Tag: ಅಂಚೆ ಕಚೇರಿ

  • ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ – ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ ಎಂದ ಡಿಕೆಶಿ

    ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ – ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ ಎಂದ ಡಿಕೆಶಿ

    ಬೆಂಗಳೂರು: ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ (INDIA Block) ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ಕೊಟ್ಟೇ ಕೊಡುತ್ತೇವೆ ಆದ್ರೆ ಕೇಂದ್ರದಲ್ಲಿ ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಬೆಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ (Post Office) ಖಾತೆ ತೆರೆಯಲು ಕಚೇರಿ ಮುಂದೆ ಮಹಿಳೆಯರು ಕ್ಯೂ ನಿಂತಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಗ್ಯಾರಂಟಿ ಬಗ್ಗೆ ಹೆಣ್ಣು ಮಕ್ಕಳಿಗೆ ಎಷ್ಟು ನಂಬಿಕೆ ಅಂತ ಗೊತ್ತಾಗುತ್ತಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ, 1 ಲಕ್ಷ ಕೊಟ್ಟೇ ಕೊಡ್ತೀವಿ ಅಂತ ಹೇಳಿದ್ದೇವೆ. ರಾಹುಲ್‌ ಗಾಂಧಿ (Rahul Gandhi) ಅವರು ಸಹ ಹೇಳಿರುವುದಾಗಿ ತಿಳಿಸಿದ್ದಾರೆ.

    ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಕೊಟ್ಟ ಮಾತಿನಂತೆ ಪ್ರತಿ ವರ್ಷ ಮಹಿಳೆಯರ ಖಾತೆಗೆ ಒಂದು ಲಕ್ಷ ರೂ. ಹಣ ಜಮೆ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಘೋಷಿಸಲಾಗಿದೆ. ಆದ್ರೆ ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ. ನಮ್ ಕಂಡಿಷನ್ ಗೊತ್ತಿದೆಯಲ್ಲವಾ? ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿದರೇ ಹೊರತು ಜನರ ಸಮಸ್ಯೆ ಬಗ್ಗೆ ಮಾತಾಡಿಲ್ಲ: ಖರ್ಗೆ

    ಇದೇ ವೇಳೆ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿ, ಈ ಪ್ರಕರಣಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದು ಅವರ ಕರ್ತವ್ಯ. ಸಿಎಂ ಸಹ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಪ್ಪಿತಸ್ತರು ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಆಗುತ್ತೆ. ಕೋಟ್ಯಂತರ ರೂಪಾಯಿ ಹಗರಣ ಆರೋಪ ಕೇಳಿಬಂದಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಸಚಿವ ನಾಗೇಂದ್ರ ಅವರನ್ನೂ ಕರೆಸಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

    ಡಿಕೆಸು ಕೆಪಿಸಿಸಿ ಅಧ್ಯಕ್ಷರಾಗ್ತಾರಾ? ‌
    ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಸುರೇಶ್‌ ಅವರ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದೆಲ್ಲ ಸುಳ್ಳು. ಯಾರಿಗೆ ಸ್ಥಾನ ಕೊಡಬೇಕು ಅನ್ನೋದನ್ನ ಹೈಕಮಾಂಡ್‌ ನಿರ್ಧರಿಸುತ್ತೆ ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ

  • `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್‌’ ಖಾತೆ ಮಾಡಿಸಲು ಮಹಿಳೆಯರ ಕ್ಯೂ

    `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್‌’ ಖಾತೆ ಮಾಡಿಸಲು ಮಹಿಳೆಯರ ಕ್ಯೂ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ (GPO) ಕಳೆದ ಎರಡು ದಿನಗಳಿಂದ ಬೆಳ್ಳಂ ಬೆಳಗ್ಗೆ ಆಗಮಿಸಿ ಅಂಚೆ ಖಾತೆ ತೆರೆಯಲು ಮುಗಿಬಿದ್ದಿದ್ದರು.

    ಪ್ರತಿ ತಿಂಗಳು ಖಾತೆಗೆ 8 ಸಾವಿರ ರೂ. ಹಣ ಜಮೆಯಾಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಮಹಿಳೆಯರು ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (IPPB) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆ ಬೆಂಗಳೂರು ಕಚೇರಿಯಲ್ಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಅಕೌಂಟ್‌ (Post Office Accounts) ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು. ಇದರಿಂದ ಮಹಿಳೆಯರು ಪೋಸ್ಟ್‌ ಆಫೀಸ್‌ಗಳಿಗೆ ಮುಗಿ ಬಿದ್ದಿದ್ದರು.

