Tag: ಅಂಡರ್ ಪಾಸ್

  • 18 ಗಂಟೆ ಬಳಿಕ ಗ್ಯಾಸ್ ಲೀಕ್ ಪ್ರಕರಣಕ್ಕೆ ಸುಖಾಂತ್ಯ – ಸ್ವಲ್ಪ ಕಿಡಿ ಹಾರಿದ್ದರೆ ಸಾವಿರಾರು ಜನರ ಜೀವಕ್ಕೆ ಬರುತಿತ್ತು ಕುತ್ತು

    18 ಗಂಟೆ ಬಳಿಕ ಗ್ಯಾಸ್ ಲೀಕ್ ಪ್ರಕರಣಕ್ಕೆ ಸುಖಾಂತ್ಯ – ಸ್ವಲ್ಪ ಕಿಡಿ ಹಾರಿದ್ದರೆ ಸಾವಿರಾರು ಜನರ ಜೀವಕ್ಕೆ ಬರುತಿತ್ತು ಕುತ್ತು

    ಧಾರವಾಡ: ಬುಧವಾರ ಸಂಜೆ ಧಾರವಾಡ (Dharwad) ಬೇಲೂರು ಕೈಗಾರಿಕಾ ಪ್ರದೇಶದ ಹೈಕೋರ್ಟ್ ಪೀಠದ ಬಳಿ ಗ್ಯಾಸ್ ಟ್ಯಾಂಕರ್ (Tanker) ಲೀಕೇಜ್ ಆಗಿತ್ತು. ಇದರಿಂದ ಇಡಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಗುರುವಾರ ಆ ಗ್ಯಾಸ್ ಟ್ಯಾಂಕರ್ ಲೀಕೇಜ್ ತಡೆದು, ಟ್ಯಾಂಕರ್ ಸ್ಥಳಾಂತರ ಮಾಡಲಾಗಿದ್ದು, ರಾತ್ರಿಯಿಡೀ ವಿದ್ಯುತ್ ಇಲ್ಲದೆ ಕಳೆದಿದ್ದ ಅಲ್ಲಿನ ಜನ ಈಗ ನಿಟ್ಟುಸಿರು ಬಿಡುವಂತೆ ಆಗಿದೆ.

    ಧಾರವಾಡದಲ್ಲಿ ನಿರಂತರ 18 ಗಂಟೆಗಳ ಕಾಲ ಜೀವ ಕೈಯಲ್ಲಿ ಹಿಡಿದು ಕ್ಷಣ ಕ್ಷಣ ಕಳೆದಿದ್ದ ನೂರಾರು ಹಳ್ಳಿಯ ಜನ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4ರ ಧಾರವಾಡದ ಬೇಲೂರು ಹೈಕೋರ್ಟ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿನ್ನೆ ಹೆಚ್‌ಪಿ ಕಂಪನಿಯ ಟ್ಯಾಂಕರ್ ಸಿಲುಕಿ ಬಿಟ್ಟಿತ್ತು. ಅಂಡರ್‌ಪಾಸ್‌ನ ಮೇಲ್ಭಾಗದ ರಸ್ತೆಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗೋದಕ್ಕೆ ಆರಂಭವಾಗಿತ್ತು.

    ಇದನ್ನು ಸಮರೋಪಾದಿಯಲ್ಲಿ ತಹಬದಿಗೆ ತರಲು ಸುಮಾರು 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಬೇಕಾಯ್ತು. ಸಣ್ಣದೊಂದು ಕಿಡಿ ಹಾರಿದ್ದರು ಕೂಡಾ ದೊಡ್ಡ ಅನಾಹುತ ಸಂಭವಿಸೋ ಸಾಧ್ಯತೆ ಇತ್ತು. ಹೀಗಾಗಿ ವಿದ್ಯುತ್ ಕಡಿತಗೊಳಿಸಿ, ಜನರಿಗೆ ಯಾವುದೇ ರೀತಿಯ ಬೆಂಕಿ ಹೊತ್ತಿಸದಂತೆ ಸೂಚಿಸಲಾಗಿತ್ತು. ಇದರಿಂದಾಗಿ ಅಮಾವಾಸ್ಯೆ ರಾತ್ರಿ ನಮಗೆ ಕರಾಳವಾಗಿ ಹೋಯ್ತಾ? ಅನ್ನೋ ಆತಂಕದಲ್ಲಿಯೇ ಜನ ರಾತ್ರಿ ಕಳೆದರು.

    ನಿನ್ನೆ ಸಂಜೆ 6:20ರ ಹೊತ್ತಿಗೆ ಈ ಟ್ಯಾಂಕರ್ ಅಂಡರ್‌ಪಾಸ್ ಅಡಿ ಸಿಲುಕಿತ್ತು. ಸಾಮಾನ್ಯವಾಗಿ ಯಾವುದೇ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬರೋದೇ ಇಲ್ಲ. ಆದರೆ ಚಾಲಕನ ಸಣ್ಣದೊಂದು ಮೈಮರೆವು ಈ ಅವಘಡಕ್ಕೆ ಕಾರಣವಾಗಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರೋ ಹೆಚ್‌ಪಿಸಿಎಲ್ ಘಟಕಕ್ಕೆ ಮುಂಬೈನಿಂದ ಬಂದಿರೋ ಈ ಟ್ಯಾಂಕರ್ ತಲುಪಬೇಕಿತ್ತು. ಆದರೆ ಚಾಲಕ ಮೈಮರೆತು ತೀರಾ ಮುಂದೆ ಬಂದು ಬಿಟ್ಟಿದ್ದ. ಹೀಗಾಗಿ ಹೈಕೋರ್ಟ್ ಮುಂದೆ ಎಡಕ್ಕೆ ಟರ್ನ್ ತೆಗೆದುಕೊಂಡು ಸರ್ವಿಸ್ ರಸ್ತೆಗೆ ಇಳಿದ ಚಾಲಕ ಬಳಿಕ ಈ ಅಂಡರ್‌ಪಾಸ್ ಮೂಲಕ ಆಚೆ ರಸ್ತೆ ಸೇರಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಉಡುಪಿ ಕಾಲೇಜಿನ ವೀಡಿಯೋ ಪ್ರಕರಣ- ಗುಜರಾತ್ FSLಗೆ ರವಾನೆ ಸಾಧ್ಯತೆ

    ಈ ವೇಳೆ ರಸ್ತೆಯ ಮೇಲ್ಭಾಗ ಟ್ಯಾಂಕರ್‌ಗೆ ತಾಗಿದೆ. ಆ ಕ್ಷಣವೇ ಟ್ಯಾಂಕರ್ ಮೇಲ್ಭಾಗದಲ್ಲಿನ ವಾಲ್ವ್‌ಗೆ ಹಾನಿ ಆಗಿದೆ. ವಾಲ್ವ್ ಬಳಿಯಿಂದಲೇ ಗ್ಯಾಸ್ ಸೋರಿಕೆ (Gas Leak) ಶುರುವಾಗಿ ಬಿಟ್ಟಿದೆ. ಆ ಕ್ಷಣವೇ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಬೇಲೂರು ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿ ಕೇವಲ 10 ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದಾರೆ.

    ಸುಮಾರು 18 ಟನ್ ಸಾಮರ್ಥ್ಯದ ಗ್ಯಾಸ್ ಇದ್ದ ಕಾರಣಕ್ಕೆ ಬೇಗ ಖಾಲಿ ಮಾಡುವುದೇ ಸವಾಲಾಗಿತ್ತು. ಹೀಗಾಗಿ ನಿಧಾನವಾಗಿ ಅದೆಲ್ಲ ಗ್ಯಾಸ್ ಖಾಲಿ ಆಗೋವರೆಗೂ ಕಾದ ಎಲ್ಲರೂ, ಬೆಳಗ್ಗೆ 11ರ ಹೊತ್ತಿಗೆ ಸ್ವಲ್ಪ ಗ್ಯಾಸ್ ಖಾಲಿಯಾದಾಗ ಟ್ಯಾಂಕರ್ ಮೇಲ್ಭಾಗಕ್ಕೆ ತೆರಳಿ ವಾಲ್ವ್ ಸರಿಪಡಿಸಿದ್ದಾರೆ. ಉಳಿದ ಗ್ಯಾಸ್ ಅನ್ನು ಮತ್ತೊಂದು ಖಾಲಿ ಟ್ಯಾಂಕರ್‌ಗೆ ತುಂಬಿಸಿ, ಅಲ್ಲಿಂದ ತೆರವು ಮಾಡಿದ್ದಾರೆ.

    ಇದೆಲ್ಲವೂ ಆಗೋ ಹೊತ್ತಿಗೆ ಸುಮಾರು 20 ಗಂಟೆಗಳು ಕಳೆದು ಹೋಗಿದ್ದವು. ಇಷ್ಟು ಸುದೀರ್ಘ ಅವಧಿ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಸದ್ಯ ರಸ್ತೆ ಸಂಚಾರವೂ ಸುಗಮವಾಗಿದೆ. ಸದ್ಯ ಚಾಲಕನ ಸಣ್ಣ ತಪ್ಪು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಹಾಗೂ ಸಾವಿರಾರು ಲಾರಿ ಚಾಲಕರು ಪರದಾಟ ನಡೆಸಿದ್ದಾರೆ. ಅಲ್ಲದೇ ಕೈಗಾರಿಕೆ ಬಂದ್ ಮಾಡುವ ಸ್ಥಿತಿಯೂ ಬಂದಿತ್ತು. ಸದ್ಯ ಎಲ್ಲ ಪ್ರಯತ್ನ ಸಫಲವಾಗಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನುವುದೇ ನೆಮ್ಮದಿಯ ವಿಷಯ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಡರ್‌ಪಾಸ್‌ನಲ್ಲಿ ಸಿಲುಕಿದ ಟ್ಯಾಂಕರ್‌ನಿಂದ ಗ್ಯಾಸ್ ಲೀಕ್

    ಅಂಡರ್‌ಪಾಸ್‌ನಲ್ಲಿ ಸಿಲುಕಿದ ಟ್ಯಾಂಕರ್‌ನಿಂದ ಗ್ಯಾಸ್ ಲೀಕ್

    – ಸುತ್ತ ಮುತ್ತ ಗ್ರಾಮದಲ್ಲಿ ವಿದ್ಯುತ್ ಕಡಿತ

    ಧಾರವಾಡ: ಗ್ಯಾಸ್ ತುಂಬಿದ ಟ್ಯಾಂಕರ್ (Gas Tanker) ಒಂದು ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಗೆ ತಾಗಿ ಗ್ಯಾಸ್ ಲೀಕ್ (Gas Leak) ಆಗಿರುವ ಘಟನೆ ಧಾರವಾಡದ (Dharwad) ಬೇಲೂರು ಗ್ರಾಮದ ಬಳಿಯ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ಸದ್ಯ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

    ಗ್ಯಾಸ್ ಲೀಕೇಜ್ ದೊಡ್ಡ ಮಟ್ಟದಲ್ಲಿ ಆಗಿದ್ದು, ಜನ ಸಂಚಾರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದು, ಯಾವುದೇ ಅನಾಹುತ ಆಗದಂತೆ ಕಣ್ಣಿಟ್ಟಿದ್ದಾರೆ. ಹೈಕೋರ್ಟ್ ಅಕ್ಕಪಕ್ಕದ ಬೇಲೂರು, ಕೋಟೂರು, ಮುಮ್ಮಿಗಟ್ಟಿ ಸೇರಿದಂತೆ ಇಡಿ ಕೈಗಾರಿಕಾ ಪ್ರದೇಶದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

    ಗ್ಯಾಸ್ ಲೀಕೇಜ್‌ನಿಂದಾಗಿ ಬುಧವಾರ ಸಂಜೆಯಿಂದಲೇ ರಸ್ತೆಯನ್ನು ಬಂದ್ ಮಾಡಲಾಗಿದೆ. ಲೀಕೇಜ್ ತಡೆಯಲು ಸಾಧ್ಯವಾಗದ ಹಿನ್ನೆಲೆ ಟ್ಯಾಂಕರ್‌ನಲ್ಲಿರುವ ಇಡೀ ಗ್ಯಾಸ್ ಅನ್ನು ಹೊರ ಹಾಕಿ ಅದನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ. ಕಳೆದ 12 ಗಂಟೆಯಿಂದ ಗ್ಯಾಸ್ ನಿರಂತರವಾಗಿ ಸೋರಿಕೆಯಾಗುತ್ತಿದೆ. ರಾತ್ರಿಯಿಡೀ ಕಳೆದರೂ ಟ್ಯಾಂಕರ್ ಇನ್ನೂ ಖಾಲಿಯಾಗಿಲ್ಲ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕಂಪನಿಗೆ ಭಾರೀ ವಿರೋಧ!

    ಟ್ಯಾಂಕರ್ ಇನ್ನು ಕೂಡಾ ಅಲ್ಲೇ ಸಿಲುಕಿರುವ ಹಿನ್ನೆಲೆ ಧಾರವಾಡ-ಬೆಳಗಾವಿ ಸಂಪರ್ಕ ಕಡಿತವಾಗಿದೆ. ಟ್ಯಾಂಕರ್ ಸಂಪೂರ್ಣ ಖಾಲಿಯಾದ ಬಳಿಕವೇ ರೋಡ್ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸದ್ಯ ಜನರು ಸುತ್ತ ಮುತ್ತ ಓಡಾಡದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಕುಡಿಯೋ ನೀರಿಗೂ ಹಾಹಾಕಾರ- ಕಿ.ಮೀಟರ್‌ಗಟ್ಟಲೇ ಹೋಗಿ ನೀರು ತರೋ ಪರಿಸ್ಥಿತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾರಾಣಿ ಕಾಲೇಜ್ ಬಳಿ ಅಂಡರ್ ಪಾಸ್‍ನಲ್ಲಿ ಸಿಲುಕಿದ ಲಾರಿ

    ಮಹಾರಾಣಿ ಕಾಲೇಜ್ ಬಳಿ ಅಂಡರ್ ಪಾಸ್‍ನಲ್ಲಿ ಸಿಲುಕಿದ ಲಾರಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಅಂಡರ್ ಪಾಸ್‍ನಲ್ಲಿ ಲಾರಿ (Lorry Stuck In Underpassa) ಯೊಂದು ಸಿಲುಕಿಕೊಂಡಿರುವ ಘಟನೆ ನಡೆದಿದೆ.

    ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್‍ (Maharani College Underpass) ನಲ್ಲಿ ಲಾರಿ ಸಿಕ್ಕಿಹಾಕಿಕೊಂಡಿದ್ದು, ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್ (Chalukya Circle) ಸಂಪರ್ಕಿಸೋ ರಸ್ತೆ ಅಂಡರ್ ಪಾಸ್ ಬಳಿ ಬಂದ್ ಆಗಿದೆ.

    ಲಾರಿಯು ಮೈಸೂರು ಬ್ಯಾಂಕ್ (Mysuru Bank) ಕಡೆಯಿಂದ ಬಂದು ಮುಂದೆ ಚಲಿಸಲಾಗದೆ ಅಂಡರ್‍ಪಾಸ್‍ನಲ್ಲಿ ಸಿಲುಕಿದೆ. ಈ ಲಾರಿ (Lorry) ಯನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ತೆಗೆಯಲು ಜೆಸಿಬಿ ತರಿಸಿದ್ದಾರೆ.

    ಅಂಡರ್ ಪಾಸ್‍ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಚಾಲಕ ಅಂಡರ್‍ಪಾಸ್‍ನಲ್ಲಿ ನುಗ್ಗಿಸಲು ಪ್ರಯತ್ನಿಸಿದ್ದರಿಂದ ಸಿಲುಕಿಕೊಂಡಿದೆ. ಲಾರಿ ಸಿಲುಕಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಚಾಲುಕ್ಯ ಸರ್ಕಲ್ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ.

     

  • ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

    ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

    – ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್

    ಮೊದಲು ಈ ಫೋಟೋದಲ್ಲಿ ಕಾಣುತ್ತಿರುವ ಸೀರೆಯ ಕಥೆ ಹೇಳಿಬಿಡ್ತೀನಿ. ನಿನ್ನೆ (ಮೇ 21) ಕೆ.ಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ (KR Circle Underpass) ನೀರು ತುಂಬಿ ಕಾರಿನಲ್ಲಿ ಮುಳುಗಿದ್ದ ಕುಟುಂಬದವರು ಸಹಾಯಕ್ಕಾಗಿ ಅರಚಾಡುತ್ತಿದ್ರು. ಲೋಕಾಯುಕ್ತ ಕಚೇರಿಯ ಬಳಿ ಇದ್ದ ರಿಪೋರ್ಟರ್ ನಾಗೇಶ್ ಅರಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸುತ್ತಾರೆ. ಅವರ ಜೊತೆಗಿದ್ದ ʻಪಬ್ಲಿಕ್ ಟಿವಿʼ (Public Tv) ಕ್ಯಾಬ್ ಚಾಲಕ ವಿಜಯ್ (Public Hero Vijay) ಈಜು ಬರುತ್ತಿದ್ರಿಂದ ಹಿಂದೆ-ಮುಂದೆ ಯೋಚಿಸದೇ ನೀರಿನೊಳಗೆ ದುಮುಕಿ ಅಲ್ಲಿದ್ದವರ ರಕ್ಷಣೆಗೆ ಮುಂದಾಗುತ್ತಾರೆ.

    ನಾಗೇಶ್ (Public Hero Nagesh) ರಸ್ತೆಯಲ್ಲಿ ಹೋಗೋ ಬರೋರನ್ನೇಲ್ಲಾ ನಿಲ್ಲಿಸಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ತಾ ಇರ್ತಾರೆ. ಅಷ್ಟರಲ್ಲಿ ನಾಗೇಶ್ ಕಣ್ಣಮುಂದೆ ದೇವತೆ ಕಾಣಿಸಿದ್ದಾರೆ. ಅಂಡರ್ ಪಾಸ್‌ನ ಹೊರಗೆ ನಿಂತಿದ್ದ ಮಹಿಳೆ ಈ ಅರಚಾಟ, ಒದ್ದಾಟ ನೋಡಿ ಕ್ಷಣಕಾಲ ಯೋಚಿಸದೇ ತಾನು ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ರಂತೆ. ಇದನ್ನು ಇಲ್ಲೇ ಕಂಬಕ್ಕೆ ಕಟ್ಟಿ ಕೆಳಗೆ ಇದ್ದವರಿಗೆ ಕೊಡಿ.. ಸೀರೆ ಹಿಡ್ಕೊಂಡು ಮೇಲೆ ಬರಲಿ ಅಂದುಬಿಟ್ರಂತೆ. ನಾಗೇಶ್‌ಗೆ ಮಾತೇ ಬಾರದ ಸ್ಥಿತಿ. ಇನ್ನು ಸೀರೆ ಬಿಚ್ಚಿಕೊಟ್ಟ ಮಹಿಳೆಯನ್ನು ನೋಡಿ ಅಲ್ಲೆ ಇದ್ದ ಇನ್ನುಳಿದ ಮಹಿಳೆಯರು ದುಪ್ಪಟ್ಟಾವನ್ನು ಕೊಟ್ಟಿದ್ದಾರೆ. ಅಷ್ಟರಲ್ಲಿ ಕ್ವಿಕ್ ರೆಸ್ಕ್ಯೂ ಟೀಮ್ ವಾಹನ ರಸ್ತೆಯಲ್ಲಿ ಪಾಸ್ ಆಗ್ತಿರೋದನ್ನು ನೋಡಿದ ನಾಗೇಶ್ ತಕ್ಷಣ ಅವರಿಗೆ ಮನವಿ ಮಾಡಿಕೊಂಡು ಸ್ಥಳಕ್ಕೆ ಕರೆಸಿದ್ದಾರೆ.

