Tag: ಅಂಡರ್ ಪಾಸ್

  • ಅಂಡರ್ ಪಾಸ್ ಕೆಳಗೆ ಸಿಲುಕಿಕೊಂಡ್ತು 10 ಚಕ್ರದ ಲಾರಿ!

    ಅಂಡರ್ ಪಾಸ್ ಕೆಳಗೆ ಸಿಲುಕಿಕೊಂಡ್ತು 10 ಚಕ್ರದ ಲಾರಿ!

    ಬೆಂಗಳೂರು: ಡ್ರೈವರ್ ಅಜಾಗರೂಕತೆಯಿಂದ ಅಂಡರ್ ಪಾಸ್ ಕೆಳಗೆ ಹತ್ತು ಚಕ್ರದ ಲಾರಿಯೊಂದು ಸಿಕ್ಕಿಹಾಕಿಕೊಂಡಿದ್ದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

    ಬೈಕ್‍ಗಳನ್ನ ಲೋಡ್ ಮಾಡಿಕೊಂಡು ರಾಜಸ್ಥಾನದಿಂದ ಬಂದಿದ್ದ ಲಾರಿ ತಮಿಳುನಾಡಿನ ಹೊಸೂರು ಕಡೆ ಹೊರಟಿತ್ತು. ಈ ವೇಳೆ ಕೆಆರ್ ಸರ್ಕಲ್‍ನ ಅಂಡರ್ ಪಾಸ್ ಕೆಳಗೆ 1ಗಂಟೆ ಕಾಲ ಸಿಕ್ಕಿ ಹಾಕಿಕೊಂಡಿತ್ತು. ಕೊನೆಗೆ ಡ್ರೈವರ್ ಕಷ್ಟಪಟ್ಟು ಲಾರಿಯನ್ನ ಅಂಡರ್ ಪಾಸ್‍ನಿಂದ ಹೊರಕ್ಕೆ ತಂದಿದ್ದಾರೆ.

    ಆದ್ರೆ ಇಲ್ಲಿ ಈ ರೀತಿಯ ಘಟನೆ ಆಗಾಗ್ಗೆ ನಡೆಯುತ್ತಿದ್ದು ಇತರೆ ವಾಹನ ಸವಾರರಿಗೆ ತೊಂದರೆ ಆಗ್ತಿದೆ. ಘಟನೆ ರಾತ್ರಿ ನಡೆದಿರುವುದರಿಂದ ಹೆಚ್ಚಿನ ತೊಂದ್ರೆಯಾಗಿಲ್ಲ. ಅಷ್ಟಕ್ಕೂ ಹೆವಿ ವೆಹಿಕಲ್ ಸಿಟಿ ಒಳಗೆ ಪ್ರವೇಶ ಮಾಡುವ ಹಾಗೆಯೇ ಇಲ್ಲ ಅನ್ನೋ ನಿಯಮವಿದೆ. ಅದನ್ನ ಮೀರಿ ಲಾರಿ ಚಾಲಕ ಸಿಟಿ ಲಿಮಿಟ್ಸ್‍ನಲ್ಲಿ ಹೆವಿ ವೆಹಿಕಲ್‍ನ್ನ ತಂದು ಅಂಡರ್ ಪಾಸ್‍ನಲ್ಲಿ ಸಿಲುಕಿ ಹಾಕಿಕೊಂಡಿದ್ರು ಅಂತ ಸ್ಥಳೀಯರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸ್ಕೂಲ್ ಬಸ್ ಮೇಲೆ ಏಣಿ ಇಟ್ಟು 70 ವಿದ್ಯಾರ್ಥಿಗಳ ರಕ್ಷಣೆ- ವಿಡಿಯೋ

    ಸ್ಕೂಲ್ ಬಸ್ ಮೇಲೆ ಏಣಿ ಇಟ್ಟು 70 ವಿದ್ಯಾರ್ಥಿಗಳ ರಕ್ಷಣೆ- ವಿಡಿಯೋ

    ಜೈಪುರ: ಶಾಲೆಯ ಬಸ್ಸೊಂದು ಅಂಡರ್ ಪಾಸ್‍ನಲ್ಲಿ ಸಿಲುಕಿಕೊಂಡು, ಅದರಲ್ಲಿದ್ದ 70 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ಥಾನದ ಸಿಕರ್ ನಲ್ಲಿ ನಡೆದಿದೆ.

