Tag: ಅಂಡಮಾನ್

  • ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ಪೋರ್ಟ್ ಬ್ಲೇರ್: ಅಂಡಮಾನ್ (Andaman) ಮತ್ತು ನಿಕೋಬಾರ್‌ನಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡ 360 ಶತಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಮಾಹಿತಿ ಕಲೆ ಹಾಕಲು ಅಂಡಮಾನ್‌ ಪೊಲೀಸರು ಎಲೋನ್ ಮಸ್ಕ್‌ನ (Elon Musk) ಸ್ಟಾರ್‌ಲಿಂಕ್‌ (Starlink) ಮೊರೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತೀಯ ಸಮುದ್ರ ಗಡಿಗೆ ಮಾದಕವಸ್ತು ತರಲು ಆರೋಪಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸಾಧನವನ್ನು ಬಳಸಿದ್ದಾರೆ. ಅವರ ಮಾಹಿತಿ ಕಲೆಹಾಕಲು ಪೊಲೀಸರು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲಿದ್ದಾರೆ ಎಂದು ಅಂಡಮಾನ್ ದ್ವೀಪದ ಉನ್ನತ ಪೊಲೀಸ್ ಅಧಿಕಾರಿ ಹರಗೋಬಿಂದರ್ ಎಸ್. ಧಲಿವಾಲ್ ತಿಳಿಸಿದ್ದಾರೆ.

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಮ್ಯಾನ್ಮಾರ್ ಬೋಟ್‌ನಲ್ಲಿ ಸಾಗಿಸುತ್ತಿದ್ದ 6,000 ಕೆಜಿ ಗಿಂತ ಹೆಚ್ಚಿನ ಮಾದಕ ವಸ್ತು ಮೆತ್‌ನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಆರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದರು.

    ಈ ಪ್ರಕರಣದಲ್ಲಿ ಮೊದಲ ಬಾರಿಗೆ ಸ್ಟಾರ್‌ಲಿಂಕ್‌ನ ಸಾಧನವನ್ನು ಭಾರತೀಯ ಜಲಭಾಗವನ್ನು ತಲುಪಲು ಆರೋಪಿಗಳು ಬಳಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಒದಗಿಸುತ್ತದೆ. ಅಲ್ಲದೇ ಅಂತರರಾಷ್ಟ್ರೀಯ ಸಂಪರ್ಕವನ್ನು ಇದು ಒದಗಿಸುತ್ತದೆ. ಈ ಸಾಧನವನ್ನು ಯಾರು ಮತ್ತು ಯಾವಾಗ ಖರೀದಿಸಿದ್ದಾರೆ ಎಂದು ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ.

  • ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

    ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

    ಪೋರ್ಟ್ ಬ್ಲೇರ್: ಅಂಡಮಾನ್‌ನಲ್ಲಿ (Andaman) ಮೀನುಗಾರಿಕಾ ದೋಣಿಯಿಂದ ಸುಮಾರು 5 ಟನ್‌ ಮಾದಕ ವಸ್ತುವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇದುವರೆಗೆ ಕೋಸ್ಟ್ ಗಾರ್ಡ್‌ (Indian Coast Guard) ವಶಪಡಿಸಿಕೊಂಡ ಮಾದಕ ವಸ್ತುವಿನಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ಕರಾವಳಿಯಲ್ಲಿ ಅಧಿಕಾರಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಈ ವೇಳೆ 8 ಇರಾನ್ ಪ್ರಜೆಗಳನ್ನು ಬಂಧಿಸಿದ್ದರು.

    ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಗೆ ಭಾರತ ‘ಸಾಗರ್ ಮಂಥನ್ – 4’ ಎಂಬ ಗುಪ್ತಚರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ ನೌಕಾಪಡೆಯು ಭಾರತದ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಮತ್ತು ದೋಣಿಗಳ ಮೇಲೆ ನಿಗಾ ಇಡುತ್ತದೆ.

  • ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲಿ 5.9 ತೀವ್ರತೆ ಭೂಕಂಪನ

    ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲಿ 5.9 ತೀವ್ರತೆ ಭೂಕಂಪನ

    ಪೋರ್ಟ್‌ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ (Andaman And Nicobar) ದ್ವೀಪಗಳ ಪೋರ್ಟ್‌ ಬ್ಲೇರ್‌ ಬಳಿ 5.9 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ (National Center For Seismology) ತಿಳಿಸಿದೆ.

    ರಾಜಧಾನಿ ಪೋರ್ಟ್ ಬ್ಲೇರ್‌ನ (Port Blair) ಆಗ್ನೇಯಕ್ಕೆ 126 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ಭೂಕಂಪನದ ತೀವ್ರತೆ ಕಂಡುಬಂದಿದೆ. ಇದನ್ನೂ ಓದಿ: ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ಭೂಕಂಪನವು ಮಧ್ಯರಾತ್ರಿ 12:53ಕ್ಕೆ ಐಎಸ್‌ಟಿ ಮೇಲ್ಮೈಯಿಂದ 69 ಕಿಮೀ ಆಳದಲ್ಲಿ, 10.75 ಅಕ್ಷಾಂಶ ಮತ್ತು 93.47 ರೇಖಾಂಶದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ ರಯಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಡಮಾನ್ ಸಮುದ್ರದಲ್ಲಿ 4.9 ತೀವ್ರತೆಯ ಭೂಕಂಪ

    ಅಂಡಮಾನ್ ಸಮುದ್ರದಲ್ಲಿ 4.9 ತೀವ್ರತೆಯ ಭೂಕಂಪ

    ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿರುವ (Andaman and Nicobar Islands) ಅಂಡಮಾನ್ ಸಮುದ್ರದಲ್ಲಿ (Andaman Sea) ಮಂಗಳವಾರ 4.9 ತೀವ್ರತೆಯ ಭೂಕಂಪ (Earthquake) ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

    ಭೂಕಂಪ ಮುಂಜಾನೆ 3:40 ರ ವೇಳೆಗೆ ಸಂಭವಿಸಿದೆ. ಇದರ ಕೇಂದ್ರ ಬಿಂದುವನ್ನು 77 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಫೆ.6 ರಂದು ಮತ್ತೆ ರಾಜ್ಯಕ್ಕೆ ಮೋದಿ – ಎಲ್ಲಿ ಏನು ಕಾರ್ಯಕ್ರಮ?