    ಆ ಸೀರೆ ಬಿಚ್ಚಿ ಕೊಟ್ಟ ಮಹಿಳೆಗೆ ಪಕ್ಕದಲ್ಲಿಯೇ ನಿಂತ ವ್ಯಕ್ತಿಯೋರ್ವ ಶರ್ಟು ಬಿಚ್ಚಿ ಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿ ಕಳಿಸಿದ್ದಾರೆ. ಆ ಮಹಾ ತಾಯಿ ಯಾರೂ ಅನ್ನೋದೇ ಗೊತ್ತಾಗಲಿಲ್ಲ. ಆದ್ರೇ ಆಕೆಯ ಸೀರೆ ಅಲ್ಲಿದ್ದ ಜೀವಗಳನ್ನು ಕಾಪಾಡಿದೆ. ಇನ್ನು ವಿಜಯ್ ಕಾರಿನೊಳಗೆ ಇದ್ದ ನಾಲ್ವರನ್ನು ಹೇಗೋ ಎತ್ತಿ ಕಾರಿನ ಮೇಲೆ ಕೂರಿಸಿ ಜೀವವನ್ನು ಉಳಿಸಿದ್ದಾರೆ.

    ಇನ್ನೋರ್ವ ಯುವತಿಯನ್ನು ಎಳೆಯುವಾಗ ಆಕೆ ಸೀಟಿನ ಮಧ್ಯ ಭಾಗಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ತುಂಬಾ ಹೊತ್ತು ಒದ್ದಾಡಿದ ವಿಜಯ್ ಕಷ್ಟ ಪಟ್ಟು ಆಕೆಯನ್ನು ಮೇಲೆತ್ತಿ ರೆಸ್ಕ್ಯೂ ಟೀಮ್ ಗೆ ಒಪ್ಪಿಸಿದ್ದಾರೆ. ಆದ್ರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗಿದೆ. ಅಲ್ಲೂ ಕೂಡ ನಮ್ಮ ವರದಿಗಾರ ಲೋಕೇಶ್ ಸೇರಿದಂತೆ ಬೇರೆ ಚಾನೆಲ್‌ನವರು ಗಲಾಟೆ ಮಾಡಿದ ಮೇಲೆ ಟ್ರೀಟ್‌ಮೆಂಟ್‌ ಶುರುಮಾಡಿದ್ದಾರೆ. ಅಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ವಿಜಯ್, ನಾಗೇಶ್ ಕಣ್ಣಲ್ಲಿ ನಾಲ್ವರನ್ನು ಉಳಿಸಿದ ಸಂಭ್ರಮಕ್ಕಿಂತ ಆ ಯುವತಿಯ ಪ್ರಾಣ ಉಳಿಸಿಕೊಳ್ಳೋಕೆ ಆಗಿಲ್ಲವಲ್ಲ ಅಂತಾ ಅದ ನೋವೆ ಹೆಚ್ಚಿತ್ತು. ಜೀವ ಪಣಕ್ಕಿಟ್ಟು ಬೇರೆಯವರ ಬದುಕು ಉಳಿಸಲು ವಿಜಯ್ ಸಾಹಸ, ಸಾರ್ವಜನಿಕ ಸ್ಥಳದಲ್ಲಿ ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟ ಮಹಾತಾಯಿ ಇವರನ್ನೆಲ್ಲ ನೋಡುವಾಗ ನಮ್ಮ ನಡುವೆ ಅದೆಂಥ ಅದ್ಭುತ ಗುಣವಿರುವ ಮನುಷ್ಯರು ಇರುತ್ತಾರಲ್ಲ ಅಂತಾ ಅನಿಸುತ್ತಿದೆ.

  • ಮಳೆಗಾಲ ಮುಗಿಯೋವರೆಗೆ ಬೆಂಗ್ಳೂರಿನಲ್ಲಿ ಅಂಡರ್‌ಪಾಸ್ ಬಂದ್..?

    ಮಳೆಗಾಲ ಮುಗಿಯೋವರೆಗೆ ಬೆಂಗ್ಳೂರಿನಲ್ಲಿ ಅಂಡರ್‌ಪಾಸ್ ಬಂದ್..?

    – ಹುಟ್ಟೂರಿನಲ್ಲಿ ಮೇ 23ರಂದು ಟೆಕ್ಕಿ ಬಾನುರೇಖಾ ಅಂತ್ಯಕ್ರಿಯೆ
    – ರಾಜ್ಯದ ಹಲವೆಡೆ ಮತ್ತೆ ಮಳೆ.. ಇರಲಿ ಎಚ್ಚರಿಕೆ

    ಬೆಂಗಳೂರು: ನಗರದ ಕೆ.ಆರ್ ಸರ್ಕಲ್ ಅಂಡರ್‌ಪಾಸ್ ದುರಂತಕ್ಕೆ (Flooded UnderPass) ನಿರ್ಲಕ್ಷ್ಯವೇ ಕಾರಣ ಎಂದು ಹೈಕೋರ್ಟ್ (HighCourt) ಅಭಿಪ್ರಾಯಪಟ್ಟಿದ್ದು, ಬೆಂಗಳೂರಿನ (Bengaluru) ಅಂಡರ್‌ಪಾಸ್‌ಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

    ಮಳೆ ಅನಾಹುತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ (BBMP) ಮಳೆಗಾಲ ಮುಗಿಯುವವರೆಗೆ ಸಮಸ್ಯೆಗಳು ಇರುವ ಎಲ್ಲಾ ಅಂಡರ್‌ಪಾಸ್ ಬಂದ್ ಮಾಡುವ ನಿರ್ಣಯಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ನಗರದ ಯಾವ್ಯಾವ ಅಂಡರ್‌ಪಾಸ್ ಸುರಕ್ಷತೆಯಿಂದ ಕೂಡಿಲ್ಲ. ಅವುಗಳ ಬಗ್ಗೆ ವರದಿ ನೀಡುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ನಗರದಲ್ಲಿ 20ಕ್ಕೂ ಹೆಚ್ಚು ಅಂಡರ್‌ಪಾಸ್‌ಗಳು ನಿರ್ವಹಣೆ ಕೊರತೆಯಿಂದ ಡೇಂಜರ್ ಜೋನ್‌ನಲ್ಲಿವೆ. ಸಣ್ಣ ಮಳೆ ಬಂದರೂ ಅಂಡರ್‌ಪಾಸ್‌ಗಳು ಕೆರೆಯಂತಾಗುತ್ತಿವೆ. ಸದ್ಯ ವಿಂಡ್ಸರ್ ಮ್ಯಾನರ್ ಬಳಿಯ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ನಗರದ ಎಲ್ಲಾ ಅಂಡರ್‌ಪಾಸ್‌ಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಮಧ್ಯೆ, ಹಿರಿಯ ಐಎಎಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಮೊದಲ ಸಭೆ ನಡೆಸಿದ್ದು, ಮುಂಗಾರುಪೂರ್ವ ಮಳೆ ಅವಾಂತರಗಳ ಬಗ್ಗೆ ಮಾಹಿತಿ ಪಡೆದು, ಹಲವು ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರೆ.

    ಬಿಬಿಎಂಪಿ ಹೇಳಿದ್ದೇನು?
    ಕೆಆರ್ ವೃತ್ತದ ಅಂಡರ್‌ಪಾಸ್‌ನಲ್ಲಿ ಸಾಮಾನ್ಯವಾಗಿ ನೀರು ನಿಲ್ಲಲ್ಲ. ಎಲೆಗಳ ಕಾರಣದಿಂದ ನಿನ್ನೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ರಸ್ತೆಯಲ್ಲಿ ಬಿದ್ದಿದ್ದ ಎಲೆಗಳು ಕೊಚ್ಚಿಹೋಗಿ ನೀರಿನ ಕೊಳವೆಗೆ ಸಿಲುಕಿವೆ. ಇದರಿಂದ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದ ಹಾಗೆ ನೋಡಿಕೊಳ್ತೀವಿ ಎಂದು ಬಿಬಿಎಂಪಿ ಹೇಳಿದೆ.

  • ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಬೆಂಗಳೂರು: ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ (Under Pass) ಸಿಲುಕಿದ್ದ ಐವರನ್ನು ರಕ್ಷಿಸಿದ್ದ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ಅವರನ್ನು ಬಿಬಿಎಂಪಿ (BBMP) ಕಮಿಷನರ್ ತುಷಾರ್ ಗಿರಿನಾಥ್ ಸನ್ಮಾನಿಸಿ ಪ್ರಶಂಸಿಸಿದ್ದಾರೆ.

    ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಕುಟುಂಬವೊಂದು ಕಾರಿನಲ್ಲಿ ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

    ಪಬ್ಲಿಕ್ ಟಿವಿ ಚಾಲಕನ ಸಾಹಸಕ್ಕೆ ಅಭಿನಂದನೆ ಸಲ್ಲಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಿಜಯ್ ಕುಮಾರ್ ಅವರು ಸಹಾಸದ ಕೆಲಸ ತೋರಿಸಿದ್ದಾರೆ. ಬಹಳ ಶ್ರಮಪಟ್ಟು ಜೀವ ಉಳಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರ ಕೆಲಸ ಶ್ಲಾಘನೀಯ. ಸಾರ್ವಜನಿಕರು ಸಹ ಇತಂಹ ಸಮಯದಲ್ಲಿ ಜನರ ನೆರವಿಗೆ ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಘಟನೆಯೇನು?
    ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

  • ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಬೆಂಗಳೂರು: ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ  (Under Pass) ಕುಟುಂಬವೊಂದು ಕಾರಿನಲ್ಲಿ (Car) ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

    ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ.

    ಇದೀಗ ವಿಜಯ್ ಕುಮಾರ್ ಹಾಗೂ ಪಬ್ಲಿಕ್ ಟಿವಿಯ ಕಾರ್ಯಕ್ಷಮತೆಗೆ ಮೆಚ್ಚಿ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಬೆಂಗಳೂರು ಸಂಚಾರಿ ಜಂಟಿ ಆಯುಕ್ತ ಅನುಚೇತನ್ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

  • ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

    ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

    ಬೆಂಗಳೂರು: ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ವರುಣನ (Rain) ಆರ್ಭಟಕ್ಕೆ ಯುವತಿ (Young Woman) ಬಲಿಯಾಗಿದ್ದರು. ನಗರದ ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ (Underpass) ನಿಂತಿದ್ದ ಮಳೆ ನೀರಿನಲ್ಲಿ ಕಾರು (Car) ಮುಳುಗಿ ಟೆಕ್ಕಿ ಭಾನುರೇಖಾ ಸಾವನ್ನಪ್ಪಿದ್ದರು. ಇದೀಗ ದುರ್ಘಟನೆ ಬಳಿಕ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ.

    ಭಾರೀ ಮಳೆಗೆ ಅಂಡರ್ ಪಾಸ್‌ನಲ್ಲಿ ಒಂದು ಸಾವಾದ ಬಳಿಕ ಬಿಬಿಎಂಪಿ ಇದೀಗ ನಗರದ ಅಂಡರ್ ಪಾಸ್‌ಗನ್ನು ಮುಚ್ಚಿಸುತ್ತಿದೆ. ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿಯ ಅಂಡರ್ ಪಾಸ್‌ನಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಲ್ಲಿ ಒಳ ಭಾಗದಲ್ಲಿ ಭಾರೀ ಮಳೆಯ ಹಿನ್ನೆಲೆ ನೀರು ನಿಂತಿದೆ. ಸದ್ಯ ನೀರು ಹೆಚ್ಚಿರುವ ಕಾರಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೋಮವಾರ ಅಂಡರ್ ಪಾಸ್‌ಗಳ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕಾವೇರಿ ಜಂಕ್ಷನ್ ಕ್ಲೋಸ್ ಮಾಡಿ ಬಿಬಿಎಂಪಿ ಸಿಬ್ಬಂದಿ ಕಸ ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛತಾಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ, ಮಳೆ – ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ವ್ಯಕ್ತಿ ಸಾವು

    ಘಟನೆಯೇನು?
    ಇನ್ಫೋಸಿಸ್‌ ಉದ್ಯೋಗಿಯಾಗಿದ್ದ ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿ ನಗರದಲ್ಲಿ ವಾಸವಾಗಿದ್ದರು. ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದವರಾದ ಇವರು, ಹೊಸದಾಗಿ ಪ್ರಗತಿ ನಗರದಲ್ಲಿ ಮನೆ ಖರೀದಿ ಮಾಡಿದ್ದರು. ಮನೆ ನೋಡಲು ಆಂಧ್ರ ಪ್ರದೇಶದಿಂದ ಭಾನುರೇಖಾ ಸಂಬಂಧಿಗಳು ಆಗಮಿಸಿದ್ದರು.

    ಈ ವೇಳೆ ಕ್ಯಾಬ್ ಬುಕ್ ಮಾಡಿ ಬೆಂಗಳೂರು ಸುತ್ತಾಟಕ್ಕೆ ಕುಟುಂಬ ಬಂದಿತ್ತು. ಇಸ್ಕಾನ್‌ಗೆ ಹೋಗಿ ವಾಪಸ್ ಕಬ್ಬನ್ ಪಾರ್ಕ್‌ಗೆ ಹೋಗುವ ವೇಳೆ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಭಾನುರೇಖಾ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

  • ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್

    ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್

    ಬೆಂಗಳೂರು: ಕಂಟೇನರ್ ಸಿಲುಕಿ ಹಾಕಿಕೊಂಡಿರುವುದರಿಂದ ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಮಾಡಲಾಗಿದೆ.

    ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‍ನಲ್ಲಿರುವ ಅಂಡರ್ ಪಾಸ್‍ನಲ್ಲಿ ಕಂಟೇನರ್ ಪಾಸ್ ಆಗಬಹುದು ಎಂದುಕೊಂಡು ಚಾಲಕ ಕಂಟೇನರ್‌ನ್ನು ಚಲಾಯಿಸಿದ್ದ. ಆದರೆ ಕಂಟೇನರ್ ಮಂಭಾಗವು ಅಂಡರ್ ಪಾಸ್‍ನ ಮೇಲ್ಭಾಗಕ್ಕೆ ತಡೆದು ಗಾಡಿ ನಿಂತಿದೆ. ವಾಪಸ್ ಹೋಗಲು ಪ್ರಯತ್ನಿಸಿದಾಗ ಹಿಂದಕ್ಕೆ ಚಲಾಯಿಸಲಾಗದೆ ಅಂಡರ್ ಪಾಸ್‍ನಲ್ಲೇ ಸಿಲುಕಿಕೊಂಡಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಇದರ ಪರಿಣಾಮವಾಗಿ ಅಂಡರ್ ಪಾಸ್‍ನ ರಸ್ತೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರೆ. ವಾಹನ ಸಂಚಾರ ಕಡಿಮೆ ಇರುವುದರಿಂದ ಓನ್ ವೇ ಮೂಲಕ ಸವಾರರು ಚಲಿಸುತ್ತಿದ್ದಾರೆ. ಇದನ್ನೂ ಓದಿ: ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ

  • ಬೆಂಗ್ಳೂರಲ್ಲಿ ರಾತ್ರಿ ಭಾರೀ ಮಳೆ – ಹೊಳೆಯಂತಾದ ರಸ್ತೆ, ಅಂಡರ್‌ಪಾಸ್‌ನಲ್ಲಿ ಪ್ರವಾಹ

    ಬೆಂಗ್ಳೂರಲ್ಲಿ ರಾತ್ರಿ ಭಾರೀ ಮಳೆ – ಹೊಳೆಯಂತಾದ ರಸ್ತೆ, ಅಂಡರ್‌ಪಾಸ್‌ನಲ್ಲಿ ಪ್ರವಾಹ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಆಗಿ ಬಂದ ಮಳೆ ನಗರದ ಹಲವು ಕಡೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ವಸಂತ ನಗರ ಸೇರಿ ಹಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇತ್ತ ತಗ್ಗು ಪ್ರದೇಶದಲ್ಲಿದ್ದ ಅಂಡರ್‌ಪಾಸ್‌ಗಳು ಜಲಾವೃತವಾಗಿದೆ.

    ಮಲ್ಲೇಶ್ವರಂ, ರಾಜಾಜಿನಗರ, ಉತ್ತರಹಳ್ಳಿ, ಕತ್ರಿಗುಪ್ಪೆ, ಇಟ್ಟುಮಡು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ವಾಹಸ ಸವಾರರು ಪರದಾಡುವಂತಾಗಿದೆ. ಬಿಬಿಎಂಪಿ ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಓಕಳಿಪುರಂ ಅಂಡರ್ ಪಾಸ್ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಡರ್ ಪಾಸ್ ಕೆರೆಯಂತಿದ್ದ ನೀರಿನಲ್ಲಿ ಹೋಗುವ ಬಹುತೇಕ ಆಟೋಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ನೀರು ತುಂಬಿಕೊಂಡು ಪರದಾಡುವಂತ ದೃಶ್ಯ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪಾಲಿಕೆಯ ಅವೈಜ್ಞಾನಿಕ ಕೆಲಸಕ್ಕೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಅಂಡರ್ ಪಾಸ್‍ನಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಂಡರೆ ಕೆಳಗಿನ ನಂಬರಿಗೆ ಕರೆ ಮಾಡಿ ತಿಳಿಸಿ ಎಂದು ಅಂಡರ್ ಪಾಸ್ ಗೋಡೆ ಮೇಲೆ ಬರೆದಿಟ್ಟು ಬಿಬಿಎಂಪಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಪಾಲಿಕೆ ಹಾಕಿರುವ ನಂಬರಿಗೆ ಸಾರ್ವಜನಿಕರು ಕರೆ ಮಾಡಿದರೆ ಸಂಬಂಧಪಟ್ಟವರು ಯಾರು ಕೂಡ ಸಮಪರ್ಕವಾಗಿ ಸ್ಪಂದಿಸುವುದಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.