ಗದಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು, ನಗರದಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸುತ್ತಿದೆ. ಸುಖಾ ಸುಮ್ಮನೆ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ನಿಯಮ ಮೀರಿ ಅಂಗಡಿ ತೆರೆದವರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇನ್ನೂ ಕೆಲವ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ನಗರದ ಸರಾಫ್ ಬಜಾರ್ ನಲ್ಲಿ ಒಬ್ಬರು ಜ್ಯುವೇಲರಿ ಶಾಪ್ ಓಪನ್ ಮಾಡಿದ್ದು, ಅಂಗಡಿನಲ್ಲಿ ಸಾಕಷ್ಟು ಜನರನ್ನು ಕಲೆಹಾಕಿದ್ದರು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದಕ್ಕೆ ವ್ಯಾಪಾರಿ ಬಂಧನ ಮಾಡಿದ್ದು, ನಂತರ ಅಂಗಡಿ ಸೀಜ್ ಮಾಡುವ ಪ್ರಕ್ರಿಯೆ ಸಹ ನಡೆಯಿತು. ಹೀಗೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ, ಇನ್ನುಳಿ ಅಂಗಡಿ ಓಪನ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಬಟ್ಟೆ, ಜ್ಯುವೆಲರಿ, ಮೊಬೈಲ್ ಶಾಪ್, ಪಾತ್ರೆ ಅಂಗಡಿ ಓಪನ್ ಮಾಡಿದವರಿಗೆ ದಂಡ ಹಾಕುವುದುರ ಜೊತೆಗೆ ಅಂತಹವರ ವಿರುದ್ಧ ಕೇಸ್ ಸಹ ದಾಖಲಿಸಲಾಗಿದೆ. ಮಾರ್ಕೆಟ್ ಹಾಗೂ ಪ್ರಮುಖ ಸರ್ಕಲ್ ನಲ್ಲಿ ಮಾಸ್ಕ್ ಹಾಕದ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಪೊಲೀಸರು, ನಗರಸಭೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದ್ದಾರೆ. ಜಿಲ್ಲಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಖಾಕಿ ಪಡೆ ಕಠಿಣ ಕ್ರಮ ಜರುಗಿಸುತ್ತಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಶತಕದ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದು, ಇಷ್ಟಾದರೂ ಅಂಗಡಿ ಮಾಲೀಕರು ಡೋಂಟ್ ಕೇರ್ ಎನ್ನುತ್ತಿದದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್‍ಪಿ ಕ್ಷಮಾ ಮೀಶ್ರ ಅವರು ಇಂದು ಕೊಡಗು ಜಿಲ್ಲೆಯ ಕುಶಾಲನಗರದ ರಥ ಬೀದಿಗೆ ದಿಡೀರ್ ಭೇಟಿ ನೀಡಿ, ರಥ ಬೀದಿಯಲ್ಲಿರುವ ಅಂಗಡಿಗಳ ಬಳಿ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದ ಕೋಡಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಸೀಜ್ ಮಾಡಿಸಿದ್ದಾರೆ.
ರಥ ಬೀದಿಯಲ್ಲಿರುವ ಬಟ್ಟೆ ಅಂಗಡಿ, ರೇಸಾನ್ ಹಾಗೂ ಚಿನ್ನದಂಗಡಿಗಳಿಗೆ ಬೀಗ ಹಾಕಿಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದ ಹತ್ತಕ್ಕೂ ಹೆಚ್ಚು ವ್ಯಾಪಾರಸ್ಥರ ಅಂಗಡಿಗಳಿಗೆ ಬೀಗ ಹಾಕಿಸಿ ಜಿಲ್ಲೆಯ ಜನರಿಗೆ ಕೋವಿಡ್ ನಿಯಮಗಳ ಪಾಲನೆ ಕುರಿತು ಎಚ್ಚರಿಕೆ ನೀಡಿದ್ದಾರೆ.
