Tag: ಅಂಚೆ ಮತದಾನ

  • ಕರ್ನಾಟಕದಲ್ಲಿ ನಾಳೆಯಿಂದ ಮತದಾನ ಆರಂಭ – ಮನೆಗೆ ಬರಲಿದೆ ಮತಗಟ್ಟೆ

    ಕರ್ನಾಟಕದಲ್ಲಿ ನಾಳೆಯಿಂದ ಮತದಾನ ಆರಂಭ – ಮನೆಗೆ ಬರಲಿದೆ ಮತಗಟ್ಟೆ

    ಬೆಂಗಳೂರು: ಏ.26 ರಂದು ಮೊದಲ ಹಂತ ನಡೆಯಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆಯಿಂದ ಹಿರಿಯ ನಾಗರಿಕರ ಮತದಾನ ನಡೆಯಲಿದೆ.

    ರಾಜ್ಯದಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ (ಎವಿಎಸ್‍ಸಿ) ಹಾಗೂ ವಿಶೇಷ ಚೇತನರಿಗೆ (40%ಕ್ಕಿಂತ ಹೆಚ್ಚು ಅಂಗವಿಲತೆ ಉಳ್ಳ, ಮತದಾರರ ಪಟ್ಟಿಯಲ್ಲಿ ಗುರುತಿಸಿರುವವರಿಗೆ) ಅಂಚೆ ಮತದಾನದ  (Postal voting) ಮೂಲಕ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬಂಧನ- NIA, ಪೊಲೀಸರಿಗೆ ಪರಮೇಶ್ವರ್‌ ಅಭಿನಂದನೆ

    ಬೆಂಗಳೂರಿನಲ್ಲಿ (Bengaluru) 85 ವರ್ಷ ಮೇಲ್ಪಟ್ಟ 95,128 ಹಾಗೂ 22,222 ವಿಶೇಷ ಚೇತನರನ್ನು ಗುರುತಿಸಲಾಗಿದೆ. ಈ ಪೈಕಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ ವಿಶೇಷ ಚೇತನರು 201 ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

    85 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸಲಾಗುತ್ತದೆ. ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗುತ್ತದೆ.

    ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತೀ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮುಂಚಿತವಾಗಿ ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುತ್ತಾರೆ. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಹೋಗುತ್ತಾರೆ. ಈ ವೇಳೆ ಮತದಾರರು ಸಿಗದಿದ್ದರೆ, ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ.

    ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ. ಇದನ್ನೂ ಓದಿ: ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

  • ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಪೋಸ್ಟಲ್ ವೋಟಿಂಗ್ ಡೀಲ್?

    ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಪೋಸ್ಟಲ್ ವೋಟಿಂಗ್ ಡೀಲ್?

    ಬಾಗಲಕೋಟೆ/ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಾದಾಮಿ ಕ್ಷೇತ್ರದಲ್ಲಿ ಅಂಚೆ ಮತದಾನದಲ್ಲಿ ಆಕ್ರಮ ನಡೆದಿರುವ ಕುರಿತು ದೂರು ಕೇಳಿ ಬಂದಿದ್ದು, ನಗರದ ಖಾಸಗಿ ಹೋಟೆಲ್ ನಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.

    ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರಿಗೆ ಇಂದು ಅಂಚೆ ಮತದಾನ ನಡೆಸಲು ಅವಕಾಶ ನೀಡಲಾಗಿತ್ತು. ಆದರೆ ಅಂಚೆ ಮತದಾನದಕ್ಕೆ ನೀಡಲಾಗಿದ್ದ ಪೋಸ್ಟಲ್ ಗಳು ನಗರದ ಆನಂದ್ ಡಿಲಕ್ಸ್ ಲಾಡ್ಜ್ ನಲ್ಲಿ ಕಂಡು ಬಂದಿತ್ತು.

    ಪೋಸ್ಟಲ್ ಹೋಟೆಲ್ ನಲ್ಲಿ ಪತ್ತೆಯಾದ ಕುರಿತು ವರದಿ ಮಾಡಲು ತೆರಳಿದ ಮಾಧ್ಯಮವರನ್ನು ಹಲ್ಲೆ ನಡೆಸಲಾಗಿದೆ. ಬಳಿಕ ಸ್ಥಳದಲ್ಲಿ ಕೆಲ ಕಾರ್ಯಕರ್ತರು ಅಲ್ಲಿಂದ ಪರಾರಿಯಾಗಿದ್ದಾರೆ. ಹೋಟೆಲ್ ನಲ್ಲಿ ಪತ್ತೆಯಾದ ಪೋಸ್ಟಲ್ ಪತ್ರಗಳು ಬಿಜೆಪಿಗೆ ಮತ ಬದಲಾವಣೆ ಮಾಡಲಾಗುತ್ತದೆ ಎನ್ನುವ ಆರೋಪ ಕೇಳಿ ಬಂದಿದೆ. ಸುಮಾರು ಒಂದು ಸಾವಿರಕ್ಕೂ ಪೋಸ್ಟಲ್ ವೋಟಿಂಗ್ ಪತ್ರಗಳು ಹೆಚ್ಚು ಸ್ಥಳದಲ್ಲಿ ಪತ್ತೆಯಾಗಿದೆ.