    ಜನವರಿ 24 ರಂದು ನೆರೆಯ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದು, ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಕಂಪನದ ಅನುಭವವಾಗಿತ್ತು. ಎನ್‌ಸಿಎಸ್ ಪ್ರಕಾರ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂಡಮಾನ್ – ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಐಎಂಡಿ

    ಅಂಡಮಾನ್ – ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಐಎಂಡಿ

    ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ನೌಕಾಯಾನ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

    ಮಾರ್ಚ್ 21ರಂದು ಚಂಡಮಾರುತ ದ್ವೀಪಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುರ್ತು ಹಾಗೂ ರಕ್ಷಣಾ ಕಾರ್ಯಗಳ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

    ರಕ್ಷಣಾ ಕಾರ್ಯಕ್ಕಾಗಿ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಒಂದು ತುಕಡಿ ಈಗಾಗಲೇ ಪೋರ್ಟ್ಬ್ಲೇರ್‌ನಲ್ಲಿ ಠಿಕಾಣಿ ಹೂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ

    ವರ್ಷದ ಮೊದಲ ಚಂಡಮಾರುತ `ಅಸಾನಿ’ ಮಾರ್ಚ್ 21 ರಂದು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಆರಂಭವಾಗುವ ಸಾಧ್ಯತೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತವು ಭಾರತದ ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲದಿದ್ದರೂ, ಭಾರೀ ಮಳೆ ಮತ್ತು ಬಲವಾದ ಗಾಳಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಅಂಡಮಾನ್‌ಗೆ ಅಪ್ಪಳಿಸಿ ನಂತರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸಲಿದೆ ಎಂದು ಮುನ್ಸೂಚನೆ ನಿಡಿದೆ. ಇದನ್ನೂ ಓದಿ: ಮಿಂಚುಳ್ಳಿ ಲೋಕದಲ್ಲೊಂದು ಪಯಣ

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾರ್ಚ್ 16ರಿಂದ 20ರ ವರೆಗೆ ಮಳೆಯ ಆರ್ಭಟ ಉಂಟಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿತ್ತು. ಅಂತೆಯೇ ಮಾರ್ಚ್ 19ರಂದು ಧಾರಾಕಾರ ಮಳೆಯಾಗಿ ಸಾಕಷ್ಟು ಹಾನಿಯುಂಟುಮಾಡಿದೆ. ಮಾರ್ಚ್ 20ರಂದು ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹೇಳಿದೆ.

  • ಓ ಹೆಣ್ಣೇ ನೀನೆಷ್ಟು ಕ್ರೂರಿ!

    ಓ ಹೆಣ್ಣೇ ನೀನೆಷ್ಟು ಕ್ರೂರಿ!

    ಮುರುಳೀಧರ್ ಎಚ್.ಸಿ
    ವಳ ಹೊಟ್ಟೆಯಲ್ಲಿ ಕಂದಮ್ಮ ಕುಡಿಯೊಡೆಯುವಾಗ ಒಹೋ ಅದೆಂಥ ಸಂಭ್ರಮ. ಬದುಕು ಸಾರ್ಥಕವಾಯ್ತು ಅಂತಾ ತನ್ನ ತುಂಬು ಹೊಟ್ಟೆಯನ್ನು ಅದೆಷ್ಟು ಬಾರಿ ಸವರಿ ಖುಷಿಪಟ್ಟಿತ್ತೋ ಆ ತಾಯಿ ಜೀವ. ಇನ್ನೇನು ಯಾತನೆಯ ನೋವಿನ ಮಧ್ಯೆ ಅವಳ ಮಡಿಲಲ್ಲಿ ಕಂದಮ್ಮ ಕಿಲಕಿಲನೆ ನಗುತ್ತಿದ್ಲು. ನೋಡನೋಡುತ್ತಿದ್ದಂತೆ ಅಂಬೆಗಾಲಿಡುತ್ತ ಅಮ್ಮನ ಅಪ್ಪಿಕೊಳ್ಳುವ ಪುಟ್ಟ ಪುಟ್ಟ ಕೈಗೆ ಆ ಅಮ್ಮ ಅದೆಷ್ಟು ಬಾರಿ ಮುತ್ತಿಟ್ಟಿದ್ದಳು.

    ಚಂದಮಾಮನ ತೋರಿಸಿ ತುತ್ತು ತಿನ್ನಿಸಿದ ಮಗಳು ದೊಡ್ಡವಳಾದ್ಲು. ಅಮ್ಮನ ಕನಸಿಗೆ ರೆಕ್ಕೆಪುಕ್ಕ ಬರುವ ಸಮಯ. ಆದರೆ ಮಗಳು, ಅಮ್ಮ ನಿರಮ್ಮಳವಾಗಿ ಸವಿನಿದ್ದೆಯ ಸಮಯದಲ್ಲಿದ್ಲು ಬಹುಶಃ ಅಮ್ಮನ ಕನವರಿಕೆಯಲ್ಲೂ ಮಗಳ ಭವಿಷ್ಯದ ಕನಸಿತ್ತೇನೋ? ಆದ್ರೇ ಅದೇ ನಿದ್ದೆಯಲ್ಲಿದ್ದಾಗ ಅಮ್ಮನ ಎದೆಗೆ ಮಗಳು ಚಾಕು ಚುಚ್ಚೇಬಿಟ್ಲು ನೋಡಿ. ಉಫ್ ಅಮ್ಮಂಗೆ ಮಗಳು ಚಾಕು ಚುಚ್ಚೋದು ಕಂಡಿತಾ? ಚಾಕು ಚುಚ್ಚಿದಕ್ಕೆ ಅಮ್ಮ ರಕ್ತಕಾರಿ ಸತ್ಲಾ? ಅಥವಾ ಮಗಳು ಚಾಕು ಚುಚ್ಚುತ್ತಾ ಇರುವ ರಕ್ತಸಿಕ್ತ ಚಾಕುವನ್ನೇ ನೋಡಿ ತಾಯಿ ಗೋಣುಚೆಲ್ಲಿದ್ಲಾ? ಗೊತ್ತಿಲ್ಲ. ಆದ್ರೇ ಬೆಂಗಳೂರಿನ ಕೆಆರ್ ‌ಪುರಂನಲ್ಲಿ ಅಮ್ಮನ ಕೊಂದ ಕೊಲೆಗಾತಿ ಮಗಳ ಕಥೆ ಇಡೀ ರಾಜ್ಯವನ್ನು ಕಣ್ಣೀರಲ್ಲಿ ಕೈತೊಳೆಸುವಂತೆ ಮಾಡಿತ್ತು. ಥೂ ಅಮ್ಮ ತನ್ನ ಮಗಳಿಗೆ ಅದೆಷ್ಟು ಚಂದದ ಹೆಸ್ರು ಇಟ್ಟಿದ್ಲು ನೋಡಿ ಅಮೃತಾ ಅಂತಾ. ಆದ್ರೇ ತಾಯಿಯ ಬದುಕಿಗೆ ವಿಷವಾಗಿ ಬಿಟ್ಲು ಪಾಪಿ. ಅಕ್ಕಪಕ್ಕದ ಮನೆಯವರೆಲ್ಲ ಕಣ್ಣೀರಾದ್ರೂ ತನ್ನ ತಾಯಿಯನ್ನೇ ಬಿಗಿದಪ್ಪಿದ ಅದೇ ಕೈಯಿಂದ ಚಾಕು ಹಿಡಿದು ಕೊಲೆ ಮಾಡಿದ ಅಮೃತಾ ಕಣ್ಣಲ್ಲಿ ಕಣ್ಣೀರೆ ಇರಲಿಲ್ಲ. ಬಿಡಿ ಅವಳು ಮನುಷ್ಯಳಾಗೋಕೆ ಯೋಗ್ಯಳು ಅಲ್ಲ.