ಮುಂಬೈ: ಪುಣೆಯ ಹಳೆಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು 25 ಅಂಗಡಿಗಳು ಸುಟ್ಟು ಭಸ್ಮವಾಗಿದೆ.
ಮಹಾರಾಷ್ಟ್ರದ ಪುಣೆ ಕಂಟೋನ್ಮೆಂಟ್ ಪ್ರದೇಶದ ಪ್ರಸಿದ್ಧ ಶಿವಾಜಿ ಮಾರುಕಟ್ಟೆಯಲ್ಲಿ ಮುಂಜಾನೆ 4 ಗಂಟೆ ಸರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 25ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿದೆ.
ಘಟನೆ ಕುರಿತಂತೆ ಮಾಹಿತಿ ದೊರೆತ ತಕ್ಷಣ 9 ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕಳುಹಿಕೊಡಲಾಯಿತು ಹಾಗೂ ಕೇವಲ ಅರ್ಧ ಗಂಟೆಯಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಎಂದು ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರಶಾಂತ್ ರಾನ್‍ಪೈಸ್ ತಿಳಿಸಿದ್ದಾರೆ.
ಸದ್ಯ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಹಾಗೂ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ಹೇಳಿದರು.
ಕೋಲಾರ: ನಗರದಲ್ಲಿ ಕೊರೊನಾ ಆತಂಕದ ಮಧ್ಯೆ ಕಳ್ಳರ ಕೈಚಳಕ ಆರಂಭವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೋಲಾರ ನಗರದ ಅರ್ಬನ್ ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಂಪ್ಲೆಕ್ಸ್ ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಅದೃಷ್ಟವಶಾತ್ ಅರ್ಬನ್ ಬ್ಯಾಂಕ್ ಹೊರತುಪಡಿಸಿ ಉಳಿದಂತೆ ಮೆಡಿಕಲ್ ಸ್ಟೋರ್, ಡೆಂಟಲ್ ಕ್ಲಿನಿಕ್, ಟೈಲರ್ ಅಂಗಡಿ, ಫೈನಾನ್ಸ್ ಆಫೀಸ್ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಅಂಗಡಿಗಳಲ್ಲಿ ಇದ್ದ ಸುಮಾರು 50 ಸಾವಿರ ರೂ. ನಗದನ್ನು ದೋಚಿರುವ ಕಳ್ಳರು ಅಂಗಡಿಗಳಲ್ಲಿದ್ದ ಕೆಲ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಇತ್ತೀಚೆಗಷ್ಟೇ ಕೋಲಾರ ನಗರದ ಜಯನಗರದ ಒಂದು ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದರು. ಆ ಪ್ರಕರಣ ಬೇಧಿಸುವ ಮೊದಲೇ ಮತ್ತೆ ಕಳ್ಳತನ ನಡೆದಿರುವುದು ನಗರದ ಜನರ ನಿದ್ದೆಗೆಡಿಸಿದೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದಷ್ಟು ಬೇಗ ಕಳ್ಳರನ್ನು ಹಿಡಿದು, ಜನರಲ್ಲಿರುವ ಆತಂಕ ನಿವಾರಣೆ ಮಾಡುವ ಜೊತೆಗೆ ಕಳ್ಳತದ ಮಾಲನ್ನು ವಾಪಸ್ ಕೊಡಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಸಿದ್ದಾರೆ.
ಬೆಂಗಳೂರು: ಭಾನುವಾರ ನಾನ್‍ವೆಜ್ ಪ್ರಿಯರಿಗೆ ವಿಶೇಷ ದಿನವಾಗಿದ್ದು, ಬೆಳ್ಳಂಬೆಳಗ್ಗೆ ನಾನ್ ವೆಜ್ ಅಂಗಡಿಗಳ ಮುಂದೆ ಜನರು ಸಾಲಾಗಿ ಕ್ಯೂ ನಿಂತಿದ್ದಾರೆ.
ಇಂದು ಲಾಕ್‍ಡೌನ್ ಜಾರಿಯಾಗಿ ಐದನೇ ದಿನವಾಗಿದೆ. ಜೊತೆಗೆ ಇಂದು ಸಂಡೇ ಲಾಕ್‍ಡೌನ್ ಕೂಡ ಆಗಿದೆ. ಹೀಗಾಗಿ ಮುಂಜಾನೆಯಿಂದಲೇ ನಾನ್ ವೆಜ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಶಿವಾಜಿನಗರ ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಟನ್, ಚಿಕನ್, ಫಿಶ್ ಖರೀದಿಯಲ್ಲಿ ಮಾಂಸ ಪ್ರಿಯರು ತೊಡಗಿದ್ದು, ಇದರಿಂದ ಐದನೇ ದಿನದ ಲಾಕ್‍ಡೌನ್‍ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಇತ್ತ ಮೈಸೂರು ರಸ್ತೆಯ ಮಟಾನ್ ಸ್ಟಾಲ್ ಮುಂದೆ ಬೆಳ್ಳಂಬೆಳಗ್ಗೆ ಮಟಾನ್ ಖರೀದಿಗೆ ಜನರು ಫುಲ್ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸದಾಶಿವನಗರ ಮಟನ್, ಚಿಕನ್ ಅಂಗಡಿಗಳ ಮುಂದೆಯೂ ಜನರು ಕ್ಯೂ ನಿಂತಿದ್ದಾರೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಾಲಿನಲ್ಲಿ ನಿಂತು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಶನಿವಾರ 4,537 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಸಹ 2 ಸಾವಿರದ ಗಡಿ ದಾಟಿದ್ದು, 2,125 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಶನಿವಾರ 49 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ದಿನ 93 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಹೊಸ ಲಾಕ್‍ಡೌನ್ ನಿಯಮ ಜಾರಿಯಾಗಲಿದೆ.
ಇಂದು ನಗರಸಭೆಯಲ್ಲಿ ನಡೆದ ವರ್ತಕರು, ಸಾರ್ವಜನಿಕರ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ. ಅದರಂತೆಯೇ ಮಂಗಳವಾರದಿಂದ ಒಂದು ವಾರ ಹೊಸ ಲಾಕ್‍ಡೌನ್ ನಿಯಮ ಜಾರಿಯಾಗಲಿದೆ.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೇ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್‍ಗೆ ನಿರ್ಧಾರ ಮಾಡಲಾಗಿದೆ. ಅಗತ್ಯ ವಸ್ತು ಬಿಟ್ಟು ಬೇರೆ ವಹಿವಾಟು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅವರು ಮಾಹಿತಿ ನೀಡಿದ್ದಾರೆ.
ಈ ಮಹಾಮಾರಿ ಕೊರೊನಾದಿಂದ ಜೀವ, ಜೀವನ ಎರಡೂ ಉಳಿಯಬೇಕು. ಹೀಗಾಗಿ ಎಲ್ಲರೂ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್‍ಗೆ ಸ್ಪಂದಿಸುವಂತೆ ಶಾಸಕ ಪ್ರೀತಂಗೌಡ ಮನವಿ ಮಾಡಿಕೊಂಡಿದ್ದಾರೆ.
ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಮೈಸೂರು ಜಿಲ್ಲಾದ್ಯಂತ ಎಲ್ಲ ವ್ಯಾಪಾರ-ವಹಿವಾಟು ಬಂದ್ ಆಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ಮಾಡಿದ್ದೇವೆ. ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಎಲ್ಲ ತರಹದ ವ್ಯವಹಾರಗಳನ್ನು ಕ್ಲೋಸ್ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದರು.
ಇಷ್ಟು ದಿನ 7.30ರ ನಂತರ ಅಂಗಡಿಗಳನ್ನು ಮುಚ್ಚಬೇಕು ಎಂದು ಹೇಳಲಾಗಿತ್ತು. ಆದರೆ ಈಗ 6 ಗಂಟೆಯಿಂದ ಎಲ್ಲ ವ್ಯಾಪಾರವನ್ನು ಬಂದ ಮಾಡಲಾಗುತ್ತದೆ. ಕೋವಿಡ್ ನಿಯಂತ್ರಣ ಮಾಡಲು, ಜನರ ಓಡಾಟ ನಿಯಂತ್ರಣ ಮಾಡುವ ಸಲುವಾಗಿ ಈ ಕ್ರಮಗೊಳ್ಳಲಾಗಿದೆ. ಶುಕ್ರವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಜಿಲ್ಲಾಡಳಿತದ ಜೊತೆಗಿನ ಸಭೆ ಬಳಿಕ ಸೋಮಶೇಖರ್ ಹೇಳಿದರು.
ಎಲ್ಲ ಎಪಿಎಂಸಿ ಹಾಗೂ ಮಾರುಕಟ್ಟೆಗಳಲ್ಲಿ ಬೆಳಗ್ಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಜೊತೆಗೆ ಅಂತರ ಕಾಯುಕೊಳ್ಳಬೇಕು. ಇನ್ನೂ ಶುಕ್ರವಾರದಿಂದ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಗ್ರಾಮಾಂತರ ಭಾಗದಲ್ಲಿ 100 ರೂಪಾಯಿ ದಂಡ ಹಾಕಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ ಪೊಲೀಸರಿಗೆ ನೆಗಡಿ, ಜ್ವರ ಬಂದಿದ್ದರೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಬೇಕು. ಮಹಾನಗರ ಪಾಲಿಕೆ ಸಿಬ್ಬಂದಿಗೂ ಟೆಸ್ಟ್ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಒಂದು ವಾರದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದಿದ್ದರೆ ಐದಾರು ಜನರು ಗುಂಪಲ್ಲಿ ನಿಂತು ಮಾತನಾಡುವವರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು, ತಮಿಳುನಾಡು, ರಾಜಸ್ಥಾನ, ಆಂಧ್ರ ಪ್ರದೇಶದಿಂದ ಮೈಸೂರಿಗೆ ಬಂದವರಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಈಗ ಬೆಂಗಳೂರಿನಿಂದ ಹೆಚ್ಚಾಗಿ ಮೈಸೂರಿಗೆ ಬರುತ್ತಿಲ್ಲ ಎಂದು ಸೋಮಶೇಖರ್ ಹೇಳಿದರು.
ಈ ಕೊರೊನಾ ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ. ಒಂದೇ ತಂಡದಲ್ಲಿ ಪೊಲೀಸರು ಕೆಲಸ ಮಾಡಿದ್ದರು. ಹೀಗಾಗಿ ಮೈಸೂರಿನಲ್ಲಿ ಅವರಿಗೆ ಕೊರೊನಾ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಆರೋಗ್ಯ ಸಿಬ್ಬಂದಿ ಹೆಚ್ಚಿಸುವ ಕಡೆ ಗಮನ ಕೊಡಲಾಗುವುದು ಎಂದು ತಿಳಿಸಿದರು.
ರಾಮನಗರ: ರಾಮನಗದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ರಣಕೇಕೆಗೆ ಕನಕಪುರ ಜನ ಆತಂಕಗೊಂಡಿದ್ದಾರೆ. ಹೀಗಾಗಿ ಇಂದಿನಿಂದ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲಾಗಿದೆ.
ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕನಕಪುರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. 11 ಗಂಟೆಯ ನಂತರ ಕನಕಪುರ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಲಾಕ್‍ಡೌನ್ ಆಗಿದ್ದ ವೇಳೆ ಜನರು ಓಡಾಟ ಕೂಡ ಮಾಡುವಂತಿಲ್ಲ.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕನಕಪುರ ಲಾಕ್‍ಡೌನ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜುಲೈ 1ರ ವರೆಗೂ ಲಾಕ್‍ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ.
ಬೆಳ್ಳಂಬೆಳಗ್ಗೆ ಕನಕಪುರದಲ್ಲಿ ಅಗತ್ಯ ವಸ್ತುಗಳ ಮಾರಾಟ ಜೋರಾಗಿದ್ದು, ಕೆಲ ಅಂಗಡಿಗಳು ಓಪನ್ ಆಗಿವೆ. ಆದರೆ ಅನೇಕ ಅಂಗಡಿಗಳು ಮುಚ್ಚಲಾಗಿದೆ. 11 ಗಂಟೆಯ ಬಳಿಕ ಕನಕಪುರ ಕಂಪ್ಲೀಟ್ ಲಾಕ್‍ಡೌನ್ ಆಗಲಿದೆ. ಹೀಗಾಗಿ ಜನರು ಅಗತ್ಯ ವಸ್ಯಗಳನ್ನು ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು: ಸರ್ಕಾರ ಮೇ 31 ರವರೆಗೆ ಪ್ರತೀ ಭಾನುವಾರ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್‍ಡೌನ್‍ಗೆ ಆದೇಶ ನೀಡಿದೆ. 4.0 ವಿನಾಯಿತಿ ಲಾಕ್‍ಡೌನ್‍ನ ನಡುವೆ ಮೊದಲ ಭಾನುವಾರ ಬಂದಿದ್ದು, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಜನರು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮಗಳನ್ನು ರೂಪಿಸಿಕೊಂಡಿದೆ. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಸಂಪೂರ್ಣ ಲಾಕ್‍ಡೌನ್ ಇರಲಿದೆ.
ಹಾಗಾದರೆ ಭಾನುವಾರ ರಾಜ್ಯದಲ್ಲಿ ಏನೆಲ್ಲಾ ಇರಲಿವೆ. ಯಾವೆಲ್ಲಾ ಸೌಲಭ್ಯಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎಂಬುದನ್ನು ನೋಡೋದಾದರೆ:
ಭಾನುವಾರ ಏನಿರುತ್ತೆ
* ಹಣ್ಣು, ತರಕಾರಿ, ದಿನಸಿ, ಮಾಂಸದ ಅಂಗಡಿಗಳಿಗೆ ತೆರೆಯಲು ಅವಕಾಶ
* ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ ಗಳಿಗೆ ಅವಕಾಶ
* ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್, ಮಾಧ್ಯಮಗಳು ಓಡಾಟಕ್ಕೆ ಅವಕಾಶ
* ಡಯಾಲಿಸಿಸ್, ಅನಾರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಲು ಅನುಮತಿ
* ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅನುಮತಿ
* ಮದುವೆ ಸಮಾರಂಭಗಳಿಗೆ ಷರತ್ತಿನ ಅನುಮತಿ
ಭಾನುವಾರ ಏನಿರಲ್ಲ?
* ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ
* ಬಸ್ ಸಂಚಾರ ಇರಲ್ಲ
* ಅಗತ್ಯ ವಸ್ತುಗಳನ್ನ ಹೊರತು ಪಡಿಸಿ, ಉಳಿದ ಅಂಗಡಿ ಮುಂಗಟ್ಟುಗಳು ಬಂದ್
* ನಗರದ ಪ್ರಮುಖ ರಸ್ತೆಗಳು ಬ್ಯಾರಿಕೆಡ್‍ನಿಂದ ಕ್ಲೋಸ್
* ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್.
* ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಲಾಕ್
* ಖಾಸಗಿ ಕಂಪನಿಗಳೂ ಕೂಡ ಬಂದ್
* ಎಲ್ಲಾ ಪಾರ್ಕ್ ಗಳಿಗೂ ಬೀಗ ಬೀಳಲಿದ್ದು, ಜಾಗಿಂಗ್ ವಾಕಿಂಗ್ ಗೆ ಪರ್ಮೀಷನ್ ಇಲ್ಲ.
* ಚಿನ್ನದ ಅಂಗಡಿಗಳು ಕೂಡ ಕ್ಲೋಸ್ ಆಗಲಿವೆ
* ಆಟೋ, ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ
* ಖಾಸಗಿ ವಾಹನ ಬಳಸಿ ಓಡಾಡುವ ಹಾಗಿಲ್ಲ
* ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ
ಪ್ರತಿದಿನ ತೆರೆಯುತ್ತಿದ್ದ ಬಾರ್‌ಗಳು ಭಾನುವಾರ ಕ್ಲೋಸ್ ಆಗಲಿವೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಕಮೀಷನರ್ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಬಾರ್ ಕ್ಲೋಸ್ ಬಗ್ಗೆ ಆದೇಶ ಹೊರಡಿಸಲಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಅಬಕಾರಿ ಆಯುಕ್ತರು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಆದೇಶ ಹೊರಡಿಸಲಿದ್ದಾರೆ.
ಇಂದು ರಾತ್ರಿ ಏಳು ಗಂಟೆಗೆ ಎಲ್ಲಾ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ಸ್ಟಾಪ್ ಆಗಲಿದ್ದು, ಭಾನುವಾರ ರೋಡಿಗೆ ಇಳಿಯೋದಿಲ್ಲ. ಸೋಮವಾರ ಬೆಳಗ್ಗೆ 7 ಗಂಟೆಗೆ ಯಥಾಸ್ಥಿತಿಯಂತೆ ಸಂಚಾರ ಆರಂಭವಾಗಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಜನರು ಮನೆಯಿಂದ ಹೊರಬಾರದಂತೆ ಸರ್ಕಾರ ಎಚ್ಚರಿಕೆ ನೀಡಿದೆ.
– ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವಾಹನ ಸಂಚಾರಕ್ಕೆ ಅವಕಾಶ
ಮಡಿಕೇರಿ: ಜಿಲ್ಲೆಯಲ್ಲಿ ವಿಧಿಸಿದ್ದ ಲಾಕ್‍ಡೌನ್ ಸಡಿಲಗೊಳಿಸಲಾಗಿದ್ದು, ವಾರದ ಎಲ್ಲ ದಿನಗಳೂ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಹಾಗೂ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ವಾಹನಗಳು ರಸ್ತೆಗಿಳಿಯುತ್ತಿವೆ.
ಈ ಸಂಬಂಧ ಮಾಹಿತಿ ನೀಡಿದ್ದ ಜಿಲ್ಲಾಡಳಿತ, ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಬಹುದು. ಬುಧವಾರದಿಂದ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಜಿಲ್ಲೆಯ ಒಳಗೆ ಮಾತ್ರವೇ ಸಂಚರಿಸಲು ಅವಕಾಶ ನೀಡಿದೆ.
ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವೂ ಪ್ರಾರಂಭವಾಗಲಿದೆ. ಆದರೆ ಒಟ್ಟು ಆಸನಗಳ ಶೇ.50 ಮೀರದಂತೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಾರದ ಎಲ್ಲ ದಿನಗಳು ಸಿಎಲ್ 2, ಸಿಎಲ್ 11ಸಿ ಮಾದರಿಯ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಗ್ರೀನ್ ಝೋನ್‍ನಲ್ಲಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಈ ಹಿಂದೆ ವಾರದಲ್ಲಿ ನಾಲ್ಕು ದಿನ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಇರಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ಸಹ ವಾರದ ನಾಲ್ಕು ದಿನ ಮಾತ್ರ ತೆರೆಯುವ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಎಲ್ಲ ದಿನಗಳಲ್ಲಿ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.