    ಮಾಧ್ಯಮಗಳ ವರದಿಯ ಬಳಿಕ ಎಚ್ಚೆತ್ತ ತಾಲೂಕು ತಹಶೀಲ್ದಾರ್ ಹಾಗೂ ಎಸ್‍ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕು ಕಚೇರಿಯಲ್ಲಿ ನಡೆಯುವ ಮತದಾನದ ಪತ್ರಗಳು ಹೋಟೆಲ್ ರೂಮ್ ನಲ್ಲಿ ಪತ್ತೆಯಾಗಿರುವುದು ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪೋಸ್ಟಲ್ ಬ್ಯಾಲೆಟ್ ಡೀಲಿಂಗ್ ನಡೆದಿಂದೆ ಎನ್ನುವ ಆರೋಪ ಕೇಳಿ ಬಂದಿದೆ. ಚುನಾವಣೆಯ ಕರ್ತವ್ಯದಲ್ಲಿ ಹಾಜರಾಗಿದ್ದ 400ಕ್ಕೂ ಹೆಚ್ಚು ಮಂದಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಇದುವರೆಗೂ ಅಂಚೆ ಮತ ತಲುಪದಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಇಂದು ಜಿಲ್ಲೆಯ ಚುನಾವಾಣಾಧಿಕಾರಿಗಳ ಕಚೇರಿ ಎದುರು ಅಂಚೆ ಮತ ನೀಡುವಂತೆ ಪಟ್ಟು ಹಿಡಿದು ನೂರಾರು ಮಂದಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪರವಾಗಿ ಬಂದ ಜೆಡಿಎಸ್ ಅಭ್ಯರ್ಥಿ ಹಾಗೂ ಇತರೆ ಜೆಡಿಎಸ್ ಮುಖಂಡರು, ಚುನಾವಾಣಾಧಿಕಾರಿ ಬಿ.ಶಿವಸ್ವಾಮಿ ಜೊತೆ ಮಾತಿನ ಚಕಮಕಿ ನಡೆಸಿ ವಾಗ್ವಾದ ನಡೆಸಿದರು.

    ಈ ಕುರಿತು ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಶಿವಸ್ವಾಮಿ, ಅಂಚೆಮತಗಳನ್ನ ಅಂಚೆ ಕಚೇರಿ ಮೂಲಕ ಈಗಾಗಲೇ ಕಳುಹಿಸಲಾಗಿದೆ ಆದರೆ ಅವು ಇನ್ನು ತಲುಪಿಲ್ಲ. ಅದ್ದರಿಂದ ತಾವು ಈ ವೇಳೆ ಏನು ಮಾಡಲು ಸಾಧ್ಯವಿಲ್ಲ ಎಂದು ಸಮಜಾಯಿಸಿ ನೀಡಿದ್ದರು.

    ಎಲ್ಲಾ ಕ್ಷೇತ್ರಗಳಲ್ಲೂ ಪೋಸ್ಟಲ್ ಬ್ಯಾಲೆಟ್ ಗಳನ್ನ ನೇರವಾಗಿ ಅರ್ಹ ಮತದಾರರ ಕೈಗೆ ನೀಡಲಾಗಿದೆ. ಆದರೆ ಚಿಕ್ಕಬಳ್ಳಾಪುರ ಚುನಾವಣಾಧಿಕಾರಿ ಮಾತ್ರ ನೇರವಾಗಿ ಕೈಗೆ ನೀಡುವ ಬದಲು, ಅಂಚೆ ಕಚೇರಿ ಮೂಲಕ ಕಳುಹಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಸರ್ಕಾರಿ ನೌಕರರು ಜೆಡಿಎಸ್ ಗೆ ಮತ ಹಾಕುತ್ತಾರೆ ಎಂದು ಕೆಲವರಿಗೆ ಪೋಸ್ಟಲ್ ಬ್ಯಾಲೆಟ್ ಗಳನ್ನ ಬೇಕಂತಲೇ ಅಂಚೆ ಕಚೇರಿ ಮೂಲಕ ಕಳುಹಿಸಿ ಪೋಸ್ಟಲ್ ಬ್ಯಾಲೆಟ್ ಗಳು ತಲುಪುವುದನ್ನು ತಡೆ ಹಿಡಿದು ನಾಟಕ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬೆಳವಣಿಗೆಯಿಂದ ಸದ್ಯ ಚುನಾವಣಾ ಕರ್ತವ್ಯ ಮಾಡಿದ 400 ಕ್ಕೂ ಹೆಚ್ಚು ಮಂದಿ ಮತದಾನದಿಂದ ವಂಚಿತವಾಗುವಂತಿದೆ.

    ಮತದಾನ ವಂಚಿತ ಚುನಾವಣಾ ಸಿಬ್ಬಂದಿ: ದಾವಣಗೆರೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಚುನಾವಣಾ ಕೆಲಸ ಮಾಡಿದ ಸರ್ಕಾರಿ ನೌಕರರಿಗೆ 10 ದಿನವಾದರು ಪೋಸ್ಟಲ್ ಮತಪತ್ರ ತಲುಪಿಲ್ಲ. ಮತದಾನ ಮಾಡುವ ಅವಕಾಶವಿಲ್ಲದಿದ್ದಕ್ಕೆ ಆಕ್ರೋಶಗೊಂಡ ನೌಕರರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು. ಪೋಸ್ಟಲ್ ಬ್ಯಾಲೆಟ್ ಮೂಲಕ ವೋಟ್ ಮಾಡಲು ಇಂದು ಕಡೆಯ ದಿನವಾಗಿತ್ತು.

    https://www.youtube.com/watch?v=JDIko1qhP2Y

    https://www.youtube.com/watch?v=ZFapPG50u80