ, 2012ರಲ್ಲಿ ಉನ್ಮುಕ್ ಚಾಂದ್ ಮತ್ತು 2018ರಲ್ಲಿ ಪೃಥ್ವಿ ಶಾ ಮತ್ತು 2022ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದು ಬೀಗಿದೆ.
-

Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ
ಮುಂಬೈ: ಅಂಡರ್-19 ವಿಶ್ವಕಪ್‍ನಲ್ಲಿ ಭಾರತ ಯುವ ಪಡೆ ಸತತ ನಾಲ್ಕನೇ ವರ್ಷ ಫೈನಲ್‍ಗೆ ಲಗ್ಗೆ ಇಟ್ಟು ದಾಖಲೆ ನಿರ್ಮಿಸಿದೆ.

ಟೀಂ ಇಂಡಿಯಾ 2016, 2018, 2020 ಮತ್ತು 2022ರಲ್ಲಿ ಸತತವಾಗಿ ಫೈನಲ್‍ಗೆ ಅರ್ಹತೆ ಗಳಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 2016ರ ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತು ರನ್ನರ್ ಅಪ್ ಆದರೆ, 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು. ಬಳಿಕ 2020ರಲ್ಲಿ ಬಾಂಗ್ಲದೇಶ ವಿರುದ್ಧ ಸೋತು ರನ್ನರ್ ಅಪ್ ಆದರೆ, ಇದೀಗ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯ ಆಡಬೇಕಾಗಿದೆ. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!

2022ರ ಅಂಡರ್-19 ವಿಶ್ವಕಪ್‍ನಲ್ಲಿ ಯಶ್ ಧುಲ್ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ನಾಳೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಟೀಂ ಇಂಡಿಯಾ ಫೈನಲ್‍ನಲ್ಲಿ ಗೆದ್ದು 5ನೇ ಬಾರಿ ಅಂಡರ್-19 ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ

ಅಂಡರ್-19 ಇತಿಹಾಸದಲ್ಲಿ ಟೀಂ ಇಂಡಿಯಾ 7 ಬಾರಿ ಫೈನಲ್ ತಲುಪಿದೆ. ಭಾರತ 2000ದಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ, 2012ರಲ್ಲಿ ಉನ್ಮುಕ್ ಚಾಂದ್ ಮತ್ತು 2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಗೆದ್ದು ಚಾಂಪಿಯನ್ ಆಗಿದೆ.
-

ಅಂಡರ್-19 ವಿಶ್ವಕಪ್ ಹೀರೋಗಳಿಗೆ ತೆರೆಯುವುದೇ ಐಪಿಎಲ್ ಬಾಗಿಲು?
ಮುಂಬೈ: ಅದೆಷ್ಟೋ ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಮಿಂಚಿ, ಬಳಿಕ ಐಪಿಎಲ್‍ನಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಇದೀಗ 2022 ಐಪಿಎಲ್ ಹರಾಜಿಗೂ ಮುನ್ನ ಭಾರತ ಅಂಡರ್-19 ತಂಡದಲ್ಲಿ ಮಿಂಚುತ್ತಿರುವ ಐವರು ಆಟಗಾರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದೆ ಭಾರತ ತಂಡದ ಮಾಜಿ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಆಲ್‍ರೌಂಡರ್ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ರಿಷಭ್ ಪಂತ್ ಸಹಿತ ಹಲವಾರು ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿ, ಐಪಿಎಲ್‍ನಲ್ಲಿ ಮಿಂಚು ಹರಿಸಿ ಭಾರತ ತಂಡದಲ್ಲಿ ಕಾಣಿಸಿಕೊಂಡ ಉದಾಹಣೆಗಳಿವೆ. ಇದನ್ನೂ ಓದಿ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

ಪ್ರತಿ ಬಾರಿ ಐಪಿಎಲ್ ಹರಾಜಿಗೂ ಮುನ್ನ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಐಪಿಎಲ್ ಫ್ರಾಂಚೈಸ್‍ಗಳು ಮಾಡಿಕೊಂಡು ಬಂದಿದೆ. ಇದೀಗ 2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಅತ್ತ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಯುವ ಆಟಗಾರರು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್

ಅದರಲ್ಲೂ 2022ರ ಅಂಡರ್-19 ತಂಡದ ನಾಯಕ ಯಶ್ ಧುಲ್, ಬ್ಯಾಟ್ಸ್‌ಮ್ಯಾನ್‌ಗಳಾದ ಆಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲ್‍ರೌಂಡರ್ ಆಗಿ ರಾಜ್ ಬಾವಾ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಕ್ಕಿ ಓಸ್ವಾಲ್ ಸೂಪರ್ ಸ್ಪೆಲ್ ಮಾಡುತ್ತಿದ್ದಾರೆ. ಈ ಐವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಉತ್ತಮ ಪ್ರದರ್ಶನ ತೋರಿ ಮುನ್ನಗುತ್ತಿದೆ. ಇದೀಗ ಈ ಐವರು ಆಟಗಾರರ ಪ್ರದರ್ಶನವನ್ನು ಗಮನಿಸಿ ಐಪಿಎಲ್ ಫ್ರಾಂಚೈಸ್‍ಗಳು ಹರಾಜಿನಲ್ಲಿ ಖರೀದಿಗೆ ಮುಂದಾಗುವರೇ ಎಂಬ ಕುತೂಹಲವಿದೆ. ಈ ಎಲ್ಲದಕ್ಕೂ ಫೆ.12ರ ವರೆಗೆ ಕಾಯಲೇಬೇಕಾಗಿದೆ.