    ನವ ಮಾಸ ಹೊತ್ತು ಹೆತ್ತವಳಿಗೆ ಆಕೆ ಕೊಟ್ಟಿದ್ದು ಮಾತ್ರ ಅದೊಂದು ದೊಡ್ಡ ಬಹುಮಾನ, ಅಂಬೆಗಾಲು ಇಡುವ ಮಗುವಿನ ಕಾಲಿಗೆ ಮುತ್ತಿಟ್ಟವಳ ಬಾಯಿ ಕಟ್ಟಿದ್ಲು. ಮಗಳೇ ಅನ್ನೋ ಪದಕ್ಕೆ ಅವಳು ಅನ್ವರ್ಥವೇ ಆಗಿಬಿಟ್ಟಳು. ಇದು ಕೋಮಲ ಹೃದಯವನ್ನೂ ಕುದಿಯವಂತೆ ಮಾಡಿತ್ತು. ಹೆಣ್ಣು ಕ್ಷಮಯಾಧರಿತ್ರಿ, ರೂಪೇಶು ಮಾತೇ ಅಂತೆಲ್ಲಾ ಕರೆಯೋ ಹೆಣ್ಣು ಜೀವ ಹೆಮ್ಮಾರಿಯಾದ್ರೆ ಏನುಬೇಕಾದ್ರೂ ಆಗಿ ಹೋಗುತ್ತೆ. ಹೆಣ್ಣು ಆದಿ ಅಂತ್ಯವೂ ಆಗಿರ್ತಾಳೆ. ಆದ್ರೆ, ಈ ಹೆಣ್ಣು ಆದಿಯಾಗಿದ್ದ ತಾಯಿಗೆ ಅಂತ್ಯವನ್ನು ಹಾಡಿದ್ಲು.

    ಅಮೃತಾ ಹೆಸರೇ ಹೇಳುವಂತೆ ಅದೊಂದು ಕಲ್ಮಶವೇ ಇಲ್ಲದ ಜೀವ ಆಗಿರ್ಬೇಕಿತ್ತು. ಆದ್ರೆ, ಈ ಅಮೃತಾ ಹೆಸರಿಗೆ ಅನ್ವರ್ಥಳಾಗಿದ್ದಾಳೆ. ತಾಯಿಯನ್ನು ಅದ್ಯಾವ ಕಾರಣಕ್ಕೆ ಚಾಕು ಚುಚ್ಚಿ ಕೊಂದ್ಲೋ ದೇವರೇ ಬಲ್ಲ. ಟೆಕ್ಕಿ ಅಮೃತಾಗೆ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ಇತ್ತು. ಬದುಕನ್ನು ಕರ್ಪೂರದಂತೆ ಮಗಳಿಗಾಗಿ ಸವೆಸಿದ ತಾಯಿಯ ಭರಪೂರ ಪ್ರೀತಿಯಿತ್ತು. ಸದಾ ಕಾಟ ಕೊಟ್ಟು ಜಗತ್ತಿನಲ್ಲಿ ಅತ್ಯಂತ ಪ್ರೀತಿ ಕೊಡುವ ಪುಟ್ಟ ತಮ್ಮನೂ ಇದ್ದ. ಆದ್ರೇ ಅವತ್ತು ಅದೇನಾಗಿತ್ತೋ ಈ ಪಾಪಿಗೆ ನಿದ್ದೆ ಮಂಪರಿನಲ್ಲಿದ್ದ ತಾಯಿಯ ಎದೆಗೆ ಚಾಕು ಚುಚ್ಚಿದ್ಲು. ಇನ್ನು ತನ್ನೊಂದಿಗೆ ಅಕ್ಕ ಅಕ್ಕ ಅಂತಾ ಅಮೃತಾಳಲ್ಲಿ ತಾಯಿಯನ್ನು ಕಂಡ ಆ ತಮ್ಮನ ದೇಹದಲ್ಲಿಯೂ ರಕ್ತ ಕಾಣೋಕೆ ಹಪಹಪಿಸಿದ್ಲು ರಾಕ್ಷಸಿ. ತಮ್ಮನಿಗೆ ಚಾಕು ಚುಚ್ಚೋಕೆ ಶುರು ಮಾಡಿದ್ಲು. ಆ ಹುಡ್ಗನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ. ಜಸ್ಟ್ ಕೊಲೆಯಿಂದ ತಪ್ಪಿಸಿಕೊಂಡ. ಹಿಂಗೆ ಒಂದ್ ಕೊಲೆ, ಒಂದ್ ಕೊಲೆ ಯತ್ನ ಮಾಡಿ ಅದೆಷ್ಟು ತಣ್ಣಗೆ ಪ್ರಿಯಕರನ ಬೈಕ್‍ನ್ನು ಏರಿದ್ಲು ಅಂದ್ರೆ ಇನ್‍ಫ್ಯಾಕ್ಟ್ ಅದೇ ಬೈಕ್‍ನ್ನು ಏರಿದ್ದಕ್ಕೆ ಆಕೆ ತಗ್ಲಾಕ್ಕೊಂಡ್ಲು. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಹಂಗಂಗೆ ಸೆರೆಯಾಗಿತ್ತು. ಒಂದ್‍ಕ್ಷಣ ಖಾಕಿ ತೊಟ್ಟವರು ಕೂಡ ಹೊಟ್ಟೆಯಲ್ಲಿ ಹುಟ್ಟಿದ ಮಗಳೇ ಕೊಲೆ ಮಾಡಿದ್ದಾಳೆ ಅಂತಾ ನಂಬೋಕೆ ತಯಾರಿರಲಿಲ್ಲ. ಆದರೆ ಅದ್ಯಾವಾಗ ತಮ್ಮ ಅಕ್ಕನ ಪಾಪದ ಕೃತ್ಯವನ್ನು ಇಂಚಿಂಚಾಗಿ ಹೇಳೋಕೆ ಶುರುಮಾಡಿದ್ನೋ ಖಡಕ್ ಖಾಕಿ ಕಣ್ಣಲ್ಲಿ ಕೂಡ ಆ ತಾಯಿಯ ಕೊನೆಯ ಕ್ಷಣದ ಕೊಸರಾಟ ನೆನೆಸಿ ಕಣ್ಣ ನೀರನ್ನು ಮರೆಮಾಚಿದ್ರು. ಹಾ ಪ್ರಿಯಕರನ ಸೊಂಟ ಹಿಡಿದು ಬೈಕ್ ಏರಿದ ಈ ಕಿರಾತಕಿ ಹೋಗಿದ್ದೆಲ್ಲಿ ಗೊತ್ತಾ ಸೀದಾ ಅಂಡಮಾನ್‍ಗೆ. ಅಸಲಿಗೆ ಅಮ್ಮನ ಕೊಲೆ ಮಾಡಿ ಬೆಚ್ಚಗೆ ಪ್ರಿಯಕರನ ಜೊತೆ ಕೂತವಳಿಗೆ ಸಣ್ಣ ನೋವು ಕಾಡಿಲ್ವಾ ಅಂತಾ ಖಾಕಿ ಕೂಡ ಅದೆಷ್ಟೋ ಬಾರಿ ಆಕೆಯ ಕೈಗೆ ಕೋಳ ಹಾಕಿದಾಗ ಪ್ರಶ್ನಿಸಿದೆ.