    ಎರಡು ವರ್ಷಗಳ ಹಿಂದೆಯೇ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಅಕೌಂಟ್‌ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಉಳಿತಾಯ ಖಾತೆಯಾಗಿರುತ್ತದೆ. ಆದರೆ ಈಗ ವದಂತಿ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಖಾತೆ ತೆರೆಯಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಖಾತೆ ಮಾಡಿಸಲು ದಾಂಗುಡಿಯಿಡುತ್ತಿದ್ದು, ಬೆಂಗಳೂರು ಅಂಚೆ ಕಚೇರಿ ಸಿಬ್ಬಂದಿ ಸಂಪೂರ್ಣ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಟೋಕನ್ ಪಡೆದು ಖಾತೆ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಚೇರಿ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಮಹಿಳೆಯರನ್ನ ಕೇಳಿದ್ರೆ `ಅಕ್ಕಪಕ್ಕದವರು ಅಕೌಂಟ್‌ಗೆ ಹಣ ಬರುತ್ತೆ ಅಂತ ಹೇಳಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಣ ನೀಡುತ್ತಾರಂತೆ. ಅದಕ್ಕಾಗಿ ಖಾತೆ ಮಾಡಿಸಲು ಕ್ಯೂನಲ್ಲಿ ನಿಂತಿದ್ದೇವೆ’ ಅಂತಾ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, 8,500 ರೂ. ಖಾತೆಗೆ ಬರುವ ಯಾವ್ದೇ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ, ಇದೆಲ್ಲವೂ ವದಂತಿ ಎಂದು ಹೇಳಿದ್ದಾರೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಅಂಚೆ ಕಚೇರಿ ಸಿಬ್ಬಂದಿಗೆ ಹೇಳಿದ್ದಾರೆ.

  • ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು

    ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು

    ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಅಂಚೆ ಕಚೇರಿಗೆ (Post Office) ಬರುವ ಪತ್ರಗಳನ್ನು (Letters) ಯಾವುದೇ ಸರ್ಕಾರಿ ಅಧಿಕಾರಿಗಳು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.

    ಪತ್ರಗಳು ಮಾತ್ರವಲ್ಲದೇ ಖಾಸಗಿ ಕೊರಿಯರ್‌ಗಳನ್ನೂ (Courier) ಇದೇ ಮೊದಲ ಬಾರಿಗೆ ಮಸೂದೆ ವ್ಯಾಪ್ತಿಗೆ ತರಲಾಗಿದೆ. ಇದರ ಪ್ರಕಾರ ಕೊರಿಯರ್ ಅಂಗಡಿಗೆ ಬರುವ ಶಾಂಕಾಸ್ಪದ ಪತ್ರಗಳನ್ನು ಅಥವಾ ಯಾವುದೇ ವಸ್ತುಗಳನ್ನು ತೆರೆದು ನೋಡಿ ಮುಟ್ಟುಗೋಲು ಹಾಕುವ ಅಧಿಕಾರ ಇದೀಗ ಸರ್ಕಾರಕ್ಕೆ ಲಭಿಸಿದೆ.

    ಈ ಮಸೂದೆಗೆ ರಾಜ್ಯಸಭೆಯಲ್ಲಿ ಡಿಸೆಂಬರ್ 4 ರಂದೇ ಅಂಗೀಕಾರ ದೊರೆತಿದೆ. ಸಂಸತ್‌ನಲ್ಲಿ ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಉತ್ತರ ನೀಡಬೇಕು ಎಂದು ವಿಪಕ್ಷಗಳು ಗದ್ದಲ ನಡೆಸಿದ ಸಂದರ್ಭದಲ್ಲಿಯೇ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹೊಸ ಕಾಯ್ದೆ 125 ವರ್ಷಗಳಷ್ಟು ಹಳೆಯ ಪೋಸ್ಟಾಫೀಸ್ ಕಾಯ್ದೆಯನ್ನು (1898) ಬದಲಿಸಿದೆ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಈ ಮಸೂದೆಯಿಂದಾಗಿ ಸರ್ಕಾರಿ ಅಧಿಕಾರಿಗಳಿಗೆ ಅಂಚೆ ಕಚೇರಿ ಹಾಗೂ ಖಾಸಗಿ ಕೊರಿಯರ್ ಕಚೇರಿಗೆ ಬರುವ ಪತ್ರಗಳನ್ನು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

  • ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಬೆಂಗಳೂರು: ಸಿಲಿಕಾನ್ ಸಿಟಿ ಪೋಸ್ಟ್ ಮಾಸ್ಟರ್ (Post Master) ಕೆಲಸಕ್ಕೆ ಮೈಕ್ರೋಸಾಫ್ಟ್ (Microsoft) ಸಹಸ್ಥಾಪಕ ಬಿಲ್‌ಗೇಟ್ಸ್ (Bill Gates) ಫಿದಾ ಆಗಿದ್ದು, ಭಾರತದ ಡಿಜಿಟಲೀಕರಣಕ್ಕೆ (Digitization) ಮನಸೋತು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

    ಈ ಪೋಸ್ಟ್‌ನಲ್ಲಿ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾರನ್ನು ಬಿಲ್ ಗೇಟ್ಸ್ ಹಾಡಿಹೊಗಳಿದ್ದು, ಆಕೆಯ ಜೊತೆ ನಗುನಗುತ್ತಾ ಮಾತನಾಡುತ್ತಿರುವ ಬಿಲ್ ಗೇಟ್ಸ್ ಆಕೆಯ ಕೆಲಸದ ಬಗ್ಗೆ ಲಿಂಕ್ಡ್ ಇನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕುಸುಮಾ ಮಾಡುವ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸಲುವಾಗಿ ಒಂದು ಲಿಂಕ್ ಅನ್ನು ಸಹಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:‌ ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ವೆಬ್‌ಸೈಟ್ ಲಿಂಕ್‌ನಲ್ಲಿ ವಿಡಿಯೋ ಪ್ರಕಟ ಮಾಡಿದ್ದು, ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿಯ ವೃತ್ತಿಜೀವನದ ಹಾದಿ ಎಂಬ ಶೀರ್ಷಿಕೆಯಡಿ ಮಾಹಿತಿ ಪ್ರಕಟಿಸಲಾಗಿದೆ. ಭಾರತದಲ್ಲಿ ಅಳವಡಿಸಿರುವ ಡಿಜಿಟಲೀಕರಣಕ್ಕೆ ಬಿಲ್ ಗೇಟ್ಸ್ ಮನಸೋತಿದ್ದಾರೆ. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್

    ಪೋಸ್ಟ್‌ನಲ್ಲಿ ಏನಿದೆ?
    ನನ್ನ ಭಾರತ ಪ್ರವಾಸದಲ್ಲಿ ನಾನು ನಂಬಲಾಗದ ಶಕ್ತಿಯೊಂದನ್ನು ಭೇಟಿಯಾದೆ. ಆ ಶಕ್ತಿಯೇ ಕುಸುಮಾ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಅದ್ಭುತ ಕೆಲಸ ಮಾಡುತ್ತಿರುವ ಗಮನಾರ್ಹ ಯುವತಿ ಈಕೆ. ಹಣಕಾಸು ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಲಗೇಜ್‌ಗಳನ್ನು ಸಾಗಿಸಲು ರಸ್ತೆಗಿಳಿಯಲಿದೆ KSRTC ಲಾರಿ

    ಕುಸುಮಾರಂತಹ ಅಂಚೆ ಕಚೇರಿ ಪೋಸ್ಟ್ಮಾಸ್ಟರ್‌ಗಳು ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಸಾಧನಗಳು ಮತ್ತು ಬಯೋಮೆಟ್ರಿಕ್‌ಗಳನ್ನು ಬಳಕೆ ಮಾಡುತ್ತಿರುವುದು ಗಮನಾರ್ಹ. ಆಕೆ ಕೇವಲ ಹಣಕಾಸು ಸೇವೆಗಳನ್ನು ಒದಗಿಸುತ್ತಿಲ್ಲ, ಬದಲಾಗಿ ತನ್ನ ಸಮುದಾಯಕ್ಕೆ ಭರವಸೆ ಮತ್ತು ಆರ್ಥಿಕ ಸಬಲೀಕರಣವನ್ನು ನೀಡುತ್ತಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಉತ್ತರ ಗೆಲ್ಲಲು ಡಿಕೆಶಿ ರಣತಂತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಡ್ಯದ ಪೋಸ್ಟ್ ಆಫೀಸ್‍ನಲ್ಲಿ ದೋಖಾ – ಸಾವನ್ನಪ್ಪಿ 5 ವರ್ಷ ನಂತ್ರ ಖಾತೆಯಿಂದ ಹಣ ಡ್ರಾ

    ಮಂಡ್ಯದ ಪೋಸ್ಟ್ ಆಫೀಸ್‍ನಲ್ಲಿ ದೋಖಾ – ಸಾವನ್ನಪ್ಪಿ 5 ವರ್ಷ ನಂತ್ರ ಖಾತೆಯಿಂದ ಹಣ ಡ್ರಾ

    ಮಂಡ್ಯ: ವೃದ್ಧೆಯೊಬ್ಬರು ಮೃತಪಟ್ಟು ಐದು ವರ್ಷವಾದ ಬಳಿಕ ಅವರ ಅಂಚೆ ಕಚೇರಿಯಲ್ಲಿ ಇದ್ದ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಂಚೆ ಅಧಿಕಾರಿಗಳನ್ನು ಕೇಳಿದರೆ ಉತ್ತರವಿಲ್ಲದೆ ಸೈಲೆಂಟ್ ಆಗಿ ಇದ್ದಾರೆ.

    ಕೆರಗೋಡು ಗ್ರಾಮದ ನಿವಾಸಿ ವಿಜಯಾಂಭ ಎಂಬವರು 2011 ಜೂನ್ 18 ರಂದು ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ವಿಜಯಾಂಭ ಅವರು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ ಎಂದು 2018ರಲ್ಲಿ ಮನೆಯನ್ನು ಸ್ವಚ್ಚಗೊಳಿಸುವ ವೇಳೆ ಸಿಕ್ಕ ಪಾಸ್‍ಬುಕ್‍ನಿಂದ ತಿಳಿದು ಬಂದಿದೆ. ನಂತರ ಆ ಪಾಸ್‍ಬುಕ್ ಹಾಗೂ ವಿಜಯಾಂಭ ಅವರ ಡೆತ್ ಸರ್ಟಿಫಿಕೇಟ್‍ನ್ನು ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಿ ಅಂಚೆ ಅಕೌಂಟ್ ಬಗ್ಗೆ ಕುಟುಂಬಸ್ಥರು ಪರಿಶೀಲನೆ ಮಾಡಿದ್ದಾರೆ.

    ಈ ವೇಳೆ 2016ರ ಜೂನ್ 28 ರಂದು ವಿಜಯಾಂಭ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಅದಾಗಲೇ ವಿಜಯಾಂಭ ಅವರು ಮೃತಪಟ್ಟಿ 5 ವರ್ಷಗಳು ಆಗಿತ್ತು. ಈ ವೇಳೆ ಕುಟುಂಬಸ್ಥರು ವಿಜಯಾಂಭ ಅವರು ಸಾವನ್ನಪ್ಪಿರುವುದು 2011 ರಲ್ಲಿ ಅವರ ಖಾತೆಯಿಂದ 2015 ರಲ್ಲಿ ಹಣ ಹೇಗೆ ಡ್ರಾ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

    ಕುಟುಂಬಸ್ಥರ ಪ್ರಶ್ನೆಗೆ ಅಂಚೆ ಅಧಿಕಾರಿಗಳು ಯಾವುದೇ ಉತ್ತರ ನೀಡದೇ ಬೇರೆ ಸಬೂಬನ್ನು ನೀಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳಾಗಿದ್ದು, ಇಲ್ಲಿಯವರೆಗೆ ಯಾವುದೇ ನ್ಯಾಯ ಈ ಕುಟುಂಬಕ್ಕೆ ದೊರೆತಿಲ್ಲ. ವಿಜಯಾಂಭ ಅವರ ಅಳಿಯ ಶಿವಪ್ರಕಾಶ್ ಅಂಚೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದರೂ ಸಮಸ್ಯೆ ಪರಿಹಾರವಾಗಿಲ್ಲ. ಅಂಚೆ ಇಲಾಖೆಯಲ್ಲಿ ಈ ರೀತಿಯ ಮೋಸ ಆಗುತ್ತದೆ ಎಂದರೆ ಯಾರು ಹಣ ಕಟ್ಟುತ್ತಾರೆ. ಈ ರೀತಿ ಆದೆಷ್ಟು ಜನರಿಗೆ ಮೋಸ ಆಗಿದೆಯೋ. ನಮಗೆ ನ್ಯಾಯ ದೊರಕಿಸಿ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷಯಾಗಬೇಕೆಂದು ಶಿವಪ್ರಕಾಶ್ ಆಗ್ರಹ ಮಾಡುತ್ತಿದ್ದಾರೆ.

  • ಅಂಚೆ ಚೀಟಿಯಲ್ಲಿ ಭೂಗತ ಪಾತಕಿಗಳ ಚಿತ್ರ!

    ಅಂಚೆ ಚೀಟಿಯಲ್ಲಿ ಭೂಗತ ಪಾತಕಿಗಳ ಚಿತ್ರ!

    – ಅಂಚೆ ಕಚೇರಿ ಸಿಬ್ಬಂದಿಯಿಂದ ಎಡವಟ್ಟು

    ಲಕ್ನೋ: ಅಂಚೆ ಕಚೇರಿ ಬಿಡುಗಡೆಗೊಳಿಸಿದ ಅಂಚೆ ಇಲಾಖೆಯ ಚೀಟಿ(ಸ್ಟಾಂಪ್) ನಲ್ಲಿ ಭೂಗತ ಪಾತಕಿಗಳ ಚಿತ್ರ ಇರುವುದು ಉತ್ತರಪ್ರದೇಶದ ಕಾನ್ಪುರ ಮುಖ್ಯ ಅಂಚೆ ಕಚೇರಿಯಲ್ಲಿ ಕಂಡು ಬಂದಿದೆ.

    ಕುಖ್ಯಾತ ಭೂಗತ ದೊರೆಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಚಿತ್ರವಿರುವ 24 ಸ್ಟಾಂಪ್‍ಗಳನ್ನು ಬಿಡುಗಡೆ ಮಾಡಲಾಗಿದೆ.

    ಮೈ ಸ್ಟಾಂಪ್ ಯೋಜನೆಯಡಿ ಇಂಡಿಯಾ ಪೋಸ್ಟ್‍ನ ಅಂಚೆ ಚೀಟಿಗಳ ವೈಯಕ್ತಿಕ ಹಾಳೆಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಈ ಸ್ಟಾಂಪ್‍ಗಳನ್ನು ಬಿಡುಗಡೆ ಮಾಡುವಾಗ ಅಚಾತುರ್ಯವೊಂದು ನಡೆದಿರುವುದು ಇದೀಗ ಭಾರೀ ಸುದ್ದಿಯಲ್ಲಿದೆ.

    ಅಂಚೆ ಚೀಟಿಗಳನ್ನು ಮಾಡುವಾಗ ಸಂಬಂಧಪಟ್ಟ ವ್ಯಕ್ತಿಗಳ ಗುರುತು ಪತ್ರವನ್ನು ಪಡೆದಿಲ್ಲ. ಅಲ್ಲದೇ ಅರ್ಜಿ ಸಲ್ಲಿಸಿದ ವ್ಯಕ್ತಿಗಳು ಯಾರು ಎಂದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಚೆ ಚೀಟಿ ಸಂಗ್ರಹಣ ವಿಭಾಗದ ಮುಖ್ಯಸ್ಥ ರಜನೀಶ್ ಕುಮಾರ್‍ನನ್ನು ಅಮಾನತುಗೊಳಿಸಲಾಗಿದೆ.

    ಅಂಚೆ ಇಲಾಖೆ ಮೈ ಸ್ಟಾಂಪ್ ಯೋಜನೆಯಡಿ ವ್ಯಕ್ತಿಗಳು ತಮ್ಮ ಅಥವಾ ಕುಟುಂಬ ಸದಸ್ಯರು ಸ್ಟಾಂಪ್‍ಗಳನ್ನು ಹೊಂದಲು ಅವಕಾಶ ನೀಡಿದೆ.

  • ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಹಾಸನ: ಕಷ್ಟ ಪಟ್ಟು ದುಡಿದ ಉಳಿತಾಯದ ಹಣವನ್ನು ಪೋಸ್ಟ್ ಮಾಸ್ಟರ್ ಓರ್ವ ದುರುಪಯೋಗ ಮಾಡಿಕೊಂಡಿರುವ ಆರೋಪ ಹಾಸನದ ಸಾಲಗಾಮೆ ಅಂಚೆ ಕಚೇರಿಯಲ್ಲಿ ಕೇಳಿಬಂದಿದೆ.

    ಹಲವಾರು ವರ್ಷಗಳಿಂದ ಸಾಲಗಾಮೆ ಗ್ರಾಮದಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು 8 ಸಾವಿರ ಉಳಿತಾಯ ಖಾತೆಗಳಿವೆ. ಇಲ್ಲಿ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಚಂದ್ರು ಗ್ರಾಹಕರ ಹಣದಲ್ಲಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

    ಸದ್ಯ ಚಂದ್ರ ಬೇರೆ ಪೋಸ್ಟ್ ಆಫೀಸ್ ವರ್ಗವಾಗಿದ್ದು ನಂತರ ಈ ಅವ್ಯವಹಾರ ಬೆಳಕಿಗೆ ಬಂದಿದೆ. ತಮ್ಮ ಉಳಿತಾಯ ಖಾತೆಯ ಹಣವನ್ನು ಪಡೆಯಲು ಪೋಸ್ಟ್ ಆಫೀಸ್‍ಗೆ ಬಂದ ಗ್ರಾಹಕರಿಗೆ ಖಾತೆಯಲ್ಲಿ ಹಣವೇ ಇಲ್ಲದ್ದನ್ನು ನೋಡಿ ಶಾಕ್ ಆಗಿದ್ದಾರೆ.

    ಪಾಸ್ ಬುಕ್‍ನಲ್ಲಿ ಹಣ ಜಮಾವಣೆಯಾದ ಬಗ್ಗೆ ದಾಖಲೆ ಇದ್ದರೆ ಕಂಪ್ಯೂಟರ್ ನಲ್ಲಿ ಮಾತ್ರ ಹಣವನ್ನು ಸೇರಿಸಲಾಗಿಲ್ಲ. ಹೊಸದಾಗಿ ಬಂದಿರುವ ಅಂಚೆ ಅಧಿಕಾರಿ ಗ್ರಾಹಕರ ಹಣ ಕುರಿತು ಪರಿಶೀಲನೆ ನಡೆಸಿದಾಗ ಫೇಕ್ ಪಾಸ್ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಹಲವಾರು ವರ್ಷಗಳಿಂದ ಇದೇ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತಿದ್ದ ಚಂದ್ರು ಹಲವು ಗ್ರಾಹಕರಿಗೆ ಇದೇ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಎಂಟು ಮಂದಿ ಗ್ರಾಹಕರ ಪಾಸ್‍ಬುಕ್‍ನಲ್ಲಿ ಎಂಟ್ರಿ ಮಾಡಲಾಗಿದ್ದು ಕಂಪ್ಯೂಟರ್ ನಲ್ಲಿ ಮಾತ್ರ ನೊಂದಣಿ ಆಗಿಲ್ಲ. ಸದ್ಯ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮುಂದುವರಿಸಿದ್ದಾರೆ.

  • ಗಮನ ಬೇರೆಡೆ ಸೆಳೆದು ಅಂಚೆ ಕಚೇರಿಯಿಂದ್ಲೇ 2 ಲಕ್ಷ ರೂ. ಕಳ್ಳತನ

    ಗಮನ ಬೇರೆಡೆ ಸೆಳೆದು ಅಂಚೆ ಕಚೇರಿಯಿಂದ್ಲೇ 2 ಲಕ್ಷ ರೂ. ಕಳ್ಳತನ

    ಹಾಸನ: ಕಚೇರಿಯಲ್ಲೇ ಅಂಚೆ ಸಹಾಯಕಿಯ ಗಮನ ಬೇರೆಡೆ ಸೆಳೆದು ತಂಡವೊಂದು ಎರಡು ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆದ ಘಟನೆ ಹಾಸನದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಹಣ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಣ ಎಗರಿಸಿದ್ದು ಹೇಗೆ?
    ಪಾಸ್ ಬುಕ್ ಎಂಟ್ರಿ ಮಾಡಿಸುವ ನೆಪದಲ್ಲಿ ಹಾಸನದ ಪ್ರಧಾನ ಅಂಚೆ ಕಚೇರಿಗೆ 10 ಜನರ ತಂಡವೊಂದು ಬಂದಿದೆ. ಕ್ಯಾಶ್ ಕೌಂಟರ್ ಬಳಿ ಮೂವರು ಬಂದಿದ್ದಾರೆ. ಇನ್ನುಳಿದವರು ಕೌಂಟರ್ ಮುಂಭಾಗ ಮಾತನಾಡುತ್ತಾ ನಿಂತಿದ್ದರು. ಮಾತಿನ ನಡುವೆ ಕ್ಯಾಶ್ ಕೌಂಟರ್ ನಲ್ಲಿದ್ದ ಅಂಚೆ ಸಹಾಯಕಿ ಕಾಂಚನಾ ಅವರ ಗಮನ ಬೇರೆಡೆ ಸೆಳೆದು, ಅವರ ಡ್ರಾಯರ್ ನಿಂದ ನಗದು ಎಗರಿಸಿ ಖದೀಮರು ಪರಾರಿಯಾಗಿದ್ದಾರೆ.

    ಶನಿವಾರ ಹೆಚ್ಚಿನ ಜನಸಂದಣಿಯ ಲಾಭ ಪಡೆದು ಕಳ್ಳರು ನಗದು ಎಗರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಬೆಂಗಳೂರು: ಆಧಾರ್ ಕಾರ್ಡ್ ಎಂಬುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕು, ಇಂತಹ ಆಧಾರ್ ಕಾರ್ಡ್ ಜನರ ಕೈ ಸೇರುವ ಬದಲು ಕಸದ ತೊಟ್ಟಿ ಸೇರಿದ ಘಟನೆ ಬೆಂಗಳೂರು ಹೊರವಲಯ ಮಂಡೂರು ಗ್ರಾಮದಲ್ಲಿ ನಡೆದಿದೆ.

    ಮಂಡೂರಿನ ಅಂಚೆ ಕಚೇರಿ ಸಿಬ್ಬಂದಿಯ ಒಳ ಜಗಳದಿಂದ ಆಧಾರ್ ಕಾರ್ಡ್ ಜೊತೆಗೆ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿದ್ದ ಸಾಲಮನ್ನಾ ಪತ್ರಗಳು ಕಸದ ಬುಟ್ಟಿಗೆ ಸೇರಿದೆ. ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ಪತ್ರಗಳನ್ನು ಅಂಚೆ ಮುಖಾಂತರ ಕಳುಹಿಸಿತ್ತು. ಆದ್ರೆ ಅಂಚೆ ಸಿಬ್ಬಂದಿಗಳ ಎಡವಟ್ಟು ಕೆಲಸದಿಂದ ರೈತರಿಗೆ ಅನ್ಯಾನವಾಗಿದೆ. ಜೊತೆಗೆ ಆಧಾರ್ ಗೆ ನೊಂದಣಿಯಾದವರ ಕಾರ್ಡ್ ಗಳು ಕೂಡ ಸೇರಬೇಕಾದವರಿಗೆ ತಲುಪದೇ ಕಸದ ಬುಟ್ಟಿ ಸೇರಿದೆ.

    ಕಚೇರಿಗೆ ಬಂದ ಪೋಸ್ಟ್ ಗಳನ್ನು ಜನರಿಗೆ ತಲುಪಿಸದೇ ಕಸದ ತೊಟ್ಟಿಗೆ ಎಸೆದಿದ್ದ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಬಳಿಕ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸದಸ್ಯ ಕೆಂಪರಾಜು ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಅಂಚೆ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕಸದ ತೊಟ್ಟಿಗೆ ಎಸೆದಿರುವ ಆಧಾರ್ ಕಾರ್ಡ್ ಹಾಗೂ ಸರ್ಕಾರದಿಂದ ರೈತರಿಗೆ ನೀಡಿರುವ ಸವಲತ್ತು ಪತ್ರಗಳನ್ನು ಅವರ ಮನೆಬಾಗಲಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv