Tag: ಅಂಜನಾದ್ರಿ

  • ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

    ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

    ಕೊಪ್ಪಳ: ಶ್ರಾವಣ ಕೊನೆಯ ಶನಿವಾರದ ಹಿನ್ನೆಲೆ ಹನುಮನ ಭಕ್ತರ ಸಾಗರವೇ ಅಂಜನಾದ್ರಿಗೆ (Anjanadri) ಹರಿದುಬಂದಿದೆ. ಈ ವೇಳೆ ದೇವಸ್ಥಾನದ ಆವರಣದಲ್ಲಿ ನೂಕುನಗ್ಗಲು ಉಂಟಾಗಿತ್ತು.

    ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಸಮೀಪ ಇರುವ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬಂದಿತ್ತು.ಇದನ್ನೂ ಓದಿ: ನಂದ-ಗೋಕುಲದಲ್ಲಿ ಧಾರಾವಾಹಿಯಲ್ಲಿ ಹೊಸ ಪ್ರಯತ್ನ

    ಶ್ರಾವಣದ ಕೊನೆಯ ಶನಿವಾರ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿ ದೇವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಶ್ರೀರಾಮನಾಮ ಪಠಣ, ಹನುಮಾನ್ ಚಾಲಿಸ್ ಪಠಣ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳು ಜರುಗಿದವು. ಸ್ಥಳೀಯ ಭಕ್ತರು ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಗದಗ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

    ಸಂಚಾರ ದಟ್ಟಣೆ:
    ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಂಜನಾದ್ರಿ ಬೆಟ್ಟದ ಕೆಳಗಡೆಯ ಪಾರ್ಕಿಂಗ್ ಜಾಗ ಭರ್ತಿಯಾಗಿ ರಸ್ತೆಯ ಅಕ್ಕ ಪಕ್ಕದಲ್ಲಿಯೇ ಭಕ್ತರು ವಾಹನಗಳನ್ನು ಪಾರ್ಕಿಂಗ್ ಮಾಡಿಕೊಂಡು ದೇವರ ದರ್ಶನಕ್ಕೆ ಹೋಗಿದ್ದರು. ಹಾಗಾಗಿ ಗಂಗಾವತಿಯಿಂದ ಅಂಜನಾದ್ರಿ ಬೆಟ್ಟದ ಮಾರ್ಗವಾಗಿ ಹುಲಿಗಿಗೆ ಹೋಗುವ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಯಿತು. ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಭಕ್ತರು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದನ್ನೂ ಓದಿ: ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

  • ಅಂಜನಾದ್ರಿಯಲ್ಲಿ ಮತ್ತೆ ವಿವಾದ – ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

    ಅಂಜನಾದ್ರಿಯಲ್ಲಿ ಮತ್ತೆ ವಿವಾದ – ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

    ಕೊಪ್ಪಳ: ಜಿಲ್ಲೆಯ ಅಂಜನಾದ್ರಿಯಲ್ಲಿ (Anjanadri) ಮತ್ತೆ ಪೂಜೆ ವಿವಾದ ಶುರುವಾಗಿದೆ. ಆಂಜನೇಯ ಸ್ವಾಮಿ (Anjaneya Swamy) ದರ್ಶನಕ್ಕೆ ಬಂದ ನೂತನ ಡಿಸಿ ಸುರೇಶ್ (DC Suresh) ಅವರು ಹೊರಗಿನ ಅರ್ಚಕನಿಂದ ಪೂಜೆ ಮಾಡಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    ಕೊಪ್ಪಳ ನೂತನ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಮೊದಲ ಬಾರಿಗೆ ಅಂಜನಾದ್ರಿಗೆ ಭೇಟಿ ನೀಡಿದ್ದು, ಈ ವೇಳೆ ಆಂಜನೇಯ ಸ್ವಾಮಿ ದರ್ಶನ ಮಾಡುವಾಗ ಹೊರಗಿನಿಂದ ಅರ್ಚಕನನ್ನು ಕರೆತಂದು ಪೂಜೆ ನೆರವೇರಿಸಿದ್ದಾರೆ. ಸೌಜನ್ಯಕ್ಕಾದರೂ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾರನ್ನು ಮಾತನಾಡಿಸಬೇಕಿತ್ತು. ಆದರೆ ಮಾತಾಡಿಸದೇ ಹಾಗೇ ಹೋಗಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆ ಆಂಜನೇಯಸ್ವಾಮಿ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

    ಸುಪ್ರೀಂ ಕೋರ್ಟ್ ವಿದ್ಯಾದಾಸ ಬಾಬಾ ಅವರಿಗೆ ಪೂಜೆಯ ಹಕ್ಕು ನೀಡಿದೆ. ಆದರೆ, ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಬಾಬಾಗೆ ಕಿರುಕುಳ ನೀಡುತ್ತಾ ಧಾರ್ಮಿಕ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈಗ ಡಿಸಿ ಕೂಡ ಇದೇ ವರ್ತನೆ ತೋರಿದ್ದಾರೆ.

    ಪೂಜಾ ಕಾರ್ಯಗಳ ಚಿತ್ರೀಕರಣದ ವೇಳೆಯೂ ಆಡಳಿತ ಅಧಿಕಾರಿ ಎಂ.ಹೆಚ್.ಪ್ರಕಾಶರಾವ್ ವಿದ್ಯಾದಾಸ ಬಾಬಾರನ್ನು ತಡೆದಿದ್ದಾರೆ. ಇಷ್ಟೆಲ್ಲಾ ಆದರೂ ಡಿಸಿ ಸುರೇಶ್ ಮಾತ್ರ ನನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ದೇವರ ದರ್ಶನ ಪಡೆದು ಹೋಗಿದ್ದಾರೆ. ಭಕ್ತರಿಗೆ ಮಂಗಳಾರತಿ ನಿಷೇಧಿಸಿರುವ ಜಿಲ್ಲಾಡಳಿತ ಅಧಿಕಾರಿಗಳಿಗೆ ಮಾತ್ರ ಮಂಗಳಾರತಿ, ವಿಶೇಷ ಅರ್ಚಕರ ಸೌಲಭ್ಯ ಕಲ್ಪಿಸುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

  • ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಕೊಪ್ಪಳ: ಅಂಜನಾದ್ರಿಯಿಂದ (Anjanadri) ಅಯೋಧ್ಯೆಗೆ (Ayodhya) ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ, ಪ್ರಸ್ತಾವನೆ ತೆಗೆದುಕೊಂಡಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ (V Somanna) ಹೇಳಿದರು.

    ಕೊಪ್ಪಳ (Koppal) ನಗರದಲ್ಲಿರುವ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಬಳಿಕ ಕುಷ್ಟಗಿ (Kushtagi) ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು.ಇದನ್ನೂ ಓದಿ: ತವರು ಸೇರಿದ್ದ ಪತ್ನಿಯನ್ನು ಹಾಡಹಗಲೇ ಅಪಹರಿಸಿದ ಪತಿ!

    ಉದ್ಘಾಟಿಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳಲಾಗಿದೆ. ಕೊಪ್ಪಳ ಗಂಗಾವತಿ ಹಾಗೂ ಮುನಿರಾಬಾದ್ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ 13 ಕೋಟಿ ರೂ. ಹಣವನ್ನ ನೀಡಿದೆ. ಅದರ ಹೊರತಾಗಿ ಉಳಿದ ಹಣವನ್ನ ಕೇಂದ್ರ ಸರ್ಕಾರ ನೀಡಿದೆ. ಮೇಲ್ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಇನ್ನೂ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಯೋಜನೆಗೆ ಪ್ರಸ್ತಾವನೆ ತೆಗೆದುಕೊಂಡಿದ್ದೇನೆ, ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಬಳಿಕ ಅದನ್ನ ಪರೀಶಿಲನೆ ಮಾಡುತ್ತೇನೆ ಎಂದು ಹೇಳಿದರು.

    ಅಮೃತ ಯೋಜನೆಯಲ್ಲಿ ರಾಜ್ಯದ 61 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಗದಗ-ವಾಡಿ ಹೊಸ ಲೈನ್ ಕಾಮಗಾರಿ ಆದಷ್ಟು ಬೇಗನೆ ಮುಗಿಸುತ್ತೇವೆ. ಮೇಲ್ಸೇತುವೆಗೆ ವ್ಯಕ್ತಿ ಹೆಸರು ಇಡುವ ನಿಯಮಗಳಿವೆ. ಅವೆಲ್ಲವುಗಳನ್ನು ಪಾಲನೆ ಮಾಡಬೇಕು. ರೈಲ್ವೆಯ ಟಿಕೆಟ್ ದರ ಶೇ.56ರಷ್ಟು ಕಡಿಮೆಯಿದೆ. ಗೂಡ್ಸ್ ರೈಲುಗಳ ಆದಾಯದಿಂದ ಟಿಕೆಟ್ ದರ ಹೊಂದಾಣಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ಕೇಂದ್ರ ಸಚಿವ ಅಮಿತ್‌ ಶಾ

     

  • ಅಂಜನಾದ್ರಿಯ ಹುಂಡಿಯಲ್ಲಿ 22 ದಿನಗಳಲ್ಲಿ 27 ಲಕ್ಷ ಸಂಗ್ರಹ

    ಅಂಜನಾದ್ರಿಯ ಹುಂಡಿಯಲ್ಲಿ 22 ದಿನಗಳಲ್ಲಿ 27 ಲಕ್ಷ ಸಂಗ್ರಹ

    ಕೊಪ್ಪಳ: ರಾಮಾಯಣ (Ramayana) ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಬೆಟ್ಟದ (Anjanadri Hills) ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಹಣವನ್ನು ಗಂಗಾವತಿ ತಾಲೂಕು ಆಡಳಿತದ ವತಿಯಿಂದ ಎಣಿಕೆ ಮಾಡಲಾಯಿತು.

    ತಹಶೀಲ್ದಾರ್ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಸಿಸಿ ಕ್ಯಾಮೇರಾ, ಪೊಲೀಸ್ ಬಂದೋಬಸ್ತ್ ನಲ್ಲಿ ಹಣ ಎಣಿಕೆ ಮಾಡಲಾಯಿತು. ಒಟ್ಟು 22 ದಿನಗಳ ಅವಧಿಗೆ ಅಂದರೆ 2023ರ ಡಿಸೆಂಬರ್‌ 14 ರಿಂದ 2024ರ ಜನವರಿ 5 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂಪಾಯಿಗಳು ಸಂಗ್ರಹವಾಗಿವೆ.

    ನೇಪಾಳ ದೇಶದ ಎರಡು ವಿದೇಶಿ ನೋಟುಗಳು, 3 ವಿದೇಶಿ ನಾಣ್ಯಗಳು ದೊರೆತಿವೆ. ಗ್ರೇಡ್ 2 ತಹಶೀಲ್ದಾರ್ ಮಹಾಂತ್ ಗೌಡ ಪಾಟೀಲ್, ಶಿರಸ್ತೇದಾರ ಮೈಬೂಬ ಅಲಿ, ಕೃಷ್ಣವೇಣಿ, ನರ್ಮದಾ ಬಾಯಿ, ಕಂದಾಯ ನಿರೀಕ್ಷರಾದ ಮಂಜುನಾಥ್ ಹಿರೇವ್ಮಠ, ಮಹೇಶ್ ದಲಾಲ್ ಹಾಗೂ ತಹ‌ಶೀಲ್ದಾರ್ ಕಚೇರಿ ಸಿಬ್ಬಂದಿ‌ ಇದ್ದರು. ಇದನ್ನೂ ಓದಿ: ಅಂಬೇಡ್ಕರ್ ತತ್ವಗಳನ್ನ ಒಪ್ಪುವ ಯಾರೊಬ್ಬರೂ ನನ್ನ ಹೇಳಿಕೆ ತಪ್ಪು ಅನ್ನಲ್ಲ: ಯತೀಂದ್ರ ಸಮರ್ಥನೆ

  • ಅಂಜನಾದ್ರಿಗೆ ರಾಜ್ಯಪಾಲರ ಭೇಟಿ

    ಅಂಜನಾದ್ರಿಗೆ ರಾಜ್ಯಪಾಲರ ಭೇಟಿ

    ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರ ಭಾಗವಾಗಿ ಇದೀಗ ಅಂಜನಾದ್ರಿಗೆ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಭೇಟಿ ನೀಡಿದರು.

    ರಾಜ್ಯಪಾಲರಿಂದ ವಿಶೇಷ ಪೂಜೆ: ನಿನ್ನೆ ಹಂಪಿ ಕನ್ನಡ ವಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲರು ಇಂದು ಬೆಳಗ್ಗೆ 7.40ಕ್ಕೆ ಅಂಜನಾದ್ರಿ (Anjanadri) ಗೆ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟ ಏರಲು ಸಾಧ್ಯವಾಗದ ಕಾರಣ ಜಿಲ್ಲಾ ಆಡಳಿತ ಅಂಜನಾದ್ರಿ ಬೆಟ್ಟದ ಕೆಳಗಡೆ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲು ಪೂರ್ಣ ಕುಂಭದ ಮೂಲಕ ಅರ್ಚಕರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ – ನಾನು ಸಿಎಂ ಆಗ್ಬೋದು ಅಂದ ಪ್ರತಿಭಾ ಸಿಂಗ್

    ರಾಜ್ಯಪಾಲರ ಆಗಮನದ ಮುನ್ನ ಹೈಡ್ರಾಮಾ: ರಾಜ್ಯಪಾಲರು ಅಂಜನಾದ್ರಿ ಭೇಟಿ 7.40ಕ್ಕೆ ನಿಗದಿಯಾಗಿತ್ತು. ಇದಕ್ಕೂ ಅರ್ಧಗಂಟೆ ಪೂರ್ವದಲ್ಲಿ ಈ ಮುಂಚೆ ಅಂಜನಾದ್ರಿಯ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ನಡುವೆ ಹೈಡ್ರಾಮಾ ನಡೆಯಿತು. ವಿದ್ಯಾದಾಸ್ ಬಾಬಾ ಗೆ ಜಿಲ್ಲಾ ಆಡಳಿತ ಅಂಜನಾದ್ರಿಯಲ್ಲಿನ ಆಂಜನೇಯನಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂಜೆ ಮಾಡಲು ಅವಕಾಶ ನೀಡಿದೆ. ಇದನ್ನೇ ಇಟ್ಟುಕೊಂಡು ವಿದ್ಯಾದಾಸ್ ಬಾಬಾ ರಾಜ್ಯಪಾಲರು ಪೂಜೆ ಸಲ್ಲಿಸುವ ಕೆಳ ಭಾಗಕ್ಕೆ ಬಂದು ನಾನು ಪೂಜೆ ಮಾಡುತ್ತೇನೆಂದು ಹೇಳಿದ್ದಾನೆ. ಆದರೆ ಇದಕ್ಕೆ ಜಿಲ್ಲಾ ಆಡಳಿತ ಒಪ್ಪಿಲ್ಲ. ಹೀಗಾಗಿ ವಿದ್ಯಾದಾಸ್ ಬಾಬಾ ಗಲಾಟೆ ಮಾಡಲು ಆರಂಭ ಮಾಡಿದ. ಈ ವೇಳೆ ಪೊಲೀಸರು ವಿದ್ಯಾದಾಸ್ ಬಾಬಾನನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ ಕೊನೆ ಗಳಿಗೆಯಲ್ಲಿ ವಿದ್ಯಾದಾಸ್ ಬಾಬಾ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿದ್ದರಿಂದ ಪ್ರಕರಣ ಸುಖಾಂತ್ಯವಾಯಿತು.

    ಅಂಜನಾದ್ರಿ ಬೆಟ್ಟ ಏರಿದ ಮುಸ್ಲಿಂ ಮಹಿಳೆಯರು: ಇತ್ತೀಚೆಗಷ್ಟೆ ಅಂಜನಾದ್ರಿಯಲ್ಲಿ ಧರ್ಮ ದಂಗಲ್ ಆರಂಭವಾಗಿತ್ತು. ಹಿಂದೂ ಧರ್ಮಿಯರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣೆ ವೇದಿಕೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಾದ ಒಂದು ವಾರದ ಆಗುವಷ್ಟರಲ್ಲೇ ಇದೀಗ ಮುಸ್ಲಿಂ ಧರ್ಮದ ಮಹಿಳೆಯರು ಅಂಜನಾದ್ರಿಗೆ ಭೇಟಿ ನೀಡಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಿಳೆಯರ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು 575 ಮೆಟ್ಟಿಲುಗಳನ್ನು ಹತ್ತುವ ಮೂಲಕ ಆಂಜನೇಯನ ದರ್ಶನ ಪಡೆದುಕೊಂಡರು. ಈ ಮೂಲಕ ಮುಸ್ಲಿಂ ಮಹಿಳೆಯರು ಭಾವೈಕ್ಯತೆ ಸಾರುವ ಕಾರ್ಯ ಮಾಡಿದ್ದಾರೆ.

    ಈ ಹಿಂದಿನ ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಸಹ ಅಂಜನಾದ್ರಿಗೆ ಭೇಟಿ ನೀಡಿದ್ದರು. ಇದೀಗ ಪ್ರಸ್ತುತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಭೇಟಿ ನೀಡಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಪೂಜೆಯ ಬಳಿಕ ರಾಜ್ಯಪಾಲರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಆಂಜನೇಯನ ಫೋಟೋ ನೀಡಿ ಗೌರವಿಸಿದರು. ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ಮೂಲಕ ರಾಜ್ಯಪಾಲರ ಅಂಜನಾದ್ರಿ ಭೇಟಿಯನ್ನು ಯಶಸ್ವಿಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ ಪ್ರವಾಸೋದ್ಯಮ ಇಲಾಖೆಗೆ ಟ್ವೀಟ್‌ನಲ್ಲೇ ಉತ್ತರಿಸುತ್ತೇವೆ: ಆನಂದ್‌ ಸಿಂಗ್‌

    ಗುಜರಾತ್‌ ಪ್ರವಾಸೋದ್ಯಮ ಇಲಾಖೆಗೆ ಟ್ವೀಟ್‌ನಲ್ಲೇ ಉತ್ತರಿಸುತ್ತೇವೆ: ಆನಂದ್‌ ಸಿಂಗ್‌

    ಕೊಪ್ಪಳ: ಟ್ವೀಟ್‌ ಮಾಡಿದವರಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

    ಪಂಪ ಸರೋವರ ಗುಜರಾತ್‌ನಲ್ಲಿದೆ ಎಂಬ ಗುಜರಾತ್‌ ಪ್ರವಾಸೋದ್ಯಮ ಇಲಾಖೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿದರೆ ಅದಕ್ಕೆ ನಾವು ಟ್ವೀಟ್‌ನಲ್ಲೇ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

    ಅಂಜನಾದ್ರಿ ಯಲ್ಲಿ ಆದಷ್ಟು ಬೇಗ ಅಭಿವೃದ್ಧಿ ಕೆಲಸ ನಡೆಯಲಿದೆ. ಬೊಮ್ಮಾಯಿ ಅವರಿಗೆ ಬೆಟ್ಟ ಹತ್ತಲು ಕಷ್ಟವಾಗುವ ಕಾರಣ ಅಂಜನಾದ್ರಿಯನ್ನು ವೈಮಾನಿಕವಾಗಿ ವೀಕ್ಷಣೆ ಮಾಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಗಾಗಿ ಏಜೆನ್ಸಿಗಳನ್ನು ಕರೆಯಲಾಗುತ್ತಿದೆ. ನಾವು ಆದಷ್ಟು ಬೇಗ ನೀಲ ನಕ್ಷೆ ತಯಾರಿಸುತ್ತೇವೆ ಎಂದು ಆನಂದ್ ಸಿಂಗ್‌ ತಿಳಿಸಿದರು. ಇದನ್ನೂ ಓದಿ: ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು: ಹೈಕೋರ್ಟ್‌

    ಟ್ವೀಟ್‌ನಲ್ಲಿ ಏನಿತ್ತು?
    ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಮಾತೆ ಶಬರಿಯನ್ನು ಭೇಟಿಯಾದ ಕಥೆಗಳಿಂದ ಆವೃತವಾಗಿರುವ ಕೆರೆ. ಶಾಂತಿಯುತ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಪಂಪಾ ಸರೋವರ ನಿಮಗಾಗಿ ಕಾಯುತ್ತಿದೆ ಎಂದು ಬರೆದು ಡ್ಯಾಂಗ್ ಜಿಲ್ಲೆಯಲ್ಲಿರುವ ಸರೋವರದ ಫೋಟೋವನ್ನು ಜುಲೈ 11 ರಂದು ಟ್ವೀಟ್‌ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಕೊಪ್ಪಳ: ಹನುಮ ಜನ್ಮಸ್ಥಳದ ಬಗ್ಗೆ ತಿಂಗಳಿಗೊಂದು ರಾಜ್ಯ ಕ್ಯಾತೆ ತೆಗೆಯುತ್ತಿದೆ. ಹನುಮಂತ ಗೋವಾದಲ್ಲಿ ಜನಿಸಿದ್ದಾನೆ ಎಂದು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಗೋವಾದ ಮಾಜಿ ಡಿಸಿಎಂ ರಮಾಕಾಂತ್ ಖಲಾಪ್ ಅವರ ಪುತ್ರ, ಇತಿಹಾಸ ಸಂಶೋಧಕ ಶ್ರೀನಿವಾಸ್ ಖಲಾಪ್ ಹೊಸ ವಾದ ಹುಟ್ಟು ಹಾಕಿದ್ದಾರೆ.

    ಕರ್ನಾಟಕದ ಕೊಪ್ಪಳದ ಅಂಜನಾದ್ರಿಯ ಕಿಷ್ಕಿಂಧೆ ಅಲ್ಲ, ಆಂಧ್ರ ಪ್ರದೇಶದ ತಿರುಮಲ ತಿರುಪತಿಯ ಆಕಾಶಗಂಗಾವೇ ಆಂಜನೇಯ ಹುಟ್ಟಿದ ಸ್ಥಳ ಅಂತ ಟಿಟಿಡಿ ವಾದಿಸಿತ್ತು. ವಾರದ ಹಿಂದಷ್ಟೇ ನಾಸಿಕ್‍ನಲ್ಲಿರುವ ಅಂಜನೇರಿ ಕೋಟೆಯೇ ಹನುಮ ಜನ್ಮಸ್ಥಳ ಅಂತ ಮಹಾರಾಷ್ಟ್ರದ ಸ್ವಾಮೀಜಿಗಳು ಧರ್ಮಸಂಸತ್ ನಡೆಸಿ, ಗಲಾಟೆಯಿಂದ ಅರ್ಧಕ್ಕೇ ಮೊಟುಕಾಗಿತ್ತು. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಇದರ ಬೆನ್ನಲ್ಲೇ ಶ್ರೀನಿವಾಸ್ ಖಲಾಪ್, ಹನುಮಂತನ ತಾಯಿ ಅಂಜನಿದೇವಿ ದ್ವೀಪವೊಂದರ ಕಡಲ ತೀರದಲ್ಲಿ ತಪಸ್ಸು ಮಾಡುತ್ತಾರೆ. ಅದಕ್ಕೆ ವರವಾಗಿ ವಾಯುದೇವ ಹನುಮನನ್ನು ಪುತ್ರನಾಗಿ ಕರುಣಿಸುತ್ತಾರೆ. ಆ ದ್ವೀಪವನ್ನು ಅಂಜನಿ ದ್ವೀಪ ಎಂದು ಕರೆಯಲಾಗಿತ್ತು. ಇದೀಗ `ಅಂಜೆದಿನ ದೀಪ’ ಎನ್ನುವ ಹೆಸರಿದೆ. ಈ ದ್ವೀಪ ಕಾರವಾರಕ್ಕೆ ಹತ್ತಿರವಿದೆಯಾದರೂ ಐತಿಹಾಸಿಕ ಹಿನ್ನೆಲೆಗಳನ್ನು ಗುರುತಿಸಿದರೆ ಇದು ಗೋವಾಕ್ಕೆ ಸೇರಿದ್ದಾಗಿದೆ ಅನ್ನೋದು ಶ್ರೀನಿವಾಸ್ ಖಲಾಪ್ ವಾದವಾಗಿದೆ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಹನುಮನಿಗೆ ಸಂಬಂಧಿಸಿದ ಹೆಸರುಳ್ಳ ಸ್ಥಳಗಳು, ಊರುಗಳಿವೆ. ಆದರೆ, ಹನುಮ ಹುಟ್ಟಿದ್ದು, ವಾನರ ಸಾಮ್ರಾಜ್ಯ ಇದ್ದಿದ್ದು ಕಿಷ್ಕಿಂಧೆ ರಾಜ್ಯದಲ್ಲಿ ಮಾತ್ರ ಅಂತ ರಾಜ್ಯದ ಇತಿಹಾಸಕಾರರು ಹೇಳುತ್ತಿದ್ದಾರೆ. ಇದನ್ನೂ ಓದಿ: ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

     

  • ಬಿಎಸ್‍ವೈ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ: ಸಿಪಿವೈ

    ಬಿಎಸ್‍ವೈ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ: ಸಿಪಿವೈ

    ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಯೋಗೇಶ್ವರ್, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವ ಟಾರ್ಗೆಟ್ ಮಾಡಲ್ಲ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ ವಿಚಾರ, ನಮ್ಮಲ್ಲಿ ಆಂತರಿಕ ಸಮಸ್ಯೆಗಳು ಇವೆ. ಹಾಗಾಗಿ ನಾಯಕರ ಮುಂದೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ ವಿನಃ ಬೇರೆ ವಿಷಯವಲ್ಲ ಎಂದರು.

    ಶಾಸಕ ಯತ್ನಾಳ್ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ವಿಚಾರವಾಗಿ, ಪ್ರವಾಸೋದ್ಯಮ ಇಲಾಖೆ ಮೂಲಕವೇ ರಾಜ್ಯದಲ್ಲಿ ನಾಲ್ಕು ಕಡೆ ತ್ರಿ ಸ್ಟಾರ್ ಹೋಟೆಲ್ ಕಟ್ಟಲು ನಿರ್ಧರಿಸಿದ್ದೇವೆ. ಹಾಗಾಗಿ ಕಲಬುರ್ಗಿಯಲ್ಲಿ ಹೋಟೆಲ್ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಸಂಬಂಧ ಭೇಟಿ ಮಾಡಿರುವೆ. ಅವರ ಕ್ಷೇತ್ರದಲ್ಲಿ ತೆರಳುವಾಗ ಭೇಟಿ ಮಾಡಿರುವೆ ಅಷ್ಟೇ ಮತ್ತೆ ಬೇರೆ ವಿಚಾರವಿಲ್ಲ. ಯತ್ನಾಳ್ ಹಾಗೂ ನಾವು ಸಮಕಾಲಿನರು ಹಾಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಮತ್ತ್ಯಾವ ವಿಚಾರವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟರೆ ಪರಿಹಾರ ನೀಡಿ – ಸುಪ್ರೀಂ ಮಹತ್ವದ ಆದೇಶ

    ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಯಾವಾಗ ಬರುತ್ತೆ ಎಂದು ನೋಡೋಣ. ಪಕ್ಷದ ಹಿರಿಯರು ಯಾವಾಗ ತೀರ್ಮಾನ ಮಾಡ್ತಾರೋ ಆವಾಗ ಬರುತ್ತದೆ ಎಂದರು. ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಮೂವರಿಂದ ಅನ್ಯಾಯವಾಗಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅವರ ದೆಹಲಿ ಭೇಟಿ ವಿಷಯವೂ ನನಗೆ ಗೊತ್ತಿಲ್ಲ. ಇಲಾಖೆ ಕಾರ್ಯಕ್ರಮದ ನಿಮಿತ ನಾನು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದೇನೆ. ಸುಮ್ಮನೆ ನನ್ನ ಭೇಟಿ ವಿಚಾರ ಬೇರೆಯದಕ್ಕೆ ತಳುಕು ಹಾಕಬೇಡಿ ಎಂದು ತಿಳಿಸಿದರು.

    ದೇವಸ್ಥಾನ ಆರಂಭವಾಗದಿದ್ದರೂ ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರದಲ್ಲಿ ನಾವು ಲಾಕ್‍ಡೌನ್ ಓಪನ್ ಆದ ಬಳಿಕ ಇಲ್ಲಿಗೆ ಬಂದಿದ್ದೇವೆ. ಜನರು ಯಾರೂ ಒಳ ಬಂದಿಲ್ಲ ನಾವು ಮಾತ್ರ ತೆರಳಿದ್ದು ಇಲಾಖೆ ಅಭಿವೃದ್ಧಿ ವಿಚಾರ ಚರ್ಚೆ ಮಾಡಲು ಬಂದಿದ್ದೇವೆ. ನಾವು ಯಾವ ನಿಯಮವನ್ನೂ ಉಲ್ಲಂಘನೆ ಮಾಡಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಸಾವಿರಾರು ಕೋಟಿ ಬೇಕಾಗಿದೆ. ಅಂಜನಾದ್ರಿ ಬೆಟ್ಟವನ್ನು ಕೇವಲ ಪ್ರವಾಸೋದ್ಯಮಯೊಂದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾಲ್ಕಾರು ಇಲಾಖೆ ಸಹಯೋಗದಲ್ಲಿ ನಾವು ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಈ ದೃಷ್ಟಿಯಿಂದ ನಾವು ಹಲವು ಸಚಿವರು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಇಲ್ಲಿ ಹಲವು ಸಾಕ್ಷಿ, ಪುರಾವೆಗಳಿವೆ. ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಸುಮ್ಮನೆ ಯಾರೋ ಹೇಳುತ್ತಾರೆ ಎಂದು ನಾವು ಸುಮ್ಮನಿರೋದಲ್ಲ. ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಹಲವು ಸಾಕ್ಷ್ಯ ಇವೆ. ಸರ್ಕಾರದ ನಿಲುವೂ ಇದೇ ಆಗಿದೆ. ಅಂಜನಾದ್ರಿ ಮಾಸ್ಟರ್ ಪ್ಲ್ಯಾನ್ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಿದೆ ಎಂದರು.

  • ಮಿರ್ಚಿ ಮಂಡಕ್ಕಿ ಸವಿದು ಖುಷಿಪಟ್ಟ ವಿಜಯೇಂದ್ರ

    ಮಿರ್ಚಿ ಮಂಡಕ್ಕಿ ಸವಿದು ಖುಷಿಪಟ್ಟ ವಿಜಯೇಂದ್ರ

    ಕೊಪ್ಪಳ: ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್ಸಾಗುತ್ತಿದ್ದಾಗ ಕೊಪ್ಪಳದಲ್ಲಿ ರಸ್ತೆ ಬದಿ ಮಿರ್ಚಿ ಮಂಡಕ್ಕಿ ಸವಿದು ಖುಷಿಪಟ್ಟಿದ್ದಾರೆ.

    ಕೊಪ್ಪಳ ತಾಲೂಕಿನ ಬುದಗುಂಪಾ ಬಳಿ ರಸ್ತೆ ಬದಿ ಹೊಟೇಲ್ ಒಂದರಲ್ಲಿ ಕುಳಿತು ವಿಜಯೇಂದ್ರ ಮಿರ್ಚಿ ಮಂಡಕ್ಕಿ ರುಚಿ ಸವಿದರು. ಈ ಸಂದರ್ಭದಲ್ಲಿ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ತಮ್ಮೇಶ್ ಗೌಡ ಜೊತೆಗಿದ್ದರು.

    ಈ ಮೊದಲು ಕೊಪ್ಪಳದ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ವಿಜಯೇಂದ್ರ, ಶ್ರೀರಾಮನಿಗೆ ಜನ್ಮನೀಡಿದ ಪುಣ್ಯಭೂಮಿ ಅಯೋಧ್ಯೆಯಾದ್ರೆ, ಹನುಮನಿಗೆ ಜನ್ಮನೀಡಿದ ಅಂಜನಾದ್ರಿಯು ದಕ್ಷಿಣ ಭಾರತದ ಅಯೋಧ್ಯೆ ಎಂದು ಹೇಳಿದರು.

    ನೂರಾರು ವರ್ಷಗಳ ಕಾಲ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅನೇಕ ಹೋರಾಟಗಳು ನಡೆದವು. ಆ ಹೋರಾಟಗಳು ಯಾವವು ಯಶಸ್ವಿಯಾಗಿರಲಿಲ್ಲ. ಆದರೆ ಇಡೀ ಜಗತ್ತೆ ಮೆಚ್ಚಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೂರಾರು ವರ್ಷಗಳ ಕನಸು ಈಡೇರುತ್ತಿದೆ. ಸ್ವಾಭಿಮಾನ ಭಾರತದ ಕನಸು ಕಂಡ ಮೋದಿಯವರು ಒಂದು ಕಡೆಯಾದ್ರೆ, ನಾಡಿನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಂಡಿರುವ ಕನಸು ಮತ್ತೊಂದೆಡೆ. ಆ ನಿಟ್ಟಿನಲ್ಲಿ ಇಬ್ಬರಿಗೂ ಏನೇ ತೊಂದರೆಗಳು ಬಂದರೂ ಅವುಗಳನ್ನು ಎದುರಿಸುವ ಶಕ್ತಿಯನ್ನು ಆ ಹನುಮಂತ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ ಎಂದರು.

    ಇತ್ತಿಚೀನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರ ಬಗ್ಗೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದಲೇ ಇಂದು ಅಲ್ಲಿ ಭವ್ಯಮಂದಿರ ನಿರ್ಮಾಣವಾಗುತ್ತಿದೆ. ಜೊತೆಗೆ ಯಾವುದೇ ಒತ್ತಾಯವಿಲ್ಲದೇ ಜನರಿಂದ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಆದರೇ ವಿರೋಧ ಪಕ್ಷದವರು ಬಾಯಿಗೆ ಬಂದಹಾಗೇ ಮಾತನಾಡುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆಗಳು ಹಾಗೂ ನಡವಳಿಕೆಗಳಿಂದಲೇ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಡ್ರೆಸ್ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷವು ಇಲ್ಲದಂತ ಸನ್ನಿವೇಶ ನಿರ್ಮಾಣವಾಗಲಿದೆ. ಮುಂದಿನ ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ರಾಜ್ಯದಲ್ಲಿ ನುಡಿದಂತೆ ನಡೆಯುವ ಎದೆಗಾರಿಕೆ ಇರುವುದು ಬಿ.ಎಸ್.ಯಡಿಯೂರಪ್ಪನವರಿಗೆ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಇದೇ ವೇಳೆ ಬಿಎಸ್‍ವೈ ಅವರ ಉತ್ತರಾಧಿಕಾರಿ ವಿಜಯೇಂದ್ರ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಪ್ರಾದೇಶಿಕ ಪಕ್ಷವಲ್ಲ, ಇದು ರಾಷ್ಟ್ರೀಯ ಪಕ್ಷ. ಪಕ್ಷಕ್ಕೆ ದುಡಿಯುವವರನ್ನು ಹಾಗೂ ಜನರ ಮನಸ್ಸನ್ನು ಯಾರು ಗೆಲ್ಲುತ್ತಾರೆ. ಯಾರಿಗೆ ಆ ಶಕ್ತಿ ಇದೆ ಎನ್ನುವುದನ್ನು ನೋಡಿ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಮೀಸಲಾತಿ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಏನೂ ಅವಕಾಶಗಳು ಇದೆ ಆ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ಉತ್ತರಿಸಿದರು.

    ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಾಡನ್ನು ಕಟ್ಟುವಲ್ಲಿ, ಪಕ್ಷವನ್ನು ಬೆಳೆಸುವಲ್ಲಿ ಬಿ.ವೈ.ವಿಜಯೇಂದ್ರ ಅವರು ಶ್ರಮಿಸುತ್ತಿದ್ದಾರೆ. ಏನೇ ಟೀಕೆ ಟಿಪ್ಪಣಿಗಳು ಬಂದರೂ ಅವರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ರಾಮ ಎಂದ ಕ್ಷಣ ಹನುಮ ನೆನಪಾಗುತ್ತಾನೆ. ಅಯೋಧ್ಯೆಯಲ್ಲಿ ರಾಮನ ಮಂದಿರ ಹೇಗೆ ಅಭಿವದ್ಧಿ ಯಾಗುತ್ತದೆಯೋ ಹಾಗೇ ಅಂಜನಾದ್ರಿಯಲ್ಲಿ ಹನುಮನ ಮಂದಿರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

  • ಅಂಜನಾದ್ರಿಗೆ ಭೇಟಿ ನೀಡಿದ ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಜಿತೇಂದ್ರ

    ಅಂಜನಾದ್ರಿಗೆ ಭೇಟಿ ನೀಡಿದ ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಜಿತೇಂದ್ರ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಜಿತೇಂದ್ರ ಕುಮಾರ್ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಅಂಜನಾದ್ರಿಗೆ ಭೇಟಿ ನೀಡುತ್ತಿದ್ದೇನೆ. ಅಂಜನಾದ್ರಿಯ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ ಹಿನ್ನೆಲೆ, ದರ್ಶನ ಪಡೆಯಲು ಬಂದಿದ್ದೇನೆ. ಅಂಜನಾದ್ರಿ ಸ್ಥಳ ತುಂಬಾ ಚೆನ್ನಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಬಳ್ಳಾರಿಯ ಜೆಎಸ್ ಡಬ್ಲ್ಯೂ ತರಬೇತಿ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿಂದ ತರಬೇತಿ ಪಡೆಯುತ್ತಿದ್ದೇನೆ. ಕಳೆದ ಫೆಬ್ರವರಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 74 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಸಿಲ್ವರ್ ಮೆಡಲ್ ಪಡೆದಿದ್ದಾರೆ.