Tag: ಅಂಜನಾದ್ರಿ ದೇವಸ್ಥಾನ

  • ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    – ಅರ್ಚಕ ವಿದ್ಯಾದಾದ್ ಬಾಬಾಗೆ ಪೂಜೆಗೆ ಅವಕಾಶ

    ನವದೆಹಲಿ: ಕೊಪ್ಪಳದ (Koppala) ಅಂಜನಾದ್ರಿ ದೇವಸ್ಥಾನವನ್ನ (Anjanadri Temple) ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೇ ಅರ್ಚಕ ವಿದ್ಯಾದಾಸ್ ಬಾಬಾ (Vidhyadas Baba) ಅವರಿಗೆ ಪೂಜೆಗೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.

    ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಚಕ ವಿದ್ಯಾದಾಸ್ ಬಾಬಾ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿ, ಕಳೆದ 120 ವರ್ಷಗಳಿಂದ ನಮ್ಮ ಪರಿವಾರ ಅಂಜನಾದ್ರಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದೆ. 2018ರಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರ ರೀತಿಯಲ್ಲಿ ಸರ್ಕಾರ ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ವಾದ ಆಲಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಕೋರ್ಟ್, ಬಾಕಿ ಇರುವ ರಿಟ್ ಅರ್ಜಿಯಲ್ಲಿ ಹೈಕೋರ್ಟ್ ಹೊರಡಿಸಿದ 2023ರ ಮಧ್ಯಂತರ ಆದೇಶವನ್ನು ಪಾಲಿಸಲು, ಅರ್ಜಿದಾರರು(ವಿದ್ಯಾದಾಸ್ ಬಾಬಾ) ದೇವಾಲಯದ ಅರ್ಚಕರಾಗಿ ಕರ್ತವ್ಯವನ್ನು ಮುಂದುವರಿಸಲು ಮತ್ತು ದೇವಸ್ಥಾನದ ಕೋಣೆಯಲ್ಲಿ ಉಳಿಯಲು ಅನುಮತಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಅಲ್ಲದೇ ಆದೇಶ ಉಲ್ಲಂಘನೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

    ಕಿಷ್ಕಿಂಧಾ ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಅರ್ಚಕ ವಿದ್ಯಾದಾಸ್ ಬಾಬಾ ಸುಪರ್ದಿಯಲ್ಲಿ ದೇವಸ್ಥಾನ ಇತ್ತು. ಆಗ ಸರ್ಕಾರಕ್ಕೆ 1 ರೂ. ಆದಾಯವೂ ಬರುತ್ತಿರಲಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ನಡೆದ ಜಗಳ ತಾರಕಕ್ಕೇರಿತು. ಆಗ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸರ್ವೆ ಮಾಡಿಸಿ, ಸಂಪೂರ್ಣ ದೇವಸ್ಥಾನದ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಇದನ್ನೂ ಓದಿ: ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾಗಿರುವ ಘಟನೆ ತಲೆತಗ್ಗಿಸುವಂಥದ್ದು: ಪರಮೇಶ್ವರ್

    ಈ ಹಿಂದೆ ಹೈಕೋರ್ಟ್ ವಿದ್ಯಾದಾಸ್ ಬಾಬಾಗೆ ಪೂಜೆ ಮಾಡಲಷ್ಟೇ ಅವಕಾಶ ನೀಡಿದ್ದು, ಎಲ್ಲ ಆಡಳಿತವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ದೇವಸ್ಥಾನದ ಮೇಲೆ ಹಕ್ಕು ಸಾಧಿಸಲು ಸುತ್ತಲಿನ ಗ್ರಾಮದ ಸದಸ್ಯರನ್ನು ಒಳಗೊಂಡ ಟ್ರಸ್ಟ್, ವಿದ್ಯಾದಾಸ ಬಾಬಾ ಮತ್ತು ಜಿಲ್ಲಾಡಳಿತದ ಮಧ್ಯೆ ನಿತ್ಯ ಮುಸುಕಿನ ಗುದ್ದಾಟ ನಡೆದಿದೆ. ಇದನ್ನೂ ಓದಿ: ಅಪಘಾತವಾಗಿದ್ದ ಕಾರು ತೆರವು ಮಾಡ್ತಿದ್ದವರ ಮೇಲೆ ಹರಿದ ಟ್ರಕ್ – ಆರು ಮಂದಿ ಸಾವು

    ಸರ್ಕಾರದ ನಿರ್ಧಾರದ ವಿರುದ್ಧ ವಿದ್ಯಾದಾಸ್ ಬಾಬಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಸದ್ಯ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದನ್ವಯ ಅರ್ಚಕ ವಿದ್ಯಾದಾಸ್ ಬಾಬಾ ಅವರಿಗೆ ಪೂಜೆಗೆ ಅವಕಾಶ ನೀಡಿದೆ.

  • ಅಂಜನಾದ್ರಿ ದೇವಸ್ಥಾನದ ಹುಂಡಿ ಹಣ ಎಣಿಕೆ- 17 ಲಕ್ಷ ರೂ. ಸಂಗ್ರಹ

    ಅಂಜನಾದ್ರಿ ದೇವಸ್ಥಾನದ ಹುಂಡಿ ಹಣ ಎಣಿಕೆ- 17 ಲಕ್ಷ ರೂ. ಸಂಗ್ರಹ

    ಕೊಪ್ಪಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆಯನ್ನು ಇಂದು ಮಾಡಲಾಗಿದ್ದು, 17 ಲಕ್ಷ ರೂ. ಸಂಗ್ರಹವಾಗಿದೆ.

    ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹುಂಡಿ ಹಣ ಎಣಿಕೆಯನ್ನು ಮಾಡಲಾಗಿದೆ. ಒಟ್ಟು 31 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಒಟ್ಟು 17,98,935 ರೂ. ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ ಹುಂಡಿಯಲ್ಲಿ 5 ವಿದೇಶಿ ನಾಣ್ಯಗಳು ಸಹ ದೊರೆತಿವೆ.

    ಈ ಸಂರ್ಭದಲ್ಲಿ ತಹಶೀಲ್ದಾರರಾದ ವಿ.ಎಚ್.ಹೊರಪೇಟೆ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದೇವೆ. ಕಾನೂನಿನ ಅಡಿಯಲ್ಲಿ ಸಿಸಿ ಕ್ಯಾಮೆರಾ ಚಿತ್ರೀಕರಣ ಮಾಡಿ, ತಾಲೂಕು ಆಡಳಿತದ ಸಿಬ್ಬಂದಿ ಬಳಕೆ ಮಾಡಿಕೊಂಡು ಹುಂಡಿ ಹಣ ಎಣಿಕೆಯನ್ನು ಮಾಡಲಾಗಿದೆ ಎಂದರು. ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

    31 ದಿನಗಳ ಅವಧಿಯಲ್ಲಿ 17 ಲಕ್ಷ ರೂ. ಹಣ ಸಂಗ್ರಹವಾಗಿದೆ. ಕಳೆದ ಬಾರಿ ನವೆಂಬರ್ 30 ರಂದು 23 ಲಕ್ಷ ರೂ. ಹುಂಡಿಯಲ್ಲಿ ಸಂಗ್ರಹವಾಗಿತ್ತು ಎಂದು ಹೇಳಿದರು.

    ಶಿರಸ್ತೇದಾರರಾದ ಅನಂತಜೋಷಿ, ರವಿಕುಮಾರ್, ಕಂದಾಯ ನಿರೀಕ್ಷಕರಾದ ಮಂಜುನಾಥ್ ಹಿರೇಮಠ, ಕಂದಾಯ ಇಲಾಖೆ ಸಿಬ್ಬಂದಿಗಳಾದ ಶ್ವೇತಾ, ಶ್ರೀಕಂಠ, ಅನಿತಾ, ಇಂದಿರಾ, ಅನ್ನಪೂರ್ಣ,ಪೂಜಾ, ಕಾವ್ಯ, ಸುರೇಶ್, ಅಭಿಷೇಕ್ ಹಾಗೂ ಇತರರು ಇದ್ದರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ದಿನ, ರಾಷ್ಟ್ರ ಲಸಿಕೆಯ ಅಭಾವ ಎದುರಿಸುತ್ತಿದೆ: ರಾಹುಲ್ ಗಾಂಧಿ