Tag: ಅಂಟಾರ್ಟಿಕಾ

  • ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ?

    ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ?

    ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಭಾರತ ದೇಶವು ಇದೀಗ ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಸಂಬಂಧ ಭಾರತವು ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ 46 ನೇ ಅಂಟಾರ್ಕ್ಟಿಕಾ (Antartica) ಒಪ್ಪಂದ ಸಮಾಲೋಚನಾ ಸಭೆಯಲ್ಲಿ (ATCM) ಚರ್ಚಿಸಿದೆ.

    ಹೊಸ ಅಂಟಾರ್ಟಿಕಾದಲ್ಲಿ ನೆಲೆಯನ್ನು ಸ್ಥಾಪಿಸುವ ಉದ್ದೇಶವನ್ನು ಭಾರತವು ಇತ್ತೀಚೆಗೆ ಘೋಷಿಸಿದೆ. ಈ ಹೊಸ ಸಂಶೋಧನಾ ಕೇಂದ್ರವು ಪೂರ್ವ ಅಂಟಾರ್ಟಿಕಾದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಬಳಿ ಇದೆ. ಹಾಗಿದ್ರೆ ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ ಎಂಬುದನ್ನು ನೋಡೋಣ.

    ಹೊಸ ಸಂಶೋಧನಾ ನೆಲೆ ಏಕೆ?: ಅಂಟಾರ್ಕ್ಟಿಕಾದಲ್ಲಿ ಭಾರತದ ಸಂಶೋಧನಾ ಚಟುವಟಿಕೆಗಳು 1981 ರಲ್ಲಿ ಮೊದಲ ಸ್ಥಳೀಯ ಕಾರ್ಯಾಚರಣೆಯೊಂದಿಗೆ ಪ್ರಾರಂಭವಾಯಿತು. 1983 ರಲ್ಲಿ ದೇಶವು ದಕ್ಷಿಣ ಗಂಗೋತ್ರಿ ಎಂಬ ಮೊದಲ ಸಂಶೋಧನಾ ನೆಲೆಯನ್ನು ಸ್ಥಾಪಿಸಿತು. ಇದು ಅಂಟಾರ್ಕ್ಟಿಕಾದಲ್ಲಿ ನಿರಂತರ ವೈಜ್ಞಾನಿಕ ಉಪಸ್ಥಿತಿಯ ಪ್ರಾರಂಭವನ್ನು ಗುರುತಿಸುತ್ತದೆ. 1989 ರಲ್ಲಿ ಭಾರತವು ಮೈತ್ರಿ ಸಂಶೋಧನಾ ಕೇಂದ್ರವನ್ನು ಕಾರ್ಯಗತಗೊಳಿಸುವ ಮೂಲಕ ತನ್ನ ಸಂಶೋಧನಾ ಸಾಮರ್ಥ್ಯವನ್ನು ವಿಸ್ತರಿಸಿತು. ಪ್ರಸ್ತುತ ಭಾರತವು ಅಂಟಾರ್ಕ್ಟಿಕಾದಲ್ಲಿ ಮೈತ್ರಿ ಮತ್ತು ಭಾರತಿ ಎಂಬ ಎರಡು ಸಕ್ರಿಯ ಸಂಶೋಧನಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ.