    ರೈಲ್ವೇ ಮಾರ್ಗದ ಕೆಳಗೆ ವಾಹನ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಈ ಮಾರ್ಗವಾಗಿ ಬಸ್ಸು ಚಾಲನೆ ಮಾಡಿದ ಪರಿಣಾಮ, 3 ರಿಂದ 4 ಅಡಿ ಕೆಸರು ಮಿಶ್ರಿತ ನೀರಿನಲ್ಲಿ ಬಸ್ಸು ಸಿಲುಕಿಕೊಂಡಿತ್ತು.

    ಕೊನೆಗೆ ಸ್ಥಳೀಯರು ಬಸ್ಸಿನ ಮೇಲೆ ಏಣಿ ಇಟ್ಟು, ಮಕ್ಕಳನ್ನು ಒಬ್ಬರಂತೆ ಸೇತುವೆ ಮೇಲೆ ಹತ್ತಿಸಲಾಯಿತು. ಮಕ್ಕಳ ರಕ್ಷಣಾ ಕಾರ್ಯಾಚರಣೆ ನೋಡಲು ಅನೇಕರು ಸೇರಿದ್ದರು.

    ಇಂತಹದ್ದೇ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿತ್ತು. ಶಾಲೆಯಿಂದ ಮನೆಗೆ ಹೊರಟಿದ್ದ ಬಸ್ಸು ಅಂಡರ್ ಪಾಸ್ ಮೂಲಕ ಹೋಗುವಾಗ ಮಳೆ ನೀರಿನಲ್ಲಿ ಸಿಲುಕಿತ್ತು. ಅದೃಷ್ವಶಾತ್ ಚಾಲಕ, ನಿರ್ವಾಹಕ ಹಾಗೂ ಸ್ಥಳೀಯರ ಸಹಾಯದಿಂದ ಬಸ್ಸಿನಲ್ಲಿದ್ದ 21 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಲಕ್ನೋ: ಮಳೆ ನೀರು ತುಂಬಿದ್ದ ರೈಲ್ವೇ ಸೇತುವೆಯ ಕೆಳ ರಸ್ತೆ (ಅಂಡರ್ ಪಾಸ್)ನಲ್ಲಿ ಶಾಲೆಯೊಂದರ ಬಸ್ ಸಿಲುಕಿ, 21 ವಿದ್ಯಾರ್ಥಿಗಳು ಅದೃಷ್ಟವಶಾತ್ ಬದುಕಿಳಿದ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿದೆ.

    ಕಳೆದೆರಡು ದಿನಗಳಿಂದ ಭಾರೀ ಮಳೆಯಿಂದಾಗಿ ಕೇಳ ಸೇತುವೆ ಕೆಸರು ಮಿಶ್ರಿತ ನೀರಿನಿಂದ ತುಂಬಿತ್ತು. ಶುಕ್ರವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್ ಹೋಗಿತ್ತು. ಚಾಂದ್‍ಸರ ಸಮೀಪ ಸೇತುವೆಯ ಕೆಳಗೆ ಮಳೆ ನೀರು ತುಂಬಿರುವುದನ್ನು ಅರಿತ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸೈಲೆನ್ಸರ್ ಮತ್ತು ಎಂಜಿನ್‍ಗೆ ನೀರು ನುಗ್ಗಿತ್ತು.

    ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಬಸ್ಸಿನಲ್ಲಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ತಕ್ಷಣವೇ ಜಾಗೃತರಾದ ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ವಾಹನದಿಂದ ಹೊರಗಡೆ ತರಲು ಯತ್ನಿಸಿದರು. ಕೇವಲ ಇಬ್ಬರಿಂದ 21 ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವುದು ಕಷ್ಟವಾಗಿತ್ತು.

    ಮಕ್ಕಳು ಅಳುತ್ತಿರುವ ಹಾಗೂ ಚೀರುತ್ತಿರುವುದನ್ನು ಕೇಳಿದ ಚಾಂದ್‍ಸರ ಗ್ರಾಮಸ್ಥರು ಸ್ಥಳಕ್ಕೆ ಬಂದು, ವಾಹನ ಮುಳುಗುತ್ತಿರುವುದನ್ನು ನೋಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಜೊತೆ ಸೇರಿ ಬಸ್ ಕಿಟಕಿ, ಗಾಜು ಒಡೆದು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊನೆಗೆ ಬಸ್ ಸಂಪೂರ್ಣವಾಗಿ ಮುಳುಗಲು ಆರಂಭಿಸಿತ್ತು. ಆದರೆ ಬಸ್ಸಿನಲ್ಲಿ ಇನ್ನೂ ಒಂದು ಮಗು ಇದ್ದಿದ್ದನ್ನು ಅರಿತ ವ್ಯಕ್ತಿಯೊಬ್ಬರು ಧೈರ್ಯದಿಂದ ನೀರಿನಲ್ಲಿ ನುಗ್ಗಿ, ಕಿಟಕಿಯ ಮೂಲಕ ಮಗುವನ್ನು ಹೊರತರುವ ಮೂಲಕ ಎಲ್ಲ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

  • ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಬೆಂಗಳೂರು: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಎಚ್ಚರಕೆಯಿಂದ ಸಂಚರಿಸಬೇಕಾಗಿದೆ. ಯಾಕಂದ್ರೆ ಸರ್ಕಾರ ಕಟ್ಟಿರೋ ಹೈಟೆಕ್ ಅಂಡರ್ ಪಾಸ್‍ಗಳು ಮೈಮೇಲೆ ಬೀಳುವ ಸಂಭವಗಳಿವೆ.

    ಹೌದು. ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡಲು ನಿರ್ಮಾಣಗೊಂಡಿರೋ ಅಂಡರ್‍ಪಾಸ್‍ಗಳು ಮೃತ್ಯುಕೂಪವಾಗಿ ಪರಿಣಮಿಸಿವೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಅನ್ನೋ ಜಾರ್ಜ್ ಸಾಹೇಬ್ರು ಸ್ವಲ್ಪ ಅಂಡರ್‍ಪಾಸ್‍ಗಳತ್ತ ಗಮನಹರಿಸಬೇಕಾಗಿದೆ. ಕಾವೇರಿ ಜಂಕ್ಷನ್ ಅಂಡರ್‍ಪಾಸ್, ಲೀ ಮೆರೆಡಿಯನ್ ಅಂಡರ್‍ಪಾಸ್, ಹೌಸಿಂಗ್ ಬೋಡ್ ಅಂಡರ್‍ಪಾಸ್, ನಾಯಂಡಹಳ್ಳಿ ಅಂಡರ್‍ಪಾಸ್ ಸೇರಿದಂತೆ ಇತರೆ ಅಂಡರ್‍ಪಾಸ್‍ಗಳು ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತಕ್ಕೆ ತಲುಪಿದೆ. ಈ ಎಲ್ಲಾ ಅಂಡರ್‍ಪಾಸ್‍ಗಳ ಗೋಡೆ ಗೋಡೆಗಳಲ್ಲೂ ನೀರು ಸೋರುತ್ತಿದ್ದು ಯಾವುದೇ ಕ್ಷಣದಲ್ಲಾದ್ರು ಕುಸಿದು ಬೀಳುವ ಆತಂಕ ಕಾಡುತ್ತಿದೆ.

