Tag: ಅಂಜಲಿ

  • ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ತೆಲುಗಿನ ಹೆಸರಾಂತ ನಟ ಬಾಲಕೃಷ್ಣ (Balakrishna) ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಸಿನಿಮಾ ಇವೆಂಟ್ ವೇಳೆ ನಟಿ ಜೊತೆ ದುರ್ವರ್ತನೆ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದಿಕೆಯ ಮೇಲೆ ಬಂದ ಬಾಲಕೃಷ್ಣ ನಟಿ ಅಂಜಲಿಯನ್ನು (Anjali) ತಳ್ಳಿದರು. ಕ್ಷಣ ಹೊತ್ತು ಅಂಜಲಿ ಶಾಕ್‍ ಒಳಗಾಗಿ ಆಮೇಲೆ ಸುಧಾರಿಸಿಕೊಳ್ಳುತ್ತಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆ ಶುರುವಾಗಿತ್ತು.

    ಬಾಲಕೃಷ್ಣ ವೇದಿಕೆಗೆ ಬರುವ ಮುಂಚೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದರು. ಅಲ್ಲಿ ಅವರಿಗೆ ಕುಡಿಯಲು ಮದ್ಯ ಇಡಲಾಗಿತ್ತು. ಮದ್ಯವನ್ನು ನೀರಿನೊಂದಿಗೆ ಬೆರೆಸಿದ್ದ ಬಾಟಲ್ ಪತ್ತೆಯಾಗಿತ್ತು. ಹಾಗಾಗಿ ಕುಡಿದು ಬಾಲಕೃಷ್ಣ ಅವರು ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು.

     

    ಈ ಕುರಿತಂತೆ ಸಿನಿಮಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಅವರು ಕುಡಿದಿರಲಿಲ್ಲ. ಗ್ರಾಫಿಕ್ಸ್ ಮಾಡಿ ಬಾಟಲ್ ಇಡಲಾಗಿದೆ ಎಂದಿದ್ದಾರೆ. ನಟಿ ಅಂಜಲಿ ಕೂಡ ಪ್ರತಿಕ್ರಿಯೆ ನೀಡಿ, ಬೇಕು ಅಂತ ಬಾಲಕೃಷ್ಣ ಅವರು ನನ್ನನ್ನು ತಳ್ಳಿಲ್ಲ. ಅದೊಂದು ಫನ್ನಿ ಸನ್ನಿವೇಶ ಎಂದಿದ್ದಾರೆ. ಈ ಇಬ್ಬರೂ ಬಾಲಕೃಷ್ಣ ಪರವಾಗಿಯೇ ಮಾತನಾಡಿದ್ದಾರೆ.

  • ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್‌

    ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್‌

    ಹುಬ್ಬಳ್ಳಿ: ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇಂದು ಈ‌ ರೀತಿ‌ ಕೃತ್ಯಗಳಾಗುತ್ತಿರಲಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagouda Patil Yatnal) ಅಸಮಾಧಾನ ವ್ಯಕ್ತಪಡಿಸಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಈ‌ ಹಿಂದೆ‌ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ಮಾಡಿದ ತಪ್ಪಿನಿಂದಾಗಿ‌ ಜನ ಬುದ್ದಿ ಕಲಿಸಿದ್ದಾರೆ. ಈಗಾಗಲೇ ನಮ್ಮ‌ ಪಕ್ಷಕ್ಕೂ ಜನ ಸರಿಯಾದ ಬುದ್ದಿ ಕಲಿಸಿದ್ದಾರೆ ಎಂದು ಸ್ವಪಕ್ಷದ ವಿರುದ್ಧ ಯತ್ನಾಳ್‌ ಕಿಡಿಕಾರಿದ್ದಾರೆ. ಅಲ್ಲದೇ, ಕೆ.ಜೆ.ಹಳ್ಳಿ ಡಿ.ಜೆ.‌ಹಳ್ಳಿ ‌‌ಗಲಭೆ‌ ನಡೆದಾಗಲೇ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿರಲಿಲ್ಲ. ರಾಜ್ಯದಲ್ಲಿ ಗ್ಯಾರಂಟಿ ಜಾರಿಯಾದ ನಂತರ ಎಂಎಲ್‌ಎ ಹಾಗೂ ಜಿಲ್ಲಾ ಉಸ್ತುವಾರಿಗಳಿಗೆ ಉತ್ಪನ್ನ‌ ಕಡಿಮೆಯಾಗಿದೆ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

    ಪೊಲೀಸ್ ಅಧಿಕಾರಿಗಳಿಂದ ಕೋಟಿ‌ ಕೋಟಿ‌ ಹಣ ವಸೂಲಿ ಮಾಡುತ್ತಾರೆ. ಇದರಿಂದ‌ ಗಾಂಜಾ ಅಫೀಮು ಅವ್ಯಾಹತವಾಗಿ ಮಾರಾಟವಾಗುತ್ತವೆ. ಪೊಲೀಸರ ವರ್ಗಾವಣೆ ಮಾಡಿ ದುಡ್ಡು‌ ತಿನ್ನೋದೇ ಶಾಸಕರ‌ ಕೆಲಸ ಎಂದು ಆರೋಪಿಸಿದ್ದಾರೆ.

    ಮೈಸೂರು ವಿಮಾನ‌‌ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡುವಂತೆ ಅಧಿವೇಶನದಲ್ಲಿ ಮಾತನಾಡಿದವರು ಅಬ್ಬಯ್ಯ. ಅವರಿಗೆಲ್ಲಿ ಹತ್ಯೆಯಾದವರ ಕುಟುಂಬದ ಬಗ್ಗೆ ಕಾಳಜಿ ಬರಬೇಕು? ಅವರಿಗೆ ಹಿಂದೂಗಳ‌ ಮತ ಬೇಕಾಗಿಲ್ಲ. ಅವರ ವೋಟ್‌ಬ್ಯಾಂಕ್ ಬೇರೆ ಇದೆ. ಇಲ್ಲಿನ‌ ಸ್ಥಳೀಯ ಶಾಸಕರಾಗಿ ಮೊದಲು ಬಂದು‌ ಸಾಂತ್ವನ‌ ಹೇಳುವ ಕೆಲಸ ಮಾಡಬೇಕಿತ್ತು. ಆದರೆ ಅಧಿಕಾರಿಗಳನ್ನ‌ ವರ್ಗಾವಣೆ ಮಾಡಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ‌ ಪ್ರಸಾದ್ ಅಬ್ಬಯ್ಯ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ವೈಯಕ್ತಿಕ ಕೆಲಸಗಳಿಗಾಗಿ ವಸಂತ ಬಂಗೇರ ಯಾವತ್ತೂ ನನ್ನ ಬಳಿ ಬಂದಿಲ್ಲ: ಸಿಎಂ

  • ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಹತ್ಯೆ ಪ್ರಕರಣ; ಹು-ಧಾ ಡಿಸಿಪಿ ತಲೆದಂಡ

    ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಹತ್ಯೆ ಪ್ರಕರಣ; ಹು-ಧಾ ಡಿಸಿಪಿ ತಲೆದಂಡ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹಾಗೂ ಅಂಜಲಿ (Anjali) ಹತ್ಯೆ ಪ್ರಕರಣವು ಹುಬ್ಬಳ್ಳಿಯಲ್ಲಿ (Hubballi) ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಲೋಪ ಎಸಗಿದ ಆರೋಪದಲ್ಲಿ ಹು-ಧಾ ಡಿಸಿಪಿಯನ್ನು ಅಮಾನತು ಮಾಡಲಾಗಿದೆ.

    ಐಪಿಎಸ್ ಅಧಿಕಾರಿ, ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿಗೆ ಗೃಹ ಸಚಿವರ ಭೇಟಿಗೂ ಮುನ್ನ ಅಮಾನತು ಆದೇಶ ಹೊರಬಿದ್ದಿದೆ. ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಏಪ್ರಿಲ್ 18 ರಂದು ನೇಹಾ ಹಿರೇಮಠ ಅವರ ಭೀಕರ ಹತ್ಯೆಯಾಗಿತ್ತು. ಕಾಲೇಜು ಆವರಣದಲ್ಲೇ ಫಯಾಜ್ ಎಂಬಾತ ವಿದ್ಯಾರ್ಥಿನಿ ನೇಹಾಳಿಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಇದು ರಾಜ್ಯದೆಲ್ಲೆಡೆ ಜನಾಕ್ರೋಶಕ್ಕೆ ಕಾರಣವಾಗಿತ್ತು.

    ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಜಲಿ ಎಂಬಾಕೆ ಹತ್ಯೆಯಾಗಿದೆ. ಅಂಜಲಿ ಮನೆಗೆ ನುಗ್ಗಿದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಎರಡೂ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

  • ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    – ವಿಶ್ವ ತಪ್ಪು ಮಾಡಿದ್ದಾನೆ, ಅವರಿಗೆ ಶಿಕ್ಷೆ ಆಗಬೇಕು
    – ಅವನನ್ನು ನೋಡಲು ಆಸ್ಪತ್ರೆಗೂ ನಾನು ಹೋಗಲ್ಲ

    ಹುಬ್ಬಳ್ಳಿ: ವಿಶ್ವ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಆಗಲೇಬೇಕು. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ ಎಂದು ಅಂಜಲಿ ಹತ್ಯೆ (Anjali Murder Case) ಪ್ರಕರಣದ ಆರೋಪಿ ವಿಶ್ವನ ತಾಯಿ ಶ್ವೇತ ಕಣ್ಣೀರು ಹಾಕಿದರು.

    ಹುಬ್ಬಳ್ಳಿಯಲ್ಲಿ (Hubballi) ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎಂಬಾಕೆ ಹತ್ಯೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪುತ್ರನ ಕೃತ್ಯಕ್ಕೆ ಆರೋಪಿ ತಾಯಿ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    ಪ್ರಕರಣ ಕುರಿತು ಮಾತನಾಡಿದ ಆರೋಪಿ ತಾಯಿ ಶ್ವೇತಾ, ನನ್ನ ಮಗ ಮೊದಲು ಕೆಲಸ ಮಾಡುತ್ತಿದ್ದ. ಈ ನಡುವೆ ಕೆಲಸ ಬಿಟ್ಟ. ಆ ನಂತರ ಮನೆಯಲ್ಲಿದ್ದು, ಮದ್ಯವ್ಯಸನ ಚಟಕ್ಕೆ ಬಲಿಯಾದ. ಆ ನಂತರ 6 ತಿಂಗಳು ಮನೆ ಬಿಟ್ಟು ಹೋಗಿದ್ದ ಎಂದು ಮಗನ ನಡವಳಿಕೆ ಬಗ್ಗೆ ಮಾತನಾಡಿದರು.

    ಅವನು ಆರಾಮಾಗಿ ಇದ್ದಾನೆಂದು ತಿಳಿದುಕೊಂಡಿದ್ದೆವು. ಅದರೆ ಇದೀಗ ಕೊಲೆ ಮಾಡಿರುವುದು ಗೊತ್ತಾಗಿದೆ. ಅವನು ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅದರೆ ಮಗ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಅವನಿಂದಾಗಿ ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಹೋಟೆಲಿನ ಅಡುಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನೋಡಲು ಕಿಮ್ಸ್ ಆಸ್ಪತ್ರೆಗೂ ನಾನು ಹೋಗುವುದಿಲ್ಲ ಎಂದು ನೊಂದು ನುಡಿದರು.

  • ಆರೋಪಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ- ಮೃತ ಅಂಜಲಿ ಸಹೋದರಿ ಆಕ್ರೋಶ

    ಆರೋಪಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ- ಮೃತ ಅಂಜಲಿ ಸಹೋದರಿ ಆಕ್ರೋಶ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ರಕ್ತ ಚೆಲ್ಲಿದೆ.

    ಹೌದು. ಪ್ರೀತಿ ನಿರಾಕರಿಸಿದ್ದಕ್ಕರ ಯುವತಿಯ ಮನೆಗೆ ನುಗ್ಗಿ ಯುವಕ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೆಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕು ಎಂದು ಜನ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಇತ್ತ ಅಂಜಲಿ ಸಹೋದರಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಆರೋಪಿಯನ್ನು ನಾನೇ ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ ಅಂತ ಆಕ್ರೋಶ ಹೊರಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಆರು ಹೆಣ್ಣು ಮಕ್ಕಳ ಸಾವಾಗಿದೆ. ಸಾಕಾ ನೀವು ನ್ಯಾಯ ಕೊಡಿಸೋಕೆ. ಇನ್ನೂ ಎಷ್ಟು ಬಲಿ ಬೇಕು. ಈಗ ಎರಡು ಸಾವು ಆಗಿದೆ ಇನ್ನೂ ನಾಲ್ಕು ಜನ ಸಾಯುತ್ತೀವಿ. ನಾವು ವಿಷ ತೆಗೆದುಕೊಂಡು ಸಾಯುತ್ತೇವೆ. ಹಾಗಾದ್ರೂ ನಮಗೆ ನ್ಯಾಯ ನೀಡಿ ಎಂದು ಕಿಡಿಕಾರಿದ್ದಾರೆ.

    ಅಂಜಲಿ ಮತ್ತು ನೇಹಾ ಇಬ್ಬರ ನಮಗೆ ಅಕ್ಕಂದಿರು. ಅವರ ಸಾವಿಗೆ ನ್ಯಾಯ ಬೇಕು. ಚೆನ್ನಮ್ಮ ಸರ್ಕಲ್ ನಲ್ಲಿ ನಿಲ್ಲಿಸಿ ಫಯಾಜ್ ಮತ್ತು ವಿಶ್ವನನನ್ನು ಎನ್ ಕೌಂಟರ್ ಮಾಡಬೇಕು. ಇಲ್ಲದಿದ್ದರೆ ಅವರನ್ನು ಹುಬ್ಬಳ್ಳಿ ಜನರ ಕೈಗೆ ತಂದುಕೊಡಿ ಎಂದು ಅಂಜಲಿ ಕುಟುಂಬಸ್ಥರು ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.

  • ನಿರ್ಮಾಪಕನ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ‘ರಣವಿಕ್ರಮ’ ನಟಿ

    ನಿರ್ಮಾಪಕನ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ‘ರಣವಿಕ್ರಮ’ ನಟಿ

    ನ್ನಡದ ‘ರಣವಿಕ್ರಮ’ (Ranavikrama) ನಟಿ ಅಂಜಲಿ ಮದುವೆ ಬಗ್ಗೆ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಖ್ಯಾತ ನಿರ್ಮಾಪಕನ (Producer) ಜೊತೆ ಅಂಜಲಿ ಮದುವೆ (Wedding) ಎಂದೇ ಸುದ್ದಿ ಹಬ್ಬಿತ್ತು. ಈ ಮದುವೆ ಸುದ್ದಿ ನಿಜನಾ? ಎಂಬುದರ ಬಗ್ಗೆ ನಟಿ ಉತ್ತರಿಸಿದ್ದಾರೆ. ಇದನ್ನೂ ಓದಿ:ಸಾಂಪ್ರದಾಯಿಕವಾಗಿ ನಡೆಯಿತು ‘ಹೆಬ್ಬುಲಿ’ ನಟಿಯ ಸೀಮಂತ ಶಾಸ್ತ್ರ

    ಸೋಷಿಯಲ್ ಮೀಡಿಯಾದಲ್ಲಿ ನನಗೆ ಗೊತ್ತಿಲ್ಲದೇ 4 ಬಾರಿ ಮದುವೆ ಮಾಡಿಸಿದ್ದಾರೆ. ಈಗ ನನಗೆ 5ನೇ ಬಾರಿ ಮದುವೆ ಮಾಡಿಸುತ್ತಿದ್ದಾರೆ ಎಂದು ಅಂಜಲಿ ಕಾಲೆಳೆದಿದ್ದಾರೆ. ಇದೀಗ ಹಬ್ಬಿರುವ ಸುದ್ದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವೆಲ್ಲವೂ ಸುಳ್ಳು ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಮುಂದಿನ ದಿನಗಳಲ್ಲಿ ನಾನು ಮದುವೆಯಾಗುವುದಾದರೆ, ನಾನೇ ಅಧಿಕೃತವಾಗಿ ತಿಳಿಸುತ್ತೇನೆ. ಆದರೆ ಅದಕ್ಕೆ, ಇನ್ನೂ ಸಮಯವಿದೆ. ಇದೀಗ ಹಬ್ಬಿರುವ ಈ ವದಂತಿ ಸುಳ್ಳು ಎಂದು ರಣವಿಕ್ರಮ ನಟಿ ತಿಳಿಸಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ತೆಲುಗು ನಿರ್ಮಾಪಕನ ಜೊತೆ ಅಂಜಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂದೇ ಸುದ್ದಿ ವೈರಲ್ ಆಗಿತ್ತು. ಮದುವೆ ಮಾತುಕತೆಯಾಗಿದ್ದು, ಎರಡು ಕುಟುಂಬದ ಸಮ್ಮತಿ ಕೂಡ ಸಿಕ್ಕಿದೆ. ಹಾಗಾಗಿ ಮದುವೆ ದಿನಾಂಕ ಕೂಡ ನಿಗದಿಯಾಗಿದೆ ಎಂದೇ ಸುದ್ದಿ ಹಬ್ಬಿತ್ತು. ಈ ಸುದ್ದಿ ಸ್ಪಷ್ಟನೆ ಸಿಕ್ಕಿದೆ.

    ‘ರಣವಿಕ್ರಮ’ ಚಿತ್ರದ ಬಳಿಕ ‘ಬೈರಾಗಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ (Shivarajkumar) ನಟಿ ಅಂಜಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಡಾಲಿ, ಪೃಥ್ವಿ ಅಂಬರ್ ಕೂಡ ನಟಿಸಿದ್ದರು.

  • ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ‘ರಣವಿಕ್ರಮ’ ನಟಿ- ವರ ಯಾರು?

    ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ‘ರಣವಿಕ್ರಮ’ ನಟಿ- ವರ ಯಾರು?

    ನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ‘ರಣವಿಕ್ರಮ’ (Rana Vikrama) ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ತೆಲುಗು ನಟಿ ಅಂಜಲಿ (Anjali) ಎಂಟ್ರಿ ಕೊಟ್ಟಿದ್ದರು. ಇದೀಗ ಮದುವೆಯ ಬಗ್ಗೆ ಸುದ್ದಿ ನೀಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಸದ್ದಿಲ್ಲದೇ ನಟಿ ಅಂಜಲಿ ಮದುವೆ ಮ್ಯಾಟರ್ ಹರಿದಾಡುತ್ತಿದೆ. ಈಗಾಗಲೇ ಒಂದು ಮದುವೆ ಆಗಿ ಡಿವೋರ್ಸ್ ಆಗಿರುವ ತೆಲುಗು ನಿರ್ಮಾಪಕರೊಬ್ಬರನ್ನು (Producer) ನಟಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರ ಜೊತೆ ನಟಿ ಮದುವೆ (Wedding) ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ ಎಂಬುದರ ಬಗ್ಗೆ ಅಂಜಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕಳೆದ ಕೆಲ ವರ್ಷಗಳಿಂದ ತೆಲುಗು ನಿರ್ಮಾಪಕನ ಜೊತೆ ಅಂಜಲಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗ ಮದುವೆ ಮಾತುಕತೆಯಾಗಿದ್ದು, ಎರಡು ಕುಟುಂಬದ ಸಮ್ಮತಿ ಕೂಡ ಸಿಕ್ಕಿದೆ. ಹಾಗಾಗಿ ಮದುವೆ ದಿನಾಂಕ ಕೂಡ ನಿಗದಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ:ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

    ‘ರಣವಿಕ್ರಮ’ ಚಿತ್ರದ ಬಳಿಕ ಬೈರಾಗಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ (Shivarajkumar) ನಟಿ ಅಂಜಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಡಾಲಿ, ಪೃಥ್ವಿ ಅಂಬರ್ ಕೂಡ ನಟಿಸಿದ್ದರು.

  • ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ನ್ನಡದ ರಣವಿಕ್ರಮ, ಬೈರಾಗಿ(Bhairagi), ಹೊಂಗನಸು ಚಿತ್ರಗಳ ನಾಯಕಿ ಅಂಜಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾರನ್ನ ಹೋಲಿಕೆ ಮಾಡಿದ್ದಕ್ಕೆ ಅಂಜಲಿ ಗರಂ ಆಗಿದ್ದಾರೆ. ಶ್ರೀಲೀಲಾ (Sreeleela) ವಿಚಾರಕ್ಕೆ ಅಂಜಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪುವ ಮೂಲಕ ಟಾಕ್‌ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ.

    ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ. ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆಯೊಬ್ಬರು ಮಾತು ಮುಂದುವರೆಸಿ ಶ್ರೀಲೀಲಾ (Sreeleela) ರೇಂಜ್‌ನಲ್ಲಿ ನೀವು ಯಾಕೆ ಯಶಸ್ವಿಯಾಗಲಿಲ್ಲ ಎಂದು ಮತ್ತೆ ಕೇಳಿದ್ದಾರೆ. ಸಿಟ್ಟಾದ ಅಂಜಲಿ, ನಾನು ಈ ನಂಬರ್ ಗೇಮ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತೇನೆ ಎಂದಿದ್ದಾರೆ.

    ತೆಲುಗಿನಲ್ಲಿ (Tollywood) ಸಿನಿಮಾ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ನಾನು ಖಾಲಿ ಕೂತಿಲ್ಲ. ಬೇರೆ ಭಾಷೆಗಳಲ್ಲಿಯೂ ನಟಿಸುತ್ತಿದ್ದೇನೆ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ತೆಲುಗಿನಲ್ಲಿ ನಾನು ಕಡಿಮೆ ನಟಿಸುವಂತೆ ನಿಮಗೆ ಅನ್ನಿಸಬಹುದು ಎಂದು ಹೇಳಿದ್ದಾರೆ.

  • ತಲೆಬುರುಡೆ ಒಡೆದಿತ್ತು, ಪಕ್ಕೆಲುಬು ಕಾಣಿಸ್ತಿತ್ತು- ಅಂಜಲಿ ಶವಪರೀಕ್ಷೆ ಬಳಿಕ ಆಘಾತಕಾರಿ ಮಾಹಿತಿ

    ತಲೆಬುರುಡೆ ಒಡೆದಿತ್ತು, ಪಕ್ಕೆಲುಬು ಕಾಣಿಸ್ತಿತ್ತು- ಅಂಜಲಿ ಶವಪರೀಕ್ಷೆ ಬಳಿಕ ಆಘಾತಕಾರಿ ಮಾಹಿತಿ

    ನವದೆಹಲಿ: ಹೊಸ ವರ್ಷದಂದು ದೆಹಲಿಯ (Delhi) ಸುಲ್ತಾನ್‌ಪುರಿಯಲ್ಲಿ (Sultanpuri) 20ರ ಯುವತಿಯ ಭೀಕರ ಅಪಘಾತಕ್ಕೆ (Accident) ದೇಶಾದ್ಯಂತ ಜನರು ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಪ್ರತಿದಿನ ಇನ್ನಷ್ಟು ಆಘಾತಕಾರಿ ವಿವರಗಳು ಹೊರಹೊಮ್ಮುತ್ತಲೇ ಇವೆ. ಈ ನಡುವೆ ಶವಪರೀಕ್ಷೆಯಲ್ಲಿ (Autopsy) ಆಕೆಗಾಗಿರುವ ಕ್ರೂರ ಗಾಯಗಳ ವಿವರ ಬಹಿರಂಗವಾಗಿದೆ.

    ಜನವರಿ 1 ರಂದು ಮಧ್ಯರಾತ್ರಿ ಅಂಜಲಿ ಸಿಂಗ್‌ನ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಬಳಿಕ ಅಪಘಾತದ ಭೀಕರತೆ ಘಟಿಸಿ ಹೋಗಿದೆ. ಆಕೆಯ ಕಾಲು ಕಾರಿನ ಆಕ್ಸಲ್‌ಗೆ ಸಿಲುಕಿದ್ದರಿಂದ ಆಕೆ ಕಾರಿನ ಅಡಿಯಲ್ಲಿ ಸುಮಾರು 13 ಕಿ.ಮೀ ಎಳೆಯಲ್ಪಟ್ಟಿದ್ದಳು. ಇದರಿಂದ ಅಂಜಲಿ ಭೀಕರವಾಗಿ ಸಾವನ್ನಪ್ಪಿದ್ದಳು.

    ಘಟನೆಯ ಬಳಿಕ ಅಂಜಲಿ ದೇಹ ಕಂಝವಾಲಾ ಪ್ರದೇಶದ ರಸ್ತೆ ಬದಿಯಲ್ಲಿ ಬೆತ್ತಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅನುಮಾನ ಹುಟ್ಟಿದ್ದರಿಂದ ಸೋಮವಾರ ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಆಕೆಯ ದೇಹದಲ್ಲಿ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಯಾವುದೇ ಗಾಯಗಳು ಕಂಡುಬಂದಿರಲಿಲ್ಲ. ಇದನ್ನೂ ಓದಿ: Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ

    13 ಕಿ.ಮೀ ಅಂಜಲಿ ದೇಹವನ್ನು ರಸ್ತೆಯಲ್ಲಿ ಎಳೆದಿದ್ದರಿಂದ ಆಕೆಯ ದೇಹದಲ್ಲಿ ಕನಿಷ್ಠ 40 ಬಾಹ್ಯ ಗಾಯಗಳಾಗಿದ್ದವು. ಆಕೆಯ ದೇಹದ ಚರ್ಮ ಸುಲಿದಿದ್ದರಿಂದ ಬೆನ್ನಿನ ಪಕ್ಕೆಲುಬುಗಳು ಹೊರಬೀಳುವಷ್ಟು ತೀವ್ರತೆಯ ಗಾಯಗಳಾಗಿದ್ದವು. ಆಕೆಯ ತಲೆಬುರುಡೆಯ ಬುಡ ಮುರಿತವಾಗಿತ್ತು. ಮೆದುಳಿನ ಕೆಲ ಭಾಗಗಳೂ ಕಾಣೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ. ಅವರನ್ನು ಸೋಮವಾರ 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ತುನಿಷಾ ಶರ್ಮಾ ಬಾಯ್ ಫ್ರೆಂಡ್ ಉದ್ದನೆಯ ಕೂದಲಿಗೆ ಕತ್ತರಿ

    Live Tv
    [brid partner=56869869 player=32851 video=960834 autoplay=true]

  • Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ

    Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ

    ನವದೆಹಲಿ: ಭಯಾನಕ ಹಿಟ್‌ ಆಂಡ್‌ ರನ್‌ ಪ್ರಕರಣಕ್ಕೆ(Hit and Run Case) ಸ್ಫೋಟಕ ಟ್ವಿಸ್ಟ್‌ ಸಿಕ್ಕಿದ್ದು ಮೃತಪಟ್ಟ ಅಂಜಲಿ(Anjali) ಮದ್ಯಪಾನ ಮಾಡಿ ಸ್ಕೂಟಿ ಚಲಾಯಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೋಟೆಲ್‌ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಅಂಜಲಿ ಜೊತೆ ಇದ್ದ ಸ್ನೇಹಿತೆ ನಿಧಿಯನ್ನು(Nidhi) ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆ ಹೇಗಾಯ್ತು ಎಂಬುದನ್ನು ವಿವರಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಿಧಿ, ಅಂಜಲಿ ಕುಡಿದು ಸ್ಕೂಟಿ ಓಡಿಸಲು ಹಠ ಮಾಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಮತ್ತು ನನಗೆ ಜಗಳ ನಡೆದಿತ್ತು. ನನಗೆ ಪ್ರಜ್ಞೆ ಇದೆ ನಾನು ಚಲಾಯಿಸುತ್ತೇನೆ ಎಂದು ಹೇಳಿದರೂ ಆಕೆ ಹಠ ಹಿಡಿದು  ಸ್ಕೂಟಿ  ಓಡಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ

    ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಒಂದು ಬದಿಗೆ ಬಿದ್ದೆ. ಸ್ನೇಹಿತೆ ಕಾರಿನ ಕೆಳಗಡೆ ಸಿಕ್ಕಿಕೊಂಡಿದ್ದಳು. ಕಾರಿನಲ್ಲಿದ್ದ ಪುರುಷರಿಗೆ ಮಹಿಳೆ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ವಿಚಾರ ತಿಳಿದಿತ್ತು. ಅಪಘಾತದ ನಂತರ ನಾನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಭಯಗೊಂಡು ಮನೆಗೆ ಹೋಗಿದ್ದೆ ಎಂದು ವಿವರಿಸಿದ್ದಾರೆ.

    ಹೋಟೆಲ್‌ ಮ್ಯಾನೇಜರ್‌ ಪ್ರತಿಕ್ರಿಯಿಸಿ ಜ.1 ನಸುಕಿನ ಜಾವ 1:30ಕ್ಕೆ ಇಬ್ಬರು ಜಗಳವಾಡುತ್ತಿದ್ದರು. ನಾನು ಇಲ್ಲಿ ಜಗಳವಾಡಬೇಡಿ ಎಂದು ಹೇಳಿದರೂ ಅವರು ಮತ್ತೆ ಜಗಳ ಮುಂದುವರಿಸಿ ಸ್ಕೂಟಿ ಹತ್ತಿ ತೆರಳಿದ್ದರು ಎಂದು ತಿಳಿಸಿದ್ದಾರೆ.

    ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ರೂಮ್‌ ಬುಕ್‌ ಮಾಡಿದ್ದ ಹುಡುಗರ ಜೊತೆ ಇಬ್ಬರು ಮಾತನಾಡುತ್ತಿದ್ದರು ಎಂದು ಹೋಟೆಲ್‌ ಮ್ಯಾನೇಜರ್‌ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಅಂಜಲಿ ಮತ್ತು ನಿಧಿ ಜನವರಿ 1 ರಂದು ಹೋಟೆಲ್‌ನಿಂದ ಹೊರಟಿದ್ದಾರೆ. ದಾರಿಯಲ್ಲಿ ಬರುತ್ತಿದ್ದಾಗ ಅವರ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅಂಜಲಿಯ ಕಾಲು ಮುಂಭಾಗದ ಆಕ್ಸಲ್‌ಗೆ ಸಿಲುಕಿಕೊಂಡಿದ್ದರಿಂದ ಕಾರು ದೇಹವನ್ನು ಸುಮಾರು 13 ಕಿ.ಮೀ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]