Tag: ಅಂಚೆ ಇಲಾಖೆ

  • ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    – ಅಂಚೆ ಇಲಾಖೆಯಿಂದ ಆನ್‌ಲೈನ್‌ ಸೇವೆ
    –  ಪ್ರಾಯೋಗಿಕ ಸೇವೆಗೆ ದೇಶದಲ್ಲೇ ಬಾಗಲಕೋಟೆ ಜಿಲ್ಲೆ ಆಯ್ಕೆ

    ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯ (Department of Post) ಹಲವು ಸೇವೆಗಳು ಈಗ ಆನ್‌ಲೈನ್‌ನಲ್ಲಿ (Online) ದೊರೆಯಲಿದ್ದು, ಪ್ರಾಯೋಗಿಕವಾಗಿ ಈ ಸೌಲಭ್ಯ ಒದಗಿಸಲು ದೇಶದಲ್ಲೇ ಬಾಗಲಕೋಟೆ (Bagalkote) ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

    ಅಂಚೆ ಇಲಾಖೆಯಿಂದ ಹೊಸ ತಂತ್ರಾಂಶ ಅಳವಡಿಸಿ ಸರಕು, ಪತ್ರಗಳ ರವಾನೆಯನ್ನು ಆನ್‌ಲೈನ್ ಸೌಲಭ್ಯದಡಿ ಒದಗಿಸಲಾಗುತ್ತಿದೆ. ಮೈಸೂರು ವಿಭಾಗ ಹಾಗೂ ಬಾಗಲಕೋಟೆ ವಿಭಾಗಗಳು ಪ್ರಾಯೋಗಿಕವಾಗಿ ಸೌಲಭ್ಯ ಒದಗಿಸಲು ಆಯ್ಕೆಯಾಗಿವೆ. ಈ ವಿಭಾಗಗಳಲ್ಲಿನ ಯಶಸ್ಸು ನೋಡಿಕೊಂಡು ರಾಷ್ಟ್ರಾದ್ಯಂತ ಸೇವೆ ಒದಗಿಸಲು ಇಲಾಖೆ ಯೋಜನೆ ರೂಪಿಸಿದೆ.

    ಇಲಾಖೆ ಅಡ್ವಾನ್ಸ್‌ಡ್ ಪೋಸ್ಟಲ್ ಟೆಕ್ನಾಲಜಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದಡಿ ಹೊಸ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಬುಕ್ಕಿಂಗ್ ಹಾಗೂ ಡೆಲಿವರಿ ಸೌಲಭ್ಯ ಆನ್‌ಲೈನ್ ಆಗಲಿವೆ. ಗ್ರಾಹಕರು ಅಂಚೆ ಮೂಲಕ ವಸ್ತುವೊಂದನ್ನು ಕಳಿಸಬೇಕಿದ್ದರೆ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ನಿಗದಿತ ಶುಲ್ಕ ಪಡೆದು ಈ ಸೇವೆ ಒದಗಿಸಲಾಗುತ್ತಿದೆ. ಬುಕ್ ಮಾಡಿದ ನಂತರ ಪೋಸ್ಟ್‌ಮನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಈ ಸೌಲಭ್ಯದಡಿ ತಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಇದನ್ನೂ ಓದಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆ ಪಡುತ್ತಾರೆ: ಅಮಿತ್ ಶಾ

    ಪಾರ್ಸೆಲ್‌ ತಲುಪಿಸಿದ ನಂತರ ಪೋಸ್ಟ್‌ಮನ್ ಗ್ರಾಹಕರ ಡಿಜಿಟಲ್ ಸಹಿ ಪಡೆಯಲಿದ್ದಾರೆ. ಪಾರ್ಸೆಲ್‌ ತಲುಪಿದ ಬಗ್ಗೆ ಕಳುಹಿಸಿದವರಿಗೂ ಸಂದೇಶ ರವಾನೆಯಾಗುತ್ತದೆ. ಸಾಮಾನ್ಯ ಪತ್ರಗಳು, ಲಕೋಟೆಗಳನ್ನು ಕಳುಹಿಸಲು ಭವಿಷ್ಯದಲ್ಲಿ ಬಾರ್ ಕೋಡ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಡಿ ತಮ್ಮ ಲಕೋಟೆ, ಪತ್ರ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಗ್ರಾಹಕರು ಆನ್‌ ಲೈನ್ ಮೂಲಕ ಪಡೆಯಬಹುದು. ಇದನ್ನೂ ಓದಿ: ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

    ಜಿಲ್ಲೆಯಲ್ಲಿ ಜೂನ್ 17 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ 46 ಅಂಚೆ ಕಚೇರಿಗಳಲ್ಲಿ ಸೌಲಭ್ಯ ದೊರೆಯಲಿದೆ. ಎಲ್ಲ ಕಚೇರಿಗಳು ಗಣಕೀಕರಣಗೊಂಡಿದ್ದು, ಸೌಲಭ್ಯ ಜಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಉತ್ತಮ ನೆಟ್ವರ್ಕ್, ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಹಾಗೂ ಮೂಲ ಸೌಕರ್ಯವಿರುವ ಕಾರಣ ಜಿಲ್ಲೆ ಪೈಲೆಟ್ ಯೋಜನೆಗೆ ಆಯ್ಕೆಯಾಗಿದೆ.

  • ದೇಶದಲ್ಲೇ ಫಸ್ಟ್, ಬೆಂಗಳೂರಿನ 3ಡಿ ಮುದ್ರಿತ ಪೋಸ್ಟ್ ಆಫೀಸ್ ಲೋಕಾರ್ಪಣೆ – ಮೋದಿ ಮೆಚ್ಚುಗೆ

    ದೇಶದಲ್ಲೇ ಫಸ್ಟ್, ಬೆಂಗಳೂರಿನ 3ಡಿ ಮುದ್ರಿತ ಪೋಸ್ಟ್ ಆಫೀಸ್ ಲೋಕಾರ್ಪಣೆ – ಮೋದಿ ಮೆಚ್ಚುಗೆ

    ಬೆಂಗಳೂರು: ನಗರದ (Bengaluru) ಕೇಂಬ್ರಿಡ್ಜ್ ಲೇಔಟ್‍ನಲ್ಲಿರುವ ನಿರ್ಮಾಣಗೊಂಡ ದೇಶದ ಮೊದಲ 3ಡಿ-ಮುದ್ರಿತ (3-DPrinted Post Office) ಅಂಚೆ ಕಚೇರಿ ಇಂದು ಲೋಕಾರ್ಪಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi )ಟ್ವಿಟ್ಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ. ಇದು ಸ್ವಾವಲಂಬಿ ಭಾರತದ ಆತ್ಮವನ್ನು ಒಳಗೊಂಡಿದೆ. ಈ ಕಚೇರಿ ಪೂರ್ಣಗೊಳಿಸಲು ಶ್ರಮಿಸಿದವರಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳ ಕಾಮಗಾರಿಗೆ ಬ್ರೇಕ್‌ – ವಿರೋಧ ವ್ಯಕ್ತವಾಗುತ್ತಿದ್ದಂತೆ ಸುತ್ತೋಲೆ ವಾಪಸ್‌

    ಕಟ್ಟಡವನ್ನು ಕೇಂದ್ರ ರೈಲ್ವೇ ಮತ್ತು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರು ಯಾವಾಗಲೂ ಭಾರತಕ್ಕೆ ಹೊಸತನ್ನು ಪ್ರಸ್ತುತಪಡಿಸುತ್ತದೆ. ಈ 3ಡಿ ಮುದ್ರಿತ ಅಂಚೆ ಕಚೇರಿ ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

    ಇದು ಕೇವಲ 43 ದಿನಗಳಲ್ಲಿ ಪೂರ್ಣಗೊಂಡಿದೆ. ಅದರ ಕಾಮಗಾರಿಯ ಗಡುವಿನ ಎರಡು ದಿನಗಳ ಮುಂಚಿತವಾಗಿ ಕಟ್ಟಡ ಉದ್ಘಾಟನೆಯಾಗಿದೆ. ಕಟ್ಟಡ ತಂತ್ರಜ್ಞಾನ ಮತ್ತು ನಿರ್ಮಾಣ ನಿರ್ವಹಣಾ ವಿಭಾಗ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮನು ಸಂತಾನಂ ಅವರ ಮಾರ್ಗದರ್ಶನದಲ್ಲಿ ಐಐಟಿ ಮದ್ರಾಸ್‍ನಿಂದ ತಾಂತ್ರಿಕ ಬೆಂಬಲದೊಂದಿಗೆ ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ ಇದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

    ಕಛೇರಿಯು 1,021 ಚದರ ಅಡಿ ಪ್ರದೇಶವನ್ನು ಒಳಗೊಂಡಿದೆ. ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದೆ. ಇದರಲ್ಲಿ ರೊಬೊಟಿಕ್ ಪ್ರಿಂಟರ್ ಮೂಲಕ ವಿನ್ಯಾಸ ಮಾಡಲಾಗಿದೆ. ರೋಬೋಟಿಕ್ ತಂತ್ರಜ್ಞಾನದಿಂದ ಸಂಪೂರ್ಣ ನಿರ್ಮಾಣ ಕಾರ್ಯ 43 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಸುಮಾರು 6-8 ತಿಂಗಳುಗಳು ತೆಗೆದುಕೊಳ್ಳುತ್ತಿತ್ತು. 23 ಲಕ್ಷ ರೂ. ವೆಚ್ಚದಲ್ಲಿ ಈ ಕಚೇರಿ ನಿರ್ಮಾಣವಾಗಿದೆ. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಸುಮಾರು 30-40% ವೆಚ್ಚ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಚೆ ಇಲಾಖೆಯ ಎಕ್ಸಾಮ್: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮರು ಪರೀಕ್ಷೆ

    ಅಂಚೆ ಇಲಾಖೆಯ ಎಕ್ಸಾಮ್: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮರು ಪರೀಕ್ಷೆ

    ನವದೆಹಲಿ: ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಜುಲೈ 14ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಮರು ಪರೀಕ್ಷೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಜುಲೈ 14ರಂದು ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ದೇಶದ ವಿವಿಧ ರಾಜ್ಯದ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಪರೀಕ್ಷೆ ಬರೆದಿದ್ದರು. ಆದರೆ ಕಳೆದ ವರ್ಷ ಇದೇ ಪರೀಕ್ಷೆಯನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ 15 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿತ್ತು. ಆದರೆ ಈ ವರ್ಷ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗಿದೆ. ಅಷ್ಟೇ ಅಲ್ಲದೆ ಪರೀಕ್ಷೆಗೆ ಮೂರು ದಿನಗಳು ಬಾಕಿ ಇರುವಾಗ ಅಂದರೆ ಜುಲೈ 11ರಂದು ಈ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಆಘಾತ ಉಂಟಾಗಿತ್ತು. ಈ ದಿಢೀರ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಮಂಗಳವಾರದ ಲೋಕಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಗುಡುಗಿ, ಮರು ಪರೀಕ್ಷೆ ನಡೆಸಬೇಕು ಒತ್ತಾಯಿದರು.

    ಈ ಕುರಿತು ಧ್ವನಿ ಎತ್ತಿದ ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದರು, ಪರೀಕ್ಷೆಗೆ ಕೇವಲ 3 ದಿನ ಬಾಕಿ ಇರುವಾಗ ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು? ಸರ್ಕಾರದ ಈ ನಡೆಯಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿಕೊಂಡರು ಎಂದು ಚಾಟಿ ಬೀಸಿದರು.

    ವಿರೋಧ ಪಕ್ಷದ ಸಂಸದರ ಒತ್ತಾಯಕ್ಕೆ ಮಣಿದ ಅಂಚೆ ಇಲಾಖೆ ಸಚಿವ ರವಿ ಶಂಕರ್ ಪ್ರಸಾದ್ ಅವರು, ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಜುಲೈ 14ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗುತ್ತದೆ. ಈ ಮೂಲಕ 15 ಪ್ರಾದೇಶಿಕ ಭಾಷೆಗಳಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

  • ಏನಿದು ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್? ಯಾವೆಲ್ಲಾ ಸೇವೆ ಲಭ್ಯ? ಇಲ್ಲಿದೆ ಪೂರ್ಣ ಮಾಹಿತಿ

    ಏನಿದು ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್? ಯಾವೆಲ್ಲಾ ಸೇವೆ ಲಭ್ಯ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಪೋಸ್ಟ್ ಆಫೀಸ್ ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನು ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಆಫೀಸ್ ಖಾತೆಯನ್ನು ನಿರ್ವಹಿಸಬಹುದು.

    ಭಾರತದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯನ್ನು ನೀಡುವ ಉದ್ದೇಶದಿಂದ `ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್'(ಐಪಿಪಿಬಿ) ಚಾಲನೆ ಸಿಕ್ಕಿದೆ. ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಯೂ ಕೂಡ ಆರ್ಥಿಕ ಸೇವೆ ಪಡೆಯುವ ಉದ್ದೇಶ ಹೊಂದಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರ್ಥಿಕ ಉದ್ದೇಶಗಳ ಯೋಜನೆಗಳ ಪ್ರಗತಿಯಲ್ಲಿ ವೇಗ ಪಡೆಯಲು ಸಹಕಾರಿಯಾಗಲಿದೆ.

    ಏನಿದು ಐಪಿಪಿಬಿ ಯೋಜನೆ?
    ಈಗಾಗಲೇ ಕೇಂದ್ರ ಸರ್ಕಾರ ದೇಶದ ಎಲ್ಲರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲು ಜನ್ ಧನ್ ಯೋಜನೆಗಳು ಆರಂಭಿಸಿದೆ. ಆದರೂ ಬಹಳಷ್ಟು ಜನ ಇನ್ನು ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಯಾಗಿಲ್ಲ. ಹೀಗಾಗಿ ಈ ವ್ಯಕ್ತಿಗಳನ್ನು ಬ್ಯಾಕಿಂಗ್ ವಲಯಕ್ಕೆ ಸೇರ್ಪಡೆಗೊಳಿಸುವುದು ಮತ್ತು ಅಂಚೆ ಇಲಾಖೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಐಪಿಪಿಬಿ ಯೋಜನೆ ಆರಂಭಿಸಲಾಗಿದೆ.

    ದೇಶಾದ್ಯಂತ ಆರಂಭದಲ್ಲಿ 650 ಐಪಿಪಿಬಿ ಬ್ರಾಚ್‍ಗಳು ಮತ್ತು 3,250 ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಅಂಚೆ ಇಲಾಖೆ ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದ್ದು, 3 ಲಕ್ಷ ಅಂಚೆ ಸೇವಕರು ಹಾಗೂ ಗ್ರಾಮೀಣ ಪೋಸ್ಟ್ ಮ್ಯಾನ್ ಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲಿದ್ದಾರೆ. 2018 ಡಿಸೆಂಬರ್ 31ರ ವೇಳೆಗೆ 1.55 ಲಕ್ಷ ಅಂಚೆ ಕೇಂದ್ರಗಳು ಐಪಿಪಿಬಿ ಸೇವೆಗೆ ಸೇರ್ಪಡೆಯಾಗಲಿದೆ. ಹೀಗಾಗಿ ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರವು ಐಪಿಪಿಬಿ ಸೇವೆಗೆ 1,435 ಕೋಟಿ ರೂ. ಹಣಕಾಸಿನ ನೆರವು ನೀಡುವುದಾಗಿ ಸದನದಲ್ಲಿ ತಿಳಿಸಿದೆ.

    ಖಾತೆ ಆರಂಭಿಸುವುದು ಹೇಗೆ?
    ಪಿಐಐಬಿ ಕೇಂದ್ರದಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹೊಂದಿದ್ದರೆ ಸಾಕು. ಯಾವುದೇ ಅರ್ಜಿ ತುಂಬುವ ಅಗತ್ಯವಿಲ್ಲ. ರಾಷ್ಟ್ರಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತರ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾತೆಯಲ್ಲಿ ಕನಿಷ್ಠ ಹಣವನ್ನು ಇಡಲೇಬೇಕೆಂಬ ನಿಯಮವಿದೆ. ಆದರೆ ಪಿಐಐಪಿ ನಲ್ಲಿ ಆರಂಭಿಸುವ ಖಾತೆಗೆ ಯಾವುದೇ ಕನಿಷ್ಠ ಠೇವಣಿ ಇಡುವ ಅಗತ್ಯವಿಲ್ಲ.

    ಐಪಿಪಿಬಿ ಕೇಂದ್ರಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ಆರಂಭಿಸಲು ಅವಕಾಶವಿದ್ದು, ಈ ಖಾತೆಗಳಿಂದ ಹಣದ ವರ್ಗಾವಣೆ, ನೇರ ಹಣದ ವರ್ಗಾವಣೆ, ಬಿಲ್ ಪಾವತಿ ಮತ್ತು ವ್ಯಾಪಾರದ ಎಲ್ಲಾ ಸೇವೆಗಳ ಬಿಲ್ ಪಾವತಿ ಮಾಡಬಹುದಾಗಿದೆ. ಅಲ್ಲದೇ ತ್ರೈಮಾಸಿಕವಾಗಿ ಯೋಗ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ವರೆಗೂ ಠೇವಣಿ ಇಡುವ ಸೇವೆಯೂ ಲಭ್ಯವಿದೆ.

    ಇಂಟರ್ ನೆಟ್ ಬ್ಯಾಂಕಿಂಗ್: ಪಿಐಐಬಿ ಸೇವೆಯಲ್ಲಿ ಇಂಟರ್‍ನೆಟ್ ಬ್ಯಾಂಕಿಂಗ್ ಸೇವೆಯೂ ಲಭ್ಯವಿದ್ದು, ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಎಸ್‍ಎಂಎಸ್ ಮತ್ತು ಧ್ವನಿ (ಐವಿಆರ್) ಸೇವೆಗಳು ಲಭ್ಯವಿದೆ.

    ಸುರಕ್ಷತೆ ಗುರಿ: ಪಿಐಐಬಿ ನಲ್ಲಿ ನಡೆಯುವ ಪ್ರತಿ ಸೇವೆಗೂ ಒನ್ ಟೈಮ್ ಪಾಸ್‍ವರ್ಡ್ (ಒಟಿಪಿ) ಬರುತ್ತದೆ. ಬ್ಯಾಂಕ್ ಗ್ರಾಹಕರಿಗೆ ಬೇಡಿಕೆ ಅನುಗುಣವಾಗಿ `ಕ್ಯೂಆರ್’ ಕಾರ್ಡ್ ಸೇವೆಯನ್ನು ನೀಡಲಿದೆ. ಈ ಕಾರ್ಡ್‍ನಲ್ಲಿ ನಮೂದಿಸಿರುವ ಸ್ಕ್ಯಾನ್ ಕೋಡ್ ಮೂಲಕ ಸುಲಭವಾಗಿ ವ್ಯವಹರಿಸಬಹುದು.

    31 ಕೇಂದ್ರ: ಪಿಐಐಬಿ ಯೋಜನೆ ಅಡಿ ಕರ್ನಾಟಕದಲ್ಲಿ 31 ಜಿಲ್ಲಾ ಶಾಖೆಗಳು ಹಾಗೂ 155 ಸೇವಾ ಕೇಂದ್ರಗಳು ಕಾರ್ಯಾರಂಭವಾಗಲಿದ್ದು, ಕೇಂದ್ರ ಸಚಿವ ಅನಂತ್‍ಕುಮಾರ್ ಬೆಂಗಳೂರಿನ ಟೌನ್ ಹಾಲ್ ಬಳಿಯ ಅಂಚೆಕಚೇರಿಯಲ್ಲಿ ಐಪಿಪಿಬಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ 9 ಸಾವಿರ ಸೇವಾಕೇಂದ್ರಗಳು ಆರಂಭವಾಗಲಿದೆ.

    ಉಪಯೋಗವೇನು?
    ಮನೆ ಮನೆಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗುವುದರಿಂದ ವಿಮಾನಯಾನ, ರೈಲ್ವೇ, ಬಸ್ ಟಿಕೆಟ್ ಹಾಗೂ ಸರ್ಕಾರದ ಸೇರಿದಂತೆ ಖಾಸಗಿ ಎಲ್ಲಾ ಸೇವಾ ಬಿಲ್ ಗಳನ್ನು ಐಪಿಪಿಬಿ ಅಪ್ಲಿಕೇಶ್ ಮೂಲಕ ಪಾವತಿಗೆ ಅವಕಾಶವಿದೆ. ಅಲ್ಲದೇ ಸರ್ಕಾರಗಳ ಯೋಜನೆಗಳಾದ ಉದ್ಯೋಗ ಖಾತರಿ, ಮಾಸಾಶನ, ಸಹಾಯಧನ, ಪಿಂಚಣಿ, ವಿದ್ಯಾರ್ಥಿ ವೇತನ, ಸಬ್ಸಿಡಿ ಹಣವನ್ನು ನೇರವಾಗಿ ಐಪಿಪಿಬಿ ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ಈಗಾಗಲೇ ಅಂಚೆ ಕಚೇರಿಗಳಲ್ಲಿ ಆರಂಭಿಸಿರುವ ಎಲ್ಲಾ ಖಾತೆಗಳು ಐಪಿಪಿಬಿ ಸೇವೆ ಲಭ್ಯವಾಗಲಿದ್ದು, 100% ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾರ್ ಮುಂಭಾಗ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ – ತನಿಖೆಗೆ ಆದೇಶ

    ಬಾರ್ ಮುಂಭಾಗ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ – ತನಿಖೆಗೆ ಆದೇಶ

    ದಾವಣಗೆರೆ: ನಗರದ ಬಾರ್ ವೊಂದರ ಮುಂಭಾಗದಲ್ಲಿ ಪತ್ತೆಯಾಗಿದ್ದ ರಾಶಿಗಟ್ಟಲೆ ಆಧಾರ್ ಕಾರ್ಡ್ ಕುರಿತು ಪಬ್ಲಿಕ್ ಟಿವಿ ವಿಸ್ತೃತವಾಗಿ ವರದಿ ಮಾಡಿತ್ತು. ಸದ್ಯ ವರದಿಯ ಬಳಿಕ ಎಚ್ಚೆತ್ತುಕೊಂಡ ಅಂಚೆ ಇಲಾಖೆ ಅಧಿಕಾರಿಗಳು ಘಟನೆ ಕುರಿತು ತನಿಖೆ ಆದೇಶ ನೀಡಿದ್ದಾರೆ.

    ನಗರದ ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ಮುಂಭಾಗ ಆಧಾರ್ ಕಾರ್ಡ್ ಗಳು ಪತ್ತೆಯಾಗಿದ್ದವು. ಈ ವೇಳೆ ನಕಲಿ ಆಧಾರ ಕಾರ್ಡ್ ಜಾಲ ಇರುವ ಬಗ್ಗೆ ಸಾರ್ವಜನಿಕರಿಂದ ಶಂಕೆ ವ್ಯಕ್ತವಾಗಿತ್ತು. ಸಾರ್ವಜನಿಕ ಶಂಕೆಯ ಹಿನ್ನೆಲೆಯಲ್ಲಿ ಸದ್ಯ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

    ಬಾರ್ ಮುಂದೇ ಕಂಠ ಪೂರ್ತಿ ಕುಡಿದು ಬಿದ್ದಿದ್ದ ವ್ಯಕ್ತಿಯೊಬ್ಬರ ಚೀಲದಿಂದ ಆಧಾರ್ ಕಾರ್ಡ್ ಗಳು ಬಾರ್ ಮುಂದೇ ಬಿದ್ದಿದ್ದವು. ಸದ್ಯ ಆ ವ್ಯಕ್ತಿ ಅಂಚೆ ಇಲಾಖೆಯ ಸಿಬ್ಬಂದಿಯ ಅಥವಾ ಬೇರೆ ವ್ಯಕ್ತಿಯ ಎಂದು ಅಂಚೆ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾರ್ ಮುಂಭಾಗ ಸಿಕ್ಕ 37 ಆಧಾರ್ ಕಾರ್ಡ್ ಗಳಲ್ಲಿ ಒಂದಕ್ಕೆ ಮಾತ್ರ ಪೋಸ್ಟಲ್ ಸ್ಟಾಂಪ್ ಹಚ್ಚಿದ್ದು ಕಂಡು ಬಂದಿದೆ. ಆಧಾರ್ ಕಾರ್ಡ್ ಹಂಚಿಕೆ ಮಾಡುವ ಮುನ್ನ ಅಕ್ರಮ ನಡೆದಿರಬಹುದು ಎಂದು ಸದ್ಯ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ತನಿಖೆ ನಡೆದ ಬಳಿಕವೇ ಘಟನೆ ಹಿಂದಿನ ಸತ್ಯತೆ ಬಯಲಿಗೆ ಬರಲಿದೆ.