    ಕಾವೇರಿ ಜಂಕ್ಷನ್ ಅಂಡರ್‍ ಪಾಸ್: ಬೆಂಗಳೂರಲ್ಲಿ ಯಾವಾಗ ಮಳೆ ಬಂದ್ರೂ ಮೊದಲು ನೀರು ನಿಲ್ಲೋದು ಇದೇ ಅಂಡರ್‍ಪಾಸ್‍ನಲ್ಲಿ. ಹತ್ತಾರು ಅಲ್ಲ ನೂರಾರು ವಾಹನಗಳು ಈ ಅಂಡರ್‍ಪಾಸ್‍ನಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳೋಕೆ ಒದ್ದಾಡಿದ್ದಾರೆ. ಇದನ್ನ ಬರೀ 48 ಗಂಟೆಯಲ್ಲಿ ಕಟ್ಟಿ ಮೀಸೆ ತಿರುವಿದ್ದವರು ಈ ಕಡೆ ತಲೆ ಹಾಕಿಲ್ಲ. ಅಂಡರ್‍ಪಾಸ್ ಸೋರ್ತಿದ್ದು ಯಾವಾಗ ಬೀಳುತ್ತೋ ಗೊತ್ತಿಲ್ಲ. ಕಾವೇರಿ ಜಂಕ್ಷನ್ ಅಂಡರ್ ಪಾಸ್ ತಪ್ಪಿಸಿಕೊಂಡು ಸ್ಯಾಂಕಿ ಕೆರೆ ಹತ್ತಿರದಲ್ಲಿರೋ ಲೀ ಮೆರಿಡಿಯನ್ ಅಂಡರ್‍ಪಾಸ್ ಹತ್ರ ಅಪ್ಪಿತಪ್ಪಿನೂ ಹೋಗ್ಬೇಡಿ. ಈ ಅಂಡರ್‍ಪಾಸ್ ಕೂಡ ಸೋರುತ್ತಿದ್ದು ಈಗಾಗ್ಲೇ ಬಿರುಕು ಬಿಟ್ಟಿವೆ.

    ಹೌಸಿಂಗ್‍ ಬೋರ್ಡ್ ಅಂಡರ್‍ ಪಾಸ್: ಇದನ್ನ ಕಟ್ಟಿ 6 ತಿಂಗಳು ಕಳೆದಿಲ್ಲ. ಅದಾಗ್ಲೇ ಗೋಡೆಗಳೆಲ್ಲಾ ಬಿರುಕುಬಿಟ್ಟಿವೆ. ನೀರು ಸೋರುತ್ತಿದ್ದು ಅಂಡರ್‍ಪಾಸ್ ಕೆಳಗೆ ನಿಲ್ತಿದೆ. ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದ ಈ ಅಂಡರ್‍ಪಾಸ್ ಈಗ ಡೆಡ್ಲಿ ಅಂಡರ್‍ಪಾಸ್ ಆಗಿದೆ.

    ನಾಯಂಡಹಳ್ಳಿ ಅಂಡರ್‍ ಪಾಸ್ ಜೊತೆ ಫ್ಲೈ ಓವರ್ ಕೆಳಗೆ ಹೋದ್ರೆ ನಿಮ್ಮ ಪ್ರಾಣ ಹಾರಿಹೋಗೋದು ನಿಶ್ಚಿತ. ಇಷ್ಟೆಲ್ಲಾ ತೂತುಗಳಿದ್ರೂ ಬಿಬಿಎಂಪಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅಂಡರ್ ಪಾಸ್ ಬಿದ್ದು ಅದರೊಳಗೆ ಸಿಲುಕಿ ಮೃತಪಟ್ಟರೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ತಾರೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಂದ ಇರಬೇಕಾಗಿದೆ.

    ಈಗಾಗಲೇ ರಾಜಾಕಾಲುವೆಯ ಕಳಪೆ ಕಾಮಗಾರಿಯಿಂದ 5 ಜನರ ಬಲಿಯಾಗಿದೆ. ಈ ಅಂಡರ್‍ಪಾಸ್‍ಗಳಿಂದಾಗಿ ಇನ್ನಷ್ಟು ಬಲಿಯಾಗೋ ಪ್ರಸಂಗ ಬಂದಿದೆ. ವಿವಿಐಪಿಗಳು ಓಡಾಡೋ ಅಂಡರ್‍ಪಾಸ್‍ಗಳ ಕಥೆಯೇ ಹೀಗಾದ್ರೆ ಇನ್ನು ಜನಸಮಾನ್ಯರು ಓಡಾಡೋ ಅಂಡರ್‍ ಪಾಸ್‍ಗಳ ಸ್ಥಿತಿ ಏನು ಎಂಬುದು ಜನರ ಪ್ರಶ್ನೆ.

  • ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ

    ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ

    ಬೆಂಗಳೂರು: ಅಂಡರ್ ಪಾಸ್ ಉದ್ಘಾಟನೆ ಆಗಿ ಕೇವಲ ಎರಡು ತಿಂಗಳಾಗಿದೆ. ಆದರೆ ರಸ್ತೆಯಲ್ಲಿ ಈಗ ನೀರು ಲಿಕೇಜ್ ಆಗುತ್ತಿದ್ದೆ. ಅದು ಜಲಮಂಡಳಿಯವರ ನಿರ್ಲಕ್ಷ್ಯ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

    ಮಾಗಡಿ ರೋಡ್ ಹೌಸಿಂಗ್ ಬೋರ್ಡ್ ಬಸ್ ಸ್ಟಾಪ್ ಅಂಡರ್‍ಪಾಸ್‍ನಲ್ಲಿ ರಸ್ತೆಯಿಂದ ನೀರು ಹೊರ ಚಿಮ್ಮುತಿದೆ. ವಾಟರ್ ಪೈಪ್ ಲೈನ್ ಡ್ಯಾಮೇಜ್ ಆಗಿ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ.

    ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಉದಾಹರಣೆ ಈ ಅಂಡರ್ ಪಾಸ್ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಉದ್ಘಾಟನೆ ಆಗಿರೋ ಈ ಅಂಡರ್ ಪಾಸ್ ಎಷ್ಟು ಕಳಪೆಯಾಗಿದೆ ಅಂದರೆ 15 ದಿನಗಳಿಂದ ಇಲ್ಲಿ ನೀರು ಹರಿಯಲು ಶುರುವಾಗಿದೆ. ನಾವು ಮೊದಲಿಗೆ ಮಳೆ ನೀರಿರಬಹುದು ಅಂದುಕೊಂಡಿದ್ದೆವು. ಆದರೆ ಇದು ಏನೋ ಡ್ಯಾಮೇಜಿನಿಂದಲೇ ನೀರು ಲೀಕ್ ಆಗುತ್ತಿದ್ದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ವಿಷಯ ನಿಮ್ಮ ಗಮನಕ್ಕೆ ಬಂತಾ ಎಂದು ಸ್ಥಳೀಯ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಅವರನ್ನು ಕೇಳಿದ್ರೆ, ಅವರು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳಿಗೆ ಈ ಕಾಮಗಾರಿ ಬಗ್ಗೆ ಮೊದಲೇ ಹೇಳಿದ್ದೆವು ಇಲ್ಲಿ ನೀರಿನ ಪೈಪ್ ಲೈನ್ ಇದೆ ಎಂದು. ಆದರೆ ಅವರು ಸಿಎ ಬರ್ತಾರೆ ಅಂತ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    15 ದಿನಗಳಿಂದ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ. ಎರಡು ತಿಂಗಳಲ್ಲೇ ಈ ಮಟ್ಟಿಗೆ ಹಾಳಾದರೆ ಮತ್ತೆ ಟೆಂಡರ್, ಅದೂ ಇದೂ ಅಂತ ಹಣ ತಿನ್ನುತ್ತಾರೆ. ಯಾವ ದುಡ್ಡು ಕೊಡದೇ ಸಮಸ್ಯೆ ಬಗೆಹರಿಸಬೇಕು ಅಂತ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.