    ಅಂಟಾರ್ಕ್ಟಿಕಾದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸಂಶೋಧನಾ ಕೇಂದ್ರವು ತನ್ನ ನಿರೀಕ್ಷಿತ ಜೀವಿತಾವಧಿಯನ್ನು ಗಣನೀಯವಾಗಿ ಮೀರಿಸಿದೆ ಎಂದು ಸರ್ಕಾರ ಘೋಷಿಸಿದೆ. ಮೂಲತಃ ಒಂದು ದಶಕದಿಂದ ಭಾರತದ ಸಂಶೋಧನಾ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಮೈತ್ರಿ ಸಂಶೋಧನಾ ಕೇಂದ್ರವು (Research Centre) ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿದೆ. ಆದಾಗ್ಯೂ ಅಂಟಾರ್ಕ್ಟಿಕಾದಲ್ಲಿ ಭಾರತದ ವೈಜ್ಞಾನಿಕ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಸಂಶೋಧನಾ ಸೌಲಭ್ಯಗಳಿಂದ ಉಂಟಾಗುವ ನಿರ್ಬಂಧಗಳನ್ನು ಪರಿಹರಿಸಲು ಸರ್ಕಾರವು ಹೊಸ ಸಂಶೋಧನಾ ನೆಲೆಯನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ‘ಮೈತ್ರಿ’ ಕೇಂದ್ರವು ಹಳೆಯದಾಗಿದ್ದು, ಮೂಲಸೌಕರ್ಯವು ಈ ನಿರ್ಧಾರವನ್ನು ಪ್ರೇರೇಪಿಸಿದೆ. ಯಾಕೆಂದರೆ ಹಳೆಯದಾಗಿದ್ದರಿಂದ ಇದು ಇನ್ಮುಂದೆ ಅಗತ್ಯವಿರುವ ಮುಂದುವರಿದ ಸಂಶೋಧನಾ ಚಟುವಟಿಕೆಗಳನ್ನು ಸಮರ್ಪಕವಾಗಿ ಬೆಂಬಲಿಸುವುದಿಲ್ಲ. ಹೀಗಾಗಿ ಹೊಸ ನೆಲೆಯು ಆಧುನಿಕ ಸೌಕರ್ಯಗಳು ಮತ್ತು ಸುಧಾರಿತ ಸಾಮರ್ಥ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ.

    ಸಂಶೋಧನಾ ಹೆಜ್ಜೆಗುರುತು ವಿಸ್ತರಣೆ: 2012 ರಲ್ಲಿ ಕಾರ್ಯಾರಂಭ ಮಾಡಿದ ಭಾರತಿ ಸಂಶೋಧನಾ ಕೇಂದ್ರವು ಭಾರತದ ಅಂಟಾರ್ಕ್ಟಿಕ್ ಮೂಲಸೌಕರ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. 134 ಶಿಪ್ಪಿಂಗ್ ಕಂಟೈನರ್‌ಗಳನ್ನು ಬಳಸಿಕೊಂಡು ಇದನ್ನು ಅನನ್ಯವಾಗಿ ನಿರ್ಮಿಸಲಾಗಿದೆ. ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಹೊಸ ಎಂಜಿನಿಯರಿಂಗ್ ಅನ್ನು ಪ್ರದರ್ಶಿಸುತ್ತದೆ. ಅಂಟಾರ್ಕ್ಟಿಕ್ ಪ್ರದೇಶದ ಜಾಗತಿಕ ವೈಜ್ಞಾನಿಕ ಸಂಶೋಧನೆ ಮತ್ತು ತಿಳುವಳಿಕೆಗೆ ಕೊಡುಗೆ ನೀಡುವ ಭಾರತದ ಬದ್ಧತೆಯನ್ನು ಈ ನೆಲೆಗಳು ಒಟ್ಟಾಗಿ ಒತ್ತಿಹೇಳುತ್ತವೆ. ಧ್ರುವೀಯ ಸಂಶೋಧನೆಯಲ್ಲಿ ಭಾರತದ ಪ್ರಭಾವಶಾಲಿ ಪಾತ್ರವನ್ನು ಕಾಪಾಡಿಕೊಳ್ಳಲು ಈ ಸೌಲಭ್ಯಗಳ ನಿರಂತರ ಕಾರ್ಯಾಚರಣೆ ಮತ್ತು ಅಭಿವೃದ್ಧಿಯು ನಿರ್ಣಾಯಕವಾಗಿದೆ.

    1959ರಲ್ಲಿ ಆಸ್ಪ್ರೇಲಿಯಾ, ಚಿಲಿ, ಜಪಾನ್‌, ನಾರ್ವೆ, ಯುನೈಟೆಡ್‌ ಸ್ಟೇಟ್ಸ್‌, ಯುನೈಟೆಡ್‌ ಕಿಂಗ್‌ಡಂ, ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್‌, ಫ್ರಾನ್ಸ್‌, ಬೆಲ್ಜಿಯಂ ಮತ್ತು ಅರ್ಜೆಂಟಿನಾಗಳು ಸೇರಿ ಅಂಟಾರ್ಟಿಕಾ ನಾಶವಾಗಬಾರದು. ಅದನ್ನು ಎಲ್ಲರೂ ಒಗ್ಗೂಡಿ ಸಂರಕ್ಷಿಸಬೇಕು, ಎಂಬ ನಿರ್ಧಾರಕ್ಕೆ ಬಂದವು. ಅಲ್ಲದೇ ಕ್ರಮೇಣ ಭಾರತ ಸಹಿತ ಇನ್ನೂ ಕೆಲವು ದೇಶಗಳು ಸೇರಿಕೊಂಡವು.

    ಇಲ್ಲಿನ ಸುರಕ್ಷತೆ ನಮಗೆ ಏಕೆ ಮುಖ್ಯ?: ಅಂಟಾರ್ಟಿಕಾ ಮಹಾಸಾಗರದಲ್ಲಿ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಿಮವು ಬಹಳ ವೇಗವಾಗಿ ಕರಗುತ್ತಿದೆ. ಉಪ್ಪು ಮತ್ತು ಆಮ್ಲಜನಕದಿಂದ ಸಮೃದ್ಧವಾಗಿರುವ ಅಂಟಾರ್ಟಿಕಾದಲ್ಲಿ ಪ್ರತಿದಿನ ಮತ್ತು ನಿರಂತರವಾಗಿ ಮಂಜುಗಡ್ಡೆಯ ಗುಡ್ಡೆ ಕರಗುತ್ತಿದೆ. ಇದರಿಂದ ಸೃಷ್ಟಿಯಾಗುವ ನೀರಿನ ಪ್ರವಾಹವು ಪೆಸಿಫಿಕ್‌, ಅಟ್ಲಾಂಟಿಕ್‌ ಮತ್ತು ಹಿಂದೂ ಮಹಾಸಾಗರಗಳನ್ನು ತಲುಪುತ್ತಿದೆ. ಮಂಜುಗಡ್ಡೆ ಕರಗುವಿಕೆಯಿಂದಾಗಿ ಅಂಟಾರ್ಟಿಕಾದ ಸಾಗರ ನೀರು ತೆಳುವಾಗಿ, ಉಪ್ಪಿನ ಅಂಶ ಕಡಿಮೆಯಾಗುತ್ತಿದೆ. ಇದು ಅಲ್ಲಿನ ಆಳ ಸಾಗರದ ನೀರಿನ ಹರಿಯುವಿಕೆಯನ್ನು ನಿಧಾನಗೊಳಿಸಿ, ಆಮ್ಲಜನಕದ ಪೂರೈಕೆ ಮೇಲೂ ಪರಿಣಾಮ ಬೀರುತ್ತಿದೆ. ಸಾಗರದ ಮೇಲಿನ ಪದರಗಳು ದುರ್ಬಲಗೊಳ್ಳುವುದರಿಂದ ಅವು ವಾತಾವರಣದಲ್ಲಿನ ಇಂಗಾಲದ ಡೈಕ್ಸೈಡ್‌ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚುತ್ತದೆ.

    ವಿಜ್ಞಾನಿಗಳ ವಾಸ ಹೇಗೆ?: ಇಲ್ಲಿನ ತಾಪಮಾನವು ಕನಿಷ್ಠ -98 ಡಿಗ್ರಿ ಸೆಲ್ಸಿಯಸ್‌ ಇರುವುದರಿಂದ ಇಲ್ಲಿ ಮನಷ್ಯ ವಾಸ ಮಾಡಲು ಯೋಗ್ಯವಾದ ನಗರಗಳು, ಗ್ರಾಮಗಳು, ಮನೆಗಳು ಇಲ್ಲ. ಅಲ್ಲದೇ ಕೈಗಾರಿಕೆಗಳು ಕೂಡ ಸ್ಥಾಪನೆಗೊಂಡಿಲ್ಲ. ಇಲ್ಲಿ ಸುಮಾರು 4 ಸಾವಿರ ಜನರು ವಾಸಿಸುತ್ತಿದ್ದಾರೆ. ಇಷ್ಟು ಜನರಲ್ಲಿ ಹೆಚ್ಚಿನವು ವಿಜ್ಞಾನಿಗಳು, ಸಂಶೋಧಕರು ಅಥವಾ ಪ್ರವಾಸಿಗರೇ ಆಗಿರುತ್ತಾರೆ.

    ಆಯಾ ರಾಷ್ಟ್ರಗಳು ನಿರ್ಮಿಸಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿಗಳು ತಂಗುತ್ತಾರೆ. ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ಯಾರಿಗೂ ದೀರ್ಘಕಾಲ ಉಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿ ವಾಸವಿರುವ ವಿಜ್ಞಾನಿಗಳು, ಸಂಶೋಧಕರನ್ನು ಕರೆದೊಯ್ಯಲು ಮತ್ತು ಬಿಡಲು ವರ್ಷಕ್ಕೊಮ್ಮೆ ಅಥವಾ 15 ತಿಂಗಳಿಗೊಮ್ಮೆ ಹಡಗುಗಳು ಬರುತ್ತವೆ. ಹವಾಮಾನಶಾಸ್ತ್ರಜ್ಞ ಗಫಿಕಿನ್‌ ಎಂಬವರು ಅಂಟಾರ್ಟಿಕಾದ ಬ್ರಿಟಿಷ್‌ ಸಂಶೋಧನಾ ಕೇಂದ್ರದಲ್ಲಿ ಬರೋಬ್ಬರಿ 2 ವರ್ಷ ಇಲ್ಲಿ ವಾಸವಿದ್ದರು. ಅವರ ಪ್ರಕಾರ, ಚಳಿಗಾಲದಲ್ಲಿಅಂಟಾರ್ಟಿಕಾ ಪೂರ್ತಿ ಕತ್ತಲೆಯಾಗಿರುತ್ತದೆ. ಹಲವು ವರ್ಷಗಳ ಹಿಂದೆ ಇಲ್ಲಿ ವಾಸವಿದ್ದ ವಿಜ್ಞಾನಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಆದರೆ ಮಾರಣಾಂತಿಕ ವೈರಸ್‌, ಬ್ಯಾಕ್ಟೀರಿಯಾಗಳ ಭಯದಿಂದ ಸದ್ಯ ನಿಲ್ಲಿಸಿದ್ದಾರೆ. ಅಲ್ಲದೇ ಹೊರಗೆ ತೆರೆದಿಟ್ಟ ಆಹಾರ, ತರಕಾರಿಗಳು ಬೇಗನೆ ಕೊಳೆತು ಹೋಗುತ್ತವೆ. ಹೀಗಾಗಿ ಪ್ಯಾಕ್‌ ಆಗಿರುವ ಆಹಾರಗಳೇ ಇಲ್ಲಿನವರಿಗೆ ಆಧಾರವಾಗಿರುತ್ತದೆ.

    ಬಾಹ್ಯಾಕಾಶ ವೀಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ: ಇಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೊಸ ಜೀವಿಗಳನ್ನು ಕಂಡುಹಿಡಿಯಲು ವಿಜ್ಞಾನಿ ಮತ್ತು ಸಂಶೋಧಕರು ಆಗಾಗ ಪ್ರಯತ್ನಿಸುತ್ತಾರೆ. ಸಮುದ್ರದ ದೈತ್ಯ ಜೀವಿಗಳು, ಪೆಂಗ್ವಿನ್‌ ಕುಟುಂಬಗಳು, ಅದ್ಭುತ ಹಿಮನದಿಗಳು ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಭೂಮಿಯ ಹವಾಮಾನದ ಇತಿಹಾಸ, ಬದಲಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಅಷ್ಟೇ ಅಲ್ಲದೇ ವೆದರ್‌ನ ಸೂಕ್ಷ್ಮತೆಗಳನ್ನು ಕಂಡುಹಿಡಿಯಲು ರಾಷ್ಟ್ರ- ರಾಷ್ಟ್ರಗಳ ನಡುವೆ ದೊಡ್ಡ ಪೈಪೋಟಿಯೇ ಇದೆ. ಯಾಕೆಂದರೆ ಅಂಟಾರ್ಟಿಕಾದಲ್ಲಿ ಕೈಗಾರಿಕೆಗಳು ಅಥವಾ ನಗರಗಳು ಇಲ್ಲದಿರುವುದೇ ಪ್ಲಸ್ ಆಗಿದೆ. ಇಲ್ಲಿ ಯಾವುದೇ ಮಾಲಿನ್ಯವಿಲ್ಲದಿರುವುದರಿಂದಾಗಿ ನೀಲ ಆಕಾಶ ನಿರ್ಮಲವಾಗಿ ಕಾಣುತ್ತದೆ. ಇದರಿಂದಾಗಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆಗೆ ಅಂಟಾರ್ಟಿಕಾಕ್ಕಿಂತ ಉತ್ತಮ ಜಾಗ ಎಲ್ಲೂ ಸಿಗಲ್ಲ.

    ಭಾರತವು 2029 ರ ವೇಳೆಗೆ ಗುರಿ: ಒಟ್ಟಿನಲ್ಲಿ ಭಾರತವು ಈಗಾಗಲೇ ಅಂಟಾರ್ಕ್ಟಿಕಾದಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರಕ್ಕಾಗಿ ಸ್ಥಳವನ್ನು ಗುರುತಿಸಿದೆ. ಅಲ್ಲದೇ ಪ್ರಾಥಮಿಕ ಸ್ಥಳಾಕೃತಿಯ ಸಮೀಕ್ಷೆಯನ್ನು ನಿಯೋಜಿಸಿದೆ. ಹೊಸ ಭಾರತೀಯ ಸಂಶೋಧನಾ ನೆಲೆಯ ನಿರ್ಮಾಣವು ಜನವರಿ 2029 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 1989 ರಲ್ಲಿ ನಿರ್ಮಿಸಲಾದ ‘ಮೈತ್ರಿ’ ಸಂಶೋಧನಾ ಕೇಂದ್ರವು ಹಳೆಯದಾಗಿದೆ. ಹೀಗಾಗಿ ನಾವು ಅಲ್ಲಿ ಹೊಸ ನಿಲ್ದಾಣವನ್ನು ಹೊಂದಲು ಬಯಸುತ್ತೇವೆ. ನಮ್ಮ ಸಂಶೋಧನಾ ತಂಡಕ್ಕೆ ಇದು ಮುಖ್ಯವಾಗಿದೆ. ಆದ್ದರಿಂದ ನಾವು ಈ ಪ್ರಸ್ತಾವನೆಯನ್ನು ಸದಸ್ಯ ರಾಷ್ಟ್ರಗಳ ಮುಂದೆ ಚರ್ಚಿಸಿ ಅನುಮೋದನೆ ಪಡೆದಿದ್ದೇವೆ ಎಂದು ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಕಾರ್ಯದರ್ಶಿ ಎಂ ರವಿಚಂದ್ರನ್ ಹೇಳಿದ್ದಾರೆ.

  • ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ಅಂಟಾರ್ಟಿಕಾ: ಇತಿಹಾಸದಲ್ಲಿಯೇ ಮೊದಲಬಾರಿಗೆ ಏರ್ಬಸ್ ಎ340 ಹಿಮಾವೃತಗೊಂಡ ಅಂಟಾರ್ಟಿಕಾದಲ್ಲಿ ಲ್ಯಾಂಡ್ ಆಗಿದೆ.

    ನಾವು ವಿಮಾನವನ್ನು ಎಲ್ಲ ಕಡೆ ಹಾರಾಡುವುದನ್ನು ನೋಡಿದ್ದೇವೆ. ಎಂದೂ ವಿಮಾನ ಹಿಮಾವೃತಗೊಂಡ ಪ್ರದೇಶದಲ್ಲಿ ಲ್ಯಾಂಡ್ ಆಗಿರುವುದನ್ನು ನೋಡಿರಲಿಲ್ಲ. ಆದರೆ ಈಗ ಇತಂಹ ಅದ್ಭುತ ಸಾಹಸವನ್ನು ಹಾಯ್ ಫ್ಲೈ ಮಾಡಿದೆ. ಹಾಯ್ ಫ್ಲೈ ನ ಉಪಾಧ್ಯಕ್ಷ ಕ್ಯಾಪ್ಟನ್ ಕಾರ್ಲೋಸ್ ಮಿರ್ಪುರಿ ಅವರ ತಂಡ ಏರ್ಬಸ್ ಎ340 ನೊಂದಿಗೆ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‍ನಿಂದ ಹೊರಟು ಅಂಟಾರ್ಟಿಕಾದ ವುಲ್ಫ್ಸ್ ಫಾಂಗ್ ರನ್ ವೇ ಎಂದು ಕರೆಯಲ್ಪಡುವ ನೀಲಿ ಗ್ಲೇಶಿಯಲ್ ಲ್ಯಾಂಡಿಂಗ್ ಸ್ಟ್ರಿಪ್‍ನಲ್ಲಿ ಲ್ಯಾಂಡ್ ಆಗಿದೆ. ಇದನ್ನೂ ಓದಿ: ವಿದೇಶಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ಇಲ್ಲಿರುವ ವಿಶೇಷ ಸಂಗತಿ ಎಂದರೆ, ಅಂಟಾರ್ಟಿಕಾದಲ್ಲಿನ ಸಾಹಸ ಶಿಬಿರವಾದ ವುಲ್ಫ್ಸ್ ಫಾಂಗ್ ಈ ಐತಿಹಾಸಿಕ ಕಾರ್ಯಾಚರಣೆಯನ್ನು ನಿರ್ವಹಿಸಲು ಹೈ ಫ್ಲೈ ಅನ್ನು ನೇಮಿಸಿಕೊಂಡಿದೆ. ಈ ಎ340 ಏರ್ಬಸ್ ಒಟ್ಟು 4630 ಕಿಲೋಮೀಟರ್ ಪ್ರಯಾಣಿಸಿತು. ತಾಂತ್ರಿಕವಾಗಿ ವಿಮಾನ ನಿಲ್ದಾಣವಾಗದಿದ್ದರೂ, ಸಿ-ಲೆವೆಲ್ ವಿಮಾನ ನಿಲ್ದಾಣವಾಗಿ ಗೊತ್ತುಪಡಿಸಲಾದ ವುಲ್ಫ್ಸ್ ಫಾಂಗ್ ಆಸ್ತಿಯಲ್ಲಿನ ನೀಲಿ-ಐಸ್ ರನ್‍ವೇಯಲ್ಲಿ ಏರ್ಬಸ್ ಅನ್ನು ಇಳಿಸಲಾಯಿತು.

    ಪೈಲಟ್ ಕಾರ್ಲೋಸ್ ಮಿರ್ಪುರಿ ಈ ಕುರಿತು, ವಿಮಾನವು ಸುಗಮವಾಗಿ ಸಾಗಿತ್ತು. ಆದರೆ ಲ್ಯಾಂಡ್ ಮಾಡಬೇಕಾದ ವೇಳೆ ರನ್‍ವೇಯನ್ನು ಗುರುತಿಸುವುದು ಸುಲಭವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ: ಅಮೀರ್‌ಗೆ ರಾಕಿಬಾಯಿ ಯಶ್ ಉತ್ತರ

    ಈ ಐತಿಹಾಸಿಕ ವಿಮಾನವು ಅಂಟಾರ್ಟಿಕಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕು ಎಂದು ಇಷ್ಟಪಡುವ ಪ್ರಯಾಣಿಕರ ಆಸೆಯನ್ನು ನೆರವೇರಿಸುತ್ತೆ. ಆದರೆ ಅಂಟಾರ್ಟಿಕಾದಲ್ಲಿ ಯಾವುದೇ ಅಧಿಕೃತ ವಿಮಾನ ನಿಲ್ದಾಣವಿಲ್ಲದಿದ್ದರೂ 50 ಲ್ಯಾಂಡಿಂಗ್ ಸ್ಟ್ರಿಪ್‍ಗಳು ಮತ್ತು ರನ್‍ವೇಗಳಿವೆ.

  • ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಲಂಡನ್: ಜಾಗತಿಕ ತಾಪಮಾನದಿಂದಾಗಿ ಭಾರೀ ದೊಡ್ಡ ಹಿಮಬಂಡೆಯೊಂದು ಅಂಟಾರ್ಟಿಕಾದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಮಬಂಡೆಯಾಗಿರುವ ಲಾರ್ಸೆನ್ ಸಿ ಯಿಂದ ಜುಲೈ 10- 12ರ ಮಧ್ಯಭಾಗದಲ್ಲಿ ಬೇರ್ಪಟ್ಟಿದೆ.

    ಈ ಹಿಮಬಂಡೆ ಸರಿ ಸುಮಾರು 5 ಸಾವಿರ 800 ಚದರ ಕಿ.ಮೀ. ಅಷ್ಟು ದೊಡ್ಡದಾಗಿದ್ದು, ಒಂದು ಲಕ್ಷ ಕೋಟಿ ಟನ್ ತೂಕವಿದೆ. ಅಂದ್ರೆ ಬರೋಬ್ಬರಿ ನಾಲ್ಕು ದೆಹಲಿಯಷ್ಟು ದೊಡ್ಡದು. ಈ ಹಿಮಬಂಡೆ ತುಂಡಾಗಿರುವುದಿಂದ ವಿಶ್ವದಲ್ಲೇ ಭಾರೀ ಪ್ರತಿಕೂಲ ಪರಿಣಾಮವಾಗಲಿದೆ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಧ್ರುವದ ಬಳಿ ಸಂಚರಿಸುವ ಹಡಗುಗಳಿಗೆ ಗಂಭೀರ ಅಪಾಯವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

    ಭಾರತದ ಮೇಲಾಗುವ ಪರಿಣಾಮ ಏನು?
    ಭಾರತ ಪರ್ಯಾಯ ದ್ವೀಪರಾಷ್ಟ್ರ. ಮೂರು ಕಡೆ ನೀರಿನಿಂದ ತುಂಬಿದೆ. ಹೀಗಾಗಿ, ತುಂಡಾಗಿರುವ ಮಂಜುಗಡ್ಡೆ ನಿಧಾನವಾಗಿ ಕರಗಲು ಆರಂಭಿಸುತ್ತದೆ. ಆಗ ಸಮುದ್ರ ಮಟ್ಟ ಏರಿಕೆಯಾಗೋದು ಸಾಮಾನ್ಯ. ಹಾಗಾಗಿ, ಭಾರತದ ಕಡಲ ಕಿನಾರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಅರಬ್ಬಿಸಮುದ್ರದ ಮುಂಬೈ, ಹಿಂದೂ ಮಹಾಸಾಗರದ ಚೆನ್ನೈ, ಬಂಗಾಳಕೊಲ್ಲಿಯ ಕೊಲ್ಕತ್ತಾದ ಮೇಲೆ ಪರಿಣಾಮ ಆಗಲಿದೆ.

    2050ರೊಳಗೆ ಸಮುದ್ರ ಏರಿಕೆಯಾಗಲಿರುವ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದು 2100ನೇ ಇಸ್ವಿಯೊಳಗಾಗಿ 30 ರಿಂದ 100 ಸೆ.ಮೀ. ನೀರು ಏರಿಕೆಯಾಗಬಹುದು. ಕೆಲವು ಪ್ರದೇಶದಲ್ಲಿ 200 ರಿಂದ 300 ಸೆ.ಮೀ. ಸಾಗರ ಮಟ್ಟ ಏರಿಕೆಯಾಗಬಹುದು.

    ಈಗಾಗಲೇ ಸುಂದರ್‍ಬನ್ಸ್ ಹಾಗೂ ಮಜೌಲಿಯಲ್ಲಿ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಭಾರತ, ಚೀನಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಗಬಹುದು. ಪ್ರಮುಖವಾಗಿ ದಕ್ಷಿಣ ಏಷ್ಯಾ ಹಾಗೂ ಆಗ್ನೇಯಾ ಏಷ್ಯಾ ದೇಶಗಳಿಗೆ ತೊಂದರೆಯಾಗಲಿದೆ.

    ನೀರಿನ ಮಟ್ಟ ಏರಿಕೆಯಾದಲ್ಲಿ ವಾತಾವರಣದಲ್ಲಿ ಹವಾಮಾನ ವೈಪರಿತ್ಯವಾಗಿ ಮಳೆ ಮೇಲೆ ಪರಿಣಾಮ ಆಗಬಹುದು. ಇದರಿಂದಾಗಿ ಹಲವು ದೇಶಗಳಲ್ಲ ಪ್ರವಾಹ ಹೆಚ್ಚಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ನಲ್ಲಿ ಪರಿಸರವಾದಿ ಅಕ್ಷಯ್ ಹೆಬ್ಳಿಕರ್ ಮಾತನಾಡಿ, ಸದ್ಯಕ್ಕೆ ಏನೂ ಪರಿಣಾಮ ಆಗುವುದಿಲ್ಲ. 15-20 ವರ್ಷದಲ್ಲಿ ಭಾರತದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಮುದ್ರದಲ್ಲಿ ಜೀವ ವೈವಿಧ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಿಹಿ ನೀರು ಉಪ್ಪು ನೀರಿಗಳು ಸೇರುವುದರಿಂದ ಜಲಚರಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.