    ಇನ್ನು ಪ್ರಿಯಕರ. ಆತನಿಗೆ ತನ್ನ ಮನದನ್ನೆಯ ಸ್ಕೆಚ್ ಮೊದಲೇ ಗೊತ್ತಿತ್ತಾ ಗೊತ್ತಿಲ್ವಾ. ಪೊಲೀಸರಿಗೆ ಇನ್ನೂ ಕನ್‍ಫ್ಯೂಶನ್..! ಅಂಡಮಾನ್‍ಗೆ ಟ್ರಿಪ್ ಹೋಗಿದ್ದ ಅಮೃತಾಗಳಿಗೆ ಒದೆಕೊಟ್ಟು ಪೊಲೀಸರು ಎತ್ತಾಕ್ಕೊಂಡು ಬಂದ್ರು. ಕೊಲೆಗಾತಿ ಪೊಲೀಸ್ರ ಕೈಗೆ ಸಿಕ್ಕಿ ಬಿದ್ಲು, ಆದ್ರೆ, ಆಕೆ ಕೊಲೆ ಮಾಡಿದ್ಯಾಕೆ? ಕೊಲೆ ಮಾಡೋಕೆ ಆಕೆಗೆ ಇದ್ದ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಒಳ್ಳೆಯ ಓದನ್ನು ಓದಿಕೊಂಡಿದ್ದ ಅಮೃತಾ ಪೊಲೀಸ್ರ ವಿಚಾರಣೆಯಲ್ಲಿ ತಡಬಡಿಸಿದ್ದು ಬಿಟ್ಟರೆ ನಿಖರ ಕಾರಣ ಇಲ್ಲಿಯವರಗೂ ಹೇಳಲೇ ಇಲ್ಲ.

    ತಾಯಿಯನ್ನು ಯಾಕಮ್ಮ ಕೊಂದೆ ಅಂತ ಪೊಲೀಸ್ರು ಪರಿ ಪರಿಯಾಗಿ ಕೇಳಿದ್ರು ಆಕೆ ಹೇಳಿದ್ದು ಮಾತ್ರ, ಕಂತೆ ಕಂತೆ ಸ್ಟೋರಿಗಳನ್ನು ಮಾತ್ರ. ನಾನು ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸೋಕೆ ಆಗುತ್ತಿರಲಿಲ್ಲ. ಪ್ರೀತಿ ಮಾಡ್ತಾ ಇದ್ದೇ ಅದನ್ನು ಉಳಿಸಿಕೊಳ್ಳೊದಕ್ಕೂ ಆಗ್ತಾ ಇರ್ಲಿಲ್ಲ ಅನ್ನೋದನ್ನಷ್ಟೇ ಹೇಳೋ ಅಮೃತಾ ಕೊನೆಗೆ ಪೊಲೀಸ್ರಿಗೆ ಕೈ ಮುಗಿದು ನನ್ನನ್ನ ಸಾಯಿಸಿಬಿಡಿ ಅಂತಾಳೆ.

    ಮಗಳು ಸಾಲ ಮಾಡಿಕೊಂಡಿದ್ದಕ್ಕೆ ತಾಯಿ ಕೊಲೆ ಮಾಡೋದು ಸರಿನಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ತಾ ಮಾಡಿಕೊಂಡ ಸಾಲದ ಬಗ್ಗೆ ಹೇಳಿಕೊಂಡಿದ್ರೆ ತಾಯಿ ತನ್ನ ಕೈಲಾದ ಸಹಾಯ ಮಾಡುತ್ತಾ ಇದ್ಲು ಅಲ್ವಾ. 9 ತಿಂಗಳು ಗರ್ಭಗುಡಿಯಲ್ಲಿ ಸಾಕಿ ಸಲಹಿದ್ದವಳು ಮಗಳನ್ನು ಬೀದಿಗೆ ಬಿಡುತ್ತಾ ಇದ್ದಳಾ ಅನ್ನೋ ಪ್ರಶ್ನೆ ಹುಟ್ಟದೇ ಇರೋದಿಲ್ಲ. ಈಗ ಅಮೃತಾ ವಿಚಾರದಲ್ಲೂ ಅದೇ ಆಗಿರೋದು.

    ಅಮೃತಾ ತಾಯಿಯನ್ನು ಕೊಲ್ಲೋದಕ್ಕೂ ಮುನ್ನ ಎಷ್ಟು ಪ್ಲಾನ್ ಮಾಡಿದ್ಲು ಅಂದರೆ ಅವಳು ಈ ಮಟ್ಟಿಗಿನ ಕಲ್ಮಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾಳೆ ಅನ್ನೋದು ಯಾರಿಗೂ ಗೊತ್ತೇ ಇರ್ಲಿಲ್ಲ. ಪ್ರಿಯತಮನ ಜೊತೆ ಅಂಡಮಾನ್‍ಗೆ ಹೋಗೋಳು 15 ದಿನ ಮುನ್ನವೇ ಟಿಕೆಟ್ ಅನ್ನು ಬುಕ್ ಮಾಡಿದ್ಲು. ಟಿಕೆಟ್ ಬುಕ್ ಮಾಡಿದವಳಿಗೆ 15 ದಿನ ಕಾಲಾವಕಾಶವೂ ಇತ್ತು. ತನ್ನ ತಪ್ಪನ್ನು ತಾಯಿಯ ಮಡಿಲಲ್ಲಿ ಮಲಗಿ ಹೇಳಿಕೊಂಡಿದ್ರೆ ನಿರ್ಮಲ ಮನಸ್ಸಿನ ತಾಯಿ ಏನಾದ್ರು ಮಾಡುತ್ತಾ ಇದ್ದಳು ಅನ್ಸುತ್ತೆ. ಇವತ್ತು ಅವಳು ಮಾಡಿದ ಕೆಲಸ ತಲೆ ಎತ್ತದಂತೆ ಮಾಡಿದೆ. ತಲೆ ಎತ್ತೋದು ಇರ್ಲಿ, ಇಡೀ ಸಮಾಜವೇ ಇವಳಿಂದ ತಲೆ ತಗ್ಗಿಸುವಂತೆ ಮಾಡಿದೆ.

  • “ಗಂಟಲಿಗೆ ಬಟ್ಟಿ ತುರುಕಿ ಕೊಂದೆ”- ಹೆತ್ತವಳನ್ನು ಕೊಂದ ಕಥೆ ಬಿಚ್ಚಿಟ್ಟ ಟೆಕ್ಕಿ ಅಮೃತಾ

    “ಗಂಟಲಿಗೆ ಬಟ್ಟಿ ತುರುಕಿ ಕೊಂದೆ”- ಹೆತ್ತವಳನ್ನು ಕೊಂದ ಕಥೆ ಬಿಚ್ಚಿಟ್ಟ ಟೆಕ್ಕಿ ಅಮೃತಾ

    ಬೆಂಗಳೂರು: ತಾಯಿಯ ಕತ್ತನ್ನು ನಾನೇ ಸೀಳಿದೆ. ಬಾಯಿಗೆ ಬಟ್ಟೆ ತುರುಕಿದೆ ಬಳಿಕ ಗಂಟಲಿಗೆ ಚಾಕು ಚುಚ್ಚಿದೆ. ಒಂದೇ ಒಂದು ಬಾರಿ ಚಾಕು ಚುಚ್ಚಿದ ಕೂಡಲೇ ಆಕೆಯ ಪ್ರಾಣ ಹೋಗಿತ್ತು. ಆದರೂ ಪ್ರಾಣ ಹೋಗಿರುವುದನ್ನು ಕನ್ಫರ್ಮ್ ಮಾಡಿಕೊಳ್ಳೋದಕ್ಕೆ ಐದು ಬಾರಿ ಇರಿದು ಕೊಂದೆ ಎಂದು ಅಮೃತಾ ಪೊಲೀಸರ ಮುಂದೆ ಕೊಲೆ ಮಾಡಿದ ಧಾರುಣ ಘಟನೆಯನ್ನು ಇಂಚಿಂಚು ಬಾಯಿ ಬಿಟ್ಟಿದ್ದಾಳೆ.

    ಅವತ್ತು ತಾಯಿಯನ್ನು ಕೊಲ್ಲಲೇ ಬೇಕು ಅಂದುಕೊಂಡಿದ್ದ ಅಮೃತಾ ಇಡೀ ರಾತ್ರಿ ನಿದ್ರೆ ಮಾಡಿರಲಿಲ್ಲ. ಬೆಳಗಿನ ಜಾವ ಕೊಲೆ ಮಾಡುವುದಕ್ಕೆ ತೀರ್ಮಾನ ಮಾಡಿದ್ದಳು. ಅಂದುಕೊಂಡಂತೆ ತಾಯಿಯನ್ನು ಕೊಂದು ಮುಗಿಸಿದ್ದಳು. ಆದರೆ ಬೆನ್ನಿಗೆ ಬಿದ್ದ ಸಹೋದರನನ್ನು ಕೊಲೆ ಮಾಡುವುದಕ್ಕೆ ಆಗಿರಲಿಲ್ಲ. ಆತನನ್ನು ಕೊಲೆ ಮಾಡುವುದಕ್ಕೆ ಹೋದಾಗ ತಮ್ಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ, ಆದ್ದರಿಂದ ಅವನ ಕೊಲೆ ಮಾಡುವುದಕ್ಕೆ ಆಗಲಿಲ್ಲ ಅಮೃತಾ ಹೇಳಿದ್ದಾಳೆ.

    ತಾಯಿಯನ್ನು ಕೊಂದ ವಿಚಾರ ಪ್ರಿಯಕರನಿಗೆ ಗೊತ್ತೆ ಇಲ್ಲ:
    ಇಷ್ಟು ದಿನ ಅಮೃತಾ ತಾಯಿಯನ್ನು ಕೊಲೆ ಮಾಡುವುದಕ್ಕೆ ಪ್ರಿಯಕರನ ಕುಮ್ಮಕ್ಕು ಇತ್ತು. ಆತನ ಕುಮ್ಮಕ್ಕಿನಿಂದಲೇ ಅಮೃತಾ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಅಂದುಕೊಂಡಿದ್ದರು. ಅದರಂತೆ ಆತನನ್ನು ಬಂಧಿಸಿ ಕರೆದುಕೊಂಡು ಬಂದಿದ್ದರು. ಆದರೆ ಆತನಿಗೆ ಪ್ರಿಯತಮೆ ತನ್ನ ತಾಯಿಯನ್ನು ಕೊಂದಿದ್ದೇ ಗೊತ್ತಿರಲಿಲ್ಲ. ಆತನಿಗೆ ಅಮೃತಾ ತಾಯಿ ಸತ್ತಿತ್ತು ಅಂಡಮಾನ್‍ನಲ್ಲಿ ಗೊತ್ತಾಗಿದೆ.

    ಅಂಡಮಾನ್‍ಗೆ ಖುಷಿ ಖುಷಿಯಿಂದ ಪ್ರಿಯಕರನೊಂದಿಗೆ ಹಾರಿದ್ದ ಪ್ರಿಯತಮೆ ಅಂಡಮಾನ್‍ಗೆ ಹೋಗುವ ತನಕ ತನ್ನ ತಾಯಿಯನ್ನು ಕೊಲೆ ಮಾಡಿ ಬಂದಿದ್ದೇನೆ ಎಂದು ಆತನಿಗೆ ಹೇಳಿರಲಿಲ್ಲ. ಅಂಡಮಾನ್‍ಗೆ ತಲುಪಿ ರಾತ್ರಿ ಕಳೆದ ಬಳಿಕ ನಾನು ನನ್ನ ತಾಯಿಯನ್ನು ಕೊಂದಿದ್ದೇನೆ. ಇನ್ನೇನು ನನ್ನನ್ನು ಪೊಲೀಸರು ಅರೆಸ್ಟ್ ಮಾಡಬಹುದು ಎಂದು ಕಣ್ಣೀರಿಟ್ಟಿದ್ದಾಳೆ.

    ಪ್ರಿಯತಮೆ ಕಣ್ಣೀರು ಹಾಕುವುದನ್ನು ನೋಡುವುದಕ್ಕೆ ಆಗದ ಶ್ರೀಧರ್ ಅಮೃತಾಳಿಗೆ ಸಮಾಧಾನ ಮಾಡಿ ಟ್ರಿಫ್ ಮುಂದುವರಿಸಿದ್ದಾರೆ. ವಿಚಾರ ಗೊತ್ತಾದರೂ ಪೊಲೀಸರಿಗೆ ವಿಚಾರ ತಿಳಿಸದೆ ಆರೋಪಿಯನ್ನು ರಕ್ಷಣೆ ಮಾಡಿದ್ದು ತಪ್ಪು ಅಂತ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ಶ್ರೀಧರ್‍ನ ಮೇಲೆ ಸಣ್ಣ ಪ್ರಕರಣ ದಾಖಲಾಗಿದ್ದು, ಕೆ.ಆರ್.ಪುರಂ ಪೊಲೀಸರು ಐನಾತಿ ಹೆಣ್ಣಿನ ವಿಚಾರಣೆ ಮುಂದುವರಿಸಿದ್ದಾರೆ.

  • ಪ್ರಿಯಕರನೊಂದಿಗೆ ಮೋಜು ಮಸ್ತಿಗಾಗಿ ತಮ್ಮನ ಹೆಸರಲ್ಲಿ ಸಾಲ

    ಪ್ರಿಯಕರನೊಂದಿಗೆ ಮೋಜು ಮಸ್ತಿಗಾಗಿ ತಮ್ಮನ ಹೆಸರಲ್ಲಿ ಸಾಲ

    – ತಾಯಿಯನ್ನು ಕೊಂದ ಮಗಳು ಬೆಂಗಳೂರಿಗೆ
    – ಅಂಡಮಾನ್ ನಿಂದ ಎಳೆದುತಂದ ಪೊಲೀಸರು

    ಬೆಂಗಳೂರು: ತನ್ನ ಹೆತ್ತ ತಾಯಿಯನ್ನು ಚಾಕುವಿನಿಂದ ಇರಿದು ಕೊಂದು ಪೈಶಾಚಿಕ ಕೃತ್ಯ ಎಸಗಿ ಪ್ರಿಯಕರನ ಜೊತೆ ಅಂಡಮಾನ್ ಗೆ ಹೋಗಿ ತಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಬಂಧನ ಮಾಡಿದ್ದ ಪೋಲಿಸರು ಇಂದು ಅಂಡಮಾನ್ ನಿಂದ ಕೆ.ಆರ್ ಪುರಂ ಪೋಲಿಸ್ ಠಾಣೆಗೆ ಕರೆತಂದಿದ್ದಾರೆ.

    ಕೆ ಆರ್ ಪುರಂ ನಿವಾಸಿಯಾದ ಅಮೃತಾ ಕಳೆದ ಫೆಬ್ರವರಿ 1 ನೇ ತಾರೀಖಿನಂದು ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ಪ್ರಿಯಕರ ಶ್ರೀಧರ್ ರಾವ್ ಜೊತೆ ಅಂಡಮಾನ್ ಗೆ ಹೋಗಿ ತಲೆಮಾರಿಸಿಕೊಂಡಿದ್ದಳು. ಈ ಬಗ್ಗೆ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲು ಮಾಡಿಕೊಂಡು, ವಿಶೇಷ ತಂಡ ರಚನೆ ಮಾಡಿ ತನಿಖೆ ಆರಂಭಿಸಿದ ಕೆ.ಆರ್ ಪುರಂನ ಡಿಸಿಪಿ ಅನುಚೇತ್ ಹಾಗೂ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧನ ಮಾಡಿತ್ತು.

    ಬಂಧನದ ಬಳಿಕ ಅಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಇಂದು ಕೆ.ಆರ್ ಪುರಂ ಪೋಲಿಸ್ ಠಾಣೆಗೆ ಕರೆತಂದು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಆರೋಪಿ ಅಮೃತಾ ಸ್ಫೋಟಕ ಮಾಹಿತಿಗಳನ್ನು ಒಂದೊಂದಾಗಿಯೇ ಬಿಚ್ಚಿಟ್ಟಿದ್ದಾಳೆ. ತಾಯಿ ಹಾಗೂ ಸಹೋದರನ ಕೊಲೆಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.

    ತಮ್ಮನ ಹೆಸರಲ್ಲಿ ಸಾಲ:
    ಜೊತೆಗೆ ತನ್ನ ಪ್ರಿಯಕರನೊಂದಿಗೆ ಮಜಾ ಮಾಡೋದಕ್ಕಾಗಿ ತಮ್ಮನ ಹೆಸರಿನಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾಳೆ. ತಮ್ಮ ಹರೀಶ್‍ನ ಹೆಸರಿನಲ್ಲಿ ಅಮೃತಾ ಸಾಲ ಮಾಡಿಕೊಂಡಿದ್ದಳು. ಜೊತೆಗೆ ಪ್ರಿಯಕರ ಶ್ರೀಧರನಿಗೆ ಲಕ್ಷಾಂತರ ರೂಪಾರಿ ಬೈಕ್ ಕೊಡಿಸಿದ್ದಳು. ಅಲ್ಲದೇ ಐಷರಾಮಿ ಜೀವನ ಮಾಡುವುದು ಈ ಇಬ್ಬರ ಪ್ರಮುಖ ಉದ್ದೇಶ ಆಗಿತ್ತು. ಇದಕ್ಕಾಗಿ ಸಿಕ್ಕ ಸಿಕ್ಕ ಬ್ಯಾಂಕ್‍ಗಳಿಂದ ಸಾಲ ಮಾಡಿದ್ದಾಳೆ. ತಮ್ಮನಿಗೆ ಗೊತ್ತಾಗದಂತೆ ಆತ ಸಹಿಯನ್ನು ಪಡೆಯುತ್ತಿದ್ದಳು. ಕೆಲಮೊಮ್ಮೆ ತಮ್ಮ ಹರೀಶ್‍ನಿಗೆ ಸುಳ್ಳು ಹೇಳಿ ಬ್ಯಾಂಕ್‍ಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಅಕ್ಕ ನನ್ನ ಹೆಸರಿನಲ್ಲಿ ಸಾಲ ಮಾಡುತ್ತಿದ್ದಾಳೆ ಅನ್ನೋದೆ ಅವನಿಗೆ ಗೊತ್ತಿರಲಿಲ್ಲ.

    ಅಮೃತಾಳ ಪ್ರಿಯಕರನಿಗೆ ಮತ್ತೊಂದು ಚಾಳಿ ಇತ್ತು. ಒಂದು ಕಡೆ ನೆಟ್ಟಗೆ ಕೆಲಸ ಮಾಡುತ್ತಿರಲಿಲ್ಲ. ಕೆಲಸಕ್ಕೆ ಸೇರಿದ ಆರು ತಿಂಗಳಲ್ಲಿ ಕೆಲಸ ಬಿಟ್ಟು ಹೋಗುತ್ತಿದ್ದ. ಬಿಟ್ಟಿಯಾಗಿ ಹಣ ಕೈ ಸೇರುತ್ತಿದ್ದರಿಂದ ಶ್ರೀಧರನಿಗೆ ಕೆಲಸದ ಅವಶ್ಯಕತೆ ಇರಲಿಲ್ಲ.

    ಕೊಲೆಯಲ್ಲಿ ಪ್ರಿಯಕರ ಶ್ರೀಧರ್ ರಾವ್ ಕೈವಾಡ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಅಮೃತ ಕೊಲೆ ಬಳಿಕ ಶ್ರೀಧರ್ ಜೊತೆ ಅಂಡಮಾನಿಗೆ ಹೋಗಲು ಪ್ಲಾನ್ ಮಾಡಿದ್ಲಾ ಎನ್ನುವ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಶ್ರೀಧರ್ ರಾವ್ ಹಾಗೂ ಅಮೃತಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೋಲಿಸರು ವಿಚಾರಣೆ ಪೂರ್ತಿಗೊಂಡ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

  • ತಾಯಿ ಕೊಂದು ಲವ್ವರ್ ಜೊತೆ ಟೆಕ್ಕಿ ಎಸ್ಕೇಪ್ – ಅಂಡಮಾನ್‍ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ಳು

    ತಾಯಿ ಕೊಂದು ಲವ್ವರ್ ಜೊತೆ ಟೆಕ್ಕಿ ಎಸ್ಕೇಪ್ – ಅಂಡಮಾನ್‍ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ಳು

    – ಅಮ್ಮನಿಗೆ 20 ಬಾರಿ ಇರಿದು ಕೊಲೆ
    – ಕೊಲೆ ಮಾಡಲು ಬ್ಲೂ ಪ್ರಿಂಟ್ ರೆಡಿ ಮಾಡಿದ್ಳು
    – ಹೈದ್ರಾಬಾದ್ ಅಂತ ಹೇಳಿ ಅಂಡಮಾನ್‍ಗೆ ಟಿಕೆಟ್ ಬುಕ್ಕಿಂಗ್

    ಬೆಂಗಳೂರು: ಮಲಗಿದ್ದ ತಾಯಿಗೆ 20 ಬಾರಿ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಮಗಳನ್ನು ಕೊನೆಗೂ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಅಂಡಮಾನ್‍ಅಲ್ಲಿ ಬಂಧಿಸಿದ್ದಾರೆ. ಜೊತೆಗೆ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತಾಯಿಯನ್ನೇ ಕೊಂದ ಟೆಕ್ಕಿ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿ ಲವ್ವರ್ ಜೊತೆ ಜೂಟ್

    ಕೊಲೆಗೆ ಸ್ಕೆಚ್:
    ಅಮೃತಾ ತನ್ನ ತಾಯಿ ಮತ್ತು ತಮ್ಮನನ್ನು ಕೊಲೆ ಮಾಡುವುದಕ್ಕೆ ಕಳೆದ 15 ದಿನದ ಹಿಂದೆಯೇ ಸ್ಕೆಚ್ ಹಾಕಿಕೊಂಡಿದ್ದಳು. ಅದರಂತೆ ತಾಯಿಯನ್ನು ಹತ್ಯೆ ಮಾಡೋದಕ್ಕೆ ಬ್ಲೂ ಪ್ರಿಂಟ್ ಅನ್ನು ರೆಡಿಮಾಡಿಕೊಂಡಿದ್ದಳು. ಫೆಬ್ರವರಿ 2ರಂದು ತಾಯಿಯನ್ನು ಕೊಲೆ ಮಾಡಬೇಕು ಅಂದುಕೊಂಡಿದ್ದ ಅಮೃತಾ ತನ್ನ ಪ್ರಿಯಕರ ಶ್ರೀಧರ್ ನೊಂದಿಂಗೆ ಟ್ರಿಪ್ ಹೋಗಲು ಜನವರಿ 15ರಂದೇ ತನ್ನ ಮೊಬೈಲ್ ನಂಬರ್ ಅನ್ನು ಬಳಸಿ ಟಿಕೆಟ್ ಬುಕ್ ಮಾಡಿದ್ದಳು. ಅದರಂತೆ ಬೆಳಗಿನ ಜಾವ 6:30ಕ್ಕೆ ವಿಮಾನ ಕೂಡ ನಿಗದಿಯಾಗಿತ್ತು.

    ಬೆಳಗ್ಗೆ 4 ಗಂಟೆಗೆ ತಾನು ಅಂದುಕೊಂಡಿದ್ದ ಹಾಗೇ ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಳು. ತಾಯಿಯನ್ನು ಕೊಲೆ ಮಾಡಿದ ಅಮೃತಾ ಬಳಿಕ ತನ್ನ ತಮ್ಮನನ್ನು ಕೊಲ್ಲಲು ಹೋಗಿದ್ದಾಗ ಹರೀಶ್‍ನ ಮುಂದೆ ನಾನು ಹೈದ್ರಾಬಾದ್‍ಗೆ ಹೋಗೋದಾಗಿ ಹೇಳಿದ್ದಳು.

    ಕೊಲೆ ಮಾಡಿದ ಬಳಿಕ ಮನೆಯಿಂದ ಬ್ಯಾಗ್ ಜೊತೆ ಹೊರಬಂದು ಪ್ರಿಯಕರನ ಜೊತೆ ಬೈಕಿನಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಮೃತಾ ಹೈದ್ರಾಬಾದ್‍ಗೆ ಹೋಗಿರಬಹುದು ಎಂದು ಭಾವಿಸಿ ಪೊಲೀಸರು ಅತ್ತ ಕಡೆ ಹೋಗಿ ಮೊದಲು ಸಣ್ಣ ಎಡವಟ್ಟು ಮಾಡಿಕೊಂಡರು.

    ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಳಸಿಕೊಂಡು ತನಿಖೆ ನಡೆಸಿದ ಪೊಲೀಸರ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಅಮೃತಾ ಮತ್ತು ಶ್ರೀಧರ್ ಫ್ಲೈಟ್‍ನಲ್ಲಿ ಎಸ್ಕೇಪ್ ಆದ ಬೆನ್ನಲ್ಲೇ ಬೆಂಗಳೂರಿನಿಂದ ಫ್ಲೈಟ್‍ಗಳ ಮೂಲಕ ಬೇರೆ ಕಡೆ ಹೋಗಿದ್ದ ಪ್ರಯಾಣಿಕರ ಮಾಹಿತಿ ಸಂಗ್ರಹ ಮಾಡಿದ್ದಾರೆ.

    ಆಗ ಅದೇ ದಿನ ಅಮೃತಾ ಚಂದ್ರಶೇಖರ್ ಹಾಗೂ ಶ್ರೀಧರ್ ಎಂಬ ಮತ್ತೊಂದು ಜೋಡಿ ಮುಂಬೈಗೆ ಹೋಗಿತ್ತು. ಆಗ ಪೊಲೀಸರು ಅವರೇ ಪ್ರಕರಣದ ಹಂತಕರು ಅಂತ ಮುಂಬೈ ಮೇಲೆ ಕಣ್ಣಿಟ್ಟ ಕಾರಣ ಆರೋಪಿಗಳು ಜಸ್ಟ್ ಮಿಸ್ ಆಗಿದ್ದರು. ಬಳಿಕ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿ ಅಂಡಮಾನ್‍ನ ಜೈಲಿನ ಮುಂದೆಯೇ ಪ್ರೇಮಿಗಳಿಬ್ಬರು ಓಡಾಡುತ್ತಿದ್ದರು. ಅಲ್ಲಿನ ಸ್ಥಳೀಯ ಪೋಲಿಸರ ನೆರವಿನಿಂದ ಅಮೃತಾ ಹಾಗೂ ಪ್ರಿಯಕರ ಶ್ರೀಧರ್ ರಾವ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಲೆ ಮಾಡಿದ್ದು ಯಾಕೆ?
    ಕೊಲೆ ಮಾಡೋದಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ. ಆದರೆ ಅಂಡಮಾನ್‍ನ ಪ್ರಖ್ಯಾತ ಕಲಪಾನಿ ಜೈಲ್ ಬಳಿ ಓಡಾಡುತ್ತಿದ್ದ ಅಮೃತಾ ಮತ್ತು ಶ್ರೀಧರ್ ನನ್ನು ಸ್ಥಳಿಯ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ತಾಯಿಯನ್ನು ಕೊಂದಂತಹ ಟೆಕ್ಕಿ ಅಮೃತಾ ಮತ್ತು ಆಕೆಯ ಪ್ರಿಯಕರ ಶ್ರೀಧರ್ ಇಬ್ಬರು ಅಂಡಮಾನ್ ಅಲ್ಲಿ ಟ್ರಿಪ್ ಮಾಡುತ್ತಿದ್ದರು.

  • ಸಿದ್ದರಾಮಯ್ಯರನ್ನ ಹಡಗಿನಲ್ಲಿ ಅಂಡಮಾನ್‍ಗೆ ಕಳುಹಿಸಿಕೊಡಬೇಕು: ಡಿ.ವಿ.ಸದಾನಂದಗೌಡ

    ಸಿದ್ದರಾಮಯ್ಯರನ್ನ ಹಡಗಿನಲ್ಲಿ ಅಂಡಮಾನ್‍ಗೆ ಕಳುಹಿಸಿಕೊಡಬೇಕು: ಡಿ.ವಿ.ಸದಾನಂದಗೌಡ

    – ಗೂಬೆ ಕೂರಿಸುವುದರಲ್ಲೂ ಸಿದ್ದರಾಮಯ್ಯ ನಿಸ್ಸೀಮರು

    ಬೆಂಗಳೂರು: ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಡಗಿನಲ್ಲಿ ಅಂಡಮಾನ್, ನಿಕೋಬಾರ್​ಗೆ ಕಳುಹಿಸಬೇಕು. ಅಲ್ಲಿ ವೀರ್ ಸಾವರ್ಕರ್ ಹೇಗಿದ್ದರು ಎನ್ನುವುದು ಅವರಿಗೆ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸ ಇಲ್ಲ. ರಾತ್ರಿಯಲ್ಲ ನಿದ್ದೆಗೆಟ್ಟು ಏನ್ಮಾಡಬೇಕು ಅಂತ ಯೋಚನೆ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಹಾಗಾಗಿ ಅವರು ಅಂಡಮಾನ್‍ಗೆ ಹೋಗಿ ವೀರ್ ಸಾವರ್ಕರ್ ವಾಸವಿದ್ದ ಜೈಲಿನ ಸ್ಥಿತಿಗತಿ ನೋಡಿಕೊಂಡು ಬರಬೇಕು. ಆಗ ಅವರಲ್ಲಿರುವ ಕೆಟ್ಟ ಬುದ್ಧಿ ಸರಿ ಹೋಗುತ್ತದೆ ಎಂದು ಕುಟುಕಿದರು.

    ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ವೀರ್ ಸಾವರ್ಕರ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಇಂದಿರಾ ಗಾಂಧಿ ಸಿದ್ದರಾಮಯ್ಯನವರ ನಾಯಕರಲ್ಲವೇ? ಸುಮ್ಮನೆ ಅವರ ಅಂಚೆ ಚೀಟಿ ಜಾರಿಗೆ ತರುತ್ತಿದ್ರಾ? ಸಿದ್ದರಾಮಯ್ಯ ಅವರನ್ನು 5 ವರ್ಷ ಮುಖ್ಯಮಂತ್ರಿಯಾಗಿ ಸಹಿಸಿಕೊಂಡಿರುವುದೇ ದೊಡ್ಡ ವಿಚಾರ ಎಂದು ವಾಗ್ದಾಳಿ ನಡೆಸಿದರು.

    ಗೂಬೆ ಕೂರಿಸುವದರಲ್ಲು ಸಿದ್ದರಾಮಯ್ಯನವರು ನಿಸ್ಸೀಮರು. ಕುಹಕದ ಮಾತು ಮತ್ತು ವಕ್ರ ಮಾತುಗಳನ್ನಾಡುವುದು ಅವರ ಕೆಲಸ. ಸಿದ್ದರಾಮಯ್ಯನವರು ಏನು ಅನ್ನೋದು ಕಾಂಗ್ರೆಸ್ಸಿವರಿಗೆ ಗೊತ್ತು. ಒಮ್ಮೆ ಅಂಡಮಾನ್, ನಿಕೋಬಾರ್ ಗೆ ಹೋಗಿ ಸಾವರ್ಕರ ಬಗ್ಗೆ ತಿಳಿಯಲಿ. ಸಾರ್ವಜಿಕರಿಂದ ಹಣ ಪಡೆದು ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡೋಣ ಎಂದರು.

    ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕು ಎನ್ನುವುದು ನಮ್ಮದು ಆದ್ಯತೆ. ಆದರೆ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಅದಕ್ಕೆ ತಳಕು ಹಾಕುವುದು ಸರಿಯಲ್ಲ. ಇಂತಹ ಮಾತುಗಳಿಂದ ಜನರ ತಲೆ ಹಾಳು ಮಾಡುವ ಪ್ರವೃತ್ತಿ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಗುಡುಗಿದರು.

    ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ವಿಳಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈಗಾಗಲೆ ಒಂದು ಹಂತದ ಹಣ ಬಿಡುಗಡೆಯಾಗಿದೆ. ಬಾಕಿ ಹಣ ಬಿಡುಗಡೆಗು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ಮುಂದಿನ ಹಂತದಲ್ಲಿ ಹಣ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ಕರ್ನಾಟಕ 1,200 ಕೋಟಿ ರೂ. ಹಾಗೂ ಬಿಹಾರ ರಾಜ್ಯಕ್ಕೆ 400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

    ಎಸ್.ಟಿ.ಸೋಮಶೇಖರ್ ಬಿಜೆಪಿ ಸೇರ್ಪಡೆಗೆ ಯಶವಂತಪುರ ಬಿಜೆಪಿ ಘಟಕ ಪರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ್ವಾ ಎನ್ನುವ ತೀರ್ಮಾನ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.