Tag: ಅಂಗಡಿ ಮಾಲೀಕ

  • ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಲಕ್ನೋ: ಹರಿದ ಶೂ ಕೊಟ್ಟನೆಂದು ಆರೋಪಿಸಿ ಅಂಗಡಿ ಮಾಲೀಕನಿಗೆ ವಕೀಲರೊಬ್ಬರು ನೋಟಿಸ್‌ ಕಳುಹಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜ್ಞಾನೇಂದ್ರ ಭನ್ ತ್ರಿಪಾಠಿಯವರು ಸಲ್ಮಾನ್ ಹುಸೇನ್ ಎಂಬವರಿಗೆ ಈ ನೋಟಿಸ್‌ ಕಳುಹಿಸಿದ್ದಾರೆ.

    ನೋಟಿಸ್‌ನಲ್ಲೇನಿದೆ..?: ತಮ್ಮ ಅಂಗಡಿಯಿಂದ ಖರೀದಿಸಿದ್ದ ಬೂಟುಗಳು ಹರಿದಿದ್ದರಿಂದ ತನ್ನ ಸೋದರಳಿಯನ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದು, ನಾನು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು ಎಂದು ನೋಟಿಸ್‌ನಲ್ಲಿ ತ್ರಿಪಾಠಿ ತಿಳಿಸಿದ್ದಾರೆ.

    ಏನಿದು ಘಟನೆ..?: ವೃತ್ತಿಯಲ್ಲಿ ವಕೀಲರಾಗಿರುವ ತ್ರಿಪಾಠಿಯವರು ಕಳೆದ ವರ್ಷ ನವೆಂಬರ್ 21 ರಂದು ಸಲ್ಮಾನ್ ಹುಸೇನ್ ಅವರ ಅಂಗಡಿಯಿಂದ ಶೂಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆರು ತಿಂಗಳ ವಾರಂಟಿಯೊಂದಿಗೆ ಪ್ರತಿಷ್ಠಿತ ಬ್ರಾಂಡ್‌ನ ಶೂಗಳು ಎಂದು ಅಂಗಡಿಯವನು ಹೇಳಿದ್ದಾನೆ. ಆದರೆ ಈ ಶೂಗಳು ಕೆಲವೇ ದಿನಗಳಲ್ಲಿ ಹರಿದುಹೋಗಿವೆ. ಈ ಕಾರಣದಿಂದ ತನ್ನ ಸೋದರಳಿಯನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತ್ರಿಪಾಠಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್‌ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಅಂಗಡಿ ಮಾಲೀಕನಿಗೆ ನೋಟಿಸ್:‌ ಜನವರಿ 19ರಂದು ಅಂಗಡಿಯವರಿಗೆ ನೋಟಿಸ್ ಕಳುಹಿಸಿದ್ದು (Lawyer Given Notice To shop Owner), ಅದರಲ್ಲಿ ಚಿಕಿತ್ಸೆಗೆ 2,100 ರೂ. ಖರ್ಚಾಗಿದ್ದು, ಖರೀದಿಸಿದ ಶೂಗೆ 1,200 ರೂ. ನೀಡಿದ್ದೇನೆ. ಹೀಗಾಗಿ ನನಗೆ 10 ಸಾವಿರ ನೀಡುವಂತೆ ತ್ರಿಪಾಠಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅಂಗಡಿ ಮಾಲೀಕ ಪರಿಹಾರ ನೀಡಲು ವಿಫಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

    ಆರೋಪ ನಿರಾಕರಿಸಿದ ಮಾಲೀಕ: ಇತ್ತ ಅಂಗಡಿಯ ಮಾಲೀಕ ಸಲ್ಮಾನ್ ಹುಸೇನ್ ಅವರು ತ್ರಿಪಾಠಿ ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೆ ಅವರು ಪ್ರತಿಷ್ಠಿತ ಬ್ರಾಂಡ್‌ನ ಶೂಗಳನ್ನು ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ತ್ರಿಪಾಠಿಯವರು 50% ರಿಯಾಯಿತಿಯಲ್ಲಿ ಶೂಗಳನ್ನು ಖರೀದಿಸಿದ್ದಾರೆ. ಆರು ತಿಂಗಳೊಳಗೆ ಶೂನ ಅಡಿಭಾಗವು ಹಾನಿಗೊಳಗಾಗುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಏನೂ ಆಗಿಲ್ಲ. ಅವರು ಬಲವಂತವಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ನನ್ನ ಮೇಲೆ ಅವರು ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

  • ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ

    ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ

    ಮಂಗಳೂರು: ಅಂಗಡಿ ಮಾಲೀಕನೊಬ್ಬ (Shop Owner) ತನ್ನ ಕಾರ್ಮಿಕನನ್ನೇ (Labourer) ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

    ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ಗಜ್ಞಾನ್ ಜಗು ಕೊಲೆಯಾದ ವ್ಯಕ್ತಿಯಾಗಿದ್ದು, ಆತನನ್ನು ಅಂಗಡಿ ಮಾಲೀಕ ತೌಸಿಫ್ ಹುಸೈನ್ ಬೆಂಕಿ ಹಚ್ಚಿ ಕೊಂದಿದ್ದಾನೆ.

    ಆರೋಪಿ ಜನರಲ್ ಸ್ಟೋರ್‌ನ ಮಾಲೀಕನಾಗಿದ್ದು, ಕಾರ್ಮಿಕನನ್ನು ಕೊಂದ ಬಳಿಕ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾನೆ. ಆದರೆ ವೈದ್ಯರು ಆತನನ್ನು ಪರೀಕ್ಷಿಸಿದಾಗ ಗಜ್ಞಾನ್ ಮೃತಪಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಹತ್ಯೆ – ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ಆರೋಪಿ ಬಳಿಕ ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾವನ್ನಪ್ಪಿರುವುದಾಗಿ ಪೊಲೀಸರಿಗೆ ದೂರು ನೀಡಿ ಘಟನೆಯನ್ನು ತಿರುಚಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಅಂಗಡಿ ಮಾಲೀಕನ ಮೇಲೆಯೇ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಸಂಚು ಬಯಲಾಗಿದೆ.

    ಘಟನೆ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತೌಸಿಫ್ ಹುಸೈನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದಲಿತನ ಮೇಲೆ ಹಲ್ಲೆ – ಚಪ್ಪಲಿ ನೆಕ್ಕಿಸಿ ವಿಕೃತಿ ಮೆರೆದ ದುರುಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

    ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕ ಹಾಗೂ ಮತ್ತಿಬ್ಬರು ಸೇರಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಸುಮತಿ ಎಂದು ಗುರುತಿಸಲಾಗಿದೆ. ಗ್ರಾಮದ ಅಂಗಡಿ ಮಾಲೀಕ ರಾಮಲಿಂಗಪ್ಪ ಮಾಸ್ಕ್ ಹಾಕದೆ ವ್ಯಾಪಾರ ಮಾಡುತ್ತಿದ್ದು, ಮಾಸ್ಕ್ ಹಾಕಿ ವ್ಯಾಪಾರ ಮಾಡಿ ಎಂದು ಆಶಾ ಕಾರ್ಯಕರ್ತೆ ಸುಮತಿ ಹೇಳಿದ್ದಾರೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಲಾಕ್‍ಡೌನ್ ನಡುವೆ ಆಂಗಡಿ ಯಾಕೆ ತೆಗೆದಿದ್ದೀರಾ ಎಂದು ವಾಗ್ವಾದ ಮಾಡಿದ್ದಾರೆ.

    ಈ ವೇಳೆ ಅಂಗಡಿ ಮಾಲೀಕ ರಾಮಲಿಂಗಪ್ಪ, ಅನಂದ್, ಹಾಗೂ ನರಸಿಂಹಮೂರ್ತಿ ಆಶಾ ಕಾರ್ಯಕರ್ತೆ ಸುಮತಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಆಶಾ ಕಾರ್ಯಕರ್ತೆಯನ್ನು ದೊಡ್ಡಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಮೇಲೆ ಡ್ರಾಗರ್‌ನಿಂದ ಹಲ್ಲೆ

    ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಮೇಲೆ ಡ್ರಾಗರ್‌ನಿಂದ ಹಲ್ಲೆ

    ಬೆಂಗಳೂರು: ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಮೇಲೆ ಗನ್ ತೋರಿಸಿ ಡ್ರಾಗರ್‌ನಿಂದ ಹಲ್ಲೆ ಮಾಡಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ನಗರದ ಅಡೇಪೇಟೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಗನ್ ಹಾಗೂ ಡ್ರಾಗರ್ ತೊರಿಸಿ ಹಲ್ಲೆ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ಪುಂಡರು, ಸಿಗರೇಟ್ ಕೇಳುವ ನೆಪದಲ್ಲಿ ಶ್ರೀ ವೀರೇಶ್ವರ ಪ್ರಾವಿಷನ್ ಸ್ಟೋರ್ ಮಾಲೀಕ ರುದ್ರೇಶ್ (42) ಮೇಲೆ ಹಲ್ಲೆ ಮಾಡಿದ್ದಾರೆ.

    ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕನ ಕುತ್ತಿಗೆ ಭಾಗಕ್ಕೆ ಡ್ರಾಗರ್ ನಿಂದ ಇರಿದಿದ್ದಾರೆ. ಇರಿಯುತ್ತಿದ್ದಂತೆ ರುದ್ರೇಶ್ ಪ್ರತಿ ದಾಳಿ ನಡೆಸಲು ಮುಂದಾಗಿದ್ದು, ಹಲ್ಲೆಕೋರರ ಮುಖಕ್ಕೆ ಚೀಲ ಬಿಸಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ತಕ್ಷಣವೇ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸಮೀಪವೇ ಘಟನೆ ನಡೆದಿದೆ.

  • ಆಟಿಕೆ ಕೊಳ್ಳಲು ಬಂದ ಮಹಿಳೆಯ ಕೊಲೆ- ಶವದ ಜೊತೆ ಅಂಗಡಿ ಮಾಲೀಕ ಸೆಕ್ಸ್

    ಆಟಿಕೆ ಕೊಳ್ಳಲು ಬಂದ ಮಹಿಳೆಯ ಕೊಲೆ- ಶವದ ಜೊತೆ ಅಂಗಡಿ ಮಾಲೀಕ ಸೆಕ್ಸ್

    – ರಾತ್ರಿಯವರೆಗೆ ಶವದ ಜೊತೆ ಇದ್ದ ಆರೋಪಿ
    – ವ್ಯಾನಿನಲ್ಲಿ ಮಹಿಳೆಯ ಮೃತದೇಹ ಪತ್ತೆ

    ಮುಂಬೈ: ಅಂಗಡಿ ಮಾಲೀಕನೊಬ್ಬ ಮಹಿಳಾ ಗ್ರಾಹಕಳನ್ನು ಕೊಲೆ ಮಾಡಿದ್ದಲ್ಲದೇ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿರುವ ಘಟನೆ ಮುಂಬೈನ ನಲಸೋಪರಾದಲ್ಲಿ ನಡೆದಿದೆ.

    ಈ ಘಟನೆ ಜೂನ್ 26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 26 ರಂದು 32 ವರ್ಷದ ಮಹಿಳೆ ದಿನಸಿ ಖರೀದಿಸಲು ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಮಹಿಳೆ ತನ್ನ ಮಕ್ಕಳಿಗೆ ಆಟಿಕೆಗಳನ್ನು ಖರೀದಿಸಲು ಆರೋಪಿಯ ಅಂಗಡಿಗೆ ಹೋಗಿದ್ದಾರೆ. ಅಂದಿನಿಂದ ಮೃತ ಮಹಿಳೆ ನಾಪತ್ತೆಯಾಗಿದ್ದಾರೆ.

    ದಿನಸಿ ಖರೀದಿಸಲು ಹೋಗಿದ್ದ ಪತ್ನಿ ನಾಪತ್ತೆಯಾಗಿದ್ದರಿಂದ ಪತಿ ನಲಸೋಪರಾದಲ್ಲಿ ಟ್ಯೂಲಿಂಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ದೂರು ದಾಖಲಿಸಿದ್ದರು. ಜೂನ್ 28 ರಂದು ನಲಸೋಪರಾದ ಚಂದನ್ ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವ್ಯಾನ್ ಒಳಗೆ ಮಹಿಳೆಯ ಶವ ಪತ್ತೆಯಾಗಿದೆ. ಶವವನ್ನು ಕಾಣೆಯಾದ ಮಹಿಳೆಯ ದೇಹ ಎಂದು ಗುರುತಿಸಲಾಗಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದರು.

    ಮರಣೋತ್ತರ ವರದಿಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಮತ್ತು ಶವದ ಜೊತೆ ಸೆಕ್ಸ್ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ, ಪಾಲ್ಘರ್ ಅಪರಾಧ ವಿಭಾಗದ ತಂಡ ತನಿಖೆಯನ್ನು ಪ್ರಾರಂಭಿಸಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಪಿಕ್‍ಅಪ್ ವ್ಯಾನ್ ಮಾಲೀಕರು ಈ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ನಿರಾಕರಿಸಿದ್ದಾರೆ. ಯಾಕೆಂದರೆ ಹಲವಾರು ದಿನಗಳಿಂದ ವಾಹನವನ್ನು ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಹೆಚ್ಚಿನ ತನಿಖೆಯಿಂದ ಅಂಗಡಿ ಮಾಲೀಕ ಕೊಲೆ ಮಾಡಿರುವುದು ತಿಳಿದುಬಂದಿದೆ. ಜೂನ್ 26 ರಂದು ಆಟಿಕೆಗಳ ಬೆಲೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಅಂಗಡಿ ಮಾಲೀಕನ ಮಧ್ಯೆ ವಾಗ್ವಾದ ನಡೆದಿದೆ. ವಾದದ ನಂತರ ಆರೋಪಿ ಮಹಿಳೆಯನ್ನು ಅಂಗಡಿಯ ಹಿಂದೆ ಇರುವ ಕೋಣೆಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಆರೋಪಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಮೃತದೇಹದ ಜೊತೆ ಸೆಕ್ಸ್ ಮಾಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

    ಆರೋಪಿ ಅಂಗಡಿ ಮಾಲೀಕ ರಾತ್ರಿಯವರೆಗೆ ಮಹಿಳೆಯ ಶವದ ಜೊತೆ ಇದ್ದನು. ನಂತರ ಮಹಿಳೆಯ ಮೃತದೇಹವನ್ನು ನಿಲ್ಲಿಸಿದ್ದ ವ್ಯಾನ್‍ನಲ್ಲಿ ಎಸೆದಿದ್ದಾನೆ. ಅದಕ್ಕೂ ಮೊದಲು ಮಹಿಳೆ ಮೃತದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಎಸೆದಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಗೃಹಬಂಧನದಲ್ಲಿದ್ದ ವ್ಯಕ್ತಿ ತನ್ನ ಶ್ವಾನದಿಂದ ಆಹಾರವನ್ನು ತರಿಸಿಕೊಂಡ

    ಗೃಹಬಂಧನದಲ್ಲಿದ್ದ ವ್ಯಕ್ತಿ ತನ್ನ ಶ್ವಾನದಿಂದ ಆಹಾರವನ್ನು ತರಿಸಿಕೊಂಡ

    – ಸರಿಯಾಗಿ ವಸ್ತುಗಳನ್ನು ಕೊಡಲಿಲ್ಲ ಎಂದ್ರೆ ಶ್ವಾನ ಕಚ್ಚುತ್ತೆಂದು ಪತ್ರ

    ವಾಷಿಂಗ್ಟನ್: ಗೃಹಬಂಧನದಲ್ಲಿದ್ದ ಮೆಕ್ಸಿಕೋದ ವ್ಯಕ್ತಿಯೊಬ್ಬ ತನ್ನ ಶ್ವಾನದ ಮೂಲಕ ಆಹಾರವನ್ನು ತರಿಸಿಕೊಂಡಿದ್ದಾನೆ.

    ಆಂಟೋನಿಯೊ ಮುನೊಜ್ ಎಂಬವನು ಮೂರನೇ ದಿನ ಮನೆಯಲ್ಲಿಯೇ ಇದ್ದನು. ಈ ವೇಳೆ ಆತನಿಗೆ ಚಿಟೋಸ್ ತಿನ್ನುವ ಆಸೆಯಾಗಿದೆ. ಮುನೊಜ್ ಮನೆಯಿಂದ ಹೊರಬಂದು ಚಿಟೋಸ್ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಆತ ತನ್ನ ಶ್ವಾನ ಚಿಹೋವಾ ಮೂಲಕ ಚಿಟೋಸ್ ತರಿಸಿಕೊಂಡಿದ್ದಾನೆ.

    ಮುನೋಜ್ ತನ್ನ ಶ್ವಾನದ ಮೇಲೆ ಚೀಟಿವೊಂದನ್ನು ಅಂಟಿಸಿದ್ದನು. ಆ ಚೀಟಿಯಲ್ಲಿ ವಸ್ತುಗಳ ಲಿಸ್ಟ್ ಅನ್ನು ಬರೆದಿದ್ದನು. ಜೊತೆಗೆ ಶ್ವಾನದ ಕಾಲರಿನಲ್ಲಿ(ಬೆಲ್ಟ್) 20 ಡಾಲರ್ ನೋಟ್ ಕೂಡ ಅಂಟಿಸಿದ್ದನು.

    ಚೀಟಿಯಲ್ಲಿ, ಹೆಲೋ ಮಿಸ್ಟರ್ ಶಾಪ್ ಕೀಪರ್, ದಯವಿಟ್ಟು ಚೀಟಿಯಲ್ಲಿ ಬರೆದಿರುವ ವಸ್ತುಗಳನ್ನು ನನ್ನ ಶ್ವಾನಗೆ ಕೊಡಿ. ಶ್ವಾನದ ಕಾಲರಿನಲ್ಲಿ 20 ಡಾಲರ್ ಇಟ್ಟಿದ್ದೇನೆ. ನೀವೇನಾದರೂ ಸರಿಯಾದ ವಸ್ತುಗಳನ್ನು ನೀಡಲಿಲ್ಲ ಎಂದರೆ ನನ್ನ ಶ್ವಾನ ನಿಮ್ಮನ್ನು ಕಚ್ಚುತ್ತದೆ ಎಂದು ಬರೆದಿದ್ದನು.

    ಅಂಗಡಿ ಮಾಲೀಕ ಚೀಟಿಯಲ್ಲಿ ಬರೆದಿದ್ದನು ಓದಿ ಆ ವಸ್ತುಗಳನ್ನು ಶ್ವಾನಗೆ ನೀಡಿದ್ದನು. ಮಾಲೀಕ ನೀಡಿದ ವಸ್ತುಗಳನ್ನು ಶ್ವಾನ ತೆಗೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿತು. ಸದ್ಯ ಮುನೋಜ್‍ನ ಈ ಐಡಿಯಾಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಆಗ್ರಾ: 4 ಮಂದಿ ಯುವಕರು ಅಂಗಡಿಯೊಂದರಲ್ಲಿ 5 ರೂ. ಗುಟ್ಕಾ ಖರೀದಿಸಿ ಹಾಗೇಯೇ ಹೋಗುತ್ತಿದ್ದರು. ಆಗ ಅವರನ್ನು ತಡೆದು ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ, ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ದೀಪಕ್, ಟಿಕನ್ನಾ, ಫೌಜ್ದಾರ್, ಪೋಟಾ ಎಂದು ಗುರುತಿಸಲಾಗಿದೆ. ಮಾಧೋಪುರದ ಚೋಟು ಅಗರ್ವಾಲ್ ಗುಂಡೇಟು ತಿಂದ ಅಂಗಡಿ ಮಾಲೀಕ. ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಸುಮಾರು 9:30ರ ಹೊತ್ತಿಗೆ ಈ ಘಟನೆ ನಡೆದಿದೆ. ಚೋಟು ಅಂಗಡಿಗೆ ಬಂದ ಆರೋಪಿಗಳು 5 ರೂ. ಬೆಲೆಯ ಗುಟ್ಕಾವನ್ನು ಖರೀದಿಸಿದ್ದರು. ಆದರೆ ಹಣ ಕೊಡದೆ ವಾಪಾಸ್ ಆಗುತ್ತಿದ್ದ ವೇಳೆ ಅವರನ್ನು ತಡೆದ ಚೋಟು ಹಣ ಕೊಟ್ಟು ಹೋಗಿ ಎಂದನು. ಕೇವಲ 5 ರೂ. ವಿಚಾರಕ್ಕೆ ಸಿಟ್ಟಿಗೆದ್ದ ಯುವಕರು ಚೋಟುಗೆ ಹಿಗ್ಗಾಮುಗ್ಗ ಹೊಡೆದು, ಆತನ ಅಂಗಡಿಯ ಪೆಟ್ಟಿಗೆಯಲ್ಲಿದ್ದ 250 ರೂ. ಹಣವನ್ನು ದೋಚಿದ್ದರು.

    ಈ ವೇಳೆ ಗಲಾಟೆ ಗಮನಿಸಿದ ಸ್ಥಳೀಯ ಅಮಿತ್ ಚೋಟು ಸಹಾಯಕ್ಕೆ ಬಂದಾಗ, ಯುವಕರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಚೋಟುಗೂ ಗುಂಡಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಸಾಯಿಸುತ್ತೇವೆ. ನಿನ್ನ ಕುಟುಂಬವನ್ನೂ ಕೊಲೆ ಮಾಡುತ್ತೇವೆ ಎಂದು ಅಮಿತ್‍ಗೆ ಬೆದರಿಕೆವೊಡ್ಡಿ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಆರೋಪಿಗಳು ಹೋದ ಬಳಿಕ ಗಂಭೀರ ಗಾಯಗೊಂಡಿದ್ದ ಚೋಟುವನ್ನು ಅಮಿತ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲು ಪೊಲೀಸರಿಗೆ ದೂರು ಕೊಡಲು ಹೆದರಿದ ಅಮಿತ್ ಬುಧವಾರ ಧೈರ್ಯ ಮಾಡಿ ಈ ಬಗ್ಗೆ ತಾಪ್ಪಲ್ ಪೊಲೀಸರ ಮುಂದೆ ಘಟನೆ ವಿವರಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, ಸೆಕ್ಷನ್ 394 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    ಆಗ್ರಾ: ಸಮೋಸಕ್ಕೆ 1 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಯೋರ್ವ ಗ್ರಾಹಕನ ಸಹೋದರನ ಮೈಮೇಲೆ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರದಂದು ಉತ್ತರಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಮಥುರಾ ನಿವಾಸಿ ಹೇಮರಾಜ್(26) ಹಾಗೂ ಆತನ ಸಹೋದರ ವಿಷ್ಣು(22) ಇಬ್ಬರ ಮೇಲು ಕಾದ ಎಣ್ಣೆ ಎರಚಲಾಗಿದೆ. ಕೇವಲ 1 ರೂ. ಹಣ ಕಡಿಮೆ ನೀಡಿದ್ದೇ ಅಂಗಡಿ ಮಾಲೀಕ ಸುರೇಶ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆಯಲು ಕಾರಣವಾಗಿದೆ.

    ರೆಟಿಯಾ ಮಾರುಕಟ್ಟೆಯಲ್ಲಿರುವ ಸ್ವೀಟ್ ಅಂಗಡಿಗೆ ಹೋಗಿ ವಿಷ್ಣು ಸಮೋಸಾ ಖರೀದಿಸಿದ್ದನು. ಈ ವೇಳೆ ಆತನ ಬಳಿಕ ಕೇವಲ ಐದು ರೂಪಾಯಿ ಇದ್ದ ಕಾರಣಕ್ಕೆ ಅಷ್ಟನ್ನೇ ಅಂಗಡಿ ಮಾಲೀಕನಿಗೆ ಯುವಕ ಕೊಟ್ಟಿದ್ದಾನೆ. ಆದರೆ ಸಮೋಸಕ್ಕೆ 6 ರೂ. ನೀನು 1 ರೂ. ಕಡಿಮೆ ಕೊಟ್ಟಿದ್ದೀಯಾ ಎಂದು ಮಾಲೀಕ ಯುವಕನ ಮೇಲೆ ಜಗಳಕ್ಕಿಳಿದಿದ್ದಾನೆ. ಬಳಿಕ ಜಗಳ ದೊಡ್ಡದಾಗಿ ಅಂಗಡಿ ಮಾಲೀಕ ಹಾಗೂ ಅವನ ಮಕ್ಕಳು ಯುವಕನನ್ನು ಬೈದು, ಮನ ಬಂದಂತೆ ಥಳಿಸಿದ್ದಾರೆ.

    ಈ ವೇಲೆ ಸಹೋದರನನ್ನು ರಕ್ಷಸಿಲು ಹೇಮರಾಜ್ ಬಂದು ಗಲಾಟೆ ನಿಲ್ಲುಸುವಂತೆ ಹೇಳಿದ್ದಾನೆ. ಆದರೆ ಸಿಟ್ಟಿನಲ್ಲಿದ್ದ ಮಾಲೀಕ ಮಾತ್ರ ಯಾರ ಮಾತನ್ನು ಕೇಳದೆ ಅವರಿಬ್ಬರ ಮೇಲೆ ಕಾದ ಎಣ್ಣೆಯನ್ನು ಎರಚಿ ಕ್ರೌರ್ಯ ಮೆರೆದಿದ್ದಾನೆ. ಪರಿಣಾಮ ಹೇಮರಾಜ್‍ಗೆ ಗಂಭೀರ ಗಾಯಗೊಂಡಿದ್ದು, ವಿಷ್ಣುಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರು ಸಹೋದರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರೋಪಿ ಸುರೇಶ್ ಮಾತ್ರ ನಾನೇನು ತಪ್ಪು ಮಾಡಿಲ್ಲ. ಸಮೋಸದ ಬಾಕಿ 1 ರೂಪಾಯಿ ಕೊಡಿ ಎಂದಿದ್ದಕ್ಕೆ ಸಹೋದರರು ನಮ್ಮ ಅಂಗಡಿಯನ್ನು ಧ್ವಂಸ ಮಾಡಿ, ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾನೆ.

    ಈ ಬಗ್ಗೆ ಈಗಾಗಲೇ ಪೊಲೀಸರು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗನಿಂದ ಸಖತ್ ಕ್ಲಾಸ್!

    ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗನಿಂದ ಸಖತ್ ಕ್ಲಾಸ್!

    – ಅಂಗಡಿ ಮಾಲೀಕನ ಬೈಗುಳದಿಂದ ಕಾಲ್ಕಿತ್ತ ಪ್ರತಿಭಟನಾಕಾರರು

    ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಬಂದ್‍ಗೆ ಕರೆ ಕೊಟ್ಟಿದ್ದು, ಹೀಗಾಗಿ ಮೊದಲ ದಿನವಾದ ಇಂದು ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

    ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ತಾಲೂಕು ಗುಜ್ಜಾಡಿಯಲ್ಲಿ ನಡೆದಿದೆ. ಅಂಗಡಿ ಮಾಲೀಕನ ಬೈಗುಳ ಕೇಳಿದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಂಗಡಿ ಮಾಲೀಕ ಏನ್ ಹೇಳಿದ್ರು..?
    ನಾನು ಮೋದಿ ಬೆಂಬಲಿಗ ಮಾತ್ರವಲ್ಲದೇ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಕಮ್ಯೂನಿಷ್ಟರಿಗೆ ನಾವು ಸಪೋರ್ಟ್ ಮಾಡಲ್ಲ. ನೀವು ಒಳ್ಳೆಯ ಹೋರಾಟಗಳನ್ನು ಮಾಡುತ್ತೀರಾ. ಮಾಡುವುದಿದ್ದರೆ ಶಬರಿಮಲೆಗಾಗಿ ಹೋರಾಟ ಮಾಡಿ. ಸಾವಿರ ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡೆಯುತ್ತಿತ್ತು. ಮುಖ್ಯಮಂತ್ರಿಗಳು ಮಾಂಸ ತಿಂದು ದೇವಸ್ಥಾನಕ್ಕೆ ಹೋದಾಗ ಕಮ್ಯುನಿಸ್ಟರು ಬಂದ್ ಮಾಡಲ್ಲ. ಆದ್ರೆ ಒಳ್ಳೆಯ ಪ್ರಧಾನಿ ನಮ್ಮ ದೇಶದಲ್ಲಿದ್ದರೆ ನೀವು ಪ್ರತಿಭಟನೆಗಳನ್ನು ಮಾಡುತ್ತಿದ್ದೀರಾ ಅಂತ ಅಂಗಡಿ ಮಾಲೀಕ ಕೆಂಡಾಮಂಡಲರಾಗಿದ್ದಾರೆ.

    ಈ ವೇಳೆ ಪ್ರತಿಭಟನಾಕಾರರು ನಾವು ಮಾನವೀಯತೆಯ ದೃಷ್ಟಿಯಿಂದ ಅಂಗಡಿ ಬಂದ್ ಮಾಡಲು ಹೇಳುತ್ತಿದ್ದೇವೆ ಅಂತ ಹೇಳಿದ್ರು. ಇದರಿಂದ ಮತ್ತಷ್ಟು ಕೋಪಗೊಂಡ ಅಂಗಡಿ ಮಾಲೀಕ, ಯಾವುದು ಮಾನವೀಯತೆ..? ದೇಶದ ಬಗ್ಗೆ ಚಿಂತೆ ಮಾಡಿ. ಅದು ಮಾನವೀಯತೆ. ನರೇಂದ್ರ ಮೋದಿ ಸರ್ಕಾರ ಇಷ್ಟು ಸವಲತ್ತು ನಿಮಗೆ ಕೊಟ್ಟಿದೆ. ಬೆಲೆಯೇರಿಕೆ 2014ರಲ್ಲಿ ಎಷ್ಟು, 2019ರಲ್ಲಿ ಎಷ್ಟು ಎನ್ನುವುದನ್ನು ತಾಕತ್ತಿದ್ದರೆ ಬಂದು ಟ್ಯಾಲಿ ಮಾಡಿ ತಂದು ತೋರಿಸಿ ಅಂತ ಸವಾಲೆಸೆದರು.

    ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೇ ನಮ್ಮ ಪುಣ್ಯ. ಕೇರಳಕ್ಕೆ ಹೋಗಿ ಪ್ರತಿಭಟನೆ ಮಾಡಿ. ಶಬರಿಮಲೆಗೆ ಮಾಂಸ ತಿಂದು ಹೋಗಿದ್ದಾರಲ್ವ ಅವರ ವಿರುದ್ಧ ಪ್ರತಿಭಟನೆ ಮಾಡಲು ಇವರಿಗೆ ಜೀವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕನ ಬೈಗುಳದಿಂದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ.

    https://www.youtube.com/watch?v=SS8oTtm00f4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಕ್ಲೇರ್ಸ್ ಪ್ರಿಯರೇ ಎಚ್ಚರ – ಚಾಕ್ಲೇಟ್ ತಿನ್ನುವ ಮುನ್ನ ಈ ವಿಡಿಯೋ ನೋಡಿ

    ಎಕ್ಲೇರ್ಸ್ ಪ್ರಿಯರೇ ಎಚ್ಚರ – ಚಾಕ್ಲೇಟ್ ತಿನ್ನುವ ಮುನ್ನ ಈ ವಿಡಿಯೋ ನೋಡಿ

    ಚಿಕ್ಕಬಳ್ಳಾಪುರ: ಎಕ್ಲೇರ್ಸ್ ಚಾಕ್ಲೇಟ್ ಪ್ರಿಯರೇ ಎಚ್ಚರವಾಗಿರಿ. ನೀವು ಚಾಕ್ಲೇಟ್ ತಿನ್ನುವ ಮುನ್ನ ಈ ವಿಡಿಯೋವನ್ನು ನೋಡಲೇಬೇಕು.

    ಮಂಜುನಾಥ್ ಎಂಬವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಒಂದು ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದರು. ಈ ವೇಳೆ ಚಾಕ್ಲೇಟ್ ತಿನ್ನಬೇಕೆಂದು ಆಸೆಯಾಯಿತು. ಹಾಗಾಗಿ ಅವರು ತನ್ನದೇ ಅಂಗಡಿಯಲ್ಲಿದ್ದ ಎಕ್ಲೇರ್ಸ್ ಚಾಕ್ಲೇಟ್ ತೆಗೆದುಕೊಂಡು ತಿನ್ನಲು ಮುಂದಾಗಿದ್ದಾರೆ.

    ಮಂಜುನಾಥ್ ತನ್ನದೇ ಅಂಗಡಿಯಲ್ಲಿ ಚಾಕ್ಲೇಟ್ ತಿನ್ನುವಾಗ ಅದರಲ್ಲಿ ಹುಳ ಪತ್ತೆಯಾಗಿದೆ. ಚಾಕ್ಲೇಟ್ ರ‍್ಯಾಪರ್ ಬಿಚ್ಚಿದ ಕೂಡಲೇ ಭಾರಿ ಗಾತ್ರದ ಹುಳು ಪತ್ತೆಯಾಗಿದೆ. ಇದನ್ನು ಕಂಡು ಮಂಜುನಾಥ್ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಚಾಕ್ಲೇಟ್ ನಲ್ಲಿ ಹುಳ ಪತ್ತೆಯಾಗಿರುವ ಫೋಟೋ ಮತ್ತು ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

    ಮಂಜುನಾಥ್ ಪ್ರಾವಿಜನ್ ಸ್ಟೋರ್ ಜೊತೆ ಫೋಟೋ ಸ್ಟುಡಿಯೋ ಕೂಡ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=JWxmrqYCma4&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv