ನವದೆಹಲಿ: ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ (Housing Quota) ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಉದ್ದೇಶಕ್ಕೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪ್ರವೇಶ ಭಾರತ ಅಭಿಯಾನದಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ
ಇನ್ಮುಂದೆ ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ ಶೇ.4 ರಷ್ಟು ಮೀಸಲಾತಿ ನೀಡಲಾಗುವುದು, ಇದು ಸಾರ್ವಜನಿಕ ಸೇವೆಗಳಲ್ಲಿ ಸಮಾನತೆ, ಘನತೆ ಮತ್ತು ಪ್ರವೇಶದತ್ತ ಗಣನೀಯ ಹೆಜ್ಜೆಯಾಗಿದೆ ಎಂದು ಖಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ (Guarantee Scheme) ಹಣ ನೀಡೋ ಬರದಲ್ಲಿ ಉಳಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ ಅನ್ನೋ ಆರೋಪಗಳು ಮತ್ತೊಮ್ಮೆ ಕೇಳಿಬಂದಿದೆ.
ಈಗ ಸರ್ಕಾರ ಅಂಗವಿಕಲರ ಅನುದಾನಕ್ಕೂ (Grant for the disabled) ಕೊಕ್ಕೆ ಹಾಕಿದ್ದು ಕಳೆದ ವರ್ಷಕ್ಕಿಂತ 80% ರಷ್ಟು ಅನುದಾನ ಕಡಿತ ಮಾಡಿದೆ ಅಂತಾ ವಿಕಲಚೇತರ ಫೆಡರೇಷನ್ ಧ್ವನಿ ಎತ್ತಿದೆ. ನಮ್ಮ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನ ನೀಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ನಮ್ಮ ಮನವಿಯನ್ನ ಪೂರೈಸದೆ ಹೋದ್ರೆ ಇದೇ ಡಿಸೆಂಬರ್ 2ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?
ಈ ಕುರಿತು ರಾಷ್ಟ್ರೀಯ ವಿಕಲಚೇತನರ ಫೆಡರೇಷನ್ ಕರ್ನಾಟಕ ಶಾಖೆಯ ವ್ಯವಸ್ಥಾಪಕ ಹೇಮಂತ್ ʻಪಬ್ಲಿಕ್ ಟಿವಿʼಜೊತೆಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ನೀಡುವ ಬರದಲ್ಲಿ ಅಂಗವಿಕಲರಿಗೆ ಅನ್ಯಾಯ ಮಾಡ್ತಿದೆ. ರಾಜ್ಯದಲ್ಲಿರೋ ಅಂಗವಿಕಲರು ಸೇವಾಸಿಂಧು ಮೂಲಕ ಅನುದಾನಕ್ಕೆ ಅರ್ಜಿ ಹಾಕಿದ್ರೂ ಅನುಕೂಲವಾಗ್ತಿಲ್ಲ, ವ್ಹೀಲ್ ಚೇರ್ ಆಗಿರಬಹುದು, ಲ್ಯಾಪ್‌ಟ್ಯಾಪ್ ಆಗಿರಬಹುದು ಹೀಗೆ ಎಲ್ಲ ಸ್ಕೀಮ್‌ಗೂ ತೊಡಕಾಗಿದೆ. ಈ ಬಗ್ಗೆ ಸಿಎಂ, ಡಿಸಿಎಂಗೂ ಮನವಿ ಮಾಡಿದ್ದೇವೆ. ಇದೇ ಡಿಸೆಂಬರ್ 3 ಅಂಗವಿಕಲರ ದಿನಾಚರಣೆ ಇದೆ. ಸರ್ಕಾರ ಡಿಸೆಂಬರ್ 2ರೊಳಗೆ ಅನುದಾನ ನೀಡದೇ ಹೋದ್ರೇ ಅಂದಿನಿಂದಲೇ ಪ್ರತಿಭಟನೆ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: Davanagere| ವಿದ್ಯುತ್ ಅವಘಡಕ್ಕೆ ಒಂದೂವರೆ ಎಕರೆ ಅಡಿಕೆ ತೋಟ ಸುಟ್ಟು ಕರಕಲು
ಸರ್ಕಾರ ಕಳೆದ ವರ್ಷ 40 ಕೋಟಿ ರೂ. ಅನುದಾನ ಕೊಟ್ಟಿದೆ. ಆದ್ರೆ ಈ ವರ್ಷ ಕೇವಲ 10 ಕೋಟಿ ರೂ. ಕೊಟ್ಟಿದ್ದು, ಶೇ.80 ರಷ್ಟು ಅನುದಾನ ಕಡಿತಗೊಳಿಸಿದೆ. ಆದ್ರೆ ಗ್ಯಾರಂಟಿಗಳಿಗೆ 58,000 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಗಳನ್ನ ನೀಡುತ್ತಿಲ್ಲ, ಗ್ಯಾರಂಟಿ ಸ್ಕೀಂನಿಂದ ಸರ್ಕಾರಕ್ಕೆ ಹಣದ ಕೊರತೆ ಉಂಟಾಗಿ, ನಮ್ಮ ಯೋಜನೆಗಳಿಗೆ ಕತ್ತರಿ ಹಾಕಿರಬಹುದು. ಕೆಲ ವರ್ಷಗಳಿಂದ ಯೋಜನೆ ಮುಂದುವರಿಸಿಕೊಂಡು ಬರಲಾಗ್ತಿದೆ. ಹೊಸ ಯೋಜನೆಗಳನ್ನ ಘೋಷಿಸಿಲ್ಲ. ಕಳೆದ ವರ್ಷ 54 ಕೋಟಿ ರೂ. ವೆಚ್ಚದಲ್ಲಿ 4 ಸಾವಿರ ವೆಹಿಕಲ್ ನೀಡಿದ್ರು, 400 ಲ್ಯಾಪ್‌ಟಾಪ್ ಅಂಧ ವಿದ್ಯಾರ್ಥಿಗಳಿಗೆ ನೀಡಿದ್ರು. 183 ಬ್ರೈಲ್ ಕಿಟ್ ಕೊಟ್ಟಿದ್ದಾರೆ. ಈ ವರ್ಷದ ಅನುದಾನದಲ್ಲಿ 350 ವೆಹಿಕಲ್ ಕೊಡಬಹುದು, 30 ಲ್ಯಾಪ್‌ಟಾಪ್, 130 ಬ್ರೈಲ್ ಕಿಟ್ ನೀಡಬಹುದು. ಆದ್ರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಲ್ಲಾ ಶಾಸಕರಿಗೆ ಮನವಿ ಕೊಟ್ಟಿದ್ದೆ, ಅವರೂ ಸ್ಪಂದಿಸಿಲ್ಲ. ಹಾಗಾಗಿ ಡಿಸೆಂಬರ್ 2ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
2023-24ರ ವರ್ಷದಲ್ಲಿ ಬಿಡುಗಡೆಯಾದ ಅನುದಾನ? ಯೋಜನೆ- ಹಣ ಬಿಡುಗಡೆ- ಫಲಾನುಭವಿಗಳ ಸಂಖ್ಯೆ
1. ಯಂತ್ರಚಾಲಿತ ದ್ವಿಚಕ್ರವಾಹನ – 3980 ಲಕ್ಷ ರೂ – 4000 ಫಲಾನುಭವಿಗಳು
2. ಟಾಕಿಂಗ್ ಲ್ಯಾಪ್‌ಟಾಪ್ – 397.43 ಲಕ್ಷ ರೂ. – 411 ಫಲಾನುಭವಿಗಳು
3. ಬ್ಯಾಟರಿ ಆಪರೇಟಿವ್ ವ್ಹೀಲ್‌ಚೇರ್ – 499.20 ಲಕ್ಷ ರೂ. – 520 ಫಲಾನುಭವಿಗಳು
4. ಬ್ರೈಲ್‌ಕಿಟ್ – 44.03 ಲಕ್ಷ ರೂ. – 183 ಫಲಾನುಭವಿಗಳು
5. ಹೊಲಿಗೆ ಯಂತ್ರ – 19.95 ಲಕ್ಷ ರೂ. – 179 ಫಲಾನುಭವಿಗಳು
6. ಸಾಧನ ಸಲಕರಣೆ – 145.34ಲಕ್ಷ ರೂ. – 266 ಫಲಾನುಭವಿಗಳು
2024-25ನೇ ಸಾಲಿನಲ್ಲಿ ಸರ್ಕಾರ ಮೀಸಲಿಟ್ಟ ಅನುದಾನ & ಸಲ್ಲಿಕೆಯಾಗಿರುವ ಅರ್ಜಿಗಳು
1. ಯಂತ್ರಚಾಲಿತ ದ್ವಿಚಕ್ರವಾಹನ – 350 ಲಕ್ಷ ರೂ. – ಅರ್ಜಿಗಳ ಸಂಖ್ಯೆ – 9,744
2. ಟಾಕಿಂಗ್ ಲ್ಯಾಪ್‌ಟಾಪ್ – 30 ಲಕ್ಷ ರೂ. – ಅರ್ಜಿಗಳ ಸಂಖ್ಯೆ 553
3. ಬ್ಯಾಟರಿ ಆಪರೇಟೆಡ್ ವ್ಹೀಲ್‌ಚೇರ್ – ಅರ್ಜಿಗಳ ಸಂಖ್ಯೆ 350
4. ಬ್ರೈಲ್‌ಕಿಟ್ – 35 ಲಕ್ಷ ರೂ. – ಅರ್ಜಿಗಳ ಸಂಖ್ಯೆ 311
5. ಹೊಲಿಗೆ ಯಂತ್ರ – 25 ಲಕ್ಷ ರೂ. – ಅರ್ಜಿಗಳ ಸಂಖ್ಯೆ 862
6. ಸಾಧನ ಸಲಕರಣೆ – 100 ಲಕ್ಷ ರೂ. – ಅರ್ಜಿಗಳ ಸಂಖ್ಯೆ 5,173
ನವದೆಹಲಿ: ಕೆಲವು ದಿನಗಳ ಹಿಂದೆ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ತಡೆದು, ವಿಮಾನದಲ್ಲಿ ಪ್ರಯಾಣಿಸಲು ಬಿಡದೇ ಹೋದಾಗ ದೇಶಾದ್ಯಂತ ಭಾರೀ ವಿವಾದ ಉಂಟಾಗಿತ್ತು. ಈ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ವಿಕಲಚೇತನರಿಗಾಗಿ ಬೋರ್ಡಿಂಗ್ ಹಾಗೂ ಪ್ರಯಾಣದ ಪ್ರವೇಶವನ್ನು ಸುಧಾರಿಸಲು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಅಂಗವೈಕಲ್ಯತೆ ಅಥವಾ ಅನಾರೋಗ್ಯದ ಆಧಾರದ ಮೇಲೆ ಜನರ ಪ್ರಯಾಣವನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ಅವರ ಆರೋಗ್ಯ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆ ಅಭಿಪ್ರಾಯಪಟ್ಟರೆ, ಅವರನ್ನು ವೈದ್ಯರು ಖುದ್ದಾಗಿ ಪರೀಕ್ಷಿಸಬೇಕಾಗುತ್ತದೆ. ಬಳಿಕ ವೈದ್ಯರು ವ್ಯಕ್ತಿ ಪ್ರಯಾಣಿಸಲು ಯೋಗ್ಯನೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿದ ಬಳಿಕ ವಿಮಾನಯಾನ ಸಂಸ್ಥೆ ನಿರ್ಧಾರ ಕೈಗೊಳ್ಳಬೇಕು ಎಂದು ಡಿಜಿಸಿಎ ಹೇಳಿದೆ. ಇದನ್ನೂ ಓದಿ: ಆ.7ರಿಂದ ಹಾರಲಿದೆ ಆಕಾಶ್ ಏರ್ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು
ವಿಮಾನಯಾನ ಸಂಸ್ಥೆ ವೈದ್ಯಕೀಯ ಅಭಿಪ್ರಾಯ ಪಡೆದ ಬಳಿಕ ವ್ಯಕ್ತಿಯ ಪ್ರಯಾಣದ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆದರೂ ನಿರ್ಧಾರ ಪ್ರಯಾಣದ ನಿರಾಕರಣೆಯಾದಲ್ಲಿ ತಕ್ಷಣವೇ ಪ್ರಯಾಣಿಕರಿಗೆ ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು ಹಾಗೂ ಪ್ರಯಾಣದ ನಿರಾಕರಣೆಗೆ ಕಾರಣ ಏನೆಂಬುದನ್ನೂ ಉಲ್ಲೇಖಿಸಬೇಕು ಎಂದಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ವಿಮಾನ ಹತ್ತದಂತೆ ಇಂಡಿಗೋ ಸಂಸ್ಥೆ ತಡೆದಿತ್ತು. ಈ ವೇಳೆ ಪ್ರತ್ಯಕ್ಷದರ್ಶಿಗಳು ಇದರ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು
ಕೆಲವೇ ದಿನಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಸಿ, ಪ್ರಯಾಣಿಕರನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 5 ಲಕ್ಷ ರೂ. ದಂಡವನ್ನು ವಿಧಿಸಿತ್ತು.
Live Tv
[brid partner=56869869 player=32851 video=960834 autoplay=true]
ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಮಹತ್ವ ನಿರ್ಧಾರವೊಂದನ್ನು ಕೈಗೊಂಡಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಅಂಗವಿಕಲರು ಮನೆಯಲ್ಲೇ ಇದ್ದು ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.
ವೃದ್ಧರು, ಅಂಗವಿಕಲರು, ಕೊರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ
ಉತ್ತರ ಪ್ರದೇಶ ಚುನಾವಣೆ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾತನಾಡಿ, ವಿಳಂಬ ಮಾಡದೇ ಕೋವಿಡ್ ನಿಯಮಗಳನ್ನು ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಚುನಾವಣೆ ವೇಳೆ ಯಾವುದೇ ಭ್ರಷ್ಟ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್ನಲ್ಲಿರುವ ವಿರುಷ್ಕಾ!
ಆರೋಗ್ಯ ಕಾರ್ಯದರ್ಶಿ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದಾಗ ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್‍ನಿಂದ ನಗರದಲ್ಲಿ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಲಾಗಿದೆ.
ನಗರದ ಹೊರವಲಯದ ಡಿಸಿ ಕಚೇರಿ ಪಕ್ಕದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 80ಕ್ಕೂ ಹೆಚ್ಚು ಮಂದಿ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ಹಾಕಿಸುವ ಮೂಲಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಯಿತು. ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾನವ ಹಕ್ಕುಗಳ ವಿಭಾಗದ ಕೆ.ಎನ್.ರಘು ಮಾತನಾಡಿ, ರಾಹುಲ್ ಗಾಂಧಿಯವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡುತ್ತಿದ್ದೇವೆ ಎಂದರು.
ಪೆಟ್ರೋಲ್, ಡಿಸೇಲ್ ಮತ್ತು ದಿನ ಬಳಕೆಯ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದ್ದು, ಬಡವರು, ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಇದರಲ್ಲಿ ಒಂದು ಭಾಗ ಈ ವಿಶೇಷಚೇತನರು, ಇವರಿಗೆ ದುಡಿಮೆ ಕಡಿಮೆ, ಓಡಾಟಕ್ಕೆ ಗಾಡಿ ಇದ್ದು, ಬೆಲೆ ಏರಿಕೆಯಿಂದ ಪೆಟ್ರೋಲ್ ಹಾಕಿಸಿಕೊಳ್ಳುವುದು ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ತೆರಿಗೆ ಹೇರಿದ್ದರಿಂದ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಹೀಗಾಗಿ ಪೆಟ್ರೋಲ್ ಮೇಲೆ ವಿಧಿಸಿರುವ ತೆರಿಗೆ ಇಳಿಸಬೇಕು, ಇಲ್ಲವಾದರೆ ಜನಸಾಮಾನ್ಯರ ಗತಿ ಏನು? ಈ ಸರ್ಕಾರಕ್ಕೆ ಮಾನವೀಯತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುವ ವೈಫಲ್ಯಗಳ ಕಾರಣದಿಂದ ಜನ ಕಷ್ಟ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ಬುದ್ಧಿ ಕಲಿಸಬೇಕು ಎಂದರು. ಇದೇ ವೇಳೆ ಕೊರೊನಾ ಸಂಕಷ್ಟದಲ್ಲಿರುವ ಶಿಕ್ಷಕಿಯರಿಗೆ ಉಚಿತ ಆಹಾರದ ಕಿಟ್ ಕೂಡ ವಿತರಿಸಲಾಯಿತು.
ಶಿವಮೊಗ್ಗ: ಜಿಲ್ಲೆಯಲ್ಲಿ ಅಂಗವಿಕಲರ ಪ್ರಮಾಣ ಪತ್ರ ವಿತರಣೆಯನ್ನು ತ್ವರಿತಗೊಳಿಸಿ ನಿಗದಿತ ಅವಧಿಯ ಒಳಗಾಗಿ ಅರ್ಹರಿಗೆ ಪ್ರಮಾಣ ಪತ್ರ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವಿಕಲಚೇತನರ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಮಾತನಾಡಿದ ಡಿಸಿ, ಅಂಗವಿಕಲರು ಯುಡಿಡಿಐ ಪ್ರಮಾಣ ಪತ್ರ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, 964 ಕಾರ್ಡ್‍ಗಳನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸಹ ಕಾರ್ಡ್ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಕಾರ್ಡ್ ವಿತರಣೆಯನ್ನು ತ್ವರಿತಗೊಳಿಸಬೇಕು. ಪರಿಶೀಲನೆಗೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ನಿಗದಿತ ಸಮಯದ ಒಳಗಾಗಿ ವಿಲೇವಾರಿ ಮಾಡಬೇಕು. ಪ್ರತಿ ವಾರ ಈ ಕುರಿತಾಗಿ ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದು ಡಿ.ಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಸ್ತುತ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಮಾತ್ರ ಶ್ರವಣ ದೋಷ ಇರುವವರಿಗೆ ಆಡಿಯೊ ಮೆಟ್ರಿಕ್ ಇವಾಲ್ಯುವೇಶನ್ ಮಾಡಲು ತಜ್ಞರು ಲಭ್ಯರಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಈ ಸೌಲಭ್ಯ ಕಲ್ಪಿಸಬೇಕು. ವಾರಕ್ಕೆ ಒಮ್ಮೆಯಾದರೂ ಈ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಇದೇ ರೀತಿ ಬೇರೆ ಬೇರೆ ರೀತಿಯ ಅಂಗವಿಕಲತೆ ಪರಿಶೀಲನೆಗೆ ತಜ್ಞರು ಕನಿಷ್ಟ ತಿಂಗಳಿಗೆ ಒಮ್ಮೆ ನಿಗದಿತ ದಿನಾಂಕದಂದು ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿರಬೇಕು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗಾಗಿ ಲಭ್ಯವಿರುವ ಶೇ. 5ರಷ್ಟು ಅನುದಾನವನ್ನು ಕೇವಲ ತ್ರಿಚಕ್ರ ವಾಹನ ಒದಗಿಸಲು ಮಾತ್ರ ಬಳಸಿಕೊಳ್ಳದೇ, ಎಲ್ಲಾ ರೀತಿಯ ಅಂಗವಿಕಲರಿಗೂ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಶೇ. 5ರಷ್ಟು ಅನುದಾನವನ್ನು ಯಾವ ರೀತಿಯಲ್ಲಿ ಬಳಸಿಕೊಂಡಿವೆ ಎಂಬ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ವಿವಿಧ ವಸತಿ ಯೋಜನೆಯಡಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ‍್ಯಾಂಪ್, ಗಾಲಿ ಕುರ್ಚಿ, ಅಂಗವಿಕಲ ಸ್ನೇಹಿ ಶೌಚಾಲಯ ಸೇರಿದಂತೆ ಯಾವ್ಯಾವ ಸೌಲಭ್ಯಗಳಿವೆ ಎಂಬ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಾಸನ: ವಿಕಲಚೇತನರ ಸಮಸ್ಯೆಗಳನ್ನು ಯಾವುದೇ ರಾಜಕೀಯ ನಾಯಕರೂ ಕೇಳುತ್ತಿಲ್ಲ. ಆದರಿಂದ ನಮಗಾಗಿ ಕೆಲಸ ಮಾಡದವರಿಗೆ ನಾವು ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿ ಜಿಲ್ಲೆಯ ಅಂಗವಿಕಲರ ಸಂಘದ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.
ಯಾವುದೇ ಪಕ್ಷವಾಗಲಿ, ನಾಯಕರಾಗಲಿ ಅಂಗವಿಕಲರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಳೆದ 25 ವರ್ಷಗಳಿಂದ ಜಿಲ್ಲೆಯ ಅಂಗವಿಕಲ ಕ್ಷೇಮಾಭಿವೃದ್ದಿಗೆ ಸಂಘವನ್ನು ಸ್ಥಾಪಿಸಿಕೊಂಡಿದ್ದೇವೆ. ಇದೂವರೆಗೆ 79 ಬಾರಿ ರಾಜ್ಯದ ಮುಖ್ಯಮಂತ್ರಿಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಗಳನ್ನು ಕೊಟ್ಟಿದ್ದೇವೆ. ಆದ್ರೆ ಯಾರೊಬ್ಬರೂ ಕೂಡ ನಮ್ಮ ಮನವಿಗೆ ಓಗೊಡುತ್ತಿಲ್ಲ. ವಿಕಲಚೇತನರ ಸಮಸ್ಯೆಗಳು ಹಲವಾರು ಇವೆ, ಅವುಗಳನ್ನು ಪರಿಹರಿಸಿಲ್ಲ. ಹೀಗಿರುವಾಗ ಯಾವ ಖುಷಿಗೆ ನಾವು ಮತ ಹಾಕಬೇಕು ಎಂದು ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 1300 ಮಂದಿ ದೈಹಿಕ ವಿಕಲಚೇತನರಿದ್ದೇವೆ. ಜೊತೆಗೆ ವಿವಿಧ ವಿಕಲಾಂಗತೆಯಿಂದ ಬಳಲುತ್ತಿರುವ ವಿಕಲಚೇತನರು ಜಿಲ್ಲೆಯಲ್ಲಿ 25 ಸಾವಿರಕ್ಕು ಹೆಚ್ಚು ಮಂದಿ ಇದ್ದಾರೆ. ಎಲ್ಲಾ ಸಭೆ ಸಮಾರಂಭಗಳಲ್ಲಿ ರಾಜಕೀಯ ನಾಯಕರು ನಮ್ಮ ಬಗ್ಗೆ ಮಾತನಾಡುತ್ತಾರೆ. ಆದ್ರೆ ನಮ್ಮ ನಿರ್ಧಿಷ್ಟ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು ಯಾರೂ ಇಲ್ಲ. ಆದ್ದರಿಂದ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಭಾಗವಹಿಸುವುದಿಲ್ಲ. ನಮ್ಮ ಸಂಘದ ವತಿಯಿಂದ ಚುನಾವಣೆ ಬಹಿಷ್ಕಾರ ಮಾಡುವ ಕರೆ ನೀಡುತ್ತೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನತಾ ದರ್ಶನದ ಸರಿಯಾದ ಮಾಹಿತಿ ಸಿಗದೆ ಇಬ್ಬರು ಅಂಗವಿಕಲರು ಪರದಾಡುತ್ತಿರುವ ಘಟನೆ ಸಿಎಂ ನಿವಾಸದ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಂಜುನಾಥ್ ಎಂಬ ಎರಡು ಕಾಲುಗಳಿಲ್ಲದ ಅಂಗವಿಕಲ ಸಿಎಂರ ಜನತಾ ದರ್ಶನಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿಯವರ ಜೆಪಿ ನಗರದ ನಿವಾಸಕ್ಕೆ ಬಂದಾಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ತೆರಳುವಂತೆ ಹೇಳಿದ್ದಾರೆ.
ಜನತಾ ದರ್ಶನದ ಮಾಹಿತಿ ನೀಡುವ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಇಲ್ಲ. ಅಂಗವಿಕಲರ ವಾಹನಕ್ಕೆ ಮನವಿ ಸಲ್ಲಿಸಲು ಬಂದ್ದಿದ್ದು, ರಾತ್ರಿಯಿಡಿ ಪ್ರಯಾಣ ಮಾಡಿ ಮೆಜೆಸ್ಟಿಕ್‍ನಿಂದ ಜೆಪಿ ನಗರದ ಸಿಎಂ ನಿವಾಸಕ್ಕೆ 350 ರೂ. ಆಟೋ ಚಾರ್ಜ್ ನೀಡಿ ಬಂದಿದ್ದೇನೆ. ಆದರೆ ಇಲ್ಲಿ ಸಿಎಂ ಕುಮಾರಸ್ವಾಮಿ ಆಗಲಿ ಅಥವಾ ಜನತಾ ದರ್ಶನದ ಸಿಬ್ಬಂದಿಯಾಗಲಿ ಇಲ್ಲ. ಈಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ಆದರೆ ಆಟೋಕ್ಕೆ ಹೋಗಲು ನನ್ನ ಬಳಿ ಹಣವಿಲ್ಲ. ಅಂಗವಿಕಲನಾದ ನಾನು ಎರಡು ಬಸ್ ಬದಲಿಸಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅಲ್ಲದೇ ಎರಡು ದಿನಗಳಿಂದ ಮತ್ತೊಬ್ಬ ಅಂಗವಿಕಲರು ಸಿಎಂ ದರ್ಶನ ಪಡೆಯಲು ಅಲೆದಾಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗಲು ಹೇಳುತ್ತಿದ್ದಾರೆ. ನನಗೆ ಗೃಹ ಕಚೇರಿ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸಿಎಂ ಜನತಾ ದರ್ಶನದ ಸಿಬ್ಬಂದಿಯು ನಾಪತ್ತೆಯಾಗಿದ್ದು, ಸರಿಯಾದ ಮಾಹಿತಿ ಸಿಗದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿವಾಸ ಮತ್ತು ಗೃಹ ಕಚೇರಿ ಕೃಷ್ಣಾಕ್ಕೆ ಸಾರ್ವಜನಿಕರು ಅಲೆದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.