Tag: ಅಂಜನಾ ಶಾಜನ್

  • ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ

    ಮಿಸ್ ಕೇರಳ ಸುಂದರಿಯರ ದುರಂತ ಅಂತ್ಯ

    ತಿರುವನಂತಪುರಂ: ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಮೃತಪಟ್ಟಿದ್ದಾರೆ.

    ಮಾಜಿ ಮಿಸ್ ಕೇರಳ(Former Miss Kerala) ವಿಜೇತೆ ಆನ್ಸಿ ಕಬೀರ್(WinnerAnsi Kabeer), ರನ್ನರ್ ಅಪ್ ಅಂಜನಾ ಶಾಜನ್(Runner-up Anjana Shajan) ಮೃತರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‍ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಮಾಡೆಲಿಂಗ್ ಫೋಟೋ ಸೆಷನ್‍ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‌ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು ಮತ್ತು ತ್ರಿಶೂರ್‌ಗೆ  ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್ – ಮನೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ

    ಮಾಡೆಲಿಂಗ್ ಫೋಟೋ ಸೆಷನ್‍ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‍ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು. ಫೋಟೋಶೂಟ್ ಮುಗಿಸಿ ಮತ್ತೆ ತ್ರಿಶೂರ್‍ಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಕ್ಕರಪರಂಬು ಜಂಕ್ಷನಲ್ಲಿ ಈ ಹಿಂದೆಯೂ ಹೆಚ್ಚು ಅಪಘಾತಗಳು ನಡೆದಿವೆ. ತಡರಾತ್ರಿ ಬೈಕ್ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಬೈಕ್ ಸವಾರ ಮಾತ್ರ ಸಣ್ಣ ಪುಟ್ಟ ಗಾಯಗೊಂದಿಗೆ ಪಾವಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರನ್ನ ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಆದರೆ ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

    ಈ ದುರ್ಘಟನೆಗೆ ಮುನ್ನ ಆನ್ಸಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದಾರೆ. ಸಾವಿಗೆ ಕೊನೆಯ ಪಯಣಕ್ಕೂ ಮುನ್ನ ಮಾಜಿ ಸುಂದರಿ ಕೇರಳದ ಆನ್ಸಿ ಕಬೀರ್ ಅವರ ಮಾತು ಕೇಳಿ ಅಭಿಮಾನಿಗಳು ಮತ್ತು ಸ್ನೇಹಿತರು ಶಾಕ್ ಆಗಿದ್ದಾರೆ. ಇದು ಹೋಗಲು ಸಮಯ ಎಂದು ಆನ್ಸಿ ಕಬೀರ್ ಫೋಟೋವೊಂದರ ಜತೆ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದರು. ಆದರೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇವರಿಬ್ಬರು ಒಳ್ಳೆಯ ಸ್ನೇಹಿತರು ಆಗಿದ್ದರು. ಯಾವುದೇ ಫೋಟೋಶೂಟ್‍ಗೆ ಹೋದರೂ ಒಟ್ಟಿಗೆಯಾಗಿ ಹೋಗುತ್ತಿದ್ದರಂತೆ. ಈಗ ಸಾವಿನಲ್ಲೂ ಈ ಮಾಡೆಲ್‍ಗಳಿಬ್ಬರು ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ.