Tag: ಅಂಚೆ ಪೋಸ್ಟ್‌

  • ಸಿಸಿಬಿ ಪೊಲೀಸರ ಭರ್ಜರಿ ಬೇಟೆ – 21 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

    ಸಿಸಿಬಿ ಪೊಲೀಸರ ಭರ್ಜರಿ ಬೇಟೆ – 21 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

    ಬೆಂಗಳೂರು: ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಸಿಸಿಬಿ ಪೊಲೀಸರು (Bengaluru CCB Police) ಸುಮಾರು 21 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಭಾರತೀಯ ಅಂಚೆ ಮೂಲಕ ವಿವಿಧ ದೇಶಗಳಿಂದ ಪೋಸ್ಟ್‌ ಮೂಲಕ ಬಂದಿದ್ದ ಮಾದಕ ವಸ್ತುಗಳನ್ನು (Narcotics) ವಶಕ್ಕೆ ಪಡೆದಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ʻಮಂಡ್ಯ To ಇಂಡಿಯಾʼ – ಮಂಡ್ಯದಲ್ಲಿ ಇಂದಿನಿಂದ 2 ದಿನ ಬೃಹತ್ ಉದ್ಯೋಗ ಮೇಳ

    ಹೌದು. ಅಮೆರಿಕ, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೇದರ್‌ಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಭಾರತೀಯ ಅಂಚೆ ಇಲಾಖೆ ಮೂಲಕ ಸುಮಾರು 3,500 ಅನುಮಾನಾಸ್ಪದ ಅಂಚೆ ಪೋಸ್ಟ್‌ಗಳು ಬಂದಿದ್ದವು. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದರು. 3,500 ಪೋಸ್ಟ್‌ಗಳ ಪೈಕಿ 606 ಅಂಚೆ ಪೋಸ್ಟ್‌ಗಳಲ್ಲಿ ಪಾರ್ಸೆಲ್‌ ರೂಪದಲ್ಲಿ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾಗಿವೆ.

    ಈ ಮಾದಕ ವಸ್ತುಗಳನ್ನು ವಿದೇಶದಿಂದ ಬೆಂಗಳೂರಿಗೆ ತರಿಸಿಕೊಂಡು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